Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಅಲೆಮಾರಿ ಸಮುದಾಯದ ಮತದ ಹಕ್ಕಿಗೆ...

ಅಲೆಮಾರಿ ಸಮುದಾಯದ ಮತದ ಹಕ್ಕಿಗೆ ಎಸ್‌ಐಆರ್ ಕಂಟಕ?

ಮನೋಜ್ ಆಜಾದ್ಮನೋಜ್ ಆಜಾದ್17 Aug 2026 10:23 AM IST
share
ಅಲೆಮಾರಿ ಸಮುದಾಯದ ಮತದ ಹಕ್ಕಿಗೆ ಎಸ್‌ಐಆರ್ ಕಂಟಕ?
ನಮೂನೆ ಕೊಟ್ಟರೂ ‘ಗೈರು-ಸ್ಥಳಾಂತರ’

ಬೆಂಗಳೂರು, ಆ.16: ಕೇಂದ್ರ ಚುನಾವಣಾ ಆಯೋಗದ ವತಿಯಿಂದ ನಡೆಸುತ್ತಿರುವ ಮತಪಟ್ಟಿ ವಿಶೇಷ ಪರಿಷ್ಕರಣೆ(ಎಸ್‌ಐಆರ್)ಪ್ರಕ್ರಿಯೆಯಲ್ಲಿ ರಾಜ್ಯದ ಅಲೆಮಾರಿ ಸಮುದಾಯದ ಮತದಾರರೇ ಹೆಚ್ಚು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆಯೇ? ಎಂಬ ಗಂಭೀರ ಪ್ರಶ್ನೆ ಇದೀಗ ಎದುರಾಗಿದೆ.

ನಾಗರಿಕ ಮತಕಾವಲು ಸಮಿತಿಯಿಂದ ಬಳ್ಳಾರಿ ಜಿಲ್ಲೆಯ ಕಂಪ್ಲಿ ಕ್ಷೇತ್ರದ ಎಂ.ಡಿ.ಕ್ಯಾಂಪ್ ಬೂತ್‌ನಲ್ಲಿ ಸಿಂದೋಲ್ ಅಲೆಮಾರಿ ಸಮುದಾಯಕ್ಕೆ ಸೇರಿದ ಮತದಾರರ ಪರಿಶೀಲನೆ ನಡೆಸಿದಾಗ, ಗಣತಿ ನಮೂನೆ ಸಲ್ಲಿಸಿದ್ದವರನ್ನೇ ‘ಶಾಶ್ವತ ಸ್ಥಳಾಂತರ/ ಗೈರು’ ಎಂದು ಗುರುತಿಸಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

ಎಂ.ಡಿ.ಕ್ಯಾಂಪ್‌ನ ವಾರ್ಡ್ ಬೂತ್ ಸಂಖ್ಯೆ-63ರಲ್ಲಿ ಅಲೆಮಾರಿ ಸಮುದಾಯಕ್ಕೆ ಸೇರಿದ ಸುಮಾರು 200 ಕುಟುಂಬಗಳು ವಾಸಿಸುತ್ತಿವೆ. ಈ ಸಮುದಾಯದವರು ಮುಖ್ಯವಾಗಿ ಮೀನು ಹಿಡಿಯುವುದು ಮತ್ತು ಹಗಲು ವೇಷದ ಮೂಲಕ ಜೀವನ ನಡೆಸುತ್ತಿದ್ದಾರೆ. ಜೀವನೋಪಾಯದ ಸ್ವರೂಪದಿಂದಾಗಿ ಇವರಲ್ಲಿ ಸ್ಥಳ ಬದಲಾವಣೆ ಅಥವಾ ಸಂಚಾರ ಸಾಮಾನ್ಯವಾಗಿರಬಹುದು. ಆದರೆ ಇದನ್ನೇ ಆಧಾರವಾಗಿಸಿಕೊಂಡು ಅವರ ಶಾಶ್ವತ ವಾಸಸ್ಥಳದ ಕುರಿತು ಚುನಾವಣಾ ಆಯೋಗ ಇಂತಹ ತಪ್ಪು ನಿರ್ಧಾರ ತೆಗೆದುಕೊಳ್ಳಲಾಗಿದೆಯೇ? ಎಂಬ ಅನುಮಾನ ಮೂಡಿದೆ.

