Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಈ ದುರಂತ ಸರಣಿಗೆ ಕೊನೆಯೇ ಇಲ್ಲವೇ?

ಈ ದುರಂತ ಸರಣಿಗೆ ಕೊನೆಯೇ ಇಲ್ಲವೇ?

ಹರೀಶ್ ಎಚ್.ಕೆ.ಹರೀಶ್ ಎಚ್.ಕೆ.22 Sept 2026 12:39 PM IST
share
ಈ ದುರಂತ ಸರಣಿಗೆ ಕೊನೆಯೇ ಇಲ್ಲವೇ?

ಐಐಟಿಯಂಥ ಅತ್ಯುನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ತಾರತಮ್ಯ ಮುಗಿಯದ ಪಿಡುಗು ಎಂಬುದಕ್ಕೆ ಮತ್ತೊಮ್ಮೆ ಸಾಕ್ಷಿ ಸಿಕ್ಕಿದೆ.

ಮುಂಬೈನ ಐಐಟಿ ಕ್ಯಾಂಪಸ್‌ನಲ್ಲಿ ಬಿ.ಟೆಕ್. ದ್ವಿತೀಯ ವರ್ಷದ ವಿದ್ಯಾರ್ಥಿ ಸಾಹಿಲ್ ವಾಕೋಡೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೊನ್ನೆ ಸೆಪ್ಟಂಬರ್ 18ರಂದು ಈ ಘಟನೆ ನಡೆದಿದೆ. ಇದು ಕ್ಯಾಂಪಸ್‌ನಲ್ಲಿ ತೀವ್ರ ಆಕ್ರೋಶ ಮತ್ತು ಪ್ರತಿಭಟನೆಗೆ ಕಾರಣವಾಗಿದೆ.

ಪರೀಕ್ಷೆ ವೇಳೆ ಮೊಬೈಲ್ ಫೋನ್ ಬಳಸಿ, ಎಐ ಮೂಲಕ ಉತ್ತರಗಳನ್ನು ಹುಡುಕಲು ಸಾಹಿಲ್ ಯತ್ನಿಸಿದ್ದರು. ಪರೀಕ್ಷಾ ಮೇಲ್ವಿಚಾರಣೆಯಲ್ಲಿದ್ದ ಪ್ರೊ. ಸೂರ್ಯನಾರಾಯಣ ದುಲ್ಲಾ ಅವರು ಅದನ್ನು ಗಮನಿಸಿ, ಸಾಹಿಲ್‌ಗೆ ಜಾತಿ ನಿಂದನೆ ಮಾಡಿದ್ದರು ಎಂದು ಆರೋಪಿಸಲಾಗಿದೆ. ಇದರ ಬೆನ್ನಲ್ಲೇ ಆತ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರೊಫೆಸರ್ ದುಲ್ಲಾ ಅವರು ಕಳೆದ ಮೂರು ತಿಂಗಳುಗಳಿಂದ ಸಾಹಿಲ್ ಅವರಿಗೆ ಜಾತಿ ಆಧಾರದ ಮೇಲೆ ನಿರಂತರ ಕಿರುಕುಳ ನೀಡುತ್ತಿದ್ದರು ಮತ್ತು ಪರೀಕ್ಷೆಯ ವೇಳೆ ಅವರನ್ನು ಹೊರಗೆ ಕರೆದೊಯ್ದು ಸಸ್ಪೆಂಡ್ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಪ್ರೊಫೆಸರ್ ನೀಡಿದ ಕಿರುಕುಳದಿಂದಲೇ ಸಾಹಿಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಪೋಷಕರ ದೂರು.

ಸಾಹಿಲ್ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಪ್ರೊ. ಸೂರ್ಯನಾರಾಯಣ ದುಲ್ಲಾ ಮತ್ತು ಇತರ ಹಿರಿಯ ಅಧಿಕಾರಿಗಳ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಎಫ್‌ಐಆರ್ ದಾಖಲಿಸಲಾಗಿದೆ.

ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯಿಸಿ ಸಾಹಿಲ್ ಪೋಷಕರು ರಾಜವಾಡಿ ಆಸ್ಪತ್ರೆ ಶವಾಗಾರದಿಂದ ಮೃತದೇಹ ಪಡೆಯಲು ನಿರಾಕರಿಸಿ ಹಲವು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ್ದಾರೆ.

ಬಳಿಕ, ಪ್ರಕರಣದ ತನಿಖೆಯನ್ನು ಕ್ರೈಂ ಬ್ರಾಂಚ್‌ಗೆ ಹಸ್ತಾಂತರಿಸುವುದಾಗಿ ಪೊಲೀಸ್ ಉನ್ನತಾಧಿಕಾರಿಗಳು ಭರವಸೆ ನೀಡಿದ ಬಳಿಕ ಪೋಷಕರು ಮೃತದೇಹವನ್ನು ಪಡೆದುಕೊಂಡರು.

ಐಐಟಿ ಕ್ಯಾಂಪಸ್‌ನಲ್ಲಿ ನಿರಂತರವಾಗಿ ಇಂತಹ ಘಟನೆಗಳು ನಡೆಯುತ್ತಿದ್ದು, ಈ ವರ್ಷದಲ್ಲೇ ಇದು ಮೂರನೇ ಆತ್ಮಹತ್ಯೆ ಪ್ರಕರಣವೆನ್ನಲಾಗಿದೆ. ಆದರೆ, ಕ್ಯಾಂಪಸ್‌ನಲ್ಲಿನ ಸರಣಿ ಆತ್ಮಹತ್ಯೆ ಮತ್ತು ಅದಕ್ಕೆ ಕ್ಯಾಂಪಸ್‌ನಲ್ಲಿನ ಕಿರುಕುಳ ಕಾರಣವೆಂಬ ಗಂಭೀರ ಆರೋಪಗಳನ್ನು ಐಐಟಿ ಬಾಂಬೆ ಆಡಳಿತ ಮಂಡಳಿ ನಿರಾಕರಿಸಿದೆ. ಕ್ಯಾಂಪಸ್‌ನಲ್ಲಿ ಯಾವುದೇ ರೀತಿಯ ಜಾತಿ ಆಧಾರಿತ ತಾರತಮ್ಯವಿಲ್ಲ ಎಂದು ಅದು ತನ್ನ ಹಳೆಯ ಮಾತನ್ನೇ ಮತ್ತೆ ಹೇಳಿದೆ.

ಭಾರತೀಯ ಉನ್ನತ ಶಿಕ್ಷಣದಲ್ಲಿ ಜಾತಿ ಆಧಾರಿತ ತಾರತಮ್ಯ ಒಂದು ವ್ಯವಸ್ಥಿತ ಸಮಸ್ಯೆ.

ದಲಿತ, ಬುಡಕಟ್ಟು ಮತ್ತಿತರ ಅಂಚಿನಲ್ಲಿರುವ ಸಮುದಾಯಗಳ ಅನೇಕ ವಿದ್ಯಾರ್ಥಿಗಳು ಐಐಟಿಗಳು ಮತ್ತು ಐಐಎಂಗಳಂತಹ ಗಣ್ಯ ಸಂಸ್ಥೆಗಳಲ್ಲಿ ಕಿರುಕುಳ, ಪರಕೀಯತೆ ಮತ್ತು ಬಹಿಷ್ಕಾರವನ್ನು ಎದುರಿಸುತ್ತಲೇ ಇದ್ದಾರೆ.

ಇದು ಆತ್ಮಹತ್ಯೆಯಿಂದ ದುರಂತ ಸಾವುಗಳಿಗೆ ಕಾರಣವಾಗುತ್ತದೆ. ಇದನ್ನು ಸಾಮಾನ್ಯವಾಗಿ ಸಾಂಸ್ಥಿಕ ಹತ್ಯೆಗಳು ಎಂದು ವಿವರಿಸಲಾಗುತ್ತದೆ.

