Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಗುಣಾತ್ಮಕ ಶಿಕ್ಷಣಕ್ಕೆ ಕೆಪಿಎಸ್...

ಗುಣಾತ್ಮಕ ಶಿಕ್ಷಣಕ್ಕೆ ಕೆಪಿಎಸ್ ಎನ್ನುತ್ತಿರುವ ಹಿನ್ನೆಲೆಯಲ್ಲಿ, ಶಾಲಾ ಶಿಕ್ಷಣದ ಪುನರ್ರಚನೆ ಹೇಗೆ?

ಡಾ. ನಿರಂಜನಾರಾಧ್ಯ ವಿ.ಪಿ.ಡಾ. ನಿರಂಜನಾರಾಧ್ಯ ವಿ.ಪಿ.13 Dec 2025 10:16 AM IST
share
ಗುಣಾತ್ಮಕ ಶಿಕ್ಷಣಕ್ಕೆ ಕೆಪಿಎಸ್ ಎನ್ನುತ್ತಿರುವ ಹಿನ್ನೆಲೆಯಲ್ಲಿ, ಶಾಲಾ ಶಿಕ್ಷಣದ ಪುನರ್ರಚನೆ ಹೇಗೆ?
ಒಂದು ಅವಲೋಕನ

ಭಾಗ - 3

ಮೂಲ ಸೌಕರ್ಯಕ್ಕೆ ಸಂಬಂಧಿಸಿ ದಂತೆ, ಸರಕಾರಿ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರು, ಬಳಕೆಯುಕ್ತ ಶೌಚಾಲಯಗಳು, ಆಟದ ಮೈದಾನ, ಪ್ರಯೋಗಾಲಯ, ಗ್ರಂಥಾಲಯ, ಊಟದ ಕೋಣೆ ಸಹಿತ ಅಡುಗೆ ಕೊಠಡಿ ಇತ್ಯಾದಿ ಇಲ್ಲವೆಂಬುದು ನಾವು ಕಂಡ ಸತ್ಯ.

ಕೊನೆಯದಾಗಿ, ಇಲಾಖಾ ಮೇಲ್ವಿಚಾರಣಾ ವ್ಯವಸ್ಥೆಯಂತೂ ಗೊಂದಲಮಯವಾಗಿದೆ. ಸಿಆರ್‌ಪಿ, ಬಿಆರ್‌ಪಿ, ಬಿಆರ್‌ಸಿ, ಬಿಇಒ, ಡಿಡಿಪಿಐ (ಆಡಳಿತ) ಮತ್ತು ಡಿಡಿಪಿಐ (ಅಭಿವೃದ್ಧಿ) ಹಂತದ ಅಧಿಕಾರಿಗಳ ಕಾರ್ಯವ್ಯಾಪ್ತಿಯನ್ನು ನಿಖರವಾಗಿ ಗುರುತಿಸಿ ಲಿಖಿತವಾಗಿ ತಿಳಿಸಿಲ್ಲ. ಶಾಲೆಗೆ ಭೇಟಿ ನೀಡಿದಾಗ ಯಾವ ವಿಷಯದ ಕಡೆಗೆ ಯಾವ ಹಂತದ ಅಧಿಕಾರಿ ಎಷ್ಟು ಗಮನಹರಿಸಬೇಕೆಂಬುದು ತಿಳಿಯದೆ ಒಬ್ಬರು ಮಾಡುವ ಕೆಲಸವನ್ನೇ ಮತ್ತೊಬ್ಬರು ಮಾಡುವುದು, ಏನು ಮಾಡಬೇಕೆಂಬುದು ತಿಳಿಯದೆ ಅಧಿಕಾರ-ಜವಾಬ್ದಾರಿಯ ವ್ಯಾಪ್ತಿ ಮೀರಿ ವರ್ತಿಸುವುದು ಮತ್ತು ಈ ಮೂಲಕ ಶಿಕ್ಷಕರನ್ನು ಪ್ರೇರೇಪಿಸುವ ಬದಲು ಅವರ ನೈತಿಕತೆಯನ್ನು ಕುಗ್ಗಿಸಿ ವೃತ್ತಿಪರ ದಕ್ಷತೆಗೆ ಧಕ್ಕೆ ತಂದ ಸಂದರ್ಭಗಳೇ ಹೆಚ್ಚು.

