Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ದೇಶಾದ್ಯಂತ ಮುಸ್ಲಿಮರ ವಿರುದ್ಧದ...

ದೇಶಾದ್ಯಂತ ಮುಸ್ಲಿಮರ ವಿರುದ್ಧದ ಹಿಂಸಾಚಾರದ ಬಗ್ಗೆ ಕಿವುಡಾಗಿರುವ ಬಿಜೆಪಿಗೆ ಕೇರಳದಲ್ಲಿ ಆ ಸಮುದಾಯದ ನಂಬಿಕೆ ಗಳಿಸಲು ಈಗ ಸಾಧ್ಯವೇ?

ಪಿ.ಎಚ್. ಅರುಣ್ಪಿ.ಎಚ್. ಅರುಣ್9 Nov 2025 10:02 AM IST
share
ದೇಶಾದ್ಯಂತ ಮುಸ್ಲಿಮರ ವಿರುದ್ಧದ ಹಿಂಸಾಚಾರದ ಬಗ್ಗೆ ಕಿವುಡಾಗಿರುವ ಬಿಜೆಪಿಗೆ ಕೇರಳದಲ್ಲಿ ಆ ಸಮುದಾಯದ ನಂಬಿಕೆ ಗಳಿಸಲು ಈಗ ಸಾಧ್ಯವೇ?

ಕೇರಳದಲ್ಲಿ ಮುಸ್ಲಿಮರ ವಿಶ್ವಾಸ ಗಳಿಸಲು ಬಿಜೆಪಿ ಹೊರಡುವಾಗ ಉತ್ತರ ಭಾರತದಲ್ಲಿ ಮುಸ್ಲಿಮರ ವಿರುದ್ಧದ ರಾಜಕೀಯದಿಂದಲೇ ಮತ ಹಾಗೂ ಅಧಿಕಾರ ಗಳಿಸುತ್ತಿರುವ ಬಿಜೆಪಿ ನಾಯಕರು ತಮ್ಮ ಬೆಂಬಲಿಗರಿಗೆ, ಕಾರ್ಯಕರ್ತರಿಗೆ ಏನಂತ ಉತ್ತರಿಸಬೇಕು?

‘‘ನಮಗೆ ಮುಸ್ಲಿಮರ ಮತ ಬೇಡ’’ ಎಂದು ಘೋಷಿಸಿಯೇ ಎಂಎಲ್‌ಎ, ಎಂಪಿಗಳಾಗಿರುವ ಉತ್ತರದ ಅಥವಾ ಕರ್ನಾಟಕದ ಬಿಜೆಪಿ ನಾಯಕರು ಈಗ ಏನು ಹೇಳಬೇಕು?

ಬಿಜೆಪಿಯ ನಿಜವಾದ ಸಿದ್ಧಾಂತವೇನು?

ಅದು ಬಿಜೆಪಿ ನಾಯಕ, ಮುಸ್ಲಿಮ್ ದ್ವೇಷಿ ಪಿ.ಸಿ. ಜಾರ್ಜ್ ಪ್ರಚಾರ ಮಾಡುತ್ತಿರುವುದೋ ಅಥವಾ ಈಗ ಬಿಜೆಪಿ ನಾಯಕ ಡಾ. ಅಬ್ದುಲ್ ಸಲಾಂ ಮಾತನಾಡುತ್ತಿರುವುದೋ?

ಎಲ್ಲ ಕಡೆ ಆಯಿತು, ಬಿಜೆಪಿ ಈಗ ಕೇರಳದಲ್ಲಿ ಹೊಸ ಆಟ ಶುರುಮಾಡಿದೆ.

ಎಲ್‌ಡಿಎಫ್ ಮತ್ತು ಯುಡಿಎಫ್ ಪ್ರಾಬಲ್ಯ ಹೊಂದಿರುವ ಮತ್ತು ರಾಜಕೀಯವಾಗಿ ಪ್ರಬಲವಾದ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ಜನಸಂಖ್ಯೆಯನ್ನು ಹೊಂದಿರುವ ರಾಜ್ಯದಲ್ಲಿ ಶುರುವಾಗಿರುವ ಹೊಸ ಆಟ ಇದು.

