Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ನೀಲಿ ಆರ್ಥಿಕತೆಯೊಳಗೆ ಕೇರಳದ ಪ್ರವೇಶ...

ನೀಲಿ ಆರ್ಥಿಕತೆಯೊಳಗೆ ಕೇರಳದ ಪ್ರವೇಶ ಮತ್ತು ಅದರ ವೈರುಧ್ಯಗಳು

ಶಿಲ್ಪಾ ಕೃಷ್ಣನ್ಶಿಲ್ಪಾ ಕೃಷ್ಣನ್10 Jan 2026 11:36 AM IST
share
ನೀಲಿ ಆರ್ಥಿಕತೆಯೊಳಗೆ ಕೇರಳದ ಪ್ರವೇಶ ಮತ್ತು ಅದರ ವೈರುಧ್ಯಗಳು

ಪರಿಸರ ಪ್ರಭಾವ ಮೌಲ್ಯಮಾಪನ (ಇಐಎ)ವು ಯಾವುದೇ ಗುರುತರ ಪ್ರಭಾವ ಬೀರುವುದಿಲ್ಲ ಎಂದು ಹೇಳಿಕೆ ನೀಡಿದ್ದರೂ, ವಿಳಿಂಜಮ್ ಬಂದರಿನ ನಿರ್ಮಾಣ ಮತ್ತು ಕಾರ್ಯಾಚರಣೆಯು ಈ ಪ್ರದೇಶದಲ್ಲಿ ಬದುಕುವವರ ವೈವಿಧ್ಯಮಯ ಜೀವನೋಪಾಯದ ಮೇಲೆ ಗಣನೀಯ ಪರಿಣಾಮ ಬೀರಿದೆ. ಪರಿಣಾಮಕ್ಕೊಳಗಾಗಿರುವ ವ್ಯಕ್ತಿಗಳ, ವಿಶೇಷವಾಗಿ ಮೀನುಗಾರರ ಸಂಖ್ಯೆಯು, ವಿಳಿಂಜಮ್ ಅಂತರ್‌ರಾಷ್ಟ್ರೀಯ ಬಂದರು ನಿಯಮಿತವು ಮಾಡಿರುವ ಮೂಲ ಅಂದಾಜಿಗಿಂತ ಬಹಳಷ್ಟು ಹೆಚ್ಚಿದೆ.

ಸರಣಿ - 2

ಸೆಪ್ಟಂಬರ್ 18-19, 2025ರಂದು ಕೊಲ್ಲಂನಲ್ಲಿ ನಡೆದ -ಕೇರಳ -ಐರೋಪ್ಯ ಒಕ್ಕೂಟಗಳ ನೀಲಿ ಆರ್ಥಿಕತೆಯ ಸಮಾವೇಶವು ತನ್ನ ಕರಾವಳಿಯ ಹಾಗೂ ಸಾಗರದ ಸಂಪನ್ಮೂಲಗಳನ್ನು ಬಂಡವಾಳವಾಗಿಸುವ ಕೇರಳ ಸರಕಾರದ ಉದ್ದೇಶಕ್ಕೆ ಅಡಿಗಲ್ಲಾಯಿತು. ‘ಎರಡು ತೀರಗಳು, ಒಂದು ದೃಷ್ಟಿ’ ಎನ್ನುವ ವಿಚಾರದಡಿಯಲ್ಲಿ, ಬ್ಲೂ ಟೈಡ್ಸ್ ಕೇರಳ-ಇಯು ಕಾನ್ಕ್ಲೇವ್ ಎನ್ನುವ ಶೀರ್ಷಿಕೆಯನ್ನು ಹೊತ್ತು ನಡೆದ ಈ ಸಮಾವೇಶವು ಕೇಂದ್ರ ಸರಕಾರ ಒತ್ತು ನೀಡುತ್ತಿರುವ ನೀಲಿ ಆರ್ಥಿಕತೆ ಮತ್ತು ಸಾಗರಮಾಲಾ ಮಿಶನ್‌ಗೆ ಮಾತ್ರವಲ್ಲದೆ ಖಾಸಗಿ ಹೂಡಿಕೆಯನ್ನು ಆಕರ್ಷಿಸುವ ಕೇರಳದ ಇಂಗಿತಕ್ಕೆ ಸರಿಹೊಂದುವಂತಿತ್ತು.

