Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ವಿಶ್ವವಿದ್ಯಾನಿಲಯಗಳ ನಿವೃತ್ತ ಉದ್ಯೋಗಿಗಳ...

ವಿಶ್ವವಿದ್ಯಾನಿಲಯಗಳ ನಿವೃತ್ತ ಉದ್ಯೋಗಿಗಳ ಪಿಂಚಣಿ ಸಂಬಂಧಿತ ಸಮಸ್ಯೆ: ಪರಿಹಾರದ ಕೂಗು ಅರಣ್ಯರೋದನವಾಯಿತೇ?

ಹರೀಶ್ ಕುಮಾರ್ ಕುಡ್ತಡ್ಕಹರೀಶ್ ಕುಮಾರ್ ಕುಡ್ತಡ್ಕ19 Dec 2025 12:30 PM IST
share
ವಿಶ್ವವಿದ್ಯಾನಿಲಯಗಳ ನಿವೃತ್ತ ಉದ್ಯೋಗಿಗಳ ಪಿಂಚಣಿ ಸಂಬಂಧಿತ ಸಮಸ್ಯೆ: ಪರಿಹಾರದ ಕೂಗು ಅರಣ್ಯರೋದನವಾಯಿತೇ?

ಕಳೆದ ಮೂರು ವರ್ಷಗಳಿಂದ ಪಿಂಚಣಿ ಸಂಬಂಧಿತ ಸಮಸ್ಯೆಯು ಪರಿಹಾರ ಕಾಣುವ ಬದಲು ಉಲ್ಬಣವಾಗುವ ಲಕ್ಷಣಗಳು ಗೋಚರಿಸುತ್ತಿದೆ. ಇದರಿಂದ ಕಂಗೆಟ್ಟಿರುವ ನಿವೃತ್ತರು ನಿರಂತರವಾಗಿ ವಿಶ್ವವಿದ್ಯಾನಿಲಯ, ವಿಧಾನಸೌಧಗಳ ಮೆಟ್ಟಿಲು ಹತ್ತಿ ಚಪ್ಪಲಿ ಸವೆಸಿದ್ದಾರೆ. ಹಾಗೆಯೇ ಜನ ಪ್ರತಿನಿಧಿಗಳ ಮುಂದೆ ಆರ್ತರಾಗಿ ಕೈಯೊಡ್ಡಿ ಹೈರಾಣಾಗಿದ್ದಾರೆ. ಹೆಚ್ಚು ಕಡಿಮೆ ಇದು ‘ತಬರನ ಕತೆ’ಯಾಗಿ ಬಿಟ್ಟಿದೆ.

ರಾಜ್ಯದ ವಿಶ್ವವಿದ್ಯಾನಿಲಯಗಳ ನಿವೃತ್ತ ಉದ್ಯೋಗಿಗಳು ತಾವು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾರೆ! ಕಳೆದ ಮೂರು ವರ್ಷಗಳಿಂದ ವಿಶ್ವವಿದ್ಯಾನಿಲಯಗಳ ನಿವೃತ್ತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ನಿಯಮಾನುಸಾರವಾಗಿ ಮಾಸಾಂತ್ಯಕ್ಕೆ ಪಾವತಿಯಾಗ ಬೇಕಾಗಿರುವ ಮಾಸಿಕ ಪಿಂಚಣಿ (ನಿವೃತ್ತಿ ವೇತನ) ಅನಿರ್ದಿಷ್ಟವಾಗಿ ವಿಳಂಬವಾಗುತ್ತಿದೆ. ಇನ್ನು ಏಕಗಂಟಿನಲ್ಲಿ ದೊರಕ ಬೇಕಾದ ಪಿಂಚಣಿ ಸೌಲಭ್ಯದ ಮೊತ್ತ ಪಾವತಿಯಾಗುವಾಗ ತಿಂಗಳುಗಟ್ಟಲೆ ವಿಳಂಬವಾಗುತ್ತಿದೆ. ಈ ವಿಚಾರದಲ್ಲಿ ವರ್ಷಾವಧಿಯನ್ನೂ ಮೀರಿ ವಿಳಂಬವಾದ ಉದಾಹರಣೆಗಳಿವೆ. ಇದರಿಂದ ಅಸಹಾಯಕರಾಗಿರುವ ನಿವೃತ್ತ ಉದ್ಯೋಗಿಗಳು ಕಷ್ಟ-ನಷ್ಟಗಳಿಗೆ ಗುರಿಯಾಗಿದ್ದಲ್ಲದೆ ಒಂದು ರೀತಿಯ ಅಸುರಕ್ಷಿತ ಭಾವನೆಯಿಂದ ಬಳಲುವಂತಾಗಿದೆ. ಹಾಗಾದರೆ ಇದರ ಹೊಣೆ ಹೊರಬೇಕಾಗಿರುವ ವಿಶ್ವವಿದ್ಯಾನಿಲಯಗಳು ಮತ್ತು ರಾಜ್ಯ ಸರಕಾರವೇನು ಮಾಡುತ್ತಿವೆ?