ಮಾಜಿ ಕೇಂದ್ರ ಸಚಿವ ಮತ್ತು ಪಕ್ಷದ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಉಸ್ತುವಾರಿಯಲ್ಲಿ ಬಿಜೆಪಿ ಈಗ ಮುಸ್ಲಿಮ್ ಔಟ್‌ರೀಚ್ ಪ್ರೋಗ್ರಾಂ ಅನ್ನು ಘೋಷಿಸಿದೆ.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ. ಅಬ್ದುಲ್ ಸಲಾಂ ನೇತೃತ್ವದಲ್ಲಿ, ಕೇರಳದ ಪ್ರತಿಯೊಂದು ಮುಸ್ಲಿಮ್ ಮನೆಗೆ ಭೇಟಿ ನೀಡುವುದು ಇದರ ಉದ್ದೇಶ.

ಆದರೆ ಇದು ಮತಗಳಿಗಾಗಿ ಅಲ್ಲ , ಅವರಲ್ಲಿ ವಿಶ್ವಾಸ ಮೂಡಿಸುವ ಮಾತನ್ನು ಬಿಜೆಪಿ ಆಡುತ್ತಿದೆ. ಹೊಸ ವಿಕಸಿತ್ ಕೇರಳದ ಕಥೆಯನ್ನು ಅದು ಹೇಳತೊಡಗಿದೆ.

ಸಮಾಜದ ಎಲ್ಲಾ ವರ್ಗಗಳ ವಿಶ್ವಾಸವನ್ನು ಗಳಿಸುವ ಈ ಕಥೆ ಎಷ್ಟು ಪ್ರಾಮಾಣಿಕ ಎನ್ನುವುದು ಪ್ರಶ್ನೆ.

ಇದು ಎಲ್ಲರನ್ನೂ ಒಳಗೊಳ್ಳುವ ರಾಜಕೀಯ ಸಂಕೇತವಾಗಿರುವುದಕ್ಕಿಂತ ಹೆಚ್ಚಾಗಿ, ಅದರ ಬೇರೆಯದೇ ಅಜೆಂಡಾದ ಬಗ್ಗೆ ಸುಳಿವು ನೀಡುತ್ತಿದೆ. ಮತ್ತದನ್ನು ಸ್ವತಃ ಬಿಜೆಪಿಯೇ ಬಹಿರಂಗವಾಗಿ ಒಪ್ಪಿಕೊಳ್ಳುವಂತಿದೆ.

ಬತ್ತಳಿಕೆಯಲ್ಲಿನ ಎಲ್ಲ ಅಸ್ತ್ರಗಳೂ ಖಾಲಿಯಾದ ಬಳಿಕ ಅದು ಈ ಹಾದಿ ಹಿಡಿದಿರುವ ಹಾಗೆ ಕಾಣುತ್ತಿದೆ.

ಅದರ ಈ ಯೋಜನೆಯೇ ಸ್ವತಃ ವಿರೋಧಾಭಾಸಗಳಿಂದ ತುಂಬಿದೆ.

2025ರಲ್ಲಿ ಬಿಜೆಪಿ ಮುಸ್ಲಿಮರ ಮನೆ ಬಾಗಿಲುಗಳನ್ನು ಏಕೆ ತಟ್ಟುತ್ತಿದೆ?

ಕೇರಳದಲ್ಲಿ ಅದು ವಿಫಲವಾಗುತ್ತ ಬಂದಿರುವುದನ್ನು ನೋಡುವಾಗ, ಇದು ಆ ರಾಜ್ಯದಲ್ಲಿ ಬಿಜೆಪಿಯ ಕಟ್ಟ ಕಡೆಯ ಆಯ್ಕೆ ಎಂಬುದು ಸ್ಪಷ್ಟವಾಗುತ್ತದೆ.

1980ರ ದಶಕದಿಂದ 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಏರುವವರೆಗೆ ಕೇರಳದಲ್ಲಿ ಬಿಜೆಪಿ ಆಟವೇನೂ ನಡೆಯುತ್ತಿರಲಿಲ್ಲ. ಅದು ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಾ ಎರಡೂ ರಂಗಗಳ ಭ್ರಷ್ಟಾಚಾರವನ್ನು ಖಂಡಿಸುತ್ತಿತ್ತೇ ಹೊರತು, ತನ್ನ ಕೋಮುವಾದಿ ಮುಖವನ್ನು ತೋರಿಸಿಕೊಂಡಿರಲಿಲ್ಲ.

ಆದರೆ ಆ ಸಭ್ಯತೆ ಪೂರ್ತಿ ವಿಫಲವಾಯಿತು ಮತ್ತು ಅದು ಹೊರಗಿನ ಪಕ್ಷವಾಗಿ ಉಳಿದು, ಶೇ. 5-6 ಮತ ಪಾಲನ್ನು ದಾಟುವುದಕ್ಕೂ ಹೆಣಗಾಡಿತು.

