Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಹೊಲೆಯ ಮತ್ತು ಮಾದಿಗ ಎರಡೂ ಪ್ರಭೇದಗಳ...

ಹೊಲೆಯ ಮತ್ತು ಮಾದಿಗ ಎರಡೂ ಪ್ರಭೇದಗಳ ಮಾಸ್ಟೀಕರು

ಸಿ.ಎಸ್. ದ್ವಾರಕಾನಾಥ್ಸಿ.ಎಸ್. ದ್ವಾರಕಾನಾಥ್17 Jun 2026 10:06 AM IST
share
ಹೊಲೆಯ ಮತ್ತು ಮಾದಿಗ ಎರಡೂ ಪ್ರಭೇದಗಳ ಮಾಸ್ಟೀಕರು

ಈ ಸಮುದಾಯಕ್ಕೆ ತುಂಡು ಭೂಮಿಯಿಲ್ಲ, ನೆಲೆನಿಲ್ಲಲು ಸೂರಿಲ್ಲ, ಉದ್ಯೋಗವಿಲ್ಲ, ಆರೋಗ್ಯವಿಲ್ಲ, ಅಕ್ಷರವಿಲ್ಲ... ಹೀಗಿರುವಾಗ ಮಾಸ್ಟೀಕರಂತಹ ಸಮುದಾಯಗಳು ಹೇಗೆ ಬದುಕಬೇಕು? ಇದೀಗ ಮತದಾರರ ಪರಿಷ್ಕರಣೆ(ಎಸ್‌ಐಆರ್)ಸಂದರ್ಭದಲ್ಲಿ ಮುಖ್ಯವಾಗಿ ರೆಸಿಡೆನ್ಸಿಯಲ್ ಸರ್ಟಿಫಿಕೇಟ್ ಮತ್ತು ಜಾತಿ ಸರ್ಟಿಫಿಕೇಟ್‌ಗಳನ್ನು ಕೇಳುತ್ತಾರೆ. ರೆಸಿಡೆನ್ಸೇ ಇಲ್ಲದ ಜಾತಿಯ ಅಸ್ಮಿತೆಯೇ ಇಲ್ಲದ ಮಾಸ್ಟೀಕರು ಇವನ್ನು ಎಲ್ಲಿಂದ ತಂದುಕೊಡುತ್ತಾರೆ? ಎಸ್‌ಐಆರ್ ನಂತರ ಇವರು ಮತದಾರರೂ ಅಲ್ಲ, ಈ ದೇಶದ ನಿವಾಸಿಗಳಂತೂ ಅಲ್ಲವೇ ಅಲ್ಲ...!

ನಾನು ಚಿಕ್ಕವನಾಗಿದ್ದಾಗ ಆಟವಾಡುತ್ತಾ ಮಣ್ಣಲ್ಲಿ ಹೊರಲಾಡಿ ಮೈ, ಬಟ್ಟೆಯೆಲ್ಲಾ ಕೊಳೆ ಮಾಡಿಕೊಂಡು ಮನೆಗೆ ಬಂದರೆ ನನ್ನನ್ನು ನನ್ನ ಅಮ್ಮನೋ, ಅಕ್ಕನೋ ಬೈಯುತ್ತಿದ್ದ ಸಾಧಾರಣ ಪದ ‘‘ಇದೇನು ಮಾಲ ಮಾಸ್ಟೀಕನಂಗೆ ಬಂದಿದೀಯ..’’ ಎಂಬುದು. ನಮ್ಮ ಕೋಲಾರದ ಕಡೆ ಆಗಾಗ ಮಾಸ್ಟೀಕರ ಹೆಸರೆತ್ತಿಕೊಂಡು ಬೈಯುವುದು ಸರ್ವೇಸಾಮಾನ್ಯ.

