Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಲಂಡನ್ ಡೈರಿ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಎಐ ವೇಗಕ್ಕೆ ಕನ್ನಡ ವ್ಯಾಕರಣ ಬಲಿ

ಎಐ ವೇಗಕ್ಕೆ ಕನ್ನಡ ವ್ಯಾಕರಣ ಬಲಿ

ಸರಕಾರಿ ಪ್ರಕಟಣೆಯಲ್ಲೂ ಕಾಗುಣಿತ ದೋಷ!

ಶರಬು ಬಿ.ನಾಟೇಕಾರ್ ಯಾದಗಿರಿ/ವಾರ್ತಾಭಾರತಿಶರಬು ಬಿ.ನಾಟೇಕಾರ್ ಯಾದಗಿರಿ/ವಾರ್ತಾಭಾರತಿ27 Nov 2026 3:10 PM IST
share
ಎಐ ವೇಗಕ್ಕೆ ಕನ್ನಡ ವ್ಯಾಕರಣ ಬಲಿ

ಯಾದಗಿರಿ: ‘ಅಡನ್ಟು’ ಅಂದರೆ ‘ಅದನ್ನು’, ‘ಮಾದಗಿರಿ’ ಅಂದರೆ ‘ಯಾದಗಿರಿ’ ಇದು ಎಐ ನೀಡುತ್ತಿರುವ ಹೊಸ ಕನ್ನಡ. ಇದು ಮಾತ್ರವಲ್ಲ, ಇಂತಹ ಹಲವಾರು ಎಡವಟ್ಟನ್ನು ಎಐ ಮಾಡುತ್ತಿದೆ. ಅದಾಗ್ಯೂ, ಈ ತಪ್ಪನ್ನು ಸರಿಪಡಿಸದೆ, ಎಐ ನೀಡಿದ ಪೋಸ್ಟರ್ ಗಳನ್ನು ಯಥಾವತ್ತು ಬಳಸಿಕೊಳ್ಳಲಾಗುತ್ತದೆ.

ಇತ್ತೀಚೆಗೆ ಯಾದಗಿರಿ ನಗರಸಭೆ ಪೌರಾಯುಕ್ತರು ನೀರಿನ ವ್ಯತ್ಯಯ ಕುರಿತು ಹಂಚಿಕೊಂಡ ಪೋಸ್ಟರ್ ನಲ್ಲೂ ವ್ಯಾಪಕವಾಗಿ ಕನ್ನಡ ಅಕ್ಷರಗಳ ಕಾಗುಣಿತ ತಪ್ಪಿದೆ. ಇದು ಎಐ ಬಳಕೆಯ ಬಗ್ಗೆ ಸ್ಥಳೀಯ ಮಟ್ಟದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಕೆಲವು ಸಾರ್ವಜನಿಕ ಪ್ರಕಟಣೆಗಳು, ರಾಜಕಾರಣಿಗಳು, ಪತ್ರಕರ್ತರು ಹಾಗೂ ಸಂಘಟನೆಗಳ ಮುಖಂಡರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಪೋಸ್ಟ್‌ಗಳಲ್ಲಿ ಎಐ ಮೂಲಕ ಸಿದ್ಧಪಡಿಸಿದ ಅರ್ಥಹೀನ ವಾಕ್ಯಗಳು, ತಪ್ಪು ಪದಪ್ರಯೋಗಗಳು ಮತ್ತು ವ್ಯಾಕರಣ ದೋಷಗಳು ಎದ್ದು ಕಾಣುತ್ತಿವೆ. ಎಐ ಸಿದ್ಧಪಡಿಸಿದ ಬರಹಗಳನ್ನು ಪರಿಶೀಲಿಸದೆ ಯಥಾವತ್ತಾಗಿ ಪ್ರಕಟಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ಕನ್ನಡ ಭಾಷೆಯ ಗೌರವ ಮತ್ತು ಅಸ್ಮಿತೆಗೆ ಧಕ್ಕೆ ತರುತ್ತಿದೆ ಎಂಬ ಆತಂಕ ವ್ಯಕ್ತವಾಗಿದೆ.

