Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ದೇವಸ್ಥಾನಗಳು ಹಾಗೂ ರೈಲ್ವೆ...

ದೇವಸ್ಥಾನಗಳು ಹಾಗೂ ರೈಲ್ವೆ ನಿಲ್ದಾಣಗಳನ್ನು ಮಾತ್ರ ಜಗಮಗಿಸುವಂತೆ ಮಾಡಿ ಇಡೀ ನಗರವನ್ನೇ ಉದ್ಧಾರ ಮಾಡಲಾಗಿದೆ ಎಂಬಂತೆ ಪೋಸು ಕೊಡುವ ಈ ಅಭಿವೃದ್ಧಿ ಮಾದರಿ ಅದೆಷ್ಟು ಜನದ್ರೋಹಿಯಾಗಿದೆ?

ಆರ್. ಕುಮಾರ್ಆರ್. ಕುಮಾರ್1 March 2024 2:53 PM IST
share
ದೇವಸ್ಥಾನಗಳು ಹಾಗೂ ರೈಲ್ವೆ ನಿಲ್ದಾಣಗಳನ್ನು ಮಾತ್ರ ಜಗಮಗಿಸುವಂತೆ ಮಾಡಿ ಇಡೀ ನಗರವನ್ನೇ ಉದ್ಧಾರ ಮಾಡಲಾಗಿದೆ ಎಂಬಂತೆ ಪೋಸು ಕೊಡುವ ಈ ಅಭಿವೃದ್ಧಿ ಮಾದರಿ ಅದೆಷ್ಟು ಜನದ್ರೋಹಿಯಾಗಿದೆ?
ಇಡೀ ಒಂದು ನಗರವನ್ನು ಬೆಳಗಿಸಲು ಎಲ್ಲಾ ಶಕ್ತಿ ಮತ್ತು ಸಂಪನ್ಮೂಲಗಳನ್ನು ವ್ಯಯಿಸುವ ಬದಲು, ಅತ್ಯಂತ ಕಡಿಮೆ ಸಮಯದಲ್ಲಿ ದೇವಾಲಯ ಮತ್ತು ರೈಲು ನಿಲ್ದಾಣವನ್ನು ಬೆಳಗಿಸಿ, ಇಡೀ ನಗರವನ್ನೇ ಅಭಿವೃದ್ಧಿ ಮಾಡಿದ್ದೇವೆ ಎಂದು ನಗರದ ಲಕ್ಷಾಂತರ ಜನರಿಗೆ ತೋರಿಸುತ್ತಾ ‘‘ಮೋದಿ ಸರಕಾರದಿಂದ ಎಷ್ಟು ದೊಡ್ಡ ಕೆಲಸ ಮಾಡಲಾಗಿದೆ’’ ಎಂದು ಅವರನ್ನು ಭ್ರಮೆಯಲ್ಲಿ ಬೀಳಿಸಲಾಗುತ್ತಿದೆ. ಆದರೆ ಅವರದೇ ಬೀದಿಯಲ್ಲಿ, ಅವರದೇ ಊರಿನಲ್ಲಿ ಅಂಥ ಯಾವ ಅಭಿವೃದ್ಧಿಯೂ, ಜಗಮಗವೂ ಜನರಿಗೆ ಕಾಣಿಸುವುದೇ ಇಲ್ಲ.

‘ಅಮೃತ ಕಾಲದ’ಲ್ಲಿ ಕೇವಲ ಹೆಸರುಗಳಷ್ಟೇ ಚಂದವಾಗಿ ಕಾಣುತ್ತಿದೆ. ಒಳಗೆಲ್ಲ ಹುಳುಕೋ ಹುಳುಕು.

