Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಜಪಾನ್‌ನ ‘ವೈಪರ್ ಝೀರೋ’ ಆಗಮನಕ್ಕೆ...

ಜಪಾನ್‌ನ ‘ವೈಪರ್ ಝೀರೋ’ ಆಗಮನಕ್ಕೆ ಸಜ್ಜಾದ ಭಾರತ

ಗಿರೀಶ್ ಲಿಂಗಣ್ಣಗಿರೀಶ್ ಲಿಂಗಣ್ಣ6 Sept 2026 11:44 AM IST
share
ಜಪಾನ್‌ನ ‘ವೈಪರ್ ಝೀರೋ’ ಆಗಮನಕ್ಕೆ ಸಜ್ಜಾದ ಭಾರತ

‘ವೈಪರ್ ಝೀರೋ’ ಎನ್ನುವ ಹೆಸರು ಹೊಂದಿರುವ ಈ ಬಹುಪಾತ್ರಗಳ ಯುದ್ಧ ವಿಮಾನವನ್ನು ಲಾಕ್‌ಹೀಡ್ ಮಾರ್ಟಿನ್ ಮತ್ತು ಮಿತ್ಸುಬಿಷಿ ಹೆವಿ ಇಂಡಸ್ಟ್ರೀಸ್ ಜಂಟಿಯಾಗಿ ನಿರ್ಮಿಸಿವೆ. ಇದನ್ನು 1980ರ ದಶಕದ ಕೊನೆಯ ಭಾಗದಲ್ಲಿ ಮತ್ತು 1990ರ ದಶಕದಲ್ಲಿ ಅಮೆರಿಕನ್ ಎಫ್-16 ಫೈಟಿಂಗ್ ಫಾಲ್ಕನ್‌ನಿಂದ ಅಭಿವೃದ್ಧಿ ಪಡಿಸಲಾಗಿದ್ದು, ಇದರ ವೆಚ್ಚದಲ್ಲಿ ಶೇ.60 ಪಾಲನ್ನು ಜಪಾನ್ ಹೂಡಿಕೆ ಮಾಡಿದೆ. ಇದರ ಅಡ್ಡ ಹೆಸರು ಎಫ್-16 ವೈಪರ್ ಮತ್ತು ಹಳೆಯ ಮಿತ್ಸುಬಿಷಿ ಝೀರೋ ಜೊತೆಗಿನ ಹೋಲಿಕೆಯಿಂದ ಬಂದಿದೆ. ಒಟ್ಟಾರೆಯಾಗಿ, 94 ವಿಮಾನಗಳು 2000ದಿಂದ 2011ರ ನಡುವೆ ನಿರ್ಮಿತವಾಗಿವೆ.

ಮುಂದಿನ ತಿಂಗಳು ರಾಜಸ್ಥಾನದ ಆಗಸದಲ್ಲಿ ಒಂದು ಹೊಸ ಬೆಳವಣಿಗೆ ನಡೆಯಲಿದೆ. ಇದೇ ಮೊದಲ ಬಾರಿಗೆ, ಜಪಾನ್ ಏರ್ ಸೆಲ್ಫ್ ಡಿಫೆನ್ಸ್ ಫೋರ್ಸ್ (ಜೆಎಎಸ್‌ಡಿಎಫ್) ಪಡೆಯ ಯುದ್ಧ ವಿಮಾನಗಳು ಇದೇ ಮೊದಲ ಬಾರಿಗೆ ಭಾರತೀಯ ವಾಯು ಸೇನೆಯೊಡನೆ ಅಭ್ಯಾಸ ನಡೆಸುವ ಸಲುವಾಗಿ ಭಾರತಕ್ಕೆ ಆಗಮಿಸಲಿವೆ. ಭಾರತ-ಜಪಾನ್ ಸ್ನೇಹ ಬೆಳೆಯುತ್ತಿದ್ದು, ಉಭಯ ದೇಶಗಳು ರಕ್ಷಣಾ ಕ್ಷೇತ್ರದಲ್ಲಿ ಪರಸ್ಪರ ಆಳವಾದ ವಿಶ್ವಾಸ ಹೊಂದಿರುವುದಕ್ಕೆ ಇದು ಸಾಕ್ಷಿಯಾಗಿದೆ.

