Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸಮಾನತೆ, ನೀತಿ ನಿಖರತೆ ಮತ್ತು ಸಾಮಾಜಿಕ...

ಸಮಾನತೆ, ನೀತಿ ನಿಖರತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಭಾರತ 2026ರಲ್ಲಿ ಜಾತಿ ಜನಗಣತಿ ನಡೆಸಬೇಕು

ಕೆ.ಎನ್. ಲಿಂಗಪ್ಪಕೆ.ಎನ್. ಲಿಂಗಪ್ಪ25 May 2025 9:52 AM IST
share
ಸಮಾನತೆ, ನೀತಿ ನಿಖರತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಭಾರತ 2026ರಲ್ಲಿ ಜಾತಿ ಜನಗಣತಿ ನಡೆಸಬೇಕು

ಜಾತಿ ಜನಗಣತಿಯು ಭೂತಕಾಲಕ್ಕೆ ಸರಿಯುವ ಹೆಜ್ಜೆಯಲ್ಲ. ಇದು ಹೆಚ್ಚು ಮಾಹಿತಿಯುಕ್ತ ಸಮಾನ ಮತ್ತು ಎಲ್ಲರನ್ನೂ ಒಳಗೊಂಡ ಭವಿಷ್ಯದತ್ತ ಜಿಗಿಯುವುದಾಗಿದೆ. ಅದಿಲ್ಲದಿದ್ದರೆ, ಭಾರತದ ಸಾಮಾಜಿಕ ನೀತಿಗಳು ಕತ್ತಲೆಯಲ್ಲಿ ಕಾರ್ಯನಿರ್ವಹಿಸುತ್ತಲೇ ಇರುತ್ತವೆ, ವಿಶೇಷ ಹಕ್ಕುಗಳನ್ನು ಬಯಸುವವರ ಕೈ ಬಲಪಡಿಸುತ್ತವೆ ಮತ್ತು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತವೆ.

ನೂರಾನಲುವತ್ತು ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತವು ವಿಶ್ವದಲ್ಲಿಯೇ ಸಾಮಾಜಿಕವಾಗಿ ಅತ್ಯಂತ ವೈವಿಧ್ಯಮಯ ರಾಷ್ಟ್ರಗಳಲ್ಲಿ ಒಂದಾಗಿದೆ. ಭಾರತೀಯ ಸಾಮಾಜಿಕ ರಚನೆಯು ಜಾತಿಯಲ್ಲಿ ಆಳವಾಗಿ ಬೇರೂರಿದೆ, ಇದು ಆಧುನಿಕ ಆಳ್ವಿಕೆಗಿಂತ ಹಿಂದಿನ ರಚನಾ ಕ್ರಮವಾಗಿದೆ, ಆದರೆ ರಾಜಕೀಯ, ಅರ್ಥಶಾಸ್ತ್ರ, ಶಿಕ್ಷಣ ಮತ್ತು ಪ್ರವೇಶಾವಕಾಶದ ಮೇಲೆ ಪ್ರಭಾವ ಬೀರುತ್ತಿದೆ. ಅದರ ಮಹತ್ವದ ಹೊರತಾಗಿಯೂ ಭಾರತವು 1931ರಿಂದ ಸಮಗ್ರ ಜಾತಿ ಜನಗಣತಿಯನ್ನು ನಡೆಸಿಲ್ಲ. ಈ ವಿರೋಧಾಭಾಸವನ್ನು ಎದುರಿಸಲು ಮತ್ತು ದಶವಾರ್ಷಿಕ ಜನಗಣತಿಯ ಭಾಗವಾಗಿ 2026ರಲ್ಲಿ ಜಾತಿ ಜನಗಣತಿಯನ್ನು ನಡೆಸುವ ಸಮಯ ಬಂದಿದೆ. ಅಂತಹ ಕ್ರಮವು ಪಾರದರ್ಶಕತೆ, ಸಮಾನತೆ ಮತ್ತು ಪುರಾವೆ ಆಧಾರಿತ ನೀತಿ ನಿರೂಪಣೆಯ ಕಡೆಗೆ ಒಂದು ಪ್ರಬಲ ಹೆಜ್ಜೆಯಾಗಿದೆ.

