Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ರಾಹುಲ್ ಗಾಂಧಿಯವರ ‘ವೋಟರ್ ಅಧಿಕಾರ್...

ರಾಹುಲ್ ಗಾಂಧಿಯವರ ‘ವೋಟರ್ ಅಧಿಕಾರ್ ಯಾತ್ರೆ’ ಚುನಾವಣಾ ಆಯೋಗದ ವಿಶ್ವಾಸಾರ್ಹತೆಗೆ ಅತಿದೊಡ್ಡ ಸವಾಲು?

ವಿನಯ್ ಕೆ.ವಿನಯ್ ಕೆ.19 Aug 2025 9:55 AM IST
share
ರಾಹುಲ್ ಗಾಂಧಿಯವರ ‘ವೋಟರ್ ಅಧಿಕಾರ್ ಯಾತ್ರೆ’ ಚುನಾವಣಾ ಆಯೋಗದ ವಿಶ್ವಾಸಾರ್ಹತೆಗೆ ಅತಿದೊಡ್ಡ ಸವಾಲು?

ಸಾಸಾರಾಂ ಸಭೆಯಲ್ಲಿ, ಜೀವಂತವಾಗಿರುವ ಆದರೆ ಮತದಾರರ ಪಟ್ಟಿಯಿಂದ ಹೆಸರು ತೆಗೆಯಲಾಗಿರುವ ಮತದಾರರನ್ನು ಮುಂದಕ್ಕೆ ತರಲಾಯಿತು. ‘ನನ್ನ ಮತ ಕಳವಾಗಿದೆ’ ಎಂಬ ಬರಹವನ್ನು ಆ ಮತದಾರರ ಟಿ-ಶರ್ಟ್‌ಗಳ ಮೇಲೆ ಬರೆಯಲಾಗಿದೆ.

ಚುನಾವಣಾ ಆಯೋಗ ಅವರಿಂದಲೂ ಈಗ ಅಫಿಡವಿಟ್ ಕೇಳುತ್ತದೆಯೆ? ಮತದಾರರ ಪಟ್ಟಿಯಲ್ಲಿ ಇಷ್ಟೊಂದು ರಿಗ್ಗಿಂಗ್ ಏಕೆ ಇತ್ತು? ಅಕ್ರಮಗಳ ಬಗ್ಗೆ ಇಷ್ಟೊಂದು ದೂರುಗಳು ಏಕೆ ಬಂದವು?

ರಾಹುಲ್ ಗಾಂಧಿಯವರ ‘ವೋಟರ್ ಅಧಿಕಾರ್ ಯಾತ್ರೆ’ ಬಿಹಾರದ ಸಾಸಾರಾಂನಿಂದ ಶುರುವಾಗಿದೆ.

ಈ ನಡುವೆ ಚುನಾವಣಾ ಆಯೋಗ ಪತ್ರಿಕಾಗೋಷ್ಠಿ ನಡೆಸಿದೆ. ಪತ್ರಿಕಾಗೋಷ್ಟಿಯ ಬದಲು ಆಯೋಗ, ಆಯೋಗದ ಬಗ್ಗೆ ಜನರು ಏನು ಹೇಳುತ್ತಿದ್ದಾರೆ ಎಂಬುದರ ಕುರಿತು ಹೆಚ್ಚು ಕಾಳಜಿ ವಹಿಸಬೇಕಿತ್ತು. ಆಯೋಗದ ವಿರುದ್ಧ ಯಾವ ರೀತಿಯ ಆರೋಪಗಳನ್ನು ಮಾಡಲಾಗುತ್ತಿವೆ, ಏಕೆ ಮಾಡಲಾಗುತ್ತಿವೆ ಎಂಬುದನ್ನು ಯೋಚಿಸುವುದು ಮುಖ್ಯವಾಗಿತ್ತು. ಆಯೋಗ ಪ್ರತಿಯೊಂದು ಪ್ರಶ್ನೆಯನ್ನು ಅಪಹಾಸ್ಯ ಮಾಡುತ್ತಿದೆ.

ಲೋಕಸಭೆ ಚುನಾವಣೆ ವೇಳೆ ಆಯೋಗ ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸಿರಲಿಲ್ಲ. ಈಗ ವಿರೋಧ ಪಕ್ಷಗಳು ಅದೇ ಆಯೋಗದ ವಿರುದ್ಧ ಜನರ ಬಳಿಗೆ ಹೋಗಿರುವಾಗ, ಆಯೋಗ ಪತ್ರಿಕಾಗೋಷ್ಠಿ ನಡೆಸಿದೆ.

ಸಾಸಾರಾಂ ಸಭೆಯಲ್ಲಿ, ಜೀವಂತವಾಗಿರುವ ಆದರೆ ಮತದಾರರ ಪಟ್ಟಿಯಿಂದ ಹೆಸರು ತೆಗೆಯಲಾಗಿರುವ ಮತದಾರರನ್ನು ಮುಂದಕ್ಕೆ ತರಲಾಯಿತು. ‘ನನ್ನ ಮತ ಕಳವಾಗಿದೆ’ ಎಂಬ ಬರಹವನ್ನು ಆ ಮತದಾರರ ಟಿ-ಶರ್ಟ್‌ಗಳ ಮೇಲೆ ಬರೆಯಲಾಗಿದೆ.

