Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ‘ಪರಿಶಿಷ್ಟ ಜಾತಿ’ ಪದ ಬಂದದ್ದು ಹೇಗೆ?

‘ಪರಿಶಿಷ್ಟ ಜಾತಿ’ ಪದ ಬಂದದ್ದು ಹೇಗೆ?

ಕಾನಿಷ್ಕ ಹೊ.ಬ. ಮೈಸೂರುಕಾನಿಷ್ಕ ಹೊ.ಬ. ಮೈಸೂರು18 Jan 2026 1:24 PM IST
share
‘ಪರಿಶಿಷ್ಟ ಜಾತಿ’ ಪದ ಬಂದದ್ದು ಹೇಗೆ?

‘ಪರಿಶಿಷ್ಟ ಜಾತಿಗಳು’ ಅಥವಾ ‘ಎಸ್‌ಸಿ’ಗಳು ಎಂಬ ಈ ಪದ ಸಾಂವಿಧಾನಿಕವಾಗಿ ಬಾಬಾಸಾಹೇಬ್ ಅಂಬೇಡ್ಕರ್‌ರವರು ಸಂಶೋಧಿಸಿದ ಪದ. ಆ ಪದವನ್ನು 1935ರಲ್ಲಿ ಭಾರತ ಸರಕಾರದ ಕಾಯ್ದೆಯಲ್ಲಿ ಸೇರಿಸಿದ ನಂತರ ಡಾ.ಅಂಬೇಡ್ಕರರು ‘ಪರಿಶಿಷ್ಟ ಜಾತಿಗಳ ಒಕ್ಕೂಟ’ (ಷೆಡ್ಯೂಲ್ಡ್ ಕಾಸ್ಟ್ ಫೆಡರೇಷನ್) ಎಂಬ ರಾಜಕೀಯ ಪಕ್ಷವನ್ನೇ ಸ್ಥಾಪಿಸಿದರು! ಈ ನಿಟ್ಟಿನಲ್ಲಿ ಪರಿಶಿಷ್ಟ ಜಾತಿಗಳು ಈ ಪದದ ಇತಿಹಾಸ ತುಂಬಾ ವಿಶಿಷ್ಟವಾಗಿದೆ. ಜಾತ್ಯತೀತ, ಧರ್ಮಾತೀತ ಹಿನ್ನೆಲೆಯಲ್ಲಿ ಸಂಶೋಧಿಸಲ್ಪಟ್ಟ ಆ ಪದ ಸ್ಪಷ್ಟವಾಗಿ ಸಮಾನತೆಯ ಆಶಯ ಹೊಂದಿತ್ತು.

ಪರಿಶಿಷ್ಟ ಜಾತಿ ಈ ಪದ ಸದ್ಯ ಅಸ್ಪಶ್ಯತೆ ಎಂಬ ಸಾಮಾಜಿಕ ಸಮಸ್ಯೆಯಿಂದ ನೊಂದ ಸಮುದಾಯಗಳನ್ನು ಗುರುತಿಸಲು ಭಾರತದ ಸಂವಿಧಾನ ಅಳವಡಿಸಿಕೊಂಡಿರುವ ಪದ. ಸಂವಿಧಾನದ ಅನುಚ್ಛೇದ 330, 338 ಮತ್ತು 341 ರಲ್ಲಿ ಈ ಪದವನ್ನು ಬಳಸಲಾಗಿದೆ. ಅಲ್ಲಿ ಸಂಬಂಧಿತ ಜಾತಿಗಳಿಗೆ ರಾಜಕೀಯ ಸ್ಥಾನ ಮೀಸಲಾತಿ, ರಾಷ್ಟ್ರೀಯ ಆಯೋಗ ಮತ್ತು ನಿರ್ದಿಷ್ಟ ಜಾತಿಗಳನ್ನು ಪಟ್ಟಿ ಮಾಡಲು ಬಳಸಿಕೊಳ್ಳಲಾಗಿದೆ. ಒಟ್ಟಾರೆ ಅಸ್ಪಶ್ಯತೆಯಿಂದ ನೊಂದ ಜಾತಿಗಳಿಗೆ ಈ ಪದದ ಮೂಲಕ ಸಾಂವಿಧಾನಿಕ ಅಧಿಕೃತ ಮಾನ್ಯತೆ ಸಿಕ್ಕಿದೆ.