ಗಣತಿ ನಮೂನೆ ಕೊಟ್ಟರೂ ‘ಗೈರು-ಸ್ಥಳಾಂತರ’ :

ಅಲೆಮಾರಿ ಸಮುದಾಯಕ್ಕೆ ಸೇರಿದ ಕಾವೇರಿ, ದುರ್ಗಣ್ಣ ಮತ್ತು ಈರಣ್ಣ ಅವರು ಹಲವು ವರ್ಷಗಳಿಂದ ಒಂದೇ ಜಾಗದಲ್ಲಿ ವಾಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ, ಗಣತಿ ನಮೂನೆ ಭರ್ತಿ ಮಾಡಿ ನಮೂನೆಯನ್ನು ಬಿಎಲ್‌ಒಗೆ ಸಲ್ಲಿಸಿದ್ದರೂ ಅವರ ಹೆಸರುಗಳು ಎಎಸ್‌ಡಿಡಿಒ ಪಟ್ಟಿಯಲ್ಲಿ ‘ಗೈರು ಮತ್ತು ಶಾಶ್ವತ ಸ್ಥಳಾಂತರ’ ಎಂದು ಗುರುತಿಸಲಾಗಿದೆ.

ಅವರು ಗಣತಿ ನಮೂನೆ ಸಲ್ಲಿಸಿರುವುದೇ ಮತದಾ ರರಾಗಿ ಮುಂದು ವರಿಯುವ ಆಸಕ್ತಿಯನ್ನು ಸ್ಪಷ್ಟಪಡಿಸುವಾಗ, ಅವರನ್ನು ಶಾಶ್ವತವಾಗಿ ಸ್ಥಳಾಂತರಗೊಂಡವರು ಎಂದು ಹೇಗೆ ಗುರುತಿಸುತ್ತೀರಾ? ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಕುಮಾರ್ ಸಮತಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಗರಿಕ ಮತಕಾವಲು ಸಮಿತಿ ಕೇವಲ ಒಂದು ಗಂಟೆ ನಡೆಸಿದ ಸ್ಥಳೀಯ ಪರಿಶೀಲನೆಯಲ್ಲಿ ಸಮುದಾಯಕ್ಕೆ ಸೇರಿದ ಆರು ಮಂದಿ ಎಎಸ್‌ಡಿಡಿಒ ಪಟ್ಟಿಯಲ್ಲಿ ಇರುವುದು ಪತ್ತೆಯಾಗಿದೆ. ಇದೇ ಬೂತ್‌ನಲ್ಲಿ ಸುಮಾರು 200 ಕುಟುಂಬಗಳಿರುವ ಸಮುದಾಯದಲ್ಲಿ ಅಲ್ಪಾವಧಿಯ ಪರಿಶೀಲನೆಯಲ್ಲೇ ಇಷ್ಟು ಮಂದಿಯನ್ನು ಗುರುತಿಸಿದ್ದರೆ, ಇನ್ನು ಎಷ್ಟು ಮಂದಿ ಮತದಾರರು ಈ ಪಟ್ಟಿಯಲ್ಲಿ ಇರುತ್ತಾರೆ? ಇದು ಕೇವಲ ಆರು ಮಂದಿಯ ಪ್ರಕರಣವಲ್ಲ. ಅಲೆಮಾರಿ ಸಮುದಾಯದ ಮತದಾರರನ್ನು ಎಸ್‌ಐಆರ್ ಪ್ರಕ್ರಿಯೆಯಲ್ಲಿ ಗುರುತಿಸುವ ಮತ್ತು ಪರಿಶೀಲಿಸುವ ವಿಧಾನವೇ ಪ್ರಶ್ನಾರ್ಹವಾಗಿದೆ ಎಂದು ಕುಮಾರ್ ಸಮತಳ ತಿಳಿಸಿದರು.