ಆಗಸ್ಟ್ 25ರಂದು, ಜೆಎಎಸ್‌ಡಿಎಫ್ ವೀರ್ ಗಾರ್ಡಿಯನ್ 26 ಹೆಸರಿನ ಜಂಟಿ ಅಭ್ಯಾಸವನ್ನು ಘೋಷಿಸಿತು. ಈ ಸಮರಾಭ್ಯಾಸ ಸೆಪ್ಟಂಬರ್ 9ರಿಂದ 21ರ ತನಕ ವಾಯವ್ಯ ಭಾರತದ ರಾಜಸ್ಥಾನದ ಜೋಧ್‌ಪುರ ವಾಯು ಸೇನಾ ನೆಲೆ ಮತ್ತು ಸುತ್ತಲಿನ ವಾಯು ಪ್ರದೇಶದಲ್ಲಿ ನೆರವೇರಲಿದೆ. ಭಾರತಕ್ಕೆ ಆಗಮಿಸುವ ಮತ್ತು ಮರಳುವ ಸಮಯವನ್ನು ಲೆಕ್ಕ ಹಾಕಿದರೆ, ಜಪಾನ್ ತಂಡ ಸೆಪ್ಟಂಬರ್ 1ರಿಂದ 30ರ ತನಕ ದೇಶದಿಂದ ಹೊರಗಿರಲಿದೆ.

ಜಪಾನ್ ತನ್ನ ನೈಋತ್ಯ ಭಾಗದ ಫುಕುವೊಕಾ ಪ್ರಿಫೆಕ್ಚರ್‌ನ ಸುಯ್ಕಿ ವಾಯುನೆಲೆಯಲ್ಲಿರುವ 8ನೇ ಏರ್ ವಿಂಗ್‌ನಿಂದ ಮೂರು ಎಫ್-2ಎ ಯುದ್ಧ ವಿಮಾನಗಳನ್ನು ಕಳುಹಿಸಲಿದೆ. ಇದರೊಡನೆ, ಅಂದಾಜು 110 ಸಿಬ್ಬಂದಿ ಆಗಮಿಸಲಿದ್ದಾರೆ. ಈ ತರಬೇತಿ ಬಹುತೇಕ ಯುದ್ಧ ವಿಮಾನಗಳ ನಡುವಿನ ವಾಯು ಯುದ್ಧವನ್ನು ಕೇಂದ್ರೀಕರಿಸಿರಲಿದೆ. ಅಂದರೆ, ಇದು ಡಾಗ್ ಫೈಟ್ ಅಭ್ಯಾಸವಾಗಿರಲಿದ್ದು, ಪೈಲಟ್‌ಗಳು ಇನ್ನೊಂದು ತಂಡ ಹೇಗೆ ಹಾರಾಟ ನಡೆಸುತ್ತದೆ ಎನ್ನುವುದನ್ನು ಕಲಿಯಲಿದ್ದಾರೆ.

ವೀರ್ ಗಾರ್ಡಿಯನ್ 26 ಉಭಯ ದೇಶಗಳ ನಡುವಿನ ಎರಡನೇ ಜಂಟಿ ಅಭ್ಯಾಸವಾಗಿದೆ ಎಂದು ಜೆಎಎಸ್‌ಡಿಎಫ್ ವಕ್ತಾರರು ಹೇಳಿದ್ದಾರೆ. ಮೊದಲ ಜಂಟಿ ಅಭ್ಯಾಸವಾದ ವೀರ್ ಗಾರ್ಡಿಯನ್ 23 ಜಪಾನ್‌ನಲ್ಲಿ ಜನವರಿ 2023ರಲ್ಲಿ ನಡೆದಿತ್ತು. ಆ ಸಂದರ್ಭದಲ್ಲಿ ಭಾರತೀಯ ವಾಯು ಸೇನೆ ಜಪಾನ್‌ಗೆ ನಾಲ್ಕು ಸು-30ಎಂಕೆಐ ಯುದ್ಧ ವಿಮಾನಗಳು, ಎರಡು ಸಿ-17 ಸಾಗಣೆ ವಿಮಾನಗಳು, ಒಂದು ಐಎಲ್-78 ಹಾರಾಟದ ಮಧ್ಯ ತೈಲ ಮರುಪೂರಣ ವಿಮಾನ ಮತ್ತು ಅಂದಾಜು 150 ಸಿಬ್ಬಂದಿಯನ್ನು ಕಳುಹಿಸಿತ್ತು. ಜಪಾನ್ ತನ್ನ ನಾಲ್ಕು ಎಫ್-2 ಮತ್ತು ನಾಲ್ಕು ಎಫ್-15 ಯುದ್ಧ ವಿಮಾನಗಳೊಡನೆ ಪಾಲ್ಗೊಂಡಿತ್ತು. ಈಗ ಮೂರು ವರ್ಷಗಳ ಬಳಿಕ ಅಭ್ಯಾಸದ ಆತಿಥ್ಯವನ್ನು ಭಾರತ ವಹಿಸಿಕೊಂಡಿದೆ.

ಇಲ್ಲಿ ಪ್ರಯಾಣವೂ ಬಹಳ ಮುಖ್ಯವಾದ ಭಾಗವಾಗಿದೆ. ಮೂರು ಎಫ್-2ಎ ಯುದ್ಧ ವಿಮಾನಗಳು ಸುಯ್ಕಿ ವಾಯು ನೆಲೆಯಿಂದ ಜೋಧ್‌ಪುರಕ್ಕೆ ಪ್ರಯಾಣ ಬೆಳೆಸಲಿದ್ದು, ಓಕಿನಾವಾದ ನಾಹಾ ವಾಯುನೆಲೆ ಮತ್ತು ಥಾಯ್ಲೆಂಡ್‌ನ ಒಂದು ವಾಯುನೆಲೆಯಲ್ಲಿ ನಿಲುಗಡೆ ಹೊಂದಲಿವೆ. ದಾರಿಯಲ್ಲಿ ಅಮೆರಿಕನ್ ವಾಯು ಸೇನೆ ನೆರವು ನೀಡಲಿದ್ದು, ಮಾರ್ಗ ಮಧ್ಯದಲ್ಲಿ ಇಂಧನ ಮರುಪೂರಣ ನಡೆಸಲಿದೆ. ಜೆಎಎಸ್‌ಡಿಎಫ್ ತಾನು ಥಾಯ್ಲೆಂಡ್‌ನ ಯಾವ ವಾಯುನೆಲೆಯನ್ನು ಬಳಸುತ್ತೇನೆ ಎಂಬುದನ್ನು ಮತ್ತು ಅಮೆರಿಕದ ಯಾವ ಟ್ಯಾಂಕರ್ ಇಂಧನ ಮರುಪೂರಣ ನಡೆಸುತ್ತದೆ ಎನ್ನುವುದನ್ನು ಸ್ಪಷ್ಟಪಡಿಸಿಲ್ಲ.

ಜೋಧ್‌ಪುರ ಸುಯ್ಕಿ ವಾಯುನೆಲೆಯಿಂದ ನೇರ ರೇಖೆಯಲ್ಲಿ ಅಂದಾಜು 5,600 ಕಿಲೋಮೀಟರ್ ದೂರದಲ್ಲಿದೆ. ಈ ಅಂತರ್‌ಯುದ್ಧ ವಿಮಾನಗಳನ್ನು ದೇಶದಿಂದ ದೂರ ಕಳುಹಿಸುವುದು ಎಷ್ಟು ಕಷ್ಟಕರ ಎನ್ನುವುದನ್ನು ತೋರಿಸುತ್ತದೆ. ಆಗಸ್ಟ್ 25ರಂದು ಟೋಕಿಯೋದಲ್ಲಿ ಮಾತನಾಡಿದ ಜೆಎಎಸ್‌ಡಿಎಫ್ ಚೀಫ್ ಆಫ್ ಸ್ಟಾಫ್ ಜನರಲ್ ಮೊರಿಟಾ ಟಕೆಹಿರೊ ಅವರು ಇಂತಹ ನಿಯೋಜನೆಗಳು ಏಕೆ ಮುಖ್ಯ ಎನ್ನುವುದನ್ನು ವಿವರಿಸಿದ್ದಾರೆ.

