Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಹೆಗಡೆ ಮತ್ತು ಗೆದ್ದವರ ಇತಿಹಾಸ!

ಹೆಗಡೆ ಮತ್ತು ಗೆದ್ದವರ ಇತಿಹಾಸ!

ಧರಣೀಶ್ ಬೂಕನಕೆರೆಧರಣೀಶ್ ಬೂಕನಕೆರೆ7 Sept 2026 10:00 AM IST
share
ಹೆಗಡೆ ಮತ್ತು ಗೆದ್ದವರ ಇತಿಹಾಸ!

ಯಾರು ಭೂತಕಾಲವನ್ನು ನಿಯಂತ್ರಿಸುತ್ತಾರೋ, ಅವರು ಭವಿಷ್ಯವನ್ನು ನಿಯಂತ್ರಿಸುತ್ತಾರೆ. ಯಾರು ವರ್ತಮಾನವನ್ನು ನಿಯಂತ್ರಿಸುತ್ತಾರೋ, ಅವರು ಭೂತಕಾಲವನ್ನೂ ನಿಯಂತ್ರಿಸುತ್ತಾರೆ ಎನ್ನುವುದು ಖ್ಯಾತ ಇಂಗ್ಲಿಷ್ ಲೇಖಕ ಜಾರ್ಜ್ ಆರ್ವೆಲ್ ಅವರ ವಾದ. ಈ ಮೂಲಕ ಆರ್ವೆಲ್ ಇತಿಹಾಸವನ್ನು ಹೇಗೆ ನೋಡಬೇಕೆಂದು ತಿಳಿಸಿದ್ದಾರೆ. ಅವರ ಮಾತುಗಳಿಂದ ‘ಇತಿಹಾಸ ಗೆದ್ದವರಿಂದ ಬರೆಯಲ್ಪಡುತ್ತದೆ’ ಎನ್ನುವುದು ಖಚಿತವಾಗುತ್ತದೆ. ಹಾಗಿದ್ದರೆ ‘ಗೆದ್ದವರು’ ಯಾರು? ಮತ್ತು ನಿಯಂತ್ರಣಕ್ಕೆ ಒಳಪಟ್ಟವರು ಯಾರು? ಅಥವಾ ನಿಯಂತ್ರಿಸಲ್ಪಟ್ಟದ್ದು ಏನನ್ನು?

ರಾಮಕೃಷ್ಣ ಹೆಗಡೆ ಜನ್ಮಶತಮಾನೋತ್ಸವದ ಬಗ್ಗೆ ನಡೆಯುತ್ತಿರುವ ಚರ್ಚೆಗಳತ್ತ ಕಣ್ಣಾಡಿಸಿದರೆ ಗೆದ್ದವರು ಯಾರು ಮತ್ತು ನಿಯಂತ್ರಣಗೊಳ್ಳುತ್ತಿರುವುದೇನು ಎನ್ನುವುದು ಅರ್ಥವಾಗುತ್ತದೆ. ರಾಮಕೃಷ್ಣ ಹೆಗಡೆಯನ್ನು ಪ್ರಾಮಾಣಿಕ, ನೈತಿಕ, ಮೌಲ್ಯಾಧಾರಿತ, ತತ್ವನಿಷ್ಠ ರಾಜಕಾರಣಿ ಎಂಬ ಬಿರುದು ಬಾವಲಿಗಳಿಂದ ಬಾನೆತ್ತರಕ್ಕೆ ಏರಿಸಲಾಗುತ್ತಿದೆ. ಭೂತಕಾಲ, ವರ್ತಮಾನ ಮತ್ತು ಭವಿಷ್ಯದ ವಿಷಯಕ್ಕೆ ಬಂದರೆ ಈ ಬಿರುದುಗಳು ರಾಮಕೃಷ್ಣ ಹೆಗಡೆ ಬದುಕಿದ್ದಾಗಲೇ ಅವರಿಗೆ ಸಿಕ್ಕಿದ್ದವು. ಅಳಿದ ಮೇಲೂ ಉಳಿದಿವೆ.

