Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಪ್ರಧಾನಿ ಮೋದಿ ಸ್ವಪಕ್ಷದಲ್ಲಿಯೇ...

ಪ್ರಧಾನಿ ಮೋದಿ ಸ್ವಪಕ್ಷದಲ್ಲಿಯೇ ದುರ್ಬಲರಾಗುತ್ತಿದ್ದಾರೆಯೇ?

ಪ್ರವೀಣ್ ಎನ್.ಪ್ರವೀಣ್ ಎನ್.7 Aug 2025 12:14 PM IST
share
ಪ್ರಧಾನಿ ಮೋದಿ ಸ್ವಪಕ್ಷದಲ್ಲಿಯೇ ದುರ್ಬಲರಾಗುತ್ತಿದ್ದಾರೆಯೇ?
ಮೋದಿ ಈಗ ತಮ್ಮದೇ ಪಕ್ಷದ ಅಧ್ಯಕ್ಷರನ್ನು ಹಾಗೂ ಉಪರಾಷ್ಟ್ರಪತಿ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಹೆಣಗಾಡುವ ಸ್ಥಿತಿಗೆ ಮುಟ್ಟಿದ್ದಾರೆಯೆ?

ಅದು 2014. ಆಗ ಮೋದಿ ರಾಜಕೀಯ ಚಂಡಮಾರುತದಂತೆ ರಾಷ್ಟ್ರೀಯ ವೇದಿಕೆಗೆ ಬಂದರು. ಹೊಸ ಭಾರತದ ಭರವಸೆಯನ್ನೂ ತಮ್ಮ ಜೊತೆ ತಂದವರಂತೆ ಕಾಣಿಸಿಕೊಂಡರು.

ಆನಂತರ 2019 ಬಂತು. ಆ ಹೊತ್ತಿಗೆ ಅವರು ವಿರೋಧ ಪಕ್ಷಗಳನ್ನು ಬಹುತೇಕ ನಿರ್ನಾಮ ಮಾಡಿದ್ದರು. ಮೋದಿ ಬಿಟ್ಟರೆ ಭಾರತಕ್ಕೆ ಬೇರೆ ಯಾರೂ ಇಲ್ಲ ಎಂಬಂತಹ ಇಮೇಜ್ ಸೃಷ್ಟಿಸಿಕೊಂಡಿದ್ದರು.

ಆದರೆ, 2024ರಲ್ಲಿ ಚಿತ್ರ ಸಂಪೂರ್ಣ ಬದಲಾಗಿತ್ತು. ಮೋದಿ ಅವರಿಗೆ ಸರಳ ಬಹುಮತವೂ ಸಿಗಲಿಲ್ಲ. ಕೊನೆಗೆ ಇತರ ಪಕ್ಷಗಳ ಆಸರೆ ಹಿಡಿದು ಅವರು ಮೂರನೇ ಅವಧಿಗೆ ಆಯ್ಕೆಯಾಗಿದ್ದರು.

ಈಗ 2025. ಮೋದಿ ಈಗಲೂ ಅವತ್ತಿನದೇ ಹಿಡಿತ ಹೊಂದಿದ್ದಾರೆಯೆ?

ಅನೇಕರು ಕೇಳಲು ಧೈರ್ಯ ಮಾಡಿದ ಪ್ರಶ್ನೆ ಈಗ ಜೋರಾಗಿಯೇ ಕೇಳಿಸುತ್ತಿರುವಂತಿದೆ.

14 ತಿಂಗಳಿಗೂ ಹೆಚ್ಚು ಸಮಯವಾಯಿತು. ದೇಶದ ಶಕ್ತಿಶಾಲಿ ಪಕ್ಷವೆನ್ನಲಾಗುವ ಬಿಜೆಪಿಗೆ ತನ್ನ ಹೊಸ ಅಧ್ಯಕ್ಷರನ್ನು ಆರಿಸಿಕೊಳ್ಳಲು ಆಗಿಯೇ ಇಲ್ಲ. ಏಕೆ ಹೀಗೆ ಅದು ವಿಫಲವಾಗಿದೆ?