ಈಗ ರೈಲ್ವೆ ವಿಚಾರದಲ್ಲಿಯೂ ಮೋದಿ ಅಭಿವೃದ್ಧಿಯ ಮಾದರಿ ಅದೇ ತಂತ್ರದ ಮೊರೆಹೋಗಿದೆ. ಬಣ್ಣ ಹಚ್ಚುವುದು, ಕಣ್ಣು ಕೋರೈಸುವ ಬೆಳಕು ಹರಡುವುದು, ನೋಡುವ ಕಣ್ಣುಗಳು ಭ್ರಮೆಗೆ ಮಂಕಾಗುವಂತೆ ಮಾಡುವುದು ಮೋದಿ ಸರಕಾರ ಆಡುತ್ತಲೇ ಬಂದಿರುವ ಆಟ.

ಇಂಥ ಶೋಕಿಯ ಮೋದಿ ಅಭಿವೃದ್ಧಿ ಮಾದರಿ ಅದೆಷ್ಟು ಟೊಳ್ಳಾಗಿದೆ? ಎಲ್ಲ ಕಡೆ ಕೇವಲ ದೇವಸ್ಥಾನಗಳು ಹಾಗೂ ರೈಲ್ವೆ ನಿಲ್ದಾಣಗಳನ್ನು ಮಾತ್ರ ಜಗಮಗಿಸುವಂತೆ ಮಾಡಿ ಇಡೀ ನಗರವನ್ನೇ ಉದ್ಧಾರ ಮಾಡಲಾಗಿದೆ ಎಂಬಂತೆ ಪೋಸು ಕೊಡುವ ಈ ಮಾದರಿ ಅದೆಷ್ಟು ಜನದ್ರೋಹಿಯಾಗಿದೆ? ರೈಲ್ವೆ ನಿಲ್ದಾಣಗಳು, ವಿಮಾನ ನಿಲ್ದಾಣಗಳು ಆಧುನಿಕೀಕರಣ ಆಗುತ್ತಿವೆ ಎಂದು ಹೇಳುತ್ತಲೇ ರೈಲ್ವೆ ಪ್ರಯಾಣವನ್ನು ಅದೆಷ್ಟು ದುಬಾರಿ ಮಾಡಲಾಗುತ್ತಿದೆ? ಅದೇ ರೀತಿ ಸರಕಾರಿ ಆಸ್ಪತ್ರೆ, ಸರಕಾರಿ ಶಾಲಾ-ಕಾಲೇಜು ಇತ್ಯಾದಿಗಳನ್ನು ಯಾಕೆ ಆಧುನಿಕೀಕರಣ ಮಾಡಿ ತೋರಿಸುತ್ತಿಲ್ಲ? ಇದು ಅಭಿವೃದ್ಧಿಯ ಯಾವ ಮಾದರಿ? ಎಲ್ಲಿಯ ಮಾದರಿ? ನೋವಿನಿಂದಲೇ ಇಂಥ ಪ್ರಶ್ನೆಗಳನ್ನು ಎತ್ತಬೇಕಾಗಿದೆ.

ನಾವು ಸೂಕ್ಷ್ಮವಾಗಿ ಗಮನಿಸಿದರೆ ದೇವಸ್ಥಾನ ಮತ್ತು ರೈಲು ನಿಲ್ದಾಣ ಇವೆರಡರ ಬಗ್ಗೆಯೇ ಮೋದಿ ಸರಕಾರ ಹೆಚ್ಚಿನ ಗಮನ ಹರಿಸುತ್ತಿದೆ ಎಂಬುದು ಗೊತ್ತಾಗುತ್ತದೆ.

ದೇವಸ್ಥಾನದ ಪುನರ್ನಿರ್ಮಾಣ ಮತ್ತು ಜೀರ್ಣೋದ್ಧಾರ ಒಂದು ತಂತ್ರವಾದರೆ, ಇನ್ನೊಂದೆಡೆಯಿಂದ ರೈಲು ಮತ್ತು ರೈಲು ನಿಲ್ದಾಣಗಳನ್ನು ಮರುವಿನ್ಯಾಸಗೊಳಿಸಲಾಗುತ್ತಿದೆ.

