Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮೋದಿ ವಿರುದ್ಧ ಕ್ರಮಕೈಗೊಳ್ಳಲು ಚುನಾವಣಾ...

ಮೋದಿ ವಿರುದ್ಧ ಕ್ರಮಕೈಗೊಳ್ಳಲು ಚುನಾವಣಾ ಆಯೋಗ ಹೆದರುತ್ತಿದೆಯೇ?

ಚುನಾವಣಾ ಆಯೋಗವನ್ನು ಪ್ರಶ್ನಿಸಿ ಪತ್ರ ಬರೆದ ಮಾಜಿ ಹಿರಿಯ ಐಎಎಸ್ ಅಧಿಕಾರಿ ಇ.ಎ.ಎಸ್. ಶರ್ಮಾ

ಚಂದ್ರಕಾಂತ್ ಎನ್.ಚಂದ್ರಕಾಂತ್ ಎನ್.27 March 2024 10:23 AM IST
share
ಮೋದಿ ವಿರುದ್ಧ ಕ್ರಮಕೈಗೊಳ್ಳಲು ಚುನಾವಣಾ ಆಯೋಗ ಹೆದರುತ್ತಿದೆಯೇ?
ಚುನಾವಣೆ ಘೋಷಿಸುವ ದಿನ ಅಷ್ಟು ದೊಡ್ಡದಾಗಿ ಬಹಳ ಶೌರ್ಯದಿಂದ ಯಾವುದೇ ಮುಲಾಜಿಲ್ಲದೆ ಕಟ್ಟುನಿಟ್ಟಿನ ಕ್ರಮ ಎಂದ ಮುಖ್ಯ ಚುನಾವಣಾ ಆಯುಕ್ತರು, ಮೋದಿ ಬಗ್ಗೆ ದೂರು ಬಂದ ತಕ್ಷಣವೇ ಏನೂ ಉತ್ತರಿಸಲಾರದೆ ಬೆವರೊರೆಸಿಕೊಳ್ಳುತ್ತ ಕೂತಿದ್ದಾರೆಯೆ? ಇಂಥದೇ ದೂರು ವಿಪಕ್ಷಗಳ ವಿರುದ್ಧ ಬಂದಿದ್ದರೆ ಇಷ್ಟು ಹೊತ್ತಿಗೆ ಅವರು ಕಟ್ಟುನಿಟ್ಟಿನ ಕ್ರಮದ ಅಬ್ಬರ ತೋರಿಸಿಬಿಡುತ್ತಿದ್ದರಲ್ಲವೇ? ಮೋದಿ ಬಗ್ಗೆ ದೂರು ಬಂದರೆ ಕ್ರಮ ಕೈಗೊಳ್ಳುವ ಸ್ವಾತಂತ್ರ್ಯ ಮತ್ತು ಅಧಿಕಾರ ಮೂವರೂ ಚುನಾವಣಾ ಆಯುಕ್ತರಿಗೆ ಇಲ್ಲವಾಗಿದೆಯೇ? ಅವರು ವಿಪಕ್ಷಗಳು ಆರೋಪಿಸುತ್ತಿರುವಂತೆ ನಿಜವಾಗಿಯೂ ಮೋದಿ ಸರಕಾರದ ಹೌದಪ್ಪಗಳೇ?

ಚುನಾವಣೆ ಘೋಷಿಸುವಾಗ ದೇಶದ ಮುಖ್ಯ ಚುನಾವಣಾ ಆಯುಕ್ತರು ಎರಡು ವಿಷಯಗಳನ್ನು ಬಹಳಷ್ಟು ಒತ್ತಿ ಹೇಳಿದ್ದರು.

ಅವುಗಳಲ್ಲಿ ಒಂದು, ನೀತಿ ಸಂಹಿತೆ ಉಲ್ಲಂಘನೆಯನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ ಎಂಬುದು. ಇನ್ನೊಂದು, ಎಲ್ಲ ಪಕ್ಷಗಳಿಗೂ ಸಮಾನ ಸ್ಪರ್ಧಾವಕಾಶ ಕೊಡುವ ‘ಲೆವೆಲ್ ಪ್ಲೇಯಿಂಗ್ ಫೀಲ್ಡ್’ನ ಖಾತರಿಯನ್ನು ತಾವು ಒದಗಿಸುತ್ತೇವೆ ಎಂಬುದು.

ಆದರೆ ಈಗ ಆಗುತ್ತಿರುವುದೇನು?

