Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ‘ಭಾರತೀಯ ಜ್ಞಾನ ಪರಂಪರೆ’ (ಐಕೆಎಸ್)...

‘ಭಾರತೀಯ ಜ್ಞಾನ ಪರಂಪರೆ’ (ಐಕೆಎಸ್) ಮತ್ತು ವೈದಿಕಶಾಹಿ ನೀತಿ

ಬಿ. ಶ್ರೀಪಾದ ಭಟ್ಬಿ. ಶ್ರೀಪಾದ ಭಟ್27 Jun 2026 11:27 AM IST
share
‘ಭಾರತೀಯ ಜ್ಞಾನ ಪರಂಪರೆ’ (ಐಕೆಎಸ್) ಮತ್ತು ವೈದಿಕಶಾಹಿ ನೀತಿ

ಐಕೆಎಸ್ ಚಾತುರ್ವರ್ಣ ವ್ಯವಸ್ಥೆ ಮತ್ತು ಪುರೋಹಿತಶಾಹಿ ಸಂಪ್ರದಾಯಗಳಿಗೆ ಸಂಬಂಧಿಸಿದ ಜ್ಞಾನವನ್ನು ಸಾರ್ವತ್ರಿಕ ಸತ್ಯವಾಗಿ ಪ್ರತಿಪಾದಿಸುತ್ತದೆ. ಇದರ ಪರಿಣಾಮವಾಗಿ ಆರೆಸ್ಸೆಸ್ ಸಿದ್ಧಾಂತಕ್ಕೆ ಪೂರಕವಾದ ಬ್ರಾಹ್ಮಣವಾದ ನೆಲೆಯ ಪ್ರಾಚೀನ ಭಾರತದ ಆಯ್ದ ಚಿತ್ರಣ ನಿರ್ಮಾಣವಾಗುತ್ತದೆ. ಇದು ಚಾರ್ವಾಕ, ಅಜೀವಕ, ಬೌದ್ಧ ಮತ್ತು ಜೈನ ಸಂಪ್ರದಾಯಗಳಂತಹ ಭೌತವಾದಿ ಮತ್ತು ಅಜ್ಞೇಯವಾದಿ ಪರಂಪರೆಗಳನ್ನು, ಶ್ರಮಣ ಸಂಸ್ಕೃತಿಯನ್ನು ಅಂಚಿಗೆ ತಳ್ಳುತ್ತದೆ. ಜೊತೆಗೆ, ಭಾರತದ ಸಾಂಸ್ಕೃತಿಕ ಸಂಯೋಜನೆಗೆ ಮಹತ್ವದ ಕೊಡುಗೆ ನೀಡಿದ ಮುಸ್ಲಿಮ್ ವಿದ್ವಾಂಸರ ಪಾತ್ರವನ್ನೂ ನಿರ್ಲಕ್ಷಿಸುತ್ತದೆ.