ದೂರದ ಪ್ರದೇಶಗಳಿಗೆ ಯುದ್ಧ ವಿಮಾನಗಳನ್ನು ಕಳುಹಿಸು ವುದು ಕೇವಲ ದೂರದ ಪ್ರದೇಶಕ್ಕೆ ಹಾರಾಟ ನಡೆಸುವುದು ಮಾತ್ರವಲ್ಲ ಎಂದು ಅವರು ಹೇಳಿದ್ದಾರೆ. ಇದಕ್ಕಾಗಿ ಸರಿಯಾದ ವಿಮಾನ ನಿರ್ವಹಣೆ, ಸುಗಮ ಲಾಜಿಸ್ಟಿಕ್ಸ್ ಮತ್ತು ಸಿಬ್ಬಂದಿಯ ಸಂಚಾರ ನಡೆಸಬೇಕಾಗುತ್ತದೆ. ಇಲ್ಲಿ ಪ್ರತಿಯೊಂದು ಅಂಶವನ್ನೂ ಸರಿಯಾದ ರೀತಿಯಲ್ಲಿ ಯೋಜಿಸಿ ನಿರ್ವಹಿಸಬೇಕಾಗುತ್ತದೆ. ಇದು ಒಂದು ರೀತಿಯಲ್ಲಿ ಕುಟುಂಬವೊಂದು ವಿದೇಶಕ್ಕೆ ಮನೆಯನ್ನು ಸ್ಥಳಾಂತರಿಸುವಂತಿದ್ದು, ಇಲ್ಲಿ ಲಗೇಜ್‌ಗಳಲ್ಲಿ ವಿಮಾನದ ಬಿಡಿಭಾಗಗಳು, ಉಪಕರಣಗಳು ಮತ್ತು ಇಂಧನಗಳು ಸೇರಿವೆ. ಇಂತಹ ಅನುಭವಗಳು ತಂಡಕ್ಕೆ ಯೋಜನೆಗಳನ್ನು ಯಶಸ್ವಿಯಾಗಿ ನಡೆಸಲು ನೆರವಾಗುತ್ತವೆ.

ಇಂತಹ ಸುದೀರ್ಘ ಯೋಜನೆಗಳನ್ನು ನಡೆಸುವಾಗ ಜೆಎಎಸ್‌ಡಿಎಫ್ ಕೆಟ್ಟ ಹವಾಮಾನ ಅಥವಾ ತಾಂತ್ರಿಕ ವೈಫಲ್ಯಗಳಂತಹ ಅನಿರೀಕ್ಷಿತ ತೊಂದರೆಗಳಿಗೆ ಸಿದ್ಧವಾಗಿರಬೇಕು. ಹಿಂದಿನ ದೂರ ಪ್ರದೇಶಗಳ ಕಾರ್ಯಾಚರಣೆಗಳಿಂದ ಕಲಿತ ಪಾಠಗಳನ್ನು ಇಲ್ಲಿ ಬಳಸಲಾಗುತ್ತದೆ ಎಂದು ಮೊರಿಟಾ ಹೇಳಿದ್ದಾರೆ. ಹೆಚ್ಚುವರಿ ವಿಮಾನಗಳನ್ನು ಹೊಂದಿಸಲಾಗುತ್ತಿದೆ, ಮರುಪೂರಣ ಬೆಂಬಲ ಸುಧಾರಿಸಲಾಗುತ್ತಿದೆ, ನಿಲುಗಡೆ ತಾಣಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ಭಾಗಿಯಾಗುವ ಎಲ್ಲ ದೇಶಗಳೊಡನೆ ಸಮನ್ವಯ ಸಾಧಿಸಲಾಗುತ್ತಿದೆ.