ಏಕೆಂದರೆ, ಒಂದು ಕಾಲದಲ್ಲಿ ತಮ್ಮದೇ ಹಿಡಿತ ಹೊಂದಿದ್ದ ಮೋದಿ ಮತ್ತು ಅಮಿತ್ ಶಾ ಈಗ ಭಯಭೀತರಾದಂತೆ ಕಾಣುತ್ತಿದ್ದಾರೆ. ಸಮರ್ಥ ನಿಷ್ಠಾವಂತರ ಭಯ ಇಬ್ಬರನ್ನೂ ಕಾಡುತ್ತಿದೆ.

ಸಂಘಟನಾತ್ಮಕ ಶಿಸ್ತಿನ ಬಗ್ಗೆ ಹೆಮ್ಮೆಪಡುವ ಪಕ್ಷಕ್ಕೆ ಜೆ.ಪಿ. ನಡ್ಡಾ ಅವರನ್ನು ಬದಲಿಸಲು ಆಗುತ್ತಿಲ್ಲ. ಇದೊಂದು ರೀತಿಯಲ್ಲಿ ಅದು ಎದುರಿಸುತ್ತಿರುವ ಬಿಕ್ಕಟ್ಟನ್ನು ಸೂಚಿಸುತ್ತದೆ.

ಆ ಇಬ್ಬರೂ ನಾಯಕರ ಪಾಲಿನ ಹೌದಪ್ಪ ಆಗಿದ್ದ ನಡ್ಡಾ ಅವರನ್ನು ಬದಲಿಸುವುದು ಸಹ ಅಸಾಧ್ಯವೆಂದು ತೋರುತ್ತದೆ.

ಅಂದರೆ, ತಮ್ಮ ನಿಯಂತ್ರಣಕ್ಕೆ ಸಿಗದ, ಸ್ವತಂತ್ರ ಆಲೋಚನೆ ಅಥವಾ ಮಹತ್ವಾಕಾಂಕ್ಷೆಯ ಯಾರನ್ನೂ ಮುಂದೆ ತಂದು ಅಪಾಯ ಮೈಮೇಲೆ ಕೆಡವಿಕೊಳ್ಳಲು ಅವರಿಬ್ಬರೂ ತಯಾರಿಲ್ಲ.

ಹಿಂದಿನ ಬಿಜೆಪಿಯೊಳಗೆ ಹೀಗಿರಲಿಲ್ಲ. ಅಲ್ಲಿ ನಾಯಕತ್ವ ಚರ್ಚೆ, ಮಾತುಕತೆ ಮತ್ತು ವಿಭಿನ್ನ ದೃಷ್ಟಿಕೋನಗಳಿಗೆ ಅವಕಾಶ ಕೊಡುತ್ತಿತ್ತು.

ಈಗ ವರಿಷ್ಠರಿಗೆ ನಿಷ್ಠೆಯೇ ಏಕೈಕ ಮಾನದಂಡ.

ವಿಪರ್ಯಾಸವೆಂದರೆ, ನಿಷ್ಠೆಯ ಬಗ್ಗೆ ಮೋದಿಯವರ ಈ ಗೀಳು ಪಕ್ಷದೊಳಗೆ ಎಲ್ಲವನ್ನೂ ಹಾಳುಗೆಡವುತ್ತಿದೆ.

ಇದೇ ಮೋದಿಯವರ ಅತ್ಯಂತ ನಿಷ್ಠಾವಂತ ಎಂಬ ಕಾರಣದಿಂದಲೇ ಜಗದೀಪ್ ಧನ್ಕರ್ ಆಯ್ಕೆಯಾಗಿದ್ದರು.

ಕಡೆಗೆ, ಧನ್ಕರ್ ಕೂಡ ಇವರಿಗೆ, ಇವರ ಸುತ್ತಲಿನವರಿಗೆ ಮಣಿದೂ ಮಣಿದೂ ಸಾಕಾಗಿ ಎಲ್ಲೋ ಸಣ್ಣಗೆ ಗುರ್ರೆನ್ನಲು ಶುರುಮಾಡಿದಾಗ, ನಿಷ್ಠೆಯ ಕಥೆ ಮುಗಿದಿತ್ತು. ಅವರಿಗೆ ಬಾಗಿಲು ತೋರಿಸಲಾಯಿತು.

