Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಯೋಗಿ ಆದಿತ್ಯನಾಥ್ ಇನ್ನು ಬದಿಗೆ...

ಯೋಗಿ ಆದಿತ್ಯನಾಥ್ ಇನ್ನು ಬದಿಗೆ ಸರಿಯುವುದು ಅನಿವಾರ್ಯವೇ?

ಎನ್. ಕೇಶವ್ಎನ್. ಕೇಶವ್16 May 2024 2:10 PM IST
share
ಯೋಗಿ ಆದಿತ್ಯನಾಥ್ ಇನ್ನು ಬದಿಗೆ ಸರಿಯುವುದು ಅನಿವಾರ್ಯವೇ?
ಇತ್ತೀಚೆಗೆ ಆದಿತ್ಯನಾಥ್ ಭವಿಷ್ಯ ಏನಾಗಲಿದೆ ಎನ್ನುವುದರ ಬಗ್ಗೆ ಕೇಜ್ರಿವಾಲ್ ಹೇಳಿರುವ ಮಾತುಗಳು ತೀವ್ರ ಕುತೂಹಲ ಮೂಡಿಸಿವೆ. ಕೇಜ್ರಿವಾಲ್ ಹೇಳಿಕೆ ಬೆನ್ನಲ್ಲೇ ಸಂಸದ ಬ್ರಿಜ್ ಭೂಷಣ್ ಸಿಂಗ್ ಯುಪಿ ಸರಕಾರದ ಬುಲ್ಡೋಜರ್ ನೀತಿಯ ವಿರುದ್ಧ ಹೇಳಿಕೆ ನೀಡಿರುವುದು ಇನ್ನೂ ಅಚ್ಚರಿಗೆ ಕಾರಣವಾಗಿದೆ. ಹಾಗಾದರೆ ಆದಿತ್ಯನಾಥ್ ಅವರನ್ನು ಗುರಿಯಾಗಿಸಿಕೊಂಡು ಯುಪಿಯಲ್ಲಿ ತೆರೆಮರೆಯಲ್ಲೇನೋ ನಡೆಯುತ್ತಿದೆಯೇ? ಈ ವರ್ಷ ಆದಿತ್ಯನಾಥ್ ಪಾಲಿಗೆ ಅಸ್ತಿತ್ವದ ಹೋರಾಟದ ವರ್ಷವಾಗಲಿದೆಯೇ? ಶಿವರಾಜ್ ಸಿಂಗ್ ಚೌಹಾಣ್ ಅವರಂತೆ ಆದಿತ್ಯನಾಥ್ ಅವರಿಗೂ ಮೂಲೆಗುಂಪಾಗುವ ಪರಿಸ್ಥಿತಿ ಕಾದಿದೆಯೆ?

ಲೋಕಸಭಾ ಚುನಾವಣೆ ಮುಗಿದ ಬೆನ್ನಿಗೇ ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಅವರನ್ನು ಬದಲಾಯಿಸಲಾಗುತ್ತದೆಯೇ? ಹೆಚ್ಚೆಂದರೆ ಎರಡು ತಿಂಗಳಲ್ಲಿ ಯುಪಿಗೆ ಹೊಸ ಸಿಎಂ ಬರಲಿದ್ದಾರೆಯೇ?

ಪಿಎಂ ಮೋದಿ ಹಾಗೂ ಸಿಎಂ ಆದಿತ್ಯನಾಥ್ ನಡುವೆ ಶೀತಲ ಸಮರ ನಡೆಯುತ್ತಿದೆಯೇ?

ಡಬಲ್ ಇಂಜಿನ್ ಎಂದು ಹೇಳಿಕೊಳ್ಳುತ್ತಾ ಒಂದೊಂದೇ ರಾಜ್ಯದಲ್ಲಿ ಪ್ರಭಾವಿ ನಾಯಕರನ್ನು ಬದಿಗೆ ಸರಿಸಿದ ಹಾಗೆ ಯುಪಿಯಲ್ಲೂ ಆಗಲಿದೆಯೇ? ಆದಿತ್ಯನಾಥ್ ನೀತಿಗಳ ವಿರುದ್ಧ ಆ ರಾಜ್ಯದ ಹಿರಿಯ ಬಿಜೆಪಿ ನಾಯಕರೇ ಹೇಳಿಕೆ ಕೊಡುತ್ತಾ ಇರುವುದು ಯಾರ ಬೆಂಬಲದಿಂದ?

ಈಗ ಇಂತಹ ಕೆಲವು ಪ್ರಶ್ನೆಗಳು ಉತ್ತರ ಪ್ರದೇಶದ ಸದ್ಯದ ರಾಜಕೀಯ ಪರಿಸ್ಥಿತಿಯನ್ನು ಗಮನಿಸುವ ಎಲ್ಲರನ್ನೂ ಕಾಡುತ್ತಿದೆ.

ಇತ್ತೀಚೆಗೆ ಆದಿತ್ಯನಾಥ್ ಭವಿಷ್ಯ ಏನಾಗಲಿದೆ ಎನ್ನುವುದರ ಬಗ್ಗೆ ಕೇಜ್ರಿವಾಲ್ ಹೇಳಿರುವ ಮಾತುಗಳು ತೀವ್ರ ಕುತೂಹಲ ಮೂಡಿಸಿವೆ.

ಕೇಜ್ರಿವಾಲ್ ಹೇಳಿಕೆ ಬೆನ್ನಲ್ಲೇ ಸಂಸದ ಬ್ರಿಜ್ ಭೂಷಣ್ ಸಿಂಗ್ ಯುಪಿ ಸರಕಾರದ ಬುಲ್ಡೋಜರ್ ನೀತಿಯ ವಿರುದ್ಧ ಹೇಳಿಕೆ ನೀಡಿರುವುದು ಇನ್ನೂ ಅಚ್ಚರಿಗೆ ಕಾರಣವಾಗಿದೆ.

ಹಾಗಾದರೆ ಆದಿತ್ಯನಾಥ್ ಅವರನ್ನು ಗುರಿಯಾಗಿಸಿಕೊಂಡು ಯುಪಿಯಲ್ಲಿ ತೆರೆಮರೆಯಲ್ಲೇನೋ ನಡೆಯುತ್ತಿದೆಯೇ?

ಈ ವರ್ಷ ಆದಿತ್ಯನಾಥ್ ಪಾಲಿಗೆ ಅಸ್ತಿತ್ವದ ಹೋರಾಟದ ವರ್ಷವಾಗಲಿದೆಯೇ? ಶಿವರಾಜ್ ಸಿಂಗ್ ಚೌಹಾಣ್ ಅವರಂತೆ ಆದಿತ್ಯನಾಥ್ ಅವರಿಗೂ ಮೂಲೆಗುಂಪಾಗುವ ಪರಿಸ್ಥಿತಿ ಕಾದಿದೆಯೆ?

2019ರಿಂದ ಯೋಗಿ ಮತ್ತು ಮೋದಿ ನಡುವಿನ ಸಂಬಂಧದಲ್ಲಿ ಏನೇನು ಬದಲಾಗಿದೆ?

ಎಲ್ಲರೂ ಗಮನಿಸಿರುವ ಹಾಗೆ ದೇಶದ ತುಂಬ ಚುನಾವಣಾ ಪ್ರಚಾರದಲ್ಲಿ ವಿಜೃಂಭಿಸುವುದು ಮೋದಿ ಮಾತ್ರ. ಎಲ್ಲ ಪೋಸ್ಟರುಗಳಲ್ಲಿಯೂ ಮೋದಿಯೊಬ್ಬರೇ ಮಿಂಚುತ್ತಾರೆ. ಆಯಾ ರಾಜ್ಯಗಳಲ್ಲಿ ಸ್ಥಳೀಯ ನಾಯಕರಿಗೆ, ಅಭ್ಯರ್ಥಿಗಳಿಗೆ ಅವಕಾಶವೇ ಇಲ್ಲ.

