Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಒಳ ಮೀಸಲಾತಿ ಸಮೀಕ್ಷೆ ಒಡಲೊಳಗಿನ ಬೇಗುದಿ

ಒಳ ಮೀಸಲಾತಿ ಸಮೀಕ್ಷೆ ಒಡಲೊಳಗಿನ ಬೇಗುದಿ

ಡಾ. ನಾಗರಾಜು ಎನ್.ಡಾ. ನಾಗರಾಜು ಎನ್.1 Jun 2025 2:55 PM IST
share
ಒಳ ಮೀಸಲಾತಿ ಸಮೀಕ್ಷೆ ಒಡಲೊಳಗಿನ ಬೇಗುದಿ

ರಾಜ್ಯ ಸರಕಾರ ಪರಿಶಿಷ್ಟಜಾತಿಗಳ ಒಳ ಮೀಸಲಾತಿ ವರ್ಗೀಕರಣಕ್ಕಾಗಿ ಜಾತಿ ಸಮೀಕ್ಷೆ ಕೈಗೊಂಡಿದ್ದು, ಜಾತಿ ಸಮೀಕ್ಷೆ ಸಾಮಾಜಿಕ ನ್ಯಾಯದ ಸೂತ್ರ ಎಂಬಂತೆ ಮನಗೊಂಡಿದೆ. ಇದು ಒಪ್ಪಿತ ವಿಧಾನ ಕೊಡ. ಏಕೆಂದರೆ ಗಣತಿಗಿಂತ ಶಿಷ್ಟ ವಿಧಾನ ಮತ್ತೊಂದಿಲ್ಲ. ಆದ್ದರಿಂದ ಮೀಸಲಾತಿಗಾಗಿ ಆಗ್ರಹಿಸುತ್ತಿರುವ, ಹೋರಾಡುತ್ತಿರುವ ಬಹುತೇಕ ಜಾತಿಗಳು ಜಾತಿ ಸಮೀಕ್ಷೆಯನ್ನು ಒಪ್ಪಿಕೊಂಡಿವೆ ಹಾಗೂ ಒಳ ಮೀಸಲಾತಿಯನ್ನು ವಿರೋಧಿಸುತ್ತಿದ್ದ ಕೆಲ ಜಾತಿಗಳು ಇಂದು ಮೌನಕ್ಕೆ ಜಾರಿದ್ದು ಅನಿವಾರ್ಯವಾಗಿ ಜಾತಿಗಣತಿಯನ್ನು ಒಪ್ಪಿಕೊಂಡಿವೆ.

ಸರಕಾರ ಅಪಾರ ಪ್ರಚಾರ ಆಂದೋಲನದೊಂದಿಗೆ ಜಾತಿ ಸಮೀಕ್ಷೆಯಲ್ಲಿ ಸಂಬಂಧಿಸಿದ ಪ್ರತಿಯೊಬ್ಬರೂ ಭಾಗವಹಿಸಿ ಮಾಹಿತಿ ದಾಖಲಿಸಬೇಕೆಂದು ಕೋರಿದೆ ಹಾಗೂ ಮಾಧ್ಯಮಗಳಲ್ಲಿ ಪ್ರಚಾರಕ್ಕಾಗಿ ಕೋಟಿಗಟ್ಟಲೆ ಹಣ ಖರ್ಚುಮಾಡುತ್ತಿದೆ. ಅಲ್ಲದೆ ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಬಹಿರಂಗ ಜಾಗೃತಿ ಮೂಡಿಸಲಾಗುತ್ತಿದೆ. ಹಾಗೆಯೇ ಸಂಬಂಧಿಸಿದ ಜಾತಿಗಳ ಚುನಾಯಿತ ಪ್ರತಿನಿಧಿ ಮತ್ತು ಅಧಿಕಾರಸ್ಥರಿಂದ ಹಿಡಿದು ಅಖಂಡ ಸಮುದಾಯದ ಮುಖಂಡರು ಮತ್ತು ಉದಯೋನ್ಮುಖ ನಾಯಕರು ಜಾತಿ ಸಮೀಕ್ಷೆ ಕಾರ್ಯದಲ್ಲಿ ತೊಡಗಿಸಿಕೊಂಡು ಜಾತಿ ಸೇವೆಯಲ್ಲಿ ತೊಡಗಿರುವುದು ಸ್ವಾಗತಾರ್ಹ.