ಜಾತಿ ವ್ಯವಸ್ಥೆಯ ಪರಂಪರೆ ಮತ್ತು ಜನಗಣತಿ

1931ರಲ್ಲಿ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಲ್ಲಿ ಕೊನೆಯ ಬಾರಿಗೆ ಪೂರ್ಣಪ್ರಮಾಣದ ಜಾತಿ ಜನಗಣತಿಯನ್ನು ನಡೆಸಲಾಯಿತು. ಸ್ವಾತಂತ್ರ್ಯಾನಂತರ ಭಾರತವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಹೊರತುಪಡಿಸಿ ಇತರ ಜಾತಿಗಳ ಎಣಿಕೆಯನ್ನು ತಪ್ಪಿಸಿದೆ. ಈ ಲೋಪಕ್ಕೆ ಕಾರಣ ತರ್ಕಾಧಾರಿತವಾಗಿದೆ-ಜಾತಿಯ ರಾಜಕೀಕರಣವನ್ನು ತಪ್ಪಿಸುವುದರಿಂದ ಹಿಡಿದು ನಿರ್ವಹಣಾ ತೊಂದರೆಗಳ ಜೊತೆಗೆ ಜಾತಿಯ ಅಸ್ಮಿತೆಗಳು ಆಳವಾಗುವ ಭಯವೂ ಇದೆ. ಒಂದು ವೇಳೆ ಪ್ರಾಯೋಗಿಕ ದತ್ತಾಂಶದ ಅಲಭ್ಯತೆ ಉಂಟಾದಲ್ಲಿ ಜಾತಿ ಆಧಾರಿತ ಸಮಾನತೆಯನ್ನು ಗುರಿಯಾಗಿರಿಸಿಕೊಂಡ ನೀತಿಗಳು, ಕಲ್ಪನೆ ಮತ್ತು ಹಳತಾದ ಅಂಕಿ ಅಂಶಗಳು ಅಥವಾ ರಾಜಕೀಯ ಅಂದಾಜುಗಳನ್ನು ಆಧರಿಸಬೇಕಾಗುತ್ತದೆ.

2026ರಲ್ಲಿ ಜಾತಿ ಜನಗಣತಿ ಏಕೆ ಕಡ್ಡಾಯವಾಗಿದೆ ಎಂಬುದಕ್ಕೆ ಕಾರಣಗಳು :

1. ಪುರಾವೆ ಆಧಾರಿತ ನೀತಿ ನಿರೂಪಣೆ

ಆಧುನೀಕರಿಸಿದ ಜಾತಿ ದತ್ತಾಂಶದ ಕೊರತೆಯು ಸಕಾರಾತ್ಮಕ ಕ್ರಮಗಳ(affirmative action) ಅನುಷ್ಠಾನ ಮತ್ತು ಮೌಲ್ಯಮಾಪನಕ್ಕೆ ಅಡ್ಡಿಯಾಗಿದೆ. ಇತರ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿನ ಮೀಸಲಾತಿಗಳು ಐತಿಹಾಸಿಕ ಪ್ರತಿಕೂಲ ಪರಿಸ್ಥಿತಿಗಳನ್ನು ಪರಿಹರಿಸುವ ಉದ್ದೇಶವನ್ನು ಹೊಂದಿವೆ. ಆದರೂ, ಅವರ ಜನಸಂಖ್ಯಾ ಗಾತ್ರ ಮತ್ತು ಸಾಮಾಜಿಕ ಆರ್ಥಿಕ ಸ್ಥಿತಿಯ ಕುರಿತು ಇತ್ತೀಚಿನ ದತ್ತಾಂಶಗಳ ಅಲಭ್ಯತೆಯಿಂದ, ಈ ನೀತಿಗಳು ಉದ್ದೇಶಿತ ಫಲಾನುಭವಿಗಳನ್ನು ತಲುಪಿರುವ ಬಗ್ಗೆ ನಿರ್ಣಯಿಸುವುದು ಕಷ್ಟ. ಉದಾಹರಣೆಗೆ ಇತರ ಹಿಂದುಳಿದ ವರ್ಗಗಳ ಜನಸಂಖ್ಯೆ ಶೇ. 40ರಿಂದ 50ರಷ್ಟಿದೆ ಎಂದು ಅಂದಾಜಿಸಲಾಗಿದೆ. ಆದರೆ ಇದು ವಿಶ್ವಾಸಾರ್ಹ ಜನಗಣತಿ ದತ್ತಾಂಶವನ್ನು ಆಧರಿಸಿಲ್ಲ, ಜಾತಿ ಜನಗಣತಿಯು ನಿಖರವಾದ ಅನುಮಾನಕ್ಕೆ ಆಸ್ಪದವಿಲ್ಲದ ದತ್ತಾಂಶವನ್ನು ಒದಗಿಸುತ್ತದೆ. ಸರಕಾರವು ನೀತಿ-ನಿರೂಪಣೆಗಳು ಮತ್ತು ಸಂಪನ್ಮೂಲ ಹಂಚಿಕೆಯನ್ನು ಪರಿಣಾಮಕಾರಿಯಾಗಿ ರೂಪಿಸಲು ಅನುವು ಮಾಡಿಕೊಡುತ್ತದೆ.