ಭವ್ಯ ವಿನ್ಯಾಸಗಳ ಮೂಲಕ ಜನರನ್ನು ಮರುಳು ಮಾಡುವ ತಂತ್ರವೊಂದು ಜಾರಿಯಲ್ಲಿದೆ. ಯಾವುದೇ ಒಂದು ನಗರದಲ್ಲಿ ರೈಲು ನಿಲ್ದಾಣ ಮತ್ತು ದೇವಸ್ಥಾನದ ಸುತ್ತ ಸ್ವಚ್ಛಗೊಳಿಸಿದರೆ, ಆ ನಗರದ ಉಳಿದ ಭಾಗವೆಲ್ಲ ಮೊದಲಿನ ಹಾಗೆಯೇ ಉಳಿದಿದ್ದರೂ, ನೋಡುವವರ ಕಣ್ಣಿಗೆ ಆ ರೈಲು ನಿಲ್ದಾಣ ಮತ್ತು ದೇವಸ್ಥಾನದ ಜಗಮಗ ಮಾತ್ರವೇ ಕಾಣಿಸುತ್ತದೆ.

ಇಡೀ ಒಂದು ನಗರವನ್ನು ಬೆಳಗಿಸಲು ಎಲ್ಲಾ ಶಕ್ತಿ ಮತ್ತು ಸಂಪನ್ಮೂಲಗಳನ್ನು ವ್ಯಯಿಸುವ ಬದಲು, ಅತ್ಯಂತ ಕಡಿಮೆ ಸಮಯದಲ್ಲಿ ದೇವಾಲಯ ಮತ್ತು ರೈಲು ನಿಲ್ದಾಣವನ್ನು ಬೆಳಗಿಸಿ, ಇಡೀ ನಗರವನ್ನೇ ಅಭಿವೃದ್ಧಿ ಮಾಡಿದ್ದೇವೆ ಎಂದು ನಗರದ ಲಕ್ಷಾಂತರ ಜನರಿಗೆ ತೋರಿಸುತ್ತಾ ‘‘ಮೋದಿ ಸರಕಾರದಿಂದ ಎಷ್ಟು ದೊಡ್ಡ ಕೆಲಸ ಮಾಡಲಾಗಿದೆ’’ ಎಂದು ಅವರನ್ನು ಭ್ರಮೆಯಲ್ಲಿ ಬೀಳಿಸಲಾಗುತ್ತಿದೆ. ಆದರೆ ಅವರದೇ ಬೀದಿಯಲ್ಲಿ, ಅವರದೇ ಊರಿನಲ್ಲಿ ಅಂಥ ಯಾವ ಅಭಿವೃದ್ಧಿಯೂ, ಜಗಮಗವೂ ಜನರಿಗೆ ಕಾಣಿಸುವುದೇ ಇಲ್ಲ.

ದೇವಸ್ಥಾನ ಮತ್ತು ರೈಲು ನಿಲ್ದಾಣದ ಬಳಿ ಮಾತ್ರವೇ ‘ಅಭಿವೃದ್ಧಿ’ ಗೋಚರಿಸುತ್ತದೆ. ಆದರೆ ಅದೇ ನಗರದ ಸರಕಾರಿ ಕಾಲೇಜುಗಳು, ಆಸ್ಪತ್ರೆಗಳು, ಶಾಲೆಗಳು ಮತ್ತು ಕಚೇರಿಗಳಲ್ಲಿ ಯಾವ ಅಭಿವೃದ್ಧಿಯೂ ಇಲ್ಲ. ಹೀಗೇಕೆ ಎಂದು ಕೇಳಿದರೆ ಅದಕ್ಕೆ ಉತ್ತರ ಸಿಗುವ ನಿರೀಕ್ಷೆಯೂ ಇಲ್ಲ.