ಒಳ ಮೀಸಲಾತಿ ಸಮೀಕ್ಷೆಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ನಿರ್ದಿಷ್ಟ ಕೇರಿ, ಓಣಿ ಮತ್ತು ಜಾತಿ ಬೀದಿಗಳಲ್ಲಿ ವಾಸಿಸುವ ಅಕ್ಷರವಂಚಿತ ಮತ್ತು ಮೀಸಲಾತಿ ಸೌಲಭ್ಯ ವಂಚಿತ ಜನರು ತಮ್ಮ ಜಾತಿ ಮತ್ತು ಉಪಜಾತಿ ಹೇಳಿಕೊಳ್ಳಲು ಯಾವುದೇ ಹಿಂಜರಿಕೆ, ಮುಜುಗರ ಮತ್ತು ಅಳುಕಿಲ್ಲದೆ ಸಮೀಕ್ಷೆಯಲ್ಲಿ ಭಾಗವಹಿಸುತ್ತಿದ್ದಾರೆ ಇದು ಒಂದು ರೀತಿಯಲ್ಲಿ ಪ್ರತಿಷ್ಠೆ ಹಾಗೂ ಜಾತಿ ಪ್ರೇಮವನ್ನುಂಟುಮಾಡಿದೆ. ಆದರೆ ಸಮಸ್ಯೆ ಏನೆಂದರೆ ಮೀಸಲಾತಿ ಸೌಲಭ್ಯದಿಂದ ಅಕ್ಷರ ಕಲಿತು ಪದವಿ, ಹಕ್ಕು, ಅಧಿಕಾರ ಮತ್ತು ಅವಕಾಶ ಪಡೆದು ನಗರ ಪ್ರದೇಶಗಳ ಬಹುಜಾತಿ ವರ್ಗಗಳು ವಾಸಿಸುವ ಪ್ರದೇಶಗಳಲ್ಲಿ ನೆಲೆಸಿರುವ ಹೊಲೆಮಾದಿಗ ಸಮುದಾಯದ ಜನರು ತಮ್ಮವರೊಂದಿಗೆ ಜಾತಿ ಸಮೀಕ್ಷೆಯಲ್ಲಿ ಹೆಮ್ಮೆಯಿಂದ ಭಾಗವಹಿಸಲಾಗದ ಅವರ ಪಾಡು ಒಡಲೊಳಗಿನ ಬೆಂಕಿಯಂತಾಗಿದೆ.

ಬಹುಜಾತಿ ವರ್ಗಗಳ ಜನರು ವಾಸಿಸುವ ನಗರ ಪ್ರದೇಶಗಳಲ್ಲಿನ ಹೊಲೆಮಾದಿಗರು ಮುಕ್ತವಾಗಿ ತಮ್ಮ ಜಾತಿ ಹೆಸರು ಹೇಳಿಕೊಂಡು ಸಮೀಕ್ಷೆಯಲ್ಲಿ ಭಾಗವಹಿಸುತ್ತಿಲ್ಲ ಎಂಬ ವೇದನೆ, ಒಂದು ವೇಳೆ ಜಾತಿ ಸಮೀಕ್ಷೆಯಲ್ಲಿ ಭಾಗವಹಿಸಿದರೆ ನೆರೆಹೊರೆಯವರಿಗೆ ತಮ್ಮ ಜಾತಿ ಗೊತ್ತಾದರೆ ಎಂಬ ಹಿಂಜರಿಕೆ ಮತ್ತು ಅವಮಾನಕರ ಸ್ಥಿತಿ. ನೈಸರ್ಗಿಕ ವಿಕೋಪಕಿಂತ ಸಾಮಾಜಿಕ ಸನ್ನಿವೇಶ ಉಂಟುಮಾಡುವ ಮಾನಸಿಕ ವಿಕೋಪ ಘೋರವಾದುದು. ಆದರಿಂದ ಜಾತಿ ಸಮೀಕ್ಷೆಯ ಮೂಲಕ ಸಾಮಾಜಿಕ ನ್ಯಾಯ ಹಂಚಿಕೆ ಪ್ರಯತ್ನ ವಾಸ್ತವದಲ್ಲಿ ಹಲವು ರೀತಿಯ ಮಾನಸಿಕ ತುಮುಲ ಉಂಟುಮಾಡಿದೆ.

