ದೇವಾಲಯ ನಗರಿಯಲ್ಲಿ ಪಾಳುಬಿದ್ದ ನೂರಾರು ಸ್ಮಾರಕಗಳು

ಕನಕಗಿರಿ: ಏಳುನೂರ ಒಂದು ಬಾವಿ, ಏಳುನೂರ ಒಂದು ದೇವಸ್ಥಾನ, ದೇವಾಲಯಗಳ ನಗರಿ ಎಂದು ಖ್ಯಾತಿ ಪಡೆದು ಹೊರ ರಾಜ್ಯಗಳ ಲಕ್ಷಾಂತರ ಭಕ್ತರನ್ನು ಕನಕಗಿರಿಗೆ ಭೇಟಿ ನೀಡುತ್ತಾರೆ. ಆದರೆ ಇಲ್ಲಿನ ಕನಕಾಚಲಪತಿ ದೇವಸ್ಥಾನ, ವೆಂಕಟಪತಿ ಬಾವಿ, ಚಿಕ್ಕಕನಕಪ್ಪನ ಬಾವಿ, ಕೊಂಡದಪೇಟೆಯ ಪುಷ್ಕರಣಿಗಳಂತಹ ಐತಿಹಾಸಿಕ ಸ್ಥಳಗಳು, ದೇವಸ್ಥಾನಗಳು, ದೊರೆಗಳ ಕೋಟೆಗಳು ಅಭಿವೃದ್ಧಿ ಕಾಣದೆ ಅನಾಥವಾಗಿವೆ. ಸಂರಕ್ಷಣೆ ಇಲ್ಲದೆ ಹಾಳಾಗುತ್ತಿದು,್ದ ಸ್ಮಾರಕಗಳ ಕೂಗು ಯಾರಿಗೂ ಕೇಳದಾಗಿ.ೆ
ಬಸರಿಹಾಳ: ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ನ ಕನಕರಾಯನ ಬಾವಿ, ಲಕ್ಷ್ಮೀದೇವಿ ದೇವಸ್ಥಾನ, ಗ್ರಾಮದ ಗುಡ್ಡದ ಮೇಲಿರುವ ನಾಲ್ಕು ಕಾಲಿನ ಒಂಟಿ, ಗಂಡುಗಲಿ ಕುಮಾರರಾಮನ ದೇವಾಲಯ, ವೀರಗಲ್ಲು, ಪುರತನ ಕಾಲದ ಕೆರೆ ದಂಡೆಯಲ್ಲಿರುವ ವೀರಣ್ಣ ದೇವಸ್ಥಾನ, ಕನಕಗಿರಿಯಿಂದ ಬಸರಿಹಾಳ ರಸ್ತೆಯ ಎಡಭಾಗದಲ್ಲಿ ಬಾವಿ ಮತ್ತು ಲಕ್ಷ್ಮೀ ದೇವಾಲಯ, ನಾಲ್ಕು ಕಾಲಿನ ಮಂಟಪ ಇದೆ.
ಕನಕಗಿರಿ ಕೋಟೆ: ದೇವಸ್ಥಾನದ ರಸ್ತೆಯಲ್ಲಿರುವ ದ್ವಾರಬಾಗಿಲದ ಎಡ ಹಾಗೂ ಬಲಭಾಗದಲ್ಲಿ ಕನಕಗಿರಿ ಮನೆತನ ಆಳಿದ ಎರಡು ಕೋಟೆಗಳು ಕುಸಿದಿವೆ. ಪಟ್ಟಣದ ಮುಖ್ಯಾಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅವರ ಅಧೀನದಲ್ಲಿ ಬರುವ ತ್ರಿವೇಣಿ ಸಂಗಮ ಕೂಡ ಸ್ವಚ್ಛ ಮಾಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೆಂಕಟಪತಿ ಬಾವಿ: ವಿಜಯನಗರ ಸಾಮ್ರಾಜ್ಯದ ಗತವೈಭವ ನೆನಪಿಸುವ ಕಲಾತ್ಮಕ ಬಾವಿ ಇದಾಗಿದ್ದು, ಬ್ರಹ್ಮ, ವಿಷ್ಣು, ಮಹೇಶ್ವರ ದೇವಾಲಯಗಳು, ಚಿಕ್ಕ ಶಿಲಾ ಪಟ್ಟಿಗೆಗಳು, ಆಕರ್ಷಕ ಶಿಲಾಚಿತ್ರಗಳು, ನಾಲ್ಕು ಪ್ರವೇಶ ದ್ವಾರಗಳು, ಶೇಷಮೂರ್ತಿ, ನೃತ್ಯಗಾರ್ತಿಯರ ಶಿಲಾಚಿತ್ರ, 111 ಸರಳ ಶಿಲಾ ಕಂಬಗಳನ್ನು ಒಳಗೊಂಡಿದೆ. ಸಂರಕ್ಷಣೆ ಇಲ್ಲದ್ದರಿಂದ ನಿಧಿಗಳ್ಳರ ಹಾವಳಿ, ಮೋಜು ಮಸ್ತಿಯ ತಾಣವಾಗಿದೆ.
