Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಶಿವಾಜಿಯ ತಾತ್ವಿಕತೆಗೆ ಮರುಹುಟ್ಟು ನೀಡಿದ...

ಶಿವಾಜಿಯ ತಾತ್ವಿಕತೆಗೆ ಮರುಹುಟ್ಟು ನೀಡಿದ ಜ್ಯೋತಿಬಾ ಫುಲೆ

ಇಂದು ಜ್ಯೋತಿಬಾ ಫುಲೆ ಜನ್ಮದಿನ

ರವಿ ರಾ. ಅಂಚನ್ರವಿ ರಾ. ಅಂಚನ್11 April 2025 11:48 AM IST
share
ಶಿವಾಜಿಯ ತಾತ್ವಿಕತೆಗೆ ಮರುಹುಟ್ಟು ನೀಡಿದ ಜ್ಯೋತಿಬಾ ಫುಲೆ
‘ಛತ್ರಪತಿ ಶಿವಾಜಿರಾಜೆ ಭೋಸಲೆ ಅವರ ಪಾವ್ಹಾಡಾ’ ಎಂಬ ಗೇಯ ಕಾವ್ಯ ರಚಿಸಿದ ಜ್ಯೋತಿಬಾ ಅವರ ಗುರಿ ಮತ್ತು ದಾರಿ ಸಮತಾಧಿಷ್ಠ ಸಮಾಜ ರಚನೆಯಾಗಿತ್ತು. ಅಂದಿನ ದಿನದಲ್ಲಿ ಶಿವಾಜಿ ಮಹಾರಾಜರ ಬಗ್ಗೆ ಹೆಚ್ಚಿನ ವಿಷಯಗಳು ಶೋಧನೆಯ ಪಥ ಹಿಡಿದಿರಲಿಲ್ಲ. ಶಿವಾಜಿಯನ್ನು ಮೊದಲ ಬಾರಿಗೆ ಶೂದ್ರ ಪುತ್ರ ಎಂದು ಗುರುತಿಸುತ್ತಾ ಜನಸಾಮಾನ್ಯರಲ್ಲಿ ಮರೆಯಾದ ಶಿವಾಜಿಯನ್ನು ಮತ್ತೆ ಪ್ರತಿಷ್ಠಾಪಿಸಿದವರು ಜ್ಯೋತಿಬಾ. ಇದೇ ಕೃತಿಯಲ್ಲಿ ಜ್ಯೋತಿಬಾ ಶೂದ್ರ-ಅತಿಶೂದ್ರರನ್ನು ಕ್ಷತ್ರಿಯರೆಂದು ಗುರುತಿಸಿದ್ದು ಮಾತ್ರವಲ್ಲ; ಅವರನ್ನು ಕ್ಷೇತ್ರವಾಸಿಗಳೆಂದು ಸಂಬೋಧಿಸುತ್ತಾ ಶ್ರಮಿಕರಲ್ಲಿದ್ದ ಕೀಳರಿಮೆಯನ್ನು-ಕಿತ್ತೆಸೆಯಲು ಪ್ರಯತ್ನಿಸಿದ್ದು ನಿಚ್ಚಲವಾಗಿ ಗೋಚರಿಸುತ್ತದೆ.