ನಿಜ, ರಾಜ್ಯದ ಬಹುತೇಕ ಹಳೆಯ ವಿಶ್ವವಿದ್ಯಾನಿಲಯಗಳು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿವೆ. ಇದು ಕೇವಲ ಆರ್ಥಿಕ ಬಿಕ್ಕಟ್ಟಿನ ವಿಚಾರ ಮಾತ್ರ ಅಲ್ಲ. ಹೆಚ್ಚು ಕಡಿಮೆ ಈ ವಿಶ್ವವಿದ್ಯಾನಿಲಯಗಳೆಲ್ಲ ತಮ್ಮ ಅಸ್ತಿತ್ವದ ಸವಾಲನ್ನು ಎದುರಿಸುತ್ತಿವೆ. ಇದೊಂದು ಬಹು ಆಯಾಮವುಳ್ಳ ಗಂಭೀರ ಸಮಸ್ಯೆ. ಇರಲಿ, ಈ ಸಮಸ್ಯೆಯ ನೇರ ಹೊಡೆತ ಬಿದ್ದಿರುವ ನಿವೃತ್ತ ಸಿಬ್ಬಂದಿಯ ಸಂಕಷ್ಟದತ್ತ ಸಹಾನುಭೂತಿಯಿಂದ ಗಮನ ಹರಿಸುವುದು ಮಹತ್ವದ ವಿಚಾರ. ಸರಕಾರಿ ನೌಕರರಿಗೆ ಸಮಾನಾದ ಪಿಂಚಣಿ ಸೌಲಭ್ಯಗಳಿಗೆ ಅರ್ಹರಾಗಿರುವ ವಿಶ್ವವಿದ್ಯಾನಿಲಯಗಳ ನೌಕರರು ಹುದ್ದೆಯಿಂದ ನಿವೃತ್ತಿ ಹೊಂದುವಾಗ ಉಪದಾನ, ಪರಿವರ್ತಿತ ಪಿಂಚಣಿ ಮತ್ತು ಗಳಿಕೆ ರಜೆ ನಗದೀಕರಣಗಳನ್ನೊಳಗೊಂಡಂತಹ ಒಂದು ಗಣನೀಯ ಮೊತ್ತವನ್ನು ಏಕಗಂಟಿನಲ್ಲಿ ಪಡೆಯಲು ಅರ್ಹರು. ಜೊತೆಗೆ ನಿವೃತ್ತಿ ಹೊಂದಿದ ತಿಂಗಳ ನಂತರ ತಮ್ಮ ಜೀವಿತಾವಧಿ ವರೆಗೆ ಮಾಸಿಕ ಪಿಂಚಣಿಯನ್ನು ತಿಂಗಳಾಂತ್ಯಕ್ಕೆ ಪಡೆಯಲೂ ಅರ್ಹರು. ಏಕಗಂಟಿನಲ್ಲಿ ಪಡೆಯುವ ಪಿಂಚಣಿ ಸೌಲಭ್ಯದ ಮೊತ್ತವನ್ನು ನಿವೃತ್ತರ ಬಹುಕಾಲದ ‘ಕನಸಿನ ನಿಧಿ’ಗೆ ಹೋಲಿಸ ಬಹುದು. ಮಕ್ಕಳ ವಿವಾಹ, ಗೃಹ ನಿರ್ಮಾಣ, ಸಾಲ ತೀರಿಕೆ ಮುಂತಾದ ಉದ್ದೇಶಗಳಿಗೆ ಬಳಸಬೇಕೆಂದು ಸೇವಾವಧಿಯಲ್ಲಿ ಕನಸು ಕಂಡವರಿಗೆ ಈ ರೀತಿಯ ವಿಳಂಬದಿಂದ ಉಂಟಾಗುವ ಕಷ್ಟ-ನಷ್ಟಗಳು ಅಪಾರ. ಇನ್ನು ಮಾಸಿಕ ಪಿಂಚಣಿಯ ವಿಳಂಬವು ಜೀವನ ನಿರ್ವಹಣೆ, ವೈದ್ಯಕೀಯ ವೆಚ್ಚಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವುದನ್ನು ಕಡೆಗಣಿಸಲಾಗದು. ಈ ಎಲ್ಲ ಸೌಲಭ್ಯಗಳಿಗೆ ಅಡ್ಡಿಯುಂಟಾಗಿರುವುದೇ ಪ್ರಸ್ತುತ ಸಮಸ್ಯೆಯ ಮೂಲ. ಕಳೆದ ಮೂರು ವರ್ಷಗಳಿಂದ ಈ ಸಮಸ್ಯೆಯು ಪರಿಹಾರ ಕಾಣುವ ಬದಲು ಉಲ್ಬಣವಾಗುವ ಲಕ್ಷಣಗಳು ಗೋಚರಿಸುತ್ತಿದೆ. ಇದರಿಂದ ಕಂಗೆಟ್ಟಿರುವ ನಿವೃತ್ತರು ನಿರಂತರವಾಗಿ ವಿಶ್ವವಿದ್ಯಾನಿಲಯ, ವಿಧಾನಸೌಧಗಳ ಮೆಟ್ಟಿಲು ಹತ್ತಿ ಚಪ್ಪಲಿ ಸವೆಸಿದ್ದಾರೆ. ಹಾಗೆಯೇ ಜನ ಪ್ರತಿನಿಧಿಗಳ ಮುಂದೆ ಆರ್ತರಾಗಿ ಕೈಯೊಡ್ಡಿ ಹೈರಾಣಾಗಿದ್ದಾರೆ. ಹೆಚ್ಚು ಕಡಿಮೆ ಇದು ‘ತಬರನ ಕತೆ’ಯಾಗಿ ಬಿಟ್ಟಿದೆ.

ಅಸ್ತಿತ್ವಕ್ಕಾಗಿ ಹೆಣಗಾಟ ಮಾಡುತ್ತಿರುವ ವಿಶ್ವವಿದ್ಯಾನಿಲಯಗಳ ಆಡಳಿತಕ್ಕೂ ನಿವೃತ್ತರ ಸಮಸ್ಯೆಯು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ವಿಶ್ವವಿದ್ಯಾನಿಲಯಗಳಿಗೆ ವಾರ್ಷಿಕವಾಗಿ ಮಂಜೂರು ಮಾಡುವಂತಹ ಪಿಂಚಣಿ ಅನುದಾನದ ಒಂದು ಸಣ್ಣ ಪಾಲು ಸಾಕಾಗುವುದಿಲ್ಲವೆಂದು ಅದನ್ನು ಹೆಚ್ಚಿಸ ಬೇಕೆಂಬ ಬೇಡಿಕೆಗೆ ಸರಕಾರ ಮಣಿಯುತ್ತಿಲ್ಲ. ಇತ್ತ ಆಂತರಿಕ ಸಂಪನ್ಮೂಲದ ತೀವ್ರ ಕುಸಿತದಿಂದ ಕಂಗೆಟ್ಟಿರುವ ವಿಶ್ವವಿದ್ಯಾನಿಲಯಗಳು ಪಿಂಚಣಿದಾರರ ಕೆಂಗಣ್ಣಿಗೆ ಗುರಿಯಾಗ ಬೇಕಾಗಿದೆ. ಸರಕಾರಕ್ಕೂ ಸಮಸ್ಯೆಯ ಬಿಸಿ ತಟ್ಟಿಲ್ಲ ಎಂದೇನಿಲ್ಲ. ಸಾಧ್ಯವಾದಷ್ಟೂ ಪಿಂಚಣಿ ವೆಚ್ಚವನ್ನು ವಿಶ್ವವಿದ್ಯಾನಿಲಯಗಳೇ ಭರಿಸಬೇಕು ಹಾಗೂ ತನ್ನ ಆರ್ಥಿಕ ಭಾರ ಹೆಚ್ಚಬಾರದೆನ್ನುವ ನಿಲುವು ಸರಕಾರಕ್ಕೆ ಇದ್ದಂತಿದೆ. ವಾಸ್ತವದಲ್ಲಿ ಈ ಸಮಸ್ಯೆಯ ನೇರ ಹೊಣೆಯನ್ನು ಸರಕಾರವೇ ವಹಿಸಿಕೊಳ್ಳ ಬೇಕಾಗುತ್ತದೆ. ಯಾಕೆಂದರೆ ಸಮಸ್ಯೆಯ ಆಳಕ್ಕೆ ಹೋದರೆ ಇಲ್ಲಿ ಸರಕಾರದ ಮುಂಗಾಣ್ಕೆಯ ವೈಫಲ್ಯ ಇಂತಹ ಪರಿಸ್ಥಿತಿಗೆ ಕಾರಣವಾಗಿರುವುದು ನಿಚ್ಚಳವಾಗಿ ಗೋಚರಿಸುವಂತಿದೆ. ಆದ್ದರಿಂದ ಸರಕಾರ ತನ್ನ ಹೊಣೆಗಾರಿಕೆಯಿಂದ ನುಣುಚಿ ಕೊಳ್ಳುವಂತಿಲ್ಲ.

