Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕೊರಗರ ಒಳಮೀಸಲಾತಿ ಮತ್ತು ಜಾರಿಯಲ್ಲಿರುವ...

ಕೊರಗರ ಒಳಮೀಸಲಾತಿ ಮತ್ತು ಜಾರಿಯಲ್ಲಿರುವ ಒಳಮನುವಾದ

ನವೀನ್ ಸೂರಿಂಜೆನವೀನ್ ಸೂರಿಂಜೆ19 Sept 2025 12:31 PM IST
share
ಕೊರಗರ ಒಳಮೀಸಲಾತಿ ಮತ್ತು ಜಾರಿಯಲ್ಲಿರುವ ಒಳಮನುವಾದ

ಭಾಗ - 2

ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರವು ಅರಣ್ಯ ಹಕ್ಕು ಕಾಯ್ದೆ ಸೇರಿದಂತೆ ಅದಿವಾಸಿಗಳ ಹಕ್ಕುಗಳ ಬಗೆಗಿನ ಹಲವು ‘ನೀತಿ’ಗಳನ್ನು ಜಾರಿ ಮಾಡಿತ್ತು. ಅದರಲ್ಲಿ PTG (Primitive Tribal Group) (ಆದಿಮ ಬುಡಕಟ್ಟು)ಗಳನ್ನು ‘ವಿಶೇಷ ದುರ್ಬಲ ಬುಡಕಟ್ಟು ಗುಂಪು’ (PVTGs/ Particularly Vulnerable Tribal Groups) ಎಂದು ಮರು ನಾಮಕರಣ ಮಾಡಿದ್ದು ಪ್ರಮುಖವಾದ ನಡೆ. ಕರ್ನಾಟಕದಲ್ಲಿ ಕೊರಗರು ಮತ್ತು ಕೊಡಗಿನ ಜೇನು ಕುರುಬರು PTG (ಆದಿಮ ಬುಡಕಟ್ಟು) ಪೈಕಿ ‘ವಿಶೇಷ ದುರ್ಬಲ ಬುಡಕಟ್ಟು ಗುಂಪು’ (PVTGs/ Particularly Vulnerable Tribal Groups) ಎಂದು ಸರಕಾರ ಗುರುತಿಸಿದೆ. ಆದರೆ ಇಂತಹ Pಗಿಖಿಉ’s ಗಳಿಗೆ ಪ್ರತ್ಯೇಕ ಮೀಸಲಾತಿ ನೀಡಬೇಕಿದೆ.

ಅಸ್ಪಶ್ಯತೆ, ಅಜಲು ಪದ್ಧತಿಗಳಿಂದ ನಲುಗಿರುವ ಕೊರಗ ಸಮುದಾಯಕ್ಕೆ ಒಳಮೀಸಲಾತಿ ಜಾರಿ ಎಷ್ಟು ಮುಖ್ಯವೇ, ಅವರನ್ನು ಬಾಧಿಸುತ್ತಿರುವ ಒಳಮನುವಾದವನ್ನು ಕಿತ್ತೊಗೆಯುವುದೂ ಅಷ್ಟೇ ಮುಖ್ಯ. ಕಾಂಗ್ರೆಸ್ ನೇತೃತ್ವದ ಕರ್ನಾಟಕ ರಾಜ್ಯ ಸರಕಾರದ ಸಮಾಜ ಕಲ್ಯಾಣ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪರವರು 2000ನೇ ನವೆಂಬರ್ 8ರಂದು ‘ಕರ್ನಾಟಕ ಕೊರಗರ (ಅಜಲು ಪದ್ಧತಿ ನಿಷೇಧ) ವಿಧೇಯಕ 2000’ ಎಂಬ ಐತಿಹಾಸಿಕ ಕಾಯ್ದೆಯನ್ನು ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕರಿಸಿಕೊಂಡರು. ನವೆಂಬರ್ 14, 2000ದಂದು ವಿಧಾನಪರಿಷತ್‌ನಲ್ಲಿ ಯಾವುದೇ ವಿರೋಧ, ತಿದ್ದುಪಡಿಗಳು ಇಲ್ಲದೆಯೇ ಕಾಯ್ದೆ ಅಂಗೀಕಾರಗೊಂಡಿತ್ತು.