ಚುನಾವಣಾ ಆಯೋಗ ಅವರಿಂದಲೂ ಈಗ ಅಫಿಡವಿಟ್ ಕೇಳುತ್ತದೆಯೆ? ಮತದಾರರ ಪಟ್ಟಿಯಲ್ಲಿ ಇಷ್ಟೊಂದು ರಿಗ್ಗಿಂಗ್ ಏಕೆ ಇತ್ತು? ಅಕ್ರಮಗಳ ಬಗ್ಗೆ ಇಷ್ಟೊಂದು ದೂರುಗಳು ಏಕೆ ಬಂದವು?

ಹರ್ಯಾಣ ಚುನಾವಣೆ ಹೊತ್ತಿನಿಂದಲೇ ಆರೋಪಗಳು ಬರತೊಡಗಿದವು. ಮಹಾರಾಷ್ಟ್ರ ಮತ್ತು ದಿಲ್ಲಿ ಚುನಾವಣೆಗಳಲ್ಲಿಯೂ ಆರೋಪಗಳಿದ್ದವು. ಆ ಪ್ರಶ್ನೆಗಳಿಗೆ ಉತ್ತರಿಸಿ, ಜನರ ವಿಶ್ವಾಸ ಗಳಿಸುವ ಕೆಲಸವನ್ನು ಆಯೋಗ ಮಾಡಲೇ ಇಲ್ಲ.

ದೀರ್ಘಕಾಲದಿಂದ ಜನರು ನಂಬಿಕೊಂಡು ಬಂದಿದ್ದ ಚುನಾವಣಾ ಆಯೋಗದ ಬಗ್ಗೆ ಇಂದು ಅನೇಕರು ವಿಶ್ವಾಸ ಕಳೆದುಕೊಳ್ಳಲು ಕಾರಣವಾಗಿರುವುದು ಯಾಕೆ? ಆಯೋಗ ಇದರ ಬಗ್ಗೆ ಯೋಚಿಸಬೇಕೇ ಹೊರತು, ನೋಟಿಸ್ ಮತ್ತು ಎಫ್‌ಐಆರ್‌ಗಳ ಮೂಲಕ ಬಾಯಿ ಮುಚ್ಚಿಸಲು ಪ್ರಯತ್ನಿಸಬಾರದು.

ಸಾಸಾರಾಂ ಸಭೆಗೆ 77 ವರ್ಷದ ಲಾಲು ಪ್ರಸಾದ್ ಯಾದವ್ ಅನಾರೋಗ್ಯದ ಸ್ಥಿತಿಯಲ್ಲೂ ಬಂದಿದ್ದರು. 83ವರ್ಷದ ಮಲ್ಲಿಕಾರ್ಜುನ ಖರ್ಗೆ ಅಲ್ಲಿ ಉಗ್ರವಾಗಿ ಮಾತನಾಡಿದರು.

ಖರ್ಗೆ ಅವರಿಗಿಂತ ಮೊದಲು ರಾಹುಲ್ ಗಾಂಧಿ, ತೇಜಸ್ವಿ ಯಾದವ್, ದೀಪಂಕರ್ ಭಟ್ಟಾಚಾರ್ಯ, ಮುಕೇಶ್ ಸಾಹ್ನಿ ಮಾತನಾಡಿದರು. ಆಯೋಗದ ಬಗ್ಗೆ ವಿರೋಧ ಪಕ್ಷಗಳು ತಾಳ್ಮೆ ಕಳೆದುಕೊಂಡಿರುವಂತೆ ಕಾಣುತ್ತಿತ್ತು. ಕಳೆದ 11 ವರ್ಷಗಳಲ್ಲಿ ಆಯೋಗದ ಬಗ್ಗೆ ಪ್ರಕಟವಾದ ಸುದ್ದಿಗಳು, ಅದರ ವಿರುದ್ಧ ಮಾಡಲಾದ ಆರೋಪಗಳನ್ನು ನೆನಪಿಸಿಕೊಂಡರೆ, ವಿಪಕ್ಷಗಳ ಈ ಅಸಹನೆ ಅರ್ಥವಾಗುತ್ತದೆ.

ಖರ್ಗೆಯವರು, ‘‘ಚುನಾವಣಾ ಆಯೋಗ ಸರಕಾರದ ಏಜೆಂಟ್ ಆಗಿ ಮಾರ್ಪಟ್ಟಿದೆ’’ ಎಂದರು.