ಅಲೆಮಾರಿ ಸಮುದಾಯದ ಜೀವನೋಪಾಯದ ಸ್ವರೂಪದಿಂದಾಗಿ ಅವರು ಕೆಲವೊಮ್ಮೆ ತಾತ್ಕಾಲಿಕವಾಗಿ ಸ್ಥಳ ಬದಲಾಯಿಸಬಹುದು. ಆದರೆ, ವೃತ್ತಿಗಾಗಿ ಸಂಚರಿಸುವುದು ಮತ್ತು ಶಾಶ್ವತವಾಗಿ ಮತ್ತೊಂದು ಸ್ಥಳಕ್ಕೆ ವಲಸೆ ಹೋಗುವುದು ಒಂದೇ ಅಲ್ಲ. ಒಬ್ಬ ವ್ಯಕ್ತಿ ಮೀನುಗಾರಿಕೆ ಅಥವಾ ವೇಷಗಾರಿಕೆಗಾಗಿ ಬೇರೆಡೆಗೆ ತೆರಳಿದ್ದರೆ ಅದನ್ನು ಆತನ ಶಾಶ್ವತ ವಾಸಸ್ಥಳ ಬದಲಾವಣೆ ಎಂದು ಪರಿಗಣಿಸುವುದು ಸರಿಯಲ್ಲ. ಎಸ್‌ಐಆರ್‌ನಲ್ಲಿ ಇಂತಹ ಸೂಕ್ಷ್ಮ ಸಮುದಾಯಗಳ ವಿಷಯದಲ್ಲಿ ಸಾಮಾನ್ಯ ಮತದಾರರಿಗಿಂತ ಹೆಚ್ಚಿನ ಎಚ್ಚರಿಕೆಯೊಂದಿಗೆ ಸ್ಥಳ ಪರಿಶೀಲನೆ ನಡೆಯಬೇಕಾಗುತ್ತದೆ. ಇಲ್ಲದಿದ್ದರೆ, ವಿಳಾಸದ ಸ್ಥಿರತೆಯ ಕೊರತೆ ಅಥವಾ ವೃತ್ತಿಯ ಕಾರಣದಿಂದ ಸಂಚಾರ ಮಾಡುವವರನ್ನು ತಪ್ಪಾಗಿ ಗುರುತಿಸುವ ಅಪಾಯ ಎದುರಾಗುತ್ತದೆ ಎನ್ನುವುದಕ್ಕೆ ಈ ಪ್ರಕರಣಗಳ ನಿದರ್ಶನವಾಗಿವೆ.

ಇದು ಮತಹಕ್ಕಿನ ಪ್ರಶ್ನೆ

ಮತದಾರರ ಪಟ್ಟಿಯ ಪರಿಷ್ಕರಣೆಯ ಹೆಸರಿನಲ್ಲಿ ನಕಲಿ ಅಥವಾ ಅನರ್ಹ ಹೆಸರುಗಳನ್ನು ತೆಗೆದುಹಾಕುವುದು ಒಂದು ಪ್ರಕ್ರಿಯೆಯಾದರೆ, ನಿಜವಾದ ಮತದಾರರ ಹೆಸರುಗಳು ತಪ್ಪಾಗಿ ಹೊರಗುಳಿಯದಂತೆ ನೋಡಿಕೊಳ್ಳುವುದು ಚುನಾವಣಾ ಆಯೋಗದ ಮತ್ತೊಂದು ಪ್ರಮುಖ ಜವಾಬ್ದಾರಿ. ಅಲೆಮಾರಿ ಸಮುದಾಯದಂತಹ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದುರ್ಬಲ ಸಮುದಾಯಗಳ ವಿಚಾರದಲ್ಲಿ ಈ ಜವಾಬ್ದಾರಿ ಇನ್ನಷ್ಟು ಮಹತ್ವದಿಂದ ಕೆಲಸ ಮಾಡಬೇಕಾದ ಅಗತ್ಯವಿದೆ.

