Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಬಿಹಾರದಲ್ಲಿ ಮತಗಳನ್ನು ಖರೀದಿಸುವ...

ಬಿಹಾರದಲ್ಲಿ ಮತಗಳನ್ನು ಖರೀದಿಸುವ ಪ್ರಯತ್ನ ನಡೆಯುತ್ತಿದೆಯೇ?

ಪಿ.ಎಚ್. ಅರುಣ್ಪಿ.ಎಚ್. ಅರುಣ್25 Sept 2025 12:37 PM IST
share
ಬಿಹಾರದಲ್ಲಿ ಮತಗಳನ್ನು ಖರೀದಿಸುವ ಪ್ರಯತ್ನ ನಡೆಯುತ್ತಿದೆಯೇ?

ಬಿಹಾರದಲ್ಲಿ ಚುನಾವಣೆ ನಡೆಯಲಿರುವ ಹೊತ್ತಲ್ಲಿ ಮತದಾರರಿಗೆ ನಗದು ವಿತರಿಸಲಾಗುತ್ತಿರುವ ಸುದ್ದಿ ಬರುತ್ತಿದೆ.ಮತಗಳ್ಳತನದ ಗದ್ದಲ ತಣ್ಣಗಾಗಿಸಲು ಮತದಾರರ ಖಾತೆಗಳಿಗೆ ನಗದು ವರ್ಗಾವಣೆ ನಡೆದಿದೆಯೇ ಎಂಬ ಪ್ರಶ್ನೆಯೂ ಎದ್ದಿದೆ.

ಬಿಹಾರ ಸರಕಾರದ ಹಣದ ಒಂದು ಪಾಲು ಜನರ ಖಾತೆಗಳನ್ನು ತಲುಪುತ್ತಿದೆ. ಚುನಾವಣೆ ಬರುವ ಹೊತ್ತಿಗೆ ಸರಕಾರ ಎಲ್ಲಾ 7 ಕೋಟಿ ಮತದಾರರ ಜೇಬಿಗೆ ಅಥವಾ ಪ್ರತೀ ಮತದಾರರ ಕುಟುಂಬದ ಖಾತೆಗಳಿಗೆ ಹಣ ಜಮಾ ಮಾಡಿರುವಂತಿದೆ.

ಕೆಲವರು 1,000, ಕೆಲವರು 10,000 ಮತ್ತು ಕೆಲವರು 15,000 ರೂ. ಪಡೆಯುತ್ತಿ ದ್ದಾರೆ. ಕೆಲವರು ಪಿಂಚಣಿ, ಕೆಲವರು ಗೌರವಧನ, ಕೆಲವರು ಅನುದಾನ, ಕೆಲವರು ಟ್ಯಾಬ್ಲೆಟ್‌ಗಳು ಮತ್ತು ಕೆಲವರು ಸ್ಮಾರ್ಟ್‌ಫೋನ್‌ಗಳನ್ನು ಪಡೆಯುತ್ತಿದ್ದಾರೆ ಎಂದು ವರದಿಗಳಿವೆ.

ಜುಲೈ ಮತ್ತು ಸೆಪ್ಟಂಬರ್ ನಡುವೆ, ಬಿಹಾರ ಸರಕಾರ ಹಣ ವಿತರಣೆಗೆ ಹಲವು ಯೋಜನೆಗಳನ್ನು ನೆಪ ಮಾಡಿಕೊಂಡಿದೆ. ಹೊಸ ವರ್ಗದ ಜನರನ್ನು ಗುರುತಿಸಲಾಗುತ್ತಿದೆ.

ಕೆಲ ಸಂದರ್ಭಗಳಲ್ಲಿ ವಕೀಲರಿಗೆ ಸ್ಟೈಪೆಂಡ್ ಹೆಸರಿನಲ್ಲಿ ಹಣ ನೀಡಲಾಗುತ್ತಿದೆ. ಇನ್ನು ಕೆಲ ಸಂದರ್ಭಗಳಲ್ಲಿ 12ನೇ ತರಗತಿ ಪಾಸಾದವರಿಗೆಂದು ಹಣ ನೀಡಲಾಗುತ್ತಿದೆ.