ಒಟ್ಟಾರೆ, ಕನಿಷ್ಠ ತರಗತಿಗೊಬ್ಬ-ವಿಷಯಕ್ಕೊಬ್ಬ ಶಿಕ್ಷಕರಿಲ್ಲದಿರುವುದು, ತರಗತಿಗೊಂದು ಕೊಠಡಿಯಿಲ್ಲದಿರುವುದು, ವಿವಿಧ ರೀತಿಯ ಬಹುವರ್ಗದ ಕಲಿಕಾ ಯೋಜನೆ, ಮುಂದಾಲೋಚನೆಯೇ ಇಲ್ಲದೆ ಪರಿಮಾಣಾತ್ಮಕವಾಗಿ ಶಾಲೆಗಳ ಸಂಖ್ಯೆ ಹೆಚ್ಚಳ, ಎಲ್ಲಕ್ಕಿಂತ ಮಿಗಿಲಾಗಿ ಸರಕಾರಿ ಶಾಲೆಗಳ ಪಕ್ಕದಲ್ಲಿಯೇ ಖಾಸಗಿ ಶಾಲೆಗಳಿಗೆ ಅನುಮತಿ ನೀಡುವ ಸರಕಾರದ ನೀತಿ ಇತ್ಯಾದಿ ಸರಕಾರಿ ಶಾಲೆಗಳನ್ನು ಅತ್ಯಂತ ಶೋಚನೀಯ ಪರಿಸ್ಥಿತಿಗೆ ತಳ್ಳಿವೆ. ಮಕ್ಕಳ ದಾಖಲಾತಿ ಗಣನೀಯವಾಗಿ ಇಳಿಮುಖವಾಗಲು ಕಾರಣವಾಗಿದೆ. ಮತ್ತೊಂದೆಡೆ, ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣ ಮತ್ತು ಶಿಕ್ಷಣವನ್ನು ಮಾರಾಟದ ಸರಕನ್ನಾಗಿಸುವ ಕೆಲಸ ಅತಿ ವೇಗದಿಂದ ಸಾಗುತ್ತಿದೆ.

ಇದಕ್ಕೆ ಬದಲಾಗಿ, ಈಗಿನ ಕಿರಿಯ ಪ್ರಾಥಮಿಕ ಹಂತವು 1,2,3 ಮತ್ತು 4ನೇ ತರಗತಿಗಳನ್ನು ಮಾತ್ರ ಒಳಗೊಂಡು, ಈಗಿನ ವ್ಯವಸ್ಥೆಯಲ್ಲಿರುವ 5ನೇ ತರಗತಿಯನ್ನು ಹಿರಿಯ ಪ್ರಾಥಮಿಕ ಶಾಲೆಗೆ ಸೇರಿಸಲಾಗುತ್ತದೆ. 1,2,3 ಮತ್ತು 4ನೇ ತರಗತಿಗಳು ಪ್ರಾಥಮಿಕ ಶಿಕ್ಷಣದ ಭಾಗವಾಗಿ ಮುಂದುವರಿಯುತ್ತವೆ. ಇಲ್ಲಿ ವಿಷಯಕ್ಕೊಬ್ಬ ಶಿಕ್ಷಕರಂತೆ ಇಬ್ಬರು ಭಾಷಾ ಶಿಕ್ಷಕರು (ಒಬ್ಬರು ಆಂಗ್ಲ ಭಾಷೆ ಮತ್ತೊಬ್ಬರು ಮಾತೃ ಭಾಷೆ), ಪರಿಸರ ಅಧ್ಯಯನಕ್ಕಾಗಿ ಒಬ್ಬರು ಮತ್ತು ಗಣಿತಕ್ಕಾಗಿ ಒಬ್ಬರು ಒಟ್ಟು ಕನಿಷ್ಠ 4 ಜನ ಶಿಕ್ಷಕರಿರಬೇಕು. ಜೊತೆಗೆ ಪೂರ್ವ-ಪ್ರಾಥಮಿಕ ಹಾಗೂ ಪ್ರಾಥಮಿಕ ಸೇರಿದಂತೆ ಒಬ್ಬರು ಪ್ರಾಂಶುಪಾಲರು ಅಥವಾ ಮುಖ್ಯ ಶಿಕ್ಷಕರು ಈ ಹಂತದ ಪೂರ್ಣ ಜವಾಬ್ದಾರಿಯನ್ನು ನಿರ್ವಹಿಸಬೇಕು. ಬೋಧಕೇತರ ಮತ್ತು ಕಚೇರಿ ಕೆಲಸಗಳಿಗೆ ಓರ್ವ ‘ಎಸ್‌ಡಿಸಿ’ ಮತ್ತು ಶಾಲಾ ಸ್ವಚ್ಛತೆಗಾಗಿ ಓರ್ವ ‘ಡಿ’ ದರ್ಜೆ ನೌಕರ ನೇಮಕಾತಿಯಾಗಬೇಕು.