‘‘2023ರಲ್ಲಿ ಕಾನೂನನ್ನು ತರಲಾಯಿತು. ಅದರ ಪ್ರಕಾರ, ಚುನಾವಣಾ ಆಯೋಗದವರು ಯಾವುದೇ ತಪ್ಪು ಮಾಡಿದರೆ, ಅವರ ವಿರುದ್ಧ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. 2023ರಲ್ಲಿ ಆಯೋಗವನ್ನು ಹಾಗೆ ಬಲಪಡಿಸಿಕೊಳ್ಳುವ ಮೂಲಕ, 2024ರಲ್ಲಿ ಅಂತಹ ವಂಚನೆ, ದರೋಡೆ ಮತ್ತು ಕಳ್ಳತನ ಮಾಡುವ ಮೂಲಕ ಮತ ಪಡೆದುಕೊಂಡಿದ್ದಾರೆ ಮತ್ತು ಈ ಕಳ್ಳರನ್ನು ಓಡಿಸಬೇಕಾಗಿದೆ’’ ಎಂದು ಖರ್ಗೆ ಗುಡುಗಿದರು.

ಆಗ ಕಾನೂನು ಸಚಿವರಾಗಿದ್ದವರು ಅರ್ಜುನ್ ರಾಮ್ ಮೇಘವಾಲ್ ಎಂದು ಖರ್ಗೆ ನೆನಪಿಸಿದರು.

ಈ ಬದಲಾವಣೆಯ ನಂತರ, ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಿಸಲು ಸಾಧ್ಯವಾಗುತ್ತಿಲ್ಲ.

ಈ ನಿಬಂಧನೆ ಇಷ್ಟು ವರ್ಷಗಳ ಕಾಲ ಇರಲಿಲ್ಲ. 2024ರ ಚುನಾವಣೆಗೆ ಮೊದಲು ಇದನ್ನು ಏಕೆ ಮಾಡಲಾಯಿತು?

ಆಯೋಗ ಭಯವಿಲ್ಲದೆ ಕೆಲಸ ಮಾಡಲು ಇದನ್ನು ಮಾಡಲಾಗಿದೆ ಎಂದು ಸರಕಾರ ವಾದಿಸಿತು.

ಅಂದರೆ, ಆಯೋಗದಲ್ಲಿರುವವರು ಜನರ ಭಯದಿಂದ ಮುಕ್ತರಾಗಿದ್ದರು.

ಈ ಮೊದಲು ಚುನಾವಣಾ ಆಯುಕ್ತರ ನೇಮಕಾತಿ ಸಮಿತಿಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಇದ್ದರು. ಮೋದಿ ಸರಕಾರ ಕಾನೂನನ್ನು ಬದಲಾಯಿಸಿ, ಮುಖ್ಯ ನ್ಯಾಯಮೂರ್ತಿಗಳನ್ನು ಹೊರಗಿಟ್ಟಿತು ಮತ್ತು ಅವರ ಜಾಗದಲ್ಲಿ ಕ್ಯಾಬಿನೆಟ್ ಸಚಿವರನ್ನು ತರಲಾಯಿತು.

ರಾಹುಲ್ ಗಾಂಧಿ ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಗೆ ಆಕ್ಷೇಪಿಸಿ ತಮ್ಮ ಪತ್ರವನ್ನು ದೇಶದ ಮುಂದೆ ಇಟ್ಟರು.

ಹೀಗೆ ಕಳೆದ 11 ವರ್ಷಗಳಲ್ಲಿ ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ಸುದ್ದಿಗಳು, ದೂರುಗಳು ಮತ್ತು ಆರೋಪಗಳನ್ನು ಮನಸ್ಸಿನಲ್ಲಿಟ್ಟುಕೊಂಡರೆ, ಪ್ರತಿಪಕ್ಷಗಳು ಆಯೋಗದ ಬಗ್ಗೆ ಏಕೆ ತಾಳ್ಮೆ ಕಳೆದುಕೊಂಡವು ಎಂಬುದಕ್ಕೆ ಹಲವು ಉತ್ತರಗಳು ಸಿಗುತ್ತವೆ.

ಕರ್ನಾಟಕದ ಮಹದೇವಪುರದಲ್ಲಿ 1ಲಕ್ಷಕ್ಕೂ ಹೆಚ್ಚು ಮತಗಳನ್ನು ಕದಿಯಲಾಗಿದೆ ಎಂದು ಆಗಸ್ಟ್ 7ರಂದು ರಾಹುಲ್ ಗಾಂಧಿಯವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು. ಅದೇ ಸಂಜೆ ಆಯೋಗ ಅವರಿಂದ ಅಫಿಡವಿಟ್ ಕೇಳಿತು.