ಉಭಯ ದೇಶಗಳು ಚೀನಾದ ಕುರಿತು ಆತಂಕ ಹೊಂದಿರುವ ಸಮಯದಲ್ಲಿ ಈ ಜಂಟಿ ಅಭ್ಯಾಸ ನಡೆದಿದೆ. ಜಪಾನ್ ತನ್ನ ನೈಋತ್ಯ ಭಾಗದ ದ್ವೀಪಗಳ ಬಳಿಯ ಸೌತ್ ಚೀನಾ ಸಮುದ್ರದಲ್ಲಿ ಚೀನೀ ಮಿಲಿಟರಿ ಚಟುವಟಿಕೆಗಳಿಂದ ತೊಂದರೆಗೊಳಗಾಗಿದೆ. ಇನ್ನು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಈಗ ಫಸ್ಟ್ ಐಲ್ಯಾಂಡ್ ಚೇನ್, ಅಂದರೆ ಚೀನಾದ ಕರಾವಳಿಗೆ ಸನಿಹದಲ್ಲಿರುವ ದ್ವೀಪಗಳಾಚೆಗೆ, ಪಶ್ಚಿಮ ಪೆಸಿಫಿಕ್ ಪ್ರದೇಶದಲ್ಲಿ ಕಾರ್ಯಾಚರಣೆ ಆರಂಭಿಸಿದೆ. ಇನ್ನೊಂದೆಡೆ ಭಾರತ ಹಿಮಾಲಯ ಪ್ರದೇಶದಲ್ಲಿ ಚೀನಾದೊಡನೆ ಸುದೀರ್ಘ ಗಡಿ ವಿವಾದವನ್ನು ಹೊಂದಿದೆ.

ಈ ನಿಯೋಜನೆಯ ಬಹುಮುಖ್ಯ ಭಾಗವಾಗಿರುವುದು ಮಿತ್ಸುಬಿಷಿ ಎಫ್-2ಎ. ‘ವೈಪರ್ ಝೀರೋ’ ಎನ್ನುವ ಹೆಸರು ಹೊಂದಿರುವ ಈ ಬಹುಪಾತ್ರಗಳ ಯುದ್ಧ ವಿಮಾನವನ್ನು ಲಾಕ್‌ಹೀಡ್ ಮಾರ್ಟಿನ್ ಮತ್ತು ಮಿತ್ಸುಬಿಷಿ ಹೆವಿ ಇಂಡಸ್ಟ್ರೀಸ್ ಜಂಟಿಯಾಗಿ ನಿರ್ಮಿಸಿವೆ. ಇದನ್ನು 1980ರ ದಶಕದ ಕೊನೆಯ ಭಾಗದಲ್ಲಿ ಮತ್ತು 1990ರ ದಶಕದಲ್ಲಿ ಅಮೆರಿಕನ್ ಎಫ್-16 ಫೈಟಿಂಗ್ ಫಾಲ್ಕನ್‌ನಿಂದ ಅಭಿವೃದ್ಧಿ ಪಡಿಸಲಾಗಿದ್ದು, ಇದರ ವೆಚ್ಚದಲ್ಲಿ ಶೇ. 60 ಪಾಲನ್ನು ಜಪಾನ್ ಹೂಡಿಕೆ ಮಾಡಿದೆ. ಇದರ ಅಡ್ಡ ಹೆಸರು ಎಫ್-16 ವೈಪರ್ ಮತ್ತು ಹಳೆಯ ಮಿತ್ಸುಬಿಷಿ ಝೀರೋ ಜೊತೆಗಿನ ಹೋಲಿಕೆಯಿಂದ ಬಂದಿದೆ. ಒಟ್ಟಾರೆಯಾಗಿ, 94 ವಿಮಾನಗಳು 2000ದಿಂದ 2011ರ ನಡುವೆ ನಿರ್ಮಿತವಾಗಿವೆ.