ಚುನಾವಣೆಗೆ ಕೊನೆಯ ಮೂರು ತಿಂಗಳುಗಳಲ್ಲಿ ಬಿಹಾರದಲ್ಲಿ ಹಣ ವಿತರಿಸುತ್ತಿರುವ ವಿಧಾನ ಸಾರ್ವಜನಿಕ ಕಲ್ಯಾಣವನ್ನು ಗುರಿಯಾಗಿರಿಸಿಕೊಂಡಿಲ್ಲ.ಬದಲಾಗಿ, ಮತಗಳನ್ನು ಖರೀದಿಸಲು ರಾಜ್ಯ ಬಜೆಟ್ ಅನ್ನು ವ್ಯರ್ಥ ಮಾಡಲಾಗುತ್ತಿದೆ.

ಸೆಪ್ಟಂಬರ್ 17ರಂದು ಬಿಹಾರ ಸರಕಾರ 16 ಲಕ್ಷ ಕಾರ್ಮಿಕರ ಖಾತೆಗಳಿಗೆ 800 ಕೋಟಿ ರೂ. ಜಮಾ ಮಾಡಿದೆ. ಪ್ರತಿಯೊಬ್ಬ ಕಾರ್ಮಿಕರಿಗೂ ಸಮವಸ್ತ್ರ ಖರೀದಿಸಲು 5,000 ರೂ. ನೀಡಲಾಗಿದೆ.

ಬಿಹಾರದಲ್ಲಿ ಯಾವ ಕಾರ್ಮಿಕರು ಸಮವಸ್ತ್ರ ಧರಿಸಿ ಕೆಲಸಕ್ಕೆ ಹೋಗುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಬಟ್ಟೆ ಖರೀದಿಸುವ ಹೆಸರಿನಲ್ಲಿ 16 ಲಕ್ಷಕ್ಕೂ ಹೆಚ್ಚು ಕಾರ್ಮಿಕರಿಗೆ ತಲಾ 5,000 ರೂ. ವಿತರಿಸಲಾಗಿದೆ.

ಹೊಸ ವಕೀಲರಿಗೆ ತಿಂಗಳಿಗೆ 5,000 ರೂ. ಸ್ಟೈಪೆಂಡ್ ನೀಡಲಾಗುವುದು ಎಂದು ಬಿಜೆಪಿ ಪೋಸ್ಟರ್ ಹಾಕಿದೆ. ಜನವರಿ 1, 2024ರಿಂದ ಹೊಸದಾಗಿ ದಾಖಲಾದ ವಕೀಲರು ಮೂರು ವರ್ಷಗಳವರೆಗೆ ತಿಂಗಳಿಗೆ 5,000 ಪಡೆಯುತ್ತಾರೆ ಎಂದು ಅದು ಹೇಳುತ್ತದೆ.

ಹಾಗಾದರೆ ಈ ಸಹಾಯವನ್ನು ಎಲ್ಲಾ ತೆರಿಗೆದಾರರಿಗೆ ಏಕೆ ವಿಸ್ತರಿಸಬಾರದು?

ಸೆಪ್ಟಂಬರ್ 21ರಂದು ಬಿಹಾರ ಮಹಾದಲಿತ್ ವಿಕಾಸ್ ಮಿಷನ್‌ಗಾಗಿ ಕೆಲಸ ಮಾಡುವವರು ಟ್ಯಾಬ್ಲೆಟ್‌ಗಳನ್ನು ಖರೀದಿಸಲು 25,000 ಪಡೆಯುತ್ತಾರೆ. ಅವರ ಸಾರಿಗೆ ಭತ್ತೆಯನ್ನು 1,900ರಿಂದ 2,500 ರೂ.ಗೆ ಮತ್ತು ಸ್ಟೇಷನರಿ ಭತ್ತೆಯನ್ನು 900ರಿಂದ 1,500 ರೂ.ಗೆ ಹೆಚ್ಚಿಸಲಾಗಿದೆ.

ಶಿಕ್ಷಣ ಕಾರ್ಯಕರ್ತರು ಸ್ಮಾರ್ಟ್‌ಫೋನ್ ಖರೀದಿಸಲು 10,000 ರೂ. ಪಡೆಯುತ್ತಾರೆ.

