Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಎಸ್‌ಐಆರ್ ಎನ್ನುವುದು ನಿಜವಾಗಿಯೂ...

ಎಸ್‌ಐಆರ್ ಎನ್ನುವುದು ನಿಜವಾಗಿಯೂ ಪ್ರಜಾಸತ್ತಾತ್ಮಕ ಪ್ರಕ್ರಿಯೆಯೇ ಆಗಿದ್ದರೆ ಅದರ ಹೆಸರಲ್ಲಿ ಮುಸ್ಲಿಮರನ್ನೇ ಏಕೆ ಗುರಿ ಮಾಡಲಾಗುತ್ತಿದೆ?

ಎಸ್. ಸುದರ್ಶನ್ಎಸ್. ಸುದರ್ಶನ್26 Nov 2025 11:42 AM IST
share
ಎಸ್‌ಐಆರ್ ಎನ್ನುವುದು ನಿಜವಾಗಿಯೂ ಪ್ರಜಾಸತ್ತಾತ್ಮಕ ಪ್ರಕ್ರಿಯೆಯೇ ಆಗಿದ್ದರೆ ಅದರ ಹೆಸರಲ್ಲಿ ಮುಸ್ಲಿಮರನ್ನೇ ಏಕೆ ಗುರಿ ಮಾಡಲಾಗುತ್ತಿದೆ?

ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಶುರುವಾದಾಗಿನಿಂದ ಕೋಲ್ಕತಾ ಮತ್ತಿತರ ಭಾಗಗಳ ಹಲವಾರು ಪ್ರದೇಶಗಳಲ್ಲಿ, ಹೆಚ್ಚಿನ ಮುಸ್ಲಿಮ್ ಜನಸಂಖ್ಯೆ ಇರುವಲ್ಲೆಲ್ಲ ಅವರು ಬಾಂಗ್ಲಾದೇಶೀಯರು ಎಂದು ಕಥೆ ಕಟ್ಟುವುದು ಜೋರಾಗಿದೆ. ಕೋಲ್ಕತಾ ನಗರದ ಪಕ್ಕದಲ್ಲಿರುವ ನ್ಯೂ ಟೌನ್‌ನಂತಹ ಪ್ರದೇಶಗಳಲ್ಲಿ ಇಂಥ ಗೊಂದಲ ತೀವ್ರವಾಗಿದೆ. ಮಡಿಲ ಮೀಡಿಯಾಗಳಂತೂ ಎಲ್ಲವನ್ನೂ ಕೋಮುದೃಷ್ಟಿಯಿಂದ ನೋಡುತ್ತ್ತಾ, ಬೆಂಕಿ ಹಚ್ಚುವ ಕೆಲಸ ಮಾಡುತ್ತಿವೆ. ಇದು ಇಲ್ಲಿನ ಜನರಲ್ಲಿ ಪೌರತ್ವವನ್ನೇ ಕಳೆದುಕೊಳ್ಳುವ ಭಯವನ್ನು ಹುಟ್ಟುಹಾಕಿದೆ.

ಎಸ್‌ಐಆರ್ ಬಗ್ಗೆ ಈಗಾಗಲೇ ಇರುವ ತಕರಾರುಗಳು ಹಲವು.

ಬಿಹಾರದಲ್ಲಿ ನುಸುಳುಕೋರರ ವಿರುದ್ಧ ಎಂಬಂತೆ ಅದನ್ನು ಬಿಂಬಿಸುತ್ತ, ಕಡೆಗೆ ಯಾವ ನುಸುಳುಕೋರರೂ, ಯಾವ ವಿದೇಶೀಯರು ಪತ್ತೆಯಾಗದೇ ಹೋದದ್ದು ತಿಳಿದೇ ಇದೆ.

ಈಗ ಅದೇ ವರಸೆಯನ್ನು ಪಶ್ಚಿಮ ಬಂಗಾಳದಲ್ಲಿ ಬಳಸಲಾಗುತ್ತಿದೆ.