ಆದರೆ ಯುಪಿಯಲ್ಲಿ ಮಾತ್ರ ಮೋದಿ ಜೊತೆ ಆದಿತ್ಯನಾಥ್ ಕೂಡ ಅಷ್ಟೇ ಮುಖ್ಯವಾಗಿ ಕಾಣಿಸುತ್ತಿದ್ದಾರೆ.

ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಬದಿಗೆ ಸರಿಸಿದಷ್ಟೇ ಸಲೀಸಾಗಿ ಆದಿತ್ಯನಾಥ್ ಅವರನ್ನು ಬದಿಗೆ ಸರಿಸುವುದು ಸಾಧ್ಯವಿಲ್ಲ ಎಂಬುದು ನಿಜ.

ಯಾಕೆಂದರೆ ಬಿಜೆಪಿಯ ಹಿಂದುತ್ವದ ರಾಜಕೀಯದಲ್ಲಿ ಆದಿತ್ಯನಾಥ್ ಪ್ರಬಲರಾಗಿಯೇ ಇದ್ದಾರೆ.

ಹಾಗಿದ್ದೂ ಯೋಗಿ ವಿರೋಧಿ ನೆಲೆಯೊಂದು ಯುಪಿಯೊಳಗೆ ಅವರದೇ ಪಕ್ಷದಲ್ಲಿ ಗಟ್ಟಿಯಾಗುತ್ತಿದೆಯೇ ಎಂಬ ಸಂಶಯ ಈಚೆಗೆ ಹೆಚ್ಚುತ್ತಿದೆ.

ಬ್ರಿಜ್ ಭೂಷಣ್ ಥರದವರು ಆದಿತ್ಯನಾಥ್ ವಿರುದ್ಧ ಮಾತನಾಡುತ್ತಿದ್ದಾರೆ ಎಂದರೆ ಅದರ ಹಿಂದೆ ಇರುವವರು ಯಾರು ಹಾಗಾದರೆ?

ರಾಜಕಾರಣ ಏನೇ ಇದ್ದರೂ, ಬುಲ್ಡೋಜರ್ ನೀತಿಗೆ ಬ್ರಿಜ್ ಭೂಷಣ್ ವಿರೋಧ ವ್ಯಕ್ತಪಡಿಸಿದ್ದೇನೋ ಸರಿಯಾಗಿಯೇ ಇದೆ. ಆದರೆ ‘ಮೋದಿ ಮೋದಿ’ ಎನ್ನುವ ಹಾಗೆ ‘ಯೋಗಿ ಯೋಗಿ’ ಎನ್ನುತ್ತಿದ್ದವರೇ ಈಗ ಅದೇ ಆದಿತ್ಯನಾಥ್ ಸರಕಾರದ ವಿರುದ್ಧ ಹೀಗೆ ತಿರುಗಿ ನಿಂತಿರುವುದರ ಮರ್ಮ ಏನು?

ಬುಲ್ಡೋಜರ್ ನೀತಿ ಬರೀ ಯುಪಿ ಸರಕಾರದ್ದು ಎನ್ನುವುದಕ್ಕಿಂತಲೂ ಅದು ಇಡೀ ಬಿಜೆಪಿಯದ್ದೇ ಮನಃಸ್ಥಿತಿ. ಹೀಗಿರುವಾಗ, ಬ್ರಿಜ್ ಭೂಷಣ್ ಮಾತಿಗೆ ಬಿಜೆಪಿ ಏನೂ ಮಾತಾಡದೆ ಯಾಕೆ ಸುಮ್ಮನಿದೆ?

ಒಬ್ಬ ವಿವಾದಿತ ಸಂಸದ. ಸ್ವತಃ ಟಿಕೆಟ್ ಕಳೆದುಕೊಂಡು ಮಗನಿಗೆ ಟಿಕೆಟ್ ಪಡೆದ ನಾಯಕ. ಆತ ಯುಪಿಯ ಸಿಎಂ, ಬಿಜೆಪಿಯ ಪ್ರಭಾವಿ ನಾಯಕ ಆದಿತ್ಯನಾಥ್ ಅವರ ನೀತಿಯನ್ನು ವಿರೋಧಿಸಿ ಮಾತಾಡುವುದು ಅಂದರೆ ಅಷ್ಟು ಸುಲಭವೇ?

