Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮಕ್ಕಳಲ್ಲ ಸೃಜನಶೀಲತೆಯನ್ನು ಬೆಳೆಸುವುದು...

ಮಕ್ಕಳಲ್ಲ ಸೃಜನಶೀಲತೆಯನ್ನು ಬೆಳೆಸುವುದು ಹೇಗೆ?

ಟಿ. ದೇವಿದಾಸ್ಟಿ. ದೇವಿದಾಸ್11 Aug 2025 4:25 PM IST
share
ಮಕ್ಕಳಲ್ಲ ಸೃಜನಶೀಲತೆಯನ್ನು ಬೆಳೆಸುವುದು ಹೇಗೆ?

ತಂದೆ ಅಥವಾ ತಾಯಿ ಸೃಜನಶೀಲರಾಗಿದ್ದರೆ ಮಕ್ಕಳೂ ಸೃಜನಶೀಲರಾಗುವ ಸಾಧ್ಯತೆ ಹೆಚ್ಚು ಎನ್ನುವ ನಂಬಿಕೆ ಅಥವಾ ರೂಢಿಯ ಮಾತಿದೆ. ಹಾಗಂತ ಹಿರಿಯರು ಸೃಜನಶೀಲರಾಗಿದ್ದರೆ ಆ ಮನೆಯಲ್ಲಿಯ ಕಿರಿಯರು ಸೃಜನಶೀಲರಾಗಿರಲೇಬೇಕು ಅಂತೇನಿಲ್ಲ. ಇದಕ್ಕೆ ಅಪವಾದಗಳು ಸಾಕಷ್ಟಿವೆ. ಅಂಬೇಡ್ಕರ್‌ರಿಗೆ ಅಣ್ಣ ತಮ್ಮಂದಿರಿದ್ದರು. ರವೀಂದ್ರನಾಥ ಠಾಗೋರರಿಗೆ ಅಣ್ಣ, ಅಕ್ಕಂದಿರಿದ್ದರು. ಮನೆಯಲ್ಲಿ ಹಿರಿಯರಿದ್ದರು. ಆದರೂ ರವೀಂದ್ರನಾಥರಷ್ಟು ಕ್ರಿಯಾಶೀಲರೂ, ಪ್ರತಿಭಾವಂತರೂ ಯಾರೂ ಇರಲಿಲ್ಲ. ಒಂದು ಸಿದ್ಧಾಂತದ ಅವಲೋಕನದ ಪ್ರಕಾರ ಸ್ವಭಾವತಃ ಪ್ರತಿಯೊಬ್ಬರೂ ಸೃಜನಶೀಲರೇ ಆಗಿರುತ್ತಾರೆ. ಆದರೆ ಸಾಮರ್ಥ್ಯದ ಪ್ರಮಾಣ ಮಾತ್ರ ಹೆಚ್ಚು ಕಡಿಮೆಯಿರುತ್ತದೆ. ಇದು ಕೂಡ ಸಹಜವಾದುದು.

ಅವಶ್ಯಕತೆಯೇ ಆವಿಷ್ಕಾರದ ತಾಯಿ ಎಂಬ ನಾಣ್ಣುಡಿಯಂತೆ ಬೇರೆ ಏನೂ ವಿಧಿ ಇಲ್ಲದಾದಾಗ ಪ್ರತಿಯೊಬ್ಬರೂ ತಮ್ಮ ಸಮಸ್ಯೆಗೆ ತಾವೇ ಉಪಾಯವನ್ನು ಕಂಡುಹಿಡಿದುಕೊಳ್ಳಬೇಕಾಗುತ್ತದೆ. ಜಪಾನ್, ಇಸ್ರೇಲ್, ಜರ್ಮನಿ, ಆಸ್ಟ್ರೇಲಿಯಾದಂಥ ಹಲವು ದೇಶಗಳಲ್ಲಿ ಕೃಷಿ ಜಮೀನುಗಳನ್ನು ನಿಭಾಯಿಸುವ ರೈತರು ಅನೇಕ ಸಾಧನ ಸಲಕರಣೆಗಳನ್ನು ಕಂಡುಹಿಡಿದುಕೊಂಡಿದ್ದಾರೆ. ಪಾಶ್ಚಾತ್ಯ ದೇಶಗಳಲ್ಲಿ ಕೈಗಾರಿಕಾ ಕ್ರಾಂತಿ ನಡೆದದ್ದಕ್ಕೆ ಇದೂ ಒಂದು ಮುಖ್ಯ ಕಾರಣ. ಅಲ್ಲಿನ ಮಾನವ ಶ್ರಮ ಕಡಿಮೆಯಾಗಿ ಹತ್ತಾರು ಜನ ನಿಭಾಯಿಸಬೇಕಾದ ಕೆಲಸವನ್ನು ಒಬ್ಬರೇ ಮಾಡಬೇಕಾಗಿ ಬಂದದ್ದು ಅವರಲ್ಲಿನ ಸೃಜನಶೀಲತೆ ಅವರನ್ನು ಅವರ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಲ್ಲಿ ಸಹಾಯ ಮಾಡಿತು. ಕೈಯಿಲ್ಲದವ ಕಾಲನ್ನೇ ಕೈಯನ್ನಾಗಿ ಬಳಸುವುದು ಕೂಡ ಬೌದ್ಧಿಕ ಸೃಜನಶೀಲತೆಯೇ ಆಗಿದೆ.