ಪೂರ್ವ-ಪ್ರಾಥಮಿಕ ಹಂತ ಪ್ರಾಥಮಿಕ ಶಾಲಾ ವ್ಯಾಪ್ತಿಗೆ ಒಳಪಡುವುದರಿಂದ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ. ಜೊತೆಗೆ ಸುಸಜ್ಜಿತ ಭೌತಿಕ ವ್ಯವಸ್ಥೆಯನ್ನು ಕಲ್ಪಿಸಬೇಕು. ಇದಕ್ಕಾಗಿ ಈ ಹಂತದಲ್ಲಿ ಕನಿಷ್ಠ ಒಂದು ಎಕರೆ ಭೂಮಿಯಿದ್ದು, ಕನಿಷ್ಠ 7 ತರಗತಿ ಕೊಠಡಿಗಳು; ಮುಖ್ಯ ಶಿಕ್ಷಕರ ಕೊಠಡಿ; ಸಿಬ್ಬಂದಿ ಕೊಠಡಿ; ಮಕ್ಕಳ ವಿಶ್ರಾಂತಿ ಕೋಣೆ; ಊಟದ ಕೋಣೆ ಸಹಿತ ಅಡುಗೆ ಕೋಣೆ; ಶೌಚಾಲಯ; ಶುದ್ಧ ಕುಡಿಯುವ ನೀರು; ಗ್ರಂಥಾಲಯ; ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾಂಗಣ; ಕಾಂಪೌಂಡ್ ಗೋಡೆ; ಆಟ-ಪೀಠೋಪಕರಣಗಳು; ಬಾಲ ಉದ್ಯಾನ ಸಾಮಗ್ರಿಗಳು; ವಿದ್ಯುಚ್ಛಕ್ತಿ ಒಳಗೊಂಡಂತೆ ಉಳಿದ ಎಲ್ಲಾ ಭೌತಿಕ ಸೌಲಭ್ಯಗಳನ್ನು ಹೊಂದಿರಬೇಕು. ಈ ಎಲ್ಲಾ ಸೌಲಭ್ಯಗಳು ತಮ್ಮ ನೆರೆಹೊರೆಯ ಸರಕಾರಿ ಶಾಲೆಯಲ್ಲಿಯೇ ದೊರೆತಾಗ ತಂದೆ -ತಾಯಿಗಳಿಗೆ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವ ಅನಿವಾರ್ಯತೆ ಉದ್ಭವಿಸುವುದಿಲ್ಲ. ಪರಿಣಾಮ ಶಿಕ್ಷಣದ ಖಾಸಗೀಕರಣ ಮತ್ತು ವ್ಯಾಪಾರೀಕರಣವನ್ನು ಹತ್ತಿಕ್ಕಿ ಸರಕಾರಿ ಶಾಲೆಗಳನ್ನು ಮುಚ್ಚುವ/ವಿಲೀನಗೊಳಿಸುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಈ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿರುವುದರಿಂದ ವಿಶೇಷ ಅಗತ್ಯತೆಯುಳ್ಳ ಮಕ್ಕಳನ್ನು 4ನೇ ವರ್ಷದಿಂದಲೇ ಶಾಲಾ ವ್ಯಾಪ್ತಿಗೆ ಒಳಪಡಿಸಿ ಪೂರ್ವ-ಪ್ರಾಥಮಿಕ ಶಿಕ್ಷಣದ ಹಂತದಿಂದಲೇ ಮುಖ್ಯವಾಹಿನಿಗೆ ಸಮನ್ವಯಗೊಳಿಸಬಹುದಾದ ಕೆಲಸವನ್ನು ಯಶಸ್ವಿಯಾಗಿ ಸಾಧಿಸಬಹುದಾಗಿದೆ. ಪೂರ್ವ ಪ್ರಾಥಮಿಕ ಹಂತವನ್ನು ಕಿರಿಯ ಪ್ರಾಥಮಿಕ ಶಾಲೆಗಳೊಂದಿಗೆ ವಿಲೀನಗೊಳಿಸುವುದರಿಂದ ಉತ್ತಮ ರೀತಿಯ ಕಲಿಕಾ ಪರಿಸರ ನಿರ್ಮಾಣಗೊಂಡು ಪರಸ್ಪರ ಸಹ ಸಂಬಂಧ ಶಿಕ್ಷಣ ಸಾಧ್ಯವಾಗಿ ತಾರತಮ್ಯವಿಲ್ಲದ ಗುಣಾತ್ಮಕ ಕಲಿಕೆ ಸಾಧ್ಯವಾಗುತ್ತದೆ. ಈ ಬುನಾದಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ-ಪ್ರಾಥಮಿಕದಿಂದ 4ನೇ ತರಗತಿ ಶಿಕ್ಷಣ ಮುಗಿಸಿದ ಮಕ್ಕಳು, ಉನ್ನತ ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ ಗ್ರಾಮ ಪಂಚಾಯತ್/ ವಾರ್ಡ್ ಪಬ್ಲಿಕ್ ಶಾಲೆಗೆ ದಾಖಲಾಗುತ್ತಾರೆ. ಅದರ ವಿವರಗಳನ್ನು ಮುಂದೆ ವಿವರಿಸಲಾಗಿದೆ.