ಸಾವಿರಾರು ಕೋಟಿ ರೂ. ಹಾಕಿ ರೈಲು ನಿಲ್ದಾಣಗಳನ್ನು ಜಗಮಗಗೊಳಿಸಲಾಗುತ್ತಿದೆ. ಹೆಸರು ಬದಲಿಸಲಾಗುತ್ತದೆ.ಆದರೆ ಹೀಗೆ ಜಗಮಗಗೊಳಿಸುವ ಮೂಲಕ ಮೋದಿ ಸರಕಾರ ಈ ದೇಶದ ಜನಸಾಮಾನ್ಯರಿಗೆ ಏನನ್ನು ಕೊಟ್ಟಂತಾಯಿತು? ವಿಕಸಿತ ಭಾರತ ವಿಕಸಿತ ರೈಲ್ವೆ, ಅಮೃತ್ ಭಾರತ್ ಸ್ಟೇಷನ್ ಮೂಲಕ ಆಗಿರುವುದು, ಆಗುತ್ತಿರುವುದು ಯಾರ ವಿಕಾಸ? ಯಾವ ಬಡವರಿಗೆ, ಯಾವ ಜನಸಾಮಾನ್ಯರಿಗೆ ಉಪಕಾರವಾಯಿತು?

ನಿತ್ಯವೂ ಆ ನಿಲ್ದಾಣಗಳ ಮೂಲಕ ಹಾದುಹೋಗುವ ಲಕ್ಷಾಂತರ ಮಂದಿ, ಮೋದಿ ಎಷ್ಟೆಲ್ಲ ಕೆಲಸ ಮಾಡಿದ್ದಾರೆ ಎಂದುಕೊಳ್ಳುತ್ತಾರೆ. ಆದರೆ ಮೋದಿ ಸರಕಾರ ಮಾಡಿರುವುದು ಪ್ಯಾಸೆಂಜರ್ ರೈಲಿನ ಹೆಸರನ್ನು ಬದಲಿಸಿ ಎಕ್ಸ್‌ಪ್ರೆಸ್ ಎಂದು ಇಟ್ಟಿರುವುದು ಮಾತ್ರವಲ್ಲದೆ, ಹೀಗೆ ಹೆಸರು ಬದಲಿಸಿ ತಮ್ಮ ಜೇಬಿಗೇ ಕನ್ನ ಹಾಕಿದೆಯೆಂಬುದು ಕೂಡ, ಜಗಮಗದ ಭ್ರಮೆಯಲ್ಲಿ ಮಂಕಾದ ಅವರ ಬುದ್ಧಿಗೆ ತಕ್ಷಣಕ್ಕೆ ಹೊಳೆಯುವುದೇ ಇಲ್ಲ.

‘ಟೈಮ್ಸ್ ಆಫ್ ಇಂಡಿಯಾ’ ವರದಿಯೊಂದರ ಪ್ರಕಾರ, ಲಕ್ನೊದಲ್ಲಿನ ಗೋಮ್ತಿನಗರ ರೈಲುನಿಲ್ದಾಣವನ್ನು ನ್ಯೂಯಾರ್ಕ್‌ನಲ್ಲಿನ ಮ್ಯಾನ್ ಹಟನ್ ಗ್ರ್ಯಾಂಡ್ ಸೆಂಟ್ರಲ್ ಹಾಗೂ ಲಂಡನ್‌ನ ಕಿಂಗ್ಸ್ ಕ್ರಾಸ್ ಸ್ಟೇಷನ್‌ನಿಂದ ಪ್ರೇರಿತವಾಗಿ ವಿನ್ಯಾಸಗೊಳಿಸಲಾಗಿದೆ. ಅದರಲ್ಲಿ ಆಗಮನ, ನಿರ್ಗಮನಕ್ಕೆ ಪ್ರತ್ಯೇಕ ಪಾಯಿಂಟ್ ಇದ್ದು ಭಾರತದಲ್ಲಿಯೇ ವಿಶೇಷ ಎಂದು ಪ್ರಚಾರ ಪಡೆಯಲಾಗುತ್ತಿದೆ.