ಮತ್ತೊಮ್ಮೆ ಎನ್‌ಸಿಇಆರ್‌ಟಿ ಸಂಸ್ಥೆಯು ಪಠ್ಯಪುಸ್ತಕಗಳ ಮತೀಯವಾದೀಕರಣ ಮತ್ತು ವೈದಿಕಶಾಹಿ ನೀತಿ ಅಳವಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ. 6ನೇ ತರಗತಿ ‘ಖ3’ ಕನ್ನಡ ಪಠ್ಯಪುಸ್ತಕದ ಮೂಲಕ ಆಹಾರ ಸಂಸ್ಕೃತಿ ಕುರಿತು ತಾರತಮ್ಯ ಮತ್ತು ಏಕರೂಪಿ ಪಠ್ಯಕ್ರಮ ಹೇರಿದ್ದಾರೆ. ಈ ಮೂಲಕ ಮಕ್ಕಳ ಕಲಿಕೆಯ ಮೇಲೆ ಸಾಂಸ್ಕೃತಿಕ ದಬ್ಬಾಳಿಕೆ ನಡೆಸುತ್ತಿದ್ದಾರೆ, ಪ್ರತಿಗಾಮಿ ಮನೋಭಾವ ಬೆಳೆಸುತ್ತಿದ್ದಾರೆ. ಮುಖ್ಯವಾಗಿ ಈ ಪಠ್ಯಪುಸ್ತಕಕ್ಕೆ ‘ಕೃಷ್ಣ’ ಅಂತ ಶೀರ್ಷಿಕೆ ಕೊಟ್ಟಿದ್ದಾರೆ. ಇದರ ಔಚಿತ್ಯವೇನು? ಉದ್ದೇಶವೇನು? ಜೊತೆಗೆ ಸಂವಿಧಾನ ಪ್ರಸ್ತಾವನೆಯನ್ನು ಸಂಪೂರ್ಣ ತಿರುಚಲಾಗಿದೆ. ಧರ್ಮನಿರಪೇಕ್ಷತೆ/ಜಾತ್ಯತೀತತೆ ಪದವನ್ನು ಕೈ ಬಿಡಲಾಗಿದೆ. ಸರ್ವಧರ್ಮ ಸಮ್ಮಾನ್ ಎಂದು ಹೇಳಿದ್ದಾರೆ. ಸಂವಿಧಾನ ಕರಡನ್ನು ಈ ರೀತಿ ಅಪವ್ಯಾಖ್ಯಾನ ಮಾಡುವುದು ಅಪಚಾರವಾಗುತ್ತದೆ. ಆರೋಗ್ಯವೇ ಭಾಗ್ಯ ಪಾಠದಲ್ಲಿ ಆಹಾರದ ಬಗ್ಗೆ ವ್ಯಾಖ್ಯಾನಿಸುವಾಗ ಉದ್ದೇಶಪೂರ್ವಕವಾಗಿ ಸಸ್ಯಾಹಾರ ಪದ್ಧತಿ ಮಾತ್ರ ಪ್ರಸ್ತಾಪವಾಗಿದೆ. ಮಾಂಸಾಹಾರ ಪದ್ಧತಿ ಕುರಿತು ಎಲ್ಲಿಯೂ ಉಲ್ಲೇಖವಿಲ್ಲ. ಇದು ನೇರವಾಗಿ ಆಹಾರ ಸಂಸ್ಕೃತಿ ಕುರಿತು ತಾರತಮ್ಯವನ್ನು ತೋರಿಸುತ್ತದೆ. ಸಮತೋಲನ ಆಹಾರ ಕುರಿತು ಅಪವ್ಯಾಖ್ಯಾನ ಮಾಡಲಾಗಿದೆ. ಉದ್ದೇಶಪೂರ್ವಕವಾಗಿ ಮಾಂಸಾಹಾರವನ್ನು ಕಡೆಗಣಿಸಲಾಗಿದೆ. ಇಲ್ಲಿ ಚಿಂತನೆಯ ಸ್ವಾತಂತ್ರ್ಯ ಮತ್ತು ವಿಮರ್ಶಾತ್ಮಕ ಅನ್ವೇಷಣೆಯನ್ನು ಕಡೆಗಣಿಸಲಾಗಿದೆ. ಇದು ಒಂದು ಉದಾಹರಣೆ ಮಾತ್ರ. ಎನ್‌ಸಿಇಆರ್‌ಟಿ ಇಂತಹ ಸಾವಿರಾರು ಪಠ್ಯಗಳನ್ನು ಸರಕುಗಳಂತೆ ಉತ್ಪಾದಿಸುತ್ತಿದೆ ಹಾಗೂ ಶಿಕ್ಷಣದ ಹೆಸರಿನಲ್ಲಿ ಹಂಚುತ್ತಿದೆ

ಇದು ಎನ್‌ಇಪಿ 2020ಯ ‘ಭಾರತೀಯ ಜ್ಞಾನ ಪರಂಪರೆ’ಯ(ಐಕೆಎಸ್) ಭಾಗವಾಗಿ ರಚನೆಯಾಗಿದೆ.

