Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಇದು ಆಧುನಿಕ ಪ್ರಜಾಪ್ರಭುತ್ವದಲ್ಲಿ...

ಇದು ಆಧುನಿಕ ಪ್ರಜಾಪ್ರಭುತ್ವದಲ್ಲಿ ವಸಾಹತುಶಾಹಿ ಯುಗದ ಚೌಕಟ್ಟನ್ನು ಮರಳಿ ತರುವ ನಡೆಯೇ?

ಎ.ಎನ್. ಯಾದವ್ಎ.ಎನ್. ಯಾದವ್24 Feb 2026 12:06 PM IST
share
ಇದು ಆಧುನಿಕ ಪ್ರಜಾಪ್ರಭುತ್ವದಲ್ಲಿ ವಸಾಹತುಶಾಹಿ ಯುಗದ ಚೌಕಟ್ಟನ್ನು ಮರಳಿ ತರುವ ನಡೆಯೇ?

ಈಗ, ಮಾಹಿತಿ ಸೋರಿಕೆ ಮಾಡುವವರನ್ನೇ ಮೊದಲು ಅಪರಾಧಿ ಎಂದು ಪರಿಗಣಿಸಲಾಗುತ್ತದೆ. ನಂತರ ಪತ್ರಕರ್ತರನ್ನು ಸಹ ಅಪರಾಧಿ ಎಂದು ಪರಿಗಣಿಸಲಾಗುತ್ತದೆ.

ಮೂಲಭೂತವಾಗಿ, ಈ ಸೆಕ್ಷನ್ ತನಿಖಾ ಪತ್ರಿಕೋದ್ಯಮವನ್ನೇ ನೇರವಾಗಿ ಅಪರಾಧೀಕರಿಸುತ್ತದೆ.

ಬ್ರಿಟಿಷರು ಈ ಕಾನೂನನ್ನು ಜಾರಿಗೆ ತಂದಾಗ, ವಸಾಹತುಶಾಹಿ ಮತ್ತು ಪ್ರಜಾಪ್ರಭುತ್ವ ವಿರೋಧಿ ಶಕ್ತಿ ಸಾರ್ವಜನಿಕರ ಮೇಲೆ ಸಂಪೂರ್ಣ ನಿಯಂತ್ರಣ ಕಾಯ್ದುಕೊಳ್ಳಲು ರೂಪಿಸಿದ್ದ ಕಾನೂನು ಅದಾಗಿತ್ತು.

ಇಂದಿನ ಸಾರ್ವಭೌಮ ಮತ್ತು ಪ್ರಜಾಪ್ರಭುತ್ವ ದೇಶದಲ್ಲಿ ಇದನ್ನು ಜಾರಿಗೊಳಿಸುವುದು ನೈತಿಕ ವಿಪತ್ತಾಗಿದೆ.

ಸೇನೆಯ ಮಾಜಿ ಮುಖ್ಯಸ್ಥರ ಅಪ್ರಕಟಿತ ಆತ್ಮಚರಿತ್ರೆಯ ಉಲ್ಲೇಖಗಳ ಕುರಿತು ಸಂಸತ್ತಿನಲ್ಲಿ ಭಾರೀ ಕೋಲಾಹಲದ ನಂತರ, ಗೃಹ ಸಚಿವಾಲಯ ಹಿರಿಯ ಅಧಿಕಾರಿಗಳು ನಿವೃತ್ತಿಯ ನಂತರ 20 ವರ್ಷಗಳ ಕಾಲ ಪುಸ್ತಕಗಳು ಅಥವಾ ಆತ್ಮಚರಿತ್ರೆಗಳನ್ನು ಬರೆಯುವುದನ್ನು ನಿರ್ಬಂಧಿಸುವ ಹೊಸ ನಿರ್ದೇಶನ ಹೊರಡಿಸಿರುವುದಾಗಿ ವರದಿಯಾಗಿದೆ.

ಸೇನೆಯ ಮಾಜಿ ಮುಖ್ಯಸ್ಥ ನರವಣೆಯವರ ಪುಸ್ತಕದಲ್ಲಿನ ಆಗಸ್ಟ್ 2020ರ ಕೈಲಾಶ್ ರೇಂಜ್ ಘಟನೆಯ ಬಗೆಗಿನ ಉಲ್ಲೇಖದ ಬಗ್ಗೆ ಸದನದಲ್ಲಿ ಚರ್ಚಿಸಲು ಸಾಧ್ಯವಾಗಲಿಲ್ಲ. ಅಪ್ರಕಟಿತ ಪುಸ್ತಕದಲ್ಲಿನ ಉಲ್ಲೇಖ ಪ್ರಸ್ತಾಪಿಸುವಂತಿಲ್ಲ ಎನ್ನಲಾಯಿತು.