‘ಪರಿಶಿಷ್ಟ ಜಾತಿ’ (‘ಷೆಡ್ಯೂಲ್ಡ್ ಕಾಸ್ಟ್’) ಈ ಪದ ಹುಟ್ಟಿದ ಬಗೆ ಹೇಗೆ? ಎಂಬುದು ಇಲ್ಲಿ ಸ್ವಾರಸ್ಯಕರ. ಪರಿಶಿಷ್ಟ ಜಾತಿ ಈ ಪದ ಹುಟ್ಟಿದ್ದು 1932ರ ಮೂರನೇ ದುಂಡುಮೇಜಿನ ಸಮ್ಮೇಳನದ ಸಂದರ್ಭದಲ್ಲಿ ದೂರದ ಲಂಡನ್‌ನಲ್ಲಿ. ‘ಷೆಡ್ಯೂಲ್’ ಎಂದರೆ ಬ್ರಿಟಿಷ್ ಇಂಗ್ಲಿಷ್ ಪ್ರಕಾರ ‘ಕಾನೂನಿನ ಮೂಲಕ ರಕ್ಷಣೆಗಾಗಿ ನಿರ್ದಿಷ್ಟ ವಿಷಯವನ್ನು ಪಟ್ಟಿಮಾಡುವುದು’ ಎಂದಾಗಿದೆ. ಇದೊಂದು ಜಾತ್ಯತೀತ, ಧರ್ಮಾತೀತ ಪದವಾಗಿದೆ. ಅಂದರೆ ಯಾವುದೇ ಧರ್ಮಕ್ಕೂ, ಜಾತಿಗೂ ಈ ಪದ ಲಿಂಕ್ ಹೊಂದುವುದಿಲ್ಲ. ಈ ನಿಟ್ಟಿನಲ್ಲಿ ‘ಷೆಡ್ಯೂಲ್ಡ್ ಕಾಸ್ಟ್’ ಅಥವಾ ‘ಪರಿಶಿಷ್ಟ ಜಾತಿಗಳು’ ಎಂಬ ಈ ಪಟ್ಟಿಯ ಅಡಿಯಲ್ಲಿ ಅಸ್ಪಶ್ಯತೆ ಅನುಭವಿಸುತ್ತಿದ್ದ ಜಾತಿಗಳನ್ನು ಪಟ್ಟಿಮಾಡಲಾಯಿತು. ಆ ಮೂಲಕ ಪರಿಶಿಷ್ಟ ಜಾತಿ ಅಥವಾ ಎಸ್‌ಸಿ ಎಂಬ ಪದ ಬಳಕೆಗೆ ಬಂದಿತು. ಅಂದಹಾಗೆ ಡಾ. ಅಂಬೇಡ್ಕರ್‌ರವರು ಈ ಪದವನ್ನು ಸಲಹೆ ಮಾಡಿದ್ದರೆ? ಆರಂಭದಲ್ಲಿ ಮಾಡಿರಲಿಲ್ಲ. 1932ರ ಮೂರನೇ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಡಾ.ಅಂಬೇಡ್ಕರ್ ಮತ್ತು ಆರ್.ಶ್ರೀನಿವಾಸನ್‌ರವರುಗಳು ಸಲಹೆ ನೀಡಿದ್ದು ‘ನಾನ್ ಕಾಸ್ಟ್ ಹಿಂದೂಸ್’ (ಜಾತಿರಹಿತ ಹಿಂದೂಗಳು) ಮತ್ತು ಪ್ರೊಟೆಸ್ಟೆಂಟ್ ಹಿಂದೂಸ್ (ಪ್ರತಿರೋಧಿ ಹಿಂದೂಗಳು) ಎಂದು. ಡಾ.ಅಂಬೇಡ್ಕರ್‌ರವರು ಸಲಹೆ ನೀಡಿದ್ದ ಮತ್ತೊಂದು ಪದ ‘ಹೊರಗಿನ ಜಾತಿಗಳು’ (exterior castes) ಎಂಬುದು. ಆದರೆ ಈ ಪದಗಳನ್ನು ಡಾ. ಅಂಬೇಡ್ಕರ್‌ರವರೇ ಹೇಳುವಂತೆ ಮೇಲ್ಜಾತಿ ಹಿಂದೂಗಳು ದುಂಡುಮೇಜಿನ ಸಭೆಯಲ್ಲಿ ಒಪ್ಪಲಿಲ್ಲ. ಪರಿಣಾಮವಾಗಿ ಡಾ.ಅಂಬೇಡ್ಕರ್ ಮತ್ತು ಆರ್.ಶ್ರೀನಿವಾಸನ್ ರವರುಗಳು ನೀಡಿದ ಮತ್ತೊಂದು ಸಲಹೆಯಂತೆ ದುಂಡುಮೇಜಿನ ಸಭೆ ‘ಪರಿಶಿಷ್ಟ ಜಾತಿಗಳು’ ಅಥವಾ ‘ಷೆಡ್ಯೂಲ್ಡ್ ಕಾಸ್ಟ್’ ಎಂಬ ಈ ಪದವನ್ನು ಸ್ವೀಕರಿಸಿತು.