ಒಂದೆಡೆ, ಮೋದಿ ಸರಕಾರ ಸ್ಟೇಷನರಿ ಮೇಲಿನ ಜಿಎಸ್‌ಟಿ ತೆಗೆದುಹಾಕಿರುವ ಬಗ್ಗೆ ತನ್ನ ಬೆನ್ನು ತಾನೇ ತಟ್ಟಿಕೊಳ್ಳುತ್ತಿರುವಾಗಲೇ, ಇನ್ನೊಂದೆಡೆ ಚುನಾವಣೆಗಳ ಹಿನ್ನೆಲೆಯಲ್ಲಿ ಬಿಹಾರ ಸರಕಾರ ಸ್ಟೇಷನರಿ ಭತ್ತೆಯನ್ನು ಹೆಚ್ಚಿಸುತ್ತಿದೆ.

ಇವು ಕೆಲವೇ ಉದಾಹರಣೆಗಳಾಗಿವೆ.

ಬಿಹಾರ ಸರಕಾರ ಲಕ್ಷಾಂತರ ಜನರಿಗೆ ವಿತರಿಸಲು ಹಣ ಎಲ್ಲಿಂದ ಪಡೆಯುತ್ತಿದೆ ಎಂಬುದರ ಬಗ್ಗೆ ಯಾರೂ ಯೋಚಿಸುತ್ತಿಲ್ಲ.

ಐದು ವರ್ಷಗಳ ಕಾಲ ಏನೂ ಮಾಡದೆ ಕಳೆದ ಸರಕಾರಗಳು ಮತ್ತೊಂದು ಚುನಾವಣೆ ಬಂತೆನ್ನುವಾಗ ಹಣ ಹಂಚಲು ನಿಂತುಬಿಡುತ್ತವೆ.

ನಿತೀಶ್ ಕುಮಾರ್ 2005ರಿಂದ ಬಿಹಾರದ ಮುಖ್ಯಮಂತ್ರಿಯಾಗಿದ್ದಾರೆ. ಅವರ ಅಭಿವೃದ್ಧಿ ಬಿಹಾರದ ಜನರ ಜೀವನವನ್ನು ಬದಲಿಸಿದ್ದರೆ, ಆರ್ಥಿಕ ಪ್ರಗತಿ ಆಗಿದ್ದರೆ, ಉದ್ಯೋಗ ಸೃಷ್ಟಿಸಿದ್ದರೆ, ಬಿಹಾರದ 94 ಲಕ್ಷ ಕುಟುಂಬಗಳು ರೂ. 6,000 ಮಾತ್ರ ಗಳಿಸುವ ಸ್ಥಿತಿ ಏಕೆ ಇದೆ?

ಬಡತನದಿಂದ ಪಾರಾಗಲು ಯಾವುದೇ ಆಯ್ಕೆ ಇಲ್ಲದ ಜನರಿಗಾಗಿ ಹಣ ವಿತರಿಸಲಾಗುತ್ತಿದೆಯೇ? ಹಾಗಾದರೆ, ಅಭಿವೃದ್ಧಿಯ ಬಗ್ಗೆ ಮಾತನಾಡುವುದರಲ್ಲಿ ಅರ್ಥವೇನು?

ಅವರ ಖಾತೆಗಳಿಗೆ ಸಾವಿರದಿಂದ 10,000 ರೂ. ಜಮಾ ಮಾಡಿ, ಮತ ಖರೀದಿಸಲಾಗುತ್ತದೆಯೆ?

ಅವರ ಜೀವನಕ್ಕೆ ಶಾಶ್ವತ ವ್ಯವಸ್ಥೆ ಇಲ್ಲದಿರುವಾಗ, ಮತದಾನದ ಸಮಯದಲ್ಲಿ ಮಾತ್ರ ಹಣ ವಿತರಿಸಲಾಗುತ್ತದೆ. ಮತದಾನದ ಮೊದಲು ಮತ್ತು ಚುನಾವಣೆಯ ನಂತರ ಅವರ ಜೀವನ ಏನು ಎಂಬುದರ ಬಗ್ಗೆ ಯಾರೂ ಕಾಳಜಿ ವಹಿಸುತ್ತಾರೆಯೇ?