2. ಮೀಸಲಾತಿ ನೀತಿಗಳ ತರ್ಕಬದ್ಧಗೊಳಿಸುವಿಕೆ

ಮೀಸಲಾತಿ ಭಾರತದ ಸಾಮಾಜಿಕ ನ್ಯಾಯದ ಚೌಕಟ್ಟಿನ ಮೂಲಾಧಾರ ವಾಗಿದೆ. ಆದರೆ ದತ್ತಾಂಶವಿಲ್ಲದೆ ಅವು ಕಡಿಮೆ ಒಳಗೊಳ್ಳುವ ಅಥವಾ ಹೆಚ್ಚು ಒಳಗೊಳ್ಳುವ ಅಪಾಯವನ್ನು ಹೊಂದಿರುತ್ತವೆ. ಜಾತಿ ಜನಗಣತಿಯಿಂದ ನಿಜವಾದ ಜನಸಂಖ್ಯೆ ಗಾತ್ರಗಳು ಮತ್ತು ಸಾಮಾಜಿಕ ಆರ್ಥಿಕ ಅಗತ್ಯಗಳಿಗೆ ಅನುಗುಣವಾಗಿ ಮೀಸಲಾತಿ ಕೋಟಾಗಳ ಪರಿಶೀಲನೆ ಮತ್ತು ಪುನರ್ ರಚನೆ ಅಲ್ಲದೆ ಪ್ರಾಯೋಗಿಕ ಪುರಾವೆಗಳ ಕೊರತೆಯಿಂದಾಗಿ ಪ್ರಸ್ತುತ ಹೊರಗಿಡಲಾದ ಅರ್ಹ ಗುಂಪುಗಳ ಸೇರ್ಪಡೆಗೆ ಅವಕಾಶವಾಗುತ್ತದೆ. ಇದು ಸಮುದಾಯಗಳಲ್ಲಿನ ಅಸಮಾಧಾನವನ್ನು ಕಡಿಮೆ ಮಾಡಲು ಮತ್ತು ಸಕಾರಾತ್ಮಕ ಕ್ರಮದ ನೀತಿಗಳಿಗೆ ಹೆಚ್ಚಿನ ನ್ಯಾಯ ಸಮ್ಮತತೆಯನ್ನು ತರಲು ಸಹಾಯ ಮಾಡುತ್ತದೆ.

3. ಜಾತಿಗಳ ಒಳಗಿನ ಪ್ರಾದೇಶಿಕ ಅಸಮಾನತೆಗಳು ಮತ್ತು ಅವುಗಳನ್ನು ಪರಿಹರಿಸುವುದು

ಜಾತಿ ಆಧಾರಿತ ಅನನುಕೂಲತೆಯ ಪ್ರದೇಶಗಳು ಅಥವಾ ಉಪ ಗುಂಪುಗಳಲ್ಲಿ ಏಕರೂಪವಾಗಿಲ್ಲ. ಉದಾಹರಣೆಗೆ ಒಂದು ರಾಜ್ಯದಲ್ಲಿ ಹಿಂದುಳಿದವರು ಎಂದು ವರ್ಗೀಕರಿಸಲಾದ ಸಮುದಾಯವು ಮತ್ತೊಂದು ರಾಜ್ಯದಲ್ಲಿ ಸಾಪೇಕ್ಷವಾಗಿ ಮುಂದುವರಿದಿರಬಹುದು. ರಾಷ್ಟ್ರವ್ಯಾಪಿ ಜಾತಿ ಜನಗಣತಿಯು ಈ ಸೂಕ್ಷ್ಮಮಟ್ಟದ ಅಸಮಾನತೆಗಳನ್ನು ಬಹಿರಂಗಪಡಿಸ ಬಹುದು. ಇದಲ್ಲದೆ, ಇದು ಜಾತಿಯೊಳಗಿನ ಅಸಮಾನತೆಗಳನ್ನು ಬಹಿರಂಗಪಡಿಸಲು ಸಹಾಯ ಮಾಡುತ್ತದೆ.

ಪಂಚಾಯತ್ ಮತ್ತು ವಾರ್ಡ್ ಮಟ್ಟದಲ್ಲಿ ನಿಖರವಾದ ಜಾತಿ ದತ್ತಾಂಶ ಕಲ್ಯಾಣ ಯೋಜನೆಗಳ ವಿತರಣೆಯನ್ನು ಗಣನೀಯವಾಗಿ ಸುಧಾರಿಸುತ್ತದೆ. ಕೇಂದ್ರ ಮತ್ತು ಅನೇಕ ರಾಜ್ಯ ಸರಕಾರಿ ಕಾರ್ಯಕ್ರಮಗಳು ಹಿಂದುಳಿದ ಸಮುದಾಯಗಳಿಗೆ ಪ್ರಯೋಜನವನ್ನು ನೀಡುವ ಉದ್ದೇಶವನ್ನು ಹೊಂದಿವೆ. ಆದಾಗಿಯೂ, ಸೂಕ್ಷ್ಮಮಟ್ಟದಲ್ಲಿ ದತ್ತಾಂಶದ ಕೊರತೆಯು ಉದ್ದೇಶಿತ ಫಲಾನುಭವಿಗಳನ್ನು ಗುರುತಿಸುವುದನ್ನು ಕಷ್ಟಕರವಾಗಿಸುತ್ತದೆ, ಇದು ಸೋರಿಕೆ ಮತ್ತು ಅಸಮರ್ಥತೆಗೆ ಕಾರಣವಾಗುತ್ತದೆ.