2014ರ ನಂತರದ ಮೋದಿ ಎಫೆಕ್ಟ್ ಮತ್ತು ಈಳವ ಸಮುದಾಯದ ಬಿಡಿಜೆಎಸ್ ಜೊತೆಗಿನ ಮೈತ್ರಿ ಬಳಿಕ ಬಿಜೆಪಿ ಚಿಗುರಿಕೊಂಡಿತು. ಅದರ ಮತ ಪಾಲು ಎರಡಂಕೆಗಳಿಗೆ ಏರಿತು. ಆದರೆ ಅದು ಕೂಡ ಒಂದು ಹಂತಕ್ಕಷ್ಟೇ ಸೀಮಿತವಾಯಿತು.

ಆ ಹೊತ್ತಿಗೆ ಅದು ಹಿಂದೂ ಮತಗಳ ಒಂದು ಭಾಗವನ್ನು ಒಗ್ಗೂಡಿಸಿತ್ತು.

ಆದರೆ ಅಲ್ಪಸಂಖ್ಯಾತರೇ ಜನಸಂಖ್ಯೆಯ ಸುಮಾರು ಅರ್ಧದಷ್ಟಿರುವ ಕೇರಳದಲ್ಲಿ ತನ್ನ ಆಟ ನಡೆಸಲು ಆ ಹಿಂದೂ ಮತದಾರರ ಸಂಖ್ಯೆ ಅದಕ್ಕೆ ಸಾಕಾಗುವುದಿಲ್ಲ.

ಇದಾದ ನಂತರ ಅದು ಒಂದೆಡೆ ತನ್ನ ಬಲವರ್ಧನೆ ಮಾಡಿಕೊಳ್ಳುತ್ತಲೇ ಇನ್ನೊಂದೆಡೆ ವಿಭಜನೆಯ ರಾಜಕಾರಣವನ್ನು ಶುರುಮಾಡಿತ್ತು.

ಮೊದಲು ಶಬರಿಮಲೆ ವಿವಾದದ ದೊಡ್ಡ ಅವಕಾಶ ಅದಕ್ಕೆ ಸಿಕ್ಕಿತು. ಎಲ್‌ಡಿಎಫ್ ಸರಕಾರದ ನಿಲುವಿನ ವಿರುದ್ಧ ಹಿಂದೂ ಮತಬ್ಯಾಂಕ್ ಅನ್ನು ಒಗ್ಗೂಡಿಸುವ ಅಜೆಂಡಾದೊಂದಿಗೆ ಬಿಜೆಪಿ ನಿಂತುಬಿಟ್ಟಿತು.

ಈ ತಂತ್ರ ಅದರ ನೆಲೆಯನ್ನು ಬಲಪಡಿಸಿದರೂ, ರಾಜ್ಯದ ಅಲ್ಪಸಂಖ್ಯಾತರ ಆತಂಕಗಳನ್ನು ಇನ್ನಷ್ಟು ಹೆಚ್ಚಿಸಿತು.

ಅದಾದ ಬಳಿಕ ಸಾಮಾಜಿಕ ಬಿರುಕು ಮೂಡಿಸುವ ಪ್ರಯತ್ನದಲ್ಲಿ ತೊಡಗಿತು.

ಕೆ. ಸುರೇಂದ್ರನ್ ಅಧ್ಯಕ್ಷತೆಯಲ್ಲಿ ಅದು ‘ಲವ್ ಜಿಹಾದ್’ ನಿರೂಪಣೆಯನ್ನು ಜೋರಾಗಿ ಪ್ರಚಾರ ಮಾಡಿತು.

ಅದು ಸ್ಪಷ್ಟ ರಾಜಕೀಯ ತಂತ್ರವಾಗಿತ್ತು. ಕ್ರಿಶ್ಚಿಯನ್ ಮತ್ತು ಮುಸ್ಲಿಮ್ ಸಮುದಾಯಗಳ ನಡುವೆ ಒಡಕು ಮೂಡಿಸುವುದು ಅದರ ಮುಖ್ಯ ಗುರಿಯಾಗಿತ್ತು.