ಪ್ರಧಾನಿ ಮೋದಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆಯ ದೂರು ದಾಖಲಾದರೆ ಆ ಬಗ್ಗೆ ಆಯೋಗ ಏನು ಮಾಡುತ್ತಿದೆ? ಪ್ರಧಾನಿ ಮೋದಿ ನೀತಿ ಸಂಹಿತೆಯ ವ್ಯಾಪ್ತಿಯಿಂದ ಹೊರಗಿದ್ದಾರೆಯೇ ಅಥವಾ ಅವರ ವಿರುದ್ಧ ಕ್ರಮ ಕೈಗೊಳ್ಳಲು ಆಯೋಗಕ್ಕೆ ಹೆದರಿಕೆಯಿದೆಯೇ?

ಈ ಪ್ರಶ್ನೆಗಳನ್ನು ಚುನಾವಣಾ ಆಯೋಗಕ್ಕೆ ಕೇಳುತ್ತಿರುವವರು ನಿವೃತ್ತ ಹಿರಿಯ ಅಧಿಕಾರಿ.

ಪ್ರಧಾನಿ ಮೋದಿ ವಿರುದ್ಧ ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘನೆಯ ಅನುಮಾನ ವ್ಯಕ್ತಪಡಿಸಿ ಮಾಜಿ ಹಿರಿಯ ಐಎಎಸ್ ಅಧಿಕಾರಿ ಇ.ಎ.ಎಸ್. ಶರ್ಮಾ ಬರೆದ ಪತ್ರಕ್ಕೆ ಚುನಾವಣಾ ಆಯೋಗ ಉತ್ತರಿಸಿಲ್ಲ.

ಮಾರ್ಚ್ 22ರಂದು ಬರೆದ ಪತ್ರಕ್ಕೆ ಆಯೋಗ ಪ್ರತಿಕ್ರಿಯಿಸದೆ ಇರುವ ಬಗ್ಗೆ ನಿರಾಶೆ ವ್ಯಕ್ತಪಡಿಸಿರುವ ಶರ್ಮಾ, ಮೋದಿ ವಿರುದ್ಧ ಕ್ರಮಕೈಗೊಳ್ಳಲು ಆಯೋಗ ಹೆದರುತ್ತಿದೆಯೇ? ಎಂದು ಸೋಮವಾರ ಪ್ರಶ್ನಿಸಿದ್ದಾರೆ.

ಮೋದಿ ಆಯೋಗಕ್ಕಾಗಲೀ, ಸಾರ್ವಜನಿಕರಿಗಾಗಲೀ ಉತ್ತರದಾಯಿಯಲ್ಲವೇ ಎಂದು ಕೂಡ ಶರ್ಮಾ ಆಯೋಗವನ್ನು ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ತಮಿಳುನಾಡಿನಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮೋದಿ ಮಾಡಿದ ಭಾಷಣದ ಬಗ್ಗೆ ಶರ್ಮಾ ತಮ್ಮ ಪತ್ರದಲ್ಲಿ ಆಯೋಗದ ಗಮನ ಸೆಳೆದಿದ್ದರು.

‘‘ಹಿಂದೂಗಳು ನಾರಿ ಶಕ್ತಿ ಮತ್ತು ಮಾತೃ ಶಕ್ತಿಯನ್ನು ನಂಬುತ್ತಾರೆ. ‘ಇಂಡಿಯಾ’ ವಿಪಕ್ಷ ಬಣ ಶಕ್ತಿಯನ್ನು ನಾಶಪಡಿಸುವ ಬಗ್ಗೆ ಹೇಳಿಕೆ ನೀಡಿದೆ. ಅದು ಹಿಂದೂ ಧರ್ಮಕ್ಕೆ ಮಾಡಿದ ಅವಮಾನವಾಗಿದೆ’’ ಎಂದು ಆ ರ್ಯಾಲಿಯಲ್ಲಿ ಮೋದಿ ಹೇಳಿದ್ದನ್ನು ಶರ್ಮಾ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರು.