ಅಲ್ಲಿ ಮುಸ್ಲಿಮರನ್ನು ಎಸ್‌ಐಆರ್ ಹೆಸರಲ್ಲಿ ಗುರಿ ಮಾಡಲಾಗುತ್ತಿದೆ ಮತ್ತಿದು ನಿಜವಾಗಿಯೂ ಅಪಾಯಕಾರಿಯಾಗಿದೆ.

ಮುಖ್ಯವಾಗಿ, ಮುಸ್ಲಿಮರೇ ಹೆಚ್ಚಿರುವ ಕೋಲ್ಕತಾದ ನ್ಯೂ ಟೌನ್ ಮತ್ತು ಗುಲ್ಶನ್ ಕಾಲನಿ ನಿವಾಸಿಗಳನ್ನು ಬಾಂಗ್ಲಾದೇಶೀಯರು ಎಂದು ಮಡಿಲ ಮೀಡಿಯಾಗಳು ಬಿಂಬಿಸುತ್ತಿರುವುದು ಆ ಜನರನ್ನು ಕಂಗೆಡಿಸಿದೆ.

ಮೀಡಿಯಾಗಳ ನದರಿಗೆ ಬೀಳುವುದನ್ನು ತಪ್ಪಿಸಲು ಅವರೆಲ್ಲ ಕೆಲಸಕ್ಕೂ ಹೋಗದೆ ಮನೆಯೊಳಗೇ ಉಳಿಯುತ್ತಿದ್ದಾರೆ.

ಮುನ್ನೂರು ನಾನೂರು ರೂಪಾಯಿಗೆ ದಿನವಿಡೀ ದುಡಿಯಬೇಕಾದ ಅವರು ಮನೆಗಳಿಗೆ ಬೀಗ ಹಾಕಿ ಕೆಲಸಕ್ಕೆ ಹೋದರೆ, ಎಸ್‌ಐಆರ್ ಗೆ ಹೆದರಿ ಓಡಿಹೋಗಿರುವ ಬಾಂಗ್ಲಾದೇಶೀಯರ ಮನೆಗಳು ಇವು ಎಂದು ಮಡಿಲ ಮೀಡಿಯಾದವರು ಕಥೆ ಹೆಣೆಯುತ್ತಿರುವ ಬಗ್ಗೆ ‘ದಿ ಕ್ವಿಂಟ್’ ವರದಿ ಮಾಡಿದೆ.

ವರದಿಯ ಪ್ರಕಾರ, ತಾವು ಬಡವರು ಮತ್ತು ಮುಸ್ಲಿಮರು ಎಂಬ ಕಾರಣದಿಂದಾಗಿಯೇ ತಮ್ಮನ್ನು ಬಾಂಗ್ಲಾದೇಶೀಯರು ಎಂದು ಜರೆಯಲಾಗುತ್ತಿದೆ ಎಂಬುದು ಆ ಜನರ ಸಂಕಟವಾಗಿದೆ.

ವಾಸ್ತವ ಏನೆಂದರೆ, ತಮ್ಮ ಕುಟುಂಬಗಳು ತಲೆಮಾರುಗಳಿಂದಲೂ ಈ ಸ್ಲಂಗಳಲ್ಲಿ ವಾಸಿಸುತ್ತಿವೆ ಎನ್ನುತ್ತಾರೆ ಅವರು.

ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಶುರುವಾದಾಗಿನಿಂದ ಕೋಲ್ಕತಾ ಮತ್ತಿತರ ಭಾಗಗಳ ಹಲವಾರು ಪ್ರದೇಶಗಳಲ್ಲಿ, ಹೆಚ್ಚಿನ ಮುಸ್ಲಿಮ್ ಜನಸಂಖ್ಯೆ ಇರುವಲ್ಲೆಲ್ಲ ಅವರು ಬಾಂಗ್ಲಾದೇಶೀಯರು ಎಂದು ಕಥೆ ಕಟ್ಟುವುದು ಜೋರಾಗಿದೆ. ಕೋಲ್ಕತಾ ನಗರದ ಪಕ್ಕದಲ್ಲಿರುವ ನ್ಯೂ ಟೌನ್‌ನಂತಹ ಪ್ರದೇಶಗಳಲ್ಲಿ ಇಂಥ ಗೊಂದಲ ತೀವ್ರವಾಗಿದೆ. ಮಡಿಲ ಮೀಡಿಯಾಗಳಂತೂ ಎಲ್ಲವನ್ನೂ ಕೋಮುದೃಷ್ಟಿಯಿಂದ ನೋಡುತ್ತ್ತಾ, ಬೆಂಕಿ ಹಚ್ಚುವ ಕೆಲಸ ಮಾಡುತ್ತಿವೆ. ಇದು ಇಲ್ಲಿನ ಜನರಲ್ಲಿ ಪೌರತ್ವವನ್ನೇ ಕಳೆದುಕೊಳ್ಳುವ ಭಯವನ್ನು ಹುಟ್ಟುಹಾಕಿದೆ.

