Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸಿದ್ದರಾಜು ಕೈ ಹಿಡಿದ ಸಮಗ್ರ ಕೃಷಿ

ಸಿದ್ದರಾಜು ಕೈ ಹಿಡಿದ ಸಮಗ್ರ ಕೃಷಿ

ಕುಂಟನಹಳ್ಳಿ ಮಲ್ಲೇಶಕುಂಟನಹಳ್ಳಿ ಮಲ್ಲೇಶ26 Oct 2026 11:16 AM IST
share
ಸಿದ್ದರಾಜು ಕೈ ಹಿಡಿದ ಸಮಗ್ರ ಕೃಷಿ

ಮಂಡ್ಯ: ಸುಮಾರು 15 ವರ್ಷಗಳ ಹಿಂದೆ ರೇಷ್ಮೆ ಬೆಳೆಯುವ ಸಂದರ್ಭದಲ್ಲಿ ಬೆಳೆ ನಷ್ಟವಾಗಿ ಕೃಷಿಯೇ ಬೇಡವೆಂದು ಮಾಗಡಿಗೆ ಹೋಗಿ ಹೋಟೆಲ್ ಉದ್ಯಮ ಆರಂಭಿಸಿದ್ದ, ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹುಲಿಕೆರೆ ಗ್ರಾಮದ ದಿವಂಗತ ಸಿದ್ದಪ್ಪಅವರ ಪುತ್ರ ಎಚ್.ಎಸ್.ಸಿದ್ದರಾಜು, ಮತ್ತೆ ಗ್ರಾಮಕ್ಕೆ ಬಂದು ಸಮಗ್ರ ಕೃಷಿ ಕೈಗೊಂಡು ಮಾದರಿ ಕೃಷಿಕರಾಗಿ ಗಮನ ಸೆಳೆದಿದ್ದಾರೆ.

ರೇಷ್ಮೆ, ಕಬ್ಬು, ಬಾಳೆಯಂತಹ ಸಾಂಪ್ರದಾಯಿಕ ಬೇಸಾಯದ ಜತೆಗೆ ಶ್ರೀಗಂಧಂತಹ, ಅರಣ್ಯ, ತೋಟಗಾರಿಕೆ ಬೆಳೆಗೆ ಆದ್ಯತೆ ನೀಡುವ ಮೂಲಕ ನಾನಾ ಬಗೆಯ ಬೆಳೆಗಳನ್ನು ಬೆಳೆದು ಸಿದ್ದರಾಜು ವಾರ್ಷಿಕ ಸುಮಾರು 15 ಲಕ್ಷ ರೂ. ಆದಾಯ ಪಡೆಯುತ್ತಿದ್ದಾರೆ.

ಒಟ್ಟು 6 ಎಕರೆ ಜಮೀನಿನಲ್ಲಿ ಒಂದೇ ಬೆಳೆ ಅವಲಂಬಿಸದೆ, ಲಭ್ಯವಿರುವ ಜಮೀನಿನ ಪ್ರತಿಯೊಂದು ಭಾಗವನ್ನೂ ಸಮರ್ಪಕವಾಗಿ ಬಳಸಿಕೊಂಡು ವಿವಿಧ ಬೆಳೆಗಳನ್ನು ಸಂಯೋಜಿಸಿದರೆ ಆದಾಯದ ಜತೆಗೆ ಭವಿಷ್ಯದ ಆಸ್ತಿಯನ್ನೂ ಸೃಷ್ಟಿಸಬಹುದು ಎಂಬುದನ್ನು ಸಿದ್ದರಾಜು ಸಾಧಿಸಿ ಇತರರಿಗೆ ಮಾದರಿಯಾಗಿದ್ದಾರೆ.

