Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ‘ಹಲಾಲ್ಕೋರ್’ ಎಂಬುದು ಜಾತಿಯೋ..?...

‘ಹಲಾಲ್ಕೋರ್’ ಎಂಬುದು ಜಾತಿಯೋ..? ಬೈಗುಳವೋ..?

ಸಿ.ಎಸ್. ದ್ವಾರಕಾನಾಥ್ಸಿ.ಎಸ್. ದ್ವಾರಕಾನಾಥ್26 Aug 2026 10:24 AM IST
share
‘ಹಲಾಲ್ಕೋರ್’ ಎಂಬುದು ಜಾತಿಯೋ..? ಬೈಗುಳವೋ..?

ಅಸ್ಪಶ್ಯ ದಲಿತ ಮುಸ್ಲಿಮ್ ಸಮುದಾಯವಾಗಿರುವ ಹಲಾಲ್ಕೋರ್‌ಗಳು ಇಂದಿಗೂ ಮಲಬಳಿಯುವ ಜಾಡಮಾಲಿಗಳಾಗಿ ಹೀನಾಯವಾಗಿ ಬದುಕುತ್ತಿದ್ದಾರೆ. ಇವರಿಗಾಗಿ ಒಬ್ಬ ಅಂಬೇಡ್ಕರ್, ಒಬ್ಬ ಟಿಪ್ಪು, ಒಬ್ಬ ದೇವರಾಜ ಅರಸು ಹುಟ್ಟಿಬರುತ್ತಾರೇನೋ ಎಂದು ಕಾಯುತ್ತಿದ್ದಾರೆ! ಈಗಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ರವರ ಬಳಿಗೂ ಹಲಾಲ್ಕೋರ್ ಸಮುದಾಯದವರನ್ನು ಇಷ್ಟರಲ್ಲೇ ಕರೆದೊಯ್ಯುತ್ತೇವೆ, ಕನಿಷ್ಠ ಇವರಿಂದಲಾದರೂ ಈ ನತದೃಷ್ಟ ಸಮುದಾಯಕ್ಕೆ ಅಸ್ಮಿತೆ, ಅಸ್ತಿತ್ವ ಸಿಗುತ್ತದೇನೋ ಎಂಬ ಆಶಾಭಾವವಿದೆ.

‘ಹಲಾಲ್ಕೋರ್’ ಎಂಬುದು ನಮ್ಮ ‘ಸಭ್ಯ’ ಸಮಾಜ ಸಹಜವಾಗಿ ಬಳಸುವ ಬೈಗುಳ! ಯಾರಾದರೂ ಬಹಳ ಚಾಲಾಕಿ ವಂಚಕನಿಗೆ ‘‘ಅವನೊಬ್ಬ ಹಲಾಲ್ಕೋರ್ ನನ್ಮಗ’’ ಎಂದು ಬೈಗುಳವಾಗಿ ಬಳಸುತ್ತಾರೆ! ಹಲಾಲ್ಕೋರ್ ಎಂಬ ಶಬ್ದಕ್ಕೆ ಅರ್ಥವೇ ತಿಳಿಯದೆ ಈ ರೀತಿಯ ತಳ ಸಮುದಾಯಗಳನ್ನು ಬೀಸುಧ್ವನಿಯಲ್ಲಿ ಬೈದುಬಿಡುತ್ತಾರೆ. ಹಲಾಲ್ಕೋರ್ ಎಂಬುದು ಒಂದು ಜಾತಿಯ ಹೆಸರು, ಇದೊಂದು ದಲಿತ ಅಸ್ಪಶ್ಯ ಮುಸ್ಲಿಮ್ ಸಮುದಾಯ! ಇವರ ಸಾಂಪ್ರದಾಯಿಕ ಕುಲವೃತ್ತಿ ಮಲ ಬಳಿಯುವ ಸಫಾಯಿ ಕರ್ಮಚಾರಿ ಕೆಲಸ, ಪೌರಕಾರ್ಮಿಕ ಕೆಲಸ ಮತ್ತು ಈಚೆಗಷ್ಟೇ ಬ್ಯಾಂಡ್ ವಾದ್ಯ ನುಡಿಸುವ ಕೆಲಸವನ್ನೂ ಮಾಡುತ್ತಾರೆ. ಇವರು ‘ಹೇಲಾ’ ಎಂಬ ಜಾತಿಮೂಲದ ಸಮುದಾಯದಲ್ಲಿದ್ದವರು, ನಂತರ ಇಸ್ಲಾಮ್‌ಗೆ ಮತಾಂತರಗೊಂಡವರು ಎಂದು ಹೇಳಲಾಗುತ್ತದೆ. ಕರ್ನಾಟಕದಲ್ಲಿ ಇವರ ಜನಸಂಖ್ಯೆ ತುಂಬಾ ಕಡಿಮೆ. ಉತ್ತರ ಭಾರತದ ಜಾರ್ಖಂಡ್, ಉತ್ತರ ಪ್ರದೇಶ, ಬಿಹಾರ, ರಾಂಚಿಯಲ್ಲಿ ಇವರು ಹೆಚ್ಚು ಜನಸಂಖ್ಯೆಯಲ್ಲಿ ಇದ್ದಾರೆ.