ಇದು ಏಕೆ ಸಾಧ್ಯವಾಯಿತೆಂದರೆ ಸಾಮಾಜಿಕ ವ್ಯವಸ್ಥೆಯಲ್ಲಿ ಗೆದ್ದವರು ಇತಿಹಾಸ ಬರೆದಿದ್ದರಿಂದ. ಆ ಗೆದ್ದವರಿಗೆ ತಮ್ಮ ಇತಿಹಾಸ ಕಟ್ಟಿ ಕೊಳ್ಳುವುದು ಗೊತ್ತು. ತಮಗೆ ಬೇಕಾದ ಇತಿಹಾಸ ಕಟ್ಟಿಕೊಳ್ಳಲೆಂದೇ ಅತ್ಯಂತ ಭ್ರಷ್ಟ, ವಿಲಾಸಿ, ಸಾಮಾಜಿಕ ನ್ಯಾಯದ ಕತ್ತು ಹಿಸುಕಿ ಸಾಯಿಸಿದ ವ್ಯಕ್ತಿಗೂ ಮೌಲ್ಯಧಾರಿತ ಎಂಬ ಕಿರೀಟ ತೊಡಿಸಿದ್ದಾರೆ. ಪರಮ ಪ್ರಾಮಾಣಿಕನ ಪಟ್ಟ ಕಟ್ಟುತ್ತಾರೆ. ತತ್ವನಿಷ್ಠ ಎಂದು ಕೊಂಡಾಡಿದ್ದಾರೆ. ವರ್ಣರಂಜಿತ ಎಂದು ಬಣ್ಣಿಸುತ್ತಾರೆ. ಇತಿಹಾಸದಲ್ಲಿ ಮಾತ್ರವಲ್ಲ, ಇಂದಿಗೂ ಹಾಗೆಯೇ ಮೆರೆಸುತ್ತಿದ್ದಾರೆ. ಅದಕ್ಕೋಸ್ಕರ ‘ಗತಿಸಿಹೋದವರ ಬಗ್ಗೆ ವಿಮರ್ಶೆ ಮಾಡಬಾರದು’ ಎಂಬ ಸಜ್ಜನಿಕೆಯ ಪಾಠ ಮಾಡುತ್ತಾರೆ.

ಇದೇ ಸಜ್ಜನಿಕೆ, ಸೌಜನ್ಯಗಳು ದೇವರಾಜ ಅರಸು, ವೀರಪ್ಪ ಮೊಯ್ಲಿ, ಬಂಗಾರಪ್ಪ, ಧರಂಸಿಂಗ್, ಸಿದ್ದರಾಮಯ್ಯ ವಿಷಯದಲ್ಲಿ ಏಕಿಲ್ಲ? ಎಂಬ ಪ್ರಶ್ನೆ ಕೇಳುತ್ತಿದ್ದಂತೆ ‘ಮೌಲ್ಯಗಳನ್ನು ಜಾತಿ ಕನ್ನಡಕದಿಂದ ನೋಡಬಾರದು’ ಎಂಬ ಉಪದೇಶ ಮಾಡುತ್ತಾರೆ. ಸಾಮಾಜಿಕ ನ್ಯಾಯದ ಆಯಾಮದಲ್ಲಿ ಚರ್ಚೆಗೆ ಇಳಿದರೆ ಅದನ್ನು ಜಾತಿಯ ಕನ್ನಡಕ ಎಂದು ಹೇಳುತ್ತಾರೆ. ಹೀಗೆ ಮಾಡುವುದು ಇತಿಹಾಸ, ವರ್ತಮಾನ ಮತ್ತು ಭವಿಷ್ಯಕ್ಕೆ ಮಾಡುವ ಅಪಚಾರ. ತಾನು ಆ ಕಡೆಯೂ ಇಲ್ಲ, ಈ ಕಡೆಯೂ ಇಲ್ಲ ಎಂಬ ನಾಜೂಕಯ್ಯರ ವರಸೆ. ಪರ ನಿಲ್ಲುವವನೇ ನಿಜವಾದ ಪತ್ರಕರ್ತ, ರಾಜಕೀಯ ವಿಶ್ಲೇಷಕ, ಬರಹಗಾರ, ಇತಿಹಾಸಕಾರ; ತಟಸ್ಥವಾಗಿರುವವನಲ್ಲ. ಅದು ಸತ್ಯ, ಪ್ರೀತಿ, ನ್ಯಾಯ ಮತ್ತು ಸಾಮಾಜಿಕ ನ್ಯಾಯದ ಪರವಾಗಿರಬೇಕಷ್ಟೇ. ಅಪಾತ್ರರರನ್ನು, ಅನರ್ಹರನ್ನು ಅವರ ನಡೆನುಡಿಗೆ ವಿರುದ್ಧವಾಗಿ ಜಾತಿಯ ಕಾರಣಕ್ಕೆ ವೈಭವೀಕರಿಸುವಾಗ ಇನ್ನೊಂದೆಡೆ ಸಾಮಾಜಿಕ ನ್ಯಾಯದ ತಕ್ಕಡಿಯಲ್ಲಿ ಇಟ್ಟು ತೂಗುವುದು ಅನಿವಾರ್ಯ.