6,000 ಕೂಡ ಗಳಿಸದ ಜನರ ಖಾತೆಗಳಿಗೆ ಇದ್ದಕ್ಕಿದ್ದಂತೆ 5,000, 10,000, 15,000 ರೂ.ಗಳನ್ನು ಜಮಾ ಮಾಡಲು ಪ್ರಾರಂಭಿಸಿದರೆ, ಕಳೆದ 20 ವರ್ಷಗಳಲ್ಲಿ ಅವರಿಗೆ ಏನಾಯಿತು ಎಂಬುದನ್ನು ಜನರು ಮರೆತುಬಿಡುತ್ತಾರೆ.

ಬಿಹಾರದಲ್ಲಿ ವೃದ್ಧರು 400 ರೂ. ಪಿಂಚಣಿಯಲ್ಲಿ ಈವರೆಗೆ ಹೇಗೆ ಬದುಕುಳಿದರು ಎಂದು ಯಾರೂ ಕೇಳುವುದಿಲ್ಲ. ಚುನಾವಣೆಗಳ ಕಾರಣದಿಂದಾಗಿ, ಅದನ್ನು ತಿಂಗಳಿಗೆ 1,100 ರೂ.ಗಳಿಗೆ ಹೆಚ್ಚಿಸಲಾಗಿದೆ ಮತ್ತು 1 ಕೋಟಿಗೂ ಹೆಚ್ಚು ಜನರ ಖಾತೆಗಳಿಗೆ ಹಣ ವರ್ಗಾಯಿಸಲಾಗಿದೆ. ವೃದ್ಧಾಪ್ಯ ಪಿಂಚಣಿ, ವಿಧವಾ ಪಿಂಚಣಿ, ಅಂಗವೈಕಲ್ಯ ಪಿಂಚಣಿಗೆ ಹಣ ಖರ್ಚು ಮಾಡಲಾಗಿದೆ.

ಹೆಚ್ಚಿದ ನಿಧಿಯಿಂದ ಸರಕಾರ ಹೆಚ್ಚುವರಿಯಾಗಿ 777 ಕೋಟಿ ರೂ.ಗಳನ್ನು ಖರ್ಚು ಮಾಡಬೇಕಾಗುತ್ತದೆ. ಇದು ವಾರ್ಷಿಕ ಬಜೆಟ್ ಅನ್ನು 9,300 ಕೋಟಿ ರೂ.ಗಳಿಗೆ ಹೆಚ್ಚಿಸುತ್ತದೆ.

ನಿತೀಶ್ ಕುಮಾರ್ ಸೆಪ್ಟಂಬರ್ 21ರಂದು ಪಾಟ್ನಾದಲ್ಲಿ ಭವ್ಯವಾದ ವಿಜ್ಞಾನ ನಗರ ಕ್ಯಾಂಪಸ್ ಅನ್ನು ಉದ್ಘಾಟಿಸಿದರು. ಇದನ್ನು ನೋಡಿದಾಗ, ಬಿಹಾರ ವಿಜ್ಞಾನ ಜಗತ್ತಿನಲ್ಲಿ ಸದ್ದು ಮಾಡಲಿದೆ ಎಂದು ಯಾರಾದರೂ ಭಾವಿಸುತ್ತಾರೆ. ಆದರೆ ಬಿಹಾರದ ವಾಸ್ತವ ಬೇರೆಯೇ ಇದೆ.

ಒಂದು ಕಾಲದಲ್ಲಿ ವಿಜ್ಞಾನ ಕಾಲೇಜಿಗೆ ನೆಲೆಯಾಗಿದ್ದ ಪಾಟ್ನಾದ ಕಾಲೇಜು ಇಂದು ರಾಷ್ಟ್ರೀಯ ಶ್ರೇಯಾಂಕದಲ್ಲಿ ಬಿ ಮತ್ತು ಸಿ-ಗ್ರೇಡ್ ಕಾಲೇಜುಗಳಲ್ಲಿ ಸ್ಥಾನ ಪಡೆದಿದೆ.