‘‘ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ನಡೆದ ರ್ಯಾಲಿಯಲ್ಲಿ ‘ಇಂಡಿಯಾ’ ಒಕ್ಕೂಟ ಹಿಂದೂ ಧರ್ಮ ನಂಬಿಕೆ ಹೊಂದಿರುವ ಶಕ್ತಿಯನ್ನು ನಾಶ ಮಾಡುವುದಾಗಿ ಹೇಳಿದೆ. ಹಿಂದೂ ಧರ್ಮದಲ್ಲಿ ಶಕ್ತಿ ಎಂದರೆ ಏನು ಎಂದು ತಮಿಳುನಾಡಿನ ಪ್ರತಿಯೊಬ್ಬರಿಗೂ ತಿಳಿದಿದೆ’’ ಎಂದು ಮೋದಿ ಭಾಷಣ ಮಾಡಿದ್ದನ್ನು ಪತ್ರದಲ್ಲಿ ಶರ್ಮಾ ಪ್ರಸ್ತಾಪಿಸಿದ್ದರು.

‘‘ತಮಿಳುನಾಡಿನಲ್ಲಿ ದೇವಿಯರಿಗೆ ಮುಡಿಪಾದ ಹಲವಾರು ದೇವಾಲಯಗಳು ಈ ಸ್ಥಳದ ಶಕ್ತಿಯಾಗಿದ್ದು, ಹಿಂದೂ ಧರ್ಮದಲ್ಲಿ ಈ ಪದ ಮಾತೃ ಶಕ್ತಿ ಮತ್ತು ನಾರಿ ಶಕ್ತಿಯನ್ನು ಸೂಚಿಸುತ್ತದೆ’’ ಎಂದು ಮೋದಿ ಹೇಳಿದ್ದರು.

‘ಇಂಡಿಯಾ’ ಒಕ್ಕೂಟ ಪದೇ ಪದೇ ಮತ್ತು ಉದ್ದೇಶಪೂರ್ವಕವಾಗಿ ಹಿಂದೂ ಧರ್ಮವನ್ನು ಅವಮಾನಿಸುತ್ತಿದೆ ಎಂದು ಮೋದಿ ಆಕ್ಷೇಪಿಸಿದ್ದರು.

ಈ ಹೇಳಿಕೆಗಳು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಎಂದಿದ್ದ ಶರ್ಮಾ, ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದರು.

ಚುನಾವಣೆಯಲ್ಲಿ ರಾಜಕೀಯ ನಾಯಕರು ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವುದು ಮಾದರಿ ನೀತಿ ಸಂಹಿತೆಯ ನಿರ್ಲಜ್ಜ ಉಲ್ಲಂಘನೆಯಾಗುತ್ತದೆ.

ಯಾರೇ ಹಾಗೆ ಮಾತಾಡಿರುವುದು ನಿಜವೇ ಆಗಿದ್ದಲ್ಲಿ ಆಯೋಗ ಅದರ ಬಗ್ಗೆ ತುರ್ತಾಗಿ ಗಮನ ವಹಿಸಬೇಕು ಮತ್ತು ಅಂಥ ಹೇಳಿಕೆ ನೀಡಿದ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಶರ್ಮಾ ತಮ್ಮ ಪತ್ರದಲ್ಲಿ ಆಯೋಗಕ್ಕೆ ನೆನಪಿಸಿದ್ದರು.

ಮಾರ್ಚ್ 22ರ ತಮ್ಮ ಪತ್ರಕ್ಕೆ ಆಯೋಗ ಪ್ರತಿಕ್ರಿಯಿಸದೆ ಇರುವುದರಿಂದ ಬೇಸರಗೊಂಡಿರುವ ಶರ್ಮಾ, ಮಾರ್ಚ್ 25ರಂದು ಆಯೋಗವನ್ನು ಅದರ ಬಗ್ಗೆ ಪ್ರಶ್ನಿಸಿದ್ದಾರೆ.

ಚುನಾವಣಾ ಆಯೋಗಕ್ಕೆ ಮಾರ್ಚ್ 25ರಂದು ಬರೆದ ತಮ್ಮ ಮತ್ತೊಂದು ಪತ್ರದಲ್ಲಿ ಶರ್ಮಾ ಎತ್ತಿರುವ ಪ್ರಶ್ನೆಗಳು ಹೀಗಿವೆ:

1. ಒಬ್ಬ ರಾಜಕೀಯ ನಾಯಕ ತನ್ನ ಪಕ್ಷಕ್ಕೆ ಮತ ಪಡೆಯಲು ಮತದಾರರ ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು ನೀತಿ ಸಂಹಿತೆಯ ಉಲ್ಲಂಘನೆಯಲ್ಲ ಎಂದೇನಾದರೂ ಆಯೋಗ ಪರಿಗಣಿಸುತ್ತದೆಯೇ?