ಚೀನಾದ ಟ್ಯಾಂಕ್‌ಗಳು ಗಡಿಯಲ್ಲಿ ಮುನ್ನಡೆಯುತ್ತಿರುವಾಗ ಮತ್ತು ಅವರ ಸೈನಿಕರು ನುಗ್ಗಿ ಬರುತ್ತಿದ್ದಾಗ, ಮುಂದೇನು ಮಾಡಬೇಕು ಎಂಬ ಸೂಚನೆ ಪಡೆಯಲು ಅವರು ರಕ್ಷಣಾ ಸಚಿವರಿಗೆ ಕರೆ ಮಾಡಿದ್ದರು.

ಅದರ ಬಗ್ಗೆ ನರವಣೆ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ ಎಂದು ಹಲವಾರು ಮಾಧ್ಯಮ ವರದಿಗಳು ಹೇಳುತ್ತವೆ.

ರಕ್ಷಣಾ ಸಚಿವರಿಂದ ಗಂಟೆಗಟ್ಟಲೆ ಉತ್ತರ ಬರಲಿಲ್ಲ ಮತ್ತು ಅವರ ಕರೆಗಳನ್ನು ನಿರ್ಲಕ್ಷಿಸಲಾಯಿತು ಮತ್ತು ಅಂತಿಮವಾಗಿ ಪ್ರತಿಕ್ರಿಯೆ ಬಂದಾಗ, ಅವರಿಗೆ ಸರಿ ಎಂದು ಭಾವಿಸಿದ್ದನ್ನು ಮಾಡಲು ಹೇಳಲಾಯಿತು.

ರಾಹುಲ್ ಗಾಂಧಿ ಈ ಸಾಲುಗಳನ್ನು ಸದನದಲ್ಲಿ ಓದಲು ಬಯಸಿದ್ದರು. ಆದರೆ ಗೃಹ ಸಚಿವರು ಸೇರಿದಂತೆ ಇಡೀ ಆಡಳಿತ ಪಕ್ಷ ಅದಕ್ಕೆ ಅಡ್ಡಿಪಡಿಸಿತು.

ಸರಕಾರದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಬಹುದು ಎಂದು ಆಡಳಿತ ಪಕ್ಷದವರು ಭಯಪಟ್ಟರು.

ಆದ್ದರಿಂದ, ಒಂದು ಕೋಲಾಹಲವೇ ಸೃಷ್ಟಿಯಾಯಿತು ಮತ್ತು ನರವಣೆಯವರ ಪುಸ್ತಕದಲ್ಲಿನ ಉಲ್ಲೇಖವನ್ನು ಓದಲು ಅವಕಾಶ ನೀಡಲಿಲ್ಲ.

ಈಗ, ಗೃಹ ಸಚಿವಾಲಯ ಪ್ರತೀ ಸಚಿವಾಲಯಕ್ಕೂ ರಹಸ್ಯ ಟಿಪ್ಪಣಿ ಕಳುಹಿಸಿರುವುದಾಗಿ ‘ಹಿಂದೂಸ್ತಾನ್ ಟೈಮ್ಸ್’ ವರದಿ ಬಹಿರಂಗಪಡಿಸಿದೆ.

ನಿವೃತ್ತ ಅಧಿಕಾರಿಯೊಬ್ಬರು ನಿವೃತ್ತಿಯ ನಂತರ 20 ವರ್ಷಗಳವರೆಗೆ ಪುಸ್ತಕ ಅಥವಾ ಆತ್ಮಚರಿತ್ರೆ ಬರೆಯಬಾರದು ಎಂದು ಅದು ಹೇಳಿದೆಯೆನ್ನಲಾಗಿದೆ.

ಇದಲ್ಲದೆ, ಸರಕಾರ ಈಗ ಮಾಧ್ಯಮಗಳಿಗೆ ಸರಕಾರಿ ಫೈಲ್‌ಗಳನ್ನು ಸೋರಿಕೆ ಮಾಡುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ.

ಇದರರ್ಥ ಪತ್ರಕರ್ತರೊಂದಿಗೆ ಸೂಕ್ಷ್ಮ ಅಥವಾ ವರ್ಗೀಕೃತ ಮಾಹಿತಿ ಹಂಚಿಕೊಳ್ಳುವವರು ಅಧಿಕೃತ ರಹಸ್ಯ ಕಾಯ್ದೆ (OSA) ಅಡಿಯಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.

ಮಾಹಿತಿ ಹಂಚಿಕೊಳ್ಳುವುದು ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ಸರಕಾರ ನಂಬಿದರೆ, ಮಾಹಿತಿ ರಹಸ್ಯವಾಗಿದೆಯೇ ಅಥವಾ ಇಲ್ಲವೇ ಎಂಬುದರ ವ್ಯಾಖ್ಯಾನ ಸ್ಪಷ್ಟವಿಲ್ಲ. ಅದನ್ನು ಸರಕಾರಿ ಅಧಿಕಾರಿ ನಿರ್ಧರಿಸುತ್ತಾರೆ.