‘ಜಾತಿ’ ಎಂಬ ಕಗ್ಗಂಟು ಅಂದೂ ಇಂದೂ ಒಂದು ಬಿಡಿಸಲಾರದ ಕಗ್ಗಂಟಾಗಿಯೇ ಉಳಿದಿದೆ. ಭಾರತದ ಮಣ್ಣಿನಲ್ಲಿ ಜಾತಿ ವಿನಾಶಕ್ಕಾಗಿ ಕೃತಿಶೀಲ ಚಿಂತನೆ ನಡೆಸಿದವರಲ್ಲಿ ಜ್ಯೋತಿಬಾ ಅವರು ಗಮನಾರ್ಹರು. ಆದರೆ ಅದು ಮಾತ್ರ ಇಂದಿಗೂ ನಿರೀಕ್ಷಿತ ಫಲ ನೀಡಿಲ್ಲ ಎನ್ನುವುದನ್ನು ನಾವು ವಿಷಾದ ಪೂರ್ವಕವಾಗಿಯಾದರೂ ಒಪ್ಪಿಕೊಳ್ಳಲೇ ಬೇಕು. ಇದಕ್ಕೆ ಕಾರಣ ಇದರೊಳಗಿನ ಏಣಿಶ್ರೇಣಿಯ ನೆಲೆಯಲ್ಲಿ ಒಬ್ಬರು ಇನ್ನೊಬ್ಬರನ್ನು ತುಳಿಯುವ ಅಮಾನುಷ ಸಿದ್ಧಾಂತಕ್ಕೆ ಎಲ್ಲರೂ ಜೋತು ಬಿದ್ದದ್ದೇ ಆಗಿದೆ. ಪ್ರತಿಯೊಂದು ಜಾತಿಯೂ ಒಂದು ‘ಸಂಸ್ಕೃತಿ’ ಮತ್ತು ಅದೊಂದು ಸ್ವತಂತ್ರ ‘ಘಟಕ’ ಎಂದು ಒಪ್ಪಿಕೊಂಡು ಒಂದು ಜಾತಿ ಇನ್ನೊಂದು ಜಾತಿಯೊಡನೆ ಸಮಾನತೆಯೊಡನೆ ವ್ಯವಹರಿಸಿದರೆ ಅದು ಭಾರತದ ಒಕ್ಕೂಟಕ್ಕೆ, ‘ವಿವಿಧತೆಯಲ್ಲಿ ಏಕತೆಯ’ ಸೊಬಗು ನೀಡಬಲ್ಲದು. ಆದರೆ ಇದರ ನಡುವೆ ಮತಧರ್ಮಗಳು ಮೂಗು ತೂರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಜಾತಿ-ಜಾತಿಗಳ ನಡುವೆ ಅಪನಂಬಿಕೆ ಮತ್ತು ಭ್ರಮೆಗಳನ್ನು ಬಿತ್ತುತ್ತಲೇ ಇದೆ.

ಇದು ನಿಲ್ಲಬೇಕಾದರೆ ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ರಂಗಗಳಲ್ಲಿ ಎಲ್ಲ ಜಾತಿಗಳ ಧ್ವನಿ ದೃಶ್ಯವಾಗಬೇಕು. ನಾಡಿನ ಸಂಪತ್ತು ಮತ್ತು ಅಧಿಕಾರ ಎರಡರಲ್ಲೂ ಎಲ್ಲರ ಭಾಗವಹಿಸುವಿಕೆ ಇರಬೇಕು. ಯಾವುದೇ ಜಾತಿಗೆ ತನ್ನ ಜನಸಂಖ್ಯೆಗಿಂತ ಹೆಚ್ಚಿನ ಪ್ರಾತಿನಿಧ್ಯ ಈ ನಾಡಿನ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಲ್ಲಿ ದೊರೆಯಬಾರದು. ಹಾಗಾಗಬೇಕಾದರೆ ಸಮಾಜದ ಕೆಳಸ್ತರದಿಂದ ಮೇಲಿನ ಸ್ತರಕ್ಕೆ ಸಂಘಟನೆಯ ಕೊಂಡಿ ಬಲಗೊಳ್ಳಬೇಕು. ಅದನ್ನರಿತೇ ಜ್ಯೋತಿಬಾ ಕುಣಬಿ, ಮಾಲಿ, ಮಹಾರ್, ಮಾಂಗ್ ಜಾತಿಗಳನ್ನು ಬೆಸೆಯಲೋಸುಗ ಶೂದ್ರರು ಮತ್ತು ಅತಿಶೂದ್ರರು ಎಂಬ ಸಹಬಾಳ್ವೆಯ ಪರಿಕಲ್ಪನೆಯನ್ನು ತನ್ನ ಸಮಾಜಕ್ರಾಂತಿಯ ರಣತಂತ್ರವಾಗಿ ಬಳಸಿದರು. ಅದನ್ನು ಕಾಯಾ, ವಾಚಾ, ಮನಸಾ ಅನುಷ್ಠಾನಕ್ಕೆ ತರಲು ಹೆಣಗಿದರು. ಇದಕ್ಕೆ ಪೂರಕವಾಗಿ ಜ್ಯೋತಿಬಾ ಅವರು ‘ಛತ್ರಪತಿ ಶಿವಾಜಿರಾಜೆ ಭೋಸಲೆ ಅವರ ಪಾವ್ಹಾಡಾ’ ಕೃತಿಯನ್ನು ರಚಿಸಿ ರಾವ್ ಬಹದ್ದೂರ್ ರಾಮಚಂದ್ರ ಬಾಲಕೃಷ್ಣಾಜಿ ರಾಣೆ ಅವರಿಗೆ ಅರ್ಪಿಸಿದ್ದಾರೆ. ಹಿಂದೊಮ್ಮೆ ಅಧಿಕಾರದ ಅಮಲಿನಲ್ಲಿ ಮತಿಮರೆಯದೆ ಸಾಮಾಜಿಕ ಸಮತೆಗೆ ಶ್ರಮಿಸಿದ ಶ್ರೀಯುತ ರಾಣೆ ಅವರು ಕಸ್ಟಮ್ ಖಾತೆಯ ಅಸಿಸ್ಟೆಂಟ್ ಕಮಿಷನರ್ ಮತ್ತು ‘ಪರಮಹಂಸ ಸಭಾ’ ಇದರ ಅಧ್ಯಕ್ಷರಾಗಿದ್ದ ಪ್ರಗತಿಪರ ಮನಸ್ಸಿನವರಾಗಿದ್ದವರು.