ಅವೆರಡೂ ಸಾಂಪ್ರದಾಯಿಕವಾಗಿ ಯುಡಿಎಫ್‌ನ ಬೆನ್ನಿಗೆ ನಿಂತಿವೆ. ಯುಡಿಎಫ್‌ನಿಂದ ಕ್ರಿಶ್ಚಿಯನ್ ಮತಗಳನ್ನು ಬೇರ್ಪಡಿಸಿ ತನ್ನತ್ತ ಸೆಳೆಯುವುದು, ಯುಡಿಎಫ್ ಅನ್ನೇ ಒಡೆಯುವುದು ಅದರ ಅಜೆಂಡಾ ಆಗಿತ್ತು.

ಆದರೆ ಆ ತಂತ್ರವೂ ವಿಫಲವಾಯಿತು.

ಕ್ರಿಶ್ಚಿಯನ್ ಮತ್ತು ಮುಸ್ಲಿಮ್ ಎರಡೂ ಅಲ್ಪಸಂಖ್ಯಾತರ ಮತಗಳು ವಿಭಜನೆಯಾಗಲಿಲ್ಲ. ಮಾತ್ರವಲ್ಲ, ಯುಡಿಎಫ್ ಜೊತೆ ಇನ್ನಷ್ಟು ಬಲವಾಗಿ ನಿಂತವು.

ಈಗ ಕೇರಳದ ಬಿಜೆಪಿ ನಾಯಕತ್ವಕ್ಕೆ, ಎರಡು ಪ್ರಮುಖ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಕನಿಷ್ಠ ಒಂದರ ಬೆಂಬಲವಿಲ್ಲದೆ ಕೇರಳದಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬುದು ಅರ್ಥವಾಗಿದೆ.

ಕಟ್ಟಾ ಹಿಂದೂ ಬಲವರ್ಧನೆ ತಂತ್ರ ಬದಿಗೆ ಸರಿದಿದೆ.

ಕ್ರಿಶ್ಚಿಯನ್ನರನ್ನು ತಲುಪುವ ಅದರ ಆಟವು ಮುಗಿದಿದೆ.

ಎಲ್ಲ ಆಟಗಳನ್ನೂ ಸೋತ ಬಳಿಕ ಈಗ ಅದು ಮುಸ್ಲಿಮರ ಕಡೆಗೆ ನೋಡತೊಡಗಿದೆ.

ಆದರೆ ಅದರ ಈ ತಂತ್ರ ಹಲವು ಅನುಮಾನಗಳನ್ನೇ ಹುಟ್ಟುಹಾಕಿದೆ.

ಮೊದಲನೆಯದಾಗಿ, ಈ ಅಭಿಯಾನದ ನೇತೃತ್ವ ವಹಿಸಿರುವವರು ಕೇರಳಕ್ಕೆ ರಾಜಕೀಯವಾಗಿ ಹೊರಗಿನವರಾದ ರಾಜೀವ್ ಚಂದ್ರಶೇಖರ್.

ಅವರು ಕಾರ್ಪೊರೇಟ್ ರಾಜಕೀಯ ಶೈಲಿಯ ರಾಜಕಾರಣಿ ಮತ್ತು ಅವರ ನೇತೃತ್ವದ ಈ ಯೋಜನೆ ನಿಜವಾದ ಸಾಮಾಜಿಕ ಆಶಯಕ್ಕಿಂತ ಹೆಚ್ಚಾಗಿ ಬಿಜೆಪಿಯ ಮತ್ತೊಂದು ಪ್ರಚಾರದಂತೆ ಕಾಣುತ್ತದೆ.

ರಾಜ್ಯದ ಬಿಜೆಪಿ ನಾಯಕರಾದ ಡಾ. ಅಬ್ದುಲ್ ಸಲಾಂ ಮತ್ತು ಎ.ಪಿ. ಅಬ್ದುಲ್ಲಕುಟ್ಟಿ ಅವರನ್ನು ಮುಂಚೂಣಿಯಲ್ಲಿ ಇರಿಸಲಾಗುತ್ತಿದೆ.

ಅವರಿಬ್ಬರ ವೈಯಕ್ತಿಕ ಅರ್ಹತೆ ಏನೇ ಇದ್ದರೂ, ಅಸಾಧ್ಯ ಹೊರೆಯನ್ನು ಅವರ ಮೇಲೆ ಹೊರಿಸಲಾಗಿದೆ.