2. ನನ್ನಂತಹ ಸಾಮಾನ್ಯ ಮತದಾರ ನೀಡಿದ ದೂರಿನ ಮೇಲೆ ಕ್ರಮ ಕೈಗೊಳ್ಳಬೇಕಾಗಿಲ್ಲ ಮತ್ತು ಸಾಮಾನ್ಯ ಮತದಾರರ ಕಳವಳಗಳನ್ನು ಸುಲಭವಾಗಿ ನಿರ್ಲಕ್ಷಿಸಬಹುದು ಎಂದು ಆಯೋಗ ಭಾವಿಸುತ್ತದೆಯೇ?

3. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೀತಿ ಸಂಹಿತೆಯ ವ್ಯಾಪ್ತಿಯನ್ನು ಮೀರಿದ್ದಾರೆ ಮತ್ತು ಅವರು ಆಯೋಗಕ್ಕೆ ಅಥವಾ ಸಾರ್ವಜನಿಕರಿಗೆ ಉತ್ತರದಾಯಿಯಲ್ಲ ಎಂದು ಆಯೋಗ ಪರಿಗಣಿಸುತ್ತದೆಯೇ?

4. ಚುನಾವಣಾ ಪ್ರಕ್ರಿಯೆಯಲ್ಲಿ ಮೋದಿಯವರಿಗೇ ಬೇರೆ ನಿಯಮಗಳು ಮತ್ತು ಇತರರಿಗೆ ಮತ್ತೊಂದು ಬಗೆಯ ನಿಯಮಗಳಿವೆಯೇ?

5. ಆಯೋಗ ನನ್ನ ದೂರಿನ ಮೇಲೆ ಕ್ರಮ ಕೈಗೊಳ್ಳಲಿದೆಯೇ ಅಥವಾ ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲು ನಿರ್ಧರಿಸಿದೆಯೇ?

6. ಆಯೋಗ ತನ್ನದೇ ಮೂಲಗಳಿಂದ ದೂರಿಗೆ ಸಂಬಂಧಿಸಿದ ಸಂಗತಿಗಳನ್ನು ಖಚಿತಪಡಿಸಿಕೊಂಡಿದೆಯೇ ಮತ್ತು ನನ್ನ ದೂರಿನ ಬಗ್ಗೆ ಆದೇಶ ಹೊರಡಿಸಿದೆಯೆ? ಹಾಗಿದ್ದಲ್ಲಿ ಅದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬಹುದೇ?

7. ನನ್ನ ದೂರಿನ ವಿಚಾರದಲ್ಲಿ ಮೂವರೂ ಆಯುಕ್ತರ ಮಧ್ಯೆ ಭಿನ್ನಾಭಿಪ್ರಾಯಗಳಿವೆಯೇ ಮತ್ತು ಅದನ್ನು ಬಹಿರಂಗಪಡಿಸದೆ ಇರಲು ಕಾರಣಗಳೇನಾದರೂ ಇವೆಯೆ?

8. ಸರಕಾರದಿಂದ ನೇಮಕಗೊಂಡಿರುವ ನೀವು ಅದಕ್ಕೆ ಉಪಕೃತರಾಗಿ, ನಿಮ್ಮನ್ನು ನೇಮಿಸಿದವರಿಗೆ ಯಾವುದೇ ಮುಜುಗರ ಉಂಟುಮಾಡದಿರಲು ನಿರ್ಧರಿಸಿದ್ದೀರಾ?

9. ಆಯೋಗ ಕೆಲವು ಕಾರಣಗಳಿಗಾಗಿ ನನ್ನ ದೂರಿನ ಮೇಲೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಹೆದರುತ್ತಿದೆಯೇ?

10. ಆಯೋಗ ಸಾರ್ವಜನಿಕರ ಹಣದ ಮೇಲೆಯೇ ನಡೆಯುವುದರಿಂದ, ಅದು ಸಾರ್ವಜನಿಕರಿಗೆ ಜವಾಬ್ದಾರವಾಗಿರಬೇಕಲ್ಲವೇ?

ಇಷ್ಟು ಪ್ರಶ್ನೆಗಳನ್ನು ಎತ್ತಿರುವ ಶರ್ಮಾ ಅವರು, ಆಯೋಗ ಆಡಳಿತಾರೂಢ ರಾಜಕೀಯ ಪ್ರಭಾವಿಗಳ ಪರವಾಗಿ ಯಾವುದೇ ಪಕ್ಷಪಾತ ಪ್ರದರ್ಶಿಸಿದರೆ ಅಥವಾ ಅವರ ವಿರುದ್ಧ ವರ್ತಿಸಲು ಹೆದರಿದರೆ ಅದರ ಮೇಲೆ ಸಾರ್ವಜನಿಕರು ಇಟ್ಟಿರುವ ವಿಶ್ವಾಸ ಕುಸಿಯುವುದು ಖಚಿತ ಎಂದೂ ಹೇಳಿದ್ದಾರೆ.