ನ್ಯೂ ಟೌನ್ ಸುತ್ತಮುತ್ತಲಿನ ಕೊಳೆಗೇರಿ ಪ್ರದೇಶಗಳಲ್ಲಿ ಹಲವಾರು ವರ್ಷಗಳಿಂದ ಅಕ್ರಮ ಬಾಂಗ್ಲಾದೇಶಿ ಮತ್ತು ರೊಹಿಂಗ್ಯಾ ಮುಸ್ಲಿಮ್ ನುಸುಳುಕೋರರು ವಾಸಿಸುತ್ತಿದ್ದಾರೆ ಎಂದು ಮಿಡಿಯಾಗಳು ಅರಚಾಡತೊಡಗಿದಾಗ ಈ ಜನರ ಭಯ ಹೆಚ್ಚಾಯಿತು.

ಸ್ಲಂಗಳಿಗೆ ನುಗ್ಗಿದ ಮಿಡಿಯಾಗಳು ಆ ನಿವಾಸಿಗಳ ದಾಖಲೆಗಳನ್ನು ಕೇಳಲು ಶುರು ಮಾಡಿದವೆಂಬುದು ನಿಜಕ್ಕೂ ಆಘಾತಕಾರಿ. ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದವರು ಯಾವುದೇ ದಾಖಲೆಗಳನ್ನು ಕೇಳುವಂತಿರಲಿಲ್ಲ. ಹಾಗಿದ್ದೂ, ಟಿ.ವಿ. ಪತ್ರಕರ್ತರು ದಾಖಲೆ ಕೇಳತೊಡಗಿದ್ದು ವಿಚಿತ್ರವಾಗಿತ್ತು.

ಹಾಗೆ ದಾಖಲೆ ಕೇಳಿದ್ದಕ್ಕೆ ಅಲ್ಲಿನ ಜನ ಆಕ್ಷೇಪ ಎತ್ತಿದ ಕೂಡಲೇ, ಅವರನ್ನು ಬಾಂಗ್ಲಾದೇಶಿಗಳು, ರೊಹಿಂಗ್ಯಾ ನುಸುಳುಕೋರರು ಎಂದು ಹಣೆಪಟ್ಟಿ ಕಟ್ಟುವುದು ನಡೆಯಿತು.

ಹಾಗಾದರೆ ನ್ಯೂ ಟೌನ್‌ನಲ್ಲಿರುವ ಈ ಸ್ಲಂಗಳು ನಿಜವಾಗಿಯೂ ಬಾಂಗ್ಲಾದೇಶಿಗಳ ನೆಲೆಯೆ?

ವರದಿ ಉಲ್ಲೇಖಿಸುವ ಪ್ರಕಾರ, ನ್ಯೂ ಟೌನ್ ನಿರ್ಮಾಣಕ್ಕೆ 1990ರ ದಶಕದಲ್ಲಿ ಸ್ವಾಧೀನ ಪಡಿಸಿಕೊಳ್ಳಲಾಗಿದ್ದ ಭೂಮಿ ಕೂಡ ಒಂದು ಕಾಲದಲ್ಲಿನ ಜಮೀನ್ದಾರರಾಗಿದ್ದ ಹಾಜಿ ಬಾದ್‌ಶಾ ಅಲಿ ಅವರ ಕುಟುಂಬದ ಒಡೆತನದಲ್ಲಿದ್ದುದಾಗಿತ್ತು. ಆ ಕುಟುಂಬದ ಸದಸ್ಯರು ಇನ್ನೂ ಈ ಪ್ರದೇಶದಲ್ಲಿ ಇದ್ದಾರೆ.