ಸಮ ಸಮಾಜಕ್ಕಾಗಿ ಸಮಾನ ಗ್ರಾಮ ಪಂಚಾಯತ್ ಸಾರ್ವಜನಿಕ ಶಾಲೆ

ಈಗಿನ ವ್ಯವಸ್ಥೆಯಲ್ಲಿ 1ರಿಂದ 7ನೇ ತರಗತಿ ಮತ್ತು ಉನ್ನತೀಕರಿಸಿ 8ನೇ ತರಗತಿ ಹೊಂದಿರುವ ಶಾಲೆಗಳನ್ನು ‘ಹಿರಿಯ ಪ್ರಾಥಮಿಕ ಶಾಲೆ’ ಎಂದು ಕರೆಯಲಾಗಿದೆ. ಆದರೆ ಈ ಶಾಲೆಗಳ ಪರಿಸ್ಥಿತಿ ಕಿರಿಯ ಪ್ರಾಥಮಿಕ ಶಾಲೆಗಳಿಗಿಂತ ಏನೂ ಭಿನ್ನವಾಗಿಲ್ಲ. ಬದಲು ಇನ್ನಷ್ಟು ಸಮಸ್ಯೆಗಳಿಂದಾಗಿ ಮಕ್ಕಳು ಗುಣಾತ್ಮಕ ಹಾಗೂ ಸಮಾನ ಶಾಲಾ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ಒಂದರಿಂದ 7ನೇ ತರಗತಿಯವರೆಗಿನ ಶಾಲೆಗಳಲ್ಲಿ 1ರಿಂದ 4ನೇ ತರಗತಿಗಳನ್ನು ಕಿರಿಯ ಮತ್ತು 5 ರಿಂದ 7ನೇ ತರಗತಿಗಳನ್ನು ಹಿರಿಯ ಪ್ರಾಥಮಿಕ ಶಾಲೆಗಳೆಂದು ವಿಭಾಗಿಸಲಾಗಿದೆ. ಈ ಹಿಂದೆ ಇದ್ದ ಫೀಡರ್ ಶಾಲೆಯ ನೀತಿಯ ಬದಲು ಕಿರಿಯ ಪ್ರಾಥಮಿಕ ಶಾಲೆಗಳನ್ನು ಉನ್ನತೀಕರಿಸುತ್ತಾ ಹಿರಿಯ ಪ್ರಾಥಮಿಕ ಶಾಲೆಗಳನ್ನಾಗಿ ಮಾರ್ಪಡಿಸಲಾಯಿತು. ಪರಿಣಾಮ ನಾಲ್ಕೈದು ಕಿರಿಯ ಪ್ರಾಥಮಿಕ ಫೀಡರ್ ಶಾಲೆಗಳಿಂದ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಬರುತ್ತಿದ್ದ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿ ಕ್ರಮೇಣ ಕಲಿಸುವ ಶಿಕ್ಷಕರ ಸಂಖ್ಯೆಯೂ ಇಳಿಮುಖವಾಯಿತು. ಹಲವು ಶಾಲೆಗಳಲ್ಲಿ 1ರಿಂದ 7ನೇ ತರಗತಿಯವರೆಗೆ 3 ಅಥವಾ 4 ಜನ ಶಿಕ್ಷಕರು ಪಾಠ ಕಲಿಸುತ್ತಿದ್ದು ಸುಮಾರು 27ರಿಂದ 30 ವಿಷಯಗಳನ್ನು ಬೋಧಿಸುತ್ತಿದ್ದಾರೆ.

ಶಾಲೆಯಲ್ಲಿರುವ ಮೂರು/ನಾಲ್ಕು ಶಿಕ್ಷಕರ ಪೈಕಿ ಮುಖ್ಯ ಶಿಕ್ಷಕರು ಕಾಮಗಾರಿ, ಆಡಳಿತ, ದುರಸ್ತಿ ಇತ್ಯಾದಿ ಹತ್ತು ಹಲವು ಜವಾಬ್ದಾರಿ ನಿರ್ವಹಿಸಿದರೆ, ಉಳಿದ ಶಿಕ್ಷಕರು ತಲಾ 10ಕ್ಕಿಂತ ಹೆಚ್ಚು ವಿಷಯಗಳನ್ನು ಬೋಧಿಸುವುದರ ಜೊತೆಗೆ ಎಲ್ಲಾ ಬಗೆಯ ಜನಗಣತಿ, ಜಾನುವಾರು ಗಣತಿ, ಚುನಾವಣಾ ಕೆಲಸ ಇತ್ಯಾದಿಗಳನ್ನು ನಿರ್ವಹಿಸಬೇಕು. ಬೋಧನೇತರ ಕೆಲಸ ಅತಿ ಹೊರೆಯಿಂದಾಗಿ ಶಿಕ್ಷಕರು ಅರ್ಥಪೂರ್ಣವಾಗಿ ಮತ್ತು ಪರಿಣಾಮಕಾರಿಯಾಗಿ ಕಲಿಸಲು ಸಾಧ್ಯವಾಗುತ್ತಿಲ್ಲ. ಪಠ್ಯ ಚಟುವಟಿಕೆಯೇ ಸಾಧ್ಯವಾಗದಿದ್ದಾಗ ಸಹಪಠ್ಯ ಚಟುವಟಿಕೆಗಳ ವಿಷಯಗಳನ್ನು ಕಲಿಸುವವರಿಲ್ಲ ಮತ್ತು ಅದಕ್ಕೆ ನಿಗದಿತ ಸಮಯವೂ ಇಲ್ಲ. ಕೆಲವೊಂದು ಹೋಬಳಿ, ತಾಲೂಕು ಮಟ್ಟದಲ್ಲಿರುವ ಶಾಲೆಗಳನ್ನು ಹೊರತುಪಡಿಸಿದರೆ, ಉಳಿದ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ, ಸಂಗೀತ, ಚಿತ್ರಕಲೆ, ತೋಟಗಾರಿಕಾ ವಿಷಯಗಳನ್ನು ಕಲಿಸುವ ಶಿಕ್ಷಕರುಗಳಿಲ್ಲ.