ಜ್ಯೋತಿಬಾ ಅವರ ಕೃತಿ ಕಾವ್ಯಾತ್ಮಕ ಮತ್ತು ಶ್ರವ್ಯಾತ್ಮಕ ಗುಣದಿಂದ ಕೂಡಿದ್ದು ಇದನ್ನು ಅವರು ಜನಸಾಮಾನ್ಯರನ್ನು ಅನುಲಕ್ಷಿಸಿ ಬರೆದಿದ್ದಾರೆ. ಉದ್ದುದ್ದ ಸಂಸ್ಕೃತ ಶಬ್ದಗಳನ್ನು ಬಳಸದೆ ಶ್ರಮಿಕರ ಕಾಯಕದ ಭಾಷೆಯನ್ನೇ ಅಂದಿನ ದಿನಗಳಲ್ಲಿ ಬಳಸಿದ್ದರಿಂದ ಇದನ್ನು ಶ್ರಮಿಕರ ಪ್ರಾತಿನಿಧಿಕ ‘ಗಾಥೆ’ ಎಂದು ಕರೆಯಲು ಅಡ್ಡಿಯಿಲ್ಲ. ಈ ಕೃತಿಯನ್ನು ವಿಶ್ಲೇಷಿಸುತ್ತಾ ಎಸ್.ಎನ್. ಭೋಸಲೆ ಅವರು ಜ್ಯೋತಿಬಾ ಅವರನ್ನು ಓರ್ವ ‘ಅಜಾನುಬಾಹು ಸಾಹಿತಿ’ ಎಂದು ಉದ್ಗಾರವೆತ್ತಿದ್ದಾರೆ. ತನ್ನ ಕೃತಿಯ ಆರಂಭ ಶಿವಾಜಿ ಮಹಾರಾಜರನ್ನು ‘ಕೃಷಿಕಭೂಷಣ’, ’ಶೂದ್ರಪುತ್ರ’ ಎಂದು ಕರೆಯುತ್ತಾ ಅಂದು ಪ್ರಚಲಿತವಿದ್ದ ಗೋಬ್ರಾಹ್ಮಣ ಪ್ರತಿಪಾಲಕ ಎಂಬ ಚರಿತ್ರೆಯ ಹುಸಿ ನೆಲೆಗಳನ್ನು ಧಿಕ್ಕರಿಸಿದ ಮೊದಲ ನಿರ್ಭಿಡೆಯ ಕವಿ ಜ್ಯೋತಿಬಾ. ಅವರ ಕವಿತೆಗಳು ಇದೇ ಛತ್ರಪತಿ ಶಿವಾಜಿಯ ಕುರಿತು ಇಂದು ನಿರಂತರವಾಗಿ ಬರುತ್ತಿರುವ ಶೋಧಾತ್ಮಕ ಕೃತಿಗಳಿಗೆ ತಳಪಾಯ. ಇದನ್ನು ಹಾಕಿದವರೇ ಜ್ಯೋತಿಬಾ ಎನ್ನುವುದು ಕೂಡಾ ಗಮನಾರ್ಹ.