ಆದರೆ ಹಾಗೆ ಮಾಡುವಾಗ, ನ್ಯೂಯಾರ್ಕ್‌ನಲ್ಲಿನ ಸೌಲಭ್ಯಕ್ಕೂ ಲಕ್ನೊದಲ್ಲಿನ ಸೌಲಭ್ಯಕ್ಕೂ ಇರುವ ಅಗಾಧ ಅಂತರವನ್ನೂ ಗಮನದಲ್ಲಿ ಇಟ್ಟುಕೊಳ್ಳಬೇಕಲ್ಲವೆ?

ಲಕ್ನೊದಲ್ಲಿ ಈವರೆಗೆ ಇರುವುದು ಒಂದೇ ಮೆಟ್ರೋ ಲೈನ್. ನ್ಯೂಯಾರ್ಕ್‌ನಲ್ಲಿ ಭಾರೀ ದೊಡ್ಡ ಮೆಟ್ರೋ ಜಾಲವಿದೆ. ಹಾಗಾಗಿ ಆಗಮನ, ನಿರ್ಗಮನ ಪ್ರತ್ಯೇಕವಾಗಿದ್ದರೂ ಅಲ್ಲಿ ಜನರಿಗೆ ಮುಂದಿನ ಪ್ರಯಾಣಕ್ಕೆ ಹೆಚ್ಚು ಸಮಯ ಬೇಕಾಗುವುದಿಲ್ಲ.

ಆದರೆ ಇಲ್ಲಿ ನಿಜವಾಗಿ ಆಗಬೇಕಾದ ವ್ಯವಸ್ಥೆಯಿಲ್ಲದೆ, ಆಗಮನ, ನಿರ್ಗಮನಕ್ಕೆ ಪ್ರತ್ಯೇಕ ಪಾಯಿಂಟ್ ಮಾತ್ರ ಮಾಡಿಬಿಟ್ಟು ಅದನ್ನೇ ಸಾಧನೆ, ವಿಶೇಷತೆ ಎಂದುಕೊಂಡರೆ ಹೇಗೆ?

ಅಲ್ಲದೆ ನ್ಯೂಯಾರ್ಕ್‌ನ ಭವ್ಯತೆಯಿಂದ ಇಲ್ಲಿನ ಜನಸಾಮಾನ್ಯರಿಗೆ ಏನು ಪ್ರಯೋಜನ? ಅವರನ್ನು ಇನ್ನಷ್ಟು ಪರದಾಡುವಂತೆ ಮಾಡುವುದೇ ಮೋದಿ ಸರಕಾರದ ಸಾಧನೆಯೇ?

ಮತ್ತೊಂದು ಬಹು ಮುಖ್ಯ ಪ್ರಶ್ನೆ ಏನೆಂದರೆ,

ಇಷ್ಟು ದೊಡ್ಡ ಪ್ರಾಜೆಕ್ಟ್‌ಗಳನ್ನು ಎತ್ತಿಕೊಳ್ಳುವಾಗೆಲ್ಲ ಭಾರೀ ಪ್ರಮಾಣದ ಉದ್ಯೋಗ ಸೃಷ್ಟಿಯಾಗುವ ಬಗ್ಗೆ ಹೇಳಲಾಗುತ್ತದೆ. ಆದರೆ ಎಷ್ಟು ಉದ್ಯೋಗಗಳು ಸೃಷ್ಟಿಯಾದವು? ಅದರ ಸ್ಪಷ್ಟ ಚಿತ್ರ ಸಿಗಬೇಕಲ್ಲವೆ? ಲಕ್ನೊ, ಪ್ರಯಾಗ್‌ರಾಜ್‌ನಲ್ಲಿ ಉದ್ಯೋಗಗಳ ಕಥೆ ಏನಾಗಿದೆ?