ಅಂದಹಾಗೆ ಪರಿಶಿಷ್ಟ ಜಾತಿಗಳು ಎಂಬ ಈ ಪದಕ್ಕೆ ಪರ್ಯಾಯವಾಗಿ ಹಿಂದೂಗಳ ಸಲಹೆ ಏನಾಗಿತ್ತು ಎಂಬ ಪ್ರಶ್ನೆಯು ಇಲ್ಲಿ ಮೂಡುತ್ತದೆ. ಈ ಹಿನ್ನೆಲೆಯಲ್ಲಿ 1933ರ ಫೆಬ್ರವರಿ ತಿಂಗಳಲ್ಲಿ 7 ಜನ ಪಂಡಿತರು ಗಾಂಧೀಜಿಯವರ ಸಂಪಾದಕತ್ವದ ‘ಹರಿಜನ’ ಪತ್ರಿಕೆಯಲ್ಲಿ ಅಸ್ಪಶ್ಯತೆಗೂ, ಧರ್ಮಶಾಸ್ತ್ರಕ್ಕೂ ಸಂಬಂಧವಿದೆ ಎಂದು ಪ್ರಸ್ತಾಪಿಸಿ 3 ಬಗೆಯ ಅಸ್ಪಶ್ಯತೆಯನ್ನು ಆ ಪಂಡಿತ ವರ್ಗ ಗುರುತಿಸಿತ್ತು. (Part Apart by Ashok Gopal, Pp.480)

1.ಶೂದ್ರ ಮತ್ತು ಬ್ರಾಹ್ಮಣ ಮಹಿಳೆಯರ ಸಂಯೋಗದಿಂದ ಜನಿಸಿದ ಸಂತತಿಗೆ ಸೇರಿದ ಜನರು.

2.ಶಾಸ್ತ್ರಗಳು ನಿಷೇಧಿಸಿರುವ ಐದು ಪ್ರಕಾರದ ಪಾಪಗಳನ್ನು ಅಥವಾ ಪದ್ಧತಿಗಳನ್ನು ಆಚರಿಸುವ ವ್ಯಕ್ತಿಗಳು.

3.ಮಲಿನ ಸ್ಥಿತಿಯಲ್ಲಿರುವ ವ್ಯಕ್ತಿಗಳು.

ಹೀಗೆ ಬರೆಯುತ್ತಾ ಪಂಡಿತರು ‘ಈಗ ಮೂರನೇ ಬಗೆಯ ಅಸ್ಪಶ್ಯತೆ ಮಾತ್ರ ಭಾರತದಾದ್ಯಂತ ಇದೆ. ತಮ್ಮ ಕೆಲಸದ ಸಮಯದಲ್ಲಿ ತಮ್ಮ ಕೆಲಸದ ಕಾರಣಕ್ಕಾಗಿ ಮಲಿನಗೊಳ್ಳುವ ಇವರನ್ನು ಸ್ನಾನ ಮಾಡಿಸಿ ಬಟ್ಟೆ ಬದಲಿಸಿದರೆ ಅಸ್ಪಶ್ಯತೆ ಹೋಗುತ್ತದೆ. ಆದ್ದರಿಂದ ಅವರಿಗಾಗಿ ಪ್ರತ್ಯೇಕ ಜಾತಿ ಪಟ್ಟಿ ತಯಾರಿಸುವ ಅಗತ್ಯವಿಲ್ಲ’ ಎಂದು ಪ್ರತಿಪಾದಿಸುತ್ತಾರೆ! ಆದರೆ ಪಂಡಿತರ ಈ ವಾದ ಬಿದ್ದುಹೋಯಿತು ಎಂಬುದು ಅದು ಬೇರೆಯದೇ ಮಾತು.