ಈ ಸಮಸ್ಯೆ ದಿಢೀರ್ ಆಗಿ ಸೃಷ್ಟಿಯಾದದ್ದೇನಲ್ಲ, ಸರಕಾರಗಳು ಕಾಲ ಕಾಲಕ್ಕೆ ಜಾರಿಗೆ ತಂದಂತಹ ಉನ್ನತ ಶಿಕ್ಷಣದ ನೀತಿಗಳು, ಕ್ರಮಗಳಿಂದ ವಿಶ್ವವಿದ್ಯಾನಿಲಯಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದು ಕೊಂಡು ಬಂದಿರುವುದು ಸ್ಪಷ್ಟ. ತೊಂಭತ್ತರ ದಶಕದಲ್ಲಿ ಸಾಂಪ್ರದಾಯಿಕ ವಿಶ್ವವಿದ್ಯಾನಿಲಯಗಳಿಂದ ವೈದ್ಯಕೀಯ ಮತ್ತು ತಾಂತ್ರಿಕ ಕಾಲೇಜುಗಳನ್ನು ಬೇರ್ಪಡಿಸಿ ಪ್ರತ್ಯೇಕ ವೈದ್ಯಕೀಯ ಹಾಗೂ ತಾಂತ್ರಿಕ ವಿಶ್ವವಿದ್ಯಾನಿಲಯಗಳನ್ನು ಅಸ್ತಿತ್ವಕ್ಕೆ ತರಲಾಯಿತು. ಇದರಿಂದ ವಿಶ್ವವಿದ್ಯಾನಿಲಯಗಳ ಬಹಳ ದೊಡ್ಡ ಆದಾಯದ ಮೂಲ ಬತ್ತಿ ಹೋದಂತಾಯಿತು. ಇದು ಮೊದಲ ಹೊಡೆತ. ಇಂದು ರಾಜೀವ್‌ಗಾಂಧಿ ವೈದ್ಯಕೀಯ ವಿಶ್ವವಿದ್ಯಾನಿಲಯ ಮತ್ತು ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯಗಳು ಅತ್ಯಂತ ಸುಭದ್ರವಾದ ಹಣಕಾಸು ಸ್ಥಿತಿಯಲ್ಲಿರುವುದನ್ನು ಗಮನಿಸಬಹುದು. ತರುವಾಯ ಸರಕಾರದ ಉದಾರ ಶೈಕ್ಷಣಿಕ ನೀತಿಯ ಭಾಗವಾಗಿ ಉನ್ನತ ಶಿಕ್ಷಣವು ಖಾಸಗೀಕರಣಕ್ಕೆ ತೆರೆದು ಕೊಂಡಿತು. ಪರಿಣಾಮವಾಗಿ ಖಾಸಗಿ, ಪರಿಗಣಿತ ವಿಶ್ವವಿದ್ಯಾನಿಲಯಗಳು ಹೆಚ್ಚಾದವು. ಇದರೊಂದಿಗೆ ಸ್ವಾಯತ್ತ ಕಾಲೇಜುಗಳೂ ಬಂದವು. ಈ ಬೆಳವಣಿಗೆಗಳು ವಿದ್ಯಾರ್ಥಿಗಳನ್ನು ಸಾಂಪ್ರದಾಯಿಕ ವಿಶ್ವವಿದ್ಯಾನಿಲಯಗಳಿಂದ ವಿಮುಖರನ್ನಾಗಿ ಮಾಡಿರುವುದು ಕಣ್ಣೆದುರಿಗಿನ ಸತ್ಯ. ಹಾಗಂತ ಸರಕಾರದ ಈ ಧೋರಣೆಯನ್ನು ಸಾರಾಸಗಟಾಗಿ ಟೀಕಿಸಲು ಸಾಧ್ಯವಿಲ್ಲ. ಸರಕಾರಿ ಮತ್ತು ಖಾಸಗಿ ಕ್ಷೇತ್ರಗಳ ನಡುವೆ ಸಮತೋಲನ ಸಾಧಿಸಿ ಆರೋಗ್ಯಕರ ಸ್ಪರ್ಧೆಯನ್ನು ಕಾಯ್ದು ಕೊಳ್ಳುವುದನ್ನು ಖಾತರಿ ಪಡಿಸುವುದನ್ನು ಸರಕಾರವು ಕಡೆಗಣಿಸಿತು. ಬಹುಶ: ಸರಕಾರಕ್ಕೆ ಇದೇ ಬೇಕಾಗಿತ್ತು ಎಂದು ಕಾಣುತ್ತದೆ. ಈ ಅಭಿಪ್ರಾಯವನ್ನು ಸಾಬೀತು ಪಡಿಸುವಂತೆ ಸರಕಾರವು ವಿಶ್ವವಿದ್ಯಾನಿಲಯಗಳಲ್ಲಿ ಖಾಲಿ ಬೀಳ ತೊಡಗಿದ್ದ ಶಿಕ್ಷಕ ಹಾಗೂ ಶಿಕ್ಷಕೇತರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದಕ್ಕೆ ಅನುಮತಿ ನೀಡಲು ಇಂದಿಗೂ ಹಿಂದೇಟು ಹಾಕುತ್ತಿರುವುದನ್ನು ಗಮನಿಸಿದರೆ ವಿಷಯ ಸ್ಪಷ್ಟವಾಗುತ್ತದೆ. ಇಂದು ವಿಶ್ವವಿದ್ಯಾನಿಲಯಗಳು ಕೆಲವೇ ಮಂದಿ ಖಾಯಂ ಅಧ್ಯಾಪಕರು ಮತ್ತು ಬಹುಸಂಖ್ಯಾತ ಅತಿಥಿ ಉಪನ್ಯಾಸಕರ ನೆರವಿನಿಂದ ಪರಿಸ್ಥಿತಿಯನ್ನು ಸಂಭಾಳಿಸಿಕೊಂಡು ಹೋಗುತ್ತಿವೆ. ಇನ್ನೊಂದು ದುರಂತವನ್ನು ಇಲ್ಲಿ ಅಗತ್ಯವಾಗಿ ದಾಖಲಿಸಬೇಕು. ಉನ್ನತ ಶಿಕ್ಷಣದ ಈ ಕೆಟ್ಟ ಪರಿಸ್ಥಿತಿಯಲ್ಲಿಯೂ ಹಿಂದಿನ ಸರಕಾರ ತನ್ನ ಅಧಿಕಾರಾವಧಿಯ ಕೊನೆಯಲ್ಲಿ ಏಳು ಹೊಸ ವಿಶ್ವವಿದ್ಯಾನಿಲಯಗಳನ್ನು ತನ್ನ ರಾಜಕೀಯ ಲಾಭಕ್ಕಾಗಿ ಸ್ಥಾಪನೆ ಮಾಡುವ ದುಸ್ಸಾಹಸಕ್ಕೆ ಕೈ ಹಾಕಿತು. ಇಂತಹ ವಾತಾವರಣದಲ್ಲಿ ವಿದ್ಯಾರ್ಥಿಗಳು ಈ ಹಳೆಯ ವಿಶ್ವವಿದ್ಯಾನಿಲಯಗಳತ್ತ ಹೇಗೆ ತಾನೇ ಮುಖ ಮಾಡಬಲ್ಲರು? ವಿದ್ಯಾರ್ಥಿಗಳಿಲ್ಲದಿದ್ದರೆ ಆದಾಯದ ಕ್ರೋಡೀಕರಣ ಹೇಗೆ ಸಾಧ್ಯ? ಈ ರೀತಿಯ ಬೆಳವಣಿಗೆಗಳೇ ವಿಶ್ವವಿದ್ಯಾನಿಲಯಗಳ ಆರ್ಥಿಕ ಕುಸಿತಕ್ಕೆ ನೇರವಾಗಿ ಕಾರಣವಾಗಿರುವುದು ಅತ್ಯಂತ ಸ್ಪಷ್ಟ.