ಜಾತಿ ಗಣತಿಯು ಉತ್ತಮ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನವನ್ನು ಸಕ್ರಿಯಗೊಳಿಸುತ್ತದೆ, ಸಾರ್ವಜನಿಕ ವೆಚ್ಚ ಗರಿಷ್ಠ ಸಾಮಾಜಿಕ ಪ್ರಯೋಜನ ವನ್ನು ನೀಡುವುದು ಎಂದು ಖಾತರಿಗೊಳಿಸುತ್ತದೆ.

4. ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಬಲಪಡಿಸುವುದು

ಭಾರತದ ಸಂವಿಧಾನ ಐತಿಹಾಸಿಕವಾಗಿ ಅಂಚಿನಲ್ಲಿರುವ ಸಮುದಾಯಗಳಿಗೆ ಸಮಾನತೆ ತಾರತಮ್ಯ ಮಾಡುವುದಿಲ್ಲ ಮತ್ತು ಸಕಾರಾತ್ಮಕ ಕ್ರಮವನ್ನು ಖಾತರಿ ಪಡಿಸುತ್ತದೆ. ಈ ಭರವಸೆಗಳನ್ನು ಈಡೇರಿಸಲು ರಾಜ್ಯವು ಮೂಲ ವಾಸ್ತವಗಳನ್ನು ಅರ್ಥಮಾಡಿಕೊಳ್ಳಬೇಕು. ಜಾತಿ ಜನಗಣತಿಯು ಜಾತಿವಾದವನ್ನು ಬಲಪಡಿಸುವುದಿಲ್ಲ; ಬದಲಾಗಿ ಅಸ್ತಿತ್ವದಲ್ಲಿರುವ ಸಮಾನತೆಗಳನ್ನು ಒಪ್ಪಿಕೊಳ್ಳುವ ಮೂಲಕ ಅವುಗಳನ್ನು ಪರಿಣಾಮಕಾರಿಯಾಗಿ ಬಗೆಹರಿಸುವುದು.

ಅರಿವಿಲ್ಲದೆ ಸಾಮಾಜಿಕ ನ್ಯಾಯ ಸಾಧ್ಯವಿಲ್ಲ. ಜಾತಿಯಿಂದ ವಿಭಜಿಸಲ್ಪಟ್ಟ ಆದಾಯ, ಶಿಕ್ಷಣ, ಭೂಮಾಲಕತ್ವ, ಆರೋಗ್ಯ ಮತ್ತು ಸೇವೆಗಳ ಪ್ರವೇಶದ ದತ್ತಾಂಶವು ನ್ಯಾಯಯುತ ಸಮಾಜವನ್ನು ರೂಪಿಸುವಲ್ಲಿ ನಿರ್ಣಾಯಕವಾಗಿದೆ.

5. ಐತಿಹಾಸಿಕ ತಪ್ಪುಗಳನ್ನು ಸರಿಪಡಿಸುವುದು ಮತ್ತು ವಸಾಹತುಶಾಹಿ ಯುಗದ ಪರಂಪರೆಯನ್ನು ನವೀಕರಿಸುವುದು

1931ರ ಜಾತಿ ದತ್ತಾಂಶವನ್ನು ಅವಲಂಬಿಸುವುದು ಭಾರತ ಇನ್ನೂ ವಸಾಹತುಶಾಹಿ ಆಳ್ವಿಕೆಯಲ್ಲಿದ್ದಾಗ 21ನೇ ಶತಮಾನದ ಸಮಯದಲ್ಲಿ ಅತಾರ್ಕಿಕ ಅನ್ಯಾಯವಾಗಿದೆ. ಕಳೆದ 9 ದಶಕಗಳಲ್ಲಿ ಭಾರತೀಯ ಸಮಾಜವು ಗಮನಾರ್ಹವಾಗಿ ರೂಪಾಂತರಗೊಂಡಿದೆ. ನಗರೀಕರಣ, ಆರ್ಥಿಕ ಸುಧಾರಣೆಗಳು ಮತ್ತು ರಾಜಕೀಯ ಚಳವಳಿಗಳು ಜಾತಿಯ ದೃಷ್ಟಿ ಪಥವನ್ನು ಮರುರೂಪಿಸಿವೆ. ಆದರೂ ನಾವು ಆಧುನಿಕ ನೀತಿ ನಿರ್ಧಾರಗಳಿಗಾಗಿ ಪುರಾತನ ದತ್ತಾಂಶವನ್ನು ಬಳಸುತ್ತಲೇ ಇದ್ದೇವೆ.

2026ರ ಜಾತಿ ಜನಗಣತಿಯು ಈ ಕಾಲ ವಿಸಂಗತಿಯನ್ನು ಸರಿಪಡಿಸಬಹುದು ಮತ್ತು ಭಾರತೀಯ ರಾಜ್ಯವು ತನ್ನದೇ ಆದ ಸಮಾಜದ ಬಗ್ಗೆ ಹೊಂದಿರುವ ತಿಳುವಳಿಕೆಯನ್ನು ನವೀಕರಿಸಬಹುದು.