ಬಿಜೆಪಿಯ ಅನುರಾಗ್ ಠಾಕೂರ್ ಆಗಸ್ಟ್ 13ರಂದು ಪತ್ರಿಕಾಗೋಷ್ಠಿ ನಡೆಸಿ, ಐದು ಲೋಕಸಭೆ ಮತ್ತು ಒಂದು ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ರಾಹುಲ್ ಗಾಂಧಿ ಮಾಡಿದಂತೆಯೇ ಅದೇ ಆರೋಪಗಳನ್ನು ಮಾಡಿದರು. ಆದರೆ ಅನುರಾಗ್ ಠಾಕೂರ್ ಅವರಿಂದ ಆಯೋಗ ಅಫಿಡವಿಟ್ ಕೇಳಲಿಲ್ಲ. ಹೀಗೇಕೆ? ಆಯೋಗ ಈ ಪ್ರಶ್ನೆಗೆ ಉತ್ತರಿಸುವುದಿಲ್ಲ.

ಮಾಜಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಪತ್ರಿಕಾಗೋಷ್ಠಿ ನೆನಪಿಸಿಕೊಂಡರೆ, ಅವರು ವಿರೋಧ ಪಕ್ಷಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಹಗುರ ಧಾಟಿಯಲ್ಲಿ ಉತ್ತರಿಸುತ್ತಾರೆ. ಆಯೋಗ ಎಷ್ಟು ಪಕ್ಷಪಾತಿಯಾಗಿದೆ ಎಂಬುದು ಅದರಿಂದ ಅರ್ಥವಾಗುತ್ತದೆ.

ವಿರೋಧ ಪಕ್ಷದ ಆರೋಪಗಳನ್ನು ಅದು ಅಪಹಾಸ್ಯ ಮಾಡುತ್ತದೆ.

ಬಿಹಾರದ ಸಾಸಾರಾಂನಲ್ಲಿ ರಾಹುಲ್ ಗಾಂಧಿ ಇದೇ ರೀತಿಯ ವಿಷಯಗಳನ್ನು ಎತ್ತಿದರು.

‘‘ನಾವು ಒಂದೇ ಒಂದು ಮತವನ್ನು ಕಳೆದುಕೊಳ್ಳಲಿಲ್ಲ. ನಮ್ಮ ಮೈತ್ರಿಕೂಟ ಲೋಕಸಭೆಯಲ್ಲಿ ಪಡೆದಷ್ಟೇ ಮತಗಳನ್ನು ವಿಧಾನಸಭೆಯಲ್ಲಿಯೂ ಪಡೆಯಿತು. ಬಿಜೆಪಿ ಎಲ್ಲಾ ಹೊಸ ಮತದಾರರಿಂದ ಮತಗಳನ್ನು ಪಡೆದುಕೊಂಡಿತು ಮತ್ತು ಚುನಾವಣೆಯಲ್ಲಿ ಗೆದ್ದಿತು’’ ಎಂದು ರಾಹುಲ್ ಹೇಳಿದರು.

‘‘ವೀಡಿಯೊಗ್ರಫಿಯನ್ನು ತೋರಿಸಲು ನಾನು ಆಯೋಗವನ್ನು ಕೇಳಿದೆ. ಆಯೋಗ ನಿರಾಕರಿಸಿತು. ಅದರ ನಂತರ, ನಾವು ಕರ್ನಾಟಕದ ಒಂದು ಲೋಕಸಭೆ ಕ್ಷೇತ್ರದ ಒಂದು ವಿಧಾನಸಭೆ ಕ್ಷೇತ್ರದಲ್ಲಿ ತನಿಖೆ ಶುರು ಮಾಡಿದೆವು. ಒಂದು ವಿಧಾನಸಭೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಮತಗಳು ಕದಿಯುವ ಮೂಲಕ ಬಿಜೆಪಿ ಕರ್ನಾಟಕದಲ್ಲಿ ಲೋಕಸಭಾ ಸ್ಥಾನ ಗೆದ್ದಿದೆ ಎಂಬುದು ಗೊತ್ತಾಯಿತು’’ ಎಂದರು.

‘‘ಆಯೋಗ ನನ್ನಿಂದ ಅಫಿಡವಿಟ್ ಕೇಳಿತು ಮತ್ತು ಬೇರೆಯವರಿಂದ ಅಫಿಡವಿಟ್ ಕೇಳಲಿಲ್ಲ. ನಾನು ಹೇಳಿರುವುದು ಅವರದೇ ಡೇಟಾ. ಆದರೆ ಅವರು ನನ್ನಿಂದ ಅಫಿಡವಿಟ್ ಕೇಳುತ್ತಿದ್ದಾರೆ’’ ಎಂದು ರಾಹುಲ್ ಹೇಳಿದರು.

ಎಲ್ಲಾ ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗಲೇ, ವಿರೋಧ ಪಕ್ಷಗಳು ಚುನಾವಣಾ ಆಯೋಗದ ವಿರುದ್ಧ ಬೀದಿಗಿಳಿಯಲು ಕಾರಣವೇನು ಎಂಬುದು ತಿಳಿಯುತ್ತದೆ.

ಆಯೋಗ ಎಲ್ಲರನ್ನೂ ಸಮಾನವಾಗಿ ನಡೆಸಿಕೊಳ್ಳುತ್ತಿಲ್ಲ ಎಂಬ ವಿಷಯವನ್ನು ಹಲವು ಚುನಾವಣೆಗಳಿಂದಲೂ ಎತ್ತಲಾಗಿದೆ. ಅದು ಬಿಜೆಪಿಯ ಕಡೆಗೆ ಪಕ್ಷಪಾತ ತೋರುತ್ತಿದೆ ಮತ್ತು ವಿರೋಧ ಪಕ್ಷಗಳನ್ನು ನಿರ್ಲಕ್ಷಿಸುತ್ತಿದೆ.

ಚುನಾವಣೆಗಳಲ್ಲಿ ಎಲ್ಲಾ ಪಕ್ಷಗಳಿಗೆ ಸಮಾನ ಅವಕಾಶ ಒದಗಿಸುವುದು ಅದರ ಕೆಲಸ. ಆದರೆ, ಪ್ರತೀ ಬಾರಿಯೂ ವಿಪಕ್ಷಗಳ ಪಾಲಿಗೆ ಆಯೋಗದ ಬಾಗಿಲು ಮುಚ್ಚಿರುತ್ತದೆ.

ಈ ಚುನಾವಣೆಯನ್ನು ಕದಿಯಲು ನಾವು ಬಿಡುವುದಿಲ್ಲ ಮತ್ತು ಬಿಹಾರದ ಜನರು ಬಿಡುವುದಿಲ್ಲ ಎಂದು ಈಗ ವಿಪಕ್ಷ ನಾಯಕರು ಹೇಳುತ್ತಿದ್ದಾರೆ.

ಬಿಹಾರದಲ್ಲಿ ಎಸ್‌ಐಆರ್ ಸಮಯದಲ್ಲಿ ಹಲವು ದೂರುಗಳು ಬಂದವು, ಮಾಧ್ಯಮ ವರದಿಗಳು ಬಂದವು. ಆದರೆ, ಬಿಜೆಪಿ ಒಂದೇ ಒಂದು ದೂರು ದಾಖಲಿಸಿದೆಯೇ? ಬಿಹಾರ ಎಸ್‌ಐಆರ್‌ನಲ್ಲಿ ಬಿಜೆಪಿಗೆ ಯಾವುದೇ ಲೋಪವೂ ಕಾಣಲಿಲ್ಲವೆ? ಜನರಿಗೆ ಇದೆಲ್ಲ ಅರ್ಥವಾಗುವುದಿಲ್ಲ ಎಂದು ಬಿಜೆಪಿ ಭ್ರಮೆಯಲ್ಲಿದೆಯೆ? ಅಥವಾ ಬಿಜೆಪಿ ಇದರಲ್ಲಿ ಯಾವುದಾದರೂ ಲಾಭದ ನಿರೀಕ್ಷೆಯಲ್ಲಿದೆಯೆ?

65 ಲಕ್ಷ ಜನರ ಹೆಸರುಗಳನ್ನು ಅಳಿಸಲಾಗಿದೆ. ಅವರಲ್ಲಿ ಜೀವಂತವಾಗಿರುವ ಒಬ್ಬ ಮತದಾರನೂ ಬಿಜೆಪಿಗೆ ಕಾಣಿಸಲಿಲ್ಲವೆ?

ಮೋತಿಹಾರಿ ವಿಧಾನಸಭೆಯಲ್ಲಿ 80 ಸಾವಿರ ಮತದಾರರಿದ್ದು, ಅವರ ನಮೂದು ತಪ್ಪಾಗಿದೆ. 200ರಿಂದ 500 ಮತದಾರರ ಹೆಸರುಗಳು ಒಂದು ಮನೆಯ ವಿಳಾಸದಲ್ಲಿ ನೋಂದಣಿಯಾಗಿವೆ. ಯಾವುದೇ ಬಿಜೆಪಿ ಕಾರ್ಯಕರ್ತರಿಗೆ ಅದು ಗೊತ್ತಾಗಲಿಲ್ಲವೆ? ಎಂದು ವಿಪಕ್ಷಗಳು ಪ್ರಶ್ನಿಸುತ್ತಿವೆ.

ನುಸುಳುಕೋರರ ವಿಷಯ ಎತ್ತುವ ಮೂಲಕ ಬಿಜೆಪಿ ಎಸ್‌ಐಆರ್ ಅನ್ನು ಬೆಂಬಲಿಸಿತು. ಪಿಪ್ರಾ ವಿಧಾನಸಭೆಯ ಮನೆಯಲ್ಲಿ 459 ಮತದಾರರ ಹೆಸರುಗಳು ನೋಂದಣಿಯಾಗಿವೆ ಎಂದು ರಿಪೋರ್ಟರ್ಸ್ ಕಲೆಕ್ಟಿವ್ ವರದಿ ಮಾಡಿದೆ. ಆದರೆ ಆ ಮನೆಯೇ ಅಸ್ತಿತ್ವದಲ್ಲಿಲ್ಲ. ಅಂತಹ ಅನೇಕ ಉದಾಹರಣೆಗಳು ಕಂಡುಬಂದಿವೆ.

