Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಬಡ ಗ್ರಾಮೀಣ ಮಕ್ಕಳಿಗೆ ಐಟಿಐ ಶ್ರೀಮಂತರ...

ಬಡ ಗ್ರಾಮೀಣ ಮಕ್ಕಳಿಗೆ ಐಟಿಐ ಶ್ರೀಮಂತರ ಮಕ್ಕಳಿಗೆ ಐಐಟಿ

ನಿರಂಜನಾರಾಧ್ಯ ವಿ.ಪಿ.ನಿರಂಜನಾರಾಧ್ಯ ವಿ.ಪಿ.21 Oct 2025 9:50 AM IST
share
ಬಡ ಗ್ರಾಮೀಣ ಮಕ್ಕಳಿಗೆ ಐಟಿಐ ಶ್ರೀಮಂತರ ಮಕ್ಕಳಿಗೆ ಐಐಟಿ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ವಿದ್ಯಾರ್ಥಿ ಶೇ. 33 ಅಂಕಗಳನ್ನು ಪಡೆದರೆ ಉತ್ತೀರ್ಣರೆಂದು ಘೋಷಿಸುವ ಸರಕಾರದ ಅಧಿಸೂಚನೆ ತಪ್ಪು ನಿರ್ಧಾರ. ಇದು, ಒಂದೆಡೆ IITಗೆ ( Indian Institute of Technology ಹೋಗುವ ಮಕ್ಕಳಿಗೆ ಶೇ. 99ರ ಗುಣಾತ್ಮಕ ಶಿಕ್ಷಣ ಬೇಕು, ಮತ್ತೊಂದೆಡೆ ITIಗೆ (Industrial Training Institute ) ಹೋಗುವ ಮಕ್ಕಳಿಗೆ ಶೇ. 33ರ ಕಳಪೆ ಶಿಕ್ಷಣ ಸಾಕು ಎನ್ನುವ ಧೋರಣೆಯಾಗಿದೆ.

ಜನಸಾಮಾನ್ಯರ ಪ್ರಬಲ ವಿರೋಧದ ನಡುವೆ ರಾಜ್ಯ ಸರಕಾರ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ವಿದ್ಯಾರ್ಥಿ ಶೇ. 33 ಅಂಕಗಳನ್ನು ಪಡೆದರೆ ಉತ್ತೀರ್ಣರೆಂದು ಘೋಷಿಸುವ ಅಧಿಸೂಚನೆಯನ್ನು ಹೊರಡಿಸಿರುವುದು ಅತ್ಯಂತ ದುರದೃಷ್ಟಕರ.

ಶಿಕ್ಷಣ ಸಚಿವರು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಶತಾಯ ಗತಾಯ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶ ಮಾಡಿ ಖಾಸಗೀಕರಣವನ್ನು ಹುರಿದುಂಬಿಸಲು ತೀರ್ಮಾನಿಸಿದಂತಿದೆ.

ಈ ತಿದ್ದುಪಡಿ ಅನ್ವಯ, 2025-26ನೇ ಸಾಲಿನಿಂದ ಹತ್ತನೇ ತರಗತಿ ಪರೀಕ್ಷೆಯ ಉತ್ತೀರ್ಣಕ್ಕೆ ವಿದ್ಯಾರ್ಥಿ ಆಂತರಿಕ ಅಂಕ 20, ಬಾಹ್ಯಪರೀಕ್ಷೆಯಲ್ಲಿ 13 ಅಂಕ ಸೇರಿ 33 ಅಥವಾ ವಿಷಯವಾರು 30 ಅಂಕ ಅಂದರೆ, ಆಂತರಿಕ 20 ಅಂಕ ಬಾಹ್ಯಪರೀಕ್ಷೆ ಯಲ್ಲಿ 10 ಅಂಕಗಳಿಸಿದರೆ ಉತ್ತೀರ್ಣ ಎಂದು ಘೋಷಿಸಲಾಗುತ್ತದೆ.

ಶೇ. 33 ಅಂಕ ಪಡೆದರೆ ಉತ್ತೀರ್ಣ ಎಂಬ ಪರಿಕಲ್ಪನೆ ಬ್ರಿಟಿಷ್ ಆಡಳಿತದ ಬಳುವಳಿಯಾಗಿದೆ. ಅಂದಿನ ಸಂದರ್ಭದ ಉದ್ದೇಶ, ವರ್ಣಾಶ್ರಮ ಪದ್ಧತಿಯ ಕಾರಣದಿಂದ ದೇಶದಲ್ಲಿ ಶಿಕ್ಷಣದಿಂದ ವಂಚಿತವಾಗಿದ್ದ ದೊಡ್ಡ ಸಮುದಾಯವನ್ನು ಸಾಕ್ಷರರನ್ನಾಗಿ ಮಾಡಿ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸುವುದಾಗಿತ್ತು.

ಜೊತೆಗೆ ಭಾರತವನ್ನು ವಸಾಹತು ಮಾಡಿಕೊಂಡಿದ್ದ ಬ್ರಿಟಿಷ್ ಆಡಳಿತ, ಅಂದಿನ ಆಡಳಿತಕ್ಕೆ ಅಗತ್ಯವಿದ್ದ ಮತ್ತು ವಿಧೇಯಕರಾಗಿರಬಲ್ಲ ಕಚೇರಿ ಸಹಾಯಕ, ಗುಮಾಸ್ತ ಆಥವಾ ಜವಾನರನ್ನು ಆಯ್ಕೆಮಾಡಲು ಕನಿಷ್ಠ ತಿಳುವಳಿಕೆಯ ಮಾನದಂಡವನ್ನು ನಿಗದಿಪಡಿಸಿತ್ತು.

ಅಂದಿನ ನಿರ್ಧಾರವು ಶೈಕ್ಷಣಿಕ ತತ್ವದ ಆಧಾರ ಅಥವಾ ಗುಣಮಟ್ಟದ ಶಿಕ್ಷಣ ತತ್ವದ ಮೇಲೆ ರೂಪಿಸಿದ್ದಲ್ಲ, ಬದಲಿಗೆ ತನ್ನ ಆಡಳಿತಾತ್ಮಕ ಅನುಕೂಲಕ್ಕಾಗಿ ಅಗತ್ಯವಿದ್ದ ಕನಿಷ್ಠ ಸೂಚನೆ ಪಾಲಿಸಬಲ್ಲ ಒಂದು ಸಾಕ್ಷರ ಸಮುದಾಯವನ್ನು ಸೃಷ್ಟಿಸಲು ರೂಪಿಸಿದ ನಿಯಮವಾಗಿತ್ತು. ಇದೇ ನಿಯಮವನ್ನು ಕರ್ನಾಟಕ ಸರಕಾರ ಪಾಲಿಸಲು ಮುಂದಾಗಿರುವುದು ಅವರ ಆಲೋಚನಾ ಕ್ರಮ ಮತ್ತು ಬೌದ್ಧಿಕ ದಿವಾಳಿತನಕ್ಕೆ ಉತ್ತಮ ಉದಾಹರಣೆಯಾಗಿದೆ.

ಶೇ. 33 ಅಂಕ ಪಡೆದರೆ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಾರೆ ಎಂಬ ಮಾನದಂಡ ವಿದ್ಯಾರ್ಥಿ ಪಾಸಾಗಲು ಏನು ಮಾಡಬೇಕೆಂದು ಸೂಚಿಸುವ ಮೂಲಕ ಶಿಕ್ಷಣದ ಗುಣಮಟ್ಟವನ್ನು ಸಂಕುಚಿತ ಉದ್ದೇಶಕ್ಕೆ ಬಲಿಕೊಟ್ಟು ಜ್ಞಾನಾರ್ಜನೆ ಮತ್ತು ಜ್ಞಾನ ವಿಸ್ತಾರದ ಮೂಲ ನೆಲೆಯನ್ನು ತಿಳಿಗೊಳಿಸಿ, ವಿದ್ಯಾರ್ಥಿಗಳನ್ನು ಮಕ್ಕಿಕಾಮಕ್ಕಿಗಳನ್ನಾಗಿಸುತ್ತದೆ.

ಇದು ಸಮಗ್ರ ಗುಣಾತ್ಮಕ ಶಿಕ್ಷಣದ ಹಕ್ಕನ್ನು ನಿರಾಕರಿಸುವ ಹುನ್ನಾರವಾಗಿದೆ. ಸರಕಾರದ ಈ ನಿರ್ಧಾರ ಎಷ್ಟು ಅಪಾಯಕಾರಿಯೆಂದರೆ, ವಿದ್ಯಾರ್ಥಿಗಳು ಅದರಲ್ಲೂ ವಿಶೇಷವಾಗಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಯಾವುದೇ ಅಗತ್ಯ ಮೂಲ ಸೌಕರ್ಯಗಳಿಲ್ಲದೆ ಕಲಿಯುತ್ತಿರುವ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಶೇ. 33 ಸಾಕೆಂಬ ಧೋರಣೆಯನ್ನು ಹುಟ್ಟುಹಾಕುವ ಮೂಲಕ ಕಲಿಕೆಯ ಬಗೆಗಿನ ಆಸಕ್ತಿಯನ್ನು ಕಸಿಯುತ್ತದೆ. ಒಂದೆಡೆ, ಉನ್ನತ ಮಟ್ಟ ಕಲಿಕೆ ಗುಣಮಟ್ಟದ ಶಿಕ್ಷಣ ಪಡೆಯುವ ವಿದ್ಯಾರ್ಥಿ ವರ್ಗ ಮತ್ತೊಂದಡೆ ಏನೂ ಸೌಲಭ್ಯಗಳಿಲ್ಲದೆ ಪಾಸಾಗಲು ಕನಿಷ್ಠ ಸಾಕ್ಷರತೆ ಎಂಬ ಮತ್ತೊಂದು ವರ್ಗವನ್ನು ಸೃಷ್ಟಿಸುತ್ತದೆ. ಎಸೆಸೆಲ್ಸಿಯಲ್ಲಿ ಪಾಸ್ ಸರ್ಟಿಫಿಕೇಟ್ ಪಡೆದ ವರ್ಗದ ವಿದ್ಯಾರ್ಥಿಗಳು ಐಟಿಐ ಸೇರಿದರೆ , ಉನ್ನತ ಗುಣಮಟ್ಟದ ಶಿಕ್ಷಣ ಮತ್ತೊಂದು ವರ್ಗ ಐಐಟಿ ಸೇರುತ್ತದೆ. ಇದು ಒಂದು ಬಗೆಯ ಹೊಸ ವರ್ಣಾಶ್ರಮ ನೀತಿಯಾಗಿದೆ ಮತ್ತು ಶಿಕ್ಷಣದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಬಡ ಮಕ್ಕಳಿಗೊಂದು ಶ್ರೀಮಂತರಿಗೆ ಮತ್ತೊಂದು.