ರಾಮಕೃಷ್ಣ ಹೆಗಡೆ ವಿರುದ್ಧ ರೇವಜಿತು, ಬಾಟ್ಲಿಂಗ್, ದೂರವಾಣಿ ಕದ್ದಾಲಿಕೆ, ಮಧುವನ, ಗ್ರೀನ್ ಬೆಲ್ಟ್, ಎನ್‌ಆರ್‌ಐ ವಸತಿ ಹಗರಣ ಮತ್ತು ಅವರ ಪುತ್ರನ ಮೆಡಿಕಲ್ ಸೀಟು ಹಗರಣ ಕೇಳಿಬಂದವು. ರಾಜ್ಯದ ಬೇರೆ ಯಾವ ಮುಖ್ಯಮಂತ್ರಿ ಕಾಲದಲ್ಲಿ ಇಷ್ಟೊಂದು ಹಗರಣಗಳು ಕೇಳಿಬಂದಿವೆ? ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ಯಡಿಯೂರಪ್ಪ ಕಾಲದಲ್ಲೂ ಕೇಳಿಬಂದಿಲ್ಲ. ಹಾಗಿದ್ದರೆ ರಾಜ್ಯ ಕಂಡ ಅತಿ ಭ್ರಷ್ಟ ಮುಖ್ಯಮಂತ್ರಿ ಯಾರು? ರಾಮಕೃಷ್ಣ ಹೆಗಡೆಯನ್ನು ಪ್ರಾಮಾಣಿಕ ರಾಜಕಾರಣಿ ಎಂದು ಕರೆಯಬಹುದೇ? ಹಾಗೆ ಕರೆದರೆ ಅವರ ಪ್ರಾಮಾಣಿಕತೆ ಬಗ್ಗೆ ಪ್ರಶ್ನೆ ಕೇಳಬೇಕಲ್ಲವೇ?

ಸತ್ತವರ ಬಗ್ಗೆ ಈಗೇಕೆ ಚರ್ಚೆ ಎಂದರೆ ಸತ್ತವರನ್ನು ಇಂದ್ರ-ಚಂದ್ರ ಎನ್ನುತ್ತಿರುವುದರಿಂದ. ಎಲ್ಲಾ ಮುಖ್ಯಮಂತ್ರಿಗಳು ಕೆಲವೊಂದಿಷ್ಟು ಒಳ್ಳೆಯ ಕೆಲಸ ಮಾಡಿರುತ್ತಾರೆ. ಆದರೆ ಒಬ್ಬ ಪತ್ರಕರ್ತ, ರಾಜಕೀಯ ವಿಶ್ಲೇಷಕ, ಬರಹಗಾರ ಮತ್ತು ಇತಿಹಾಸಕಾರ ನೋಡಬೇಕಾಗಿರುವುದು ಆ ‘ಕೆಲವೊಂದಿಷ್ಟು’ ಕೆಲಸಗಳನ್ನು ಮಾತ್ರವಲ್ಲ. ಯಾರನ್ನೇ ಆಗಲಿ ಒಟ್ಟಂದದಲ್ಲೇ ಒರೆಗೆ ಹಚ್ಚಬೇಕು. ರಾಮಕೃಷ್ಣ ಹೆಗಡೆ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತಂದು ಅಧಿಕಾರ ವಿಕೇಂದ್ರೀಕರಣಗೊಳಿಸಿದರು. ಅದು ನಿಜಕ್ಕೂ ಮಹತ್ವದ ಸಾಧನೆ. ಅವರಿಂದ ಆಯಿತು ಎನ್ನಬಹುದಾದ ಅಂತಹ ಇನ್ನೊಂದು ಉದಾಹರಣೆ ಅಥವಾ ಸುಧಾರಣೆಯನ್ನು ಹೇಳಲು ಸಾಧ್ಯವೇ?