ಚುನಾವಣಾ ಆಯೋಗದ ಎಸ್‌ಐಆರ್‌ನಲ್ಲಿ, ಗರಿಷ್ಠ ಸಂಖ್ಯೆಯ ಬೂತ್ ಮಟ್ಟದ ಏಜೆಂಟ್‌ಗಳು ಬಿಜೆಪಿಯವರು. 22 ಲಕ್ಷ ಜನರನ್ನು ಮೃತರು ಎಂದು ಘೋಷಿಸಲಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ಯುವ ಮತದಾರರೊಬ್ಬರು, ಚುನಾವಣಾ ಆಯೋಗ ಮತಗಳ್ಳತನದ ಪಿತೂರಿಯಲ್ಲಿ ತಾನು ಸತ್ತಿರುವುದಾಗಿ ಘೋಷಿಸಿದೆ ಎಂದಿದ್ದಾರೆ. ಇಂಥವರೇ ಇನ್ನೆಷ್ಟು ಜೀವಂತ ಮತದಾರರು ಆಯೋಗ ಸತ್ತಿದ್ದಾರೆಂದು ಘೋಷಿಸಿರುವ ಪಟ್ಟಿಯಲ್ಲಿರಬಹುದು ಎಂಬುದು ಯೋಚಿಸಬೇಕಿರುವ ವಿಷಯ ಎನ್ನುತ್ತಿವೆ ವಿಪಕ್ಷಗಳು.

ಮೃತರಾಗಿದ್ದಾರೆ ಎಂದು ಚುನಾವಣಾ ಆಯೋಗ ಘೋಷಿಸಿರುವ ಕೆಲವರನ್ನು ಕರೆದು ಅವರ ಮನೆಯಲ್ಲಿ ರಾಹುಲ್ ಗಾಂಧಿ ಚಹಾ ಕುಡಿದರು.

ಉತ್ತಮ ಉದ್ಯೋಗ ಮತ್ತು ಉತ್ತಮ ವೇತನಕ್ಕಾಗಿ ಬಿಹಾರದಿಂದ ಹೊರಗೆ ಹೋಗುವ ಲಕ್ಷಾಂತರ ಜನರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ.

ಬಿಜೆಪಿ ನಾಯಕರು ಗುಜರಾತ್‌ನಿಂದ ಪಾಟ್ನಾಗೆ ಬರುತ್ತಾರೆ ಮತ್ತು ಪಾಟ್ನಾಗೆ ಬಂದ ನಂತರ ಅವರು ಪಾಟ್ನಾದ ಮತದಾರರಾಗುತ್ತಾರೆ.

ಆದರೆ, ಜೀವನೋಪಾಯಕ್ಕಾಗಿ ಹೊರಗಿರುವ ಬಿಹಾರದ ಮತದಾರರನ್ನು ಹೊರಗಿನವರು ಎಂದು ಘೋಷಿಸಲಾಗುತ್ತಿದೆ ಮತ್ತು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ.

ಅದಕ್ಕಾಗಿಯೇ ಇದು ದೊಡ್ಡ ಹೋರಾಟವಾಗಿದೆ.

ಮೋದಿ ಸೂಚನೆಯಂತೆ ಎಷ್ಟೆಲ್ಲ ಮತದಾರರ ಹೆಸರು ತೆಗೆಯಲಾಗಿದೆ. ಮತವನ್ನು ಕದಿಯಲಾಗುತ್ತಿಲ್ಲ, ಬದಲಾಗಿ ದರೋಡೆ ಮಾಡಲಾಗುತ್ತಿದೆ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.

ಬಿಹಾರ ಪ್ರಜಾಪ್ರಭುತ್ವದ ತಾಯಿ. ಬಿಜೆಪಿಯ ಜನರು, ಮೋದಿ, ಅಮಿತ್ ಶಾ, ಚುನಾವಣಾ ಆಯೋಗದ ಜನರು ಈ ಪ್ರಜಾಪ್ರಭುತ್ವದ ತಾಯಿಯಿಂದ ಪ್ರಜಾಪ್ರಭುತ್ವವನ್ನು ಕಸಿಯಲು ನಾವು ಬಿಡುವುದಿಲ್ಲ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.

ನಿಮ್ಮ ಅಸ್ತಿತ್ವವನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಮತದಾರರ ಪಟ್ಟಿಯಿಂದ ನಿಮ್ಮ ಹೆಸರನ್ನು ತೆಗೆದುಹಾಕಿದರೆ, ನಿಮ್ಮ ಹೆಸರನ್ನು ಪಿಂಚಣಿಯಿಂದ ತೆಗೆದುಹಾಕಲಾಗುತ್ತದೆ. ನಂತರ ನಿಮ್ಮ ಹೆಸರನ್ನು ರೇಷನ್ ಕಾರ್ಡ್‌ನಿಂದ ತೆಗೆದುಹಾಕಲಾಗುತ್ತದೆ ಎಂಬ ಅಪಾಯದ ಸುಳಿವನ್ನು ತೇಜಸ್ವಿ ನೀಡಿದ್ದಾರೆ.