ಐರೋಪ್ಯ ಒಕ್ಕೂಟದ 18 ರಾಷ್ಟ್ರಗಳ ರಾಯಭಾರಿಗಳು ಮತ್ತು ಪ್ರತಿನಿಧಿಗಳ ಉಪಸ್ಥಿತಿಯೊಂದಿಗೆ ಹಾಗೂ ರೂ. 7,288 ಕೋಟಿ ಮೌಲ್ಯದ ಒಪ್ಪಂದಗಳೊಂದಿಗೆ, ಇದನ್ನು ಜ್ಞಾನ, ತಂತ್ರಜ್ಞಾನ ಮತ್ತು ಪರಿಣತಿಗಳ ವರ್ಗಾವಣೆಯ ಮೂಲಕ ‘ಸುಸ್ಥಿರ’ ಸಂಪನ್ಮೂಲ ಬಳಕೆಯಲ್ಲಿ ಹೂಡಿಕೆ ಎಂದು ಬಿಂಬಿಸಲಾಗುತ್ತಿದೆ.

ಈ ಸಮಾವೇಶವು ಮೀನುಗಾರರು ಹಾಗೂ ಉದ್ಯಮಶೀಲರಿಗೆ ಸುಸ್ಥಿರ ಚೌಕಟ್ಟಿನೊಳಗೆ ಬೆಳವಣಿಗೆ, ಉದ್ಯೋಗಗಳು ಹಾಗೂ ಅವಕಾಶಗಳುಳ್ಳ ಭವಿಷ್ಯದ ಭರವಸೆ ನೀಡಿತು.

ಆದರೆ ಈ ಭರವಸೆಗಳು ವಸ್ತುಸ್ಥಿತಿಯ ಸಂಘರ್ಷವನ್ನು ಎದುರಿಸಬೇಕಿದೆ. ಬೃಹತ್ ಪ್ರಮಾಣದ ಮೂಲಸೌಕರ್ಯ ಯೋಜನೆಗಳಿಗೆ ಆದ್ಯತೆ ನೀಡುವುದರೊಂದಿಗೆ ಮತ್ತು ಜಾಗತಿಕ ವ್ಯಾಪಾರದ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯವು ತನ್ನನ್ನು ಅಂತರ್‌ರಾಷ್ಟ್ರೀಯ ಕಡಲ ಆರ್ಥಿಕತೆಯ ತಾಣವಾಗಿ ಸ್ಥಾಪಿಸಿಕೊಳ್ಳುತ್ತಿದೆ. ಆದರೂ ಈ ದೂರದೃಷ್ಟಿಯು ತಾನು ಸಬಲಗೊಳಿಸುತ್ತಿರುವೆನೆಂದು ಹೇಳುತ್ತಿರುವ, ಈಗಾಗಲೇ ಪರಿಸರ ವಿನಾಶ, ಯಾಂತ್ರೀಕೃತ ಮೀನುಗಾರಿಕೆ ಮತ್ತು ಹವಾಮಾನ ಬದಲಾವಣೆಗಳಿಂದ ಸಂಕಷ್ಟಕ್ಕೊಳಗಾಗಿರುವ, ಸಣ್ಣ ಪ್ರಮಾಣದ ಮೀನುಗಾರ ಸಮುದಾಯಗಳನ್ನೇ ಮೂಲೆಗುಂಪಾಗಿಸುವ ಅಪಾಯವಿದೆ.

ಕೇರಳದ ಆರ್ಥಿಕತೆಯು ಸಾಲದ ಸುಳಿಯಲ್ಲಿ ಸಿಲುಕಿದೆ. ಏರುತ್ತಿರುವ ನಿರುದ್ಯೋಗವು ಸರಕಾರ ತನ್ನ ಅಧಿಕೃತ ಹೇಳಿಕೆಗಳಲ್ಲಿ ಬೆಳವಣಿಗೆ ಮತ್ತು ಒಳಗೊಳ್ಳುವಿಕೆಯ ಭರವಸೆ ನೀಡುವ ಸಹಯೋಗಗಳ ಬೆನ್ನತ್ತುವಂತೆ ಮಾಡಿದೆ. ಕೇಂದ್ರ ಸರಕಾರದಿಂದ ನಿರಾಕರಿಸಲ್ಪಟ್ಟಿರುವ ಆರ್ಥಿಕ ಬೆಂಬಲ ಮತ್ತು ಬದಲಾಗುತ್ತಿರುವ ಆಡಳಿತ ನೀತಿಗಳು ಈ ನಡೆಯನ್ನು ಇನ್ನಷ್ಟು ಸುಗಮಗೊಳಿಸಿವೆ.