ಇಲ್ಲಿ ಕೇಜ್ರಿವಾಲ್ ಹೇಳಿರುವ ಮಾತುಗಳನ್ನು ಸ್ವಲ್ಪ ಗಮನಿಸಬೇಕು.

‘‘ಮೋದಿ ಒಂದು ದೇಶ, ಒಬ್ಬ ನಾಯಕ ಮಿಷನ್ ಆರಂಭಿಸಿದ್ದಾರೆ. ಅವರು ಶೀಘ್ರದಲ್ಲಿಯೇ ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಅವರ ರಾಜಕೀಯ ಜೀವನವನ್ನು ಸಹ ಅಂತ್ಯಗೊಳಿಸಲಿದ್ದಾರೆ’’ ಎಂಬುದು ಕೇಜ್ರಿವಾಲ್ ಹಾಕಿರುವ ಬಾಂಬ್.

ಹಾಗೆಯೇ ಬಿಜೆಪಿಯ 75 ವರ್ಷದ ವಯೋಮಿತಿ ವಿಚಾರ ಪ್ರಸ್ತಾಪಿಸಿದ ಕೇಜ್ರಿವಾಲ್ ಪ್ರಧಾನಿಯಾಗುವುದು ಮೋದಿಯಲ್ಲ, ಬದಲಿಗೆ ಅಮಿತ್ ಶಾ ಎಂದಿದ್ದಾರೆ.

ಮೋದಿ ವಿಪಕ್ಷ ನಾಯಕರನ್ನು ಜೈಲಿಗೆ ಕಳಿಸುವುದು ಮಾತ್ರವಲ್ಲ, ತನ್ನದೇ ಪಕ್ಷದ ಎಲ್ಲ ನಾಯಕರ ರಾಜಕೀಯ ಭವಿಷ್ಯವನ್ನೂ ಮುಗಿಸಿಹಾಕುತ್ತಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಅಡ್ವಾಣಿ, ಮುರಳಿ ಮನೋಹರ ಜೋಶಿ, ಶಿವರಾಜ್ ಚೌಹಾಣ್, ವಸುಂಧರಾ ರಾಜೇ, ಮನೋಹರ್ ಲಾಲ್ ಖಟ್ಟರ್, ರಮಣ್ ಸಿಂಗ್ ಅವರ ರಾಜಕೀಯವನ್ನು ಮುಗಿಸಲಾಗಿದೆ. ಮುಂದಿನ ಗುರಿ ಆದಿತ್ಯನಾಥ್. ಬಿಜೆಪಿ ಗೆದ್ದರೆ ಎರಡು ತಿಂಗಳ ಒಳಗೆ ಆದಿತ್ಯನಾಥ್ ಅವರನ್ನು ಬದಲಿಸಲಾಗುತ್ತದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಈ ಹೇಳಿಕೆ ಬಳಿಕ ಬಿಜೆಪಿ ಕೂಡಲೇ ಮೋದಿ ಅವರೇ ಮುಂದಿನ ಅವಧಿಗೂ ಪ್ರಧಾನಿಯಾಗುತ್ತಾರೆ. 75 ವರ್ಷದ ನಿಯಮ ಇದ್ದರೂ ಅವರಿಗೆ ಅದು ಅನ್ವಯ ಆಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿತು.

ಆದರೆ ಆದಿತ್ಯನಾಥ್ ಅವರನ್ನು ಬದಲಾಯಿಸುವ ವಿಷಯದ ಬಗ್ಗೆ ಬಿಜೆಪಿ ಏನೂ ಮಾತನಾಡಿಲ್ಲ. ಏಕೆ ಪಕ್ಷ ಆದಿತ್ಯನಾಥ್ ಅವರನ್ನು ಒಬ್ಬಂಟಿಯನ್ನಾಗಿಸಿದೆ?