ಪ್ರವಾದಿ ಮುಹಮ್ಮದ್ ಅವರ ಕಾಲದಲ್ಲಿ ಮಲಮೂತ್ರ ಸ್ವಚ್ಛ ಮಾಡುತ್ತಿದ್ದವರಿಗೆ ಈ ಹೆಸರು ಬಂದಿದೆ ಎಂದು ಕೆಲವರು ಹೇಳುತ್ತಾರೆ. ಇದಕ್ಕೆ ಯಾವುದೇ ಆಧಾರಗಳಿಲ್ಲ. ಹಲಾಲ್ ಮಾಡಿ ಆಹಾರ ಸೇವಿಸುತ್ತಿದ್ದುದರಿಂದಲೂ ಈ ಹೆಸರು ಬಂದಿರಬಹುದು ಎನ್ನುತ್ತಾರೆ. ಆದರೆ ಇವರು ತೀರಾ ಬಡತನ ಅನುಭವಿಸಿ, ಆರ್ಥಿಕ ಸಂಕಷ್ಟದಿಂದಾಗಿ ಮಲ ಬಳಿಯುವ ಸಫಾಯಿ ಕೆಲಸಕ್ಕೆ ಹೋದ ಮುಸ್ಲಿಮರು ಎಂಬುದಂತೂ ನಿಜ. ಭಂಗಿ ಸಮುದಾಯದವರೇ ಇಸ್ಲಾಮ್ ಮತ ಸ್ವೀಕರಿಸಿ ಹಲಾಲ್ಕೋರ್ ಆದರು ಎಂದು ಮಾನವಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ. ಮುಸ್ಲಿಮ್ ಮತದಲ್ಲಿನ ಅಸ್ಪಶ್ಯರು ಎಂತಲೂ ಇವರನ್ನು ಕರೆಯುತ್ತಾರೆ. ಹಲಾಲ್ಕೋರ್ ಸಮುದಾಯದವರು ಸುನ್ನಿ ಮುಸ್ಲಿಮ್ ಗುಂಪಿಗೆ ಸೇರಿದ್ದು, ಸುನ್ನಿ ಮುಸ್ಲಿಮರಲ್ಲಿ ಅಶ್ರಫ್, ಅಜ್ಲಾಫ್ ಮತ್ತು ಅರ್ಝಲ್ ಎಂಬ ಮೂರು ಪಂಗಡಗಳಿದ್ದು ಅಶ್ರಫ್ ಮೇಲ್ವರ್ಗದವರು, ಅಜ್ಲಾಫ್ ಮಧ್ಯವರ್ಗದವರು ಮತ್ತು ಅರ್ಝಲ್ ಅನ್ನುವುದು ಅಶುದ್ಧ ಪಂಗಡವೆಂದು ಗುರುತಿಸಲ್ಪಟ್ಟಿದೆ. ಈ ಹಲಾಲ್ಕೋರ್ ಸಮುದಾಯ ಅರ್ಝಲ್ ಪಂಗಡಕ್ಕೆ ಸೇರುತ್ತದೆ. ಮೇಲ್ವರ್ಗಕ್ಕೆ ಸೇರಿದ ಅಶ್ರಾಫ್ ಪಂಗಡದವರು ಹಲಾಲ್ಕೋರ್‌ರ ಮನೆಯಲ್ಲಿ ನೀರು ಕುಡಿಯುವುದಿಲ್ಲ, ಅವರ ಸ್ಮಶಾನಗಳಲ್ಲಿ ಇವರ ಹೆಣ ಹೂಳಲು ಬಿಡುತ್ತಿರಲಿಲ್ಲ. ಅಶ್ರಫ್‌ರು ತಿಂದು ಬಿಟ್ಟ ಎಂಜಲನ್ನು ಇವರು ತಿನ್ನಬೇಕಿತ್ತು, ಅವರನ್ನು ತಮ್ಮ ಮಸೀದಿಗಳಿಗೂ ಸೇರಿಸುತ್ತಿರಲಿಲ್ಲವಂತೆ! ಈಗ ಪರಿಸ್ಥಿತಿ ಸುಧಾರಿಸಿದೆ ಎನ್ನುತ್ತಾರೆ. ಹಿಂದೂ ಧರ್ಮದಲ್ಲಿನ ಅಸ್ಪಶ್ಯತೆಯೆಂಬ ಪಿಡುಗು ಇಸ್ಲಾಮ್ ಧರ್ಮಕ್ಕೂ ಪಸರಿಸಿದ್ದು ದುರದೃಷ್ಟಕರ!