ಪರೀಕ್ಷೆ ಬರೆದು ಪಾಸಾದರೂ ನೇಮಕಾತಿ ಪತ್ರಕ್ಕಾಗಿ ಹೋರಾಡಬೇಕಾದ ಸ್ಥಿತಿ ಯುವಕರದು. ರೈಲ್ವೆಯಲ್ಲಿನ ಕೆಲವೇ ಕೆಲವು ಸಾವಿರ ಹುದ್ದೆಗಳಿಗಾಗಿ ಅದೆಷ್ಟು ಲಕ್ಷ ಯುವಕರು ಅರ್ಜಿ ಹಾಕಿದ್ದಾರೆ, ಎಂಥ ಸಂಘರ್ಷದಲ್ಲಿ ತೊಡಗಿದ್ಧಾರೆ ಎಂಬುದು ಗೊತ್ತಿರುವ ಸಂಗತಿ.

ಉದ್ಯೋಗಗಳ ಸಂಖ್ಯೆ ಹೆಚ್ಚಿಸಬೇಕೆಂದು ಯುವಕರು ಪ್ರತಿಭಟಿಸಿದರೆ, ಹಾಗೆ ನ್ಯಾಯಯುತ ಬೇಡಿಕೆ ಇಟ್ಟಿದ್ದಕ್ಕಾಗಿ ಪೊಲೀಸರಿಂದ ಲಾಠಿಯೇಟು ತಿಂದಿದ್ದು ಅವರಿಗೆ ಮೋದಿ ಸರಕಾರದಿಂದ ಸಿಕ್ಕ ಬಳುವಳಿ.

ಮಾತೆತ್ತಿದರೆ ವಿಕಾಸದ ಮಾತಾಡುವ, ಉದ್ಯೋಗದ ಭ್ರಮೆಗಳನ್ನು ಬಿತ್ತುವ ಮೋದಿ ಮತ್ತವರ ಮಾತುಗಳನ್ನೆಲ್ಲ ಯಾವ ಅನುಮಾನವೂ ಇಲ್ಲದೆ, ಯಾವ ಪ್ರಶ್ನೆಗಳೂ ಇಲ್ಲದೆ ಪ್ರಸಾರ ಮಾಡುವ ಮಡಿಲ ಮೀಡಿಯಾಗಳೂ ಜನಸಾಮಾನ್ಯರ ಬದುಕಿನ ಕಡೆಗೆ ಗಮನವೇ ಕೊಡುವುದಿಲ್ಲ. ನಿರುದ್ಯೋಗದ ಕಾರಣಕ್ಕೆ ಹತಾಶ ಸ್ಥಿತಿ ಮುಟ್ಟಿರುವ ಈ ದೇಶದ ಯುವಕರ ಸಂಕಟ ಅವರನ್ನು ಯಾಕೆ ಕಾಡುತ್ತಿಲ್ಲ?

ರೈಲು ಇಕೊ ಸಿಸ್ಟಮ್ ಮೂಲಕ ವರ್ಷವರ್ಷವೂ 10 ಲಕ್ಷ ಉದ್ಯೋಗ ಸೃಷ್ಟಿ ಮಾಡಲಾಗುತ್ತದೆ. ಇದಕ್ಕಾಗಿ 150 ಬಿಲಿಯನ್ ಡಾಲರ್ ಅಂದರೆ 12 ಲಕ್ಷ ಕೋಟಿ ರೂ. ಯನ್ನು ಮುಂದಿನ 5 ವರ್ಷ ತೊಡಗಿಸಲಾಗುವುದು ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ 2017ರಲ್ಲಿಯೇ ಹೇಳಿದ್ದರು. ಆದರೆ ಎಲ್ಲವೂ ಮಾತಲ್ಲೇ ಮುಗಿದಿದೆ. ರೈಲ್ವೆಯಲ್ಲಿ ನೇಮಕಾತಿ ವಿವರ ಗಮನಿಸಿದರೆ,