ಆದರೆ ಅಜಲು ಪದ್ಧತಿ, ಅಸ್ಪಶ್ಯತೆ ಸಂಪೂರ್ಣ ಕೊನೆಗೊಂಡಿದೆಯೇ? ಇಲ್ಲ! ಹಾಗಾಗಿ, ‘ವಿಶೇಷ ದುರ್ಬಲ ಬುಡಕಟ್ಟು ಗುಂಪು’ ಎನ್ನಿಸಿಕೊಂಡಿರುವ ಕೊರಗರು ಎದುರಿಸುತ್ತಿರುವ ಅಸ್ಪಶ್ಯತೆ ಮತ್ತು ಅಜಲು ಪದ್ಧತಿಯನ್ನು ಎದುರಿಸಲು ‘ನಿಷೇಧ ಮತ್ತು ಕಾನೂನು’ಗಳು ಸಾಕಾಗುವುದಿಲ್ಲ. ಹಾಗಾಗಿ ಅಜಲು ನಿಷೇಧ ಮತ್ತು ಕಾನೂನಿನ ಜೊತೆಜೊತೆಗೆ ಈ ಕೆಳಕಂಡ ಅಂಶಗಳ ಜಾರಿಗೆ ಸರಕಾರ ಮನಸ್ಸು ಮಾಡಬೇಕು.

1. ಅದೃಶ್ಯ ಅಸ್ಪಶ್ಯತೆ ನಿರ್ಮೂಲನ

ಹಿಂದೆ ದೇವಸ್ಥಾನ, ದೈವಸ್ಥಾನಗಳ ಜಾತ್ರೆ, ನೇಮ, ಕೋಲದ ಸಂದರ್ಭದಲ್ಲಿ ಕೊರಗರು ದೂರದ ಗದ್ದೆಯಲ್ಲಿ ನಿಂತು ಡೋಲು ಬಾರಿಸಬೇಕಿತ್ತು. ಈಗ ಈ ರೀತಿ ಗದ್ದೆಯಲ್ಲಿ ನಿಂತು ಡೋಲು ಬಾರಿಸುವುದನ್ನು ನಿಲ್ಲಿಸಲಾಗಿದೆ. ಹಿಂದೆ ದೇವಸ್ಥಾನದ ಜಾತ್ರೆಯಲ್ಲಿ ಎಂಜಲು ಎಲೆಯನ್ನು ಆಯ್ದು ಕೊರಗರು ಊಟ ಮಾಡಬೇಕಿತ್ತು. ಈ ಪದ್ಧತಿಯೂ ಈಗ ನಿಂತಿದೆ. ಕಾನೂನಿನ ಭಯದಿಂದ ಈ ಪದ್ಧತಿಗಳು ನಿಂತಿದೆಯೇ ವಿನಹ ಅಸ್ಪಶ್ಯತೆಯ ಮನೋಭಾವ ನಿಂತಿಲ್ಲ. ದೇವಸ್ಥಾನದೊಳಗೆ ನುಡಿಸುವ ವಾದ್ಯ ಪರಿಕರಗಳಲ್ಲಿ ಕೊರಗರ ಡೋಲು ಕೂಡಾ ಸೇರ್ಪಡೆಯಾಗಬೇಕು. ದೇವಸ್ಥಾನದ ಉತ್ಸವಗಳಲ್ಲಿ, ಗರ್ಭಗುಡಿಯ ಪಕ್ಕದಲ್ಲಿ ನುಡಿಸುವ ವಾದ್ಯಮೇಳದ ತಂಡದಲ್ಲಿ ಕೊರಗರನ್ನೂ ಸೇರಿಸಿಕೊಳ್ಳಬೇಕು. ದೇವಸ್ಥಾನಕ್ಕೆ ವಂಶಪಾರಂಪರ್ಯ ವಾದ್ಯ ನುಡಿಸುವ ಶೇರಿಗಾರ್, ತಾಸೆ ಬಡಿಯುವವರು ಇರುವಂತೆಯೇ ವಂಶಪಾರಂಪರ್ಯವಾಗಿ ದೇವಸ್ಥಾನಕ್ಕೆ ಡೋಲು ಬಡಿಯುವ ಕೊರಗರನ್ನೂ ವಾದ್ಯಮೇಳದ ತಂಡದಲ್ಲಿ ಸೇರಿಸಿಕೊಳ್ಳಬೇಕು. ಕಂಬಳ, ಅರಸರ ಪಟ್ಟಾಭಿಷೇಕಗಳು ನಡೆಯುವಾಗ ದೂರದಲ್ಲಿ ಗದ್ದೆಯಲ್ಲಿ ಡೋಲು ಬಾರಿಸುತ್ತಿದ್ದ ಕೊರಗರನ್ನು ಕೊಂಬು ಕಹಳೆ ಊದುವ ತಂಡದ ಜೊತೆ ಸೇರಿಸಿಕೊಳ್ಳಬೇಕು. ಕೊರಗರ ಡೋಲು ಬೇಡ ಎನ್ನುವುದು ಅಜಲು ಸಮಸ್ಯೆಗೆ ಪರಿಹಾರವಲ್ಲ. ಕೊರಗರ ಡೋಲು ಒಂದು ವಾದ್ಯ ಪರಿಕರವಾಗಿದ್ದು, ಅದನ್ನು ಎಲ್ಲಾ ವಾದ್ಯಗಳೊಂದಿಗೆ ಸೇರಿಸಿಕೊಳ್ಳುವುದು ಪರಿಹಾರ. ದೇವಸ್ಥಾನದ ಜಾತ್ರೆಗಳಲ್ಲಿ ಸಹಪಂಕ್ತಿಯಲ್ಲಿ ಕೊರಗರು ಕುಳಿತು ಊಟ ಮಾಡುವ ವ್ಯವಸ್ಥೆಯನ್ನು ಸ್ಥಳೀಯ ಆಡಳಿತಗಳು ಖಾತ್ರಿಪಡಿಸಿಕೊಳ್ಳಬೇಕು.

