Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಒಳಮೀಸಲಾತಿ ರೋಸ್ಟರ್‌ನಲ್ಲಿ ಮತ್ತೊಂದು...

ಒಳಮೀಸಲಾತಿ ರೋಸ್ಟರ್‌ನಲ್ಲಿ ಮತ್ತೊಂದು ಎಡವಟ್ಟು: ಪ್ರವರ್ಗ ‘ಸಿ’ ಯಲ್ಲಿ ಅವಕಾಶದ ಅಸಮತೋಲನ

ರುದ್ರು ಪುನೀತ್ರುದ್ರು ಪುನೀತ್24 July 2026 11:44 AM IST
share
ಒಳಮೀಸಲಾತಿ ರೋಸ್ಟರ್‌ನಲ್ಲಿ ಮತ್ತೊಂದು ಎಡವಟ್ಟು: ಪ್ರವರ್ಗ ‘ಸಿ’ ಯಲ್ಲಿ ಅವಕಾಶದ ಅಸಮತೋಲನ

ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಯನ್ನು ಜಾರಿಗೊಳಿಸುವ ಬೇಡಿಕೆಯಲ್ಲಿ ಅದರ ಮೂಲ ಉದ್ದೇಶ ಸಾಮಾಜಿಕ ನ್ಯಾಯವನ್ನು ಇನ್ನಷ್ಟು ಬಲಪಡಿಸುವುದಾಗಿತ್ತು. 2024ರ ಆಗಸ್ಟ್ 1ರಂದು ಸುಪ್ರೀಂಕೋರ್ಟ್‌ನ ಒಂಭತ್ತು ನ್ಯಾಯಮೂರ್ತಿಗಳ ಪೀಠ ನೀಡಿದ ಐತಿಹಾಸಿಕ ತೀರ್ಪಿನ ನಂತರ ರಾಜ್ಯ ಸರಕಾರಗಳಿಗೆ ಪರಿಶಿಷ್ಟ ಜಾತಿಗಳಲ್ಲಿ ಉಪವರ್ಗೀಕರಣ ಮಾಡುವ ಅಧಿಕಾರ ದೊರೆಯಿತು. ಆದರೆ ನ್ಯಾಯಾಲಯ ಸ್ಪಷ್ಟವಾಗಿ ಒಂದು ಷರತ್ತನ್ನು ವಿಧಿಸಿತ್ತು. ಈ ವರ್ಗೀಕರಣವು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆಯ ವಸ್ತುನಿಷ್ಠ ಅಧ್ಯಯನದ ಆಧಾರದ ಮೇಲೆ ಇರಬೇಕು ಹಾಗೂ ಅದರ ಅನುಷ್ಠಾನವು ಸಂವಿಧಾನದ ಸಮಾನತೆಯ ತತ್ವಕ್ಕೆ ವಿರುದ್ಧವಾಗಿರಬಾರದು.

ಈ ತೀರ್ಪಿನ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರವು ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ಅವರ ನೇತೃತ್ವದ ಆಯೋಗವನ್ನು ರಚಿಸಿ, ಸಮೀಕ್ಷಾ ವರದಿಯನ್ನು ಆಧರಿಸಿ ಪರಿಶಿಷ್ಟ ಜಾತಿಗಳನ್ನು ಪ್ರವರ್ಗ ‘ಎ’, ‘ಬಿ’ ಮತ್ತು ‘ಸಿ’ ಎಂದು ವರ್ಗೀಕರಿಸಿತು.