ಯಾವುದು ಬಿಜೆಪಿಯ ಪಾಲಿಗೆ ಪ್ರತಿಕೂಲ ಎಂದಾಗಿದೆಯೊ ಆ ಸಮುದಾಯ ಅದೇ ಬಿಜೆಪಿಯನ್ನು ಒಪ್ಪಿಕೊಳ್ಳುವಂತೆ ಮಾಡುವ ಕೆಲಸವನ್ನು ಅವರ ಮೇಲೆ ಹೇರಲಾಗಿದೆ.

ಮುಸ್ಲಿಮ್ ಸಮುದಾಯ ನಂಬದೇ ಇರುವ ಪಕ್ಷದ ಏಜೆಂಟ್‌ಗಳನ್ನಾಗಿ ಅವರನ್ನು ನೋಡಲಾಗುತ್ತಿದೆ.

ಆದರೆ ಮುಸ್ಲಿಮ್ ಸಮುದಾಯ ಡಾ. ಸಲಾಂ ಅವರ ಮಾತುಗಳನ್ನು ಗೌರವದಿಂದಲೇ ಕೇಳಿಸಿಕೊಳ್ಳಬಹುದಾದರೂ, ಅದೇ ಬಿಜೆಪಿಯ ಕೆ. ಸುರೇಂದ್ರನ್ ಇಡೀ ಸಮುದಾಯದ ಬಗ್ಗೆ ಮಾಡಿದ ಅಪಪ್ರಚಾರವನ್ನು ಮರೆಯಲು ಸಾಧ್ಯವಿದೆಯೇ?

ಹಾಗೆ ಮುಸ್ಲಿಮ್ ಸಮುದಾಯವನ್ನು ಅವಮಾನಿಸಿದ ಮೇಲೆ ಅವರು ಕ್ಷಮೆ ಯಾಚಿಸಿದ್ದಾರೆಯೇ ಅಥವಾ ಪಕ್ಷ ಅವರನ್ನು ಹೊರಹಾಕಿದೆಯೇ?

ಪ್ರಚೋದನಕಾರಿ ಮುಸ್ಲಿಮ್ ವಿರೋಧಿ ಮಾತಾಡುತ್ತಲೇ ರಾಜಕೀಯವಾಗಿ ಬದುಕುಳಿದಿರುವ ಪಿ.ಸಿ. ಜಾರ್ಜ್‌ರನ್ನು ಬರಮಾಡಿಕೊಂಡಿರುವ ಬಿಜೆಪಿಯ ಮೇಲೆ ಮುಸ್ಲಿಮ್ ಸಮುದಾಯಕ್ಕೆ ಹೇಗೆ ನಂಬಿಕೆ ಹುಟ್ಟಲು ಸಾಧ್ಯ?

ಕೇರಳ ಮುಸ್ಲಿಮ್ ಸಮುದಾಯ ರಾಜಕೀಯವಾಗಿ ಜಾಗೃತವಾಗಿರುವಂಥದ್ದು. ದೇಶದಲ್ಲಿ ಬಿಜೆಪಿ ಏನು ಮಾಡುತ್ತಿದೆ ಎನ್ನುವುದು ಅದಕ್ಕೆ ತಿಳಿಯದೇ ಇರುವುದೇನೂ ಅಲ್ಲ.

ಬಿಜೆಪಿ ಹೇಗೆ ಉತ್ತರ ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿಯುತ್ತಿದೆ, ಹೇಗೆ ಬುಲ್ಡೋಜರ್ ಅನ್ನು ಅವರ ಮೇಲೆ ಬಳಸುತ್ತಿದೆ ಮತ್ತು ಮುಸ್ಲಿಮರ ಮೇಲಿನ ಹಿಂಸಾಚಾರದ ಬಗ್ಗೆ ಹೇಗೆ ಬಿಜೆಪಿ ಕಿವುಡಾಗಿದೆ ಎನ್ನುವುದೆಲ್ಲವೂ ಅದಕ್ಕೆ ಚೆನ್ನಾಗಿ ಗೊತ್ತಿದೆ.

ಹೀಗಿರುವಾಗ, ಕೇರಳ ಬಿಜೆಪಿ ಮಲಪ್ಪುರಂನಲ್ಲಿ ಮುಸ್ಲಿಮ್ ಸಮುದಾಯದ ನಂಬಿಕೆ ಗಳಿಸಲು ಹೇಗೆ ಸಾಧ್ಯ?

ಬಿಜೆಪಿಯ ಸಂಪೂರ್ಣ ಪ್ರಚಾರ ‘ವಿಕಸಿತ್ ಕೇರಳಂ’ ಘೋಷಣೆಯ ಸುತ್ತ ಇದೆ.