6. ರಾಜಕೀಯ ಪ್ರಾತಿನಿಧ್ಯ ಮತ್ತು ಚುನಾವಣಾ ನ್ಯಾಯವನ್ನು ಅರ್ಥ ಮಾಡಿಕೊಳ್ಳುವುದು

ಭಾರತೀಯ ಚುನಾವಣಾ ರಾಜಕೀಯದಲ್ಲಿ ಜಾತಿಯು ಪ್ರಮುಖ ಪಾತ್ರ ವಹಿಸುತ್ತದೆ. ರಾಜಕೀಯ ಪಕ್ಷಗಳು ಟಿಕೆಟ್ ವಿತರಣೆ, ಪಕ್ಷಗಳೊಡನೆ ಮೈತ್ರಿ ಮತ್ತು ಪ್ರಚಾರ ತಂತ್ರಗಳನ್ನು ಜಾತಿ ಸಮೀಕರಣಗಳ ಆಧಾರದ ಮೇಲೆ ಮಾಡುತ್ತವೆ, ಆದರೆ ನಿಖರವಾದ ದತ್ತಾಂಶಗಳಿರುವುದಿಲ್ಲ. ಜಾತಿ ಜನಗಣತಿಯು: ರಾಜಕೀಯ ಪ್ರಾತಿನಿಧ್ಯವನ್ನು ನಿಜವಾದ ಜನಸಂಖ್ಯಾ ಶಾಸ್ತ್ರ ಹೆಚ್ಚು ಪ್ರತಿಬಿಂಬಿಸುವಂತೆ ಮಾಡುತ್ತದೆ. ನಿಖರವಾದ ಮೀಸಲಾತಿ ಹಂಚಿಕೆಗಳೊಂದಿಗೆ ನ್ಯಾಯಯುತ ಚುನಾವಣಾ ಕ್ಷೇತ್ರಗಳ ರಚನೆಯನ್ನು ಸಕ್ರಿಯಗೊಳಿಸುತ್ತದೆ. ರಾಜಕೀಯ ಲಾಭಗಳಿಗಾಗಿ ಜಾತಿ ಅಸ್ಮಿತೆಗಳ ದುರುಪಯೋಗವನ್ನು ತಡೆಯುತ್ತದೆ. ಅತಿ ಮುಖ್ಯವಾಗಿ ಇದು ಪ್ರಸಕ್ತ ಪ್ರಬಲ ಗುಂಪುಗಳು ಪ್ರಾತಿನಿಧ್ಯ ಮತ್ತು ಸಂಪನ್ಮೂಲಗಳನ್ನು ಮೂಲೆಗುಂಪು ಮಾಡಲು ಎಡೆಗೊಡುವ ಅಸ್ಪಷ್ಟತೆಯನ್ನು ಕಡಿಮೆ ಮಾಡುತ್ತದೆ.

7. ರಾಜ್ಯಮಟ್ಟದ ಅನುಭವದಿಂದ ಕಲಿಯುವುದು

2023ರಲ್ಲಿ ಬಿಹಾರ ಜಾತಿ ಸಮೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು. ಇದು ಇತರ ಹಿಂದುಳಿದ ವರ್ಗಗಳ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಜನಸಂಖ್ಯೆಯು ಶೇ. 63ಕ್ಕಿಂತ ಹೆಚ್ಚು ಎಂದು ಬಹಿರಂಗಪಡಿಸಿತು. ಇದು ಹಿಂದಿನ ಅಂದಾಜಿಗಿಂತ ಹೆಚ್ಚು. ಈ ಸಮೀಕ್ಷೆ ರಾಷ್ಟ್ರೀಯ ಚರ್ಚೆಯನ್ನು ಹುಟ್ಟು ಹಾಕಿತು ಮತ್ತು ಇತರ ರಾಜ್ಯಗಳು ಇದೇ ರೀತಿಯ ಪ್ರಯೋಗವನ್ನು ಪರಿಗಣಿಸಲು ಪ್ರೇರೇಪಿಸಿದವು. ಬಿಹಾರ ಮಾದರಿಯಂತಹ ಸಮೀಕ್ಷೆಯು ರಾಜಕೀಯವಾಗಿ ಪ್ರಭಾವಶಾಲಿಯಾಗಿದೆ ಎಂದು ತೋರಿಸಿದೆ.

ಕರ್ನಾಟಕ ಮತ್ತು ತೆಲಂಗಾಣ ಎರಡೂ ಜಾತಿ ಜನಗಣತಿಗೆ ಬೆಂಬಲ ವ್ಯಕ್ತಪಡಿಸಿವೆ, ಸಮಗ್ರ ನೀತಿಗಳನ್ನು ವಿನ್ಯಾಸಗೊಳಿಸುವಾಗ ಅಗತ್ಯವನ್ನು ಉಲ್ಲೇಖಿಸಿವೆ. ಕರ್ನಾಟಕದ ಆಂತರಿಕ ಸಮೀಕ್ಷೆ ಇತರ ಹಿಂದುಳಿದ ವರ್ಗಗಳ ಉಪ ವರ್ಗೀಕರಣದಲ್ಲಿನ ವ್ಯತ್ಯಾಸಗಳನ್ನು ಬಹಿರಂಗಪಡಿಸಿದೆ ಮತ್ತು ತೆಲಂಗಾಣವು ಕಲ್ಯಾಣ ಕಾರ್ಯಕ್ರಮವನ್ನು ಘೋಷಿಸಲು ಸಮುದಾಯದ ದತ್ತಾಂಶವನ್ನು ಬಳಸಿದೆ. ಬೆಳೆಯುತ್ತಿರುವ ಒಮ್ಮತವನ್ನು ಈ ಉದಾಹರಣೆಗಳು ಎತ್ತಿ ತೋರಿಸುತ್ತವೆ.