ರಾಜಕಾರಣದಲ್ಲಿ ಅದೊಂದು ತಂತ್ರ. ಯಾವುದೋ ಒಂದು ಕೆಲಸವನ್ನು ಸಿಕ್ಕಾಪಟ್ಟೆ ಊಥಿಠಿe ಮಾಡಿ ಉಳಿದ ಲೋಪಗಳ ಬಗ್ಗೆ ಚರ್ಚೆಯಾಗದಂತೆ ನೋಡಿಕೊಳ್ಳುವುದು. ಇತ್ತೀಚೆಗೆ ದಿಲ್ಲಿಯಲ್ಲಿ ಅರವಿಂದ ಕೇಜ್ರಿವಾಲ್ ಮಾಡಿದ್ದೂ ಅದನ್ನೇ. ಅವರು ಶಿಕ್ಷಣ, ಆರೋಗ್ಯದಂತಹ ಕೆಲವೇ ವಿಷಯಗಳ ಬಗ್ಗೆ ಮಾತ್ರ ಚರ್ಚೆ ಮಾಡುತ್ತಿದ್ದರು. ಬಿಹಾರದಲ್ಲಿ ನಿತೀಶ್ ಕುಮಾರ್ ಸಾರಾಯಿ ನಿಷೇಧ, ಮಹಿಳೆಯರಿಗೆ ಕೆಲವು ಕಾರ್ಯಕ್ರಮಗಳನ್ನು ಕೊಟ್ಟು ಅಷ್ಟರಲ್ಲೇ ‘ಸುಹಾಸನ್ ಬಾಬು’ ಆಗಿದ್ದರು. ನಿಜಕ್ಕೂ ರಾಮಕೃಷ್ಣ ಹೆಗಡೆ ಜನಾನುರಾಗಿಯಾಗಿದ್ದರೆ, ಜನಪರ ಕೆಲಸ ಮಾಡಿದ್ದರೆ ಅವರು ರಾಜೀನಾಮೆ ಕೊಟ್ಟ ಒಂದೂಕಾಲು ವರ್ಷದಲ್ಲಿ ಅವರ ನೇತೃತ್ವದ ಜನತಾ ದಳ 24 ಸ್ಥಾನಗಳಿಗೆ ಸೀಮಿತವಾದದ್ದು ಮತ್ತು ಕಾಂಗ್ರೆಸ್ 178 ಸ್ಥಾನ ಗೆದ್ದಿದ್ದೇಕೆ? ಹೆಗಡೆಯನ್ನು ನೈತಿಕ ರಾಜಕಾರಣಿ ಎಂದು ಹೇಳುವವರು 1989ರ ಚುನಾವಣೆಗೆ ಅವರು ನೈತಿಕ ಹೊಣೆ ಹೊತ್ತಿದ್ದರೆ? ಜೊತೆಗೆ ಬಾಟ್ಲಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ಕೊಟ್ಟಿದ್ದ ಹೆಗಡೆ ಅದನ್ನು ವಾಪಸ್ ಪಡೆದದ್ದು ನೈತಿಕತೆಯೇ ಎಂದು ಕೂಡ ಕೇಳಬೇಕಲ್ಲವೇ?

ದೇವರಾಜ ಅರಸು ಭ್ರಷ್ಟಾಚಾರ, ರೌಡಿಸಂಗೆ ಕುಮ್ಮಕ್ಕು ಕೊಟ್ಟರು ಎಂದು ಆರೋಪಿಸುತ್ತಾರೆ. ಆದರೆ ಪ್ರಭಾವಿ ಸಮುದಾಯಗಳಿಂದ ಅಧಿಕಾರವನ್ನು ‘ಕಿತ್ತುಕೊಂಡಿದ್ದ’, ಅದನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದ್ದ, ಆರ್ಥಿಕವಾಗಿ ನಿಶ್ಯಕ್ತರಾಗಿದ್ದ ಶಾಸಕರ ಹಿತ ಕಾಯಬೇಕಾಗಿದ್ದ, ಅರಸು ಅವರಿಗಿದ್ದ ಒತ್ತಡವನ್ನೂ ಅರ್ಥ ಮಾಡಿಕೊಳ್ಳಬೇಕು. ಎಲ್ಲವನ್ನೂ ತರ್ಕದ ದೃಷ್ಟಿಯಿಂದಲೇ ನೋಡಬಾರದು. ಕೆಲವನ್ನು ಕಾಳಜಿಯ ಆಯಾಮದಿಂದಲೂ ನೋಡಬೇಕು. ಅರಸು ವಿಷಯದಲ್ಲೂ ಅವರ ಕೆಲಸಗಳು ಮತ್ತು ಅವರಿಂದಾದ ತಪ್ಪುಗಳೆರಡನ್ನೂ ತುಲನೆ ಮಾಡಿ ನಿರ್ಧರಿಸಬೇಕು. ಹಾಗೆ ಮಾಡಿದರೆ ಒಳಿತುಗಳ ಪಟ್ಟಿ ಉದ್ದವಾಗುತ್ತಲೇ ಹೋಗುತ್ತದೆ. ಅದು ಗೊತ್ತಿದ್ದರೂ ಅವರ ವರ್ಚಸ್ಸಿಗೆ ಮಸಿ ಬಳಿಯಲಾಗುತ್ತಿದೆ.