ಈ ಐಕೆಎಸ್ ಮೂಲಕ ಭಾರತದ ಪರಂಪರೆಯ ಜ್ಞಾನವನ್ನು ಆಧುನಿಕ ಶಿಕ್ಷಣದ ಪಠ್ಯಕ್ರಮದ ಜೊತೆಗೆ ಸಂಯೋಜಿಸಲಾಗುವುದು ಎಂದು ಹೇಳಿಕೊಂಡಿದ್ದಾರೆ. ಪ್ರಾಚೀನ ಆಚರಣೆಗಳನ್ನು ವಿಜ್ಞಾನ ಎಂದೂ ಪುರಾಣ ಕತೆ, ಕಾವ್ಯವನ್ನು ಇತಿಹಾಸ ಎಂದೂ ವ್ಯಾಖ್ಯಾನಿಸುತ್ತಿದ್ದಾರೆ. ಪರೀಕ್ಷಿಸುವುದು ಮತ್ತು ಪ್ರಶ್ನಿಸುವುದು ಎರಡನ್ನೂ ನಿರಾಕರಿಸುತ್ತಿದ್ದಾರೆ. ಯುಜಿಸಿಯು (ವಿಶ್ವವಿದ್ಯಾನಿಲಯ ಅನುದಾನ ಆಯೋಗ) ಎಲ್ಲಾ ವಿಷಯಗಳಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಗಳನ್ನು ಅಳವಡಿಸಲು ಮುಂದಾಗಿದ್ದಾರೆ. ಇದು ಹಿಂದೂಯೇತರ ಸಂಪ್ರದಾಯಗಳು ಮತ್ತು ಆದಿವಾಸಿ ಸಮುದಾಯಗಳ ಜೀವನಕ್ರಮ ಹಾಗೂ ಜ್ಞಾನಪದ್ಧತಿಗಳನ್ನು ಕಡೆಗಣಿಸುತ್ತದೆ. ಜೊತೆಗೆ ವೈಜ್ಞಾನಿಕ ಮನೋಭಾವ ಬೆಳೆಸುವ ಸಂವಿಧಾನದ ಬದ್ಧತೆಯೊಂದಿಗೂ ಇದು ಹೊಂದಿಕೆಯಾಗುವುದಿಲ್ಲ. ಮೂಲದಲ್ಲಿ ಏಕರೂಪಿ ಶಿಕ್ಷಣವನ್ನು ಪ್ರತಿಪಾದಿಸುತ್ತಿದ್ದಾರೆ. ಇಲ್ಲಿ ಹೆಚ್ಚಿನ ಮೌಲ್ಯಾಂಕಗಳನ್ನು (ಕ್ರೆಡಿಟ್‌ಗಳು) ವಿಷಯ-ನಿರ್ದಿಷ್ಟ ಪಠ್ಯಗಳಿಗೆ ಮೀಸಲಿಡುವುದರಿಂದ ವಿದ್ಯಾರ್ಥಿಗಳಿಗೆ ಬಹುಶಿಸ್ತೀಯ, ಅಂತರ್‌ಶಿಸ್ತೀಯ ಅನ್ವೇಷಣೆಗೆ ಅವಕಾಶ ಕಡಿಮೆಯಾಗುತ್ತದೆ.