ಆರಂಭದಲ್ಲಿ ರೋಸ್ಟರ್ ಕೋಷ್ಟಕದಲ್ಲಿ ಪ್ರವರ್ಗ ಎಗೆ ಮೊದಲ ಆದ್ಯತೆ, ಪ್ರವರ್ಗ ಬಿಗೆ 9ನೇ ಸ್ಥಾನ ಮತ್ತು ಪ್ರವರ್ಗ ಸಿಗೆ 15ನೇ ಸ್ಥಾನ ನೀಡಲಾಗಿತ್ತು ಮತ್ತು ರೋಸ್ಟರ್ ವಿನ್ಯಾಸದಲ್ಲಿನ ಎಡವಟ್ಟಿನಿಂದ ದೊಡ್ಡ ಪ್ರಮಾಣದ ಅಸಮಾನತೆ ಸೃಷ್ಟಿಯಾಗಿತ್ತು. ಒಂದು ಅಥವಾ ಎರಡು ಹುದ್ದೆಗಳಿದ್ದರೆ ಪ್ರವರ್ಗ ‘ಬಿ’ ಮತ್ತು ‘ಸಿ’ ಅಭ್ಯರ್ಥಿಗಳಿಗೆ ಸ್ಪರ್ಧಿಸುವ ಅವಕಾಶವೇ ದೊರೆಯುತ್ತಿರಲಿಲ್ಲ. ಈ ಗಂಭೀರ ಸಮಸ್ಯೆಯನ್ನು ಅನೇಕ ಸಂಘಟನೆಗಳು ಮತ್ತು ಸಮುದಾಯಗಳು ಎತ್ತಿಹಿಡಿದ ನಂತರ ಸರಕಾರವು ಒಂದು ತಿದ್ದುಪಡಿ ಮಾಡಿ, ಒಂದು ಅಥವಾ ಎರಡು ಹುದ್ದೆಗಳಿದ್ದರೆ ಅವುಗಳನ್ನು SC-General ಎಂದು ಪರಿಗಣಿಸಿ ಪರಿಶಿಷ್ಟ ಜಾತಿಯ ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೆ ಸ್ಪರ್ಧಿಸುವ ಅವಕಾಶ ನೀಡಿತು. ಇದು ಖಂಡಿತವಾಗಿಯೂ ಸ್ವಾಗತಾರ್ಹ ನಿರ್ಧಾರ.

ಆದರೆ ಈಗ ಪ್ರವರ್ಗ ‘ಸಿ’ಯೊಳಗೆ ಮತ್ತೊಂದು ಗಂಭೀರ ಸಮಸ್ಯೆ ಸೃಷ್ಟಿಯಾಗಿದೆ.

ನಾಗಮೋಹನ ದಾಸ್ ಆಯೋಗವು ಅಲೆಮಾರಿ ಸಮುದಾಯಗಳು ಅತ್ಯಂತ ಹಿಂದುಳಿದಿವೆ ಎಂದು ವರದಿ ನೀಡಿದ ಹಿನ್ನೆಲೆಯಲ್ಲಿ ಸರಕಾರವು ಪ್ರವರ್ಗ ‘ಸಿ’ಗೆ ಮೀಸಲಾಗುವ ಪ್ರತೀ ಐದು ಹುದ್ದೆಗಳಲ್ಲಿ ಒಂದು ಹುದ್ದೆಯನ್ನು ಅಲೆಮಾರಿ ಸಮುದಾಯಗಳಿಗೆ ನೀಡುವ ನಿಯಮ ರೂಪಿಸಿದೆ. ಉದ್ದೇಶ ಅತ್ಯಂತ ಹಿಂದುಳಿದ ಸಮುದಾಯಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವುದಾಗಿತ್ತು. ಆದರೆ ಈ ನಿಯಮವನ್ನು ಜಾರಿಗೊಳಿಸುವಾಗ ರೋಸ್ಟರ್ ವಿನ್ಯಾಸದಲ್ಲಿ ನಡೆದಿರುವ ತಾಂತ್ರಿಕ ದೋಷದಿಂದ ಈಗ ಮತ್ತೊಂದು ಅಸಮಾನತೆ ನಿರ್ಮಾಣವಾಗಿದೆ.

ಪ್ರವರ್ಗ ‘ಸಿ’ಗೆ ಕೇವಲ ಒಂದು ಹುದ್ದೆ ಮೀಸಲಾಗಿ ರುವ ಪ್ರತಿಯೊಂದು ನೇಮಕಾತಿಯಲ್ಲೂ ಆ ಹುದ್ದೆಯು ನೇರವಾಗಿ ಅಲೆಮಾರಿ ಸಮುದಾಯಗಳಿಗೆ ಹೋಗುತ್ತಿದೆ. ಪರಿಣಾಮವಾಗಿ ಪ್ರವರ್ಗ ‘ಸಿ’ಯಲ್ಲಿರುವ ಸುಮಾರು ಶೇ. 80ರಷ್ಟಿರುವ ಲಂಬಾಣಿ, ಭೋವಿ, ಕೊರಚ, ಕೊರಮ ಹಾಗೂ ಇತರ ಸಮುದಾಯಗಳ ಅಭ್ಯರ್ಥಿಗಳಿಗೆ ಸ್ಪರ್ಧಿಸುವ ಅವಕಾಶವೇ ದೊರೆಯುತ್ತಿಲ್ಲ.