ಮೂರು ಎಕರೆ ಜಮೀನಿನಲ್ಲಿ ಬಹುಬೆಳೆ ಪದ್ಧತಿ, ದ್ವಿದಳ ಧಾನ್ಯಗಳ ಸಂಯೋಜನೆ, ಶ್ರೀಗಂಧ, ಮಹಾಗನಿಯಂತಹ ದೀರ್ಘಾವಧಿ ಮರಗಳು ಹಾಗೂ ಹಣ್ಣಿನ ಬೆಳೆಗಳನ್ನು ಒಟ್ಟಿಗೆ ನಿರ್ವಹಿಸುತ್ತಿದ್ದಾರೆ. ಇದರಿಂದ ಕೃಷಿ ಭೂಮಿಯ ಸಮರ್ಪಕ ಬಳಕೆಯೊಂದಿಗೆ ವಿಭಿನ್ನ ಮೂಲಗಳಿಂದ ಆದಾಯ ಗಳಿಸುತ್ತಿದ್ದಾರೆ. ಇನ್ನು ಮೂರು ಎಕರೆ ಪ್ರದೇಶದಲ್ಲಿ ರೇಷ್ಮೆ, ಕಬ್ಬು, ಬಾಳೆ, ಸೊಪ್ಪು, ತರಕಾರಿ ಸೇರಿದಂತೆ ಇತರ ಬೆಳೆಗಳನ್ನು ಬೆಳೆಯಲಾಗಿದೆ.

ಸಿದ್ದರಾಜು ಅವರ ಕೃಷಿಯ ಪ್ರಮುಖ ಆಕರ್ಷಣೆ, ಸುಮಾರು 1.20 ಎಕರೆ ಪ್ರದೇಶದಲ್ಲಿ ಐದು ವರ್ಷಗಳ ಪ್ರಾಯದ ಪ್ರಾಯದ ಸೊಗಸಾಗಿ ಬೆಳೆಯುತ್ತಿರುವ 400 ಶ್ರೀಗಂಧದ ಮರಗಳು. ಇದಲ್ಲದೆ, ಇತ್ತೀಚೆಗೆ 100 ಮಹಾಗನಿ ಮರಗಳನ್ನೂ ನಾಟಿ ಮಾಡಿದ್ದಾರೆ. ಈ ಮರಗಳ ನಡುವಿನ ಜಾಗದಲ್ಲಿ ತೊಗರಿ ಸೇರಿದಂತೆ ಇತರ ದ್ವಿದಳ ಧಾನ್ಯ ಬೆಳೆಗಳನ್ನು ಪೋಷಕ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಉಳಿದ ಸುಮಾರು 1.20 ಎಕರೆ ಜಮೀನಿನಲ್ಲಿ ವೀಳ್ಯದೆಲೆ, ಸುಮಾರು 500 ಬೆಣ್ಣೆ ಹಣ್ಣಿನ ಗಿಡಗಳು, ಚಕ್ಕೆ, ಲವಂಗ, ಜಾಯಿಕಾಯಿ, ಸೀಬೆ, ನೇರಳೆ, ಮಾವಿನಂತಹ ಬಹು ಬೇಡಿಕೆ ಇರುವ ವಿವಿಧ ಹಣ್ಣಿನ ಮರಗಳನ್ನು ಬೆಳೆಸಿದ್ದಾರೆ.

ಸಾವಯವ ಗೊಬ್ಬರ ಬಳಕೆ :

ಸಿದ್ದರಾಜು ಅವರು ಬೆಳೆಗಳಿಗೆ ರಾಸಾಯನಿಕ ಬಳಕೆ ಮಾಡದೆ ಸಂಪೂರ್ಣ ಸಾವಯವ ಗೊಬ್ಬರ ಬಳಸುತ್ತಿದ್ದಾರೆ. ಬೋರ್‌ವೆಲ್ ಕೊರೆಸಿದ್ದು, ಹನಿ ನೀರಾವರಿ ಪದ್ಧತಿ ಅಳವಡಿಸಿದ್ದಾರೆ. ಅವಶ್ಯವಿದ್ದಾಗ ಕೃಷಿ ಕೂಲಿ-ಕಾರ್ಮಿಕರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಉಳಿದಂತೆ ಸಿದ್ದರಾಜು ಅವರೇ ಸ್ವತಃ ಕೃಷಿ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಈ ಕೃಷಿ ಕಾಯಕಕ್ಕೆ ಪತ್ನಿ ಕಾಂತಮ್ಮ, ಮಕ್ಕಳಾದ ಎಸ್.ಎಸ್.ಸಿದ್ದಪ್ಪ, ಎಸ್.ಎಸ್.ಸುನೀಲ್‌ಕುಮಾರ್, ಎಸ್.ಎಸ್.ಶಾರದಾ ಇಡೀ ಕುಟುಂಬ ಸಾಥ್ ನೀಡುತ್ತಿದೆ.