ಬಾದ್‌ಶಾ ಅಲಿಯ ಮೊಮ್ಮಗ ಮುಹಮ್ಮದ್ ಶಾ ಆಲಂ, ಟಿಎಂಸಿ ನಾಯಕರಾಗಿದ್ದಾರೆ.

ಐತಿಹಾಸಿಕವಾಗಿ, ಈ ಎಲ್ಲಾ ಪ್ರದೇಶಗಳಲ್ಲಿ ಮುಸ್ಲಿಮರೇ ಹೆಚ್ಚಿದ್ದರು.

ನ್ಯೂ ಟೌನ್ ನಿರ್ಮಾಣದ ನಂತರ ಅವರಲ್ಲಿ ಹಲವರು ಕೆಲಸ ಹುಡುಕಿಕೊಂಡು ನಗರಕ್ಕೆ ಬಂದರು. ಕೆಲವರು ರಿಕ್ಷಾ ಎಳೆಯುತ್ತಾರೆ, ಕೆಲವರು ಕಸ ಸಂಗ್ರಹಿಸುತ್ತಾರೆ, ಕೆಲವರು ಮನೆಗಳಲ್ಲಿ ಕೆಲಸ ಮಾಡುತ್ತಾರೆ. ಹೀಗಿರುವಾಗ, ಅವರನ್ನು ಬಾಂಗ್ಲಾದೇಶೀಯರು ಎಂದು ಕರೆಯುವುದು ಅನ್ಯಾಯ ಎಂದು ಮುಹಮ್ಮದ್ ಶಾ ಆಲಂ ಹೇಳುವುದನ್ನು ವರದಿ ಉಲ್ಲೇಖಿಸಿದೆ.

‘‘ನಾವು ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವಷ್ಟು ಶಕ್ತರಲ್ಲ. ನಾವು ಬಡವರು, ಹಾಗಾಗಿಯೇ ನಮಗೆ ಕಿರುಕುಳ ನೀಡುವುದು ಸುಲಭ’’ ಎಂದು ಅಲ್ಲಿನ ನಿವಾಸಿಗಳು ಸಂಕಟ ವ್ಯಕ್ತಪಡಿಸುತ್ತಾರೆ.

ಮುಸ್ಲಿಮರು ಮಾತ್ರವೇ ಈ ಕಿರುಕುಳಕ್ಕೆ ಬಲಿಯಾಗಿಲ್ಲ.

ಸಣ್ಣ ಸಂಬಳಕ್ಕೆ ದುಡಿಯುತ್ತ್ತಾ, ಮನೆಗೆ ಹಣ ಕಳಿಸಬೇಕಾದ ಅನಿವಾರ್ಯತೆಯಿರುವ ಸ್ವೀಟಿ ಮೊಂಡಲ್ ಅವರಂಥವರು ಕೂಡ ಈ ಸ್ಲಂನಲ್ಲಿ ವಾಸಿಸುತ್ತಿದ್ದಾರೆ. ಅವರು ಹೂಗ್ಲಿಯವರು.

ಈಗ ಅಲ್ಲಿನವರೆಲ್ಲರನ್ನೂ ಬಾಂಗ್ಲಾದೇಶಿಗಳು ಎಂದು ಕರೆಯಲಾಗುತ್ತಿರುವಾಗ, ಇರುವ ಕೆಲಸವನ್ನೂ ಕಳೆದುಕೊಳ್ಳಬೇಕಾಗುತ್ತದೋ ಎಂಬ ಭಯ ಅಂಥವರನ್ನು ಕಾಡುತ್ತಿದೆ.