2019ರಲ್ಲಿ ರಫೇಲ್ ಒಪ್ಪಂದ ನಡೆದಾಗ, ‘ದಿ ಹಿಂದೂ’ ಪತ್ರಿಕೆ ರಕ್ಷಣಾ ಸಚಿವಾಲಯದಿಂದ ಕೆಲವು ರಹಸ್ಯ ದಾಖಲೆಗಳನ್ನು ಪ್ರಕಟಿಸಿತು.

ಸರಕಾರ ಸುಪ್ರೀಂ ಕೋರ್ಟ್‌ನಲ್ಲಿ ಈ ದಾಖಲೆಗಳನ್ನು ಕದಿಯಲಾಗಿದೆ ಮತ್ತು ಅವು OSA ಅನ್ನು ಉಲ್ಲಂಘಿಸುತ್ತಿವೆ ಎಂದು ಹೇಳುವ ಅಫಿಡವಿಟ್ ಅನ್ನು ಸಲ್ಲಿಸಿತು.

ಆದರೂ, ಆ ವರದಿ ಪ್ರಕಟಿಸಿದ ಪತ್ರಕರ್ತ ಎನ್. ರಾಮ್ ಅವರು ತಮ್ಮ ಮಾಹಿತಿ ಮೂಲವನ್ನು ಎಂದಿಗೂ ಬಹಿರಂಗಪಡಿಸಲಿಲ್ಲ.

ಈ ಪ್ರಕರಣ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯನ್ನು ಹುಟ್ಟುಹಾಕಿತು.

ಸರಕಾರ ಭ್ರಷ್ಟಾಚಾರವನ್ನು ಬಹಿರಂಗಪಡಿಸುವವರನ್ನು OSA, NSA ಅಥವಾ UAPA ಅಡಿಯಲ್ಲಿ ಶಿಕ್ಷಿಸುವ ಮೂಲಕ ಮೌನಗೊಳಿಸಲು ಸಾಧ್ಯವೇ?

2002ರಲ್ಲಿ ಪತ್ರಕರ್ತ ಸೈಯದ್ ಇಫ್ತಿಕಾರ್ ಗೀಲಾನಿ ಪ್ರಕರಣವೂ ಇದೇ ರೀತಿಯದ್ದಾಗಿತ್ತು.

ಅವರನ್ನು OSA ಕಾಯ್ದೆಯಡಿಯಲ್ಲಿಯೂ ಬಂಧಿಸಲಾಯಿತು.ಅವರ ಬಳಿ ಕೆಲ ಗೌಪ್ಯ ದಾಖಲೆಗಳು ಕಂಡುಬಂದಿವೆ ಎಂಬ ಕಾರಣ ನೀಡಿ ಗೂಢಚಾರ ಮತ್ತು ದೇಶದ್ರೋಹಿ ಎಂದು ಹಣೆಪಟ್ಟಿ ಕಟ್ಟಲಾಯಿತು.

ಆದರೆ ನಂತರ, ಆ ದಾಖಲೆಗಳು ವಾಸ್ತವವಾಗಿ ವರ್ಷಗಳ ಕಾಲ ಸಾರ್ವಜನಿಕ ವಲಯದಲ್ಲಿ ಲಭ್ಯವಿದ್ದ ವರದಿಯ ಭಾಗವಾಗಿದ್ದುದು ಬಹಿರಂಗವಾಯಿತು. ಆದರೆ ಗೀಲಾನಿ ಏಳು ತಿಂಗಳು ಜೈಲಿನಲ್ಲಿದ್ದರು.

ನಂತರ, ಸರಕಾರ ಪ್ರಕರಣವನ್ನು ಹಿಂದೆಗೆದುಕೊಳ್ಳಬೇಕಾಯಿತು.

ಹಾಗಾದರೆ ಪ್ರಶ್ನೆ, ಈ ಕಾನೂನು ಏನು? ಮತ್ತು ಅದು ಏಕೆ ಅಸ್ತಿತ್ವದಲ್ಲಿದೆ? ಮತ್ತು ಅದನ್ನು ಕಠಿಣ ಕಾನೂನು ಎಂದು ಏಕೆ ಕರೆಯಲಾಗುತ್ತದೆ? ಅಲ್ಲದೆ, ಮಾಹಿತಿ ಹಕ್ಕು ಕಾಯ್ದೆಯಂತಹ ಪ್ರಜಾಪ್ರಭುತ್ವ ಕಾನೂನಿಗೆ ಸಮಾನಾಂತರವಾಗಿ ಇದನ್ನು ಹೇಗೆ ಕಾರ್ಯಗತಗೊಳಿಸಬಹುದು? ಆರ್‌ಟಿಐ ಸಲ್ಲಿಸಿದರೆ, ಅಧಿಕಾರಿ ಪ್ರತಿಕ್ರಿಯೆ ನೀಡುತ್ತಾರೆಯೇ? ಇಂಥ ಹಲವು ಪ್ರಶ್ನೆಗಳಿವೆ.