ಐಕೆಎಸ್ ಮೂಲಕ ವಿವಿಧ ಘಟಕಗಳಲ್ಲಿ ‘ಭಾರತೀಯ ತತ್ವಶಾಸ್ತ್ರ’ವನ್ನು ಸೇರಿಸಲಾಗಿದೆ. ಶಿಕ್ಷಣವನ್ನು ‘ವಸಾಹತುಮುಕ್ತ’ (decolonise) ಹಾಗೂ ’ದೇಸೀಕರಣ’ (indigenise) ಮಾಡುವ ಉದ್ದೇಶದಿಂದ ವಾಣಿಜ್ಯ ಶಿಕ್ಷಣದಲ್ಲಿ ಕೌಟಿಲ್ಯನ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಲು ಹಾಗೂ ರಸಾಯನಶಾಸ್ತ್ರದಲ್ಲಿ ಪರಮಾಣು ಕುರಿತ ಪ್ರಾಚೀನ ಭಾರತೀಯ ಪರಿಕಲ್ಪನೆಗಳನ್ನು ಸೇರಿಸಲು ಪ್ರಸ್ತಾಪಿಸಲಾಗಿದೆ. ಪ್ರಾಚೀನ ಲೋಹಶಾಸ್ತ್ರ ಮತ್ತು ಗಣಿತಶಾಸ್ತ್ರವನ್ನು ವೈಭವೀಕರಿಸಲಾಗಿದೆ ಮತ್ತು ಭಾರತವೇ ಇದರ ಹರಿಕಾರ ಎಂದು ಪ್ರಸ್ತಾಪಿಸಲಾಗಿದೆ. ಐಕೆಎಸ್‌ನ ಮೂಲಾಧಾರವಾಗಿರುವ ‘ಹಿಂದೂ ಅಸಾಧಾರಣತೆ’ (Hindu exceptionalism) ಹೊಸ ಕಲ್ಪನೆಯಲ್ಲ. ಚಿಂತಕಿ ಮೀರಾ ನಂದಾ ‘‘ಹಿಂದೂ ಧರ್ಮವನ್ನು ‘ವಿಜ್ಞಾನದ ಧರ್ಮ’ ಎಂದು ಬಿಂಬಿಸುವ ಕಲ್ಪನೆ ಸುಮಾರು ಎರಡು ಶತಮಾನಗಳ ಇತಿಹಾಸವನ್ನು ಹೊಂದಿದೆ. ವೇದ ಸಂಪ್ರದಾಯವನ್ನು ‘ಅಧರ್ಮಾಂಧವಲ್ಲದ ತರ್ಕಬದ್ಧತೆ’ ಮತ್ತು ‘ಅತೀಂದ್ರಿಯ ಅನುಭವಾಧಾರಿತ ಜ್ಞಾನ’ ಎಂದು ಮಹಿಮೆ ಸಾರಲಾಗಿದೆ’’ ಎಂದು ಬರೆಯುತ್ತಾರೆ. 1893ರಲ್ಲಿ ಚಿಕಾಗೋದಲ್ಲಿ ನಡೆದ ಧರ್ಮ ಸಂಸತ್ತಿನಲ್ಲಿ ಸ್ವಾಮಿ ವಿವೇಕಾನಂದರು ಆಧುನಿಕ ವಿಜ್ಞಾನವನ್ನು ಹಿಂದೂ ಸಂಪ್ರದಾಯದ ಸಹಾಯಕವೆಂದು ಬಿಂಬಿಸಿ ಈ ದೃಷ್ಟಿಕೋನವನ್ನು ಜನಪ್ರಿಯಗೊಳಿಸಿದರು. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ತರ್ಕವಾದ(rationalism) ಮತ್ತು ರಾಷ್ಟ್ರೀಯತೆ, ಆತ್ಮವಿಮರ್ಶೆ ಮತ್ತು ಆತ್ಮಗೌರವ, ಸುಧಾರಣೆ ಮತ್ತು ಪುನರುತ್ಥಾನವಾದಗಳ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಹಿಂದೂ ಧರ್ಮ ಮತ್ತು ಆಧುನಿಕ ವಿಜ್ಞಾನದ ನಡುವಿನ ಈ ಸಂಗಮ ಮತ್ತಷ್ಟು ಬಲವಾಯಿತು.