ಇದೆಲ್ಲ ನಾಟಕ ಅಭಿವೃದ್ಧಿಯನ್ನೇ ಕಾಣದ ಉತ್ತರದ ಯಾವುದಾದರೂ ರಾಜ್ಯಗಳಲ್ಲಿ ನಡೆಯಬಹುದೇನೋ ಆದರೆ, ಕೇರಳದಲ್ಲಿ ಇದು ಬಹುತೇಕ ಹಾಸ್ಯಾಸ್ಪದವಾಗಿದೆ, ನಿಷ್ಪ್ರಯೋಜಕವಾಗಿದೆ.

ಕೇರಳಕ್ಕಿಂತ ಉತ್ತಮ ಆರೋಗ್ಯ ರಕ್ಷಣೆ, ಶಿಕ್ಷಣ ಅಥವಾ ಸಾಮಾಜಿಕ ಭದ್ರತೆ ಹೊಂದಿರುವ ಒಂದೇ ಒಂದು ಬಿಜೆಪಿ ಆಡಳಿತದ ರಾಜ್ಯವನ್ನು ಅದು ತೋರಿಸಲು ಸಾಧ್ಯವೇ?

ಹಾಗಿರುವಾಗ, ಅದು ಕೇರಳಿಗರಿಗೆ ಯಾವ ಅಭಿವೃದ್ಧಿ ಮಾದರಿಯನ್ನು ನೀಡಬಲ್ಲದು?

ಹೀಗಾಗಿ, ಇದು ವಿಫಲವಾಗುವುದು ಪಕ್ಕಾ ಎಂದಾದರೆ, ಅದರ ಪರಿಣಾಮಗಳೇನು?

ಎಲ್‌ಡಿಎಫ್ ಮತ್ತು ಯುಡಿಎಫ್‌ಗೆ, ಈ ನಡೆ ರಾಜಕೀಯವಾಗಿ ಲಾಭವಾಗಬಹುದು. ಅವೆರಡೂ ಬಿಜೆಪಿಯ ಈ ಡಬಲ್ ಸ್ಟ್ಯಾಂಡರ್ಡ್ ಆಟವನ್ನೇ ಜನರ ಮುಂದೆ ಇಡಬಹುದು.

ಯುಡಿಎಫ್ ಮತ್ತು ಅದರ ಪ್ರಮುಖ ಪಾಲುದಾರ ಐಯುಎಂಎಲ್‌ಗೆ ಇದು ಸಮರ್ಥನೆಗೆ ಒಂದು ಅಸ್ತ್ರವಾಗಲಿದೆ. ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ರಕ್ಷಿಸುವ ಸಾಮರ್ಥ್ಯವಿರುವ ಏಕೈಕ ಸ್ಥಿರ, ಜಾತ್ಯತೀತ ಶಕ್ತಿ ತಾನೆಂಬುದನ್ನು ಅದು ಈಗ ಸ್ಪಷ್ಟವಾಗಿ ಹೇಳಿಕೊಳ್ಳುತ್ತದೆ.

ಆ ಕಡೆ ಎಲ್‌ಡಿಎಫ್ ಕೂಡ ಪ್ರಯೋಜನ ಪಡೆಯುತ್ತದೆ.

ಯುಡಿಎಫ್ ಆಗಲಿ, ಎಲ್‌ಡಿಎಫ್ ಆಗಲಿ ಮುಸ್ಲಿಮರನ್ನು ಓಲೈಸಲು ರಾಜಕಾರಣ ಮಾಡುತ್ತಿದ್ದಾರೆ, ಹಿಂದೂಗಳನ್ನು ಕಡೆಗಣಿಸುತ್ತಿದ್ದಾರೆ ಎಂಬ ಬಿಜೆಪಿಯ ವಾದವೇ ಈಗ ನಿರರ್ಥಕವಾಗುತ್ತದೆ.

ಯಾಕೆಂದರೆ ಈಗ ಬಿಜೆಪಿ ನಾಯಕರೇ ಮುಸ್ಲಿಮರ ಮನೆಬಾಗಿಲಿಗೆ ಹೋಗಿ ನಿಲ್ಲುವಾಗ ಕಾಂಗ್ರೆಸನ್ನಾಗಲಿ, ಎಡಪಕ್ಷವನ್ನಾಗಲಿ ಓಲೈಕೆ ಬಗ್ಗೆ ಬಿಜೆಪಿ ಏನೆಂದು ದೂರುತ್ತದೆ?