ವಾಸ್ತವವಾಗಿ, ಈ ಹೊಸ ಟಿಪ್ಪಣಿ 1998ರ ಡಿಸೆಂಬರ್‌ನಲ್ಲಿ ಹೊರಡಿಸಲಾಗಿದ್ದ ಹಳೆಯ ಸುತ್ತೋಲೆಯ ನವೀಕರಿಸಿದ ಆವೃತ್ತಿಯಾಗಿದೆ.

ಆದರೆ ಎರಡರ ನಡುವೆ ಅಗಾಧ ವ್ಯತ್ಯಾಸವಿದೆ.

ಆ ಸಮಯದಲ್ಲಿ, ಸುತ್ತೋಲೆ ಕೇವಲ ಸಲಹೆಯಾಗಿತ್ತು. ಅದರಲ್ಲಿ ಎಲ್ಲಿಯೂ ಔSಂ ಬಗ್ಗೆ ಉಲ್ಲೇಖವಿರಲಿಲ್ಲ, ಅಥವಾ ಯಾವುದೇ ಗೌಪ್ಯ ಅಥವಾ ರಹಸ್ಯ ಮಾಹಿತಿಯೂ ಇರಲಿಲ್ಲ.

ಈಗ, ಈ OSA ಟಿಪ್ಪಣಿಯನ್ನು ಜನವರಿ ಎರಡನೇ ವಾರದಲ್ಲಿ ನೀಡಲಾಗಿದೆ.

ಪತ್ರಕರ್ತರು ಪ್ರಶ್ನೆ ಕೇಳಿದರೆ, ಅಧಿಕಾರಿಗಳು ತಮ್ಮದೇ ಆದ ತೀರ್ಪನ್ನು ಬಳಸಬಾರದು ಮತ್ತು ಮಾಹಿತಿ ಒದಗಿಸಬಾರದು ಎಂದು ಟಿಪ್ಪಣಿ ಒತ್ತಿಹೇಳುತ್ತದೆ. ಬದಲಾಗಿ, ಅವರು ಪ್ರಶ್ನೆಯನ್ನು ನೇರವಾಗಿ ಪತ್ರಿಕಾ ಮಾಹಿತಿ ಬ್ಯೂರೋ (PIB)ಗೆ ರವಾನಿಸಬೇಕು.

ಒಬ್ಬ ಅಧಿಕಾರಿ ಪ್ರತಿಕ್ರಿಯಿಸಬೇಕಾದರೆ, ಮೊದಲು ತಮ್ಮ ಕಾರ್ಯದರ್ಶಿಯಿಂದ ಲಿಖಿತ ಅನುಮತಿ ಪಡೆಯಬೇಕು. ಮಾಹಿತಿ ಒದಗಿಸಬೇಕೇ ಅಥವಾ ಬೇಡವೇ ಎಂಬುದರ ಕುರಿತು ಈ ಅಧಿಕಾರಿ ಸಲಹೆ ನೀಡುತ್ತಾರೆ.

ಇದಲ್ಲದೆ, ಸರಕಾರ ಈಗ ಸರಕಾರಿ ಕಚೇರಿಗಳಲ್ಲಿ ಮಾಧ್ಯಮ ಸಂವಹನಕ್ಕಾಗಿ ಮೀಸಲಾದ ವಿಭಾಗವನ್ನು ಗೊತ್ತುಪಡಿಸಿದೆ ಅಥವಾ ಗೊತ್ತುಪಡಿಸುತ್ತದೆ.

ಈ ವಿಭಾಗವನ್ನು ಮೇಲ್ವಿಚಾರಣೆ ಮಾಡುವ ಸಾಧ್ಯತೆಯಿದೆ. ಯಾರು ಬರುತ್ತಿದ್ದಾರೆ ಮತ್ತು ಹೋಗುತ್ತಿದ್ದಾರೆ ಎಂಬುದರ ಸಂಪೂರ್ಣ ದಾಖಲೆಯನ್ನು ನಿರ್ವಹಿಸಲಾಗುತ್ತದೆ.

ಉನ್ನತ ಅಧಿಕಾರಿಗಳಿಗೆ ಸರಕಾರ 20 ವರ್ಷಗಳ ಕೂಲಿಂಗ್-ಆಫ್ ಅವಧಿ ಜಾರಿಗೊಳಿಸುತ್ತಿದೆ.

