Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಅಂತರ್‌ರಾಷ್ಟ್ರೀಯ ಸಿನೆಮೋತ್ಸವ ಮತ್ತು...

ಅಂತರ್‌ರಾಷ್ಟ್ರೀಯ ಸಿನೆಮೋತ್ಸವ ಮತ್ತು ಕನ್ನಡ ಸಿನೆಮಾ ನಟರ ಸೆಲೆಬ್ರಿಟಿ ಕ್ರಿಕೆಟ್ ಲೀಗ್!

ವಸಂತ ರಾಜು ಎನ್. ತಲಕಾಡುವಸಂತ ರಾಜು ಎನ್. ತಲಕಾಡು6 March 2025 4:16 PM IST
share
ಅಂತರ್‌ರಾಷ್ಟ್ರೀಯ ಸಿನೆಮೋತ್ಸವ ಮತ್ತು ಕನ್ನಡ ಸಿನೆಮಾ ನಟರ ಸೆಲೆಬ್ರಿಟಿ ಕ್ರಿಕೆಟ್ ಲೀಗ್!

ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರು 16ನೇ ಬೆಂಗಳೂರು ಅಂತರ್‌ರಾಷ್ಟ್ರೀಯ ಸಿನೆಮೋತ್ಸವವನ್ನು ಉದ್ಘಾಟಿಸಿ ಭಾಷಣ ಮಾಡುವಾಗ ಕಾರ್ಯಕ್ರಮದಲ್ಲಿ ಭಾಗವಹಿಸದ ಕನ್ನಡದ ಸಿನೆಮಾ ಮಂದಿಗೆ ‘‘ನಮಗೆ ಹೇಗೆ ನಟ್ಟು ಬೋಲ್ಟ್ ಟೈಟ್ ಮಾಡಬೇಕೆಂದು ಗೊತ್ತಿದೆ’’ ಎಂದದ್ದು ಈಗ ದೊಡ್ಡ ವಿವಾದವಾಗಿದೆ. ಇದೇ ಸಮಯದಲ್ಲಿ ಕನ್ನಡದ ಹಿರಿಯ ಕಿರಿಯ ನಟರು ಸುದೀಪ್‌ರವರ ನೇತೃತ್ವದಲ್ಲಿ ಮೈಸೂರಿನಲ್ಲಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ಭಾಗವಹಿಸಿರುವುದು ಹೆಚ್ಚಿನ ಸುದ್ದಿಯಾಗಲಿಲ್ಲ.

ಬೆಂಗಳೂರಿನಲ್ಲಿ 16ನೇ ಅಂತರ್‌ರಾಷ್ಟ್ರೀಯ ಸಿನೆಮೋತ್ಸವ ಉದ್ಘಾಟನೆಯಾಗುತ್ತಿದ್ದರೆ ಇತ್ತ ಮೈಸೂರಿನಲ್ಲಿ ಕೆಲ ಹಿರಿಯ ಕಿರಿಯ ಸಿನೆಮಾ ನಟರು, ತಂತ್ರಜ್ಞರು ಸೆಲೆಬ್ರಿಟಿ ಕ್ರಿಕೆಟ್ ಪಂದ್ಯದಲ್ಲಿ ಮಗ್ನರಾಗಿದ್ದರು. ಇದು ಕನ್ನಡ ಸಿನೆಮಾದ ದುಸ್ಥಿತಿಯೋ ಅಥವಾ ಅಜ್ಞಾನವೋ ತಿಳಿಯದಾಗಿದೆ.