ತಮ್ಮದೇ ಸ್ವಾಯತ್ತೆ ತೋರಿಸಲು ಹೊರಟವರಿಗೆ ಬಾಗಿಲು ತೋರಿಸಲಾಗುತ್ತದೆ. ಅವರು ಉಪರಾಷ್ಟ್ರಪತಿ, ರಾಜ್ಯಪಾಲರು, ಸ್ಪೀಕರ್‌ಗಳು ಯಾರೇ ಆದರೂ ಸರಿ. ಅವರೇನಿದ್ದರೂ ಆಲಂಕಾರಿಕ ಪಾತ್ರಕ್ಕೆ ಸೀಮಿತರಾಗಿ ಇರಬೇಕೆಂದು ಬಯಸಲಾಗುತ್ತದೆ.

ಮೋದಿಯವರಿಗೆ ಹೆಚ್ಚು ಕಾಣಿಸಿಕೊಳ್ಳದ, ಮೌನವಾಗಿರುವ ಮತ್ತು ಆ ಮೂಲಕ ಡಿಗ್ನಿಫೈಡ್ ಎನ್ನಿಸಿಕೊಳ್ಳುವ ರಾಮನಾಥ್ ಕೋವಿಂದ್ ಅವರಂಥವರೆಂದರೆ ಅಚ್ಚುಮೆಚ್ಚು.

ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಸಹ ಮೋದಿ ಬಿಡಲಿಲ್ಲ. ರಾಮ ಮಂದಿರ ಉದ್ಘಾಟನೆ ಹೊತ್ತಲ್ಲಿ ಮೋದಿ ಭಾಗವತ್ ಅವರನ್ನು ಹೇಗೆ ಬದಿಗೆ ಕೂರಿಸಿದ್ದರು ಎನ್ನುವುದನ್ನು ಗಮನಿಸಬಹುದು. ಅಂದರೆ ಸಂಘ ಕೂಡ ತನಗಿಂತ ಮೇಲಲ್ಲ ಎಂದು ಅವರು ಆ ಮೂಲಕ ತೋರಿಸಿದ್ದರು.

ನರೇಂದ್ರ ಮೋದಿಯ ನಿದ್ದೆಗೆಡಿಸುವ ಒಂದು ಹೆಸರೆಂದರೆ, ಅದು ಸಂಜಯ್ ಜೋಶಿ. ಗುಜರಾತ್‌ನಲ್ಲಿ ಒಮ್ಮೆ ಮೋದಿಗೆ ಮಾರ್ಗದರ್ಶನ ನೀಡಿದ ಆದರೆ ನಂತರ ಪರಿವಾರದೊಳಗೇ ಅವರ ಕಟು ವಿಮರ್ಶಕರಾದ ಆರೆಸ್ಸೆಸ್ ಸಂಘಟಕ ಸಂಜಯ್ ಜೋಶಿ. ವರ್ಷಗಳ ಕಾಲ ಅವರು ರಾಜಕೀಯ ವನವಾಸದಲ್ಲಿ ಉಳಿಯುವಂತೆ ನೋಡಿಕೊಳ್ಳುವಲ್ಲಿ ಮೋದಿ ಗೆದ್ದಿದ್ದರು. ಆದರೆ ಈಗ, 2025ರಲ್ಲಿ ಜೋಶಿ ಮತ್ತೆ ಮುನ್ನೆಲೆಗೆ ಬರುತ್ತಿದ್ದಾರೆ.

ಈ ಬೆಳವಣಿಗೆಯೆಲ್ಲ ಏನನ್ನು ಸೂಚಿಸುತ್ತಿದೆ? ಮತ್ತು ಇದು ಏಕೆ ಮಹತ್ವದ್ದಾಗಿದೆ?