ಪರಂಪರಾನಿಷ್ಠರ ಲೇಖನಿ; ಶಿವಾಜಿಯ ವ್ಯಕ್ತಿತ್ವಕ್ಕೆ ಶಕ್ತಿ ನೀಡಿದವರಲ್ಲಿ ದಾದೋಜಿ ಕೊಂಡದೇವ ಮುತಾಲಿಕ್, ಸಮರ್ಥ ರಾಮದಾಸ ಮತ್ತು ಕಾಶಿನಾಥ್ ಗಾಗಾ ಭಟ್ಟ ಇವರನ್ನು ಹೆಸರಿಸಲಾಗುತ್ತಿದೆ. ಇದು ಚರಿತ್ರೆಯ ಹುಸಿನೆಲೆಯೆಂದು ಸಾರಿದ ಜ್ಯೋತಿಬಾ ‘‘ಮೀನು ನೀರಿನಲ್ಲಿ ಆಡುತ್ತದೆ. ಗುರು ಯಾರು ಅದರ?’’ ಎಂಬ ಕಾವ್ಯಾತ್ಮಕ ಪ್ರಶ್ನೆಯಿಂದಲೇ ಸತ್ಯದತ್ತ ಅಂದೇ ಬೊಟ್ಟು ಮಾಡಿದ್ದರು ಎನ್ನುವಾಗ ಆಶ್ಚರ್ಯವಾಗುತ್ತದೆ. ಅಂದಿನ ದಿನದಲ್ಲಿ ಶಿವಾಜಿ ಮಹಾರಾಜರ ಬಗ್ಗೆ ಹೆಚ್ಚಿನ ವಿಷಯಗಳು ಶೋಧನೆಯ ಪಥ ಹಿಡಿದಿರಲಿಲ್ಲ. ಶಿವಾಜಿಯನ್ನು ಮೊದಲ ಬಾರಿಗೆ ಶೂದ್ರ ಪುತ್ರ ಎಂದು ಗುರುತಿಸುತ್ತಾ ಜನಸಾಮಾನ್ಯರಲ್ಲಿ ಮರೆಯಾದ ಶಿವಾಜಿಯನ್ನು ಮತ್ತೆ ಪ್ರತಿಷ್ಠಾಪಿಸಿದವರು ಜ್ಯೋತಿಬಾ. ಇದೇ ಕೃತಿಯಲ್ಲಿ ಜ್ಯೋತಿಬಾ ಶೂದ್ರ-ಅತಿಶೂದ್ರರನ್ನು ಕ್ಷತ್ರಿಯರೆಂದು ಗುರುತಿಸಿದ್ದು ಮಾತ್ರವಲ್ಲ; ಅವರನ್ನು ಕ್ಷೇತ್ರವಾಸಿಗಳೆಂದು ಸಂಬೋಧಿಸುತ್ತಾ ಶ್ರಮಿಕರಲ್ಲಿದ್ದ ಕೀಳರಿಮೆಯನ್ನು-ಕಿತ್ತೆಸೆಯಲು ಪ್ರಯತ್ನಿಸಿದ್ದು ನಿಚ್ಚಲವಾಗಿ ಗೋಚರಿಸುತ್ತದೆ.