ಈ ಯುದ್ಧ ವಿಮಾನವನ್ನು ವಿಶೇಷವಾಗಿಸುವುದೇನು? ಇದರ ರೆಕ್ಕೆಗಳು ಸಾಮಾನ್ಯ ಎಫ್-16 ವಿಮಾನದ ರೆಕ್ಕೆಗಳಿಂದ ಶೇ. 25 ದೊಡ್ಡವಾಗಿದ್ದು, ವಿಮಾನಕ್ಕೆ ಹೆಚ್ಚಿನ ಎತ್ತುವಿಕೆ, ಹೆಚ್ಚಿನ ಇಂಧನ ಮತ್ತು ಹೆಚ್ಚು ಸಂಗ್ರಹಣಾ ಸ್ಥಳಗಳನ್ನು ಒದಗಿಸುತ್ತವೆ. ಈ ರೆಕ್ಕೆಗಳು ಹಗುರವಾದರೂ ಗಟ್ಟಿಯಾದ ಕಾರ್ಬನ್ ಫೈಬರ್‌ನಿಂದ ನಿರ್ಮಿತವಾಗಿವೆ. ಇದು ಜಪಾನೀ ನಿರ್ಮಾಣದ ಜೆ/ಎಪಿಜಿ-1, ಬಳಿಕ ಜೆ/ಎಪಿಜಿ-2 ಮತ್ತು ಆಧುನಿಕವಾದ, ಏಕಕಾಲದಲ್ಲಿ ಎಲ್ಲ ಗುರಿಗಳನ್ನು ಗಮನಿಸಬಲ್ಲ, ಜಗತ್ತಿನ ಮೊದಲ ಹಂತದ ಎಇಎಸ್‌ಎ ರೇಡಾರ್‌ಗಳನ್ನು ಹೊಂದಿದೆ. ಇದು 11 ಹಾರ್ಡ್ ಪಾಯಿಂಟ್‌ಗಳು, ಅಂದರೆ ರೆಕ್ಕೆಯ ಕೆಳಗೆ ಕ್ಷಿಪಣಿಗಳು ಮತ್ತು ಬಾಂಬ್‌ಗಳನ್ನು ಅಳವಡಿಸುವ ಜಾಗಗಳನ್ನು ಹೊಂದಿವೆ. ಇದು ಬೃಹತ್ ಆ್ಯಂಟಿ ಶಿಪ್ ಕ್ಷಿಪಣಿಗಳು ಮತ್ತು ಏರ್ ಟು ಏರ್ ಆಯುಧಗಳನ್ನು ಹೊಂದಿದೆ.

ಎಫ್-2ಎ ಒಂಟಿ ಜನರಲ್ ಇಲೆಕ್ಟ್ರಿಕ್ ಎಫ್-110-ಜಿಇ- 129 ಟರ್ಬೋಫ್ಯಾನ್ ಇಂಜಿನ್ ಹೊಂದಿದ್ದು, ಆಫ್ಟರ್‌ಬರ್ನರ್ ಜೊತೆ 29,000 ಪೌಂಡ್ ಥ್ರಸ್ಟ್ ಉತ್ಪಾದಿಸುತ್ತದೆ. ಇದನ್ನು ಜಪಾನಿನಲ್ಲಿ ಐಎಚ್‌ಐ ಉತ್ಪಾದಿಸಿದೆ. ಇದು ಹೆಚ್ಚಿನ ಎತ್ತರಗಳಲ್ಲಿ ಮ್ಯಾಕ್ 2.0 ವೇಗದಲ್ಲಿ ಸಾಗಬಲ್ಲದಾಗಿದ್ದು, 4.5ನೇ ತಲೆಮಾರಿನ ವಿಮಾನವಾಗಿದೆ. ಇದು ಆಧುನಿಕ ವಿಮಾನವಾದರೂ, ಅತ್ಯಾಧುನಿಕ ಸ್ಟೆಲ್ತ್ ವ್ಯವಸ್ಥೆ ಹೊಂದಿಲ್ಲ. ಇದರ ಮುಖ್ಯ ಉದ್ದೇಶ ಸಮುದ್ರ ದಾಳಿ ಮತ್ತು ವಾಯು ರಕ್ಷಣೆ ನಡೆಸಿ, ಜಪಾನ್‌ನ ಸಮುದ್ರಗಳನ್ನು ರಕ್ಷಿಸುವುದಾಗಿದೆ.

ಸೆಪ್ಟಂಬರ್‌ನಲ್ಲಿ ಈ ಯುದ್ಧ ವಿಮಾನಗಳು ಜೋಧ್‌ಪುರದಲ್ಲಿ ಇಳಿದಾಗ, ಅದು ಕೇವಲ ಜಂಟಿ ಅಭ್ಯಾಸವಷ್ಟೇ ಆಗಿರುವುದಿಲ್ಲ. ಇದು ಎರಡು ಏಶ್ಯನ್ ಪ್ರಜಾಪ್ರಭುತ್ವಗಳು ಜೊತೆಯಾಗಿ ನಿಲ್ಲುವ ನಿರ್ಧಾರಕ್ಕೆ ಸಾಕ್ಷಿಯಾಗಿರಲಿದೆ.

Tags

IndiaJapan
share
ಗಿರೀಶ್ ಲಿಂಗಣ್ಣ
ಗಿರೀಶ್ ಲಿಂಗಣ್ಣ
Next Story
X