ವೀರಪ್ಪ ಮೊಯ್ಲಿ ಸಿಇಟಿ ಜಾರಿಗೆ ತಂದು ಬಡವರ ಮಕ್ಕಳು ಕೂಡ ವೈದ್ಯರು ಮತ್ತು ಇಂಜಿನಿಯರ್ ಆಗಬಹುದೆಂಬ ಕನಸು ಕಟ್ಟಿಕೊಟ್ಟರು. ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತಂದ ಹೆಗಡೆ ಕಾಲ ಕರ್ನಾಟಕದ ಇತಿಹಾಸದಲ್ಲಿ ‘ಸುವರ್ಣಯುಗ’ ಆಗುವುದಾದರೆ, ಸಿಇಟಿ ಜಾರಿ, ಇಲೆಕ್ಟ್ರಾನಿಕ್ ಸಿಟಿ ನಿರ್ಮಾಣ, ಮೀಸಲಾತಿ ಮಿತಿ ಹೆಚ್ಚಳದ ನಿರ್ಧಾರ (ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣ ಬಾಕಿ ಇದೆ) ಮಾಡಿದ ವೀರಪ್ಪ ಮೊಯ್ಲಿ ಕಾಲ ಏಕಿಲ್ಲ? ಇತಿಹಾಸ ಹೆಗಡೆಗೆ ಕೊಟ್ಟಷ್ಟೇ ಮಹತ್ವವನ್ನು ಮೊಯ್ಲಿಗೂ ಕೊಟ್ಟಿದೆಯಾ? ಹೌದು ಎಂದು ಹೇಳುವ ಧೈರ್ಯ ಯಾವ ಪತ್ರಕರ್ತ, ರಾಜಕೀಯ ವಿಶ್ಲೇಷಕ, ಬರಹಗಾರ, ಇತಿಹಾಸಕಾರನಿಗಿದೆ?

ಬಂಗಾರಪ್ಪ ವಿರುದ್ಧ ಕ್ಲಾಸಿಕ್ ಕಂಪ್ಯೂಟರ್ ಹಗರಣ ಕೇಳಿಬಂತು. ಸಿಬಿಐ ತನಿಖೆಯಲ್ಲಿ ಖುಲಾಸೆಯಾದರು. ರಾಮಕೃಷ್ಣ ಹೆಗಡೆ? 1988ರ ಆಗಸ್ಟ್ 9ರಂದು ಲೋಕಸಭೆಯಲ್ಲಿ ಹೆಗಡೆ ಅವರ ದೂರವಾಣಿ ಕದ್ದಾಲಿಕೆ ವಿಷಯ ಚರ್ಚೆಯಾಗಿ ಕೇಂದ್ರ ಸಂವಹನ ಸಚಿವ ಬೀರ್ ಬಹಾದುರ್ ಸಿಂಗ್ ಕರ್ನಾಟಕದ ಇಂಟೆಲಿಜೆನ್ಸ್DIG ಸಹಿ ಮಾಡಿದ್ದ Interception Orders ಬಿಡುಗಡೆ ಮಾಡಿದರು. ಆರೋಪ ಸಾಬೀತಾಯಿತು. ಆಗಸ್ಟ್ 10ರಂದು ಹೆಗಡೆ ರಾಜೀನಾಮೆ ನೀಡಿದರು. ಸರಕಾರಕ್ಕೆ ದೂರವಾಣಿ ಕದ್ದಾಲಿಸಲು ಅಧಿಕಾರ ಇದೆ. ಅದು ಸಮಾಜಘಾತುಕ ಶಕ್ತಿಗಳ ಮೇಲೆ ನಿಗಾ ಇಡಲು. ಆದರೆ ಹೆಗಡೆ ಕದ್ದು ಕೇಳಿದ್ದು ಜೊತೆಗೇ ಇದ್ದ ಬಂಗಾರಪ್ಪ, ದೇವೇಗೌಡ, ಎಸ್.ಆರ್. ಬೊಮ್ಮಾಯಿ, ಜೆ.ಎಚ್. ಪಟೇಲ್ ಮತ್ತಿತರ ದೂರವಾಣಿಗಳನ್ನು. ಇದು ಮಿತ್ರದ್ರೋಹವಲ್ಲದೆ ಮೌಲ್ಯಾಧಾರಿತ ರಾಜಕಾರಣವೇ?