ಇಲ್ಲಿ ಇರುವ ಅನೇಕರು ಹೂಗ್ಲಿಯ ಖಾನಕುಲ್‌ನವರು. ಮತ್ತೆ ಕೆಲವರು ಬಿಹಾರದ ದರ್ಭಂಗಾದವರು. ಆದರೆ ಅವರನ್ನೆಲ್ಲ ಬಾಂಗ್ಲಾದೇಶಿಗಳು ಎಂದು ಆರೋಪಿಸಲಾಗುತ್ತಿರುವುದು ಮಾತ್ರ ವಿಚಿತ್ರವಾಗಿದೆ.

ಕೋಲ್ಕತಾದಲ್ಲಿ ಮುಸ್ಲಿಮರು ಹೆಚ್ಚಿರುವ ಮತ್ತೊಂದು ಪ್ರದೇಶ ಗುಲ್ಶನ್ ಕಾಲನಿಯಲ್ಲಿ ಕೂಡ ಇಂಥದೇ ಭಯ ಹರಡಲಾಗುತ್ತಿದೆ.

ಗುಲ್ಶನ್ ಕಾಲನಿ ಬೂತ್ ಅನ್ನು ಹೊಸದಾಗಿ ರಚಿಸಲಾಗಿದೆ ಎಂದು ನಿವಾಸಿಗಳು ವಾದಿಸುತ್ತಾರೆ. ಎಲ್ಲಾ ನಿವಾಸಿಗಳು ಇನ್ನೂ ಈ ಬೂತ್‌ನ ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರಿಸಿಕೊಂಡಿಲ್ಲ.

ಇಲ್ಲಿಯವರೆಗೆ, ಈ ಪ್ರದೇಶದ ನಿವಾಸಿಗಳು ಪಶ್ಚಿಮ ಚೌಬಾಗಾ ಪ್ರದೇಶದ ನಾಲ್ಕೈದು ಬೂತ್‌ಗಳಲ್ಲಿ ಮತ ಚಲಾಯಿಸುತ್ತಿದ್ದರು.

2026ರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಈ ಬೂತ್‌ನಲ್ಲಿ ಮತದಾನ ನಡೆಯಲಿದೆ.

ಬಾಂಗ್ಲಾದೇಶ ಅಥವಾ ಪೂರ್ವ ಪಾಕಿಸ್ತಾನದಿಂದ ಬಹಳ ಹಿಂದೆಯೇ ವಲಸೆ ಬಂದ ಕೆಲವು ಜನರು ಮಾರ್ಟಿನ್ ಪ್ಯಾರಾದಲ್ಲಿ ವರ್ಷಗಳಿಂದ ವಾಸಿಸುತ್ತಿದ್ದಾರೆ.

ಎಡರಂಗ ಸರಕಾರದ ಅವಧಿಯಲ್ಲಿ, ಹಲವಾರು ನಿರಾಶ್ರಿತ ಕುಟುಂಬಗಳಿಗೆ ಈ ಪ್ರದೇಶದಲ್ಲಿ ಪುನರ್ವಸತಿ ಕಲ್ಪಿಸಲಾಯಿತು.ಆದರೂ, ಬಾಂಗ್ಲಾದೇಶದವರು ಎಂಬ ಆರೋಪಗಳನ್ನು ಈ ನಿವಾಸಿಗಳು ವಿರೋಧಿಸುತ್ತಾರೆ.

ಇಲ್ಲಿರುವ ಹೆಚ್ಚಿನ ಜನರು ಬಿಹಾರ, ಉತ್ತರ ಪ್ರದೇಶ ಮತ್ತು ದಿಲ್ಲಿಯ ಉರ್ದು ಮಾತನಾಡುವ ಜನರಾಗಿದ್ದಾರೆ.

ಹೀಗೆ ಇಲ್ಲಿನ ಬಡ ಮುಸ್ಲಿಮರನ್ನು ಬಾಂಗ್ಲಾದೇಶೀಯರು ಎನ್ನಲಾಗುತ್ತಿರುವ ಬಗ್ಗೆ ಟಿಎಂಸಿ ನಾಯಕ ಅರೂಪ್ ಚಕ್ರವರ್ತಿ ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿ ರಾಜ್ಯಾದ್ಯಂತ ದ್ವೇಷ ಪ್ರಚಾರ ಮತ್ತು ತಪ್ಪು ಮಾಹಿತಿ ಹರಡಲು ಯತ್ನಿಸುತ್ತಿದೆ ಎಂದು ಅವರು ಟೀಕಿಸಿದ್ದಾರೆ.