ಐಐಟಿ ಬಾಂಬೆ ವಿದ್ಯಾರ್ಥಿಯಾಗಿದ್ದ ಅನಿಕೇತ್ ಅಂಬೋರ್ 2014ರಲ್ಲಿ ಆತ್ಮಹತ್ಯೆ ಮಾಡಿಕೊಂಡರು.

ಹೈದರಾಬಾದ್ ವಿಶ್ವವಿದ್ಯಾನಿಲಯದ ರೋಹಿತ್ ವೇಮುಲಾ 2016ರಲ್ಲಿ ಜಾತಿ ತಾರತಮ್ಯದ ಕರಾಳತೆಗೆ ಬಲಿಯಾದರು.

ಮುಂಬೈನ ಟಿಎನ್ ಟೋಪಿವಾಲಾ ರಾಷ್ಟ್ರೀಯ ವೈದ್ಯಕೀಯ ಕಾಲೇಜಿನ ವೈದ್ಯೆಯಾಗಿದ್ದ ಪಾಯಲ್ ತಡ್ವಿ 2019ರಲ್ಲಿ ಆತ್ಮಹತ್ಯೆ ಮಾಡಿಕೊಂಡರು.

ಐಐಟಿ ಬಾಂಬೆ ವಿದ್ಯಾರ್ಥಿ ದರ್ಶನ್ ಸೋಲಂಕಿ 2023ರಲ್ಲಿ ಪ್ರಾಣ ಕಳೆದುಕೊಂಡರು.

ಐಐಟಿಗಳಲ್ಲಿ ಹೇಗೆಲ್ಲಾ ಜಾತಿ ತಾರತಮ್ಯ ನಡೆಯುತ್ತಿದೆ, ಹೇಗೆ ದಲಿತ ವಿದ್ಯಾರ್ಥಿಗಳನ್ನು ನಿಕೃಷ್ಟವಾಗಿ ಕಾಣಲಾಗುತ್ತಿದೆ, ಹೇಗೆ ಅವರು ನಿಂದನೆಗೊಳಗಾಗುತ್ತ ಪರಕೀಯತೆ ಅನುಭವಿಸಬೇಕಾಗಿದೆ ಎಂಬುದರ ಆಳ-ಅಗಲವನ್ನು ಇಂಥ ಆತ್ಮಹತ್ಯೆಗಳು ಮತ್ತೆ ಮತ್ತೆ ಸಾರಿ ಹೇಳುತ್ತಲೇ ಇವೆ.

ಐಐಟಿಗಳಲ್ಲಿ ಸಾಫ್ಟ್ ಸ್ಕಿಲ್ಸ್, ಭಾಷಾ ಸಾಮರ್ಥ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಸಾಮರ್ಥ್ಯ ಇವೆಲ್ಲವೂ ಪ್ರಾಮುಖ್ಯತೆ ಪಡೆಯುತ್ತವೆ.

ಆದರೆ ಗ್ರಾಮೀಣ ಹಿನ್ನೆಲೆಯ ದಲಿತ ವಿದ್ಯಾರ್ಥಿಗಳು ಇದೆಲ್ಲದರೆದುರು ಕಷ್ಟಪಡುತ್ತಾರೆ. ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವೂ ಅಧ್ಯಾಪಕರಿಂದ ನಡೆಯುವುದಿಲ್ಲ.

ಮೇಲ್ಜಾತಿಯ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡರೆ, ಆಗ ಆ ವಿದ್ಯಾರ್ಥಿಯ ಮಾನಸಿಕ ಸ್ಥಿತಿ ಬಗ್ಗೆ ಮಾತನಾಡಲಾಗುತ್ತದೆ. ಅದೇ ದಲಿತ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡರೆ, ಶೈಕ್ಷಣಿಕ ಒತ್ತಡ ಎದುರಿಸುವ ಸಾಮರ್ಥ್ಯ ಇರಲಿಲ್ಲ ಎಂದುಬಿಡಲಾಗುತ್ತದೆ.