ಕಾಲಾನಂತರ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಹೆಸರು ಕೇಳಿದಾಗ ಅವರ ಹೆಸರಿನ ಮುಂದಿರುವ ‘ಮಾಸ್ತಿ’ ಎಂಬುದನ್ನು ಜಾತಿ ಎಂದುಕೊಂಡಿದ್ದೆ, ನಂತರ ಅವರ ಹಿಂದಿರುವ ‘ಅಯ್ಯಂಗಾರ್’ ಅನ್ನು ನೋಡಿ ತಿಳಿದದ್ದು ಮಾಸ್ತಿ ಎಂಬುದು ನಮ್ಮ ಕೋಲಾರ ಜಿಲ್ಲೆಯಲ್ಲೇ ಇದ್ದ ಊರು ಎಂಬುದು. ಮಾಸ್ತಿ, ಮಾಸ್ಟೀಕ, ಮಾಸ್ತೀಕ ಎಂಬ ಜಾತಿಗಳ ಬಗ್ಗೆ ನನಗಿದ್ದ ಗೊಂದಲಗಳು ದೂರಾದದ್ದು ಗೆಳೆಯ ಲಕ್ಷ್ಮೀಪತಿ ಕೋಲಾರ ಅವರ ‘ಮಾಸ್ಟೀಕರ ಸಂಸ್ಕೃತಿ’ಯನ್ನು ಓದಿದ ನಂತರ. ಆ ಸಂದರ್ಭದಲ್ಲಿ ಇಂತಹ ಜಾತಿಗಳ ಬಗ್ಗೆ ಬಹಳ ತಲೆಕೆಡಿಸಿಕೊಂಡಿದ್ದೆ, ಇದಾದನಂತರ ಲಕ್ಷ್ಮೀಪತಿ ಕೋಲಾರ, ಕೋಟಿಗಾನಹಳ್ಳಿ ರಾಮಯ್ಯ, ದಿವಂಗತ ಸೋಮಶೇಖರ ಗೌಡರೊಂದಿಗೆ ದಿನಗಟ್ಟಲೆ ಕುಂತು ಮಾಸ್ಟೀಕರ ಸಂಸ್ಕೃತಿ, ಜೀವನ, ಪುರಾಣಗಳನ್ನು ಕುರಿತು ಕುತೂಹಲದಿಂದ ಚರ್ಚಿಸುತ್ತಿದ್ದೆ.

ಒಮ್ಮೆ ಡಾ.ಅಂಬೇಡ್ಕರ್ ಸಂಶೋಧನಾ ಸಂಸ್ಥೆಯವರು ಪರಿಶಿಷ್ಟ ಜಾತಿವರ್ಗದ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳ ಅಧ್ಯಯನಕ್ಕೆ ನನ್ನನ್ನು ಮಾರ್ಗದರ್ಶಕನನ್ನಾಗಿ ನೇಮಿಸಿದಾಗ ಸುಮಾರು 39 ಸಮುದಾಯಗಳ ಕುರಿತಂತೆ ಅಧ್ಯಯನಕ್ಕೆ ಮಾರ್ಗದರ್ಶನ ಮಾಡಬೇಕಾಯಿತು, ಅದರಲ್ಲಿ ಒಂದು ಅಧ್ಯಯನವನ್ನು ಗೆಳೆಯ ಸದಾನಂದ ಗಂಗನಬೀಡು ಅವರಿಂದ ಮಾಡಿಸಿದೆ. ಸದಾನಂದ ಅವರು ಮಾಸ್ಟೀಕರು ವಾಸಿಸುತ್ತಿರುವ ಜಾಗಗಳಿಗೆ ಹೋಗಿ ಮಾಸ್ಟೀಕರ ಕುರಿತು ಅಧ್ಯಯನ ಮಾಡಿ ಪುಸ್ತಕ ಬರೆದರು.

‘ಪರಿಶಿಷ್ಟ ಜಾತಿಗಳಾದ ಹೊಲೆಯ ಮತ್ತು ಮಾದಿಗರಲ್ಲಿನ ಒಂದು ಉಪಜಾತಿಯನ್ನಾಗಿ ಮಾಸ್ಟೀಕ ಜನಾಂಗವನ್ನು ಗುರುತಿಸಲಾಗುತ್ತದೆ. ಈ ಮಾಸ್ಟೀಕರಲ್ಲಿ ಮಾದಿಗ ಮಾಸ್ಟೀಕ ಹಾಗೂ ಹೊಲೆಯ ಮಾಸ್ಟೀಕರೆಂಬ ಒಳ ಪ್ರಭೇದಗಳೂ ಉಂಟು. ಮಾಸ್ಟೀಕರು ತಮ್ಮ ಕುಲಬಂಧುಗಳಾದ ದಕ್ಕಲರು ಮತ್ತು ಸಿನ್ ಮಾದಿಗರೊಂದಿಗೆ, ಪರಿಶಿಷ್ಟ ಜಾತಿ ಸಂಸ್ಕೃತಿಯ ಅದರಲ್ಲೂ ಪ್ರಧಾನವಾಗಿ ಜಾಂಬು ಕುಲದ ಮೂಲಕ ಸಂಸ್ಕೃತಿಯ ವಾರಸುದಾರರೆಂಬಂತಿದ್ದಾರೆ.’