2021-2022ರಲ್ಲಿ 4,860 ಹುದ್ದೆಗಳು ಭರ್ತಿಯಾಗಿವೆ

2022-2023ರಲ್ಲಿ 83,888 ಹುದ್ದೆಗಳು

2023-2024ರಲ್ಲಿ 2023ರ ಸೆಪ್ಟಂಬರ್ 30ರವರೆಗೆ 53,182 ಹುದ್ದೆಗಳು.

ಹಾಗಾದರೆ ಎಲ್ಲಿ ಹೋದವು ವಾರ್ಷಿಕ 10 ಲಕ್ಷ ಉದ್ಯೋಗಗಳು?

ಹೀಗೆ ಉದ್ಯೋಗಗಳೇ ಇಲ್ಲದಿರುವಾಗ ಇಷ್ಟೊಂದು ವೆಚ್ಚ ಮಾಡಿ ಕಟ್ಟಡಗಳನ್ನು ಮಾತ್ರ ಕಟ್ಟಿ ವಿಜೃಂಭಣೆ ಮಾಡಲಾಗುತ್ತಿರುವುದು ಏಕೆ?

ಬೆಂಗಳೂರು, ಹೈದರಾಬಾದ್, ಮುಂಬೈನಂಥ ನಗರಗಳಲ್ಲಿ ಇರುವ ಮಾಲ್‌ಗಳೇ ಪಾಳುಬಿದ್ದ ಸ್ಥಿತಿಯಲ್ಲಿರುವಾಗ ಇವರು ರೈಲು ನಿಲ್ದಾಣಗಳಲ್ಲಿ ಮತ್ತೊಂದು ಶಾಪಿಂಗ್ ಮಾಲ್ ಕಟ್ಟಿ ಏನು ಮಾಡುತ್ತಾರೆ?

ಪ್ಯಾಸೆಂಜರ್ ರೈಲುಗಳನ್ನು ಎಕ್ಸ್‌ಪ್ರೆಸ್ ರೈಲುಗಳೆಂದು ಹೆಸರು ಬದಲಿಸಲಾಗಿದೆ. ಅದೇ ಪ್ರಯಾಣದ ಅವಧಿ, ಅಷ್ಟೇ ಸೌಲಭ್ಯಗಳು, ಅಷ್ಟೇ ನಿಲ್ದಾಣಗಳು. ಆದರೆ ಹೆಸರು ಮಾತ್ರ ಎಕ್ಸ್‌ಪ್ರೆಸ್.

ಮತ್ತು ಹೀಗೆ ಎಕ್ಸ್‌ಪ್ರೆಸ್ ಆಗಿರುವುದಕ್ಕೆ ಪ್ರಯಾಣಿಕರ ಜೇಬಿಗೂ ಕತ್ತರಿ. ಎರಡನೇ ದರ್ಜೆಯ ಸಾಮಾನ್ಯ ದರದ ಬದಲಿಗೆ ಎಕ್ಸ್‌ಪ್ರೆಸ್ ದರಗಳನ್ನು ಪ್ರಯಾಣಿಕರು ಕೊಡಬೇಕಿದೆ.

ಹೆಸರೊಂದನ್ನು ಮಾತ್ರ ಬದಲಿಸಿ, ಅಭಿವೃದ್ಧಿ ಎಂದು ಅದನ್ನೇ ಕರೆದು, ಪ್ರಯಾಣಿಕರು ದುಪ್ಪಟ್ಟು ದುಡ್ಡು ತೆರುವ ಹಾಗೆ ಮಾಡುವುದು ಎಂಥ ನ್ಯಾಯ?

share
ಆರ್. ಕುಮಾರ್
ಆರ್. ಕುಮಾರ್
Next Story
X