ಹಿಂದೆಲ್ಲ ಕಲಿಕೆ ಅನಿವಾರ್ಯವಾಗಿತ್ತು. ಶ್ರೇಣಿ ಮುಖ್ಯವಾಗಿರಲಿಲ್ಲ. ಇಂಗ್ಲಿಷ್ ಪಠ್ಯವನ್ನು ಕಲಿತರೂ ಅದೇ ಉಸಿರಾಗಲಿಲ್ಲ. ಮನೆಯಲ್ಲಿ ಮಾತೃಭಾಷೆಯ ಸಂವಹನ ನಡೆಯುತ್ತಿತ್ತೇ ವಿನಾ ಪೋಷಕರಲ್ಲಿ ಇಂಗ್ಲಿಷ್‌ನ ಹುಚ್ಚು ಇರಲಿಲ್ಲ. ಪಾಟಿ ಚೀಲದಲ್ಲಿ ಪುಸ್ತಕಗಳಿದ್ದವು, ಬೆನ್ನಮೇಲಿನ ಪುಸ್ತಕಗಳ ಬ್ಯಾಗ್ ಹೊರೆಯಾಗಲೇ ಇಲ್ಲ, ಮನೋಲ್ಲಾಸಕ್ಕೆ ವಿಧವಿಧದ ಪತ್ರಿಕೆಗಳಿದ್ದವು ಮೊಬೈಲ್, ಟಿ.ವಿ. ಇರಲಿಲ್ಲ. ಈಜಲು ಕೆರೆಕಟ್ಟೆ, ಹೊಳೆಗಳಿದ್ದವು ಸಮುದ್ರವಿತ್ತು, ಆದರೆ ನಿಂತನೀರಿನ ಈಜು ಕೊಳವಿರಲಿಲ್ಲ. ಓದುವುದಕ್ಕೆ ಊರಲ್ಲಿ ವಾಚನಾಲಯಗಳಿದ್ದವು ಟ್ಯಾಬ್‌ಗಳಿರಲಿಲ್ಲ. ರೆಸಾರ್ಟ್‌ಗಳು ತಲೆಯೆತ್ತಿರಲಿಲ್ಲ, ಹಸಿರು ತುಂಬಿದ ಗದ್ದೆ, ಹೊಲ, ಗುಡ್ಡಗಾಡು, ಹಳ್ಳಿಪ್ರದೇಶಗಳಿದ್ದವು. ಅಲ್ಲೆಲ್ಲ ಹೋಂ ಸ್ಟೇಗಳಿರಲಿಲ್ಲ. ಪುಸ್ತಕಗಳು ದೇಶದ ಇತಿಹಾಸ, ಸಂಸ್ಕೃತಿಯನ್ನು ಸಾರುತ್ತಿತ್ತು. ವಿರಾಮದ ಮನೋಲ್ಲಾಸಕ್ಕೆ ಪಂಚತಂತ್ರ, ಬೀರ್‌ಬಲ್ ಕಥೆಗಳು ಜೊತೆಗಿರುತ್ತಿದ್ದವು. ಆಗ ಹ್ಯಾರಿ ಪಾಟರ್ ಪರಿಚಯ ಇರಲಿಲ್ಲ. ಶಾಲೆಯ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾವಗೀತೆ, ಭಕ್ತಿಗೀತೆ, ದೇಶಭಕ್ತಿಗೀತೆ, ಜನಪದಗೀತೆ, ಛದ್ಮವೇಷ, ಚಿತ್ರಕಲೆ, ಏಕಪಾತ್ರಾಭಿನಯ ಸೇರಿದಂತೆ ಅನೇಕ ವಿಷಯಗಳಿದ್ದವು. ಆಗ ಟಿ.ವಿ. ರಿಯಾಲಿಟಿ ಶೋ ಇರಲಿಲ್ಲ. ಒಣಗಿದ ತುಂಡು ಕೋಲು ಹಿಡಿದು ಚಿನ್ನಿ ದಾಂಡು ಆಡುತ್ತಿದ್ದೆವು. ಆದ್ದರಿಂದ ಮರದ ಬ್ಯಾಟು ದೂರವೇ ಉಳಿದಿತ್ತು. ಶಾಲೆಗೆ ಹೋಗುವಾಗ ಮತ್ತು ಶಾಲೆಯಿಂದ ಬರುವಾಗ ದಾರಿ ಬದಿಯಲ್ಲಿ ಕಾಣುವ ಹಲಸು, ಗೇರು, ಮಾವು, ಪೇರಳೆ, ಜಂಭೆ ಹಣ್ಣುಗಳನ್ನು ಬಿಟ್ಟಿದ್ದೇ ಇಲ್ಲ. ಗದ್ದೆಯಲ್ಲಿನ ಶೇಂಗಾವನ್ನು ಹಸಿಹಸಿಯಾಗಿ ತಿನ್ನುತ್ತಿದ್ದೆವು. ಯಾಕೆಂದರೆ, ಪಿಜ್ಜಾ, ಬರ್ಗರ್‌ಗಳು ಇನ್ನೂ ಹುಟ್ಟಿರಲಿಲ್ಲ. ನಗರಗಳ ಬದುಕಿನ ನೆರಳು ಗಾಢವಾಗಿಲ್ಲದ ಆ ಕಾಲದಲ್ಲಿ ಸೃಜನಶೀಲತೆಯ ಹುಟ್ಟಿಗೆ ಬೇಕಾದ ಎಲ್ಲ ಅವಕಾಶಗಳೂ ನಿತ್ಯ ಬದುಕಲ್ಲೇ ಸಿಗುತ್ತಿತ್ತು. ಆದರೆ, ಈಗ ಹಾಗಿಲ್ಲ. ಎಲ್ಲವೂ ಹೆಚ್ಚು ಕಡಿಮೆ ಬದಲಾಗಿದೆ. ಬದುಕುವ ಶೈಲಿ ಬದಲಾಗಿದೆ. ಆಲೋಚನೆಗಳು ಬದಲಾಗಿವೆ. ಅಂದಿನ ಜೀವನಕ್ರಮಗಳು ಸ್ಥಿತ್ಯಂತರಗೊಂಡಿವೆ. ಶಿಕ್ಷಣದ ಕ್ರಮನೀತಿಗಳು ಬದಲಾಗಿವೆ.