ಇಂಥ ತಾರತಮ್ಯಗಳಿಗೆ ಕೊನೆಯೇ ಇಲ್ಲವೆಂದು ವರದಿಗಳು ಹೇಳುತ್ತವೆ.

ಯುಜಿಸಿ ವರದಿ ಪ್ರಕಾರ, ದೇಶದ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ನಡೆದ ಜಾತಿತಾರತಮ್ಯದ ಕುರಿತು ದಾಖಲಾಗುತ್ತಿರುವ ದೂರುಗಳಲ್ಲಿ ಕಳೆದ 5 ವರ್ಷಗಳಲ್ಲಿ ಕನಿಷ್ಠ ಶೇ. 118 ಹೆಚ್ಚಳವಾಗಿದೆ.

2019-20ರಲ್ಲಿ ಜಾತಿತಾರತಮ್ಯದ 173 ದೂರುಗಳು ದಾಖಲಾಗಿದ್ದವು. 2020-21ರಲ್ಲಿ 182, 2021-22ರಲ್ಲಿ 186 ಮತ್ತು 2022-23ರಲ್ಲಿ 241, 2023-24 ರಲ್ಲಿ 378 ದೂರುಗಳು ಬಂದಿದ್ದವು.

2019ರಿಂದ 2024ರವರೆಗಿನ ಅವಧಿಯಲ್ಲಿ ದೇಶದ 704 ವಿವಿಗಳು ಹಾಗೂ 1,553 ಕಾಲೇಜುಗಳಿಂದ ಜಾತಿ ತಾರತಮ್ಯದ ಒಟ್ಟು 1,160 ದೂರುಗಳು ಬಂದಿವೆ ಎಂದು ಅಂಕಿಅಂಶಗಳು ಹೇಳುತ್ತವೆ. ಇವುಗಳಲ್ಲಿ, 1,052 ದೂರುಗಳನ್ನು ಪರಿಹರಿಸಿರುವು ದಾಗಿ ಹೇಳಲಾಗಿದೆ. ಇದು ಶೇ. 90.68 ವಿಲೇವಾರಿ ದರವನ್ನು ತೋರಿಸುತ್ತದೆ. ಆದರೂ, ಬಾಕಿ ಇರುವ ಪ್ರಕರಣಗಳ ಸಂಖ್ಯೆ 2019-20ರಲ್ಲಿ 18 ಇದ್ದದ್ದು 2023-24ರಲ್ಲಿ 108ಕ್ಕೆ ಏರಿದೆ. ಅಂಕಿಅಂಶಗಳನ್ನು ಗಮನಿಸಿದರೆ ಪ್ರಕರಣಗಳಲ್ಲಿ ಸ್ಥಿರ ಏರಿಕೆ ಕಾಣಿಸುತ್ತಲೇ ಇದೆ.

ಶಿಕ್ಷಣ ತಜ್ಞರು ಇಲ್ಲೊಂದು ಸಮಸ್ಯೆಯ ಬಗ್ಗೆ ಗಮನ ಸೆಳೆಯುತ್ತಾರೆ.

ಹೆಚ್ಚಿನ ಎಸ್‌ಸಿ/ಎಸ್‌ಟಿ ಸೆಲ್‌ಗಳು ಆಡಳಿತಾತ್ಮಕ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತವೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಹೊಂದಿರುವುದಿಲ್ಲ ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯ. ಏಕೆಂದರೆ ಅವುಗಳ ಸದಸ್ಯರನ್ನು ಸರಕಾರವೇ ನೇಮಿಸಿರುತ್ತದೆ. ಗಂಭೀರ ಪ್ರಕರಣಗಳಲ್ಲಿ ಇದು ನಿಷ್ಪಕ್ಷ ತೀರ್ಮಾನ ಕೊಡಲಾರದು ಎಂಬುದು ಪರಿಣಿತರ ಆತಂಕ.