ಮೂಲ ಸೌಕರ್ಯಗಳಿಗೆ ಸಂಬಂಧಿಸಿದಂತೆ, ತರಗತಿಗೊಂದು ಕೊಠಡಿ, ಪೀಠೋಪಕರಣ, ಪಾಠೋಪಕರಣ, ಶುದ್ಧ ಕುಡಿಯುವ ನೀರು, ಬಳಕೆಯುಕ್ತ ಶೌಚಾಲಯ, ಉತ್ತಮ ಗ್ರಂಥಾಲಯ, ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ, ಕ್ರೀಡಾ ಸಾಮಗ್ರಿ, ಕಂಪ್ಯೂಟರ್ ಪ್ರಯೋಗಾಲಯ, ಸುಸಜ್ಜಿತ ಪ್ರಯೋಗ ಶಾಲೆ, ರಂಗಮಂದಿರ ಇತ್ಯಾದಿ ವ್ಯವಸ್ಥೆ ಇಲ್ಲದ ಕಾರಣ ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡಲು ಆಗುತ್ತಿಲ್ಲ. ಶಿಕ್ಷಣ ಇಲಾಖೆಯು ತೋರಿಸುವ ದಾಖಲೆಗಳನ್ನು ಇಟ್ಟುಕೊಂಡು ಪ್ರದೇಶವಾರು ಪರಿಶೀಲಿಸಿದಾಗ ಶಾಲೆಗಳಲ್ಲಿ ಶೌಚಾಲಯಗಳಿದ್ದೂ ಬಳಕೆಗೆ ಉಪಯೋಗಿಸುತ್ತಿಲ್ಲ, ಗ್ರಂಥಾಲಯಗಳಿದ್ದೂ ಉಪಯೋಗಕ್ಕೆ ಬಾರದ ಗ್ರಂಥಗಳು, ಗಣಕಯಂತ್ರಗಳಿದ್ದೂ ಬಳಸಲು ಯೋಗ್ಯವಾಗಿಲ್ಲ ಹಾಗೂ ಬಳಸುವ ತಜ್ಞ ಶಿಕ್ಷಕರಿಲ್ಲ ಮತ್ತು ವಿದ್ಯುತ್ ಕೊರತೆ ಇತ್ಯಾದಿ ಸಮಸ್ಯೆಗಳಿಂದ ಉದ್ದೇಶವೇ ವಿಫಲವಾಗಿರುವುದು ಕಂಡುಬರುತ್ತಿದೆ.

ಇದು ಸಾಲದೆಂಬಂತೆ ರಾಜ್ಯದಲ್ಲಿ ವಿವಿಧ ಪಠ್ಯಕ್ರಮಗಳಿಗೆ ನೋಂದಾಯಿಸಿಕೊಂಡಿರುವ ಶ್ರೇಣೀಕೃತ ಶಾಲಾ ವ್ಯವಸ್ಥೆ ಜಾರಿಯಲ್ಲಿದೆ. ಅವುಗಳೆಂದರೆ, ಅಂತರ್‌ರಾಷ್ಟ್ರೀಯ ಶಾಲೆಗಳು; ಐಸಿಎಸ್‌ಇ; ಸಿಬಿಎಸ್‌ಇ; ಪ್ರತಿಷ್ಠಿತ ಖಾಸಗಿ ಅನುದಾನರಹಿತ ಆಂಗ್ಲ ಮಾಧ್ಯಮ ಶಾಲೆಗಳು; ಸಣ್ಣ-ಪುಟ್ಟ ಖಾಸಗಿ ಅನುದಾನರಹಿತ ಆಂಗ್ಲ ಮಾಧ್ಯಮ ಶಾಲೆಗಳು; ಅನುದಾನಿತ ಶಾಲೆಗಳು; ಸ್ಥಳೀಯ ಸರಕಾರದ ಶಾಲೆಗಳು; ಸರಕಾರಿ ಶಾಲೆಗಳು ಇತ್ಯಾದಿ. ಹಲವು ಬಗೆಯ ಖಾಸಗಿ ಅನುದಾನರಹಿತ ವ್ಯಾಪಾರಿ ಶಾಲೆಗಳೊಂದಿಗೆ ಸರಕಾರಿ ಶಾಲೆಗಳು ಅನಾರೊಗ್ಯ ಮತ್ತು ಅನಗತ್ಯ ನಿರರ್ಥಕ ಪೈಪೋಟಿ ಎದುರಿಸಬೇಕಾಗಿದೆ. ಮಾರುಕಟ್ಟೆಯ ವಿಸ್ತರಣೆಗೆ ವಿಪುಲ ಅವಕಾಶ ಮತ್ತು ಗರಿಷ್ಠ ಲಾಭವೇ ಗುಣಮಟ್ಟದ ಶಿಕ್ಷಣ ಎಂದು ಅರ್ಥೈಸಿ ಮಕ್ಕಳನ್ನು ಅನಾರೋಗ್ಯಕರ ಅಂಕಗಳ ಸ್ಪರ್ಧೆಗೆ ಈಡುಮಾಡುತ್ತವೆೆ.