ಐಕೆಎಸ್ ಚಾತುರ್ವರ್ಣ ವ್ಯವಸ್ಥೆ ಮತ್ತು ಪುರೋಹಿತಶಾಹಿ ಸಂಪ್ರದಾಯಗಳಿಗೆ ಸಂಬಂಧಿಸಿದ ಜ್ಞಾನವನ್ನು ಸಾರ್ವತ್ರಿಕ ಸತ್ಯವಾಗಿ ಪ್ರತಿಪಾದಿಸುತ್ತದೆ. ಇದರ ಪರಿಣಾಮವಾಗಿ ಆರೆಸ್ಸೆಸ್ ಸಿದ್ಧಾಂತಕ್ಕೆ ಪೂರಕವಾದ ಬ್ರಾಹ್ಮಣವಾದ ನೆಲೆಯ ಪ್ರಾಚೀನ ಭಾರತದ ಆಯ್ದ ಚಿತ್ರಣ ನಿರ್ಮಾಣವಾಗುತ್ತದೆ. ಇದು ಚಾರ್ವಾಕ, ಅಜೀವಕ, ಬೌದ್ಧ ಮತ್ತು ಜೈನ ಸಂಪ್ರದಾಯಗಳಂತಹ ಭೌತವಾದಿ ಮತ್ತು ಅಜ್ಞೇಯವಾದಿ ಪರಂಪರೆಗಳನ್ನು, ಶ್ರಮಣ ಸಂಸ್ಕೃತಿಯನ್ನು ಅಂಚಿಗೆ ತಳ್ಳುತ್ತದೆ. ಜೊತೆಗೆ, ಭಾರತದ ಸಾಂಸ್ಕೃತಿಕ ಸಂಯೋಜನೆಗೆ ಮಹತ್ವದ ಕೊಡುಗೆ ನೀಡಿದ ಮುಸ್ಲಿಮ್ ವಿದ್ವಾಂಸರ ಪಾತ್ರವನ್ನೂ ನಿರ್ಲಕ್ಷಿಸುತ್ತದೆ. ಐಕೆಎಸ್‌ನ ವ್ಯಾಸಂಗಕ್ರಮವು ಪದೇ ಪದೇ ವಸಾಹತುಮುಕ್ತ ಚಿಂತನೆಗಳನ್ನು ಪ್ರತಿಪಾದಿಸುತ್ತದೆ. ಆದರೆ ಆದಿವಾಸಿಗಳ ಜ್ಞಾನ, ಬದುಕು ನೆಲಸಂಸ್ಕೃತಿಯ ಅಪಾರ ಸಂಪತ್ತನ್ನು ವೈದಿಕಶಾಹಿ ಬೌದ್ಧಿಕ ಪ್ರಾಬಲ್ಯದ ಮೂಲಕ ಕಡೆಗಣಿಸುತ್ತದೆ.