ನೇಪಾಳ, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದ ಜನರು ಬಿಹಾರದಲ್ಲಿ ಮತದಾರರಾಗಿದ್ದಾರೆ ಎಂಬ ವದಂತಿ ಹರಡಲಾಯಿತು.

ಆದರೆ ಇಲ್ಲಿಯವರೆಗೆ ಅಂಥದ್ದು ಕಂಡುಬಂದಿಲ್ಲ.

ಬಿಹಾರದಲ್ಲಿ ಇಲ್ಲಿಯವರೆಗೆ ಎಷ್ಟು ವಿದೇಶಿ ಪ್ರಜೆಗಳು ಪತ್ತೆಯಾಗಿದ್ದಾರೆ ಎಂಬ ಪ್ರಶ್ನೆ ಆಗಸ್ಟ್ 17ರಂದು ದಿಲ್ಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ಆಯೋಗಕ್ಕೆ ಎದುರಾಯಿತು. ಮುಖ್ಯ ಚುನಾವಣಾ ಆಯುಕ್ತರು ಯಾವುದೇ ಅಂಕಿಅಂಶಗಳನ್ನು ನೀಡಲಿಲ್ಲ.

ಮೋದಿ ಅವರು ಕೆಂಪು ಕೋಟೆಯ ಭಾಷಣದಲ್ಲೂ ಒಳನುಸುಳುವಿಕೆ ಬಗ್ಗೆಯೇ ಹೇಳಿದರು. ಆದರೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಕೇಳಿದಾಗ, ಅವರಿಗೆ ಏನನ್ನೂ ಹೇಳಲು ಸಾಧ್ಯವಾಗಲಿಲ್ಲ.

ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸುವಾಗ ಬಿಎಲ್‌ಒಗಳು ಎಷ್ಟು ನೇಪಾಳಿ, ಬಾಂಗ್ಲಾದೇಶಿ ಮತ್ತು ಮ್ಯಾನ್ಮಾರ್ ಪ್ರಜೆಗಳನ್ನು ಪತ್ತೆ ಮಾಡಿದ್ದಾರೆ?

ಚುನಾವಣಾ ಆಯೋಗದ ಬಳಿ ಯಾವುದೇ ಅಂಕಿಅಂಶಗಳಿವೆಯೇ?

ಇಷ್ಟೊಂದು ಮಟ್ಟಿಗೆ ಸುಳ್ಳು ಹೇಳಿರುವುದಕ್ಕಾಗಿ ಎಷ್ಟು ಬಿಜೆಪಿ ನಾಯಕರು ರಾಜೀನಾಮೆ ನೀಡುತ್ತಾರೆ?

ಅಥವಾ ಸುಳ್ಳನ್ನು ಹರಡಿದ್ದಕ್ಕಾಗಿ ಚುನಾವಣಾ ಆಯೋಗ ಅವರಿಂದ ಅಫಿಡವಿಟ್ ಕೇಳುತ್ತದೆಯೆ?

ಲೋಕಸಭೆ ಚುನಾವಣೆಯ ಸಮಯದಲ್ಲಿ ಪ್ರಧಾನಿ ಮೋದಿ ಕೋಮುವಾದಿ ಭಾಷಣ ಮಾಡಿದರು. ಆದರೆ, ಚುನಾವಣಾ ಆಯೋಗ ಜೆ.ಪಿ. ನಡ್ಡಾ ಅವರಿಗೆ ನೋಟಿಸ್ ಕಳಿಸಿತು.

ಒಡಿಶಾದಲ್ಲಿ ಪ್ರಧಾನಿ ಹೆಲಿಕಾಪ್ಟರ್ ಅನ್ನು ಪರಿಶೀಲಿಸಿದ್ದಕ್ಕಾಗಿ ಚುನಾವಣಾ ವೀಕ್ಷಕ ಮತ್ತು ಪ್ರಾಮಾಣಿಕ ಐಎಎಸ್ ಅಧಿಕಾರಿಯನ್ನು ತೆಗೆದುಹಾಕಲಾಯಿತು.

ಇದೆಲ್ಲ ಯಾರಿಗೂ ನೆನಪಿಲ್ಲ ಎಂದು ಆಯೋಗ ಭಾವಿಸುತ್ತದೆಯೇ?

ದೀಪಂಕರ್ ಭಟ್ಟಾಚಾರ್ಯ ಮತ್ತು ಮುಕೇಶ್ ಸಾಹ್ನಿ ಸಾಸಾರಾಂನಲ್ಲಿ ಮತದಾನದ ಹಕ್ಕಿಗಾಗಿ ಈ ಹೋರಾಟವೆಂಬುದನ್ನು ಪ್ರತಿಪಾದಿಸಿದ್ದಾರೆ.