2. ಅಜಲು ಪರಿಹಾರ

ಅಜಲು ಪದ್ಧತಿಯ ಆಚರಣೆ ಕೊರಗರಿಗೆ ವಂಶಪಾರಂಪರ್ಯವಾಗಿರುತ್ತದೆ. ದೇವಸ್ಥಾನ, ದೈವಸ್ಥಾನಕ್ಕೆ ವಂಶಪಾರಂಪರ್ಯ ಅರ್ಚಕ ಹೇಗಿರುತ್ತಾನೋ ಅದೇ ರೀತಿ ಕರಾವಳಿಯ ದೇವಸ್ಥಾನ, ದೈವಸ್ಥಾನ, ಕಂಬಳ, ಜಾತ್ರೆ, ಕೋಲ, ನೇಮಗಳಿಗೆ ವಂಶಪಾರಂಪರ್ಯ ಅಜಲು ಕಾರ್ಯ ನಿರ್ವಹಿಸುವ ಕೊರಗ ಕುಟುಂಬಗಳಿರುತ್ತವೆ. ಅಂತಹ ಅಜಲು ನಿರ್ವಹಿಸುವ ಕೊರಗ ಕುಟುಂಬಗಳು ದೇವಸ್ಥಾನದ ಜಾತ್ರೆಯ ಸಂದರ್ಭ ಕದೋನಿ (ಸ್ಫೋಟಕ) ಹಾರಿಸುವುದು, ದೂರದ ಗದ್ದೆಯಲ್ಲಿ ನಿಂತು ಡೋಲು ಬಡಿಯುವುದು, ದೇವಸ್ಥಾನದೊಳಗೆ ಜಾತ್ರೆಯಾಗುವಾಗ ದೂರದ ಗದ್ದೆಯಲ್ಲಿ ನಿಂತು ಕೊಳಲು ಊದುವುದು ಇತ್ಯಾದಿ ಅಜಲು ಕೆಲಸಗಳನ್ನು ನಿರ್ವಹಿಸಬೇಕಿರುತ್ತದೆ. ಇದು ವೃತ್ತಿಯೂ ಹೌದು, ಶೋಷಣೆಯೂ ಹೌದು. ಅಜಲು ಪದ್ಧತಿ ನಿಷೇಧದ ಬಳಿಕ ಈ ವೃತ್ತಿಗೆ ನಿಷೇಧ ಹೇರಲಾಗಿದೆ. ಅದು ಸರಿಯಾಗಿದೆ. ಅಜಲು ಅಸ್ಪಶ್ಯತೆ ನಿವಾರಣೆ ಎಂದರೆ ‘ನೀವು ನಮ್ಮ ಕಡೆ ಬರೋದೇ ಬೇಡ. ಆಗ ಅಸ್ಪಶ್ಯತೆ/ಅಜಲಿನ ಪ್ರಶ್ನೆಯೇ ಇಲ್ಲ’ ಎಂದು ಕೊರಗರನ್ನು ದೂರ ತಳ್ಳುವುದಲ್ಲ. ವಿಪರ್ಯಾಸ ಎಂದರೆ ಅಜಲು ನಿಷೇಧ ಕಾಯ್ದೆ ಜಾರಿಯಾದ ಬಳಿಕ ದೂರದ ಗದ್ದೆಯಲ್ಲಿ ಡೋಲು ಬಡಿಯುತ್ತಿದ್ದ ಕೊರಗರನ್ನು ದೇವಸ್ಥಾನದೊಳಗೆ ಕರೆಯುವ ಬದಲು ಕಾನೂನಿನ ಜಾರಿಗಾಗಿ ಗದ್ದೆಗೆ ಪ್ರವೇಶ ನಿಷೇಧಿಸಲಾಯಿತು! ಅಜಲು ಅಸ್ಪಶ್ಯತೆ ನಿಷೇಧ ಎಂದರೆ ಕೊರಗರ ವೃತ್ತಿ, ಬದುಕನ್ನು ಎಲ್ಲರ ಜೊತೆಗೂಡಿ ಒಳಗೊಳ್ಳುವುದು ಎಂದರ್ಥ. ಆದರೆ ಅಜಲು ಪದ್ಧತಿ ನಿಷೇಧದ ಬಳಿಕ ದೇವಸ್ಥಾನದಲ್ಲಿ ಕೊರಗರ ಸಾಮಾಜಿಕ ಸ್ಥಾನಮಾನ ಬದಲಾಗಿದೆಯೇ? ಇಲ್ಲ, ಯಾಕೆಂದರೆ ಅಜಲು ನಿರ್ವಹಿಸುತ್ತಿದ್ದ ಕೊರಗರನ್ನು ಸಾಮಾಜಿಕವಾಗಿ ಒಳಗೊಳ್ಳುವ ಪ್ರಕ್ರಿಯೆ ಕಾನೂನು ಪ್ರಕಾರ ನಡೆಯಲಿಲ್ಲ. ಹಾಗಾಗಿ, ಯಾವೆಲ್ಲಾ ಕೊರಗ ಕುಟುಂಬಗಳು ದೇವಸ್ಥಾನದಲ್ಲಿ ಅಪ್ಪ, ತಾತ, ಮುತ್ತಾತಂದಿರ ಕಾಲದಲ್ಲಿ ಅಜಲು ಪದ್ಧತಿಯನ್ನು ಆಚರಿಸುತ್ತಿದ್ದರೋ ಅಂತಹ ಕುಟುಂಬದ ಒರ್ವ ಕೊರಗ ವ್ಯಕ್ತಿಯನ್ನು ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಸದಸ್ಯ/ನಿರ್ದೇಶಕರನ್ನಾಗಿ ನೇಮಿಸಬೇಕಿದೆ. ಬಂಟ, ಬ್ರಾಹ್ಮಣ, ಜೈನ, ಬಿಲ್ಲವರ ಮಧ್ಯೆ ಕೊರಗ ವ್ಯಕ್ತಿಯೂ ದೇವಸ್ಥಾನ, ದೈವಸ್ಥಾನ, ಕಂಬಳಗಳ ಆಡಳಿತ ಮಂಡಳಿಯಲ್ಲಿ ಕಡ್ಡಾಯ ಇರುವಂತೆ ಕಾನೂನು ತರಬೇಕಿದೆ. ಅದು ಶತಶತಮಾನಗಳಿಂದ ನಡೆದ ಅಜಲು ಶೋಷಣೆಗೆ ಪರಿಹಾರವೂ ಹೌದು, ವಂಶಪಾರಂಪರ್ಯವಾಗಿ ದೇವಸ್ಥಾನ/ದೈವಸ್ಥಾನದ ಜೊತೆ ಇದ್ದ ಸಂಬಂಧದ ಮುಂದುವರಿಕೆಯೂ ಹೌದು. ಇವೆಲ್ಲಕ್ಕಿಂತ ಮುಖ್ಯವಾಗಿ ಕೊರಗರು ತಾವು ಶೋಷಣೆಗೆ ಒಳಗಾದ ದೇವಸ್ಥಾನ, ದೈವಸ್ಥಾನ, ಕಂಬಳಗಳಲ್ಲಿ ಅಧಿಕಾರದ ಸ್ಥಾನಮಾನ ಪಡೆಯುವ ಮೂಲಕ ಸಮಾಜದಲ್ಲಿ ಪಡೆಯುವ ‘ಸಾಮಾಜಿಕ ನ್ಯಾಯ’ವೂ ಹೌದು.