ಇಷ್ಟು ಮಾತ್ರವಲ್ಲ, 1983ರಲ್ಲಿ ಜನತಾರಂಗ ಅಧಿಕಾರಕ್ಕೆ ಬರಲು ಬಂಗಾರಪ್ಪ ರೂವಾರಿ. ಕ್ರಾಂತಿರಂಗದ ಅವರು ರಾಜ್ಯದ 224 ಕ್ಷೇತ್ರಗಳ ಪೈಕಿ 223 ಕಡೆ ಪ್ರಚಾರ ಮಾಡಿದ್ದರು. ಅವರು ಪ್ರಚಾರಕ್ಕೆ ಹೋಗದಿದ್ದದ್ದು ಅವರೇ ಸ್ಪರ್ಧೆ ಮಾಡಿದ್ದ ಸೊರಬಕ್ಕೆ. ಇಡೀ ದೇಶದಲ್ಲಿ ಅಂದಿಗೂ, ಇಂದಿಗೂ ಪ್ರಚಾರಕ್ಕೆ ಹೋಗದೆ ಗೆದ್ದು ಬಂದ ಏಕೈಕ ನಾಯಕ ಬಂಗಾರಪ್ಪ. ಆಗ ಜನತಾರಂಗಕ್ಕೆ ಜನ ಮತ ಕೊಟ್ಟಿದ್ದೇ ಬಂಗಾರಪ್ಪ ಮುಖ್ಯಮಂತ್ರಿ ಆಗುತ್ತಾರೆ ಎಂದು. ಆದರೆ ಮುಖ್ಯಮಂತ್ರಿ ಸ್ಥಾನಕ್ಕೆ ದೇವೇಗೌಡ, ಎಸ್.ಆರ್. ಬೊಮ್ಮಾಯಿ, ಜೆ.ಎಚ್. ಪಟೇಲ್ ಕೂಡ ಸ್ಪರ್ಧಿಗಳಾಗಿದ್ದರು. ಈ ಒಡಕಿನ ಲಾಭ ಮಾಡಿಕೊಂಡ ಹೆಗಡೆ ಮುಖ್ಯಮಂತ್ರಿಯಾದರು. ಈ ಮೂಲಕ ಹಿಂದುಳಿದ ಜಾತಿಯ ನಾಯಕನಿಗೆ ಮುಖ್ಯಮಂತ್ರಿ ಪದವಿ ತಪ್ಪಿಸಿದ್ದರು. ಜೊತೆಗೆ ಬೊಮ್ಮಾಯಿ ಮತ್ತು ಜೆ.ಎಚ್. ಪಟೇಲ್ ಅವಕಾಶವನ್ನೂ ಕಸಿದುಕೊಂಡರು. ಇದನ್ನು ಅರ್ಥ ಮಾಡಿಕೊಳ್ಳದ ಲಿಂಗಾಯತರು ಹೆಗಡೆಯನ್ನು ಬೆಂಬಲಿಸಿದರು. ಇತಿಹಾಸ ಹೀಗಿರುವಾಗ ಬಂಗಾರಪ್ಪ ಅವರನ್ನು ಭ್ರಷ್ಟಾಚಾರಿ ಎಂದು ಜರಿದಾಗ ಮೌನವಾಗಿದ್ದು, ಹೆಗಡೆ ವಿಚಾರದಲ್ಲಿ ಸತ್ತವರ ಬಗ್ಗೆ ಒಳ್ಳೆಯದನ್ನೇ ಮಾತನಾಡಿ ಎಂದರೆ ಆತ್ಮದ್ರೋಹವಲ್ಲವೇ?