ಹಾಗಾದಲ್ಲಿ ಸಂವಿಧಾನಾತ್ಮಕವಾಗಿ ಕಾರ್ಯನಿರ್ವಹಿಸಬೇಕಿರುವ ಆಯೋಗದ ದಕ್ಷತೆ ಬಗ್ಗೆ ಕಳವಳ ಮೂಡುತ್ತದೆ ಎಂದು ಅವರು ಹೇಳಿದ್ದಾರೆ.

ತಾವು ಎತ್ತಿರುವ ಪ್ರಶ್ನೆಗಳ ವಿಚಾರವಾಗಿ ಸೂಕ್ತ ಉತ್ತರಗಳನ್ನು ಆಯೋಗ ನೀಡಬೇಕಾಗಿದೆ. ಇಲ್ಲದೇ ಹೋದಲ್ಲಿ, ತನ್ನ ಘನತೆಯನ್ನು ಕಾಯ್ದುಕೊಳ್ಳುವ ಉದ್ದೇಶವೇ ಅದಕ್ಕಿಲ್ಲ ಎಂದು ಭಾವಿಸಬೇಕಾಗುತ್ತದೆ ಎಂದೂ ಶರ್ಮಾ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ತಮ್ಮ ದೂರಿನ ವಿಚಾರವಾಗಿ ಆಯೋಗ ಕ್ರಮ ಕೈಗೊಳ್ಳುತ್ತಿದೆಯೇ ಅಥವಾ ಅದು ಯಾವುದೇ ಕಾರಣಕ್ಕಾಗಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಹೆದರುತ್ತಿದೆಯೇ ಎಂಬ ಶರ್ಮಾ ಪ್ರಶ್ನೆ ಬಹಳ ಮುಖ್ಯವಾದುದಾಗಿದೆ.

ಆಯೋಗ ತಮ್ಮ ಪ್ರಶ್ನೆಗಳ ಬಗ್ಗೆ ಸಾರ್ವಜನಿಕವಾಗಿ ಉತ್ತರ ಕೊಡಬೇಕು ಎಂಬುದು ಶರ್ಮಾ ಆಗ್ರಹವಾಗಿದೆ.

ಹಾಗೆ ಮಾಡುವುದರಿಂದ, ಚುನಾವಣಾ ಆಯೋಗಕ್ಕೆ ರಾಜಕೀಯದಿಂದ ದೂರವಿರಲು ಮತ್ತು ಸ್ವತಂತ್ರವಾಗಿರಲು ಇಷ್ಟವಿಲ್ಲ ಎಂಬ ಗ್ರಹಿಕೆ ನಿವಾರಣೆಯಾಗುವುದು ಸಾಧ್ಯ ಎಂಬ ಆಶಯವನ್ನೂ ಶರ್ಮಾ ವ್ಯಕ್ತಪಡಿಸಿದ್ದಾರೆ.

ಮಾದರಿ ನೀತಿ ಸಂಹಿತೆ ಚುನಾವಣೆ ಘೋಷಣೆ ಯಾದಾಗಿನಿಂದ ಫಲಿತಾಂಶದ ಘೋಷಣೆಯಾಗುವವರೆಗೂ ಇರುತ್ತದೆ. ಚುನಾವಣೆಗಳು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಯಲು, ಸರಕಾರಗಳು, ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳ ಮೇಲೆ ಒಂದು ನಿಯಂತ್ರಣವನ್ನು ಇಡುವುದು ಇದರ ಉದ್ದೇಶವಾಗಿರುತ್ತದೆ. ಅದನ್ನು ಎಲ್ಲರೂ ತಾವಾಗಿಯೇ ಪಾಲಿಸಬೇಕು. ಉಲ್ಲಂಘಿಸುವವರಿಗೆ ಆಯೋಗ ನೋಟಿಸ್ ನೀಡುತ್ತದೆ ಮತ್ತು ಕೆಲವೊಮ್ಮೆ ಸೂಕ್ತ ಕ್ರಮವನ್ನೂ ತೆಗೆದುಕೊಳ್ಳುತ್ತದೆ.