ಹಲಾಲ್ಕೋರ್‌ಗಳಲ್ಲಿ ಕಂಪು ಮತ್ತು ಶೈಕಾದ ಎಂಬ ಉಪಜಾತಿಗಳಿವೆ. ಇವರ ಭಾಷೆ ಅವಧಿ ಮತ್ತು ಹಿಂದಿ, ಉತ್ತರಪ್ರದೇಶದಲ್ಲಿ ಇವರು ಅನೇಕ ಭಾಷೆಗಳಲ್ಲಿ ಮಾತನಾಡುತ್ತಾರೆ. ಬಿಹಾರದಲ್ಲಿ ಬಹುತೇಕ ಇವರೇ ಮುನಿಸಿಪಾಲಿಟಿ ಪೌರಕಾರ್ಮಿಕರು. ಇಲ್ಲಿಂದ ಪೌರಕಾರ್ಮಿಕ ಕೆಲಸಕ್ಕೆ ಮುಂಬೈ ಮತ್ತು ಕೋಲ್ಕತಾಕ್ಕೆ ವಲಸೆ ಹೋಗುತ್ತಾರೆ. ಇವರಲ್ಲೂ ಕುಲಪಂಚಾಯಿತಿಗಳಿದ್ದು ಇದನ್ನು ‘ಬಿರಾದಾರಿ ಪಂಚಾಯಿತ್’ ಎನ್ನುತ್ತಾರೆ.

ಬ್ರಿಟಿಷರ ತಪ್ಪಿನ ಫಲ, ಬ್ರಿಟಿಷರ ಕಾಲದಲ್ಲಿ ನಡೆದ ಜಾತಿ ಗಣತಿಯಲ್ಲಿ ‘ಜಾತಿ-ಹಲಾಲ್ಕೋರ್, ಧರ್ಮ-ಮುಸ್ಲಿಮ್’ ಎಂದು ಬರೆಯಬೇಕಾಗಿತ್ತು ಆದರೆ ಅವರು ‘ಜಾತಿ-ಮುಸ್ಲಿಮ್’ ಎಂದು ತಪ್ಪಾಗಿ ದಾಖಲಿಸಿದರು ಇದರ ಪರಿಣಾಮ ಹಲಾಲ್ಕೋರರು ಒಬಿಸಿ ಪಟ್ಟಿ ಸೇರಿದರು. ಇವರ ಬೇಡಿಕೆ ಏನೆಂದರೆ ನಾವು ಹಿಂದೂ ಹರಿಜನರಿಗೆ ಸಮಾನ, ನಮಗೂ ಎಸ್‌ಸಿ ಸ್ಥಾನಮಾನ ಬೇಕು ಎಂಬುದು. ಇವರಿಗೆ ಎಸ್‌ಸಿ ಸ್ಥಾನಮಾನ ಸಿಕ್ಕರೆ ಸರಕಾರಿ ಸಫಾಯಿ ಕರ್ಮಚಾರಿ ಕೆಲಸ, ಮೀಸಲಾತಿ ಸೌಲಭ್ಯ ಸಿಗುತ್ತದೆ ಎಂಬ ಆಸೆ.