ಈ ರೀತಿಯ ಶಿಕ್ಷಣ ವ್ಯವಸ್ಥೆಯಿಂದ ಆರ್‌ಟಿಇ ಕಾಯ್ದೆ ಸೆಕ್ಷನ್ 29ರಲ್ಲಿ ಹೇಳುವ ಸಂವಿಧಾನದ ಮೌಲ್ಯಗಳಿಗೆ ಅನುಗುಣವಾದ; ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಪೂರಕವಾದ; ಮಕ್ಕಳ ಜ್ಞಾನ, ಸಾಮರ್ಥ್ಯ ಮತ್ತು ಪ್ರತಿಭೆಯ ವರ್ಧನೆಗೆ ಸಹಾಯವಾಗುವ; ಪೂರ್ಣ ಪ್ರಮಾಣದಲ್ಲಿ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಗಳ ವಿಕಸನಗೊಳಿಸುವ; ಶಿಶು ಸ್ನೇಹಿ ಮತ್ತು ಶಿಶು ಕೇಂದ್ರೀಕೃತ ವಾತಾವರಣದಲ್ಲಿ, ಚಟುವಟಿಕೆಗಳು ಅನ್ವೇಷಣೆ ಮತ್ತು ಶೋಧನೆ ಮೂಲಕ ಸಾಧ್ಯವಾಗಬಹುದಾದಷ್ಟು ಮಟ್ಟಿಗೆ ಮಕ್ಕಳ ಮಾತೃಭಾಷೆಯಲ್ಲಿ ಭಯ, ಆಘಾತ ಹಾಗೂ ಆತಂಕವಿಲ್ಲದೆ ಮತ್ತು ಮುಕ್ತವಾಗಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವುದಕ್ಕೆ ನೆರವಾಗಬಲ್ಲ ಗುಣಮಟ್ಟದ ಶಿಕ್ಷಣವನ್ನು ಹೊಂದಲು ಸಾಧ್ಯವೇ? ಇಂತಹ ತಾರತಮ್ಯ ವ್ಯವಸ್ಥೆಯಲ್ಲಿ 7 ಅಥವಾ 8ನೇ ತರಗತಿಯವರೆಗೆ ಎಲಿಮೆಂಟರಿ ಶಿಕ್ಷಣವನ್ನು ಪೂರೈಸಿ ಪ್ರೌಢಶಿಕ್ಷಣ ಪಡೆಯಲು ಮಗು ಹೇಗೆ ತಾನೆ ಸಿದ್ಧವಾಗುತ್ತದೆ!

ಈ ವ್ಯವಸ್ಥೆಯ ಬದಲು, ಈಗಿರುವ ಮಾಧ್ಯಮಿಕ, ಪ್ರೌಢ ಹಾಗೂ ಪದವಿ-ಪೂರ್ವ ಶಿಕ್ಷಣವನ್ನು ಸಮ್ಮಿಲನಗೊಳಿಸಿ 5 ರಿಂದ 12ನೇ ತರಗತಿವರೆಗಿನ ಶಿಕ್ಷಣವನ್ನು ನೆರೆಹೊರೆಯ ತತ್ವದ ಆಧಾರದಲ್ಲಿ ಸಮಾನ ಶಾಲೆಯ ಮೂಲಕ ಒದಗಿಸಲು ಆಯಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮ ಪಂಚಾಯತ್ ಕೇಂದ್ರದಲ್ಲಿ ಹಾಗೂ ಪಟ್ಟಣ/ನಗರ ಪ್ರದೇಶಗಳ ವ್ಯಾಪ್ತಿಯ ವಾರ್ಡ್ ಮಟ್ಟದಲ್ಲಿ ಸಮಾನ ಸಾರ್ವಜನಿಕ ಶಾಲೆ ಸ್ಥಾಪಿಸಬೇಕು. ಇವುಗಳನ್ನು ಗ್ರಾಮ ಪಂಚಾಯತ್/ವಾರ್ಡ್ ಮಟ್ಟದ ಸಾರ್ವಜನಿಕ/ಪಬ್ಲಿಕ್ ಶಾಲೆಗಳೆಂದು ಕರೆಯಬೇಕು. ಅದೇ ಗ್ರಾಮದ ಮತ್ತು ವಾರ್ಡ್‌ನ ಮಕ್ಕಳು ಶಾಲೆಗೆ ಬರುವುದರಿಂದ ಈ ಶಾಲೆಯು ಪೂರ್ವ ಪ್ರಾಥಮಿಕದಿಂದ 12ನೇ ತರಗತಿಯನ್ನು ಒಳಗೊಂಡಿರುತ್ತವೆ.