ಇತ್ತೀಚೆಗೆ ಕೆಲವು ಕನ್ನಡಪರ ಹೋರಾಟಗಾರರ ಸಾಮಾಜಿಕ ಜಾಲತಾಣ ಪುಟಗಳಲ್ಲಿಯೂ ಅಕ್ಷರ ದೋಷಗಳ ಎಐ ಪೋಸ್ಟರ್‌ಗಳು ಕಂಡುಬಂದಿವೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ಕನ್ನಡದ ಭಾಷೆಯನ್ನು ಬೇಕಾಬಿಟ್ಟಿ ಬಳಸುವುದು ಎಷ್ಟು ಸರಿ ಎಂಬ ಪ್ರಶ್ನೆ ಇದೀಗ ಮುನ್ನೆಲೆಗೆ ಬಂದಿದೆ.

ಮದುವೆ ಆಮಂತ್ರಣ ಪತ್ರಿಕೆಗಳು, ಅಭಿನಂದನಾ ಸಂದೇಶಗಳು, ನಿವೃತ್ತಿ ಶುಭಾಶಯಗಳು, ಶ್ರದ್ಧಾಂಜಲಿ ಪ್ರಕಟಣೆಗಳು, ವಿದೇಶಿ ಪ್ರಯಾಣದ ಶುಭಾಶಯಗಳು ಹಾಗೂ ಪ್ರಶಸ್ತಿ ಪುರಸ್ಕಾರಗಳ ಅಭಿನಂದನೆ ಸೇರಿದಂತೆ ದಿನನಿತ್ಯದ ನೂರಾರು ಸಾಮಾಜಿಕ ಜಾಲತಾಣದ ಪೋಸ್ಟ್‌ಗಳಲ್ಲಿ ಭಾಷಾ ದೋಷಗಳು ಕಾಣಿಸಿಕೊಳ್ಳುತ್ತಿವೆ. ಎಐ ತಂತ್ರಜ್ಞಾನದ ವೇಗದ ಜತೆಗೆ ಕನ್ನಡ ಭಾಷೆಯ ಅಚ್ಚುಕಟ್ಟಿನ ಬಳಕೆಗೂ ಆದ್ಯತೆ ನೀಡಬೇಕಿದೆ.

ಎಐ ಹೇಳಿದ್ದೆಲ್ಲ ಸತ್ಯವಲ್ಲ!

ಕೃತಕ ಬುದ್ಧಿಮತ್ತೆ ಎಂಬುದು ಲಭ್ಯವಿರುವ ಮಾಹಿತಿಯನ್ನು ಆಧರಿಸಿ ಬಳಕೆದಾರರ ಪ್ರಶ್ನೆಗಳಿಗೆ ಕ್ಷಣಾರ್ಧದಲ್ಲಿ ಉತ್ತರ ನೀಡುವ ತಂತ್ರಜ್ಞಾನ. ಆದರೆ, ಅದು ನೀಡುವ ಪ್ರತಿಯೊಂದು ಮಾಹಿತಿಯೂ ನೂರಕ್ಕೆ ನೂರು ಸರಿ ಎಂದರ್ಥವಲ್ಲ. ಅದರಲ್ಲೂ ಭಾಷಾಂತರ, ಕನ್ನಡ ಪದಗಳ ಬಳಕೆ, ವಾಕ್ಯ ರಚನೆ ಹಾಗೂ ವ್ಯಾಕರಣದಲ್ಲಿ ಕೆಲವೊಮ್ಮೆ ದೋಷಗಳು ಕಾಣಿಸಿಕೊಳ್ಳಬಹುದು. ತಪ್ಪು ಮತ್ತು ಸರಿಯನ್ನು ಗುರುತಿಸುವ ಭಾಷಾ ಜ್ಞಾನ ಹಾಗೂ ವಿವೇಚನೆ ಬಳಕೆದಾರರಲ್ಲಿರಬೇಕು. ಎಐ ಮನುಷ್ಯನಿಗೆ ಸಹಾಯಕ ತಂತ್ರಜ್ಞಾನವೇ ಹೊರತು, ಮನುಷ್ಯನ ವಿವೇಚನೆಗೆ ಪರ್ಯಾಯವಲ್ಲ.