ಪತ್ರಕರ್ತ ವಾಸುದೇವನ್ ಮುಕುಂದ್ ‘ಇಂದು ಐಐಟಿ-ಖರಗ್‌ಪುರ್, ಐಐಟಿ-ಗಾಂಧಿನಗರ್, ಐಐಟಿ-ಬಾಂಬೆ, ಐಐಟಿ-ಕಾನ್ಪುರ್‌ಗಳಲ್ಲಿ ಐಕೆಎಸ್ ಕೇಂದ್ರಗಳಿವೆ. ಕಾನ್ಪುರ್ ಮತ್ತು ಮಂಡಿ ಕೇಂದ್ರಗಳಲ್ಲಿ ಐಕೆಎಸ್ ಪ್ರಜ್ಞೆಯ ಸಂಶೋಧನೆ, ಪುನರ್ಜನ್ಮ, ವೇದದ ಜೀವಶಾಸ್ತ್ರ ವಿಭಾಗಗಳ ಮುಂಚೂಣಿಯತ್ವ ವಹಿಸಿಕೊಂಡಿದೆ. ಇತ್ತೀಚೆಗೆ ಇಲ್ಲಿ ‘ಪುನರ್ಜನ್ಮದ ವಿಜ್ಞಾನ’ ಕುರಿತು ಚಿಂತನ-ಮಂಥನ ಏರ್ಪಡಿಸಲಾಗಿತ್ತು. ಇಲ್ಲಿ ಇಇಜಿ ದತ್ತಾಂಶ ಮತ್ತು ಜ್ಯೋತಿಷ್ ಶಾಸ್ತ್ರ ಆಧಾರಿತ ಜನನದ ಚಾರ್ಟ್‌ಗಳನ್ನು ಬಳಸಿಕೊಂಡು ಮಕ್ಕಳಲ್ಲಿ ‘ಭೂತಕಾಲದ ನೆನಪುಗಳನ್ನು’ ಪತ್ತೆಹಚ್ಚುವುದರ ಕುರಿತು ಚರ್ಚಿಸಲಾಯಿತು. ಈ ಕಾರ್ಯಕ್ರಮದಲ್ಲಿ ವರ್ಜೀನಿಯಾ ವಿವಿಯ ಡಿಪಾರ್ಟಮೆಂಟ್ ಆಫ್ ಪರ್ಸೆಪ್ಚುಲ್ ಸ್ಟಡಿ ಭಾಗವಹಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಇಲ್ಲಿ ಪುರಾಣ ಆಧಾರಿತ ವಿಚಾರಣೆಗಳನ್ನು ಮುನ್ನೆಲೆಗೆ ತರುವುದರ ಮೂಲಕ ರಾಜಕೀಯ-ಧಾರ್ಮಿಕತೆಯ ತೀವ್ರವಾದಿ ಸಿದ್ಧಾಂತಕ್ಕೆ ಪ್ರಾಶಸ್ತ್ಯ ಕೊಡಲಾಗಿದೆ. ವೈಜ್ಞಾನಿಕ ಮನೋಧರ್ಮ ನೇಪಥ್ಯಕ್ಕೆ ತಳ್ಳಲ್ಪಟ್ಟಿದೆ’ ಎಂದು ಬರೆಯುತ್ತಾರೆ.