ಈ ಸೆಲ್‌ಗಳ ಸ್ವಾಯತ್ತೆ ಕಾಲಾನಂತರದಲ್ಲಿ ಸವೆದುಹೋಗಿದೆ ಎಂದು ತಜ್ಞರು ಹೇಳುತ್ತಾರೆ.

ಹೆಚ್ಚುತ್ತಿರುವ ದೂರು ತಾರತಮ್ಯ ಮುಂದುವರಿದೇ ಇರುವುದರ ಸೂಚನೆ ಎಂಬುದರ ಕಡೆ ತಜ್ಞರು ಗಮನ ಸೆಳೆಯುತ್ತಾರೆ.

ಮಾಜಿ ಯುಜಿಸಿ ಅಧ್ಯಕ್ಷ ಪ್ರೊಫೆಸರ್ ಸುಖದೇವ್ ಥೋರಟ್ ನೇತೃತ್ವದ 2007ರ ಥೋರಟ್ ಸಮಿತಿ ವರದಿ ದೇಶದ ಅತಿದೊಡ್ಡ ವೈದ್ಯಕೀಯ ಸಂಸ್ಥೆಯಾದ ಂIIಒSನಲ್ಲಿ ಪ್ರಚಲಿತದಲ್ಲಿರುವ ಜಾತಿ ತಾರತಮ್ಯವನ್ನು ಬಹಿರಂಗಪಡಿಸಿದೆ.

ಈ ವರದಿ, ದಲಿತ ಮತ್ತು ಬುಡಕಟ್ಟು ವಿದ್ಯಾರ್ಥಿಗಳನ್ನು ಹಾಸ್ಟೆಲ್‌ಗಳಲ್ಲಿ ಪ್ರತ್ಯೇಕಿಸಲು, ತರಗತಿಯಲ್ಲಿ ಅವಮಾನಿಸಲು ಮತ್ತು ಉದ್ದೇಶಪೂರ್ವಕವಾಗಿ ಅವರನ್ನು ವಿಫಲಗೊಳಿಸಲು ಸಂಸ್ಥೆಗಳಲ್ಲಿ ಒಂದು ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತೋರಿಸಿದೆ.

ಕ್ಯಾಂಪಸ್‌ನಲ್ಲಿ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳನ್ನು ಮೂಲೆಗುಂಪಾಗಿಸಲಿಕ್ಕಾಗಿ ಸಾಂಸ್ಥಿಕವಾಗಿಯೇ ಹಲವು ಅಕ್ರಮ ವಿಧಾನಗಳನ್ನು ಬಳಸಲಾಗಿದೆ ಎಂದು ಅದು ತೋರಿಸಿದೆ.

ಸಂಸ್ಥೆಯ ಹಾಸ್ಟೆಲ್‌ಗಳಲ್ಲಿ ಕೋಣೆಗಳನ್ನು ವಿತರಿಸುವಾಗ ಇಂಥ ವಿದ್ಯಾರ್ಥಿಗಳಿಗೆ ನಿರ್ದಿಷ್ಟವಾದ ಪ್ರತ್ಯೇಕ ಮಾಳಿಗೆಗಳಲ್ಲಿ ಕೋಣೆಗಳನ್ನು ನೀಡಲಾಗುತ್ತದೆ. ಕ್ಯಾಂಪಸ್‌ನಲ್ಲಿ ಎಸ್‌ಸಿ, ಎಸ್‌ಟಿ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ಮೌಖಿಕ ನಿಂದನೆ ಮತ್ತು ಸಾಮಾಜಿಕ ಬಹಿಷ್ಕಾರ ಎದುರಿಸಬೇಕಾಗುತ್ತದೆ.

ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಿಂದ ಅವರನ್ನು ದೂರ ಇಡಲಾಗುತ್ತದೆ. ಅವರು ಕೀಳು ಮಟ್ಟದವರು ಎಂಬುದನ್ನು ಮನವರಿಕೆ ಮಾಡಿಸುವಂತಹ ಅಪಮಾನಾತ್ಮಕ ಮಾತುಗಳನ್ನು ಆಡಲಾಗುತ್ತದೆ.

ಕ್ಯಾಂಪಸ್‌ನ ಆಡಳಿತ ಮಂಡಳಿಯವರು ಮತ್ತು ಕೆಲವು ಪ್ರೊಫೆಸರ್‌ಗಳು ಜಾತಿ ಆಧಾರಿತ ಮೀಸಲಾತಿ ವಿರೋಧಿ ಪ್ರತಿಭಟನೆ ಆಯೋಜಿಸುವಲ್ಲಿ ವಿಶೇಷ ಆಸಕ್ತಿ ತೋರುತ್ತಾರೆ.

ವಿದ್ಯಾರ್ಥಿಗಳ ಮೌಲ್ಯಮಾಪನ ಮಾಡುವ, ಅವರ ಶ್ರೇಣಿಯನ್ನು ನಿರ್ಧರಿಸುವ ಮತ್ತು ಅವರಿಗೆ ವಸತಿಯನ್ನು ಒದಗಿಸುವ ಸಂದರ್ಭಗಳಲ್ಲಿ ಯೋಜಿತ ರೀತಿಯಲ್ಲಿ ಪಕ್ಷಪಾತ ಮಾಡಲಾಗುತ್ತದೆ.

ಎಸ್‌ಸಿ, ಎಸ್‌ಟಿ ವರ್ಗಗಳಿಗೆ ಸೇರಿದ ಶೇ. 69 ವಿದ್ಯಾರ್ಥಿಗಳು ತಮಗೆ ಶಿಕ್ಷಕ ವೃಂದದಿಂದ ಸಿಗಬೇಕಾದ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ದೂರಿದ್ದನ್ನು ಆ ವರದಿ ದಾಖಲಿಸಿದೆ. ಅವರಲ್ಲಿ ಶೇ. 30ಕ್ಕೂ ಹೆಚ್ಚು ಮಂದಿ, ಇದಕ್ಕೆ ಶಿಕ್ಷಕರ ಜಾತಿ ಪೂರ್ವಾಗ್ರಹವೇ ಕಾರಣ ಎಂದಿದ್ದರು.

ಭಾರತದ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿಯ ವಿಷ ಎಷ್ಟು ಆಳಕ್ಕೆ ಹೋಗಿದೆ ಮತ್ತು ಎಷ್ಟು ಬೃಹತ್ತಾಗಿ ಬೆಳೆದಿದೆ ಎಂಬುದಕ್ಕಿರುವ ಪುರಾವೆಗಳು ದಿಗಿಲು ಹುಟ್ಟಿಸುತ್ತವೆ.

ಯುಜಿಸಿಯ 2012ರ ನಿಯಮಾವಳಿಯಂತೆ 2019ರ ನಿಯಮಾವಳಿ ಕೂಡಾ ಯಾವುದೇ ಪರಿಣಾಮ ಬೀರಲಾಗದೆ ಸಂಪೂರ್ಣ ವಿಫಲವಾಯಿತು.

ಜಾತಿತಾರತಮ್ಯದ ದೂರುಗಳು, ಆತ್ಮಹತ್ಯೆಗಳು, ಕ್ಯಾಂಪಸ್ ತ್ಯಾಗ ಹೀಗೆ ಎಲ್ಲ ದುರಂತಗಳ ಸರಮಾಲೆ ಅವ್ಯಾಹತವಾಗಿ ಮುಂದುವರಿದಿತ್ತು.