ವಿಳಿಂಜಮ್ ಬಂದರು

ವ್ಯಾಪಾರಿ ಬಂದರುಗಳು ನೀಲಿ ಆರ್ಥಿಕತೆಯ ಬೆನ್ನೆಲುಬಾಗಿ ಹೊರಹೊಮ್ಮಿವೆ. ಈ ಉಪಕ್ರಮಗಳಲ್ಲಿ ವಿರಿಂಜಂ ಅಂತರ್‌ರಾಷ್ಟ್ರೀಯ ಬಂದರು ಒಂದು ಪ್ರಮುಖ ಯೋಜನೆಯಾಗಿದೆ. ಎನ್‌ಡಿಎ ಸರಕಾರದ ಸಾಗರಮಾಲಾ ಯೋಜನೆಯೊಂದಿಗೆ ಆಯಕಟ್ಟಿನಲ್ಲಿ ಹಾಗೂ ಕ್ರಿಯಾತ್ಮಕವಾಗಿ ಹೊಂದಿಕೊಳ್ಳುವ, ಕೇಂದ್ರ ನಿಧಿಯಿಂದ ಸಹಾಯಧನ ಆಧಾರಿತ ಕಾರ್ಯಸಾಧ್ಯತೆಯ ತೆರಪು ಅನುದಾನವಾದ ರೂ. 817.80 ಕೋಟಿಯ ಒಪ್ಪಂದವು ಎಪ್ರಿಲ್ 2025ರಲ್ಲಿ ಅಂತಿಮಗೊಳಿಸಲ್ಪಟ್ಟಿತು. ತದನಂತರ, ಮೇ ತಿಂಗಳಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಳಿಂಜಮ್ ಬಂದರಿನ ಉದ್ಘಾಟನೆ ನೆರವೇರಿಸಿದರು. ಈ ಬಂದರು ಕೇರಳ ಸರಕಾರದ ಒಡೆತನದಲ್ಲಿದೆ ಹಾಗೂ ಅದಾನಿ ಬಂದರುಗಳು ಮತ್ತು ಎಸ್‌ಇಝೆಡ್ ನಿಯಮಿತದೊಂದಿಗಿನ ಪಾಲುದಾರಿಕೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ.

2015ರಿಂದ, ಬಂದರಿನ ನಿರ್ಮಾಣ ಕಾರ್ಯ ಆರಂಭವಾಗುತ್ತಿದ್ದಂತೆ, ತಿರುವನಂತಪುರದ ಮೀನುಗಾರರು ಗಂಭೀರ ಸ್ವರೂಪದ ಪರಿಸರ ಕಾಳಜಿಗಳನ್ನು, ಸಮುದ್ರತಳದ ಅತಿಯಾದ ಹೂಳೆತ್ತುವಿಕೆ ಹಾಗೂ ತೀವ್ರತೆರನಾದ ಕಡಲು ಕೊರೆತದ ಸಮಸ್ಯೆಗಳನ್ನು ಬೆಟ್ಟುಮಾಡಿದರು. ಜನಕೀಯ ಪದನ ಸಮಿತಿ 2023 ನಡೆಸಿದ ಅಧ್ಯಯನದಲ್ಲಿ ಸ್ವತಂತ್ರ ಸಾಗರಶಾಸ್ತ್ರಜ್ಞರು ಹಾಗೂ ಸಮಾಜ ವಿಜ್ಞಾನಿಗಳು ಹೇಳುವಂತೆ, ಸಣ್ಣ ಮೀನುಗಾರರಿಗೆ ಸೇರಿರುವ ಸುಮಾರು 289 ಮನೆಗಳು ಕಡಲ್ಕೊರೆತಕ್ಕೆ ತುತ್ತಾಗಿವೆ. ಎಡೆಬಿಡದೆ ಸುರಿವ ಮಾನ್ಸೂನ್ ಮಳೆಯಿಂದಾಗಿ ಉಂಟಾಗುವ ಕಡಲ್ಕೊರೆತದಿಂದ ಸ್ಥಳಾಂತರಿಸಲ್ಪಟ್ಟ ಮೀನುಗಾರರು ತೃಪ್ತಿಕರವಾದ ಪುನರ್ವಸತಿಯ ವ್ಯವಸ್ಥೆಗಳಿಲ್ಲದ, ತಾತ್ಕಾಲಿಕ ಆಶ್ರಯ ತಾಣಗಳಲ್ಲಿ ಮತ್ತು ಪರಿಹಾರ ಶಿಬಿರಗಳಲ್ಲಿ ತಂಗುವುದು ಅನಿವಾರ್ಯವಾಗಿದೆ. ತಡೆಗೋಡೆ ನಿರ್ಮಾಣಕ್ಕಾಗಿ ಹೂಳೆತ್ತುವುದು ಹವಳದ ಬಂಡೆಗಳನ್ನು ನಾಶಪಡಿಸಿದೆ ಮತ್ತು ಮತ್ಸ್ಯ ಸಂಗ್ರಹದ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಕೋವಲಂನ ಮೀನುಗಾರರು ಈ ಪ್ರಕ್ರಿಯೆಯ ನೇರ ಪರಿಣಾಮಕ್ಕೊಳಪಟ್ಟಿದ್ದಾರೆ.