ಕೊನೆಯಿರದ ಟಿಪ್ಪಣಿಗಳು

ವಸಾಹತುಶಾಹಿಯ ಆಡಳಿತದಿಂದ ಹೊರಬಂದ ಭಾರತವು ನೆಹರೂ, ಅಂಬೇಡ್ಕರ್, ಮೌಲಾನಾ ಆಝಾದ್ ಮುಂತಾದವರ ನೇತೃತ್ವದಲ್ಲಿ ಸಂವಿಧಾನ ಮತ್ತು ವೈಜ್ಞಾನಿಕ, ವೈಚಾರಿಕ ಆಶಯಗಳ ನೆಲೆಯಲ್ಲಿ ದೇಶ ಕಟ್ಟುವಲ್ಲಿ ನಿರತರಾಗಿದ್ದರು. ಅದೇ ಸಂದರ್ಭದಲ್ಲಿ ಆರೆಸ್ಸೆಸ್ ಪ್ರಾಚೀನ ಸಂಪ್ರದಾಯ, ಚಾತುರ್ವರ್ಣ ವ್ಯವಸ್ಥೆ ಮತ್ತು ವೈಭವೀಕರಿಸಲ್ಪಟ್ಟ ಜ್ಞಾನಪದ್ಧತಿಗಳನ್ನು ಉಳಿಸುವ ಪ್ರಶ್ನೆಯೊಂದಿಗೆ ‘ವಸಾಹತುಶಾಹಿಮುಕ್ತ’ ಭಾರತಕ್ಕಾಗಿ ಕಾರ್ಯಸೂಚಿ ರೂಪಿಸಿತು. ಕಳೆದ ಎಪ್ಪತ್ತು ವರ್ಷಗಳಲ್ಲಿ ವಸಾಹತುಶಾಹಿಯ ಪ್ರಭಾವದಿಂದ ಭಾರತೀಯ ಮನಸ್ಸನ್ನು ಮುಕ್ತಗೊಳಿಸುವ ನೆಪದಲ್ಲಿ ನೆಹರೂವಿಯನ್ ಸಮಾಜವಾದ ಮತ್ತು ಅಂಬೇಡ್ಕರ್ ಸಮ ಸಮಾಜದ ಆಶಯ ಹಿನ್ನೆಲೆಗೆ ಸರಿದು ಆರೆಸ್ಸೆಸ್‌ನ ಕಾನೂನು, ಸಂಶೋಧನೆ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಆಧುನಿಕ ವಿಜ್ಞಾನದ ‘ಬ್ರಾಹ್ಮಣೀಕರಣ-ಸಂಸ್ಕೃತೀಕರಣ’ ಪ್ರಮುಖ ಸ್ಥಾನ ಪಡೆದುಕೊಂಡಿತು. ‘ವಸಾಹತು ಮುಕ್ತ’ ಎಂದರೆ ವಿಜ್ಞಾನದ ಪೌರಾಣಿಕತೆ ಎನ್ನುವ ನೆರೇಶನ್ ರೂಪುಗೊಂಡಿತು. ಈ ಪ್ರಕ್ರಿಯೆ ಹಿಂದುತ್ವ-ಬ್ರಾಹ್ಮಣವಾದದ ಯಾಜಮಾನ್ಯವನ್ನು ಪ್ರಶ್ನಿಸುವ ಬದಲು ಅವುಗಳನ್ನು ಮಾನ್ಯಗೊಳಿಸುವತ್ತ ಹೆಚ್ಚು ಒಲವು ತೋರಿತು. ಇಂತಹ ವಸಾಹತುಮುಕ್ತಗೊಳಿಸುವ ಯೋಜನೆ ಸಂವಾದ ಮತ್ತು ಭಿನ್ನಾಭಿಪ್ರಾಯಗಳ ಮೇಲೆ ಆಧಾರಿತವಾಗಿರುವ ಸಂವಿಧಾನದ ನಾಗರಿಕ-ಕೇಂದ್ರಿತ ವಿಜ್ಞಾನ ದೃಷ್ಟಿಕೋನವನ್ನು ಕಡೆಗಣಿಸುತ್ತಾ ಬಂದಿದೆ. ಇದು ವೈಜ್ಞಾನಿಕ ಮನೋಭಾವದ ಕುಂಠಿತಕ್ಕೆ ಕಾರಣವಾಗಿ ಜ್ಞಾನತಾತ್ವಿಕ (epistemic) ಬಿಕ್ಕಟ್ಟನ್ನು ಸೃಷ್ಟಿಸುವ ಅಪಾಯವನ್ನು ಹೊಂದಿದೆ. ಜವಾಹರಲಾಲ್ ನೆಹರೂ ‘ವೈಜ್ಞಾನಿಕ ಮನೋಭಾವ’ವನ್ನು ರಾಷ್ಟ್ರದ ಅಭಿವೃದ್ಧಿಯ ಸಾಧನವೆಂದು ಕಂಡಿದ್ದರು. ಆದರೆ ಈ ದೃಷ್ಟಿಕೋನವು ಶೀಘ್ರವೇ ನಿರ್ಲಕ್ಷ್ಯಕ್ಕೆ ಒಳಗಾಯಿತು. ಸಂವಿಧಾನದ 51ಎ(ಎಚ್) ವಿಧಿಯಲ್ಲಿ ಉಲ್ಲೇಖಿಸಲಾದ ನಾಗರಿಕರ ಕರ್ತವ್ಯವಾದ ‘ವೈಜ್ಞಾನಿಕ ಮನೋಭಾವ, ಮಾನವತಾವಾದ ಮತ್ತು ಪ್ರಶ್ನಿಸುವ ಹಾಗೂ ಸುಧಾರಣೆಯ ಮನೋಭಾವವನ್ನು ಬೆಳೆಸುವುದು’ ಎಂಬ ಆಶಯವೇ ಅಪ್ರಸ್ತುತಗೊಂಡಿದೆ. ಇದರ ಕೀರ್ತಿ ಆರೆಸ್ಸೆಸ್ ಮತ್ತು ಬಿಜೆಪಿಯ ಪ್ರತಿಗಾಮಿ ಸಿದ್ಧಾಂತ ಹಾಗೂ ವಿರೋಧ ಪಕ್ಷಗಳ ಬೌದ್ಧಿಕ ದಿವಾಳಿತನ, ನಿಷ್ಕ್ರಿಯತೆಗೆ ಸಲ್ಲುತ್ತದೆ.