ಹೆಣ್ಣು ಮತ್ತು ಗಂಡು ಕೂಡುವುದು ಅವರ ಖಾಸಗಿ ವಿಚಾರ. ಆದರೆ ಮದುವೆ ಆಗಿರುವ ವ್ಯಕ್ತಿಯೊಬ್ಬ ಇನ್ನೊಬ್ಬ ಹೆಣ್ಣಿನೊಂದಿಗೆ ಸಂಬಂಧ ಬೆಳೆಸಿ ಮಕ್ಕಳನ್ನು ಮಾಡಿಕೊಳ್ಳುವುದು ನೈತಿಕವೂ ಅಲ್ಲ, ಕಾನೂನಿನಲ್ಲಿ ಅದಕ್ಕೆ ಅವಕಾಶವೂ ಅಲ್ಲ. ಆದರೆ ರಾಮಕೃಷ್ಣ ಹೆಗಡೆ ಜೊತೆ ಹಲವು ಹೆಂಗಸರ ಹೆಸರುಗಳು ತಳಕು ಹಾಕಿಕೊಂಡಿದ್ದರೂ ಅವರನ್ನು ನೈತಿಕವಾಗಿ ಪ್ರಶ್ನೆ ಮಾಡುವುದಿಲ್ಲ. ಅವರೊಬ್ಬ ವಿಲಾಸಿ, ವರ್ಣರಂಜಿತ ಎಂದಷ್ಟೇ ಹೇಳಿ ಕ್ಷಮಿಸಲಾಗುತ್ತದೆ.

ಯಾವುದೇ ರಾಜಕಾರಣಿ, ಮುಖ್ಯಮಂತ್ರಿಯನ್ನಾಗಲಿ ಸಾಮಾಜಿಕ ನ್ಯಾಯದ ಆಯಾಮದಿಂದ ನೋಡಲೇಬೇಕು. ಹಾವನೂರು ಆಯೋಗ ಒಕ್ಕಲಿಗರನ್ನು ಹಿಂದುಳಿದ ಜಾತಿಗಳ ಪಟ್ಟಿಗೆ ಸೇರಿಸಿದ್ದಾಗಲೇ ದೊಡ್ಡ ಚರ್ಚೆಯಾಗುತ್ತಿತ್ತು. ಬಳಿಕ ರಾಮಕೃಷ್ಣ ಹೆಗಡೆ ರಚಿಸಿದ ವೆಂಕಟಸ್ವಾಮಿ ಆಯೋಗ ಒಕ್ಕಲಿಗರ ಜೊತೆಗೆ ಲಿಂಗಾಯತರನ್ನೂ ಹಿಂದುಳಿದ ಜಾತಿ ಪಟ್ಟಿಗೆ ಸೇರಿಸಿತು. ಅದು ಐತಿಹಾಸಿಕ ಪ್ರಮಾದ. ದೇವರಾಜ ಅರಸು ಹಿಂದುಳಿದವರಿಗೆ ದನಿ ನೀಡಲು ಹಾವನೂರು ಆಯೋಗ ರಚಿಸಿದ್ದು ಧನಾತ್ಮಕ ರಾಜಕಾರಣ. ರಾಮಕೃಷ್ಣ ಹೆಗಡೆ ಪ್ರಬಲ ಸಮುದಾಯಗಳಾದ ಒಕ್ಕಲಿಗ ಮತ್ತು ಲಿಂಗಾಯತರನ್ನು ಹಿಂದುಳಿದ ಜಾತಿಗೆ ಸೇರಿಸಲೆಂದೇ ವೆಂಕಟಸ್ವಾಮಿ ಆಯೋಗ ರಚಿಸಿದ್ದು ಅಧಿಕಾರ ಉಳಿಸಿಕೊಳ್ಳಲು ಮಾಡಿದ ರಾಜಕಾರಣ. ಇದು ಕೂಡ ಚರ್ಚೆಯಾಗಬೇಕಲ್ಲವೇ?

ಕಡೆಯದಾಗಿ ನಿಯಂತ್ರಣಕ್ಕೆ ಒಳಪಟ್ಟವರು ಯಾರು? ಅಥವಾ ನಿಯಂತ್ರಿಸಲ್ಪಟ್ಟದ್ದು ಏನನ್ನು? ಎನ್ನುವ ಪ್ರಶ್ನೆಗೆ ಮರಳಿದರೆ ಅವು ಹಿಂದುಳಿದವರು (ದಲಿತರು ಮತ್ತು ಅಲ್ಪಸಂಖ್ಯಾತರಿಗೆ ಆಡಳಿತ ನಡೆಸುವ ಅವಕಾಶವೇ ಬಂದಿಲ್ಲ) ಮತ್ತು ಅವರ ಹಿತಾಸಕ್ತಿಗಳು. ಗೆದ್ದವರು ತಮ್ಮಿಷ್ಟದಂತೆ ಇತಿಹಾಸ ನಿರ್ಮಿಸಲು ತಮಗೆ ಬೇಕಾದವರ ಬಗ್ಗೆ ಉದಾರಿಗಳಾಗಿರುತ್ತಾರೆ. ಬೇಡದವರ ಬಗ್ಗೆ ಕಟು ವಿಮರ್ಶಕರಾಗುತ್ತಾರೆ. ಒಟ್ಟಂದದಲ್ಲಿ ಒರೆಗೆ ಹಚ್ಚಬೇಕು ಎನ್ನುವ ಸಾಮಾನ್ಯ ನ್ಯಾಯ ಅನ್ವಯ ಆಗುವುದಿಲ್ಲ. ಗೆದ್ದವರು ಬರೆಯುವ ಇತಿಹಾಸ ಹೀಗೆ ಇರುತ್ತದೆ. ಇತಿಹಾಸ ಬರೆಯುವವರು ಬದಲಾಗಬೇಕಷ್ಟೇ.