‘‘ಹಮ್ ತೋ ಸಫಾಯಿವಾಲೆ ಹಿ ಹೈ, ಪರ್ ಉಸ್ ಕಾಮ್ ಮೇ ಭಿ ಹಮ್ ಲೋಗೋಂ ಕೋ ಸೀಧೆ ಸರಕಾರಿ ನೌಕರಿ ಕಹಾ ಮಿಲ್ತಿ ಹೈ?’’ ಎಂದು ಜುನೈದ್ ಎಂಬ ಬ್ಯಾಂಡ್ ವಾದಕನ ಆಶಯ.

ಕರ್ನಾಟಕದಲ್ಲಿ ಹಲಾಲ್ಕೋರ್ ಸಮುದಾಯ ಸ್ವಲ್ಪ ಪ್ರಮಾಣದಲ್ಲಿ ಗುಲಬರ್ಗಾದ ಸಂತ್ರಾಸ್ ವಾಡಿ, ಗಾಜಿಪುರ, ವೀರೇಶ್ ನಗರ, ಇಂದಿರಾನಗರ, ತಾರ್ಸಿಲ್ ಬಡಾವಣೆ, ಚಿತ್ತಾಪುರ ಸೇರಿದಂತೆ ಸುಮಾರು 248 ಕುಟುಂಬಗಳು ಈ ಪ್ರದೇಶಗಳಲ್ಲಿ ನೆಲೆಸಿವೆ. ಹುಬ್ಬಳ್ಳಿ, ಧಾರವಾಡ, ದೇವದುರ್ಗ, ಜಮಖಂಡಿ, ಕೋಲಾರ ಸೇರಿದಂತೆ ಕರ್ನಾಟಕದಲ್ಲಿ ಸುಮಾರು 15,000 ಜನಸಂಖ್ಯೆ ಇರಬಹುದು. 2011 ಸೆನ್ಸಸ್ ಪ್ರಕಾರ 6,000 ಜನಸಂಖ್ಯೆ ಇದ್ದಾರೆಂದು ದಾಖಲಿಸಲಾಗಿದೆ. ನಂತರ ಈ ಸಮುದಾಯದ ಸೆನ್ಸೆಸ್ ಮಾಡಿಯೇ ಇಲ್ಲ! ಅಂದರೆ ಇವರನ್ನು ಗಣತಿಯವರು ಲೆಕ್ಕಕ್ಕೇ ತೆಗೆದುಕೊಂಡಿಲ್ಲ! ಮಾಮೂಲಿ ಮುಸ್ಲಿಮ ರೊಂದಿಗೆ ಇವರನ್ನೂ ಸೇರಿಸಿಬಿಟ್ಟಿದ್ದಾರೆ. ಈ ಕಾರಣಕ್ಕೆ ಹಲಾಲ್ಕೋರ್ ಎಂಬ ಹೆಸರಿನ ದಲಿತ ಅಸ್ಪಶ್ಯ ಮುಸ್ಲಿಮ್ ಸಮುದಾಯಕ್ಕೆ ಅಸ್ಮಿತೆಯೇ ಇಲ್ಲದಂತಾಗಿದೆ. ಈ ಕಾರಣಕ್ಕೆ ಇವರು ಎಸ್.ಸಿ. ಪಟ್ಟಿಯಲ್ಲಿ ಇಲ್ಲ ಮತ್ತು ಇವರು ಎಲ್ಲಾ ಮುಸ್ಲಿಮರಂತೆ ಹಿಂದುಳಿದ ವರ್ಗಗಳ 2(ಬಿ) ಪಟ್ಟಿಯಲ್ಲೇ ಸವಲತ್ತು ಪಡೆಯಬೇಕಾದ ಅನಿವಾರ್ಯತೆಯಿಂದಾಗಿ ಇವರಿಗೆ ಪ್ರತ್ಯೇಕ ಅಸ್ತಿತ್ವವೇ ಇಲ್ಲದೆ ಕಳೆದುಹೋಗಿದ್ದಾರೆ! ಮಂಡಲ್ ಆಯೋಗದ ವರದಿಯಲ್ಲೂ ಹಲಾಲ್ಕೋರ್ ರನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲೇ ಗುರುತಿಸಲಾಗಿತ್ತು.