ಆತಂಕಗಳು ಮತ್ತು ಟೀಕೆಗಳನ್ನು ಪರಿಹರಿಸುವುದು

1. ಇದು ಜಾತಿವಾದವನ್ನು ಶಾಶ್ವತಗೊಳಿಸುತ್ತದೆ

ಜಾತಿ ಎಣಿಕೆಯಿಂದ ಸಾಮಾಜಿಕ ವಿಭಜನೆಗಳು ಆಳವಾಗುತ್ತವೆ ಎಂದು ವಿಮರ್ಶಕರು ವಾದಿಸುತ್ತಾರೆ. ಆದರೆ, ಜಾತಿವಾದವು ದತ್ತಾಂಶ ಸಂಗ್ರಹದಿಂದ ಖಂಡಿತ ಅಲ್ಲ; ಬದಲಾಗಿ ಅದು ಮುಂದುವರಿಸುತ್ತಿರುವ ಅಸಮಾನತೆಗಳಿಂದಾಗಿ ಮುಂದುವರಿಯುತ್ತದೆ. ವಾಸ್ತವವಾಗಿ ಪಾರದರ್ಶಕತೆ ಈ ಅಸಮಾನತೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಒಂದು ವೇಳೆ, ಜಾತಿ ದತ್ತಾಂಶವೇ ಇಲ್ಲದಿದ್ದಲ್ಲಿ, ವಿಶೇಷ ಹಕ್ಕು ಪಡೆದುಕೊಂಡು ಪ್ರಾಬಲ್ಯ ಕಳೆದುಕೊಳ್ಳುವ ಭಯದಲ್ಲಿರುವ ಗುಂಪುಗಳು ಮಾತ್ರ ಪ್ರಯೋಜನ ಪಡೆಯುತ್ತವೆ.

2. ಇದನ್ನು ರಾಜಕೀಯವಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತೆ

ರಾಜಕೀಯಕರಣವು ಒಂದು ನ್ಯಾಯ ಸಮ್ಮತವಾದ ವ್ಯಾಕುಲ ಸಂಗತಿಯಾಗಿದ್ದರೂ, ದತ್ತಾಂಶದ ಅನುಪಸ್ಥಿತಿ ಜಾತಿ ಆಧಾರಿತ ರಾಜಕೀಯವನ್ನು ತಡೆಯಲಿಲ್ಲ. ಬದಲಾಗಿ ಇದು ಅಪಾರದರ್ಶಕ, ಇಚ್ಛಾನುಸಾರವಾದ ನಿರ್ಧಾರಗಳಿಗೆ ಕಾರಣವಾಗಿದೆ. ದತ್ತಾಂಶವು ನೆಲದ ವಾಸ್ತವಗಳನ್ನು ಬಹಿರಂಗಪಡಿಸುವ ಮೂಲಕ ರಾಜಕೀಯ ಕೈಚಳಕದ ವಿರುದ್ಧ ಒಂದು ತಡೆಯಾಗಿ ಕಾರ್ಯನಿರ್ವಹಿಸುತ್ತದೆ.

3. ಇದರ ನಿರ್ವಹಣೆ ಕಷ್ಟಕರ

ಭಾರತವು ವಿಶ್ವದ ಜನಗಣತಿಗಳಲ್ಲಿಯೇ ಅತಿ ದೊಡ್ಡ ಜನಗಣತಿ ಎಂದು ಪರಿಗಣಿತವಾಗಿದೆ. ಡಿಜಿಟಲ್ ಪರಿಕರಗಳು, ತರಬೇತಿ ಪಡೆದ ಗಣತಿದಾರರು ಮತ್ತು ಬಿಹಾರ ಮತ್ತು ಕರ್ನಾಟಕದಲ್ಲಿ ನಡೆಸಿದ ಪ್ರಯೋಗದ ಹಿನ್ನೆಲೆಯ ಸಹಾಯದಿಂದ ಜಾತಿ ಜನಗಣತಿಯನ್ನು 2026ರ ಜನಗಣತಿ ಕಾರ್ಯಾಚರಣೆಗಳಲ್ಲಿ ಸರಾಗವಾಗಿ ಸಂಯೋಜಿಸಬಹುದು.