ಕೊರಗರಿಗಾಗಿ ಪ್ರತ್ಯೇಕ ಇಲಾಖೆ

ಎಲ್ಲಕ್ಕಿಂತ ಮುಖ್ಯವಾಗಿ, ಅಳಿವಿನಂಚಿನಲ್ಲಿರುವ ಕೊರಗ ಸಮುದಾಯವನ್ನು ಉಳಿಸಿಕೊಳ್ಳಲು ಯುದ್ಧೋಪಾದಿಯ ತುರ್ತು ಕ್ರಮಗಳನ್ನು ಸರಕಾರ ತೆಗೆದುಕೊಳ್ಳಬೇಕಿದೆ. ಅದಕ್ಕಾಗಿ ಸರಕಾರ ‘ಕೊರಗರ ಅಭಿವೃದ್ಧಿಗೆಂದೇ ಪ್ರತ್ಯೇಕ ಇಲಾಖೆ’ ಸ್ಥಾಪಿಸಬೇಕಿದೆ. ಕೊರಗರ ಅಭಿವೃದ್ಧಿಗೆಂದೇ ಪ್ರತ್ಯೇಕ ಇಲಾಖೆ ಸ್ಥಾಪನೆ ಎನ್ನುವುದು ಅತಿಶಯೋಕ್ತಿಯಲ್ಲ. ಸಮಾಜ ಸುಧಾರಕ ರಾಜಕಾರಣಿ ಎಂದೇ ಖ್ಯಾತರಾಗಿದ್ದ ದೇವರಾಜ ಅರಸುರವರು ಮುಖ್ಯಮಂತ್ರಿಯಾಗಿದ್ದಾಗ ‘ಕೊರಗರಿಗಾಗಿ ಪ್ರತ್ಯೇಕ ಇಲಾಖೆ’ ಪ್ರಸ್ತಾವವನ್ನು ಸರಕಾರವೇ ಮುನ್ನೆಲೆಗೆ ತಂದಿತ್ತು. ‘ದಕ್ಷಿಣ ಕನ್ನಡ ಜಿಲ್ಲೆಯ ದೇವಸ್ಥಾನಗಳ ಜಾತ್ರೆಗಳಲ್ಲಿ, ಮದುವೆ ಮುಂಜಿ ಮುಂತಾದ ಧಾರ್ಮಿಕ ಸಮಾರಂಭಗಳಲ್ಲಿ ಊಟವಾದ ನಂತರ ಹೊರಗೆ ಹಾಕಿದ ಎಂಜಲು ಎಲೆಗಳನ್ನು ಕೊರಗರು ಆಯ್ದು ಎಂಜಲು ಅನ್ನವನ್ನು ತಿನ್ನುವುದು ಸರಕಾರದ ಗಮನಕ್ಕೆ ಬಂದಿದೆಯೇ?’ ಎಂಬ ಚರ್ಚೆ 11 ನವೆಂಬರ್ 1976ರಂದು ವಿಧಾನಸಭೆಯಲ್ಲಿ ನಡೆದಿತ್ತು. ತುಂಬಾ ಹೊತ್ತಿನ ಚರ್ಚೆಯ ಬಳಿಕ ಸಮಾಜ ಕಲ್ಯಾಣ ಸಚಿವರಾಗಿದ್ದ ವಿ.ಎಸ್. ಪಾಟೀಲ್ ರವರು ಸುದೀರ್ಘ ಉತ್ತರ ನೀಡಿದ್ದರು. ಈ ಉತ್ತರದ ಕೊನೆಯಲ್ಲಿ ‘‘ಈ ಬ್ಯಾಕ್‌ವರ್ಡ್ ಬುಡಕಟ್ಟು ಸಮುದಾಯಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸುವುದಕ್ಕೆ ಒಂದು ಇಲಾಖೆಯನ್ನೇ ಸ್ಥಾಪನೆ ಮಾಡಬೇಕೋ ಅಥವಾ ಯಾವ ರೀತಿ ಮಾಡಬೇಕು ಎಂದು ನಾವು ಯೋಚನೆ ಮಾಡುತ್ತಿದ್ದೇವೆ’’ ಎಂದಿದ್ದರು. ಕೊರಗರಿಗೆಂದೇ ಪ್ರತ್ಯೇಕ ಇಲಾಖೆ ಸ್ಥಾಪನೆಯ ಪ್ರಸ್ತಾವವಾಗಿ(2025ರ ವೇಳೆಗೆ) 50 ವರ್ಷಗಳಾಗಿವೆ. 1976ರಿಂದ ಇಲ್ಲಿಯವರೆಗೆ ಕೊರಗರ ಪರಿಸ್ಥಿತಿ ಏನೇನೂ ಬದಲಾವಣೆಯಾಗಿಲ್ಲ. ಅಸ್ಪಶ್ಯರಿಗೇ ಅಸ್ಪಶ್ಯರಾಗಿರುವ ಅತೀ ಸೂಕ್ಷ್ಮ ಸಮುದಾಯವಾಗಿರುವ ಕೊರಗ ಸಮುದಾಯವರಿಗೆ ಎಸ್‌ಸಿ/ಎಸ್‌ಟಿ ಕೋಟಾದ ಸೌಲಭ್ಯಗಳು ಮತ್ತು ಸಮಾನ ಅವಕಾಶಗಳು ದೊರಕಲು ಇನ್ನೂ ಹಲವು ವರ್ಷಗಳು ಬೇಕಾಗಬಹುದು. ಅಲ್ಲಿಯವರಿಗೆ ಅಳಿವಿನಂಚಿನಲ್ಲಿರುವ ಈ ಕೊರಗ ಜನಾಂಗ ಉಳಿಯಬೇಕಾದರೆ ಕೊರಗರಿಗೆ ಪ್ರತ್ಯೇಕ ಇಲಾಖೆ ಅಗತ್ಯವಿದೆ. ಕನಿಷ್ಠ, ಬ್ರಾಹ್ಮಣ ಅಭಿವೃದ್ಧಿ ನಿಗಮ ಇದ್ದಂತೆ ‘ಕೊರಗ ಅಭಿವೃದ್ಧಿ ನಿಗಮ’ವನ್ನಾದರೂ ಸರಕಾರ ಸ್ಥಾಪಿಸಬೇಕಿದೆ.