ಕಾರ್ಯದರ್ಶಿಗಳು, ಸೇನಾ ಮುಖ್ಯಸ್ಥರು ಅಥವಾ ಸಂಸ್ಥೆಗಳ ಅಧ್ಯಕ್ಷರು ಮುಂತಾದ ಉನ್ನತ ಹುದ್ದೆಗಳನ್ನು ಹೊಂದಿರುವ ಜನರು ನಿವೃತ್ತರಾದ ನಂತರ, 20 ವರ್ಷಗಳ ಕಾಲ ಸರಕಾರಕ್ಕೆ ಸಂಬಂಧಿಸಿದಂತೆ ಯಾವುದೇ ವಿಷಯ ಬಹಿರಂಗಪಡಿಸುವ ಪುಸ್ತಕ ಬರೆಯಬಾರದು ಎಂಬುದು ಇದರ ಅರ್ಥ.

20 ವರ್ಷಗಳ ಕೂಲಿಂಗ್-ಆಫ್ ಅವಧಿಯ ನಂತರ ಮಾತ್ರ ಅವರು ಪುಸ್ತಕ ಅಥವಾ ಆತ್ಮಚರಿತ್ರೆ ಬರೆಯಲು ಸಾಧ್ಯವಾಗುತ್ತದೆ.

60 ಅಥವಾ 65ನೇ ವಯಸ್ಸಿನಲ್ಲಿ ನಿವೃತ್ತರಾದವರು 85ನೇ ವಯಸ್ಸಿನಲ್ಲಿ ಏನು ಬರೆಯಲು ಸಾಧ್ಯ?

ಆಶ್ಚರ್ಯಕರ ವಿಷಯವೆಂದರೆ 100 ವರ್ಷಗಳ ಹಿಂದೆ ಭಾರತದಲ್ಲಿ ಇದೇ ರೀತಿಯ ನಿಯಮ ಅಸ್ತಿತ್ವದಲ್ಲಿತ್ತು.

ಅಧಿಕೃತ ರಹಸ್ಯ ಕಾಯ್ದೆ 1923 ಅನ್ನು ಬ್ರಿಟಿಷರು ಪರಿಚಯಿಸಿದ್ದರು. ಈ ಕಾನೂನು ಭಾರತ ಬ್ರಿಟಿಷ್ ರಾಜ್ಯವಾಗಿದ್ದ ಹೊತ್ತಿನದು. ಅದು ಸರ್ವಾಧಿಕಾರವಾಗಿತ್ತು. ವಸಾಹತುಶಾಹಿ ಆಳ್ವಿಕೆಯಾಗಿತ್ತು.

ಬ್ರಿಟಿಷ್ ಯುಗದ ಈ ಕಾನೂನು ಇಂದಿನ ಕಾಲದಲ್ಲಿ ಪತ್ರಿಕೋದ್ಯಮ ಮತ್ತು ಪಾರದರ್ಶಕತೆ ರೂಪಿಸುವಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ.

ಆದರೆ ಅದು ರಾಷ್ಟ್ರೀಯ ಭದ್ರತೆಯ ಸೋಗಿನಲ್ಲಿ, ನೇರವಾಗಿ ಮಾಧ್ಯಮ ಸ್ವಾತಂತ್ರ್ಯದ ವಿರುದ್ಧ ಇದೆಯೆಂಬುದು ಸ್ಪಷ್ಟ.

ಗುಲಾಮಗಿರಿಯಲ್ಲಿದ್ದ ಭಾರತದ ಜನರನ್ನು ಮೂರ್ಖರನ್ನಾಗಿ ಮಾಡಲು, ಗುಲಾಮರನ್ನಾಗಿಯೇ ಇರಿಸಲು ಮತ್ತು ಪತ್ರಿಕಾ ಮಾಧ್ಯಮವನ್ನು ನಿಗ್ರಹಿಸಲು ಬ್ರಿಟಿಷರು ಈ ಕಾನೂನನ್ನು ಜಾರಿಗೆ ತಂದರು.

ಈ ಕಾನೂನು ಎರಡು ಮುಖ್ಯ ವಿಭಾಗಗಳನ್ನು ಹೊಂದಿತ್ತು. ಬೇಹುಗಾರಿಕೆ ಮತ್ತು ಮಾಹಿತಿಯ ದುರುಪಯೋಗ.

ಕಾನೂನಿನ ಸೆಕ್ಷನ್ 3 ಬೇಹುಗಾರಿಕೆಯ ಅಡಿಯಲ್ಲಿ ಬರುವ ಚಟುವಟಿಕೆಗಳನ್ನು ನಿರ್ವಹಿಸುತ್ತಿತ್ತು.