ಏಕೆಂದರೆ ಸಂಘ ಪರಿವಾರದ ಮೇಲಿನ ಮೋದಿ ಹಿಡಿತ ತಪ್ಪುತ್ತಿದೆ ಎಂಬುದನ್ನು ಇದು ತೋರಿಸುತ್ತಿದೆ. ಅವರು ಇನ್ನೂ ಪಕ್ಷದ ಮುಖವಾಗಿರಬಹುದು, ಆದರೆ ಮೊದಲಿನಂತೆ ಅನಿವಾರ್ಯ ಶಕ್ತಿಯಾಗಿ ಉಳಿದಿಲ್ಲ.

ಮೋದಿ ಮೂರನೇ ಅವಧಿಯಂತೂ ಇಬ್ಬಿಬ್ಬರ ಆಸರೆಯ ಮೇಲೆ ನಡೆದಿದೆ. ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಅವರಿಂದ ಮಾತ್ರ ಮೋದಿ ಮೂರನೇ ಅವಧಿ ಅಸ್ತಿತ್ವದಲ್ಲಿದೆ.

ವಿಪರ್ಯಾಸವೆಂದರೆ, ಇಬ್ಬರೂ ಒಂದು ಕಾಲದಲ್ಲಿ ಮೋದಿಯ ಕೇಂದ್ರೀಕೃತ ಆಡಳಿತ ಶೈಲಿಯ ಕಟು ವಿಮರ್ಶಕರೇ ಆಗಿದ್ದರು. ಇಂದು ಅವರಿಬ್ಬರೂ ಮೋದಿಗೆ ಆಸರೆಯಾಗಿದ್ದಾರೆ ಮತ್ತು ಅದೇ ವೇಳೆ ಅಷ್ಟೇ ದೊಡ್ಡ ತಲೆನೋವು ಕೂಡ ಅವರೇ ಆಗಿದ್ದಾರೆ.

ಬಿಹಾರ ಚುನಾವಣೆಗೆ ಮುಂಚಿತವಾಗಿ ನಿತೀಶ್‌ರನ್ನು ಮೋದಿ ಸಂತೋಷವಾಗಿಡ ಬೇಕಾಗಿದೆ. ಚಂದ್ರಬಾಬು ನಾಯ್ಡು ಕೂಡ ತಮ್ಮ ಬೇಡಿಕೆಗಳ ದೀರ್ಘ ಪಟ್ಟಿಯನ್ನು ಮುಂದಿಟ್ಟಿದ್ಧಾರೆ. ಅಂತೂ ಅವರಿಬ್ಬರೂ ಒಂದು ಕಾಲದ ಬಲಿಷ್ಠ ನಾಯಕನನ್ನು ಈಗ ತಮಗೆ ಬೇಕಾದಂತೆ ಆಡಿಸಿ ನೋಡುತ್ತಿದ್ದಾರೆ.

ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ಅವರನ್ನು ಸಹ ಈಗ ಸಂಭಾವ್ಯ ಉಪರಾಷ್ಟ್ರಪತಿ ಎನ್ನಲಾಗುತ್ತಿದೆ. ಇದು ಅರ್ಹತೆಯ ಕಾರಣದಿಂದಾಗಿ ಅಲ್ಲ. ಇದರ ಹಿಂದಿರುವುದು ನಿತೀಶ್ ರಾಜಕೀಯ. ಮೋದಿ ಸರಕಾರ ಯಾವ ಮಟ್ಟಿಗೆ ಚೌಕಾಸಿಗೆ ಇಳಿಯಬೇಕಾಗಿ ಬಂದಿದೆ ಎಂಬುದಕ್ಕೆ ಇದು ಕೂಡ ಒಂದು ನಿದರ್ಶನ. ಇದು ದೊಡ್ಡ ವಿರೋಧಾಭಾಸ.