ಬಿಜೆಪಿ ಅವಕಾಶವಾದಿ ಮತ್ತು ತತ್ವರಹಿತ ಪಕ್ಷವಾಗಿದ್ದು, ಅಧಿಕಾರ ಪಡೆಯಲು ಯಾರಿಗಾದರೂ ಏನು ಬೇಕಾದರೂ ಹೇಳಲು ಸಿದ್ಧವಾಗಿದೆ ಎಂಬುದನ್ನು ಈಗ ಎಡರಂಗ ಪ್ರತಿಪಾದಿಸಲಿದೆ.

ಬಿಜೆಪಿಯ ಈ ಆಟಕ್ಕೆ ವಿರುದ್ಧವಾಗಿ ಎಲ್‌ಡಿಎಫ್ ತನ್ನ ಸೈದ್ಧಾಂತಿಕ ಶುದ್ಧತೆಯ ಬಗ್ಗೆ ಜನರಿಗೆ ಇನ್ನಷ್ಟು ಮನವರಿಕೆ ಮಾಡಿಕೊಡಲು ಇದು ಅವಕಾಶ ಒದಗಿಸಿದೆ.

ಹೀಗಾಗಿ ಬಿಜೆಪಿಯ ಈ ಯೋಜನೆಯಿಂದ ಕೊನೆಗೆ ಬಿಜೆಪಿಗೇ ಅಪಾಯ ಎದುರಾಗಲಿದೆ.

ನೆಲೆ ಕೊಟ್ಟವರಿಗೇ ದ್ರೋಹ ಮಾಡುವ ಬಿಜೆಪಿಯ ನೀತಿ ಇಲ್ಲಿಯೂ ಕಡೆಗೆ ಪ್ರಯೋಗವಾಗಲಿದೆ ಎಂಬ ಅನುಮಾನ ಇಲ್ಲದೇ ಇಲ್ಲ.

ಬಿಜೆಪಿಯ ಶೇ. 10-15 ಮತ ಪಾಲು ವಿಕಸಿತ್ ಕೇರಳಂ ಮೂಲಕ ಬಂದದ್ದಲ್ಲ. ಅದು ಮೋದಿ ಎಫೆಕ್ಟ್, ಲವ್ ಜಿಹಾದ್ ನಿರೂಪಣೆ ಮತ್ತು ಶಬರಿಮಲೆ ಆಂದೋಲನದ ಸಮಯದಲ್ಲಿನ ಅದರ ಕೋಮುವಾದಿ ಆಟದಿಂದ ಬಂದದ್ದು ಮತ್ತು ಅವರೆಲ್ಲ ಬಿಜೆಪಿಯ ಅಲ್ಪಸಂಖ್ಯಾತ ವಿರೋಧಿ ಮತ್ತು ಕಮ್ಯುನಿಸ್ಟ್ ವಿರೋಧಿ ನಿಲುವುಗಳಿಂದಾಗಿಯೇ ಆಕರ್ಷಿತರಾದ ಮತದಾರರು.

ಕೇರಳದ ಕ್ರೈಸ್ತರ ಒಂದು ವರ್ಗ ಬಿಜೆಪಿ ಕಡೆ ಒಲವು ಬೆಳೆಸಿಕೊಳ್ಳಲೂ ಮುಸ್ಲಿಮರ ರಾಜಕೀಯ ಪ್ರಾಬಲ್ಯದ ವಿರುದ್ಧದ ಬಿಜೆಪಿಯ ನೀತಿಯೇ ಕಾರಣವಾಗಿತ್ತು.

ಈಗ ಅದೇ ಬಿಜೆಪಿ ಮುಸ್ಲಿಮರ ಮನೆ ಬಾಗಿಲಿಗೆ ಹೋಗಿ ನಿಂತರೆ ಬಿಜೆಪಿ ಕಡೆ ವಾಲಿದ್ದ ಆ ಕ್ರೈಸ್ತರು ಏನು ಮಾಡುತ್ತಾರೆ?

ಈ ಹಿಂದೆ ಮುಸ್ಲಿಮರಿಂದ ಬೆದರಿಕೆ ವಿರುದ್ಧ ಜಾಗರೂಕ ರಾಗಿರಲು ಕೇಳಿಕೊಂಡಿದ್ದವರು ಈಗ ಅದೇ ಸಮುದಾಯದೊಂದಿಗೆ ವಿಶ್ವಾಸ ಬೆಳೆಸಲು ಹೊರಟಿರುವುದೇ ಹಾಸ್ಯಾಸ್ಪದ.