‘ಮಾಸ್ಟೀಕರ ಸಾಂಸ್ಕೃತಿಕ ಕೇಂದ್ರ ತಮಿಳುನಾಡಿನ ಕಂಚಿ, ಕಂಚಿಯಲ್ಲಿ ಪ್ರಾಚೀನ ಕಾಲದಿಂದಲೂ ವಿವಿಧ ಶಾಕ್ತ್ಯ ಪಂಥಗಳ ಆಚರಣೆಗಳು ನಡೆಯುತ್ತಿದ್ದವೆಂಬುದಕ್ಕೆ ಬೇಕಾದಷ್ಟು ಸಾಕ್ಷ್ಯಾಧಾರಗಳಿವೆ. ಮಾಸ್ಟೀಕರು ಮತ್ತವರ ಸಹಕುಲದವರು ಕೂಡಾ ಅಂತಹ ಶಾಕ್ತ್ಯ ಪಂಥದ ಯಾವುದೋ ಶಾಖೆಗೆ ಸೇರಿದವರೇ ಆಗಿದ್ದುದರಿಂದ ಅವರು ತಮ್ಮ ಮೂಲ ಕುಲಗಳಿಂದ ದೂರೀಕರಿಸಲ್ಪಟ್ಟು ಉಪಜಾತಿಗಳಾಗಿ ರೂಪಾಂತರ ಹೊಂದಿದಂತಿದೆ’ ಎಂದು ಲಕ್ಷ್ಮೀಪತಿ ಕೋಲಾರ ಅಭಿಪ್ರಾಯ ಪಡುತ್ತಾರೆ.

ಕೋಲಾರ ಜಿಲ್ಲೆಯ ಮಾಲೂರು, ಚಿಂತಾಮಣಿ ಮತ್ತು ಕೋಲಾರದ ಗ್ರಾಮಾಂತರ ಪ್ರದೇಶಗಳಲ್ಲಿ ನೆಲೆಸಿರುವ ಮಾಸ್ಟೀಕರು ಕೋಲಾರ-ಆಂಧ್ರದ ಗಡಿಭಾಗಗಳಲ್ಲೂ ಆಗಾಗ ಕಾಣಿಸಿಕೊಳ್ಳುವ ಅಲೆಮಾರಿಗಳಾಗಿದ್ದಾರೆ. ಅಂತೆಯೇ ಬೀದರ್, ಗುಲಬರ್ಗಾ, ರಾಯಚೂರುಗಳಲ್ಲೂ ಇವರು ನೆಲೆಸಿದ್ದಾರೆ.

ಮೂಲತಃ ರಾಜರ ಆಸ್ಥಾನಗಳಲ್ಲಿ ಜಗಜಟ್ಟಿಗಳಾಗಿ, ಪೈಲ್ವಾನ್ ವಿದ್ಯೆಯ ಚಮತ್ಕಾರಿಗಳಾಗಿ, ಆನೆಗಳನ್ನು ನಡೆಸುವ ಮಾವುತರೂ ಆಗಿದ್ದ ಮಾಸ್ಟೀಕರು ಒಂದು ಕಾಲದಲ್ಲಿ ರಾಜ್ಯಾಧಿಕಾರಕ್ಕೂ ಹತ್ತಿರವಾಗಿದ್ದವರು ಕಾಲಾಂತರದಲ್ಲಿ ತಮ್ಮ ನಿರಂತರ ಅಲೆಮಾರಿತನದಿಂದಾಗಿ ತಮ್ಮ ರಾಜಾಡಳಿತದ ಸಂಪರ್ಕಗಳನ್ನು ಕಳೆದುಕೊಂಡು ಪೂರ್ಣಪ್ರಮಾಣದ ಅಲೆಮಾರಿಗಳಾದರು. ಮಾಸ್ಟೀಕರು ತಮ್ಮ ಕುಲಪುರುಷ ಹನುಮಂತರಾವ್ ಎಂಬ ಜಾನಪದ ನಾಯಕನ ಬಗ್ಗೆ ಹೆಗ್ಗಳಿಕೆಯಿಂದ ಹೇಳುತ್ತಾ ಕಂಚಿಕಾಮಾಕ್ಷಿಯ ತೇರನೆತ್ತಿ ಹಿಡಿದು, ರಾಜರಿಂದ ‘ಮಹಾಟೀಕ್’ ಎಂಬ ಬಿರುದನ್ನು ಪಡೆದ ಬಗ್ಗೆ ಹೇಳಿಕೊಳ್ಳುತ್ತಾರೆ. ಈ ಮಹಾಟೀಕ್ ಎನ್ನುವ ಹೊಗಳಿಕೆಯ ಪದವೇ ಮುಂದೆ ‘ಮಾಸ್ಟೀಕ್’ ಆಯಿತು ಎನ್ನುತ್ತಾರೆ. ಇತಿಹಾಸಕಾರರ ಪ್ರಕಾರ ಮಾಸ್ಟೀಕರು ಸುಮಾರು ಹತ್ತನೆಯ ಶತಮಾನದ ಪೂರ್ವದಲ್ಲಿ ಊರಾಚೆಯ ದಲಿತ ಕೇರಿಗಳಲ್ಲಿ ವಾಸಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಹೇಳುವುದಾದರೆ ಸುಮಾರು ಒಂದು ಸಾವಿರ ವರ್ಷದಷ್ಟು ಕಾಲ ಇವರು ಅಲೆಮಾರಿ ಜೀವನ ನಡೆಸಿದಂತಿದೆ. ಕೇವಲ ಒಂದೆರಡು ದಶಕಗಳಿಂದ ಈಚೆಗಷ್ಟೇ ಅವರು ಸ್ಥಿರ ಬದುಕಿನತ್ತ ಯೋಚಿಸಿ ಶಾಶ್ವತ ವಸತಿಗಾಗಿ ಪ್ರಯತ್ನಿಸುತ್ತಿದ್ದಾರೆ. ಚಿಂತಾಮಣಿಯ ಪರಪ್ಪನಹಳ್ಳಿ ಬಳಿ ಕೆಲವರು ಗುಡಿಸಲುಗಳಲ್ಲಿ ವಾಸಿಸುತ್ತಿದ್ದು ಮಿಕ್ಕವರು ಊರಾಚೆಯ ಬೀಳುಬಿದ್ದ ಕಟ್ಟಡ, ಖಾಲಿಬಿದ್ದ ಮನೆ ಮತ್ತು ಮರದಡಿ ವಾಸಿಸುತ್ತಿದ್ದಾರೆ.