ಕಾನೂನು ಹಾಗೂ ಸಾಂವಿಧಾನಿಕ ದೃಷ್ಟಿಕೋನಗಳು

ಸಂವಿಧಾನವು ಜಾತಿ ಜನಗಣತಿಯನ್ನು ಸ್ಪಷ್ಟವಾಗಿ ಕಡ್ಡಾಯಗೊಳಿಸ ದಿದ್ದರೂ ಸಾಮಾಜಿಕ ಮತ್ತು ಆರ್ಥಿಕ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಅಗತ್ಯ ದತ್ತಾಂಶವನ್ನು ಸಂಗ್ರಹಿಸಲು ರಾಜ್ಯಕ್ಕೆ ಅಧಿಕಾರ ನೀಡುತ್ತದೆ. ಸರ್ವೋಚ್ಚ ನ್ಯಾಯಾಲಯ ವಿವಿಧ ತೀರ್ಪುಗಳಲ್ಲಿ ಮೀಸಲಾತಿ ಮತ್ತು ಸಕಾರಾತ್ಮಕ ಕ್ರಮವನ್ನು ಸಮರ್ಥಿಸಲು ಪ್ರಾಯೋಗಿಕ ಪುರಾವೆಗಳನ್ನು ಒತ್ತಿ ಹೇಳಿದೆ.

ಇಂದ್ರಾ ಸಹಾನಿ vs ಭಾರತ ಒಕ್ಕೂಟ (1992) ಪ್ರಕರಣದಲ್ಲಿ ದತ್ತಾಂಶವನ್ನು ಆಧರಿಸಿ ಮೀಸಲಾತಿ ನೀತಿಗಳ ನಿಯತಕಾಲಿಕ ವಿಮರ್ಶಗಳಿಗೆ ನ್ಯಾಯಾಲಯ ಆಜ್ಞಾಪಿಸಿದೆ. ಅದೇ ರೀತಿ ಜಯಶ್ರೀ ಲಕ್ಷ್ಮಣರಾವ್ ಪಾಟೀಲ್ vs ಮಹಾರಾಷ್ಟ್ರ ರಾಜ್ಯ (2021) ಹಿಂದುಳಿದಿರುವಿಕೆಯನ್ನು ಸಮರ್ಥಿಸಲು ದತ್ತಾಂಶದ ಕೊರತೆಯನ್ನು ಉಲ್ಲೇಖಿಸಿ ನ್ಯಾಯಾಲಯವು ಮರಾಠಾ ಮೀಸಲಾತಿ ಕೋಟಾವನ್ನು ರದ್ದುಗೊಳಿಸಿದೆ. ಹೀಗಾಗಿ, ಜಾತಿ ಜನಗಣತಿಯು ಅಪೇಕ್ಷಣೀಯ ಮಾತ್ರವಲ್ಲದೆ ಕಾನೂನು ಬದ್ಧವಾಗಿಯೂ ವಿವೇಕಯುತವಾಗಿದೆ.

ಜಾಗತಿಕ ಹೋಲಿಕೆಗಳು

ಇತರ ದೇಶಗಳು ಜನಾಂಗ ಜನಾಂಗೀಯತೆ ಮತ್ತು ಸಾಮಾಜಿಕ ಆರ್ಥಿಕ ವರ್ಗಗಳ ಬಗ್ಗೆ ನಿಯಮಿತವಾಗಿ ದತ್ತಾಂಶವನ್ನು ಸಂಗ್ರಹಿಸಿ ಎಲ್ಲರನ್ನೂ ಒಳಗೊಂಡ ನೀತಿಗಳನ್ನು ವಿನ್ಯಾಸಗೊಳಿಸುತ್ತಿದ್ದವು ಉದಾಹರಣೆ: ಯುನೈಟೆಡ್ ಸ್ಟೇಟ್ಸ್ ನಾಗರಿಕ ಹಕ್ಕುಗಳ ಉಲ್ಲಂಘನೆ ಮತ್ತು ಸಕಾರಾತ್ಮಕ ಕ್ರಮಗಳನ್ನು ಮೇಲ್ವಿಚಾರಣೆ ಮಾಡಲು ಜನಾಂಗ ಮತ್ತು ಜನಾಂಗೀಯ ದತ್ತಾಂಶವನ್ನು ಸಂಗ್ರಹಿಸುತ್ತದೆ. ಯುನೈಟೆಡ್ ಕಿಂಗ್‌ಡಂ ತಾರತಮ್ಯ ಮತ್ತು ಅಸಮಾನತೆಯನ್ನು ಗುರುತಿಸಲು ಜನಗಣತಿಯಲ್ಲಿ ಜನಾಂಗೀಯ ದತ್ತಾಂಶವನ್ನು ಸಂಗ್ರಹಿಸುತ್ತದೆ. ಬ್ರೆಝಿಲ್ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿ ಕೋಟಾ ಜಾರಿಗೊಳಿಸಲು ಜನಾಂಗೀಯ ದತ್ತಾಂಶವನ್ನು ಸಂಗ್ರಹಿಸುತ್ತದೆ.