ಆದಿತ್ಯನಾಥ್ ಬಿಜೆಪಿಯ ಪ್ರಮುಖ ನಾಯಕ ಮತ್ತು ಬೇರೆ ರಾಜ್ಯಗಳ ಚುನಾವಣೆಯಲ್ಲಿಯೂ ಅವರು ಸ್ಟಾರ್ ಪ್ರಚಾರಕ.

ಕಳೆದ 40 ದಿನಗಳಲ್ಲಿ ಅವರು 100 ಚುನಾವಣಾ ರ್ಯಾಲಿಗಳಲ್ಲಿ ಪಾಲ್ಗೊಂಡಿದ್ದಾರೆ.

ಹೀಗೆಲ್ಲ ಇರುವಾಗಲೂ ಆದಿತ್ಯನಾಥ್ ವಿಚಾರದಲ್ಲಿ ಇಂತಹದೊಂದು ಸುಳಿವು ಹೊರಬೀಳುತ್ತಿರುವುದು ಏಕೆ? ಮೋದಿ ಮತ್ತು ಆದಿತ್ಯನಾಥ್ ನಡುವಿನ ಸಂಬಂಧದಲ್ಲಿ ಏನಾಗಿದೆ?

ಕೆಲ ದಿನಗಳ ಹಿಂದೆ ಕಾಶಿ ವಿಶ್ವನಾಥ ಮಂದಿರದಲ್ಲಿ ಮೋದಿ ಪೂಜೆಯಲ್ಲಿ ಪಾಲ್ಗೊಂಡಿದ್ದಾಗ ಆದಿತ್ಯನಾಥ್ ಪಕ್ಕದಲ್ಲಿರದೆ ಮೋದಿಯ ಹಿಂದೆ ಮಂದಿರದ ಬಾಗಿಲ ಬಳಿ ಕುಳಿತಿದ್ದು ಚರ್ಚೆಗೆ, ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು.

ರಾಜ್ಯದ ಮುಖ್ಯಮಂತ್ರಿಯನ್ನು ಏಕೆ ಹೀಗೆ ಹಿಂದೆ ಕೂರಿಸಲಾಯಿತು?

ಕಾಶಿ ವಿಶ್ವನಾಥ್ ಕಾರಿಡಾರ್ ಉದ್ಘಾಟನೆಯಲ್ಲೂ ಮೋದಿ ಒಬ್ಬರೇ ವಿಜೃಂಭಿಸಿದ್ದು ಕಂಡುಬಂತು. ಮೋದಿ ಜೊತೆ ಆದಿತ್ಯನಾಥ್ ಇರಲಿಲ್ಲ.

80 ಲೋಕಸಭಾ ಕ್ಷೇತ್ರಗಳಿರುವ ರಾಜ್ಯದ ಪ್ರಭಾವಿ ಮುಖ್ಯಮಂತ್ರಿ ಹೀಗೇಕೆ ನಿರ್ಲಕ್ಷ್ಯಕ್ಕೆ, ಕಡೆಗಣನೆಗೆ ತುತ್ತಾಗುತ್ತಿದ್ದಾರೆ?

ರಾಜ್ಯದ ಮುಖ್ಯಮಂತ್ರಿಯನ್ನು ಹೀಗೆ ಸಾರ್ವಜನಿಕವಾಗಿ ನಿರ್ಲಕ್ಷಿತ ಸ್ಥಿತಿಯಲ್ಲಿ ಕಾಣಿಸಬಾರದಲ್ಲವೇ? ಮುಖ್ಯಮಂತ್ರಿಯ ಈ ಸ್ಥಿತಿ ಜನರ ನದರಿಗೆ ಬೀಳದೇ ಇರಲು ಹೇಗೆ ಸಾಧ್ಯ?

ಯುಪಿ ಚುನಾವಣೆಯಲ್ಲಿ ಕಾಣಿಸುತ್ತಿರುವ ಒಂದು ವ್ಯತ್ಯಾಸವೆಂದರೆ, ಅಲ್ಲಿನ ಹೋರ್ಡಿಂಗ್‌ಗಳಲ್ಲಿ ಮೋದಿ ಜೊತೆ ಆದಿತ್ಯನಾಥ್ ಕೂಡ ಕಾಣಿಸುತ್ತಿರುವುದು.