ಬಾಲ್ಯ ಸಹಜವಾಗಿಯೇ ಬರುವ ಸೃಜನಾತ್ಮಕತೆಯನ್ನು ಗುರುತಿಸಿ, ಗ್ರಹಿಸಿ ಬೆಳೆಸಬೇಕಾದ ಅನಿವಾರ್ಯತೆ ಈಗ ಮನೆಯಲ್ಲೂ ಇದೆ, ಶಾಲೆಯಲ್ಲೂ ಇದೆ.

ಮಕ್ಕಳಲ್ಲಿ ಸೃಜನಾತ್ಮಕತೆಯನ್ನು ಬೆಳೆಸಲು ಅವರ ಕುತೂಹಲ, ಆಸಕ್ತಿ, ಕಲ್ಪನೆ ಮತ್ತು ಹೊಸ ವಿಚಾರಗಳ ಪ್ರಯತ್ನಕ್ಕೆ ಉತ್ತೇಜನ ನೀಡುವುದು ಬಹುಮುಖ್ಯ. ಈ ಪ್ರಕ್ರಿಯೆಯಲ್ಲಿ ಪೋಷಕರ ಮತ್ತು ಶಿಕ್ಷಕರ ಪಾತ್ರ ಬಹುಮುಖ್ಯವಾದುದು ಹಾಗೂ ಗಂಭೀರವಾದುದು.