ಈ ಶಾಲೆಗಳು ಪೂರ್ವ ಪ್ರಾಥಮಿಕದಿಂದ 12ನೇ ತರಗತಿಯ ವರೆಗಿನ ತರಗತಿಗಳನ್ನು ಒಳಗೊಂಡಿದ್ದು ಯಾವುದೇ ರೀತಿಯ ತಾರತಮ್ಯ ಭೇದ-ಭಾವಗಳಿಲ್ಲದೆಯೇ ಸಮಾನ ಶಾಲಾ ಶಿಕ್ಷಣವನ್ನು ನೀಡುವ ಸುಸಜ್ಜಿತ ಭೌತಿಕ ವ್ಯವಸ್ಥೆಯನ್ನು ಹೊಂದಿರಬೇಕು. ಈ ಹೊಸ ವ್ಯವಸ್ಥೆಯಿಂದ, ಪ್ರಾಥಮಿಕ ಶಿಕ್ಷಣದ ನಂತರ ಪ್ರೌಢ ಮತ್ತು ಕಾಲೇಜು ಶಿಕ್ಷಣವನ್ನು ಪಡೆಯಲು ಅಗತ್ಯ ಸೌಲಭ್ಯಗಳಿಲ್ಲದೆ ಶಿಕ್ಷಣದಿಂದ ವಂಚಿತರಾಗುತ್ತಿರುವ ಗ್ರಾಮೀಣ ಪ್ರದೇಶದಲ್ಲಿನ ಹೆಣ್ಣು ಮಕ್ಕಳು ತಮ್ಮ ನೆರೆಹೊರೆಯಲ್ಲಿಯೇ ಪ್ರೌಢ ಹಾಗೂ ಕಾಲೇಜು ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ಹುಟ್ಟಿನಿಂದ 18 ವರ್ಷ ವಯೋಮಾನದವರೆಗಿನ ಎಲ್ಲ ಮಕ್ಕಳು ಜಾತಿ, ಧರ್ಮ, ಲಿಂಗ, ವರ್ಣ, ಸಾಮಾಜಿಕ-ಆರ್ಥಿಕ ಸ್ಥಾನಮಾನದ ಹಂಗಿಲ್ಲದೆ ಸಮಾನ ಶಿಕ್ಷಣ ಪಡೆಯುವ ಗುರಿ ಸಾಕಾರಗೊಂಡಂತಾಗುತ್ತದೆ.

ಉದ್ದೇಶಿತ ಗ್ರಾಮ ಪಂಚಾಯತ್/ವಾರ್ಡ್ ಮಟ್ಟದ ಪಬ್ಲಿಕ್ ಶಾಲೆಯು ಪೂರ್ವ-ಪ್ರಾಥಮಿಕದಿಂದ 12ನೇ ತರಗತಿಯವರೆಗೆ ಕಲಿಸುವ ವ್ಯವಸ್ಥೆಯನ್ನು ಹೊಂದಿದ್ದು, ಎಲ್ಲರಿಗೂ ಏಕರೂಪ ಸಮಾನ ಗುಣಮಟ್ಟದ ಶಿಕ್ಷಣವನ್ನು ವೈವಿಧ್ಯಮಯ ಸಂದರ್ಭೋಚಿತ ಪಠ್ಯವಸ್ತುಗಳನ್ನು ಅಳವಡಿಸಿಕೊಂಡು ಕಲಿಸುವ ಕಲಿಕಾ ವ್ಯವಸ್ಥೆಯನ್ನು ಒಳಗೊಂಡಿರಬೇಕು. 12ನೇ ತರಗತಿಗೆ ಮಾತ್ರ ಅಂತಿಮ ಪಬ್ಲಿಕ್ ಪರೀಕ್ಷೆ ಇದ್ದು ಎಲ್ಲ ಮಕ್ಕಳು ಒಂದು ಹಂತದ ಶಿಕ್ಷಣದ ಗುರಿ ಮುಟ್ಟಲು ಸಾಧ್ಯವಾಗುತ್ತದೆ. ಜೊತೆಗೆ ಇಲ್ಲಿ ಎಲ್ಲಾ ವಿಷಯಗಳನ್ನು ಸಮಗ್ರವಾಗಿ ಬೋಧಿಸುವುದರಿಂದ ಯಾವುದೇ ವಿಷಯದ ಕಲಿಕೆಯಿಂದ ವಿದ್ಯಾರ್ಥಿಗಳು ವಂಚಿತರಾಗುವುದಿಲ್ಲ. 12ನೇ ತರಗತಿಯವರೆಗೆ ಎಲ್ಲಾ ವಿದ್ಯಾರ್ಥಿಗಳು ಸಮಗ್ರವಾಗಿ ಎಲ್ಲಾ ವಿಷಯಗಳನ್ನು ಕಲಿತು ಮುಂದಿನ ಹಂತದಲ್ಲಿ ಸ್ವತಂತ್ರವಾಗಿ ತನ್ನ ಆಸಕ್ತಿಯ ವಿಷಯವನ್ನು ಆಳವಾಗಿ ಅಧ್ಯಯನ ಮಾಡಲು ಆಯ್ಕೆ ಮಾಡಿಕೊಳ್ಳುವ ಸಾಮರ್ಥ್ಯ, ಯೋಚನಾ ಶಕ್ತಿ, ಸ್ವತಃ ತೀರ್ಮಾನಿಸುವ-ನಿರ್ಣಯಿಸುವ ಪ್ರಬುದ್ಧತೆಯನ್ನು ಬೆಳೆಸಿಕೊಳ್ಳುತ್ತಾರೆ. ಈ ಹೊಸ ಶಿಕ್ಷಣ ವ್ಯವಸ್ಥೆಯಿಂದ ಪ್ರತಿಯೊಬ್ಬ ವಿದ್ಯಾರ್ಥಿ ಎಲ್ಲಾ ವಿಷಯಗಳ ಪ್ರಾಥಮಿಕ ಜ್ಞಾನವನ್ನು ಪಡೆದು ತನಗೆ ಬೇಕೆನಿಸುವ ವಿಷಯದ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ.