ಸಿದ್ದರಾಜು ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳಿಂದ ಸಿಗುವ ತಾಂತ್ರಿಕ ಸಲಹಾ ಮಾಹಿತಿ ಮಾಹಿತಿ ಹಾಗೂ ಸಹಾಯಧನ, ಸವಲತ್ತು ಬಳಸಿಕೊಂಡು ಸಮಗ್ರ ಕೃಷಿ ಪದ್ಧತಿ ಅನುಷ್ಠಾನಗೊಳಿಸಿದ್ದಾರೆ. ಜತೆಗೆ ಸೂಕ್ಷ್ಮನೀರಾವರಿ ಪದ್ಧತಿ ಅಳವಡಿಸಿಕೊಂಡು ಸುಸ್ಥಿರ ಕೃಷಿ ಮಾಡಿ ಮಾದರಿಯಾಗಿದ್ದಾರೆ. ನಮ್ಮ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ದೊರಕಿಸಿಕೊಟ್ಟಿದ್ದೇವೆ. ಇತರ ರೈತರು ಸಮಗ್ರ ಕೃಷಿಯನ್ನು ಕೈಗೊಂಡು ಕೃಷಿಯನ್ನು ಲಾಭದಾಯಕ ಮಾಡಿಕೊಳ್ಳಬೇಕು. ನಮ್ಮ ಇಲಾಖೆ ಅದಕ್ಕೆ ಸಂಪೂರ್ಣ ಸಹಕಾರ ನೀಡುತ್ತದೆ.

-ಡಿ.ಪರಮೇಶ್, ಸಹಾಯಕ ಕೃಷಿ ನಿರ್ದೇಶಕ, ಮದ್ದೂರು.

ರೇಷ್ಮೆ ಕೃಷಿಯೊಂದನ್ನೇ ಕೈಗೊಂಡು ಕೈ ಸುಟ್ಟುಕೊಂಡಿದ್ದೆ. ಊರು ತೊರೆದು ಮಾಗಡಿ ಗ್ರಾಮದಲ್ಲಿ ಹೋಟೆಲ್ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದೆ. ಇತ್ತೀಚೆಗೆ ಸಮಗ್ರ ಬೇಸಾಯ ಪದ್ಧತಿಯಿಂದ ಕೃಷಿಯಲ್ಲಿ ಯಶಸ್ವಿಯಾಗಿರುವವರ ವಿಚಾರವನ್ನು ಮಾಧ್ಯಮಗಳಲ್ಲಿ ಗಮನಿಸಿದೆ. ಮತ್ತೆ ಗ್ರಾಮಕ್ಕೆ ಮರಳಿ ಇರುವ ಆರು ಎಕರೆ ಜಮೀನನ್ನು ಸಜ್ಜುಗೊಳಿಸಿ ಬಹುಬೆಳೆ ಪದ್ಧತಿಯನ್ನು ಅಳವಡಿಸಿಕೊಂಡೆ. ಇದರಿಂದ ಸಾಕಷ್ಟು ಆದಾಯವನ್ನು ಕಂಡುಕೊಂಡು ಮನೆಯವರೆಲ್ಲಾ ಕೃಷಿಯಲ್ಲಿ ತೊಡಗಿಕೊಂಡಿದ್ದೇವೆ.

-ಎಚ್.ಎಸ್.ಸಿದ್ದರಾಜು, ಮಾದರಿ ಕೃಷಿಕ.

Tags

Agriculture
share
ಕುಂಟನಹಳ್ಳಿ ಮಲ್ಲೇಶ
ಕುಂಟನಹಳ್ಳಿ ಮಲ್ಲೇಶ
Next Story
X