ಒಮ್ಮೆ ನಮ್ಮ ಅಲೆಮಾರಿ ಬುಡಕಟ್ಟು ಮಹಾಸಭಾ ವತಿಯಿಂದ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರನ್ನು ಬೆಟ್ಟಿಮಾಡಲು ಹೋದಾಗ ಹಲಾಲ್ಕೋರ್ ಪ್ರತಿನಿಧಿಗಳನ್ನು ಕೂಡ ಕರೆದೊಯ್ದಿದ್ದೆವು. ಹಲಾಲ್ಕೋರ್ ಹೆಸರು ಕೇಳಿ ಸಿದ್ದರಾಮಯ್ಯನವರು ಆಶ್ಚರ್ಯಚಕಿತರಾದರು! ಈ ಸಮುದಾಯಕ್ಕೆ ಏನನ್ನಾದರೂ ಮಾಡಬೇಕು ಅಂದರು ಅಷ್ಟೇ. ಸಿದ್ದರಾಮಯ್ಯನವರು ಪ್ರತೀ ಭಾಷಣದಲ್ಲಿ ಸಾಮಾಜಿಕ ನ್ಯಾಯದ ಕುರಿತು ಮಾತನಾಡುತ್ತಿದ್ದುದನ್ನು ಕೇಳಿ ಎಲ್ಲಾ ತಳ ಸಮುದಾಯಗಳಂತೆ ಹಲಾಲ್ಕೋರರೆಂಬ ಅಮಾಯಕರೂ ತಮಗೆ ಏನೋ ಒಳ್ಳೆಯದಾಗುತ್ತದೆಂದು ಪಾಪ ನಂಬಿದ್ದರು!

ಅಸ್ಪಶ್ಯ ದಲಿತ ಮುಸ್ಲಿಮ್ ಸಮುದಾಯವಾಗಿರುವ ಹಲಾಲ್ಕೋರ್‌ಗಳು ಇಂದಿಗೂ ಮಲಬಳಿಯುವ ಜಾಡಮಾಲಿಗಳಾಗಿ ಹೀನಾಯವಾಗಿ ಬದುಕುತ್ತಿದ್ದಾರೆ. ಇವರಿಗಾಗಿ ಒಬ್ಬ ಅಂಬೇಡ್ಕರ್, ಒಬ್ಬ ಟಿಪ್ಪು, ಒಬ್ಬ ದೇವರಾಜ ಅರಸು ಹುಟ್ಟಿಬರುತ್ತಾರೇನೋ ಎಂದು ಕಾಯುತ್ತಿದ್ದಾರೆ! ಈಗಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ರವರ ಬಳಿಗೂ ಹಲಾಲ್ಕೋರ್ ಸಮುದಾಯದವರನ್ನು ಇಷ್ಟರಲ್ಲೇ ಕರೆದೊಯ್ಯುತ್ತೇವೆ, ಕನಿಷ್ಠ ಇವರಿಂದಲಾದರೂ ಈ ನತದೃಷ್ಟ ಸಮುದಾಯಕ್ಕೆ ಅಸ್ಮಿತೆ, ಅಸ್ತಿತ್ವ ಸಿಗುತ್ತದೇನೋ ಎಂಬ ಆಶಾಭಾವವಿದೆ.

Tags

caste
share
ಸಿ.ಎಸ್. ದ್ವಾರಕಾನಾಥ್
ಸಿ.ಎಸ್. ದ್ವಾರಕಾನಾಥ್
Next Story
X