ಈ ವ್ಯವಸ್ಥೆಯಲ್ಲಿ ಹುಟ್ಟಿನಿಂದ 18 ವರ್ಷದವರೆಗಿನ ಶಿಕ್ಷಣವು ಉಚಿತ ಮತ್ತು ಕಡ್ಡಾಯವಾಗಿ ವಿದ್ಯಾರ್ಥಿಯು ವಾಸಿಸುವ ನೆರೆಹೊರೆಯಲ್ಲಿಯೇ ಸಾರ್ವಜನಿಕ ಸಮಾನ ಶಾಲೆಯ ವ್ಯವಸ್ಥೆಯ ಮೂಲಕ ಉತ್ಕೃಷ್ಟ ಗುಣಮಟ್ಟದ ಸೌಲಭ್ಯಗಳೊಂದಿಗೆ ಯಾವುದೇ ರೀತಿಯ ಅನಾರೋಗ್ಯಕರ ಸ್ಪರ್ಧೆಯಿಲ್ಲದೆ, ಪರೀಕ್ಷೆಗಳ ಭಯವಿಲ್ಲದೆ ನಿರಂತರ ಮೌಲ್ಯ ಮಾಪನ ಮತ್ತು ಮಾರ್ಗದರ್ಶನದ ಮೂಲಕ ಕಲಿಕೆಯ ಹೊಸ ಸಂಸ್ಕೃತಿಯನ್ನು ಹುಟ್ಟು ಹಾಕುತ್ತದೆ. ಈ ಬುನಾದಿ ಶಿಕ್ಷಣ ಪೋಷಕರಿಗೆ ಆರ್ಥಿಕವಾಗಿ ಹೊರೆಯಾಗದೆ ಮಕ್ಕಳಿಗೂ ಸಹ ಒತ್ತಡ ಹಾಗೂ ಭಯದ ವಾತಾವರಣವನ್ನು ನಿರ್ಮಾಣ ಮಾಡದೆ ವಿದ್ಯಾರ್ಥಿಯು ತನ್ನ ಪರಿಸರದಲ್ಲಿಯೇ ಅತ್ಯಂತ ಶ್ರೇಷ್ಠ ಗುಣಾತ್ಮಕ ಶಿಕ್ಷಣವನ್ನು ಪಡೆಯುವುದರಿಂದ ನಗರ/ಪಟ್ಟಣ ಪ್ರದೇಶಗಳಿಗೆ ಅಲೆಯುವುದು ತಪ್ಪಿದಂತಾಗುತ್ತದೆ.

ಗ್ರಾಮ ಪಂಚಾಯತ್/ವಾರ್ಡ್ ಮಟ್ಟದ ಈ ಶಿಕ್ಷಣ ವ್ಯವಸ್ಥೆಯು ವಿಕಲ ಚೇತನ ಹಾಗೂ ವಿಶೇಷ ಅಗತ್ಯವುಳ್ಳ ಮಕ್ಕಳಿಗೂ ಸಹ ಕಲಿಕೆಗೆ ಪೂರಕವಾದಂತಹ ವಾತಾವರಣವನ್ನು ಕಲ್ಪಿಸುವುದರ ಮೂಲಕ ಅವರನ್ನೂ ಸಹ ಶಿಕ್ಷಣದ ಮುಖ್ಯವಾಹಿನಿ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವಂತಹ ಪ್ರಾಮಾಣಿಕ ಪ್ರಯತ್ನವಾಗಿರುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಶೋಚನೀಯ ಸ್ಥಿತಿಯಲ್ಲಿರುವ ಹಲವು ಸಾವಿರ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ಬದಲಾಗಿ ಪಂಚಾಯತ್/ವಾರ್ಡ್‌ಗೊಂದರಂತೆ ಸುಮಾರು 6,000ದಿಂದ 7,000 ಸುಸಜ್ಜಿತ (ಸಾರ್ವಜನಿಕ ಸಮಾನ ಶಾಲೆಗಳು) ಅಸ್ತಿತ್ವಕ್ಕೆ ಬಂದು ಒಂದೇ ಸೂರಿನಡಿ, ನೆರೆಹೊರೆಯಲ್ಲಿ ಬುನಾದಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಮಕ್ಕಳಿಗೆ 5ರಿಂದ 12ನೇ ತರಗತಿವರೆಗಿನ ಎಲ್ಲ ಮಕ್ಕಳಿಗೆ ಸಮಾನ ಗುಣ ಮಟ್ಟದ ಶಿಕ್ಷಣ ನೀಡುವಂತಹ ಹೊಸ ಶಿಕ್ಷಣ ವ್ಯವಸ್ಥೆಗೆ ಈ ಶಾಲೆಗಳು ಭಾಷ್ಯ ಬರೆಯುತ್ತವೆ.

share
ಡಾ. ನಿರಂಜನಾರಾಧ್ಯ ವಿ.ಪಿ.
ಡಾ. ನಿರಂಜನಾರಾಧ್ಯ ವಿ.ಪಿ.
Next Story
X