ಸಾಮಾಜಿಕ ನ್ಯಾಯ ನಿರ್ಲಕ್ಷಿತ ಮತ್ತು ದಮನಿತ ಸಮುದಾಯಗಳಿಗೆ ಶಾಸನಬದ್ಧವಾಗಿ ಭೌತಿಕ ಅನುಕೂಲ ಕಲ್ಪಿಸುವ ಮಾರ್ಗ. ಇಂದಿನ ಜಾಗತೀಕರಣ ಸಂದರ್ಭದಲ್ಲಿ ಪ್ರಜಾಸತ್ತಾತ್ಮಕ ಸರಕಾರ ತನ್ನ ಜವಾಬ್ದಾರಿ ಮತ್ತು ಕರ್ತವ್ಯದ ಭಾಗವಾಗಿ ಕೈಗೊಂಡಿರುವ ಕಾರ್ಯ ದೀರ್ಘಾವಧಿಯಲ್ಲಿ ಫಲಿತ ಉಂಟುಮಾಡುವುದು ನಿರ್ವಿವಾದ ಹಾಗೂ ಭೌತಿಕ ಸವಲತ್ತು ಒಂದು ಸಮಾಜವನ್ನು ಸಶಕ್ತೀಕರಣಗೊಳಿಸಬಹುದೇ ಹೊರತು ಸಾಮಾಜಿಕ ಗುಲಾಮಿ ಸ್ಥಿತಿಯ ವಿಮೋಚನೆಯನ್ನಲ್ಲ. ದುರ್ಬಲ ಭೌತಿಕ ಸ್ಥಿತಿಗಿಂತ ಸಾಮಾಜಿಕ ಸಂಕೋಲೆಯ ಗುಲಾಮ ಮನಃಸ್ಥಿತಿ ಹೇಯವಾದುದು. ಸರಕಾರ ಜಾನ್ ರಾಲ್ಸ್ ಪ್ರತಿಪಾದನೆಯ ವ್ಯಕ್ತಿ ಸಾಮರ್ಥ್ಯ ವೃದ್ಧಿ ತತ್ವ, ಅಮರ್ತ್ಯ ಸೇನ್‌ರ ಆರ್ಥಿಕ ಸಂಪತ್ತಿನ ಹಂಚಿಕೆ ತತ್ವಕ್ಕಿಂತ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯ ತತ್ವಕ್ಕೆ ಬದ್ಧವಾಗಿದೆ. ಅಂಬೇಡ್ಕರ್ ಅವರು ಆರ್ಥಿಕ ಅಸಮಾನತೆಗಿಂತ ಸಾಮಾಜಿಕ ಅಸಮಾನತೆ ನಿವಾರಣೆಗೆ ಆದ್ಯತೆ ನೀಡಿದ್ದಾರೆ.

ನಗರ ಪ್ರದೇಶಗಳ ಬಾಡಿಗೆ ಮನೆಗಳಲ್ಲಿ ವಾಸಿಸುವ ಬಹುತೇಕ ಹೊಲೆಮಾದಿಗ ಜಾತಿಯ ಜನರು ತಮ್ಮ ಮೂಲ ಜಾತಿಯನ್ನು ಹೇಳದೆ ಬೇರೆ ಜಾತಿಯ ಹೆಸರು ಹೇಳಿ ಮನೆ ಬಾಡಿಗೆ ಪಡೆದಿರುವವರ ಸ್ಥಿತಿ ಹೇಳತೀರದು. ತಮ್ಮ ಎದುರೇ ಗಣತಿಕಾರರು ಬಂದರೂ ಅಸಹಾಯಕ ಸ್ಥಿತಿ ಅವರದು ಹಾಗೂ ಪ್ರತಿಷ್ಠೆ ಎಂಬಂತೆ ತಮ್ಮ ಮನೆಯಲ್ಲಿ ಯಾವ ಹೊಲೆಮಾದಿಗರೂ ವಾಸವಿಲ್ಲವೆಂಬ ಗರ್ವ ಮನೆ ಮಾಲಕರದು. ಇದು ಒಂದು ರೀತಿಯಲ್ಲಿ ಸಮೀಕ್ಷೆ ಸಮಯದಲ್ಲಿ ಸರಕಾರ ಉಂಟುಮಾಡಿರುವ ವಿಷಮ ಸನ್ನಿವೇಶ. ಸರಕಾರದ ಉದ್ದೇಶ ಆಯಾ ಜಾತಿಗಳ ಒಟ್ಟು ಜನಸಂಖ್ಯೆ ಆಧಾರದ ಮೇಲೆ ಯಾವ ಯಾವ ಜಾತಿ ಮಿಸಲಾತಿ ಸೌಲಭ್ಯ ಪಡೆದಿದೆ ಮತ್ತು ಯಾವ ಜಾತಿಗಳು ಸೌಲಭ್ಯವಂಚಿತವಾಗಿವೆ ಎಂಬ ದತ್ತಾಂಶದ ಮೇರೆಗೆ ಒಳ ಮೀಸಲಾತಿ ಜಾರಿಗೂಳಿಸುವ ಪ್ರಯತ್ನವಾಗಿದೆ.