ಕೊರಗರಿಗೆ ರಾಜಕೀಯ ಪ್ರಾತಿನಿಧ್ಯ

ಕೆಲವೇ ಸಾವಿರ ಸಂಖ್ಯೆಯಲ್ಲಿರುವ, ವರ್ಷ ವರ್ಷ ಜನಸಂಖ್ಯೆ ಇಳಿಮುಖವಾಗುತ್ತಿರುವ ಸಮುದಾಯವಾಗಿರುವ ಕೊರಗರು ನೇರ ಚುನಾವಣಾ ಸ್ಪರ್ಧೆಯ ಮೂಲಕ ರಾಜಕೀಯ ಪ್ರಾತಿನಿಧ್ಯ ಪಡೆಯಲು ಸಾಧ್ಯವಿಲ್ಲ. ಕರಾವಳಿಯ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕೊರಗರಿಗೆ ಮೀಸಲಾತಿ ಇರಬೇಕು ಅಥವಾ ಸರಕಾರವೇ ಓರ್ವ ಕೊರಗ ಹೋರಾಟಗಾರರನ್ನು ಪಾಲಿಕೆ, ಜಿ.ಪಂ., ತಾ.ಪಂ.ಗಳಿಗೆ ನಾಮನಿರ್ದೇಶನ ಮಾಡಬೇಕು.