ಬಲಿಷ್ಠ ನಾಯಕ ಎಂದು ಬಿಂಬಿಸಿಕೊಂಡಿದ್ದ, ಹಾಗೆ ತನ್ನ ಇಮೇಜ್ ನಿರ್ಮಿಸಿಕೊಂಡಿದ್ದ ವ್ಯಕ್ತಿ ಈಗ ಹೆಚ್ಚು ಹೆಚ್ಚು ಅಸುರಕ್ಷತೆ ಅನುಭವಿಸಬೇಕಾಗಿದೆ. ಮತ್ತಿದು ವಿರೋಧ ಪಕ್ಷಗಳು ಬಲಿಷ್ಠವಾಗಿರುವುದರಿಂದಾಗಿ ಅಲ್ಲ. ಅವರೇ ಕಟ್ಟಿಕೊಂಡಿದ್ದ ವ್ಯವಸ್ಥೆಯ ಕೋಟೆ ದುರ್ಬಲವಾಗಿರುವುದರಿಂದಾಗಿ ಆಗಿದೆ.

ತಮ್ಮದೇ ನಿಷ್ಠಾವಂತರನ್ನೂ ಈಗ ನಂಬಲಾರದೆ, ಅವರಿಂದಲೂ ಅಪಾಯ ಇರಬಹುದು ಎಂದು ಅನುಮಾನಿಸುವ ಸ್ಥಿತಿ ಬಂದೊದಗಿದೆ.

ಉದಾಹರಣೆಗೆ ನಿತಿನ್ ಗಡ್ಕರಿ.

ಅವರು ಪಕ್ಷಾತೀತವಾಗಿ ಮೆಚ್ಚುಗೆ ಪಡೆದ ಯಶಸ್ವಿ ಸಚಿವ. ಆದರೆ ಚಿಯರ್‌ಲೀಡರ್ ಥರ ವರ್ತಿಸಲು ನಿರಾಕರಿಸಿದ್ದಕ್ಕಾಗಿ ಮೋದಿ ಆಪ್ತವಲಯದಿಂದ ಹೊರಗುಳಿಯಬೇಕಾಯಿತು ಎನ್ನಲಾಗುತ್ತಿದೆ.

ಮೋದಿ ಸಂಸತ್ ಪ್ರವೇಶಿಸಿದಾಗ ಗಡ್ಕರಿ ಕುಳಿತೇ ಇದ್ದುದನ್ನು ಕೂಡ ಅವರು ತನಗಾದ ಇರಿಸುಮುರಿಸು ಎಂಬಂತೆ ಭಾವಿಸಿದ್ದರು ಎಂದು ಒಳಗಿನವರೇ ಹೇಳುತ್ತಾರೆ.

ಅಂದರೆ, ಮೋದಿ ಒಳಗೆ ಬಂದಾಗ ಪ್ರತಿಯೊಬ್ಬ ಬಿಜೆಪಿ ಸಂಸದರು ಎದ್ದು ನಿಂತು ಗೌರವಿಸಬೇಕು ಎಂದು ನಿರೀಕ್ಷಿಸಲಾಗುತ್ತದೆ. ಹಾಗೆ ಮಾಡದವರನ್ನು ನಿಧಾನವಾಗಿ ಬದಿಗೆ ಸರಿಸಲಾಗುತ್ತಿತ್ತು.

ಅಂತರ್‌ರಾಷ್ಟ್ರೀಯ ಮಟ್ಟದಲ್ಲಿಯೂ, ಮೋದಿ ಪ್ರಭಾವ ಕುಗ್ಗತೊಡಗಿದೆ. ಈಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ರಾಜತಾಂತ್ರಿಕ ಮುಜುಗರವನ್ನು ಅವರು ಅನುಭವಿಸಬೇಕಾಗಿದೆ.

ಮೋದಿಯವರ ಆಪ್ತ ಮಿತ್ರ ಎನ್ನಲಾಗಿದ್ದ ಡೊನಾಲ್ಡ್ ಟ್ರಂಪ್, ಮೋದಿ ಸ್ನೇಹದ ಬಗ್ಗೆ ಹೇಳುತ್ತಲೇ, ತಾನು ಪಾಕಿಸ್ತಾನವನ್ನು ಪ್ರೀತಿಸುವುದಾಗಿಯೂ ಬಹಿರಂಗವಾಗಿಯೇ ಹೇಳಿದರು.