ಎಡ್ಗರ್ ಥರ್ಸ್ಟನ್ ಎಂಬ ಮಾನವಶಾಸ್ತ್ರಜ್ಞ ಮಾಸ್ಟೀಕರ ಕುರಿತು ಬರೆಯುತ್ತಾ ಇವರನ್ನು ‘ಅನೈತಿಕ ಸಂತಾನ’ಗಳು ಎಂದು ಕರೆಯುತ್ತಾರೆ ಆದರೆ ಈ ಸಮುದಾಯದ ಪೌರಾಣಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಹಿನ್ನೆಲೆಯನ್ನು ಆಳವಾಗಿ ಸಂಶೋಧಿಸುವ ಲಕ್ಷ್ಮೀಪತಿ ಕೋಲಾರ, ಎಡ್ಗರ್ ಥರ್ಸ್ಟನ್ ಅಭಿಪ್ರಾಯವನ್ನು ಸಾರಾಸಗಟಾಗಿ ತಳ್ಳಿ ಹಾಕುತ್ತಾರೆ.

ಮಾಸ್ಟೀಕರು ಕೂಡ ಹೊಲೆಯ ಮತ್ತು ಮಾದಿಗರ ಬಳಿ ಹಕ್ಕಿನ ಭಿಕ್ಷೆ ಪಡೆಯುವ ಹಕ್ಕನ್ನು ಪಡೆದವರಾಗಿರುತ್ತಾರೆ. ಈಗೀಗ ಈ ಸಮುದಾಯ ಅಲೆಮಾರಿತನ ತೊರೆದು ನೆಲೆನಿಲ್ಲಲು ಪ್ರಯತ್ನಿಸುತ್ತಿದೆ. ಆದರೆ ಇವರಿಗೆ ಜಾತಿಯ ಅಸ್ಮಿತೆಯೇ ಇಲ್ಲದ ಕಾರಣಕ್ಕೆ ಈ ಸಮುದಾಯದ ಮಕ್ಕಳಿಗೆ ಜಾತಿ ಸರ್ಟಿಫಿಕೇಟ್ ಸಿಗದೆ ಮಕ್ಕಳಿಗೆ ಶಾಲೆ ಇನ್ನೂ ದೂರವಾಗುತ್ತಿದೆ. ಮಾಸ್ತಿ, ಮಾಸ್ತೀಕ, ಮಾಸ್ಟೀಕ, ಮಾಚಾಳ ಎಂದು ಕರೆಸಿಕೊಳ್ಳುವ ಈ ಸಮುದಾಯದವರಲ್ಲಿ 1976ರಲ್ಲಿ ಹೊರಡಿಸಿರುವ ಗೆಜೆಟ್ ನೋಟಿಫಿಕೇಶನ್ ಪ್ರಕಾರ ಕೇವಲ ‘ಮಾಸ್ತಿ’ ಎಂಬ ಜಾತಿಯನ್ನು ಮಾತ್ರ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಈ ಕಾರಣಕ್ಕೆ ಮಾಚಾಳ, ಮಾಸ್ಟೀಕ, ಮಾಸ್ತೀಕ ಎಂಬ ಹೆಸರುಗಳಿಗೆ ಜಾತಿ ಸರ್ಟಿಫಿಕೇಟ್ ಕೊಡುತ್ತಿಲ್ಲ. ಇಂತಹ ಅನೇಕ ಸಮುದಾಯಗಳ ಸಮಸ್ಯೆ ಜಾತಿ ಸರ್ಟಿಫಿಕೇಟೇ ಆಗಿದೆ. ಜಾತಿ ಸರ್ಟಿಫಿಕೇಟ್ ಪಡೆಯಲು ಇರುವ ಗೊಂದಲಗಳನ್ನು ನಿವಾರಿಸಬೇಕೆಂದು ಈ ನತದೃಷ್ಟ ಸಮುದಾಯಗಳು ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರಿಗೆ ಅನೇಕ ಬಾರಿ ಮನವಿ ನೀಡಿವೆ. ದುರಂತವೆಂದರೆ ಈ ಕಡುಬಡವರ ಧ್ವನಿ ನಮ್ಮ ಅಹಿಂದ ನಾಯಕರಿಗೆ ಕೇಳಿಸಲೇ ಇಲ್ಲ!