ದೇಶದೆಲ್ಲೆಡೆ ಚುನಾವಣಾ ಪ್ರಚಾರದ ಹೋರ್ಡಿಂಗ್‌ಗಳಲ್ಲಿ ಮೋದಿ ಬಿಟ್ಟು ಇನ್ನಾರಿಗೂ ಜಾಗವಿರುವುದಿಲ್ಲ. ಕಡೆಗೆ ಅಭ್ಯರ್ಥಿಯ ಮುಖವನ್ನೂ ಅಲ್ಲಿ ಕಾಣಲು ಸಾಧ್ಯವಿಲ್ಲ.

ಯುಪಿಯಲ್ಲಿಯೂ ಆರಂಭದಲ್ಲಿ ಇಂತಹದೇ ಸ್ಥಿತಿಯಿತ್ತು. ಆದರೆ ಎಲ್ಲವೂ ಬದಲಾದದ್ದು ಆದಿತ್ಯನಾಥ್ ಕಾರಣದಿಂದ ಎಂಬುದು ಮಾತ್ರ ಸತ್ಯ.

ಮೋದಿ ಜೊತೆ ಆದಿತ್ಯನಾಥ್ ಕೂಡ ಹೋರ್ಡಿಂಗ್‌ಗಳಲ್ಲಿ ಕಾಣಿಸುತ್ತಿರುವುದು ಅನಿವಾರ್ಯತೆ ಕಾರಣದಿಂದಲೂ ಇರಬಹುದು.

ಈ ಮೊದಲು ಹೋರ್ಡಿಂಗ್‌ಗಳಲ್ಲಿ ಆದಿತ್ಯನಾಥ್ ಇಲ್ಲದೆ ಮೋದಿ ಮಾತ್ರ ಇದ್ದುದನ್ನು ಅಖಿಲೇಶ್ ಯಾದವ್ ಟೀಕಿಸಿದ್ದರು. ‘‘ಡಬಲ್ ಇಂಜಿನ್ ಸರಕಾರದ ಇನ್ನೊಂದು ಇಂಜಿನ್ ಎಲ್ಲಿ ಮಾಯವಾಗಿದೆ?’’ ಎಂದು ಲೇವಡಿ ಮಾಡಿದ್ದರು.

ಬಹುಶಃ ಇದೇ ಕಾರಣದಿಂದ ಕಡೆಗೆ ಮೋದಿ ಜೊತೆ ಆದಿತ್ಯನಾಥ್‌ಗೂ ಜಾಗ ಕೊಡಬೇಕಾದ ಅನಿವಾರ್ಯತೆ ಬಿಜೆಪಿಗೆ ಎದುರಾಗಿರುವ ಹಾಗೆ ಕಾಣಿಸುತ್ತದೆ.

ಆದಿತ್ಯನಾಥ್ ಬಿಟ್ಟರೆ ಬಿಜೆಪಿಯ ಇನ್ನಾವ ನಾಯಕನಿಗೂ ಮೋದಿ ಜೊತೆ ಕಾಣಿಸಿಕೊಳ್ಳುವ ಅರ್ಹತೆ ಇಲ್ಲವೇನೊ ಎನ್ನುವಂಥ ಸ್ಥಿತಿ ಇದೆ.

ಮೋದಿ ನಾಮಪತ್ರ ಸಲ್ಲಿಸುವಾಗ ಅವರ ಜೊತೆಗೆ ಆದಿತ್ಯನಾಥ್ ಕೂಡ ಕಾಣಿಸಿಕೊಂಡರು. ಇದು ಹೇಗೆ ಸಾಧ್ಯವಾಯಿತು? ಯಾಕೆ ಜೊತೆಯಲ್ಲಿ ಆದಿತ್ಯನಾಥ್ ಅವರನ್ನು ಮೋದಿ ಕರೆದುಕೊಂಡು ಹೋಗುವಂತಾಯಿತು?