1. ಮಕ್ಕಳಿಗೆ ಕಲ್ಪನೆಯ ಸ್ವಾತಂತ್ರ್ಯವನ್ನು ನೀಡುವುದು

ಮಕ್ಕಳಿಗೆ ಹೊಸ ವಿಚಾರಗಳನ್ನು ಅನ್ವೇಷಿಸಲು ಅವಕಾಶ ನೀಡುವುದು. ಪ್ರಶ್ನಿಸುವ ಮನೋಭಾವವನ್ನು ಅದಕ್ಕೆ ಬೇಕಾದ ಮನಸ್ಥಿತಿಯನ್ನು ಅಭ್ಯಾಸ ಮಾಡಿಸುವುದು. ಗೊತ್ತಿಲ್ಲದ್ದನ್ನು ಕೇಳುವುದು ಅವಮಾನವಲ್ಲ ಎಂಬುದನ್ನು ಅರಿಕೆ ಮಾಡಿಸಬೇಕು. ಅವರ ಕುತೂಹಲವನ್ನು ಬೆಳೆಸಿ ಪ್ರೋತ್ಸಾಹಿಸಬೇಕು. ಬೇರೆ, ಬೇರೆ ದೃಷ್ಟಿಕೋನಗಳಿಂದ ಆಲೋಚಿಸಲು, ಕಲ್ಪಿಸಲು ಸಹಾಯ ಮಾಡಬೇಕು.

2. ಕಲ್ಪನೆ ಮತ್ತು ರಚನಾತ್ಮಕ ಆಟಗಳನ್ನು ಉತ್ತೇಜಿಸುವುದು

ಕವನಗಳು, ಜೋಕುಗಳು, ವ್ಯಂಗ್ಯ ಚಿತ್ರಗಳು, ರಸಪ್ರಶ್ನೆ, ಪದಬಂಧ ಬಿಡಿಸುವುದು, ಗಾದೆಗಳು, ಕಥೆಗಳು, ಚಿತ್ರಕಲೆ ಮತ್ತು ಹಸ್ತಕಲೆಯನ್ನು ಪ್ರಾಯೋಗಿಕವಾಗಿ ಮಾಡುತ್ತಲೇ ಆ ಮೂಲಕ ಮಕ್ಕಳ ಸೃಜನಶೀಲತೆಯನ್ನು ಪ್ರೋತ್ಸಾಹಿಸುವುದು. ಬಣ್ಣಗಳ ಚಿತ್ರ, ಮಣ್ಣಿನ ಶಿಲ್ಪ, ಪೇಪರ್ ಕ್ರಾಫ್ಟ್, ಬಟ್ಟೆಯಲ್ಲಿ ಕಸೂತಿ ಮುಂತಾದ ಕಲಾತ್ಮಕ ಚಟುವಟಿಕೆಗಳನ್ನು ಅವರವರ ಆಸಕ್ತಿಗನುಗುಣವಾಗಿ ಆಯೋಜಿಸುವುದು. ಖಾಲಿ ಕಾಗದಗಳನ್ನು ಕೊಟ್ಟು ಕೈಬರಹ ಬರೆಸುವುದು, ಅವರಿಗೆ ಇಷ್ಟವಾದುದನ್ನು ಮಾಡಿಸುವುದು, ಚಿತ್ರ ಬಿಡಿಸಲು ಹೇಳುವುದರಿಂದ ಮಕ್ಕಳ ನಿಜವಾದ ಆಸಕ್ತಿ ಮತ್ತು ಕಲ್ಪನಾಶಕ್ತಿಯ ಸಾಮರ್ಥ್ಯವನ್ನು ತಿಳಿದುಕೊಳ್ಳಲು ಸಹಾಯವಾಗುತ್ತದೆ.