ತನ್ನ ಸಾಮಾಜಿಕ ಕ್ರಾಂತಿಗೆ ಶಿವಾಜಿಯ ಜೀವನಗಾಥೆಯನ್ನು ಎತ್ತಿಕೊಂಡ ಜ್ಯೋತಿಬಾ; ಅದರಲ್ಲಿ ರಾಜಮಾತೆ ಜೀಜಾಬಾಯಿಯ ಜನಪರ ಒಲವಿನತ್ತ ಬೆಳಕು ಚೆಲ್ಲುತ್ತಾ; ಬಾಲ ಶಿವಾಜಿಯನ್ನು ಬಿಂಬಿಸಿದ ರೀತಿ ಚೇತೋಹಾರಿಯಾಗಿದೆ. ಅದರಲ್ಲಿ ಜೀಜಾಬಾಯಿ ಶಿವಾಜಿಗೆ ಹೇಳುವ ಮಾತುಗಳು ಜ್ಯೋತಿಬಾ ಅವರಿಗೆ ಅವರ ಪಾಲಿತ ಮಾತೆ ಸುಗುಣಾಬಾಯಿ ಹೇಳಿದಂತೆ ಕೇಳಿಸುತ್ತದೆ. ‘‘ಹಿಂದೂಸ್ಥಾನದಲ್ಲಿ ಸತ್ತೆ ನಿಮ್ಮದು ರಾಣಿಬಾಯಿ. ಆದರೆ ಎಲ್ಲೆಲ್ಲೂ ಪುರೋಹಿತಶಾಹಿ; ಕಣ್ಣು ಬಿಟ್ಟು ನೋಡು!’’ ಎಂಬ ಎಚ್ಚರಿಕೆ ಸಂತ ತುಕಾರಾಮನ ಧ್ವನಿ ಎಂದು ಅಂದು ಎಷ್ಟು ಮಂದಿಗೆ ಅರ್ಥವಾಗಿತ್ತೋ ಯಾರಿಗೆ ಗೊತ್ತು? ಆದರೆ ಇಂದು ಈ ಚಾರಿತ್ರಿಕ ಸತ್ಯ ನಮ್ಮ ಮುಂದೆ ಅನಾವರಣಗೊಂಡಿದೆ. ಇದೇ ಜ್ಯೋತಿಬಾ ಅವರ ಕಾವ್ಯ ಶಕ್ತಿ.