ವೇಮುಲಾ ಮತ್ತು ತಡ್ವಿಯವರ ಅರ್ಜಿಯನ್ನು ವಿಚಾರಣೆಗೆತ್ತಿಕೊಂಡ ಸುಪ್ರೀಂ ಕೋರ್ಟ್ ಪೀಠದ ಮುಂದೆ ಪದೇಪದೇ ಈ ಬಿಕ್ಕಟ್ಟುಗಳು ಪ್ರಸ್ತಾಪವಾಗತೊಡಗಿದವು.

ಸುಪ್ರೀಂ ಕೋರ್ಟ್ ಪೀಠವು 2025 ಸೆಪ್ಟಂಬರ್ 15ರಂದು ಯುಜಿಸಿಗೆ ಒಂದು ವಿಶೇಷ ಆದೇಶ ನೀಡಿತು.

ಕ್ಯಾಂಪಸ್‌ಗಳಲ್ಲಿ ಜಾತಿ ಆಧಾರಿತ ಪಕ್ಷಪಾತ ಮತ್ತು ಕಿರುಕುಳಗಳನ್ನು ಸಂಪೂರ್ಣ ತಡೆಯಲು ಹೊಸದಾದ ಹಾಗೂ ಹೆಚ್ಚು ಕಟ್ಟುನಿಟ್ಟಿನ ನಿಯಮಾವಳಿ ರೂಪಿಸಬೇಕೆಂದು ಆ ಆದೇಶದಲ್ಲಿ ಹೇಳಲಾಗಿತ್ತು. ಆ ಪ್ರಕಾರ ಯುಜಿಸಿ ಒಂದು ಹೊಸ ನಿಯಮಾವಳಿಯನ್ನು ರೂಪಿಸಿ ಅದನ್ನು 2026 ಜನವರಿ 13ರಂದು ಅಧಿಕೃತವಾಗಿ ಬಿಡುಗಡೆಗೊಳಿಸಿತು. ಆದರೆ ಮೇಲ್ಜಾತಿಗಳಿಗೆ ಅದು ಜೀರ್ಣವಾಗಲಿಲ್ಲ. ಅವರು ಅದನ್ನು ವಿರೋಧಿಸತೊಡಗಿದರು.

ದೇಶದಲ್ಲಿ ದಲಿತರು ಮತ್ತು ಒಬಿಸಿಗಳ ಪರವಾಗಿರುವ ಯಾವುದೇ ಕ್ರಮ ಎಲ್ಲಾ ಸಮಯದಲ್ಲೂ ತೀವ್ರ ಪ್ರತಿರೋಧ ಎದುರಿಸುತ್ತಲೇ ಬಂದಿದೆ. ಇದು ಮಂಡಲ್ ಕಾಲದಿಂದ ಮೋದಿವರೆಗಿನ ಬಿಜೆಪಿಯ ಆಟಗಳ ತನಕವೂ ಕಾಣಿಸುತ್ತಲೇ ಇದೆ.

ಯಾವುದೇ ಜಾತಿ ತಾರತಮ್ಯ ಕ್ಯಾಂಪಸ್ ಒಳಗೆ ಇಲ್ಲ ಎಂದು ಉನ್ನತ ಶಿಕ್ಷಣ ಕೇಂದ್ರಗಳು ಹೇಳಿಕೊಳ್ಳುತ್ತಿರುವಾಗ, ವಿದ್ಯಾರ್ಥಿಗಳು ಅದೇ ಜಾತಿ ತಾರತಮ್ಯದ ಕಾರಣಕ್ಕೇ ಆತ್ಮಹತ್ಯೆಗೆ ಶರಣಾಗುವುದು ಮುಂದುವರಿದೇ ಇದೆ.

ಈ ದೇಶದಲ್ಲಿ ಈ ದುರಂತ ಸರಣಿಗೆ ಕೊನೆಯೇ ಇಲ್ಲವೆ?

share
ಹರೀಶ್ ಎಚ್.ಕೆ.
ಹರೀಶ್ ಎಚ್.ಕೆ.
Next Story
X