ಇನ್ನೊಂದೆಡೆ, ಬಿಹಾರದ ಜನರು ಕಳಪೆ ಆರ್ಥಿಕ ಸ್ಥಿತಿಯಲ್ಲಿದ್ದಾರೆ. ಯಾವುದೇ ಉದ್ಯೋಗಗಳಿಲ್ಲ, ಆದರೆ ಈಗ ಯುವಜನರ ಹೆಸರಿನಲ್ಲಿ ಹಣ ವಿತರಿಸಲಾಗುತ್ತಿದೆ.

ಜುಲೈ 1, 2025ರಂದು ನಿತೀಶ್ ಕುಮಾರ್ ಸರಕಾರ ಹೊಸ ಯೋಜನೆ ಪ್ರಾರಂಭಿಸಿತು. ಈ ಯೋಜನೆ ಯಡಿಯಲ್ಲಿ 12ನೇ ತರಗತಿಯ ವಿದ್ಯಾರ್ಥಿಗಳು ತಿಂಗಳಿಗೆ 4,000 ರೂ. ಪಡೆಯುತ್ತಾರೆ. ಐಟಿಐ ಡಿಪ್ಲೊಮಾ ಮಾಡಿರುವವರು ತಿಂಗಳಿಗೆ 5,000 ಮತ್ತು ಬಿಎ, ಎಂಎ ಮಾಡಿರುವವರು ತಿಂಗಳಿಗೆ 6,000 ರೂ. ಪಡೆಯುತ್ತಾರೆ.

ಮುಖ್ಯಮಂತ್ರಿಗಳ ಸ್ವಸಹಾಯ ಭತ್ತೆ ಯೋಜನೆಯಡಿ, 20 ರಿಂದ 25 ವರ್ಷ ವಯಸ್ಸಿನ ನಿರುದ್ಯೋಗಿ ಯುವಕರಿಗೆ ಎರಡು ವರ್ಷಗಳ ಕಾಲ ತಿಂಗಳಿಗೆ 1,000 ರೂ. ನೀಡಲಾಗುತ್ತದೆ.

ಬಿಹಾರ ಸರಕಾರ ಇದಕ್ಕಾಗಿ 2,850 ಕೋಟಿ ರೂ. ಖರ್ಚು ಮಾಡುತ್ತದೆ.

ಅಧ್ಯಯನ ಮಾಡುವವರಿಗೆ 6,000 ಮತ್ತು ಉದ್ಯೋಗಕ್ಕಾಗಿ ಪ್ರಯತ್ನಿಸುವವರಿಗೆ 1,000 ರೂ. ಸಿಗುತ್ತದೆ.

ವರ್ಷದ ಉಳಿದ ದಿನಗಳಲ್ಲಿ ಯುವಕರು ನೇಮಕಾತಿ ಪ್ರಯತ್ನಗಳಲ್ಲೇ ಕಳೆಯಬೇಕಿರುತ್ತದೆ. ಈಗ ಚುನಾವಣೆಗಳು ಹತ್ತಿರವಾಗಿರುವುದರಿಂದ, ಅವರು ತಮ್ಮ ಜೇಬು ತುಂಬಿಸಿಕೊಳ್ಳಬಹುದು.

ಈ ಯೋಜನೆಗಳ ಮೂಲಕ ಯುವಕರನ್ನು ಸಬಲೀಕರಣಗೊಳಿಸಲು ಬಯಸುವುದಾಗಿ ನಿತೀಶ್ ಕುಮಾರ್ ಬರೆದಿದ್ದಾರೆ. ಈ ಹಣ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆಯೇ?

ಅವರ ಸರಕಾರ 20 ವರ್ಷಗಳಲ್ಲಿ ಅವಕಾಶಗಳನ್ನು ಸೃಷ್ಟಿಸದಿದ್ದರೆ, ಈಗ ತಿಂಗಳಿಗೆ 1,000 ರೂ. ಕೊಡುವುದು ಉದ್ಯೋಗಗಳನ್ನು ಸೃಷ್ಟಿಸುತ್ತದೆಯೆ?