ಈ ಸಂದರ್ಭದಲ್ಲಿ ಮತ್ತೊಂದು ಪ್ರಶ್ನೆ ಮೂಡುತ್ತದೆ. ಅದೆಂದರೆ 1932ರ ಪರಿಶಿಷ್ಟ ಜಾತಿಗಳು ಎಂಬ ಈ ಪದ ಬಳಕೆಗೂ ಮುನ್ನ ಯಾವ ಪದ ಬಳಕೆಯಲ್ಲಿತ್ತು ಎಂಬುದು. ಉತ್ತರ: ‘ಡಿಪ್ರೆಸ್ಡ್ ಕ್ಲಾಸಸ್’ ಅಥವಾ ‘ಡಿಸಿ’ಗಳು. ಸ್ವತಃ ಡಾ.ಅಂಬೇಡ್ಕರರು ಆರಂಭದಿಂದಲೂ ತಮ್ಮ ಚಳವಳಿಯನ್ನು ನಡೆಸಿಕೊಂಡು ಬಂದದ್ದೇ ‘ಡಿಪ್ರೆಸ್ಡ್ ಕ್ಲಾಸಸ್’ ಅಥವಾ ‘ಶೋಷಿತ ವರ್ಗಗಳು’ ಎಂಬ ಪದ ಬಳಕೆ ಮೂಲಕ. (‘ಡಿಪ್ರೆಸ್ಡ್ ಕ್ಲಾಸಸ್’ ಅಥವಾ ‘ಡಿಸಿ’ ಪದ ಬಳಕೆ ಈಚಿನವರೆಗೂ ಅಲ್ಲಲ್ಲಿ ಅಸ್ತಿತ್ವದಲ್ಲಿತ್ತು. ಉದಾಹರಣೆಗೆ 1990ಕ್ಕೂ ಮುಂಚೆ ಜಿಲ್ಲಾ ಕೇಂದ್ರಗಳಲ್ಲಿ ಇದ್ದ ಪರಿಶಿಷ್ಟ ಜಾತಿಗಳ ವಿದ್ಯಾರ್ಥಿನಿಲಯಗಳನ್ನು ‘ಡಿಸಿ ಹಾಸ್ಟೆಲ್’ ಎಂದೇ ಕರೆಯುತ್ತಿದ್ದರು!) ಹೀಗಿರುವಾಗ ತಾವೇ ಬಳಸುತ್ತಿದ್ದ ‘ಡಿಪ್ರೆಸ್ಡ್ ಕ್ಲಾಸಸ್’ ಎಂಬ ಈ ಪದವನ್ನು ಡಾ.ಅಂಬೇಡ್ಕರ್‌ರವರು ದುಂಡುಮೇಜಿನ ಸಭೆಗಳ ಚರ್ಚೆಯ ಸಂದರ್ಭದಲ್ಲಿ ಯಾಕೆ ಮುಂದುವರಿಸಲಿಲ್ಲ?. ಉತ್ತರ: ‘ಡಿಪ್ರೆಸ್ಡ್ ಕ್ಲಾಸಸ್’ ಅಥವಾ ‘ಶೋಷಿತ ವರ್ಗಗಳು’ ಅಥವಾ ‘ದಮನಿತ ವರ್ಗಗಳು’ ಎಂಬ ಈ ಪದ ಕೀಳು ಅಥವಾ ಅಸಹಾಯಕ ಎಂಬ ಅರ್ಥವನ್ನು ಸೃಷ್ಟಿಸುತ್ತದೆ ಎಂಬುದಾಗಿತ್ತು. ಹಾಗೆಯೇ 1932ರ ಆ ಕಾಲದಲ್ಲಿ ಅನೇಕ ಪ್ರಾಂತಗಳಲ್ಲಿ ಅಸ್ಪಶ್ಯತೆ ಅನುಭವಿಸುತ್ತಿದ್ದರೂ ಸಂಬಂಧಿತ ಅನೇಕ ಅಸ್ಪಶ್ಯ ಸಮುದಾಯಗಳು ಸಾಕಷ್ಟು ಸುಶಿಕ್ಷಿತ ಮತ್ತು ಸುಸ್ಥಿತಿಯಲ್ಲಿದ್ದುದ್ದನ್ನು ಡಾ.ಅಂಬೇಡ್ಕರರು ಗಮನಿಸಿದ್ದರು. ಈ ಹಿನ್ನೆಲೆಯಲ್ಲಿ ಇಂತಹ ಸಮುದಾಯಗಳನ್ನು ದಮನಿತ ಸಮುದಾಯಗಳು ಅಥವಾ ಡಿಪ್ರೆಸ್ಡ್ ಕ್ಲಾಸಸ್ ಎಂದು ಸಾರ್ವತ್ರಿಕಗೊಳಿಸುವುದು ಎಷ್ಟು ಸರಿ ಎಂಬ ಚರ್ಚೆ ಕೂಡ ಆ ಸಂದರ್ಭದಲ್ಲಿ ಮುನ್ನೆಲೆಗೆ ಬಂದಿತು. ಜೊತೆಗೆ ಅಂತಹ ಸಮುದಾಯಗಳು ಪ್ರಜ್ಞಾವಂತಿಕೆಯನ್ನು ಪಡೆಯುತ್ತಿರುವುದು ಅಲ್ಲದೆ ಭಾರತೀಯ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆಯಲು ಆ ಕಾಲದಲ್ಲೇ ಆ ನಿಟ್ಟಿನ ಪ್ರಯತ್ನ ಪಡುತ್ತಿದ್ದದ್ದು ಕೂಡ ಡಾ.ಅಂಬೇಡ್ಕರರ ಗಮನಕ್ಕೆ ಬಂದಿತ್ತು. ಆ ಕಾರಣ ಅವರು ಡಿಪ್ರೆಸ್ಡ್ ಕ್ಲಾಸಸ್ ಪದವನ್ನು ತಿರಸ್ಕರಿಸಿದರು.