ಹಾಗಾದರೆ ಈ ವಿಚಾರದಲ್ಲಿ ವಿಶ್ವವಿದ್ಯಾನಿಲಯಗಳಿಂದ ಯಾವುದೇ ತಪ್ಪು ನಡೆದಿಲ್ಲವೇ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ವಿಶ್ವವಿದ್ಯಾನಿಲಯದ ಉನ್ನತ ಅಧಿಕಾರಿಗಳಿಂದ ಆಗಿರುವ ತಪ್ಪುಗಳನ್ನೂ ನಿರಾಕರಿಸಲು ಸಾಧ್ಯವಿಲ್ಲ. ಅವರಿಗೆ ದೂರದೃಷ್ಟಿಯ ಕೊರತೆ ಇದ್ದದ್ದು ಒಂದು ಗಮನಾರ್ಹ ಲೋಪವೆನ್ನಬಹುದು. ಹಾಗೆಯೇ ವಿಶ್ವವಿದ್ಯಾನಿಲಯಗಳಲ್ಲಿ ನಡೆದ ಅನಗತ್ಯ ಬೃಹತ್ ಕಾಮಗಾರಿ ಹಾಗೂ ಯೋಜನೆಗಳು, ಆಡಂಬರದ ವೆಚ್ಚಗಳು ಇತ್ಯಾದಿ ವಿಶ್ವವಿದ್ಯಾನಿಲಯಗಳ ಆಂತರಿಕ ಕಾಪು ನಿಧಿಯನ್ನು ಕ್ರಮೇಣ ಕರಗಿಸತೊಡಗಿದವು. ಕುಲಪತಿಗಳ ಆಯ್ಕೆಯಲ್ಲಿ ಯೋಗ್ಯತೆಯ ಬದಲು ಪ್ರಭಾವ, ಹಣದ ಥೈಲಿಗೆ ಪ್ರಾಮುಖ್ಯತೆ ನೀಡಿರುವುದರಿಂದ ವಿಶ್ವವಿದ್ಯಾನಿಲಯಗಳ ಉನ್ನತ ಹಂತದಲ್ಲಿ ದಕ್ಷತೆ, ನೈತಿಕತೆ ಮರೆಯಾಗಲು ತೊಡಗಿತ್ತು. ಇದೆಲ್ಲ ಇಂದಿನ ಬಿಕ್ಕಟ್ಟಿಗೆ ಪೂರಕವಾಯಿತು. ಹೀಗಾಗಿ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಂಹಪಾಲು ಸರಕಾರದ್ದಾದರೆ ಸಣ್ಣ ಪ್ರಮಾಣದ ಲೋಪಗಳು ವಿಶ್ವವಿದ್ಯಾನಿಲಯದ್ದಾಗಿದೆ ಎನ್ನಲು ಅಡ್ಡಿಯಿಲ್ಲ. ಇದೀಗ ಸರಕಾರ ಮತ್ತು ವಿಶ್ವವಿದ್ಯಾನಿಲಯಗಳು ಸಮಸ್ಯೆಯ ಚೆಂಡನ್ನು ಅತ್ತಿತ್ತ ಎಸೆಯುತ್ತ ಸಮಯ ವ್ಯರ್ಥ ಮಾಡುತ್ತಿವೆ ಎಂದೆನಿಸುತ್ತದೆ. ಇವುಗಳ ನಡುವೆ ಬಾಳಿನ ಮುಸ್ಸಂಜೆಯಲ್ಲಿರುವ ನಿವೃತ್ತರ ಕೂಗು ಯಾರಿಗೂ ಕೇಳದಂತಾಗಿದೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದ ವಿಧಾನ ಪರಿಷತ್ ಕಲಾಪದಲ್ಲಿ ಮಾತನಾಡುತ್ತ ಉನ್ನತ ಶಿಕ್ಷಣ ಸಚಿವರು ವಿಶ್ವವಿದ್ಯಾನಿಲಯಗಳು ಎದುರಿಸುತ್ತಿರುವ ಆಂತರಿಕ ಸಂಪನ್ಮೂಲದ ಕೊರತೆಯ ಸಮಸ್ಯೆಯನ್ನು ಒಪ್ಪಿಕೊಳ್ಳುತ್ತ, ಮುಂದಿನ ಬಜೆಟ್ ಅಧಿವೇಶನಕ್ಕಿಂತ ಮುಂಚಿತವಾಗಿ ಸರಕಾರ ವಿಶ್ವವಿದ್ಯಾನಿಲಯಗಳನ್ನು ಸಶಕ್ತಗೊಳಿಸಲು ಕ್ರಮಗಳನ್ನು ಕೈಗೊಳ್ಳುತ್ತದೆ ಎಂಬ ಭರವಸೆಯನ್ನು ನೀಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಕಾರ್ಯಗತವಾಗಬಹುದು ಎಂಬುದನ್ನು ಕಾದು ನೋಡ ಬೇಕು. ಈ ಹಿಂದೆ ಸರಕಾರವು ವಿಶ್ವವಿದ್ಯಾನಿಲಯಗಳ ಹಣಕಾಸು ಪರಿಸ್ಥಿತಿಯ ಅಧ್ಯಯನ ನಡೆಸಿ ಶಿಫಾರಸುಗಳನ್ನು ಮಾಡಲು ಉಪಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಸಂಪುಟ ಉಪಸಮಿತಿಯೊಂದನ್ನು ರಚಿಸಿತ್ತು. ಆದರೆ ಈ ವಿಚಾರದಲ್ಲಿ ನಂತರದ ಬೆಳವಣಿಗೆಗಳು ತಿಳಿದು ಬಂದಿಲ್ಲ. ಇವೆಲ್ಲ ಏನಿದ್ದರೂ ಭವಿಷ್ಯದ ಯೋಜನೆಗಳು. ಇದರಿಂದ ಈಗಾಗಲೇ ಬೆಟ್ಟದಂತೆ ಬೆಳೆದು ನಿಂತಿರುವ ಪಿಂಚಣಿದಾರರ ಇಂದಿನ ಸಮಸ್ಯೆಗೆ ತಕ್ಷಣದ ಪರಿಹಾರ ನೀಡಲಾರದು. ಇದರ ಅರಿವು ಸಚಿವರಿಗೂ ಇದೆ. ಅವರು ಉನ್ನತ ಶಿಕ್ಷಣ ಇಲಾಖೆಯಲ್ಲಿ ರಾಶಿ ಬಿದ್ದಿರುವ ಕಾಗದ ಪತ್ರ, ಕಡತಗಳನ್ನು ನಿರ್ಜೀವ ವಸ್ತುಗಳೆಂದು ನೋಡದೆ ಅದರಲ್ಲಿನ ನಿವೃತ್ತರ ನಿಟ್ಟುಸಿರಿಗೆ ಸ್ಪಂದಿಸಬೇಕಾಗಿದೆ. ಹಾಗಾದಾಗ ಮಾತ್ರ ನಿವೃತ್ತರ ಪಿಂಚಣಿ ಸಮಸ್ಯೆಯ ಪರಿಹಾರಕ್ಕೆ ಒಂದು ದಿಕ್ಕು ತೋಚಬಹುದೇನೋ?