ಜಾತಿ ಜನಗಣತಿ ವರದಿ ಪ್ರಕಾರ, ಬಿಹಾರದಲ್ಲಿ ಕಾರ್ಮಿಕರ ಅತಿದೊಡ್ಡ ವರ್ಗವೆಂದರೆ ಮೇಸ್ತ್ರಿಗಳು, ಕಾರ್ಮಿಕರು ಮತ್ತು ಇತರರು. ಬಿಹಾರದ ದುಡಿಯುವ ಜನಸಂಖ್ಯೆಯ ಶೇ. 16.73 ಜನರು ಮೇಸ್ತ್ರಿ ಮತ್ತು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಇದು ನಿತೀಶ್ ಕುಮಾರ್ ಸಾಧಿಸಿದ ಅಭಿವೃದ್ಧಿ.

ದೀರ್ಘ ಮತ್ತು ಸ್ಥಿರವಾದ ಆಡಳಿತದ ನಂತರವೂ ಶಾಲಾ ಮತ್ತು ಕಾಲೇಜು ಶಿಕ್ಷಣ ಎಷ್ಟು ಹಾಳಾಗಿದೆ ಎಂಬುದನ್ನು ಇದು ತೋರಿಸುತ್ತದೆ.

ಜಾತಿ ಜನಗಣತಿ, ಬಿಹಾರದಲ್ಲಿ ಸರಕಾರಿ ವಲಯದಲ್ಲಿ ಕೇವಲ 20 ಲಕ್ಷ ಜನರು ಮಾತ್ರ ಕೆಲಸ ಮಾಡುತ್ತಿದ್ದಾರೆ ಎಂದು ಹೇಳುತ್ತದೆ.

ಅಲ್ಲಿ ಸಂಘಟಿತ ವಲಯದಲ್ಲಿ ಖಾಸಗಿ ಉದ್ಯೋಗಿಗಳ ಸಂಖ್ಯೆ 15,97,000.

ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಜನರ ಸಂಖ್ಯೆ ಸರಿಸುಮಾರು 28 ಲಕ್ಷ.

ಹೆಚ್ಚಿನ ಬಿಹಾರಿಗಳು ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಸಂಘಟಿತ ವಲಯದಲ್ಲಿ ಸಾಮಾಜಿಕ ಭದ್ರತೆ ಇಲ್ಲ. ಗಳಿಕೆ ತುಂಬಾ ಕಡಿಮೆ ಮತ್ತು ಕೆಲಸ ವಿಪರೀತ.

20 ವರ್ಷಗಳಲ್ಲಿ ತಮಗೆ ಏನೂ ಸಿಕ್ಕಿಲ್ಲ ಎಂದು ಅವರಿಗೆ ತಿಳಿದಿದೆ ಮತ್ತು ಅವರ ಪರಿಸ್ಥಿತಿ ಹದಗೆಟ್ಟಿದೆ.

ಆದರೆ, ಈಗ ಏನಾಗುತ್ತದೆ?

ಬಿಹಾರ ಸರಕಾರ 853 ಪಂಚಾಯತ್‌ಗಳಲ್ಲಿ 4,260 ಕೋಟಿ ರೂ. ವೆಚ್ಚದಲ್ಲಿ ಮದುವೆ ಮಂಟಪಗಳನ್ನು ನಿರ್ಮಿಸುವುದಾಗಿ ಘೋಷಿಸಿದೆ. ಜನರು ಕಷ್ಟಪಟ್ಟು ಜೀವನ ಸಾಗಿಸಲು ಸಾಧ್ಯವಾಗದ ಬಡ ರಾಜ್ಯದಲ್ಲಿ, 4,200 ಕೋಟಿ ರೂ. ಗಳನ್ನು ಮದುವೆ ಮಂಟಪಗಳಿಗೆ ಖರ್ಚು ಮಾಡಲಾಗುತ್ತಿದೆ.

ಇದರಲ್ಲಿ ಯಾರಿಗೂ ಹಾನಿ ಕಾಣುತ್ತಿಲ್ಲವೇ?

ಸೆಪ್ಟಂಬರ್ 20ರಂದು ಮುಖ್ಯಮಂತ್ರಿ ನಿತೀಶ್ ಕುಮಾರ್ 49 ಲಕ್ಷ ಫಲಾನುಭವಿಗಳ ಖಾತೆಗಳಿಗೆ 2,920 ಕೋಟಿ ರೂ. ವರ್ಗಾಯಿಸಿದರು. ಈ ಫಲಾನುಭವಿಗಳು ಶಿಕ್ಷಣ ಯೋಜನೆಗಳಿಂದ ಹಣವನ್ನು ಪಡೆದರು.