ಕರ್ನಾಟಕಕ್ಕೆ ಹೆಚ್ಚು ಕೊಡುಗೆ ನೀಡಿರುವುದು ಸಣ್ಣ ಸಮುದಾಯದ ಮುಖ್ಯಮಂತ್ರಿಗಳು. ಸಮರ್ಥ ಆಡಳಿತ ಕೊಟ್ಟಿರುವವರು ಹಿಂದುಳಿದ ನಾಯಕರು. ಸುಧಾರಣೆ ಆಗಿರುವುದು ಕೂಡ ಅವರ ಆಡಳಿತಾವಧಿಯಲ್ಲೇ. ಉಳಿದಂತೆ ಕೆಲವರು ಕೆಲವು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಎಚ್.ಡಿ. ದೇವೇಗೌಡ ನೀರಾವರಿ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳಂತೆ. ಆದರೆ ಇತಿಹಾಸದಲ್ಲಿ ಅವರಿಗೆ ಸಿಕ್ಕ ಮಾನ್ಯತೆ ಎಷ್ಟು?

ಆಫ್ ದಿ ರೆಕಾರ್ಡ್!

ನಿನ್ನೆಯಷ್ಟೇ ಹಿಂದುಳಿದ ಜಾತಿಗಳ ಒಕ್ಕೂಟದ ರಜತ ಮಹೋತ್ಸವ ನಡೆದಿದೆ. ಅದು 25 ವರ್ಷಗಳಲ್ಲಿ ಏನು ಮಾಡಿದೆ? ಜಾತಿಗಣತಿ ಬಗ್ಗೆ ಜಾಗೃತಿ ಮೂಡಿಸುವುದಾಗಿ ಹೇಳಿಕೊಂಡಿರುವ ಅದು ಇಲ್ಲಿಯವರೆಗೆ ಎಷ್ಟು ಜಾಗೃತಿ ಮೂಡಿಸಿದೆ? ಹಿಂದುಳಿದ ಜಾತಿಯ ಮಂಕಾಳ ವೈದ್ಯ ಅವರನ್ನು ಮಂತ್ರಿ ಮಾಡದಿದ್ದಾಗ ಒಕ್ಕೂಟ ಎಲ್ಲಿತ್ತು? ರಾಮಕೃಷ್ಣ ಹೆಗಡೆ ಅವರಂತಹ ವಿಷಯಗಳಲ್ಲಿ ಪಟ್ಟಭದ್ರರು ತಮ್ಮದೇಯಾದ Iಛಿoಟಿಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಹಿಂದುಳಿದವರಿಗೆ ಇರುವುದೇ ಕಡಿಮೆ ಸಂಖ್ಯೆಯ Iಛಿoಟಿಗಳು. ಅವರ ವ್ಯಕ್ತಿತ್ವವನ್ನು ಪಟ್ಟಭದ್ರರು ಕಾಲಕಾಲಕ್ಕೆ ಹಾಳುಮಾಡಲು ಯತ್ನಿಸುತ್ತಿರುತ್ತಾರೆ. ಇವುಗಳ ಬಗ್ಗೆ ಹಿಂದುಳಿದವರು ಎಂದಾದರೂ ತಲೆ ಕೆಡಿಸಿಕೊಂಡಿದ್ದಾರಾ? ನಮ್ಮ ಇತಿಹಾಸವನ್ನು ನಾವೇ ನಿರ್ಮಿಸಿಕೊಳ್ಳಬೇಕು ಎನ್ನುವುದನ್ನು ಅವರು ಇನ್ನಾದರೂ ಅರ್ಥ ಮಾಡಿಕೊಳ್ಳಬೇಕಾಗಿದೆ.

Tags

historyHegdewinners
share
ಧರಣೀಶ್ ಬೂಕನಕೆರೆ
ಧರಣೀಶ್ ಬೂಕನಕೆರೆ
Next Story
X