ಪಕ್ಕದ ಕೇರಳ ರಾಜ್ಯದಲ್ಲಿ ಅಲ್ಲಿನ ಸಿನೆಮಾ ಮಂದಿ ದೊಡ್ಡ ದೊಡ್ಡ ನಟರು, ನಿರ್ದೇಶಕರು, ತಂತ್ರಜ್ಞರು ಪ್ರತೀ ವರ್ಷ ನಡೆಯುವ ಕೇರಳ ಅಂತರ್‌ರಾಷ್ಟ್ರೀಯ ಸಿನೆಮೋತ್ಸವಕ್ಕೆ ಚಾತಕ ಪಕ್ಷಿಗಳಂತೆ ಕಾಯುವುದು ಇದೆ. ಕೇರಳ ಚಲನಚಿತ್ರ ಅಕಾಡಮಿ ಆಯೋಜಿಸುವ ಈ ಚಿತ್ರೋತ್ಸವ ಕೇರಳ ರಾಜ್ಯದ ಸಿನಿರಂಗವನ್ನು ಇತ್ತೀಚಿನ ದಿನಗಳಲ್ಲಿ ಇನ್ನಿಲ್ಲದಂತೆ ಪ್ರಭಾವಿಸಿದೆ. ತೊಂಭತ್ತರ ದಶಕದಲ್ಲಿ ಕೇರಳದ ಸಿನೆಮಾಗಳನ್ನು ನೋಡಲು ಹಿಂಜರಿಯುತ್ತಿದ್ದ ಜನ ಇವತ್ತು ಮಲೆಯಾಳಂ ಸಿನೆಮಾಗಳನ್ನು ನೋಡಲು ಮುಗಿಬೀಳುತ್ತಿದಾರೆ. ಇಲ್ಲಿನ ನಟ-ನಟಿಯರು, ತಂತ್ರಜ್ಞರು ರಾಷ್ಟ್ರೀಯ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗೆ ಒಳಗಾಗುತ್ತಿದ್ದಾರೆ. ಕಳೆದ ವರ್ಷ ಪ್ರತಿಷ್ಠಿತ ಕಾನ್ ಚಿತ್ರೋತ್ಸವದಲ್ಲಿ ಪ್ರಶಸ್ತಿ ಗಳಿಸಿದ ‘All we imagine as light’ ಚಿತ್ರದಲ್ಲಿ ಕೇರಳದ ಮೂವರು ನಟ-ನಟಿಯರು ನಟಿಸಿ ಸಾಕಷ್ಟು ಪ್ರಶಂಸೆಯನ್ನು ಗಳಿಸಿದರು. ಅದರಲ್ಲೂ ಕನಿ ಕುಸೃತಿ ಮತ್ತು ದಿವ್ಯ ಪ್ರಭಾ ಈ ಇಬ್ಬರು ನಟಿಯರ ನಟನೆ ಸಾಕಷ್ಟು ಪ್ರಶಂಸೆಗೆ ಒಳಗಾಯಿತು. ಇವತ್ತು ಕನಿ ಕುಸೃತಿ ಭಾರತದ ಸಿನೆಮಾ ರಂಗದ ಪ್ರತಿಭಾನ್ವಿತ ನಟಿಯಾಗಿ ಹೊರಹೂಮ್ಮಿದ್ದಾರೆ. ತೆಲುಗಿನ ಜನಪ್ರಿಯ ಸಿನೆಮಾ ‘ಪುಷ್ಪ’ದಲ್ಲಿ ನಟಿಸಿದ ಮಲಯಾಳಂನ ನಟ ಫಹದ್ ಫಾಸಿಲ್ ತನ್ನ ನಟನೆಗಾಗಿ ದೇಶಾದ್ಯಂತ ಅಭಿಮಾನಿಗಳನ್ನು ಪಡೆದಿದ್ದಾರೆ. ಕೋವಿಡ್ ಸಮಯದಲ್ಲಿ ಭಾರತದ ಸಿನೆಮಾ ರಂಗ ಯಾವುದೇ ಕೆಲಸವಿಲ್ಲದೇ ಸ್ಥಗಿತ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಮಹೇಶ್ ನಾರಾಯಣನ್ ಎನ್ನುವ ಸಿನೆಮಾ ನಿರ್ದೇಶಕ ತನ್ನ ಸೀಮಿತ ಮಿತಿಯಲ್ಲಿ ತಂತ್ರಜ್ಞಾನದ ಸಹಾಯದಿಂದ ‘See ಥಿou sooಟಿ’ನಂತಹ ಅದ್ಭುತ ಸಿನೆಮಾ ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದರು. ರೋಷನ್ ಮ್ಯಾಥ್ಯೂ ಮತ್ತು ದರ್ಶನಾ ರಾಜೇಂದ್ರನ್ ಎನ್ನುವ ನಟ, ನಟಿಯರು ಶ್ರೀಲಂಕಾದ ನಿರ್ದೇಶಕರ ಸಿನೆಮಾ ‘Paradise’ನಲ್ಲಿ ನಟಿಸಿ ಸಾಕಷ್ಟು ವಿಮರ್ಶಕರ ಗಮನಸೆಳೆದಿದ್ದಾರೆ. ತಮ್ಮ ಬಿಡುವಿಲ್ಲದ ಸಮಯದ ನಡುವೆ ಮಲಯಾಳಂ ಭಾಷೆಯಲ್ಲಿ ಸ್ಥಳೀಯ ನಾಟಕಗಳನ್ನು ನಿರ್ದೇಶಿಸುವುದು, ಅಲ್ಲಿನ ಸಿನೆಮಾಗಳಲ್ಲಿ ನಟಿಸುವುದು ಮತ್ತು ಸಿನೆಮಾ ನಿರ್ಮಾಣದ ವಿವಿಧ ಹಂತಗಳಲ್ಲಿ ಭಾಗವಹಿಸುವುದನ್ನು ಈ ನಟ ನಟಿಯರು ಮಾಡುತ್ತಿರುತ್ತಾರೆ.