ಆದಿತ್ಯನಾಥ್ ಬಗ್ಗೆ ಮಾತನ್ನೇ ಆಡದ, ಆದಿತ್ಯನಾಥ್ ಸರಕಾರದ ಸಾಧನೆಗಳ ಬಗ್ಗೆಯೂ ಹೇಳುವ ಔದಾರ್ಯ ತೋರಿಸಿರದ ಮೋದಿಗೆ ಈಗ ಇದ್ದಕ್ಕಿದ್ದಂತೆ ಯೋಗಿ ಅನಿವಾರ್ಯ ಎಂದು ಕಂಡುಬಂದದ್ದೇಕೆ?

ಚುನಾವಣೆಯಲ್ಲಿ ಸೀಟುಗಳನ್ನು ಕಳೆದುಕೊಳ್ಳಬೇಕಾದೀತು ಎಂಬ ಭಯವೇ ಇದಕ್ಕೆ ಕಾರಣವಲ್ಲವೇ?

ಹೋರ್ಡಿಂಗ್‌ಗಳಲ್ಲಿ ಆದಿತ್ಯನಾಥ್ ಫೋಟೊ ಅನಿವಾರ್ಯವಾಯಿತು, ನಾಮಪತ್ರ ಸಲ್ಲಿಸುವಾಗ ಆದಿತ್ಯನಾಥ್ ಬೇಕಾಯಿತು, ಬನಾರಸ್ ರೋಡ್ ಶೋನಲ್ಲಿ ಕೂಡ ಜೊತೆಗೆ ಆದಿತ್ಯನಾಥ್ ಬೇಕಾಯಿತು.

ಹೀಗೆ ಆದಿತ್ಯನಾಥ್ ಅವರನ್ನು ಬಿಡಲಾರದ ಅನಿವಾರ್ಯತೆ ಮೋದಿಗೆ ಎದುರಾಗಿದೆ.

ಆದಿತ್ಯನಾಥ್ ಇಲ್ಲದೆ ಕೆಲಸವಾಗಲಾರದೆಂದು ಗೊತ್ತಾಗಿರುವುದು ಈ ಬಾರಿ ಕಾಣಿಸುತ್ತಿದೆ.

ಒಮ್ಮೆ ಗಂಗಾರತಿ ಸಂದರ್ಭದಲ್ಲಿಯೂ ಮೋದಿಯ ಜೊತೆಗಿರದೆ ಅವರಿಗಿಂತ ಎರಡು ಸಾಲುಗಳಷ್ಟು ಹಿಂದೆ ಆದಿತ್ಯನಾಥ್ ಇದ್ದುದನ್ನು ಕಾಣಬಹುದು.

ಕಳೆದ ಚುನಾವಣೆಯ ವೇಳೆ ನಾಮಪತ್ರ ಸಲ್ಲಿಸುವಾಗಲೂ ಆದಿತ್ಯನಾಥ್ ಇಲ್ಲವೇ ಇನ್ನಾವುದೇ ನಾಯಕರನ್ನು ಮೋದಿ ಕರೆದೊಯ್ದಿರಲಿಲ್ಲ.

ಆದರೆ ಈ ಸಲ ಎಲ್ಲವೂ ಬದಲಾಗಿದೆ. ಇಬ್ಬರ ಮಧ್ಯೆ ಇರುವ ಶೀತಲ ಸಮರದ ಹೊರತಾಗಿಯೂ ಇಬ್ಬರೂ ಜೊತೆಜೊತೆಗೆ ಕಾಣಿಸಿಕೊಳ್ಳಲೇಬೇಕಾಗಿದೆ.

ಹೀಗಿದ್ದರೂ, ಕೇಜ್ರಿವಾಲ್ ಹೇಳಿಕೆ ಬಂದ ಬಳಿಕ ಮೋದಿ ಏಕೆ ಒಂದೇ ಒಂದು ಹೇಳಿಕೆ ನೀಡದೆ ಮೌನವಾಗಿದ್ದಾರೆ?