ಇದು ಕೇವಲ ತಾಂತ್ರಿಕ ದೋಷವಲ್ಲ, ಇದು ಸಾಮಾಜಿಕ ನ್ಯಾಯದ ಪರಿಕಲ್ಪನೆಗೇ ವಿರುದ್ಧವಾದ ಬೆಳವಣಿಗೆಯಾಗಿದೆ.

ಸರಕಾರ ರೂಪಿಸಿರುವ ನೀತಿಯ ಪ್ರಕಾರ ಅಲೆಮಾರಿ ಸಮುದಾಯಗಳಿಗೆ ಶೇ. 20 ಆದ್ಯತೆ ನೀಡಬೇಕಾಗಿದೆ. ಆದರೆ ಒಂದು ಹುದ್ದೆಯೇ ಇದ್ದಾಗ ಆ ಒಂದೇ ಹುದ್ದೆಯನ್ನು ಶೇ. 20 ಮೀಸಲಾತಿಗೆ ನೀಡುವುದು, ಉಳಿದ ಶೇ. 80 ಸಮುದಾಯಗಳನ್ನು ಸಂಪೂರ್ಣವಾಗಿ ಹೊರಗಿಡುವುದು ನ್ಯಾಯಯುತ ಹಂಚಿಕೆ ಆಗುತ್ತದೆಯೇ?

ಶೇ. 20 ಮೀಸಲಾತಿ ಎನ್ನುವುದು ಐದು ಹುದ್ದೆಗಳ ಚಕ್ರದಲ್ಲಿ ಒಂದು ಹುದ್ದೆ ಎನ್ನುವ ಅರ್ಥ ನೀಡುತ್ತದೆ. ಆದರೆ ಒಂದು ಹುದ್ದೆಯನ್ನೇ ಶೇ. 100 ಎಂದು ಪರಿಗಣಿಸಿ ಪ್ರತೀ ಬಾರಿಯೂ ಅದನ್ನು ಅಲೆಮಾರಿ ಸಮುದಾಯಗಳಿಗೆ ನೀಡಿದರೆ, ಕಾಗದದಲ್ಲಿ ಶೇ. 20 ಇದ್ದರೂ ಅನುಷ್ಠಾನದಲ್ಲಿ ಅದು ಶೇ. 100 ಆಗುತ್ತದೆ. ಇದೇ ಈ ರೋಸ್ಟರ್ ವ್ಯವಸ್ಥೆಯ ಮೂಲ ದೋಷ.

ಇದರ ಪರಿಣಾಮವಾಗಿ ಲಂಬಾಣಿ, ಭೋವಿ, ಕೊರಚ, ಕೊರಮ ಸೇರಿದಂತೆ ಪ್ರವರ್ಗ ‘ಸಿ’ಯ ಬಹುಪಾಲು ಸಮುದಾಯಗಳ ಅಭ್ಯರ್ಥಿಗಳು ಆಯಾ ಹುದ್ದೆಗೆ ಅರ್ಜಿ ಹಾಕುವ ಅಥವಾ ಸ್ಪರ್ಧಿಸುವ ಎಲ್ಲಾ ಅರ್ಹತೆ ಇದ್ದರೂ ಅವರು ಅವಕಾಶದಿಂದ ವಂಚಿತರಾಗುತ್ತಿದ್ದಾರೆ.