ದಿಲ್ಲಿಯಲ್ಲಿ ಮತ ಚಲಾಯಿಸಿದವರಿಗೇ ಬಿಹಾರದಲ್ಲೂ ಮತ ಚಲಾಯಿಸಲು ಅವಕಾಶ ಕೊಡುತ್ತಿರುವಾಗ, ಬಂಗಾಳದ ನ್ಯೂ ಟೌನ್ ಮತ್ತು ಗುಲ್ಶನ್ ಕಾಲನಿಯಂಥ ಪ್ರದೇಶಗಳಲ್ಲಿನ ಭಾರತೀಯರನ್ನು ಬಾಂಗ್ಲಾದೇಶಿಗಳು ಎಂದು ಲೇಬಲ್ ಮಾಡಲಾಗುತ್ತಿರುವುದು ವಿಪರ್ಯಾಸ.

ನ್ಯೂ ಟೌನ್‌ನಲ್ಲಿ ಅಕ್ರಮ ಬಾಂಗ್ಲಾದೇಶಿಗಳು ನೆಲೆಸಿದ್ದಾರೆ ಎಂಬ ವದಂತಿಯನ್ನು ಮೊದಲು ಹರಡಿದವರು ಅಮಿತ್ ಮಾಳವೀಯ.

ನಂತರ ಅದು ಜೋರಾಗಿ ವ್ಯಾಪಿಸತೊಡಗಿತು.

ಈ ಪ್ರದೇಶಗಳಲ್ಲಿ ನಿಜವಾಗಿಯೂ ನುಸುಳುಕೋರರು ಇದ್ದರೆ, ಬಿಎಸ್‌ಎಫ್ ಏನು ಮಾಡುತ್ತಿದೆ?

ಒಳನುಸುಳುಕೋರರು ರಾಜ್ಯದೊಳಗೆ ಬರಲು ಅವರೇಕೆ ಅವಕಾಶ ನೀಡುತ್ತಿದ್ದಾರೆ?

ಇಂಥ ಪ್ರಶ್ನೆಗಳಿಗೆ ಬಿಜೆಪಿ ಜಾಣ ಮೌನ ವಹಿಸುತ್ತದೆ.

ಚುನಾವಣೆಗೆ ಮುನ್ನ ಇದು ಖಂಡಿತವಾಗಿಯೂ ಭಯ ಹುಟ್ಟಿಸುವ ಪ್ರಚಾರವಾಗಿದೆ.

ಅಲ್ಪಸಂಖ್ಯಾತ ಸಮುದಾಯಗಳನ್ನು ಹೆದರಿಸುವುದು ಇದರ ಉದ್ದೇಶ ಎಂದು ಸಾಮಾಜಿಕ ಕಾರ್ಯಕರ್ತ ಮತ್ತು ಕೋಲ್ಕತಾ ಹೈಕೋರ್ಟ್ ವಕೀಲ ಸಮೀಮ್ ಅಹ್ಮದ್ ಹೇಳುವುದನ್ನು ವರದಿ ಉಲ್ಲೇಖಿಸಿದೆ.

ಈ ಜನರನ್ನು ಭಯಭೀತಗೊಳಿಸಲಾಗುತ್ತಿದೆ ಮತ್ತು ಅವರು ಬಿಜೆಪಿಯನ್ನು ಬೆಂಬಲಿಸಿದರೆ, ಅವರ ಪೌರತ್ವ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಪರೋಕ್ಷವಾಗಿ ಹೇಳಲಾಗುತ್ತಿದೆ.

ಅವರು ಬಿಜೆಪಿ ವಿರುದ್ಧ ಮತ ಚಲಾಯಿಸಿದರೆ, ಅವರ ಬದುಕನ್ನು ಅತಂತ್ರವಾಗಿಸಲಾಗುತ್ತದೆ ಎಂದು ವಕೀಲ ಸಮೀಮ್ ಅಹ್ಮದ್ ಹೇಳುತ್ತಾರೆ.