3 ಓದುವ ಮತ್ತು ಕಥೆ ಹೇಳುವ ಅಭ್ಯಾಸ

ಸಣ್ಣಕಥೆಗಳು ಅಂದರೆ ದೊಡ್ಡವರಿಗೇ ಇಷ್ಟ. ಮಕ್ಕಳಿಗಂತೂ ಕೇಳುವುದೇ ಬೇಡ. ಮೈಮರೆತು ಬಿಡುತ್ತಾರೆ. ಮಕ್ಕಳ ಸಾಹಿತಿಗಳ ಕಥೆಗಳನ್ನು, ಪತ್ರಿಕೆಗಳಲ್ಲಿ ಪ್ರಕಟವಾಗುವ ಕಥೆಗಳನ್ನು ಮಕ್ಕಳು ಓದುವಂತೆ ಮಾಡುವುದು ತುಂಬಾ ಪ್ರಭಾವವನ್ನು ಬೀರುತ್ತವೆ. ಅಂತೆಯೇ ನೀವೂ ಕಥೆಗಳನ್ನು ಬರೆಯಲು ಪ್ರಯತ್ನಿಸಿ ಎಂದು ಪ್ರೇರೇಪಿಸಬೇಕು. ಅಪೂರ್ಣ ಕಥೆಯನ್ನು ಪೂರ್ಣಗೊಳಿಸುವುದು, ಕಾಲ್ಪನಿಕ ಸನ್ನಿವೇಶದ ಕಥಾಸೃಷ್ಟಿ ಮತ್ತು ಕಥಾ ನಿರೂಪಣೆ- ಹೀಗೆ ಮಕ್ಕಳ ಕಲ್ಪನಾ ಶಕ್ತಿಯನ್ನು ಜಾಗೃತಗೊಳಿಸುವುದು.

4. ಮಕ್ಕಳ ಸ್ವತಂತ್ರ ಚಿಂತನೆಗೆ ಪ್ರೋತ್ಸಾಹ

ಹೆಚ್ಚಿನ ಸಮಯವನ್ನು ಮಕ್ಕಳು ತಾವಾಗಿಯೇ ಉತ್ತರವನ್ನು ಕಂಡುಕೊಳ್ಳಲು ಅವಕಾಶ ಕೊಡುವುದು. ತಪ್ಪುಗಳನ್ನು ಒಪ್ಪಿಕೊಂಡು ನಕಾರಾತ್ಮಕವಾಗಿ ನೋಡದೆ, ಪ್ರಯತ್ನ ಮತ್ತು ಹೊಸ ಚಿಂತನೆಗೆ ಮಕ್ಕಳನ್ನು ಪ್ರೋತ್ಸಾಹಿಸಬೇಕು. ನೀವು ಇದನ್ನು ಹೇಗೆ ಪರಿಹರಿಸುತ್ತೀರಿ? ‘‘ಇನ್ಯಾವ ದೃಷ್ಟಿಕೋನದಲ್ಲಿ ನೀವು ನಿಮ್ಮನ್ನು ಒಳಗೊಳ್ಳಿಸಿಕೊಳ್ಳುತ್ತೀರಿ?’’ ಎಂಬಂಥ ಪ್ರಶ್ನೆಗಳು ಮಕ್ಕಳನ್ನು ವಿಭಿನ್ನವಾಗಿ ಯೋಚಿಸಲು ಪ್ರೇರೇಪಿಸುತ್ತವೆ.

5. ಸ್ವಾವಲಂಬನೆ ಮತ್ತು ಪ್ರಯೋಗಾತ್ಮಕ ಅಧ್ಯಯನ

ವೈಜ್ಞಾನಿಕ ಪ್ರಯೋಗಗಳು, ಪ್ರಾಜೆಕ್ಟ್ಸ್, ಗಾರ್ಡನಿಂಗ್ ಮತ್ತು ಹಸ್ತಕಲೆಯ ಮೂಲಕ ಮಕ್ಕಳು ಹೊಸದನ್ನು ಸೃಷ್ಟಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಸಹಾಯ ಮಾಡುವುದು. ಮಕ್ಕಳಿಗೆ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಲು ಮತ್ತು ಹೊಸ ಪ್ರಯತ್ನಗಳನ್ನು ಮಾಡಿಕೊಳ್ಳಲು ನಿರಂತರವಾಗಿ ಪ್ರೋತ್ಸಾಹಿಸುವುದು..