ಕೇರಳ ಅಂತರ್‌ರಾಷ್ಟ್ರೀಯ ಸಿನೆಮೋತ್ಸವದಲ್ಲಿ ಇಲ್ಲಿನ ನಟಿಯರು, ನಟರು, ತಂತ್ರಜ್ಞರು ದೊಡ್ಡ ಸಾಲಿನಲ್ಲಿ ನಿಂತು ತಮ್ಮ ನೆಚ್ಚಿನ ಸಿನೆಮಾಗಳನ್ನು ನೋಡುವುದು, ಇತರ ಸಹ ನಟ-ನಟಿಯರು, ತಂತ್ರಜ್ಞರ ಜೊತೆ ಚರ್ಚಿಸುವುದು, ಸಂವಾದಗಳಲ್ಲಿ ಭಾಗವಹಿಸುವುದು, ಹೊಸ ಸಿನೆಮಾ ನಿರ್ಮಾಣ ವಿಧಾನಗಳನ್ನು ಅರಿಯುವ ಕೆಲಸವನ್ನು ಮಾಡುತ್ತಿರುತ್ತಾರೆ. ಇಲ್ಲಿನ ಯುವಕರು ದೇಶದ ಫಿಲಂ ಇನ್‌ಸ್ಟಿಟ್ಯೂಟ್‌ಗಳಲ್ಲಿ ಸೀಟು ಪಡೆಯಲು ಹರಸಹಾಸ ಪಡುತ್ತಿರುತ್ತಾರೆ. ಇದಕ್ಕೆ ಕಾರಣ ಅಲ್ಲಿನ ಸಿನೆಮಾ ಸಂಸ್ಕೃತಿ ಮತ್ತು ಇಂತಹ ಚಿತ್ರೋತ್ಸವಗಳಲ್ಲಿನ ಭಾಗವಹಿಸುವಿಕೆ. ಕಳೆದ ಒಂದು ದಶಕದಲ್ಲಿ ಕೇರಳ ಸಿನೆಮಾ ಪ್ರಪಂಚವನ್ನು ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವ ಸಾಕಷ್ಟು ಬದಲಿಸಿದೆ. ಈ ಚಿಕ್ಕ ರಾಜ್ಯದ ಚಲನಚಿತ್ರಗಳು ಈಗ ಜಾಗತಿಕವಾಗಿ ಸ್ಪರ್ಧೆ ಮಾಡುತ್ತಿವೆ. ತಮ್ಮ ವಿಭಿನ್ನ ಕಥೆಗಳ ಮತ್ತು ತಂತ್ರಜ್ಞಾನದ ಸಹಾಯದಿಂದ ಭಿನ್ನ ಭಿನ್ನ ಚಿತ್ರಗಳನ್ನು ರೂಪಿಸುತ್ತಿರುವ ಇಲ್ಲಿನ ಸಿನೆಮಾ ಮಂದಿಯ ಪ್ರಯತ್ನಗಳನ್ನು ದೇಶ ಬೆರಗಿನಿಂದ ನೋಡುತ್ತಿದೆ.