ವಿದ್ಯಾರ್ಥಿಯ ಪ್ರಗತಿಯನ್ನು ಕೇವಲ ಅಂಕಗಳ ಆಧಾರದಲ್ಲಿ ಪಾಸು ಫೇಲು ಎಂದು ತೀರ್ಮಾನಿಸಲಾಗುವುದಿಲ್ಲ. ಗುಣಾತ್ಮಕ ಶಿಕ್ಷಣವೆಂದರೆ, ವಿದ್ಯಾರ್ಥಿಯ ಪ್ರಭುತ್ವ ಮಟ್ಟದ ಕಲಿಕಾ ಸಾಮರ್ಥ್ಯ, ವಿಚಾರಶೀಲತೆ, ಅನ್ವೇಷಣೆ, ಉನ್ನತ ಆಶಯಕ್ಕೆ ಕನಸು ಕಾಣುವುದು ಮತ್ತು ಸಾಮಾಜಿಕ ಹೊಣೆಗಾರಿಕೆಯ ಮೂಲಕ ಪ್ರಜಾಪ್ರಭುತ್ವನ್ನು ಬಲವರ್ಧನೆ ಗೊಳಿಸುವ ವಿಶಾಲ ಮಾನದಂಡವಾಗಿದೆ. ಶಿಕ್ಷಣ ಸಾಮಾಜಿಕ ಒಳಿತಿನ ಜೊತೆಗೆ ಸಾಮಾಜಿಕ ಪರಿವರ್ತನೆಯ ಸಾಧನವೂ ಹೌದು.

ಇದರ ಬಗ್ಗೆ ಪೂರ್ಣ ತಿಳುವಳಿಕೆಯಿಲ್ಲದ ಶಿಕ್ಷಣ ಸಚಿವರು, ಶಿಕ್ಷಣವನ್ನು ಕೇವಲ ಪಾಸು ಅಥವಾ ಫೇಲಿಗೆ ಸಮೀಕರಿಸಿ ಶಿಕ್ಷಣದ ಒಟ್ಟು ಆಶಯವನ್ನು ತಿಳಿಗೊಳಿಸುವ ಮೂಲಕ ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಭವಿಷ್ಯಕ್ಕೆ ಮಾರಕವಾದ ತೀರ್ಮಾನವನ್ನು ಪ್ರಕಟಿಸಿದ್ದಾರೆ.

ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಪರವಾಗಿರುವ ಸನ್ಮಾನ್ಯ ಮುಖ್ಯ ಮಂತ್ರಿಗಳು ಮಧ್ಯ ಪವೇಶಿಸಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಗ್ಯಾರಂಟಿಗೊಳಿಸಲು ಈ ಅಧಿಸೂಚನೆಯನ್ನು ಹಿಂಪಡೆಯಲು ಶಿಕ್ಷಣ ಇಲಾಖೆಗೆ ಸೂಚಿಸಬೇಕು ಮತ್ತು ಒಟ್ಟಾರೆ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಮೂಲಕ ಫಲಿತಾಂಶ ಸುಧಾರಿಸಲು ಏನು ಮಾಡಬೇಕೆಂಬ ಬಗ್ಗೆ ಚರ್ಚಿಸಲು ತಜ್ಞರ, ಪಾಲಕರ, ಮಕ್ಕಳ, ಶಿಕ್ಷಕರ ಮತ್ತು ಗುಣಾತ್ಮಕ ಶಿಕ್ಷಣ ಪ್ರೇಮಿಗಳ ಸಭೆ ಕರೆದು ಚರ್ಚಿಸಲು ಶಿಕ್ಷಣ ಇಲಾಖೆಗೆ ಸೂಚಿಸಬೇಕಾಗಿದೆ.

share
ನಿರಂಜನಾರಾಧ್ಯ ವಿ.ಪಿ.
ನಿರಂಜನಾರಾಧ್ಯ ವಿ.ಪಿ.
Next Story
X