ಕೆಲವು ಸುಧಾರಣಾ ಪ್ರಯತ್ನಗಳನ್ನು ಹೊರತುಪಡಿಸಿ ಜನಸಾಮಾನ್ಯರಲ್ಲಿ ಹೊಸ ಚಿಂತನೆ ಬೆಳೆಸಲು ಅಗತ್ಯವಾದ ಸಾಮಾಜಿಕ ಪರಿಸ್ಥಿತಿಗಳನ್ನು ನಿರ್ಮಿಸಲು ಭಾರತೀಯ ಪ್ರಭುತ್ವವು ರಾಜಕೀಯ ಇಚ್ಛಾಶಕ್ತಿಯನ್ನು ತೋರಲಿಲ್ಲ. ವಿಜ್ಞಾನವನ್ನು ಪ್ರಜಾಪ್ರಭುತ್ವದ ಸಂಸ್ಥೆಗಳಲ್ಲಿ ನಾಗರಿಕರ ಸಕ್ರಿಯ ಭಾಗವಹಿಸುವಿಕೆ ಮೂಲಕ ಅನುಸರಿಸಬೇಕಾದ, ರಕ್ಷಿಸಬೇಕಾದ ಹಾಗೂ ವಿಮರ್ಶೆಗೆ ಒಳಪಡಿಸಬೇಕಾದ ಮೌಲ್ಯಪೂರ್ಣ ಚಟುವಟಿಕೆಯಾಗಿ ರೂಪಿಸುವಲ್ಲಿಯೂ ಅದು ವಿಫಲವಾಯಿತು.

ವಿಜ್ಞಾನ ಮತ್ತು ತತ್ವಶಾಸ್ತ್ರಗಳು ಮುಕ್ತ ಚರ್ಚೆ, ಭಿನ್ನಾಭಿಪ್ರಾಯ, ಪರಿಶೀಲನೆ ಮತ್ತು ಸುಧಾರಣೆಯ ವಲಯದಲ್ಲೇ ಉಳಿಯಬೇಕು. ಆಗ ಮಾತ್ರ ಅವುಗಳು ಪ್ರಶ್ನಿಸುವ ಸಾಧನಗಳಾಗಿ ಉಳಿಯುತ್ತವೆ. ಆರೆಸ್ಸೆಸ್ ಸಿದ್ಧಾಂತವಾದದ ಉಪಕರಣಗಳಾಗುವುದಿಲ್ಲ. ಇಲ್ಲಿನ ಸಾಮಾಜಿಕ ಸಂಘಟನೆಗಳು, ಚಿಂತಕರು ಈ ಕುರಿತು ‘ಸಾರ್ವಜನಿಕ ಕಥನ’ (public narration) ರೂಪಿಸುವ ಕಡೆಗೆ ಗಮನಹರಿಸಬೇಕು.

Tags

Indian Knowledge SystemIKSVedic Shariticism
share
ಬಿ. ಶ್ರೀಪಾದ ಭಟ್
ಬಿ. ಶ್ರೀಪಾದ ಭಟ್
Next Story
X