ಆದರೆ ಕನ್ನಡದ ಸಿನೆಮಾಗಳು ಇವತ್ತು ಪ್ರೇಕ್ಷಕರಿಲ್ಲದೇ ಕಳಾಹೀನವಾಗುತ್ತಿವೆ. ಎಪ್ಪತರ ದಶಕದಲ್ಲಿ ಸಾಕಷ್ಟು ಉತ್ತಮ ಸಿನೆಮಾಗಳನ್ನು ನೀಡಿದ್ದ ಕನ್ನಡ ಸಿನೆಮಾರಂಗ ಇವತ್ತು ಕೆಲ ಸಿನೆಮಾಗಳನ್ನು ಹೊರತುಪಡಿಸಿ ಮತ್ತದೇ ಹೊಡಿ-ಬಡಿ ತರದ ಹೀರೋಯಿಸಂ ಸಿನೆಮಾಗಳು, ಡಬಲ್ ಮೀನಿಂಗ್ ಡೈಲಾಗ್‌ಗಳು ಮತ್ತು ಅರ್ಥವಿಲ್ಲದ ಕಾಮಿಡಿಗಳಿಗೆ ಸೀಮಿತವಾಗಿದೆ. ಜಗತ್ತಿನ ಸಿನೆಮಾಗಳನ್ನು ನೋಡಿ ಅಲ್ಲಿನ ಸಿನೆಮಾ ತಂತ್ರಜ್ಞರು, ನಟ-ನಟಿಯರು ಮುಂತಾದವರ ಜೊತೆ ಸಂವಾದಿಸುವ, ಚರ್ಚಿಸುವ ಅತ್ಯುತ್ತಮ ಅವಕಾಶವನ್ನು ಬಿಟ್ಟು ಅಂತರ್‌ರಾಷ್ಟ್ರೀಯ ಸಿನೆಮೋತ್ಸವ ನಡೆಯುತ್ತಿರುವ ಹೊತ್ತಿನಲ್ಲಿ ಸೆಲಬ್ರಿಟಿ ಕ್ರಿಕೆಟ್ ಲೀಗ್ ನಡೆಸುವುದರಿಂದ ಯಾರಿಗೆ ಪ್ರಯೋಜನ?

ಕನ್ನಡದ ಕಿರಿಯ ನಟ-ನಟಿಯರು ಮತ್ತು ತಂತ್ರಜ್ಞರು ಇಂತಹ ಸಿನಿ ಹಬ್ಬಗಳನ್ನು ತಮ್ಮ ಕಲಿಕೆಗೆ ಇರುವ ಮಾರ್ಗ ಎಂದು ಪರಿಗಣಿಸಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದನ್ನು ಮಾಡಬೇಕು. ಯಾವುದೇ ರಾಜಕೀಯ ಪಕ್ಷಗಳಿಗೆ ಸೀಮಿತವಾಗದೆ ಇದು ನಮ್ಮ ಹಬ್ಬ ಎಂದು ಕನ್ನಡ ಸಿನೆಮಾ ಮಂದಿ ತಮ್ಮ ಹೀರೋಯಿಸಂಗಳನ್ನು ಬಿಟ್ಟು ಎಲ್ಲರೊಡನೆ ಸೇರಿ ಜಗತ್ತಿನ ಸಿನೆಮಾಗಳನ್ನು ನೋಡಿ ಸಂಭ್ರಮಿಸುವ ವ್ಯವಸ್ಥೆ ರೂಪುಗೊಳ್ಳುವಂತೆ ಮಾಡಬೇಕಿದೆ. ಕನ್ನಡ ಸಿನಿರಂಗದಲ್ಲಿ ಉತ್ತಮ ತಂತ್ರಜ್ಞರ, ನಟ-ನಟಿಯರ ಕೊರತೆ ಸಾಕಷ್ಟು ಇದೆ. ಜೊತೆಗೆ ಇದ್ದವರಿಗೂ ಅವಕಾಶಗಳ ಮತ್ತು ಸೂಕ್ತ ಮಾರ್ಗದರ್ಶನದ ಕೊರತೆ ಇದೆ. ಈ ಸಿನೆಮಾ ಹಬ್ಬಗಳು ಆ ಕೊರತೆಗಳನ್ನು ಸ್ವಲ್ಪವಾದರೂ ದೂರ ಮಾಡಬಹುದಲ್ಲವೇ?

share
ವಸಂತ ರಾಜು ಎನ್. ತಲಕಾಡು
ವಸಂತ ರಾಜು ಎನ್. ತಲಕಾಡು
Next Story
X