ಹಳೆಯ ಯೋಜನೆಗಳಿಗೆ ಹಣ ಹರಿಸಲಾಗುತ್ತಿರುವಾಗ, ಹೊಸದನ್ನು ಪ್ರಾರಂಭಿಸಲಾಗುತ್ತಿದೆ. ಹಣವನ್ನು ವಿತರಿಸಲು ಯೋಜನೆಗಳನ್ನು ತರಲಾಗುತ್ತಿದೆ.

1 ಕೋಟಿಗಿಂತ ಸ್ವಲ್ಪ ಹೆಚ್ಚು ಮೌಲ್ಯದ ಯೋಜನೆಯಡಿಯಲ್ಲಿ ಗುರುಗಳು ತಿಂಗಳಿಗೆ 15,000, ಜೊತೆಗಾರರು 7,500 ಮತ್ತು ಶಿಷ್ಯರು 3,000 ಪಡೆಯುತ್ತಾರೆ.

ಈ ಯೋಜನೆಯನ್ನು ಸಹ ಸೆಪ್ಟಂಬರ್‌ನಲ್ಲಿ ಪ್ರಾರಂಭಿಸಲಾಯಿತು. ಇದು ಉತ್ತಮ ಯೋಜನೆ. ಆದರೆ ಇದನ್ನು ಐದು ವರ್ಷಗಳ ಹಿಂದೆ ಅಥವಾ ಅದಕ್ಕಿಂತ ಮೊದಲೇ ಪ್ರಾರಂಭಿಸಬೇಕಿತ್ತಲ್ಲವೇ?

ಕಲಾವಿದರ ಪಿಂಚಣಿಗಾಗಿ ಸಿಎಂ ಕಲಾವಿದರ ಪಿಂಚಣಿ ಯೋಜನೆಯನ್ನು ಸಹ ಪ್ರಾರಂಭಿಸಲಾಗಿದೆ. ಇದರ ಬಜೆಟ್ 1 ಕೋಟಿ ರೂ.

ಪತ್ರಕರ್ತರ ಪಿಂಚಣಿಗಳನ್ನು ಸಹ ವ್ಯವಸ್ಥೆ ಮಾಡಲಾಗಿದೆ. ಜುಲೈನಲ್ಲಿ ಬಿಹಾರ ಪತ್ರಕರ್ತ ಸಮ್ಮಾನ್ ಪಿಂಚಣಿ ಯೋಜನೆಯಡಿಯಲ್ಲಿ ಎಲ್ಲಾ ಅರ್ಹ ಪತ್ರಕರ್ತರು 6,000 ಬದಲಿಗೆ 15,000 ರೂ. ಮಾಸಿಕ ಪಿಂಚಣಿ ಪಡೆಯುತ್ತಾರೆ.

ಮಾಧ್ಯಮ ಶಿಥಿಲಗೊಂಡಿರುವ, ಕೇವಲ ಹೆಸರಾಗಿ ಮಾರ್ಪಟ್ಟಿರುವ ದೇಶದಲ್ಲಿ, ಪತ್ರಕರ್ತರಿಗೆ ಪಿಂಚಣಿ ಮೊತ್ತ ಹೆಚ್ಚಿಸಲಾಗಿದೆ.

ಬಜೆಟ್ ಕೊರತೆ ನೆಪ ಮಾಡಿ ತನ್ನ ಉದ್ಯೋಗಿಗಳಿಗೆ ಪಿಂಚಣಿ ನೀಡಲು ನಿರಾಕರಿಸುವ ಸರಕಾರ, ಈಗ ವಿಭಿನ್ನ ಪ್ರಯೋಜನಗಳನ್ನು ಒದಗಿಸಲು ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆ.

ಎಲ್ಲರಿಗೂ ಪಿಂಚಣಿ ನೀಡಬಹುದಾದರೆ, ತನ್ನ ಸ್ವಂತ ಉದ್ಯೋಗಿಗಳಿಗೆ ಹಳೆಯ ಪಿಂಚಣಿ ಯೋಜನೆಯನ್ನು ಏಕೆ ಮರುಪ್ರಾರಂಭಿಸಲು ಸಾಧ್ಯವಿಲ್ಲ?