ಜ್ಯೋತಿಬಾ ಅವರ ಕಾವ್ಯದಲ್ಲಿ ‘‘ನಮ್ಮ ರಾಜ ಬಲಿ; ನಮ್ಮ ದೇಶ ಬಲಿಸ್ಥಾನ; ಸರ್ವ ಸಾಕ್ಷಿ ಜಗಪತಿ; ಅವನಿಗೆ ಬೇಡ ಮಧ್ಯಸ್ಥಿ’’ ಎನ್ನುವ ಮಾತಿನಲ್ಲಿ ಮಣ್ಣಿನ ಮಕ್ಕಳ ಕಳೆದು ಹೋದ ಇತಿಹಾಸ ಮಾತ್ರ ದಕ್ಕುತ್ತಿರುವುದು ಮಾತ್ರವಲ್ಲ, ಅದು ಈ ನಾಡಿನ ಮೂಲ ನಿವಾಸಿಗಳ ತಲೆಯಲ್ಲಿ ತುಂಬಿದ ಮೂಢನಂಬಿಕೆ ಮತ್ತು ಅಂಧಶ್ರದ್ಧೆ ಎರಡರ ಭ್ರಮೆಗಳನ್ನು ಬಿಡಿಸುವ ಕರೆಗಂಟೆಯಂತೆ ಕೇಳಿಸುತ್ತಿದೆ. ಶಿವಾಜಿಯ ಸ್ವರಾಜನಿಷ್ಠೆಗೆ ಬಿಜಾಪುರದ ಮುಹಮ್ಮದ್ ಆದಿಲ್ ಶಾಹಿಯಿಂದ ಬರಬಹುದಾದ ಆತಂಕಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ದಾದೋಜಿ ಕೊಂಡದೇವನ; ಶಿವಾಜಿಯ ಭಂಡಾರವನ್ನೇ ತನ್ನ ರಾಜ್ಯಾಭಿಷೇಕದ ನಿಮಿತ್ತ ತನ್ನ ಜಾತಿ ಬಾಂಧವರಿಗೆ ಮಾತ್ರ ಧಾರೆಯೆರೆಯುವಂತೆ ಒತ್ತಡ ಹೇರಿ; ವಿವಾದ ಎಬ್ಬಿಸಿ ಸಾಮಾಜಿಕ ಬಿರುಕಿಗೆ ಕಾರಣನಾದ ಮಹಾರಾಷ್ಟ್ರ ಮೂಲದ ಕಾಶಿನಾಥ್ ಗಾಗಾ ಭಟ್ಟ ಮತ್ತು ಶಿವಾಜಿ ಬದುಕಿದ್ದಷ್ಟು ಕಾಲ ಆತನ ರಾಜ್ಯಕ್ಕೆ ಕಾಲಿಡದೆ ಆದಿಲ್ ಶಾಹಿಯ ರಾಜ್ಯದಲ್ಲಿ ಹನುಮಂತ ದೇವಾಲಯ ಮತ್ತು ರಾಮದಾಸಿ ಮಠ ನಿರ್ಮಿಸುವುದರಲ್ಲಿ ಮಗ್ನನಾಗಿದ್ದ ಸಮರ್ಥ ರಾಮದಾಸ ‘ತನ್ನನ್ನೇ’ ಶಿವಾಜಿಯ ಗುರುವೆಂದು ಶಿವಾಜಿಯ ಆನಂತರದಲ್ಲಿ ‘ಪೋಸ್’ ನೀಡುತ್ತಲಿದ್ದ ಚರಿತ್ರೆಯ ಹುಸಿ ನೆಲೆಗಳು; ಇಂದು ತಡವಾಗಿಯಾದರೂ ಬೆಳಕಿಗೆ ಬರುತ್ತಿರುವುದು ಜ್ಯೋತಿಬಾ ಅವರ ‘ಛತ್ರಪತಿ ಶಿವಾಜಿರಾಜೆ ಭೋಸಲೆ ಅವರ ಪಾವ್ಹಾಡಾ’ ಎಂಬ ಕಾವ್ಯ ದೀವಿಗೆಯಿಂದ ಎಂದರೆ ಅತಿಶಯೋಕ್ತಿ ಆಗಲಾರದೇನೋ! ಹೀಗೆಂದೇ ಇತ್ತೀಚೆಗೆ ಪುಣೆ ಮಹಾ ನಗರಪಾಲಿಕೆಯ ಆವರಣದಿಂದ ದಾದೋಜಿ ಕೊಂಡದೇವನ ಮೂರ್ತಿಯನ್ನು ಕಿತ್ತೆಸೆಯಬೇಕೆಂದು ‘ಸಂಭಾಜಿ ಬ್ರಿಗೇಡ್’ ಇದರ ಕಾರ್ಯಕರ್ತರು ದಾಂಧಲೆ ಎಬ್ಬಿಸಿದ್ದನ್ನು ಮರೆಯುವುದೆಂತು?