ಮಾಸ್ಟೀಕ ಸಮುದಾಯ ತಮಗೆ ತೋಚಿದ ಕಡೆ ರಾಜಕಾಲುವೆ ಪಕ್ಕ, ಗೋಮಾಳ, ಖಾಸಗಿ ಭೂಮಿ ಮುಂತಾದೆಡೆ ತಮ್ಮ ಟೆಂಟು, ಗುಡಾರಗಳನ್ನು ಹಾಕಿಕೊಂಡು ಜೀವಿಸುತ್ತಿದೆ. ಒಂದು ಸೂರಿಗಾಗಿ ಪರದಾಡುವ ಈ ಸಮುದಾಯ ತಮ್ಮನ್ನು ‘ಯಾವಾಗ ಎತ್ತಂಗಡಿ ಮಾಡುತ್ತಾರೋ’ ಎಂಬ ಅನಿಶ್ಚತತೆ ಮತ್ತು ಅಭದ್ರತೆಯಿಂದಾಗಿ ಸದಾ ನರಳುತ್ತಿರುತ್ತದೆ.

ಈ ಸಮುದಾಯಕ್ಕೆ ತುಂಡು ಭೂಮಿಯಿಲ್ಲ, ನೆಲೆನಿಲ್ಲಲು ಸೂರಿಲ್ಲ, ಉದ್ಯೋಗವಿಲ್ಲ, ಆರೋಗ್ಯವಿಲ್ಲ, ಅಕ್ಷರವಿಲ್ಲ... ಹೀಗಿರುವಾಗ ಮಾಸ್ಟೀಕರಂತಹ ಸಮುದಾಯಗಳು ಹೇಗೆ ಬದುಕಬೇಕು? ಇದೀಗ ಮತದಾರರ ಪರಿಷ್ಕರಣೆ(ಎಸ್‌ಐಆರ್)ಸಂದರ್ಭದಲ್ಲಿ ಮುಖ್ಯವಾಗಿ ರೆಸಿಡೆನ್ಸಿಯಲ್ ಸರ್ಟಿಫಿಕೇಟ್ ಮತ್ತು ಜಾತಿ ಸರ್ಟಿಫಿಕೇಟ್‌ಗಳನ್ನು ಕೇಳುತ್ತಾರೆ. ರೆಸಿಡೆನ್ಸೇ ಇಲ್ಲದ ಜಾತಿಯ ಅಸ್ಮಿತೆಯೇ ಇಲ್ಲದ ಮಾಸ್ಟೀಕರು ಇವನ್ನು ಎಲ್ಲಿಂದ ತಂದುಕೊಡುತ್ತಾರೆ? ಎಸ್‌ಐಆರ್ ನಂತರ ಇವರು ಮತದಾರರೂ ಅಲ್ಲ, ಈ ದೇಶದ ನಿವಾಸಿಗಳಂತೂ ಅಲ್ಲವೇ ಅಲ್ಲ...!

Tags

HoleyaMadigascommunities
share
ಸಿ.ಎಸ್. ದ್ವಾರಕಾನಾಥ್
ಸಿ.ಎಸ್. ದ್ವಾರಕಾನಾಥ್
Next Story
X