ಇದು ಕೇವಲ ಉದ್ಯೋಗಕ್ಕೆ ಸೀಮಿತವಾಗಿಲ್ಲ. ವಿಶ್ವವಿದ್ಯಾನಿಲಯಗಳಲ್ಲಿ ಪಿಎಚ್.ಡಿ. ಪ್ರವೇಶ, ವೈದ್ಯಕೀಯ ಕ್ಷೇತ್ರದ ಎಂ.ಡಿ./ಎಂ.ಎಸ್. ಸೀಟುಗಳು, ವಿಭಾಗವಾರು ಬೋಧಕ ಹುದ್ದೆಗಳು, ತಾಂತ್ರಿಕ ಶಿಕ್ಷಣ ಸಂಸ್ಥೆಗಳ ನೇಮಕಾತಿಗಳು ಸೇರಿದಂತೆ ಕಡಿಮೆ ಸಂಖ್ಯೆಯ ಹುದ್ದೆಗಳಿರುವ ಎಲ್ಲ ಕ್ಷೇತ್ರಗಳಲ್ಲೂ ಇದೇ ಸಮಸ್ಯೆ ಎದುರಾಗುತ್ತಿದೆ. ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ KRIES ವಸತಿ ವಿದ್ಯಾನಿಲಯಗಳಲ್ಲಿಯೂ ಈ ಸಮಸ್ಯೆ ಕಂಡುಬರುತ್ತಿವೆ.

ಸಂವಿಧಾನದ ಆರ್ಟಿಕಲ್ 14 ಎಲ್ಲರಿಗೂ ಸಮಾನತೆಯ ಹಕ್ಕನ್ನು ನೀಡುತ್ತದೆ. ಆರ್ಟಿಕಲ್ 15(4) ಮತ್ತು 16(4) ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ವಿಶೇಷ ಸೌಕರ್ಯ ಒದಗಿಸಲು ಅವಕಾಶ ನೀಡುತ್ತವೆ. ಆದರೆ ಆ ವಿಶೇಷ ವ್ಯವಸ್ಥೆ ಮತ್ತೊಂದು ಅಸಮಾನತೆಯನ್ನು ಸೃಷ್ಟಿಸಬಾರದು. ಮೀಸಲಾತಿಯ ಉದ್ದೇಶ ಸಮರ್ಪಕ ಪ್ರಾತಿನಿಧ್ಯ ಸಾಧಿಸುವುದೇ ಹೊರತು, ಒಂದು ವರ್ಗದೊಳಗಿನ ಬಹುಪಾಲು ಸಮುದಾಯಗಳನ್ನು ಸಂಪೂರ್ಣವಾಗಿ ಹೊರಗಿಡುವುದಲ್ಲ.

ಸಂವಿಧಾನದ ಆರ್ಟಿಕಲ್ 38 ಮತ್ತು ಆರ್ಟಿಕಲ್ 46 ಕೂಡ ರಾಜ್ಯವು ದುರ್ಬಲ ವರ್ಗಗಳ ಹಿತಾಸಕ್ತಿಯನ್ನು ಕಾಪಾಡುವಾಗ ಸಮತೋಲನ ಮತ್ತು ನ್ಯಾಯವನ್ನು ಅನುಸರಿಸಬೇಕು ಎಂಬುದನ್ನು ಒತ್ತಿ ಹೇಳುತ್ತವೆ. ಹೀಗಾಗಿ ಸರಕಾರವು ಈ ಸಮಸ್ಯೆಯನ್ನು ತಕ್ಷಣ ಗಂಭೀರವಾಗಿ ಪರಿಗಣಿಸಬೇಕು.

ಮೊದಲನೆಯದಾಗಿ, ಪ್ರವರ್ಗ ‘ಸಿ’ಯಲ್ಲಿ ಐದು ಹುದ್ದೆಗಳ ರೋಸ್ಟರ್ ಚಕ್ರವನ್ನು ಪೂರ್ಣಗೊಳಿಸಿದ ನಂತರವೇ 20:80 ಅನುಪಾತವನ್ನು ಅನ್ವಯಿಸಬೇಕು.

ಎರಡನೆಯದಾಗಿ, ಒಂದು ಅಥವಾ ಎರಡು ಹುದ್ದೆಗಳಿದ್ದರೆ ಅವುಗಳನ್ನು SC-C General ಎಂದು ಪರಿಗಣಿಸಿ ಪ್ರವರ್ಗ ಸಿಯ ಎಲ್ಲ ಸಮುದಾಯಗಳ ಅಭ್ಯರ್ಥಿಗಳಿಗೆ ಸ್ಪರ್ಧಿಸುವ ಅವಕಾಶ ನೀಡಬೇಕು.