ಕಳೆದ ಮೂರು ತಿಂಗಳುಗಳಲ್ಲಿ ಬಿಹಾರದ ಬಡ ಜನಸಂಖ್ಯೆ ವಿವಿಧ ರೀತಿಯ ಸಹಾಯದ ಮೂಲಕ ಎಷ್ಟು ಹಣ ಪಡೆದಿದೆ ಎಂದು ಊಹಿಸಲು ಸಾಧ್ಯವಿಲ್ಲ.

ಸೆಪ್ಟಂಬರ್ 17ರಂದು, 16 ಲಕ್ಷ ಕಾರ್ಮಿಕರ ಖಾತೆಗಳಿಗೆ 800 ಕೋಟಿ ರೂ.ಗಳನ್ನು ಹಾಕಲಾಯಿತು. 20ರಂದು 49 ಲಕ್ಷ ಫಲಾನುಭವಿಗಳ ಖಾತೆಗಳಿಗೆ 2,920 ಕೋಟಿ ರೂ. ವರ್ಗಾಯಿಸಲಾಯಿತು ಹಾಗೂ 26ರಂದು 5,000 ಕೋಟಿ ರೂ.ಗಳನ್ನು 50 ಲಕ್ಷ ಮಹಿಳೆಯರ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ.

ಸೆಪ್ಟಂಬರ್ 17ರಿಂದ 26ರ ಅವಧಿಯಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಸುಮಾರು 1 ಕೋಟಿ ಜನರ ಖಾತೆಗಳಿಗೆ ಸುಮಾರು 10,000 ಕೋಟಿ ರೂ.ಗಳನ್ನು ವಿತರಿಸಲಾಗಿದೆ ಅಥವಾ ವಿತರಿಸಲಾಗುತ್ತದೆ.

ಆರು ರೀತಿಯ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ಅಡಿಯಲ್ಲಿ 1.1 ಕೋಟಿ ಫಲಾನುಭವಿಗಳನ್ನು ಇದಕ್ಕೆ ಸೇರಿಸಿದರೆ, ಈ ಸಂಖ್ಯೆ ಸುಮಾರು 2.25 ಕೋಟಿ ತಲುಪುತ್ತದೆ.

ಪ್ರತಿದಿನ ಸಾವಿರಾರು ಕೋಟಿ ಮೌಲ್ಯದ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಲಾಗುತ್ತಿದೆ.

ವರದಿಯ ಪ್ರಕಾರ, ಕಳೆದ ಎರಡು ತಿಂಗಳಲ್ಲಿ ಬಿಹಾರ ಸರಕಾರ ಮಾಡಿದ ಘೋಷಣೆಗಳ ವಾರ್ಷಿಕ ಹೊರೆ ರೂ. 33,926 ಕೋಟಿಯಾಗಿದೆ. ಇದು ಮುಂದಿನ ವರ್ಷದ ಬಜೆಟ್‌ನಲ್ಲಿ ಭಾರವಾಗಲಿದೆ.

ಸರಕಾರ ಈ ಹೊರೆಯ ಬಗ್ಗೆ ತಿಳಿದಿದೆ ಮತ್ತು 16,000 ಕೋಟಿ ರೂ. ಸಾಲ ಪಡೆಯಲು ಈಗಾಗಲೇ ಸಿದ್ಧವಾಗಿದೆ ಎಂದು ವರದಿ ಹೇಳುತ್ತದೆ. ಇದು ಕಳೆದ ವರ್ಷದ ಇದೇ ಅವಧಿಗಿಂತ 4,000 ಕೋಟಿ ರೂ. ಹೆಚ್ಚಾಗಿದೆ.

ಚುನಾವಣೆಗಳನ್ನು ಗೆಲ್ಲಲು ಬಿಹಾರವನ್ನು ವಿನಾಶದತ್ತ ತಳ್ಳಲಾಗುತ್ತಿದೆಯೇ?

share
ಪಿ.ಎಚ್. ಅರುಣ್
ಪಿ.ಎಚ್. ಅರುಣ್
Next Story
X