ಉದಾಹರಣೆಗೆ ನಿಷೇಧಿತ ಸ್ಥಳದ ಬಳಿ ಹೋಗುವುದು ಅಥವಾ ಅದನ್ನು ಪರಿಶೀಲಿಸುವುದು, ಶತ್ರುಗಳಿಗೆ ಉಪಯುಕ್ತವಾಗಬಹುದಾದ ಯಾವುದೇ ಫೈಲ್, ಯೋಜನೆ, ನಕ್ಷೆ ಅಥವಾ ಟಿಪ್ಪಣಿ ಸಿದ್ಧಪಡಿಸುವುದು ಮತ್ತು ಯಾವುದೇ ರಹಸ್ಯ ಸರಕಾರಿ ಕೋಡ್, ಪಾಸ್‌ವರ್ಡ್ ಅಥವಾ ಮಾಹಿತಿ ಪಡೆಯುವುದು ಮತ್ತು ಪ್ರಸಾರ ಮಾಡುವುದು ಎಲ್ಲವೂ ಈ ವಿಭಾಗದ ಅಡಿಯಲ್ಲಿ ಬರುತ್ತಿತ್ತು.

ಕಾನೂನು ಚೆನ್ನಾಗಿ ರಚಿಸಲ್ಪಟ್ಟಂತೆ ತೋರುತ್ತದೆ. ಆದರೆ ಈಗ ನಿಷೇಧಿತ ಸ್ಥಳಗಳು ಯಾವುವು?

ಮಿಲಿಟರಿ ನೆಲೆಗಳು, ನೌಕಾ ಡಾಕ್‌ಯಾರ್ಡ್‌ಗಳು ಮತ್ತು ವಾಯುಪಡೆ ಕೇಂದ್ರಗಳು.

ನಮಗೆ ತಿಳಿದಿಲ್ಲದ ಇನ್ನೂ ಹೆಚ್ಚಿನವು ಇರಬಹುದೇ? ಇದ್ದಿರಬಹುದು.

ಇದು ಔSಂಯಲ್ಲಿರುವ ಲೋಪದೋಷ.

ಈ ಕಾನೂನು ಸರಕಾರ ಅಲ್ಲಿನ ಮಾಹಿತಿ ಶತ್ರುಗಳಿಗೆ ಉಪಯುಕ್ತವಾಗಬಹುದು ಎಂದು ನಂಬಿದರೆ ಯಾವುದೇ ಸ್ಥಳವನ್ನು ನಿಷೇಧಿತ ಸ್ಥಳವೆಂದು ಘೋಷಿಸುವ ಅಧಿಕಾರ ನೀಡುತ್ತದೆ.

ಕಾನೂನಿನಲ್ಲಿರುವ ಈ ಅಸ್ಪಷ್ಟತೆಯಿಂದಾಗಿ, ಸರಕಾರ ಯಾವುದೇ ಸಾಮಾನ್ಯ ನಾಗರಿಕನನ್ನು ಗೂಢಚಾರ ಎಂದು ಹಣೆಪಟ್ಟಿ ಕಟ್ಟಿ ಜೈಲಿಗೆ ಹಾಕಬಹುದು.

ಇನ್ನು ಸೆಕ್ಷನ್ 5, ಪತ್ರಕರ್ತರು, ಮಾಹಿತಿದಾರರು ಮತ್ತು ಸರಕಾರಿ ನೌಕರರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತದೆ. ಒಂದು ತನಿಖಾ ವರದಿ ಬರಬೇಕಾದರೆ, ಪತ್ರಕರ್ತರು ಇಲಾಖೆಯ ಅಧಿಕಾರಿಗಳನ್ನು ಭೇಟಿಯಾಗಿ ಮಾಹಿತಿ ಪಡೆಯುತ್ತಾರೆ.

ಇದೇ ಅಧಿಕಾರಿಗಳು ಸರಕಾರದ ಭ್ರಷ್ಟಾಚಾರದ ಪ್ರಮಾಣ ಮತ್ತು ಭ್ರಷ್ಟ ರಾಜಕಾರಣಿಗಳ ಬಗ್ಗೆ ಮಾಹಿತಿ ಬಹಿರಂಗಪಡಿಸುತ್ತಾರೆ.

ಆದರೆ ಈಗ, ಮಾಹಿತಿ ಸೋರಿಕೆ ಮಾಡುವವರನ್ನೇ ಮೊದಲು ಅಪರಾಧಿ ಎಂದು ಪರಿಗಣಿಸಲಾಗುತ್ತದೆ. ನಂತರ ಪತ್ರಕರ್ತರನ್ನು ಸಹ ಅಪರಾಧಿ ಎಂದು ಪರಿಗಣಿಸಲಾಗುತ್ತದೆ.