ಎಐ ಮೂಲಕ ಸಿದ್ಧಪಡಿಸುವ ಪೋಸ್ಟ್‌ಗಳಲ್ಲಿರುವ ತಪ್ಪುಗಳನ್ನುಪರಿಶೀಲಿಸುವ ತಾಳ್ಮೆ ನಮ್ಮ ಕನ್ನಡಾಭಿಮಾನಿಗಳಲ್ಲಿ ಕಡಿಮೆಯಾಗುತ್ತಿದೆ. ತಪ್ಪು ಪದಗಳು ಮತ್ತು ವ್ಯಾಕರಣ ದೋಷಗಳಿಂದ ಕೂಡಿದ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲಾಗುತ್ತಿದೆ. ತಂತ್ರಜ್ಞಾನ ಬಳಸುವ ಭರದಲ್ಲಿ ನಮ್ಮ ಮಾತೃಭಾಷೆಗೆ ನಾವೇ ಅಗೌರವ ತರುವಂತಾಗಬಾರದು. ಕನ್ನಡಭಾಷೆಯ ಶುದ್ಧತೆ ಮತ್ತು ಗೌರವ ಕಾಪಾಡುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ.

<ಟಿ.ಎನ್.ಭೀಮು ನಾಯಕ

ಜಿಲ್ಲಾಧ್ಯಕ್ಷರು, ಕರವೇ

ಕನ್ನಡ ಭಾಷೆಯ ತಿಳುವಳಿಕೆ ಇರುವವರೇ ತಪ್ಪು ಮಾಡಿದರೆ ಕನ್ನಡಾಭಿಮಾನಕ್ಕೆ ಅರ್ಥವೇನು? ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮುನ್ನ ಅಕ್ಷರ, ವ್ಯಾಕರಣ ಹಾಗೂ ಕಾಗುಣಿತದ ತಪ್ಪುಗಳನ್ನು ಪರಿಶೀಲಿಸಬೇಕು. ಕನ್ನಡದ ಅಸ್ಮಿತೆ ಉಳಿಸುವುದರ ಜೊತೆಗೆ ಭಾಷೆಯನ್ನು ಗೌರವಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ.

ಸಿದ್ದಪ್ಪ ಹೊಟ್ಟಿ, ಜಿಲ್ಲಾಧ್ಯಕ್ಷರು

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಯಾದಗಿರಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಯಾದಗಿರಿ

ಎಐ ಆ್ಯಪ್‌ಗಳ ಬಳಕೆಗೆ ನಮ್ಮ ವಿರೋಧವಿಲ್ಲ. ಆದರೆ, ತಂತ್ರಜ್ಞಾನದ ಭರದಲ್ಲಿ ಕನ್ನಡ ಭಾಷೆಯ ಅಭಿಮಾನ ಮರೆಯಾಗಬಾರದು. ಎಐ ನೀಡುವ ಮಾಹಿತಿಯನ್ನು ಪರಿಶೀಲಿಸದೆ ಅಕ್ಷರ, ವ್ಯಾಕರಣ ಹಾಗೂ ಕಾಗುಣಿತದ ತಪ್ಪುಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವುದು ಸರಿಯಲ್ಲ. ಎಐ ಸಂಸ್ಥೆಗಳು ಕನ್ನಡ ಭಾಷಾ ಪರಿಣತರಿಗೆ ಅವಕಾಶ ನೀಡಿ ಭಾಷೆಯ ಶುದ್ಧತೆಗೆ ಆದ್ಯತೆ ನೀಡಬೇಕು. ತಂತ್ರಜ್ಞಾನ ಬೆಳೆಯಲಿ, ಅದರೊಂದಿಗೆ ಕನ್ನಡ ಭಾಷೆಯ ಗೌರವ ಮತ್ತು ಅಸ್ಮಿತೆಯೂ ಉಳಿಯಲಿ.

<ಶರಣು ಬಿ.ಗದ್ದುಗೆ

ಅಧ್ಯಕ್ಷರು, ಕರವೇ ಉತ್ತರ ಕರ್ನಾಟಕಅಧ್ಯಕ್ಷರು, ಕರವೇ ಉತ್ತರ ಕರ್ನಾಟಕ

share
ಶರಬು ಬಿ.ನಾಟೇಕಾರ್ ಯಾದಗಿರಿ/ವಾರ್ತಾಭಾರತಿ
ಶರಬು ಬಿ.ನಾಟೇಕಾರ್ ಯಾದಗಿರಿ/ವಾರ್ತಾಭಾರತಿ

ಶರಬು ಬಿ.ನಾಟೇಕಾರ್ ಅವರು 2018ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಎಂ.ಎ. ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಳೆದ ಎಂಟು ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ವಿವಿಧ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಪ್ರಸ್ತುತ ವಾರ್ತಾಭಾರತಿ ದಿನಪತ್ರಿಕೆಯ ಯಾದಗಿರಿ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ

Next Story
X