ಸಾಮಾಜಿಕ ಶ್ರೇಣೀಕರಣದ ಏಕೈಕ ಪ್ರಮುಖ ಅಕ್ಷರೇಖೆಯಾಗಿದ್ದರೂ, ಜಾತಿಯ ಬಗ್ಗೆ ಇದೇ ರೀತಿಯ ದತ್ತಾಂಶವನ್ನು ಸಂಗ್ರಹಿಸಲು ಭಾರತ ನಿರಾಕರಿಸುವುದು ವಿಪರ್ಯಾಸ ಮತ್ತು ಸ್ವಯಂ ಸೋಲಿನ ಸಂಗತಿಯಾಗಿದೆ.

ಸಾರ್ವಜನಿಕ ಅಭಿಪ್ರಾಯ ಮತ್ತು ನಾಗರಿಕ ಸಮಾಜ

ನಾಗರಿಕ ಸಮಾಜದ ಗುಂಪುಗಳು, ನಾಗರಿಕ ಕಾರ್ಯಕರ್ತರು, ಶೈಕ್ಷಣಿಕ ಸಂಸ್ಥೆಗಳು ಮತ್ತು ಹಲವಾರು ರಾಜ್ಯ ಸರಕಾರಗಳೂ ಸಹ ಜಾತಿ ಜನಗಣತಿಯನ್ನು ಒತ್ತಾಯಿಸಿವೆ. ಬಿಹಾರ ರಾಜ್ಯದ ಸಮೀಕ್ಷೆಯ ನಂತರ ಈ ಆವೇಗ ಹೆಚ್ಚಾಗಿದೆ. ಹೆಚ್ಚಿನ ಪಾರದರ್ಶಕತೆ ಮತ್ತು ಸಮಾನತೆಯ ಪರವಾಗಿ ಸಾರ್ವಜನಿಕ ಅಭಿಪ್ರಾಯ ಬದಲಾಗುತ್ತಿದೆ.

ಜಾತಿ ಜನಗಣತಿಯು ಸರಕಾರೇತರ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು ಮತ್ತು ಚಿಂತಕರ ಚಾವಡಿಗಳು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಹಾಯಕವಾಗಿದೆ. ಇದು ಜಾತಿ ಆಧಾರಿತ ಅಸಮಾನತೆಯ ಕುರಿತು ಶೈಕ್ಷಣಿಕ ತಿಳುವಳಿಕೆ ಮತ್ತು ಸಾರ್ವಜನಿಕ ಸಂವಾದವನ್ನು ಉತ್ಕೃಷ್ಟಗೊಳಿಸುತ್ತದೆ.

ಭಾರತವು ನಿರ್ಣಾಯಕ ಹಂತದಲ್ಲಿದೆ. 2026ರ ಜನಗಣತಿಯನ್ನು ಸಮೀಪಿಸುತ್ತಿರುವಾಗ ದತ್ತಾಂಶದ ಅನುಪಸ್ಥಿತಿಯಲ್ಲಿ ಸಾಮಾಜಿಕ ನ್ಯಾಯವನ್ನು ಸಾಧಿಸಲು ಸಾಧ್ಯವಿಲ್ಲ ಎಂಬ ವಾಸ್ತವವನ್ನು ದೇಶ ಎದುರಿಸಬೇಕಾಗುತ್ತದೆ. ಜಾತಿ ಜನಗಣತಿಯು ಭೂತಕಾಲಕ್ಕೆ ಸರಿಯುವ ಹೆಜ್ಜೆಯಲ್ಲ. ಇದು ಹೆಚ್ಚು ಮಾಹಿತಿಯುಕ್ತ ಸಮಾನ ಮತ್ತು ಎಲ್ಲರನ್ನೂ ಒಳಗೊಂಡ ಭವಿಷ್ಯದತ್ತ ಜಿಗಿಯುವುದಾಗಿದೆ. ಅದಿಲ್ಲದಿದ್ದರೆ, ಭಾರತದ ಸಾಮಾಜಿಕ ನೀತಿಗಳು ಕತ್ತಲೆಯಲ್ಲಿ ಕಾರ್ಯನಿರ್ವಹಿಸುತ್ತಲೇ ಇರುತ್ತವೆ, ವಿಶೇಷ ಹಕ್ಕುಗಳನ್ನು ಬಯಸುವವರ ಕೈ ಬಲಪಡಿಸುತ್ತವೆ ಮತ್ತು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತವೆ. 2026ರಲ್ಲಿ ಜಾತಿ ಜನಗಣತಿಯನ್ನು ನಡೆಸುವ ಮೂಲಕ, ಅಂತಿಮವಾಗಿ ಕಲ್ಪನೆಯಿಂದ ಆಳ್ವಿಕೆಗೆ, ಭಾವನಾಲೋಕದಿಂದ ಹೊಣೆಗಾರಿಕೆಗೆ ಮತ್ತು ಸಾಂಕೇತಿಕ ನೀತಿಯಿಂದ (tokenism) ಪರಿವರ್ತನೆ ಹೊಂದಬಹುದು.

(ವಿವಿಧ ಮೂಲಗಳಿಂದ)

share
ಕೆ.ಎನ್. ಲಿಂಗಪ್ಪ
ಕೆ.ಎನ್. ಲಿಂಗಪ್ಪ
Next Story
X