ಮರಾಠಿಯಲ್ಲಿ ‘ಪಾವ್ಹಾಡಾ’ ಎನ್ನುವುದು ಒಂದು ವಿಶಿಷ್ಟ ಕಾವ್ಯ ಪ್ರಕಾರ, ಇಲ್ಲಿ ಪಾವ್ಹಾಡಾ ಎಂಬ ಶಬ್ದಕ್ಕೆ ಹಲವು ಅರ್ಥಗಳಿವೆ. ಇದರಲ್ಲಿ ಪ್ರಸಂಗ, ಸ್ತುತಿ, ಅತಿಮಾನುಷ ಶ್ರೇಯಾ, ಅದ್ಭುತ ಕಾರ್ಯ, ಆಶ್ಚರ್ಯ ಇತ್ಯಾದಿ ಅರ್ಥಗಳಿವೆ. ಜ್ಯೋತಿಬಾ ಜನಸಾಮಾನ್ಯರಿಗೆ ಮುಟ್ಟಬಲ್ಲ ಮತ್ತು ಅವರನ್ನು ತಟ್ಟಬಲ್ಲ ನಾಟಕೀಯ ಕಾವ್ಯ ಪ್ರಕಾರ ಪಾವ್ಹಾಡಾವನ್ನೇ ಶಿವರಾಯನ ಚರಿತ್ರೆಗಾಗಿ ಆಯ್ದುಕೊಂಡಿರುವುದು ಅವರ ದೇಶೀ ಪರಂಪರೆಯ ಒಲವನ್ನು ತೋರಿಸುತ್ತದೆ. ಯಾಕೆಂದರೆ ಕುಣಿತ ಮತ್ತು ಹಾಡು ಇವೆರಡು ಪ್ರಾಚೀನ ಕಾಲದಿಂದಲೂ ಮಾನವ ಸಂಸ್ಕೃತಿಯನ್ನು ಸೆರೆ ಹಿಡಿಯುತ್ತಾ ಬಂದ ಮಾಧ್ಯಮಗಳು. ಅಲ್ಲಿನ ಸೃಜನಶೀಲ ಕಸುವು ಮತ್ತು ಅದು ಸಮಾಜ ಪ್ರಬೋಧನೆಯಲ್ಲಿ ನಿರ್ವಹಿಸುವ ಪಾತ್ರ ಇಂದಿಗೂ ಅನನ್ಯವಾದುದು. ಇದಕ್ಕೆ ಹೆಚ್ಚು ದೂರ ಹೋಗಬೇಕಿಲ್ಲ. ನೋಡಿ, ಇಂದಿನ ಕ್ರಾಂತಿ ಕವಿ ಗದ್ದಾರ್ ಅವರ ಕಂಠಶ್ರೀಗೆ ಜನಜಾತ್ರೆಯೇ ಸೇರುತ್ತಿದೆ; ಅದರ ಸ್ಫೂರ್ತಿಯಿಂದ ತಮ್ಮ ಸ್ವಾಭಿಮಾನ ಮತ್ತು ಅನನ್ಯತೆಯ ರಕ್ಷಣೆಗಾಗಿ ಜನಮಾನಸ ಕಟಿಬದ್ಧವಾಗುತ್ತಿದೆ. ಅದೇ ಇಂತಹ ಮಾಧ್ಯಮಗಳ ಕಸುವು ಎಂದು ಬೇರೆ ಹೇಳಬೇಕಾಗಿಲ್ಲ.

ಮೊದಲಿಗೆ ತೃತೀಯ ರತ್ನ ನಾಟಕ; ಆಬಳಿಕ ‘ಛತ್ರಪತಿ ಶಿವಾಜಿರಾಜೆ ಭೋಸಲೆ ಅವರ ಪಾವ್ಹಾಡಾ’ ಎಂಬ ಗೇಯ ಕಾವ್ಯ ರಚಿಸಿದ ಜ್ಯೋತಿಬಾ ಅವರ ಗುರಿ ಮತ್ತು ದಾರಿ ಸಮತಾಧಿಷ್ಠ ಸಮಾಜ ರಚನೆಯಾಗಿತ್ತು. ಅದರಲ್ಲಿ ಎಲ್ಲರಿಗೂ ಸಮಬಾಳು ಮತ್ತು ಸಮಪಾಲು ದೊರೆಯಬೇಕೆಂಬ ತುಡಿತವಿತ್ತು. ಹಿಂದೊಮ್ಮೆ ಗೌತಮ ಬುದ್ಧ ‘ಬಹುಜನ ಸುಖಾಯ; ಬಹುಜನ ಹಿತಾಯ’ ಎಂಬ ಸಮತೆಯ ಪ್ರಮೇಯವನ್ನು ಲೋಕಕ್ಕೆ ನೀಡಿದ್ದಿದೆ. ಅದರಲ್ಲಿ ಇದ್ದುದು ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಆಯಾಮಗಳು. ಇದರ ಒಂದು ವಿಸ್ತರಣೆ ಜ್ಯೋತಿಬಾ ಅವರಲ್ಲಿ ಕಾಣಬಹುದು. ಇದಕ್ಕೆ ಜ್ಯೋತಿಬಾ ಮಾತ್ರ ಆರ್ಥಿಕ ಆಯಾಮವನ್ನೂ ಸೇರಿಸಿ ಹೊಸ ದಿಶೆಯನ್ನು ನೀಡಿದರು.

(24.07.2011)

share
ರವಿ ರಾ. ಅಂಚನ್
ರವಿ ರಾ. ಅಂಚನ್
Next Story
X