ರಾಹುಲ್ ಗಾಂಧಿಯವರ ಯಾತ್ರೆ ಶುರುವಾಗಿರುವಾಗಲೇ ಆಯೋಗ ಪತ್ರಿಕಾಗೋಷ್ಠಿ ನಡೆಸಿರುವುದ ಏಕೆ ಎಂಬುದರ ಬಗ್ಗೆಯೂ ಅವರು ಮಾತಾಡಿದ್ದಾರೆ.

‘‘ನಮ್ಮನ್ನು ಶತ್ರುಗಳಂತೆ ನೋಡಲಾಗುತ್ತಿದೆ. ರವಿವಾರ ರಜೆಯನ್ನೂ ಮರೆತು ಅವರು ನಮ್ಮ ವಿರುದ್ಧ ಪತ್ರಿಕಾಗೋಷ್ಠಿ ನಡೆಸುತ್ತಿದ್ದಾರೆ. ಚುನಾವಣಾ ಆಯೋಗ ಮೋದಿ ಅವರ ಜೇಬಿನಲ್ಲಿದೆ ಎಂದು ತಿಳಿಯಲು ಇಷ್ಟು ಸಾಕು’’ ಎಂದಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಕೊನೆಯಲ್ಲಿ ಮಾತನಾಡಿದರು. ಅವರ ಭಾಷಣ ಉಳಿದವರ ಭಾಷಣಗಳಿಗಿಂತ ಭಿನ್ನವಾಗಿತ್ತು. ಜಗಜೀವನ್ ರಾಮ್ ಅವರನ್ನು ನೆನಪಿಸಿಕೊಂಡ ಖರ್ಗೆ, ಸಂವಿಧಾನ ಸಭೆಯ ಕರಡು ಸಮಿತಿಯ ತಾತ್ಕಾಲಿಕ ಅಧ್ಯಕ್ಷರಾದ ಸಚ್ಚಿದಾನಂದ ಸಿನ್ಹಾ ಮತ್ತು ಅವರ ಸ್ಥಾನದಲ್ಲಿ ಅಧ್ಯಕ್ಷರಾದ ರಾಜೇಂದ್ರ ಪ್ರಸಾದ್ ಅವರನ್ನು ನೆನಪಿಸಿಕೊಂಡರು. ಅವರು ನಂದಲಾಲ್ ಬೋಸ್ ಅವರನ್ನು ನೆನಪಿಸಿಕೊಂಡರು.

‘‘ಆರೆಸ್ಸೆಸ್‌ನಿಂದ ಎಷ್ಟು ಜನರು ಜೈಲಿಗೆ ಹೋಗಿದ್ದಾರೆ, ಎಷ್ಟು ಜನರು ಸತ್ತಿದ್ದಾರೆ? ಒಬ್ಬನೂ ಸಾಯಲಿಲ್ಲ. ಈ ಜನರು ಉದ್ಯೋಗಕ್ಕಾಗಿ ಬ್ರಿಟಿಷರಿಗೆ ಅರ್ಜಿ ಸಲ್ಲಿಸುತ್ತಿದ್ದರು. ‘ನಮ್ಮನ್ನು ಜೈಲಿನಿಂದ ಬಿಡುಗಡೆ ಮಾಡಿ, ಬಂಧಿಸಬೇಡಿ, ನಾವು ನಿಮ್ಮೊಂದಿಗೆ ಇರುತ್ತೇವೆ’ ಎಂದು ಅವರು ಹೇಳುತ್ತಿದ್ದರು. ಆದರೆ, ಮೋದಿ ಕೆಂಪು ಕೋಟೆಯಲ್ಲಿ ನಿಂತು ಅಂಥ ಜನರನ್ನು ಹೊಗಳಿದಾಗ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದವರ ಆತ್ಮಗಳು ನೊಂದಿರಬಹುದು’’ ಎಂದು ಖರ್ಗೆ ಹೆಳಿದರು.

ಬಿಹಾರದಲ್ಲಿ ಪ್ರಾರಂಭವಾದ 1,300 ಕಿ.ಮೀ. ಉದ್ದದ ವೋಟರ್ ಅಧಿಕಾರ್ ಯಾತ್ರೆಯ ಮೂಲಕ ವಿಪಕ್ಷಗಳು ಜನರಲ್ಲಿ ಮತಗಳ್ಳತನದ ಬಗ್ಗೆ ಜಾಗೃತಿ ಹರಡಲು ತೊಡಗಿವೆ. ಆಯೋಗದ ಬಾಗಿಲಲ್ಲಿ ಹಲವಾರು ಸಲ ಅವಮಾನಕ್ಕೆ ಒಳಗಾದ ನಂತರ ವಿರೋಧ ಪಕ್ಷಗಳು ಈಗ ಜನರ ಮುಂದೆ ಹೋಗಿ ನಿಂತಿವೆ.

share
ವಿನಯ್ ಕೆ.
ವಿನಯ್ ಕೆ.
Next Story
X