ಮಾದರಿ ನೀತಿ ಸಂಹಿತೆಯ ನಿಬಂಧನೆಗಳಲ್ಲಿ, ಮತಗಳನ್ನು ಪಡೆಯಲು ಜಾತಿ ಅಥವಾ ಕೋಮು ಭಾವನೆಗಳನ್ನು ಪ್ರಚೋದಿಸುವ ಮಾತಾಡಬಾರದು ಎಂಬುದೂ ಒಂದು.

ಅದನ್ನೇ ಶರ್ಮಾ ಅವರು ಮೋದಿ ಭಾಷಣದ ವಿಚಾರದಲ್ಲಿ ಪ್ರಸ್ತಾಪಿಸಿ, ಮೋದಿ ಭಾಷಣ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ದೂರಿರುವುದು.

ಆದರೆ, ಬಡಪಾಯಿ ಚುನಾವಣಾ ಆಯೋಗ ಮೋದಿ ವಿರುದ್ಧ ಶರ್ಮಾ ಅವರು ನೀಡಿರುವ ದೂರನ್ನು ಬಹುಶಃ ಯಾವುದೋ ಫೈಲಿನ ಕೆಳಗೆ ಇಟ್ಟುಕೊಂಡು ಸುಮ್ಮನೆ ಕೂತಿರುವ ಹಾಗಿದೆ.

‘ಲೆವೆಲ್ ಪ್ಲೇಯಿಂಗ್ ಫೀಲ್ಡ್’ ಬಗ್ಗೆ ಮಾತಾಡಿದವರು ಮೋದಿಗೆ ಹೆದರುತ್ತಿರುವ ಪರಿಯಲ್ಲವೇ ಇದು?

ಚುನಾವಣೆ ಘೋಷಿಸುವ ದಿನ ಅಷ್ಟು ದೊಡ್ಡದಾಗಿ ಬಹಳ ಶೌರ್ಯದಿಂದ ಯಾವುದೇ ಮುಲಾಜಿಲ್ಲದೆ ಕಟ್ಟುನಿಟ್ಟಿನ ಕ್ರಮ ಎಂದ ಮುಖ್ಯ ಚುನಾವಣಾ ಆಯುಕ್ತರು, ಮೋದಿ ಬಗ್ಗೆ ದೂರು ಬಂದ ತಕ್ಷಣವೇ ಏನೂ ಉತ್ತರಿಸಲಾರದೆ ಬೆವರೊರೆಸಿಕೊಳ್ಳುತ್ತ ಕೂತಿದ್ದಾರೆಯೆ?

ಇಂಥದೇ ದೂರು ವಿಪಕ್ಷಗಳ ವಿರುದ್ಧ ಬಂದಿದ್ದರೆ ಇಷ್ಟು ಹೊತ್ತಿಗೆ ಅವರು ಕಟ್ಟುನಿಟ್ಟಿನ ಕ್ರಮದ ಅಬ್ಬರ ತೋರಿಸಿಬಿಡುತ್ತಿದ್ದರಲ್ಲವೇ?

ಮೋದಿ ಬಗ್ಗೆ ದೂರು ಬಂದರೆ ಕ್ರಮ ಕೈಗೊಳ್ಳುವ ಸ್ವಾತಂತ್ರ್ಯ ಮತ್ತು ಅಧಿಕಾರ ಮೂವರೂ ಚುನಾವಣಾ ಆಯುಕ್ತರಿಗೆ ಇಲ್ಲವಾಗಿದೆಯೇ?

ಅವರು ವಿಪಕ್ಷಗಳು ಆರೋಪಿಸುತ್ತಿರುವಂತೆ ನಿಜವಾಗಿಯೂ ಮೋದಿ ಸರಕಾರದ ಹೌದಪ್ಪಗಳೇ?

ಅದೇ ನಿಜವಾದರೆ ಇನ್ನೆಂಥ ಲೆವೆಲ್ ಪ್ಲೇಯಿಂಗ್ ಫೀಲ್ಡ್ ನ ಖಾತರಿ ಕೊಡುತ್ತೀರಿ ನೀವು? ಎಲ್ಲಿದೆ ಇಲ್ಲಿ ಎಲ್ಲ ಪಕ್ಷಗಳಿಗೆ ಸ್ಪರ್ಧೆಯ ಸಮಾನ ಅವಕಾಶ?

share
ಚಂದ್ರಕಾಂತ್ ಎನ್.
ಚಂದ್ರಕಾಂತ್ ಎನ್.
Next Story
X