ಕಲಕೇರಿ: ತಾಲೂಕಿಗೆ ಐದು ಕಿ.ಮೀ. ದೂರದ ಕಲಕೇರಿ ಗ್ರಾಮದ ಕೂಡ ಐತಿಹಾಸಿಕ ಮಹತ್ವ ಹೊಂದಿದೆ. ಸೋಮಸಾಗರ, ಹುಲಿಹೈದರ, ಲಾಯದುಣಸಿ, ವರನಖೇಡಾ, ಗೋಡಿನಾಳ, ಸಿರಿವಾರ, ಹನುಮನಾಳ, ಕನಕಾಪುರ, ಬಂಕಾಪುರ, ರಾಂಪುರ, ಚಿಕ್ಕಮಾದಿನಾಳ, ನಾಗಲಾಪೂರ, ಕನ್ಯಾರಮಡಗು, ಮಲ್ಲಿಗೆವಾಡ, ಸುಳೇಕಲ್, ಬೇನಕನಾಳ ಇನ್ನೂ ಅನೇಕ ಕಡೆ ಸ್ಮಾರಕಗಳು, ಶಿಲೆಗಳು ಕಾವಲು ಇಲ್ಲದೆ ಅನಾಥವಾಗಿವೆ.
ಕನಕಗಿರಿ ಇತಿಹಾಸಕ್ಕೆ ಮೂಲಾಧಾರಗಳಾದ ಶಾಸನಗಳು, ಸ್ಮಾರಕಗಳು, ಬಾವಿ, ದೇಗುಲ, ನಾಣ್ಯಗಳ ಸಂರಕ್ಷಣೆಗೆ ಪುರಾತತ್ವ ಇಲಾಖೆ ಅಧಿಕಾರಿಗಳು ಮುಂದಾಗುವುದು ಅತೀ ಅಗತ್ಯವಾಗಿದೆ.
ಬಾಳಪ್ಪ ಸುಳೇಕಲ್, ಉಪನ್ಯಾಸಕರು ಇತಿಹಾಸ ವಿಭಾಗ ಕನಕಗಿರಿ
ಐತಿಹಾಸಿಕ ಹಿನ್ನೆಲೆಯುಳ್ಳ ಕನಕಗಿರಿ ಪಟ್ಟಣವು ಗ್ರಾಮೀಣ ಭಾಗದಲ್ಲಿ ಧಾರ್ಮಿಕವಾಗಿ ಮಾತ್ರವಲ್ಲ ಪುರಾತನ ಸ್ಮಾರಕಗಳಿಂದ ಸಾಂಸ್ಕೃತಿಕವಾಗಿ ವೈಶಿಷ್ಟ್ಯ ಹೊಂದಿವೆ. ಪುರಾತತ್ವ ಇಲಾಖೆ ಮತ್ತು
ಧಾರ್ಮಿಕ ದತ್ತಿ ಇಲಾಖೆಯನಿರ್ಲಕ್ಷ್ಯದಿಂದ ಪುರಾತನ ಸ್ಮಾರಕಗಳು, ದೇವಾಲಯಗಳು ಕ್ರಮೇಣ ಕಾಲಗರ್ಭಕ್ಕೆ ಸೇರುತ್ತಿರುವುದು ಪ್ರಜ್ಞಾವಂತ ನಾಗರಿಕರಲ್ಲಿ ಅತೀವ ಬೇಸರ ಮೂಡಿಸಿದೆ. ಹಾಲಿ ಸಚಿವ, ಶಿವರಾಜ ತಂಗಡಗಿ ಮೂರು ಬಾರಿ ಸಚಿವರಾಗಿ, ಬಸವರಾಜ ದಢೇಸುಗೂರು ಶಾಸಕರಾಗಿ ಇದೇ ಕ್ಷೇತ್ರದಿಂದ ಆಯ್ಕೆಯಾದರೂ ಈ ಪ್ರಾಚೀನ ಸ್ಮಾರಕಗಳ ಸಂರಕ್ಷಣೆಯ ಬಗ್ಗೆ ಯಾವುದೇ ಗಮನ ಹರಿಸಿಲ್ಲ.
ದುರ್ಗದಾಸ ಯಾದವ,ಇತಿಹಾಸಕಾರರು ಕನಕಗಿರಿ