ಮೂಲಭೂತವಾಗಿ, ಈ ಸೆಕ್ಷನ್ ತನಿಖಾ ಪತ್ರಿಕೋದ್ಯಮವನ್ನೇ ನೇರವಾಗಿ ಅಪರಾಧೀಕರಿಸುತ್ತದೆ.

ಬ್ರಿಟಿಷರು ಈ ಕಾನೂನನ್ನು ಜಾರಿಗೆ ತಂದಾಗ, ವಸಾಹತುಶಾಹಿ ಮತ್ತು ಪ್ರಜಾಪ್ರಭುತ್ವ ವಿರೋಧಿ ಶಕ್ತಿ ಸಾರ್ವಜನಿಕರ ಮೇಲೆ ಸಂಪೂರ್ಣ ನಿಯಂತ್ರಣ ಕಾಯ್ದುಕೊಳ್ಳಲು ರೂಪಿಸಿದ್ದ ಕಾನೂನು ಅದಾಗಿತ್ತು.

ಇಂದಿನ ಸಾರ್ವಭೌಮ ಮತ್ತು ಪ್ರಜಾಪ್ರಭುತ್ವ ದೇಶದಲ್ಲಿ ಇದನ್ನು ಜಾರಿಗೊಳಿಸುವುದು ನೈತಿಕ ವಿಪತ್ತಾಗಿದೆ.

ಈ ಕಾನೂನು ಮಾಹಿತಿ ಹಕ್ಕಿನ ಮೂಲಭೂತ ತತ್ವಗಳಿಗೆ ಸಂಪೂರ್ಣ ವಿರುದ್ಧವಾಗಿದೆ. ಏಕೆಂದರೆ ರಹಸ್ಯ ಎಂಬ ಪದವನ್ನು ಅದರಲ್ಲಿ ಎಲ್ಲಿಯೂ ವ್ಯಾಖ್ಯಾನಿಸಲಾಗಿಲ್ಲ.

ಯಾವ ಮಾಹಿತಿ ನಿಜವಾಗಿಯೂ ರಹಸ್ಯ ಎಂದು ಪರಿಗಣಿತವಾಗುತ್ತದೆ ಎಂಬುದು ಅಸ್ಪಷ್ಟವಾಗಿದೆ.

ಇದನ್ನು ಯಾರು ನಿರ್ಧರಿಸುತ್ತಾರೆ?

ಕಚೇರಿ ಸ್ಟೇಷನರಿಗಳನ್ನು ಬದಲಾಯಿಸುವ ಬಗೆಗಿನ ಜ್ಞಾಪಕ ಪತ್ರ ಕೂಡ ರಹಸ್ಯ ಎಂದಾಗುತ್ತದೆಯೇ?

ಒಂದು ರಾಜ್ಯದಲ್ಲಿ ಅಪೌಷ್ಟಿಕತೆಯ ಬಗ್ಗೆ ಅಥವಾ ಸರಕಾರಿ ಶಾಲೆಗಳ ಸ್ಥಿತಿಯ ಬಗ್ಗೆ ವರದಿ ಮಾಡುವುದನ್ನು ರಹಸ್ಯವೆಂದು ಪರಿಗಣಿಸಲಾಗುತ್ತದೆಯೇ?

ರಫೇಲ್ ಒಪ್ಪಂದದಂತಹ ಹೊಸ ಮಿಲಿಟರಿ ಶಸ್ತ್ರಾಸ್ತ್ರದ ಯೋಜನೆಗಳನ್ನು ಚರ್ಚಿಸುವುದನ್ನು ರಹಸ್ಯವೆಂದು ಪರಿಗಣಿಸಲಾಗುತ್ತದೆಯೇ?

ಸರಕಾರಿ ಅಧಿಕಾರಿಯೊಬ್ಬರು ಅದನ್ನು ರಹಸ್ಯವೆಂದು ಭಾವಿಸಿದರೆ, ವರದಿಗಾರರು ಅದರ ವಿರುದ್ಧ ಮಾತಾಡದ ಸ್ಥಿತಿ ತಲೆದೋರುತ್ತದೆ.

ಹಾಗಾದರೆ, ಈ ಕಾಯ್ದೆ ಭ್ರಷ್ಟಾಚಾರವನ್ನು ಮರೆಮಾಚುವ ಉದ್ದೇಶ ಹೊಂದಿದೆಯೇ? ಬಹುಕೋಟಿ ಹಗರಣಗಳ ವರದಿಗಳನ್ನು ಮರೆಮಾಚಲು, ಸರಕಾರದ ವೈಫಲ್ಯಗಳನ್ನು ಮರೆಮಾಚಲು ಇದನ್ನು ಪರಿಚಯಿಸಲಾಗಿದೆಯೆ?