ದುರಂತವೆಂದರೆ ಸಾಮಾಜಿಕ ನ್ಯಾಯಕ್ಕಾಗಿನ ಈ ಕ್ರಮ ದಮನಿತರಿಗೆ ಮಾನಸಿಕ ಅಪಾಯವನ್ನುಂಟುಮಾಡಿದೆ. ಶಾಲಾ ಕಾಲೇಜುಗಳಿಂದ ಹಿಡಿದು ವಿಶ್ವವಿದ್ಯಾನಿಲಯಗಳಲ್ಲಿ ಪಾಠ ಮಾಡುವ ಮುಖ್ಯವಾಗಿ ಸಭೆ ಸಮ್ಮೇಳನಗಳಲ್ಲಿ ಜಾತಿ ತಾರತಮ್ಯದ ಬಗ್ಗೆ ವಿದ್ವತ್ ಪ್ರದರ್ಶಿಸುವ ಪ್ರಾಧ್ಯಾಪಕರಿಂದ ಹಿಡಿದು ವಿವಿಧ ಖಾಸಗಿ ಮತ್ತು ಸರಕಾರದ ಹಿರಿ-ಕಿರಿ ಹುದ್ದೆಗಳಲ್ಲಿರುವ ಬಹುತೇಕ ಜನರು ತಮ್ಮ ನೈಜ ಜಾತಿಯನ್ನು ಬಹಿರಂಗ ಪಡಿಸಲಾಗದೆ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಸಾಮಾಜಿಕ ನ್ಯಾಯಕ್ಕಾಗಿನ ಸಮೀಕ್ಷೆಯಲ್ಲಿ ಭಾಗವಹಿಸದ ತಮ್ಮನ್ನು ನೇರವಾಗಿ ಪ್ರತಿನಿಧಿಸಿಕೊಳ್ಳಲಾಗದ ಶಿಕ್ಷಿತ ಜನರಿಗಿದು ಶಿಕ್ಷೆಯೇ ಸರಿ. ಸರಕಾರ ಗಣತಿಗೆ ತೊಂದರೆ ಕೊಟ್ಟರೆ, ವಸತಿ ಸಮುಚ್ಚಯಗಳಲ್ಲಿ ಭಂಗ ಉಂಟು ಮಾಡಿದರೆ ಕ್ರಮ ವಹಿಸುವುದಾಗಿ ಹೇಳಿದೆ ಹಾಗೂ ಮೂರು ರೀತಿಯ ಸಮೀಕ್ಷಾ ವಿಧಾನಗಳನ್ನು ಅನುಸರಿಸುತ್ತಿರುವುದು ಸೂಕ್ತವಾಗಿದೆ. ಆದರೆ ಪ್ರಜಾಪ್ರಭುತ್ವದಂತಹ ಸಾಮಾಜಿಕ ವ್ಯವಸ್ಥೆಯಲ್ಲಿ ವ್ಯಕ್ತಿಯೊಬ್ಬ ಮುಕ್ತವಾಗಿ ತನ್ನನ್ನು ತಾನು ಪ್ರತಿನಿಧಿಸಿಕೊಳ್ಳಲಾಗದ ಭಾರತದ ವಿಷಯುಕ್ತ ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ತಮ್ಮ ಜಾತಿ ವರ್ಗ ಮತ್ತು ಜಾತಿ ಅಸ್ಮಿತೆಯನ್ನು ಗೌರವದಿಂದ ಹೇಳಿಕೊಳ್ಳುವುದು ಹಾಗೂ ಅನುಭವಿಸುವುದನ್ನು ಊಹಿಸುವುದು ಅಸಾಧ್ಯ ಇದು ಭಾರತದ ಸಾಮಾಜಿಕ ವ್ಯವಸ್ಥೆ ಮತ್ತು ಅವಸ್ಥೆ.

share
ಡಾ. ನಾಗರಾಜು ಎನ್.
ಡಾ. ನಾಗರಾಜು ಎನ್.
Next Story
X