ದೇಶದೊಳಗೂ ಮತ್ತು ಹೊರಗೂ ಹಾಗೆ ಹೇಳುವ ಯಾರನ್ನೇ ಆದರೂ ಮೋದಿ ಸರಕಾರ ಭಾರತ ವಿರೋಧಿ ಎಂದು ಆರೋಪಿಸಲಾಗುತ್ತಿದೆ. ಆದರೆ ಟ್ರಂಪ್‌ಗೇಕೆ ಹಾಗೆನ್ನಲಾಗುತ್ತಿಲ್ಲ?

ಸಾಲದ್ದಕ್ಕೆ ಭಾರತದ ಮೇಲೆ ಟ್ರಂಪ್ ತೆರಿಗೆ ಅಸ್ತ್ರವನ್ನೂ ಪ್ರಯೋಗಿಸುತ್ತಿದ್ದಾರೆ. ಈಗಾಗಲೇ ಶೇ. 25 ಸುಂಕ ಹಾಕಿರುವ ಅವರು ಮತ್ತೆ ಹೆಚ್ಚಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಮೋದಿಯ ಕ್ಲೋಸ್ ಫ್ರೆಂಡ್ ಎಂದು ಹೇಳುತ್ತಲೇ ಟ್ರಂಪ್ ಭಾರತಕ್ಕೆ ಮತ್ತೆ ಮತ್ತೆ ಅವಮಾನ ಮಾಡಿದ್ದಾರೆ. ಅನ್ಯಾಯವನ್ನೂ ಮಾಡಿದ್ದಾರೆ. ಭಯೋತ್ಪಾದನೆ ಬೆಳೆಸುವ ಪಾಕಿಸ್ತಾನಕ್ಕೆ ವಿಶೇಷ ಗೌರವ ಕೊಟ್ಟು ಗಾಯದ ಮೇಲೆ ಬರೆ ಎಳೆಯುತ್ತಿದ್ದಾರೆ.

ಒಂದೆಡೆ, ದೇಶದಲ್ಲಿ ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟ ಮತ್ತೆ ಒಟ್ಟುಗೂಡಿದೆ. ಉಪರಾಷ್ಟ್ರಪತಿ ಚುನಾವಣೆಗೆ ಜೋರಾಗಿಯೇ ತಯಾರಿ ನಡೆಸುತ್ತಿದೆ.

ಇನ್ನೊಂದೆಡೆ, ವಿದೇಶದಲ್ಲಿ ಯಾರಿಂದ ಒಂದು ಕಾಲದಲ್ಲಿ ಮೋದಿ ಗೌರವಕ್ಕೆ ಪಾತ್ರರಾಗಲು ಬಯಸಿದ್ದರೋ ಅದೇ ನಾಯಕರೇ ಮೋದಿಯನ್ನು ಮತ್ತೆ ಮತ್ತೆ ಅವಮಾನಿಸುತ್ತಿದ್ದಾರೆ. ಇದರೊಂದಿಗೆ ಮೋದಿಯವರ ವಿಶ್ವಗುರು ಮಿಥ್ ಕೂಡ ಒಡೆದುಹೋದಂತಾಗಿದೆ.

ಈಗ, ಭಾರತದ ಮುಂದಿನ ಉಪರಾಷ್ಟ್ರಪತಿ ಯಾರು?

ಮೇಲ್ನೋಟಕ್ಕೆ ಎನ್‌ಡಿಎ ಬಳಿ ಸಂಖ್ಯಾಬಲವಿದೆ. ಆದರೆ ನಿಜವಾದ ನಾಟಕ ಒಳಗೆ ನಡೆಯುವುದಿದೆ. ಮೋದಿ ಒಬ್ಬ ಮೌನಿಯಾಗಿರಬಲ್ಲ ನಿಷ್ಠಾವಂತನನ್ನು ಆಯ್ಕೆ ಮಾಡುವಲ್ಲಿ ಯಶಸ್ವಿಯಾಗುತ್ತಾರೆಯೇ? ಅವರು ಮಿತ್ರಪಕ್ಷಗಳ ಬೆಂಬಲ ಪಡೆಯುವುದು ಸಾಧ್ಯವಾಗುತ್ತದೆಯೆ? ಆರೆಸ್ಸೆಸ್ ತನ್ನದೇ ಆದ ಹೆಸರನ್ನು ಮುಂದಿಡುತ್ತದೆಯೇ?