-ಕರಿಯಪ್ಪ ಗುಡಿಮನಿ, ಒಳಮೀಸಲಾತಿ ಹೋರಾಟಗಾರರು

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಹೆಚ್ಚು ತೊಂದರೆಗೆ ಒಳಗಾಗುತ್ತಿರುವುದು ಅಲೆಮಾರಿ ಸಮುದಾಯದ ಮತದಾರರು. ಯಾಕೆಂದರೆ ಎಸ್‌ಐಆರ್‌ನಲ್ಲಿ ಕೇಳುವ ಯಾವ ದಾಖಲೆಗಳು ಇವರ ಬಳಿ ಇರವುದಿಲ್ಲ. ಇವರಿಗೆ ಶಾಶ್ವತ ನಿವಾಸಿ ಪ್ರಮಾಣ ಪತ್ರ ನೀಡಲು ಇವರು ಎಲ್ಲೋ ಊರಿನ ಹೊರ ಭಾಗದಲ್ಲಿ ಮರದ ಕೆಳಗೆ ಟೆಂಟ್ ಹಾಕಿಕೊಂಡು ಜೀವನ ಮಾಡುತ್ತಿರುತ್ತಾರೆ. ಇವರಿಗೆ ಹೇಗೆ ಪಿಆರ್‌ಸಿ ಕೊಡಲು ಅಧಿಕಾರಿಗಳು ಮುಂದಾಗುತ್ತಾರೆ? ಜಾತಿ ಪ್ರಮಾಣ ಪತ್ರ ಕೊಡಲು ಅಲೆಮಾರಿ ಸಮುದಾಯದಲ್ಲಿ ನೂರೆಂಟು ಸಮಸ್ಯೆಗಳು ಇವೆ. ಆದುದರಿಂದ ಚುನಾವಣಾ ಆಯೋಗ ಮತ್ತು ಸರಕಾರದ ಅಧಿಕಾರಿಗಳು ಕೂಡಲೇ ಈ ಸಮುದಾಯದ ಯಾವೊಬ್ಬ ಮತದಾರರು ಹೊರಗುಳಿಯದಂತೆ ಎಚ್ಚರ ವಹಿಸಬೇಕು. ಇವರನ್ನು ಗುರುತಿಸಲೆಂದೇ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ಅಗತ್ಯ ದಾಖಲೆಗಳನ್ನು ಸ್ಥಳದಲ್ಲಿಯೇ ವಿತರಿಸಬೇಕು. ಇವೆಲ್ಲವನ್ನೂ ಮಾಡಲು ಕನಿಷ್ಠ ಎಸ್‌ಐಆರ್ ಪ್ರಕ್ರಿಯೆಯನ್ನು ಆರು ತಿಂಗಳ ಕಾಲ ಮುಂದೂಡಬೇಕು.

-ಡಾ.ಸಿ.ಎಸ್.ದ್ವಾರಕನಾಥ್, ಗೌರವಾಧ್ಯಕ್ಷ, ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ

ಎಸ್‌ಐಆರ್ ಎಂದರೆ ಏನೆಂದು ಜನರಿಗೆ ಗೊತ್ತಿಲ್ಲ. ಪ್ರತಿನಿತ್ಯ ದುಡಿದು ಬದುಕುವ ಜನರಿಗೆ ಹೇಗೆ ಇದೆಲ್ಲಾ ಅರ್ಥ ಆಗುತ್ತದೆ. ಫೇಸ್‌ಬುಕ್, ವೆಬ್‌ಸೈಟ್ ಅಂತ ಮಾತಾಡಿದರೆ ಓದು ಬರಹ ಗೊತ್ತಿಲ್ಲದವರಿಗೆ ಹೇಗೆ ಇದರ ಮಾಹಿತಿ ಮುಟ್ಟುತ್ತದೆ?

-ಕೆ.ನೀಲಪ್ಪ, ಸ್ಥಳೀಯ ಮತದಾರ ಕಂಪ್ಲಿ

Tags

VotingSIR
share
ಮನೋಜ್ ಆಜಾದ್
ಮನೋಜ್ ಆಜಾದ್
Next Story
X