ಮೂರನೆಯದಾಗಿ, ವಿಭಾಗವಾರು ಸಣ್ಣಸಣ್ಣ ನೇಮಕಾತಿಗಳ ಬದಲು ಇಲಾಖೆ ಅಥವಾ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಹುದ್ದೆಗಳನ್ನು ಒಟ್ಟುಗೂಡಿಸಿ ನೇಮಕಾತಿ ನಡೆಸಬೇಕು. ಆಗ ಮಾತ್ರ ನಿಜವಾದ ಅನುಪಾತವನ್ನು ಪಾಲಿಸಲು ಸಾಧ್ಯವಾಗುತ್ತದೆ.

ಸಾಮಾಜಿಕ ನ್ಯಾಯ ಎಂದರೆ ಒಂದು ಸಮುದಾಯಕ್ಕೆ ನ್ಯಾಯ ಕೊಡಲು ಮತ್ತೊಂದು ಸಮುದಾಯದ ಅವಕಾಶವನ್ನು ಕಸಿದುಕೊಳ್ಳುವುದು ಅಲ್ಲ. ಅತೀ ಹಿಂದುಳಿದಿರುವ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎನ್ನುವುದು ಎಷ್ಟು ನ್ಯಾಯಯುತ ಬೇಡಿಕೆಯೋ, ಪ್ರವರ್ಗ ‘ಸಿ’ಯಲ್ಲಿರುವ ಉಳಿದ ಸಮುದಾಯಗಳಿಗೂ ಸಮಾನ ಅವಕಾಶ ದೊರೆಯಬೇಕು ಎನ್ನುವುದು ಕೂಡ ನ್ಯಾಯಯುತ ಬೇಡಿಕೆಯೇ ಆಗುತ್ತದೆ. ಹಾಗಾಗಿಯೇ ಆರ್ಟಿಕಲ್ 16(1) ರಾಜ್ಯದ ಅಧೀನದಲ್ಲಿರುವ ಯಾವುದೇ ಹುದ್ದೆ ಅಥವಾ ಉದ್ಯೋಗಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಎಲ್ಲ ನಾಗರಿಕರಿಗೂ ಸಮಾನ ಅವಕಾಶ ಇರಬೇಕು ಎಂದು ಹೇಳುತ್ತದೆ.

ಆರ್ಟಿಕಲ್ 16(4) ಸರಕಾರಿ ಉದ್ಯೋಗಗಳಲ್ಲಿ ಸಮರ್ಪಕ ಪ್ರಾತಿನಿಧ್ಯ ಇರಬೇಕು ಎಂದು ಸಾರುತ್ತದೆ.

ಆದ್ದರಿಂದ ಸರಕಾರವು ಪ್ರವರ್ಗ ‘ಸಿ’ ರೋಸ್ಟರ್ ವ್ಯವಸ್ಥೆಯನ್ನು ಕೂಡಲೇ ಮರುಪರಿಶೀಲಿಸಿ, ಎಲ್ಲರಿಗೂ ಸ್ಪರ್ಧಿಸುವ ಸಮಾನ ಅವಕಾಶ ಸಿಗುವ ಹಾಗೆ ತಿದ್ದುಪಡಿ ಮಾಡಬೇಕು. ಇಲ್ಲವಾದರೆ ಒಳಮೀಸಲಾತಿಯ ಉದ್ದೇಶ ಸಾಮಾಜಿಕ ನ್ಯಾಯವನ್ನು ಸಾಧಿಸುವ ಬದಲು, ಪ್ರವರ್ಗ ‘ಸಿ’ಯೊಳಗೇ ಹೊಸ ಅಸಮಾನತೆಯನ್ನು ಸೃಷ್ಟಿಸಿದಂತಾಗುತ್ತದೆ.

Tags

Internal reservation
share
ರುದ್ರು ಪುನೀತ್
ರುದ್ರು ಪುನೀತ್
Next Story
X