ಮುಂದುವರಿದು ಸ್ವಾತಂತ್ರ್ಯಾನಂತರದ ಕಾಲಕ್ಕೆ ಪರಿಶಿಷ್ಟ ಜಾತಿಗಳು ಪದಕ್ಕೆ ಪರ್ಯಾಯವಾಗಿ ಚಳವಳಿಗಳ ಉಗಮದ ದೃಷ್ಟಿಯಿಂದ ಅಲ್ಲಲ್ಲಿ ‘ದಲಿತ’ ಪದ ಕೂಡ ಬಳಕೆಗೆ ಬಂದಿತು. ಬಾಬಾಸಾಹೇಬ್ ಅಂಬೇಡ್ಕರರ ನಿಧನದ ನಂತರ ಬಳಕೆಗೆ ಬಂದ ಅದು ವಿಶೇಷವಾಗಿ ಮಹಾರಾಷ್ಟ್ರದಲ್ಲಿ ದಲಿತ ಪ್ಯಾಂಥರ್ಸ್‌ ಮೂಲಕ ದೇಶದ್ಯಾಂತ ಚಾಲ್ತಿಗೆ ಬಂದಿತು. ಈಗಲೂ ವ್ಯಾಪಕವಾಗಿ ಅದೇ ಹೆಸರಿನಲ್ಲಿ ಚಳವಳಿಗಳು ನಡೆದಿವೆ. ಆದರೆ ‘ದಲಿತ’ ಎಂದರೆ ದಮನಿತ, ತುಳಿತಕ್ಕೊಳಗಾದವರು ಎಂಬ ಅರ್ಥ ಬರುವುದರಿಂದ ದಲಿತ ಪದಕ್ಕೂ ಡಿಪ್ರೆಸ್ಡ್ ಕ್ಲಾಸಸ್ ಪದಕ್ಕೆ ಒದಗಿದ ಗತಿಯೇ ಬರುವ ಸಂಭವವಿದೆ. ಈಚಿನ ದಿನಗಳಲ್ಲಿ ಬೌದ್ಧಧರ್ಮದೆಡೆ ಸಂಬಂಧಿತ ಮಾಜಿ ಅಸ್ಪಶ್ಯ ಸಮುದಾಯಗಳು ವ್ಯಾಪಕವಾಗಿ ಚಲಿಸುತ್ತಿರುವುದು ಕೂಡ ‘ದಲಿತ’ ಪದ ಸೈಡ್‌ಲೈನ್‌ಗೆ ಸರಿಯಲು ಮತ್ತೊಂದು ಕಾರಣವಾಗಿದೆ. ಈ ನಡುವೆ ಕೆಲವು ರಾಜಕೀಯ ಪಕ್ಷಗಳ ಕಾರಣಕ್ಕೆ ‘ಬಹುಜನ’ ಪದ ಬಳಕೆ ಅಲ್ಲಲ್ಲಿ ಅಸ್ತಿತ್ವಕ್ಕೆ ಬರುತ್ತಿದೆ.