ಇಲ್ಲಿ ಸರಕಾರದ ನಿಧಾನಗತಿಯ ಧೋರಣೆ ಈ ರೀತಿಯಾದರೆ ವಿಶ್ವವಿದ್ಯಾನಿಲಯದ ಧೋರಣೆ ಇನ್ನೊಂದು ಬಗೆ. ಸರಕಾರಕ್ಕೆ ಪಿಂಚಣಿ ಅನುದಾನಕ್ಕೆ ಪ್ರಸ್ತಾವನೆಗಳನ್ನೇನೊ ವಿಶ್ವವಿದ್ಯಾನಿಲಯಗಳು ಕಾಲ ಕಾಲಕ್ಕೆ ಸಲ್ಲಿಸುತ್ತವೆ. ಆದರೆ ಸರಕಾರದ ಮೇಲೆ ನಿರಂತರ ಒತ್ತಡ ಹೇರುವುದು, ಪಟ್ಟು ಹಿಡಿದು ಕಾರ್ಯ ಸಾಧಿಸುವಂತಹ ಪ್ರಯತ್ನಗಳು ಕಾಣುವುದಿಲ್ಲ. ಪಿಂಚಣಿ ವಿಚಾರದಲ್ಲಿ ತಾವು ಅಸಹಾಯಕರು, ಸರಕಾರ ಅನುದಾನ ನೀಡಿದರೆ ಪಿಂಚಣಿ ಮತ್ತು ಇತರ ಸೌಲಭ್ಯಗಳನ್ನು ನೀಡಲು ಸಾಧ್ಯ ಎಂಬಂತಹ ಉತ್ತರಗಳನ್ನು ವಿಶ್ವವಿದ್ಯಾನಿಲಯದ ಅಧಿಕಾರಿಗಳು ನೀಡಿ ಸುಮ್ಮನಾಗುತ್ತಾರೆ. ಜೊತೆಗೆ ಕೆಲವು ಸಂದರ್ಭಗಳಲ್ಲಿ ಅನಗತ್ಯ ವೆಚ್ಚಗಳನ್ನು ಬದಿಗಿಟ್ಟು ಕನಿಷ್ಠ ಮಾಸಿಕ ಪಿಂಚಣಿಯನ್ನಾದರೂ ಪ್ರಥಮ ಆದ್ಯತೆಯ ವೆಚ್ಚವಾಗಿ ಪರಿಗಣಿಸದಿರುವುದು ಕಂಡು ಬರುತ್ತದೆ.

ಪಿಂಚಣಿದಾರರ ಸಮಸ್ಯೆ ನಿಜಕ್ಕೂ ಸರಕಾರ ಮತ್ತು ವಿಶ್ವವಿದ್ಯಾನಿಲಯಗಳೆರಡಕ್ಕೂ ಸಂಬಂಧಿಸಿದ್ದಾಗಿದೆ. ವಿಶ್ವವಿದ್ಯಾನಿಲಯಗಳು ತಮ್ಮ ವಾರ್ಷಿಕ ಬಜೆಟ್, ಲೆಕ್ಕ ಪತ್ರಗಳನ್ನೆಲ್ಲ ನಿಯಮಿತವಾಗಿ ಸರಕಾರಕ್ಕೆ ಸಲ್ಲಿಸುತ್ತಿವೆ. ಇದರಿಂದ ಸರಕಾರಕ್ಕೆ ವಿಶ್ವವಿದ್ಯಾನಿಲಯಗಳ ಆರ್ಥಿಕ ಸ್ಥಿತಿ-ಗತಿಯ ಸಂಪೂರ್ಣ ಮಾಹಿತಿಯಿರುತ್ತದೆ. ಅಗತ್ಯವಿದ್ದರೆ ಇನ್ನಷ್ಟು ಮಾಹಿತಿಯನ್ನು ತರಿಸಿಕೊಳ್ಳುವಂತಹ ಅಧಿಕಾರವೂ ಇದೆ. ವಿಶ್ವವಿದ್ಯಾನಿಲಯಗಳು ಈ ನಿಟ್ಟಿನಲ್ಲಿ ಪಾರದರ್ಶಕವಾದ ನೆಲೆಯಲ್ಲಿ ಸಹಕರಿಸುವ ಅಗತ್ಯವಿದೆ. ಹೀಗಾಗಿ ಸರಕಾರ ಮತ್ತು ವಿಶ್ವವಿದ್ಯಾನಿಲಯಗಳು ನಿವೃತ್ತರ ಪಿಂಚಣಿ ಪಾವತಿ ವಿಚಾರದಲ್ಲಿ ಒಂದು ಒಪ್ಪಂದಕ್ಕೆ ಬರಲು ಕಷ್ಟವೇನಿಲ್ಲ. ಈ ಮೂಲಕ ಶಾಶ್ವತ ಪರಿಹಾರವು ತಡವಿಲ್ಲದೆ ಪ್ರಕಟವಾದರೆ ನಿವೃತ್ತರು ನೆಮ್ಮದಿಯ ನಿಟ್ಟುಸಿರು ಬಿಟ್ಟಾರು. ಒಟ್ಟಿನಲ್ಲಿ ಎರಡೂ ಕಡೆ ಇಚ್ಛಾಶಕ್ತಿ ವ್ಯಕ್ತವಾಗಬೇಕಾದದ್ದು ಮುಖ್ಯ.

share
ಹರೀಶ್ ಕುಮಾರ್ ಕುಡ್ತಡ್ಕ
ಹರೀಶ್ ಕುಮಾರ್ ಕುಡ್ತಡ್ಕ
Next Story
X