ಅವರ ಪ್ರಕಾರ, ನ್ಯೂ ಟೌನ್ ಸೇರಿದಂತೆ ಈ ಪ್ರದೇಶಗಳಲ್ಲಿನ ಹೆಚ್ಚಿನ ಬಡ ಜನರು ಭಾರತೀಯ ಮುಸ್ಲಿಮರು ಎಂದು ಮಾಧ್ಯಮಕ್ಕೂ ಚೆನ್ನಾಗಿ ಗೊತ್ತಿದೆ.

ಆದರೂ ಅವರಿಗೆ ಸತತ ಕಿರುಕುಳ ನೀಡಲಾಗುತ್ತಿದೆ.

ಅವರು ಯಾವಾಗಲೂ ಒತ್ತಡದಲ್ಲಿ ಇರುವಂತೆ ಮಾಡಲಾಗುತ್ತಿದೆ ಮತ್ತು ಸುರಕ್ಷಿತವಾಗಿರಲು ಬಿಜೆಪಿಗೆ ಶರಣಾಗಲಿ ಎಂದು ಬಯಸಲಾಗುತ್ತದೆ ಎಂಬುದು ಅಹ್ಮದ್ ಅಭಿಪ್ರಾಯ.

ಸಾಮಾಜಿಕ ಕಾರ್ಯಕರ್ತೆ ಸುಗತಾ ರಾಯ್ ಹೇಳುವ ಪ್ರಕಾರ, ಗಡಿ ದಾಟಿ 30-50 ವರ್ಷಗಳ ಹಿಂದೆ ಇಲ್ಲಿಗೆ ಬಂದ ಅನೇಕರು ರಾಜ್ಯಾದ್ಯಂತ ಇದ್ದಾರೆ. ಅವರು ಈ ದೇಶದಲ್ಲಿ ಕೆಲಸ ಮಾಡಿದ್ದಾರೆ. ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಿದ್ದಾರೆ. ಭೂಮಿ ಖರೀಸಿದ್ದಾರೆ, ಮನೆ ಕಟ್ಟಿದ್ದಾರೆ. ಆದರೆ ಇಂದು ಅವರನ್ನು ಕೆಲವು ದಾಖಲೆಗಳು ಇಲ್ಲದ ಕಾರಣಕ್ಕೆ ದೇಶದಿಂದ ಹೊರ ಹಾಕಿದರೆ, ಅವರು ಎಲ್ಲಿಗೆ ಹೋಗುತ್ತಾರೆ? ಎಂಬುದು ರಾಯ್ ಪ್ರಶ್ನೆ.

ಅಹ್ಮದ್ ಅವರು ಹೇಳುವಂತೆ, ಅಲ್ಪಸಂಖ್ಯಾತರು ಸೇರಿದಂತೆ ಬಡ ಜನರ ದೊಡ್ಡ ಭಾಗವನ್ನು ದೇಶವಿಲ್ಲದ ಕಾರ್ಮಿಕರನ್ನಾಗಿ ಮಾಡುವುದು ಬಿಜೆಪಿಯ ಉದ್ದೇಶ.

ಏಕೆಂದರೆ ಅವರಿಗೆ ಪೌರತ್ವ ಹಕ್ಕುಗಳಿಲ್ಲದೇ ಇದ್ದಾಗ ಅವರನ್ನು ಸುಲಭವಾಗಿ ಶೋಷಿಸಬಹುದು ಎಂಬುದು ಅದರ ಲೆಕ್ಕಾಚಾರ ಎನ್ನುತ್ತಾರೆ ಅವರು.

ಎಸ್‌ಐಆರ್ ಮೂಲಕ ಏನೆಲ್ಲ ನಡೆಯುತ್ತಿದೆ ಎಂಬುದಕ್ಕೆ ಇದು ಕರಾಳ ನಿದರ್ಶನ.

share
ಎಸ್. ಸುದರ್ಶನ್
ಎಸ್. ಸುದರ್ಶನ್
Next Story
X