ಹಾಗಿದ್ದರೆ ಪರಿಶಿಷ್ಟ ಜಾತಿಗಳು ಎಂಬ ಈ ಪರಿಕಲ್ಪನೆಗೆ ಜಾತಿವಾದಿಗಳು ಯಾವ ಅಪಾಯವನ್ನು ಮಾಡುತ್ತಿಲ್ಲವೆ ಎನ್ನುವುದಾದರೆ, ಯಾವ ಅಸ್ಪಶ್ಯತೆ ಕಾರಣಕ್ಕೆ ಪರಿಶಿಷ್ಟ ಜಾತಿಗಳು ಎಂಬ ಪದ ಬಂತೋ ಅದನ್ನೇ ಬುಡಮೇಲುಗೊಳಿಸುವ ನಿಟ್ಟಿನಲ್ಲಿ ಆ ಪಟ್ಟಿಗೆ ಸ್ಪಶ್ಯ ಜಾತಿಗಳನ್ನು ಸೇರಿಸಿ ಪರಿಶಿಷ್ಟ ಜಾತಿಗಳು ಎಂಬ ಆ ಪದದ ಉದ್ದೇಶವನ್ನೇ ಹಾಳುಮಾಡಲಾಗುತ್ತಿದೆ, ವಿಶೇಷವಾಗಿ ಮೀಸಲಾತಿ ನೀತಿಯನ್ನು ಅಸ್ಥಿರಗೊಳಿಸುವ ನಿಟ್ಟಿನಲ್ಲಿ.

ಒಟ್ಟಾರೆ ‘ಪರಿಶಿಷ್ಟ ಜಾತಿಗಳು’ ಅಥವಾ ‘ಎಸ್‌ಸಿ’ಗಳು ಎಂಬ ಈ ಪದ ಸಾಂವಿಧಾನಿಕವಾಗಿ ಬಾಬಾಸಾಹೇಬ್ ಅಂಬೇಡ್ಕರ್‌ರವರು ಸಂಶೋಧಿಸಿದ ಪದ. ಆ ಪದವನ್ನು 1935ರಲ್ಲಿ ಭಾರತ ಸರಕಾರದ ಕಾಯ್ದೆಯಲ್ಲಿ ಸೇರಿಸಿದ ನಂತರ ಡಾ.ಅಂಬೇಡ್ಕರರು ‘ಪರಿಶಿಷ್ಟ ಜಾತಿಗಳ ಒಕ್ಕೂಟ’ (ಷೆಡ್ಯೂಲ್ಡ್ ಕಾಸ್ಟ್ ಫೆಡರೇಷನ್) ಎಂಬ ರಾಜಕೀಯ ಪಕ್ಷವನ್ನೇ ಸ್ಥಾಪಿಸಿದರು! ಈ ನಿಟ್ಟಿನಲ್ಲಿ ಪರಿಶಿಷ್ಟ ಜಾತಿಗಳು ಈ ಪದದ ಇತಿಹಾಸ ತುಂಬಾ ವಿಶಿಷ್ಟವಾಗಿದೆ. ಜಾತ್ಯತೀತ, ಧರ್ಮಾತೀತ ಹಿನ್ನೆಲೆಯಲ್ಲಿ ಸಂಶೋಧಿಸಲ್ಪಟ್ಟ ಆ ಪದ ಸ್ಪಷ್ಟವಾಗಿ ಸಮಾನತೆಯ ಆಶಯ ಹೊಂದಿತ್ತು.

Tags

Scheduled Caste
share
ಕಾನಿಷ್ಕ ಹೊ.ಬ. ಮೈಸೂರು
ಕಾನಿಷ್ಕ ಹೊ.ಬ. ಮೈಸೂರು
Next Story
X