ಆದಿತ್ಯನಾಥ್ ತಮ್ಮ ಅವಧಿ ಪೂರ್ಣಗೊಳಿಸಲಿದ್ದಾರೆ. ಯುಪಿ ಸಿಎಂ ಸ್ಥಾನದಿಂದ ಅವರನ್ನು ಬದಲಿಸುವ ಪ್ರಶ್ನೆಯೇ ಇಲ್ಲ ಎಂಬ ಒಂದು ಮಾತು ಯಾಕೆ ಮೋದಿಯಿಂದ ಬರಲಿಲ್ಲ?

ಇನ್ನೆರಡು ತಿಂಗಳಲ್ಲಿ ಆದಿತ್ಯನಾಥ್ ರಾಜಕೀಯ ಭವಿಷ್ಯ ಮುಗಿಸಲಾಗುತ್ತದೆ ಎಂಬ ಕೇಜ್ರಿವಾಲ್ ಹೇಳಿಕೆಯನ್ನು ಮೋದಿ ಏಕೆ ಖಂಡಿಸಿಲ್ಲ?

ಬಿಜೆಪಿಯ ಬೇರಾವ ನಾಯಕರೂ ಕೇಜ್ರಿವಾಲ್ ಹೇಳಿದ್ದು ಸುಳ್ಳು, ಆದಿತ್ಯನಾಥ್ ಅವರನ್ನು ಬದಲಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿಲ್ಲ ಯಾಕೆ ?

ಕಾಂಗ್ರೆಸ್ ಅಥವಾ ಎಎಪಿ ರೋಡ್ ಶೋಗಳಲ್ಲಿ ನಾಯಕನೊಬ್ಬನೇ ವಿಜೃಂಭಿಸದೆ ಅಕ್ಕಪಕ್ಕ ಇರುವವರೂ ಸಮಾನವಾಗಿ ಕಾಣಿಸುತ್ತಾರೆ.

ಆದರೆ ಮೋದಿ ರೋಡ್ ಶೋನಲ್ಲಿ ಮೋದಿ ಮಾತ್ರ ವಿಜೃಂಭಿಸುತ್ತಾರೆ, ಪಕ್ಕದಲ್ಲಿ ಆದಿತ್ಯನಾಥ್ ಇದ್ದರೂ ನದರಿಗೆ ಬೀಳದ ಹಾಗೆ ಮೋದಿ ವಿಜೃಂಭಣೆ ಇರುತ್ತದೆ.

ಈ ವಿಜೃಂಭಣೆಯೇ ಮೋದಿ ಪಕ್ಷದಲ್ಲಿನ ಇತರ ನಾಯಕರನ್ನು ಕಡೆಗಣಿಸುವುದರ ಸ್ಪಷ್ಟ ನಿದರ್ಶನವಾಗಿದೆ ಮತ್ತು ಅದು ಯುಪಿಯಲ್ಲಿಯೂ ನಡೆಯುತ್ತಿದೆ.

ಆದಿತ್ಯನಾಥ್ ವಿರುದ್ಧ ಹೇಳಿಕೆ ನಿಡುವ ಬಿಜೆಪಿಯದ್ದೇ ನಾಯಕರು ಯಾವುದೋ ಬಲ ಮತ್ತು ಸೂಚನೆಯಿಲ್ಲದೆ ಹಾಗೆ ಮಾತನಾಡುವುದು ಸಾಧ್ಯವಿಲ್ಲ ಎಂಬುದು ಯಾರಿಗಾದರೂ ಹೊಳೆಯುತ್ತದೆ.

ಹಾಗಾದರೆ ಆದಿತ್ಯನಾಥ್ ವಿಚಾರವಾಗಿ ಕೇಜ್ರಿವಾಲ್ ನುಡಿದಿರುವ ಭವಿಷ್ಯ ನಿಜವಾಗುವ ದಿನಗಳು ದೂರವಿಲ್ಲವೇ?

ಕಾದು ನೋಡಬೇಕಿದೆ. ಉತ್ತರ ಸಿಗಲು ಬಹುಶಃ ಹೆಚ್ಚು ದಿನಗಳಾಗಲಿಕ್ಕಿಲ್ಲ.

share
ಎನ್. ಕೇಶವ್
ಎನ್. ಕೇಶವ್
Next Story
X