6. ಟೆಕ್ನಾಲಜಿ ಮತ್ತು ಸೃಜನಾತ್ಮಕ ಆಟಗಳ ಬಳಕೆ

ದೊಡ್ಡವರ ಮೇಲ್ವಿಚಾರಣೆಯಲ್ಲಿ ಚಿತ್ರರಚನಾ ಆ್ಯಪ್‌ಗಳು, ಮ್ಯೂಸಿಕ್ ಕ್ರಿಯೇಷನ್ ಟೂಲ್‌ಗಳು ಮತ್ತು ಎಜ್ಯುಕೇಷನಲ್ ಗೇಮ್ಸ್, ವೀಡಿಯೊ ಕ್ರಿಯೇಷನ್ಸ್, ಎನಿಮೇಷನ್ಸ್ ಬಳಸುವಂತೆ ಪ್ರೇರೇಪಿಸುವುದು. ಕಥೆ ಹೇಳುವ, ಅಂತ್ಯಾಕ್ಷರ, ಮೌಖಿಕ ಪದಬಂಧ, ಪದರಚನೆ, ವೇಗದ ಓದು..ಮುಂತಾದ ಬೌದ್ಧಿಕ ಮತ್ತು ವೈಚಾರಿಕ ಸಾಮರ್ಥ್ಯವನ್ನು ಉದ್ದೀಪಿಸುವ ಆಟಗಳನ್ನು ಆಯೋಜಿಸಬೇಕು.

7. ನೈಸರ್ಗಿಕ ಅನುಭವ ಮತ್ತು ಸುತ್ತಮುತ್ತಲಿನ ಅನ್ವೇಷಣೆ

ಮಕ್ಕಳನ್ನು ನಿಸರ್ಗದ ನಡುವೆ ಗುಂಪಿನಲ್ಲಿ ಆಡಿಸಬೇಕು. ಪ್ರಾಣಿಪಕ್ಷಿಗಳಂತೆ, ಕ್ರಿಮಿಕೀಟಗಳನ್ನು ನೋಡುವಂತೆಯೂ, ಅವುಗಳ ದೇಹ ರಚನೆ, ಆಹಾರಕ್ರಮವನ್ನು ಪರಿಚಯಿಸಬೇಕು. ಹೊಸ ಜಾಗಗಳಿಗೆ ಭೇಟಿ ನೀಡುವಂತೆಯೂ ಮಾಡಿ ಪ್ರಕೃತಿಯ ಬಗ್ಗೆ ತಿಳಿದುಕೊಳ್ಳಲು ಪ್ರೇರೇಪಿಸಬೇಕು. ಕೃಷಿಯ ಕುರಿತಾಗಿ ಪ್ರತ್ಯಕ್ಷ ಅನುಭವವನ್ನು ಒದಗಿಸಬೇಕು. ಪರಿಸರದ ಉಳಿವಿನ ಚಿಂತನೆಯನ್ನು ಪರಿಸರದ ಮಧ್ಯೆಯೇ ಹುಟ್ಟಿಸಬೇಕು. ಪ್ರಶ್ನೆಗಳ ಮೂಲಕ ಅವರ ವೈಚಾರಿಕ ಶಕ್ತಿಯನ್ನು ಜಾಗೃತಗೊಳಿಸಬೇಕು. ಮುಕ್ತ ಚಿಂತನೆಗೆ ಅವರನ್ನು ಪರಿವರ್ತನೆ ಮಾಡಬೇಕು. ಆಟ, ಕಲಿಕೆ, ಕಥೆ, ಕಲ್ಪನೆ ಮತ್ತು ಪ್ರಯೋಗಾತ್ಮಕ ಕ್ರಿಯೆಗಳಲ್ಲಿ ಅವರನ್ನು ನಿರಂತರವಾಗಿ ತೊಡಗಿಸುವ ಮೂಲಕ ಅವರ ಕಲ್ಪನೆ, ಆಲೋಚನೆ, ಮಾನಸಿಕ ಮತ್ತು ಭಾವನಾತ್ಮಕ ಶಕ್ತಿ ಮತ್ತು ಹೊಸದನ್ನು ಸೃಜಿಸುವ ಸಾಮರ್ಥ್ಯವನ್ನು ಹೆಚ್ಚಿಸಬಹುದು.

share
ಟಿ. ದೇವಿದಾಸ್
ಟಿ. ದೇವಿದಾಸ್
Next Story
X