ರಾಜೀವ್ ಚಂದ್ರಶೇಖರ್ ಈಗಾಗಲೇ ಕ್ರಿಶ್ಚಿಯನ್‌ರನ್ನು ಒಲಿಸಿಕೊಳ್ಳಲು ಹೋಗಿ ಸಂಘ ಪರಿವಾರದ ವಿರೋಧ ಎದುರಿಸಿದ್ದಾರೆ. ಈಗ ಮುಸ್ಲಿಮರ ವಿಶ್ವಾಸ ಗಳಿಸುವ ಅವರ ಆಟಕ್ಕೂ ಇನ್ನಷ್ಟು ವಿರೋಧ ಖಂಡಿತ ಬರುತ್ತದೆ.

ಕೇರಳದಲ್ಲಿ ಮುಸ್ಲಿಮರ ವಿಶ್ವಾಸ ಗಳಿಸಲು ಬಿಜೆಪಿ ಹೊರಡುವಾಗ ಉತ್ತರ ಭಾರತದಲ್ಲಿ ಮುಸ್ಲಿಮರ ವಿರುದ್ಧದ ರಾಜಕೀಯದಿಂದಲೇ ಮತ ಹಾಗೂ ಅಧಿಕಾರ ಗಳಿಸುತ್ತಿರುವ ಬಿಜೆಪಿ ನಾಯಕರು ತಮ್ಮ ಬೆಂಬಲಿಗರಿಗೆ, ಕಾರ್ಯಕರ್ತರಿಗೆ ಏನಂತ ಉತ್ತರಿಸಬೇಕು?

‘‘ನಮಗೆ ಮುಸ್ಲಿಮರ ಮತ ಬೇಡ’’ ಎಂದು ಘೋಷಿಸಿಯೇ ಎಂಎಲ್‌ಎ, ಎಂಪಿಗಳಾಗಿರುವ ಉತ್ತರದ ಅಥವಾ ಕರ್ನಾಟಕದ ಬಿಜೆಪಿ ನಾಯಕರು ಈಗ ಏನು ಹೇಳಬೇಕು?

ಬಿಜೆಪಿಯ ನಿಜವಾದ ಸಿದ್ಧಾಂತವೇನು?

ಅದು ಬಿಜೆಪಿ ನಾಯಕ, ಮುಸ್ಲಿಮ್ ದ್ವೇಷಿ ಪಿ.ಸಿ. ಜಾರ್ಜ್ ಪ್ರಚಾರ ಮಾಡುತ್ತಿರುವುದೋ ಅಥವಾ ಈಗ ಬಿಜೆಪಿ ನಾಯಕ ಡಾ. ಅಬ್ದುಲ್ ಸಲಾಂ ಮಾತನಾಡುತ್ತಿರುವುದೋ?

ಬಿಜೆಪಿಯ ಮಹಾ ನಾಯಕ ಪ್ರಧಾನಿ ಮೋದಿಯೇ ಗಲಭೆಕೋರರನ್ನು ಅವರ ಉಡುಪುಗಳಿಂದ ಗುರುತಿಸಬಹುದು, ಹಿಂದೂಗಳ ಸವಲತ್ತುಗಳನ್ನು ಹೆಚ್ಚು ಮಕ್ಕಳಿರುವವರಿಗೆ ಕೊಡಲಾಗುತ್ತದೆ, ಅವರು ನುಸುಳುಕೋರರು, ಮೊಗಲ್ ಮನಸ್ಥಿತಿ ಎಂದೆಲ್ಲ ಮಾತಾಡುವಾಗ ಕೇರಳದ ಸ್ಥಳೀಯ ಬಿಜೆಪಿ ನಾಯಕರು ಮುಸ್ಲಿಮರ ಮನೆಗೆ ಹೋಗಿ ಹೇಳುವುದಾದರೂ ಏನು?

ಇದೇ ಕೇರಳದಲ್ಲಿ ಬಿಜೆಪಿ ಪಾಲಿನ ನಿಜವಾದ ಸಮಸ್ಯೆಯಾಗಿದೆ.

share
ಪಿ.ಎಚ್. ಅರುಣ್
ಪಿ.ಎಚ್. ಅರುಣ್
Next Story
X