ಸರಕಾರಿ ಯೋಜನೆ ವೈಫಲ್ಯಗಳ ಡೇಟಾವನ್ನು ರಹಸ್ಯವಾಗಿಡಲು ಈ ಕಾಯ್ದೆಯನ್ನು ಬಳಸುವ ಸಾಧ್ಯತೆಯೂ ಇದೆ.

ಸರಕಾರಕ್ಕೆ ಅಪಖ್ಯಾತಿ ಬರುವುದನ್ನು ತಪ್ಪಿಸಲು ಯಾರಾದರೂ ಇದನ್ನು ಬಳಸಬಹುದೇ? ಸಚಿವರ ಪ್ರತಿಷ್ಠೆಗೆ ಕಳಂಕ ತರಬಹುದೆಂಬ ಭಯದಿಂದ ಈ ಕಾಯ್ದೆ ಪರಿಚಯಿಸಲಾಗಿದೆಯೇ? ಯಾರೂ ಸಚಿವರ ಬಗ್ಗೆ ಕೆಟ್ಟದಾಗಿ ಮಾತನಾಡದಂತೆ ಮಾಡಲು ಇದನ್ನು ಬಳಸಲಾಗುತ್ತದೆಯೆ?

2005ರಲ್ಲಿ ಒಂದು ಕ್ರಾಂತಿಕಾರಿ ಕಾನೂನನ್ನು ಅಂಗೀಕರಿಸಲಾಯಿತು. ಅದು ಆರ್‌ಟಿಐ ಕಾಯ್ದೆ. ಈ ಕಾಯ್ದೆ ಯಾವುದೇ ನಾಗರಿಕ ಯಾವುದೇ ಸರಕಾರಿ ಸಂಸ್ಥೆಯಿಂದ ಯಾವುದೇ ಮಾಹಿತಿ ಪಡೆಯಲು ಅಧಿಕಾರ ನೀಡುತ್ತದೆ.

ಸರಕಾರದಿಂದ ನೇಮಿಸಲ್ಪಟ್ಟ ಉನ್ನತ ಮಟ್ಟದ ಸಂಸ್ಥೆಯಾದ ಎರಡನೇ ಆಡಳಿತ ಸುಧಾರಣಾ ಆಯೋಗ (ಎಆರ್‌ಸಿ) 2006ರಲ್ಲಿ ಅಧಿಕೃತವಾಗಿ 1923ರ ಅಧಿಕೃತ ರಹಸ್ಯ ಕಾಯ್ದೆ ರದ್ದುಗೊಳಿಸಲು ಶಿಫಾರಸು ಮಾಡಿತು. ಏಕೆಂದರೆ ಅದು ಹಳೆಯದಾಗಿದೆ ಮತ್ತು ಆಧುನಿಕ ಪ್ರಜಾಪ್ರಭುತ್ವಕ್ಕೆ ಹೊಂದಿಕೆಯಾಗುವುದಿಲ್ಲ ಎಂದಿತು.

ಪತ್ರಕರ್ತರನ್ನು ನಿಯಂತ್ರಿಸಲು ನಮ್ಮಲ್ಲಿ ಯುಎಪಿಎನಂತಹ ಇತರ ಕಾನೂನುಗಳಿವೆ. ಇಂದು, ಯುಎಪಿಎ ಅಡಿಯಲ್ಲಿ ಅನೇಕ ಪತ್ರಕರ್ತರು ಜೈಲಿನಲ್ಲಿದ್ದಾರೆ.

ಹೀಗಿರುವಾಗ, 100 ವರ್ಷಗಳಷ್ಟು ಹಳೆಯದಾದ ವಸಾಹತುಶಾಹಿ ಕಾನೂನಿಗೆ ಆಧುನಿಕ ಪ್ರಜಾಪ್ರಭುತ್ವದಲ್ಲಿ ಸ್ಥಾನವಿರಬೇಕೇ? ಅಥವಾ ಸಂಕೀರ್ಣ ಭದ್ರತಾ ಬೆದರಿಕೆಗಳ ಜಗತ್ತಿನಲ್ಲಿ ಅದನ್ನು ರದ್ದುಗೊಳಿಸುವುದು ತುಂಬಾ ಅಪಾಯಕಾರಿಯಾಗಿದೆಯೆ?

ಇದು ಅಗತ್ಯ ರಕ್ಷಣೆಯೇ ಅಥವಾ ಆಧುನಿಕ ಪ್ರಜಾಪ್ರಭುತ್ವದಲ್ಲಿ ವಸಾಹತುಶಾಹಿ ಯುಗದ ಚೌಕಟ್ಟನ್ನು ಮರಳಿ ತರುವ ನಡೆಯಾಗಿದೆಯೇ?

Tags

modernDemocracy
share
ಎ.ಎನ್. ಯಾದವ್
ಎ.ಎನ್. ಯಾದವ್
Next Story
X