ಭಾಷೆ ಮತ್ತು ಸಂಸ್ಕೃತಿ

ಕೊರಗರ ಕೊರ‌್ರ ಭಾಷೆ ಮತ್ತು ವಿಭಿನ್ನ ಸಂಸ್ಕೃತಿ ಶ್ರೀಮಂತವಾಗಿವೆ. ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಕೊರಗ ಸಮುದಾಯ ದುರ್ಬಲವಾಗಿದ್ದರೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಸಮುದಾಯವೊಂದರ ಭಾಷೆ ಮತ್ತು ಸಂಸ್ಕೃತಿ ನಶಿಸಿದರೆ ಸಮುದಾಯವೂ ನಶಿಸಿಹೋಗುತ್ತದೆ. ಹಾಗಾಗಿ ಇಂತಹ ಸೂಕ್ಷ್ಮ ಸಮುದಾಯಗಳ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ಪ್ರತ್ಯೇಕ ಸಮಿತಿ/ಪ್ರಾಧಿಕಾರವನ್ನು ರಚಿಸಬೇಕಿದೆ.

ಕಾಸರಗೋಡು-ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಗಳಲ್ಲಿ ಹರಡಿಕೊಂಡಿರುವ ಕೊರಗರ ಸಂಖ್ಯೆ ಇಳಿಮುಖವಾಗಲು ಎರಡು ಕಾರಣಗಳೇನೆಂದರೆ; ಹುಟ್ಟುವವರ ಸಂಖ್ಯೆಯ ಇಳಿಕೆ, ಸಾಯುವವರ ಸಂಖ್ಯೆಯ ಏರಿಕೆ! ಈ ಎರಡೂ ದುರ್ಘಟನೆಗಳಿಗೆ ಹಸಿವು, ಅಪೌಷ್ಟಿಕತೆಯೇ ಕಾರಣ. ಈ ಹಸಿವು ಅಪೌಷ್ಟಿಕತೆಗೆ ಮನುವಾದ ಕಾರಣ.

ಹಾಗಾಗಿ, ಸರಕಾರವೇ ಘೋಷಿಸಿದ ‘ವಿಶೇಷ ದುರ್ಬಲ ಬುಡಕಟ್ಟು ಗುಂಪು’ (PVTGs/ Particularly Vulnerable Tribal Groups)ಗಳನ್ನು ಇತರ ಬುಡಕಟ್ಟು ಗುಂಪುಗಳೊಂದಿಗೆ ಹೋರಾಡಿ ಬದುಕುವುದಕ್ಕೆ ಅವಕಾಶ ಮಾಡಿಕೊಡದೆ ಕೊರಗರಿಗೆ ಪ್ರತ್ಯೇಕ ಒಳಮೀಸಲಾತಿ ಘೋಷಿಸಬೇಕಿದೆ. ಒಳಮೀಸಲಾತಿ ಘೋಷಿಸುವುದರೊಂದಿಗೆ ಅದೃಶ್ಯ ಅಸ್ಪಶ್ಯತೆ, ಅಜಲು ಪದ್ಧತಿಯನ್ನು ಜಾರಿಯಲ್ಲಿಟ್ಟಿರುವ ಒಳಮನುವಾದವನ್ನು ಕಿತ್ತೊಗೆಯಬೇಕಿದೆ. ಒಂದು ‘ಪುಟ್ಟ’ದಾದ ಅಳಿವಿನಂಚಿನಲ್ಲಿರುವ ಸಮುದಾಯವನ್ನು ಒಂದು ಸರಕಾರದಿಂದ ರಕ್ಷಿಸಲಾಗದೇ ಇದ್ದರೆ ಅದು ‘ಘನ ಸರಕಾರ’ ಎಂದು ಅನ್ನಿಸಿಕೊಳ್ಳುವುದಾದರೂ ಹೇಗೆ ?

share
ನವೀನ್ ಸೂರಿಂಜೆ
ನವೀನ್ ಸೂರಿಂಜೆ
Next Story
X