ಇದು ನಿರ್ಧಾರವಾಗುವುದರೊಂದಿಗೆ, ಮೋದಿ ಈಗಲೂ ಪಕ್ಷದ ಮೇಲೆ ನಿಯಂತ್ರಣ ಹೊಂದಿದ್ದಾರೆಯೇ ಅಥವಾ ಇಲ್ಲವೆ ಎಂಬುದು ಬಹಿರಂಗಗೊಳ್ಳಲಿದೆ.

ಕಳೆದೊಂದು ದಶಕದ ಕಾಲ ಮೋದಿ ಅಸಾಧಾರಣ ಅಧಿಕಾರ ಹೊಂದಿರುವ ಮೂಲಕ ಸರಕಾರವನ್ನು ನಡೆಸಿದರು.

ಇತ್ತೀಚಿನ ಅವಧಿಯಲ್ಲಿ ಅವರ ಹಾಗೆ ತಮ್ಮ ಟೀಕಾಕಾರರನ್ನು, ತಮ್ಮ ಪ್ರತಿಸ್ಪರ್ಧಿಗಳನ್ನು ಮೌನವಾಗಿಸಿದ, ಮೂಲೆಗುಂಪಾಗಿಸಿದ ಮತ್ತೊಬ್ಬ ನಾಯಕ ಇರಲಿಲ್ಲ. ಆದರೆ 2025ರಲ್ಲಿ ಆ ಕೇಂದ್ರೀಕರಣವೇ ಅವರ ಪಾಲಿನ ಮಗ್ಗುಲ ಮುಳ್ಳಾಗಿ ಪರಿಣಮಿಸಿದೆ.

ಪಕ್ಷಕ್ಕೆ ಅಧ್ಯಕ್ಷರ ಆಯ್ಕೆ ಸಾಧ್ಯವಾಗಿಲ್ಲ. ಉಪರಾಷ್ಟ್ರಪತಿ ಅಭ್ಯರ್ಥಿಯನ್ನು ಆರಿಸಲಾರದ ಸ್ಥಿತಿ. ವಿಶ್ವಾಸಾರ್ಹ ಉತ್ತರಾಧಿಕಾರಿಯೂ ಇಲ್ಲ. ಸಮರ್ಥ ನಿಷ್ಠಾವಂತರಿಗೂ ಜಾಗವಿಲ್ಲ. ಮೋದಿ ಬಳಿ ಈಗ ಅವರು ನಂಬಬಹುದಾದ ಜನರೇ ಇಲ್ಲ.

ಭಾರತೀಯ ರಾಜಕೀಯದಲ್ಲಿ ಚಕ್ರವರ್ತಿಗೆ ಉತ್ತರಾಧಿಕಾರಿಗಳಿಲ್ಲದಿದ್ದಾಗ ಆಯುಧಗಳು ಝಳಪಿಸುವುದು ನಡೆಯುತ್ತದೆ. ಅದು ಮೊದಲಿಗೆ ಸದ್ದಿಲ್ಲದ ರೀತಿಯಲ್ಲಿರುತ್ತದೆ ಮತ್ತು ಬಳಿಕ ಎಲ್ಲವೂ ಒಂದೇ ಬಾರಿಗೆ ಎದುರಾಗುತ್ತವೆ.

ಇದು ಮೋದಿ ಮಿಥ್‌ನ ಕೊನೆಯಾಗುತ್ತಿ ರುವುದರ ಸೂಚನೆಯೆ? ಅಥವಾ ಅವರು ಇದನ್ನು ದಾಟಬಲ್ಲರೆ?

ಉತ್ತರಕ್ಕಾಗಿ ಕಾಯಬೇಕಾಗಿದೆ.

share
ಪ್ರವೀಣ್ ಎನ್.
ಪ್ರವೀಣ್ ಎನ್.
Next Story
X