‘ಮೀನುಗಾರಿಕೆ ನಿಷೇಧ ವಲಯ’ ಮತ್ತು ನಿರ್ಬಂಧಿತ ಕ್ಷೇತ್ರಗಳು ಸಣ್ಣ ಪ್ರಮಾಣದ ಮೀನುಗಾರರನ್ನು ಅವರ ಜೀವನೋಪಾಯದಿಂದ ಹೊರತಳ್ಳಿದ್ದು, ಅವರ ಬದುಕು ದುಸ್ತರವಾಗುವಂತೆ ಮಾಡಿವೆ.

ಪರಿಸರ ಪ್ರಭಾವ ಮೌಲ್ಯಮಾಪನ (ಇಐಎ)ವು ಯಾವುದೇ ಗುರುತರ ಪ್ರಭಾವ ಬೀರುವುದಿಲ್ಲ ಎಂದು ಹೇಳಿಕೆ ನೀಡಿದ್ದರೂ, ವಿಳಿಂಜಮ್ ಬಂದರಿನ ನಿರ್ಮಾಣ ಮತ್ತು ಕಾರ್ಯಾಚರಣೆಯು ಈ ಪ್ರದೇಶದಲ್ಲಿ ಬದುಕುವವರ ವೈವಿಧ್ಯಮಯ ಜೀವನೋಪಾಯದ ಮೇಲೆ ಗಣನೀಯ ಪರಿಣಾಮ ಬೀರಿದೆ. ಪರಿಣಾಮಕ್ಕೊಳಗಾಗಿರುವ ವ್ಯಕ್ತಿಗಳ, ವಿಶೇಷವಾಗಿ ಮೀನುಗಾರರ ಸಂಖ್ಯೆಯು, ವಿಳಿಂಜಮ್ ಅಂತರ್‌ರಾಷ್ಟ್ರೀಯ ಬಂದರು ನಿಯಮಿತವು ಮಾಡಿರುವ ಮೂಲ ಅಂದಾಜಿಗಿಂತ ಬಹಳಷ್ಟು ಹೆಚ್ಚಿದೆ.

ಡಿಸೆಂಬರ್ 2023ರ ಹೊತ್ತಿಗೆ, ವಿತರಿಸಲಾದ ಪರಿಹಾರ ಮೊತ್ತವು ರೂ. 106.93 ಕೋಟಿಯಿದ್ದು, ಇದು 2013ರಲ್ಲಿ ನಡೆಸಲಾಗಿದ್ದ ಪರಿಸರ ಪ್ರಭಾವ ಮೌಲ್ಯಮಾಪನದಲ್ಲಿ ಮುನ್ನಂದಾಜಿಸಲಾದ ರೂ.8.55 ಕೋಟಿಗಿಂತ ನಾಟಕೀಯ ಹೆಚ್ಚಳವನ್ನು ಕಂಡಿದೆ. ಪ್ರಭಾವಕ್ಕೊಳಗಾದ ಪ್ರದೇಶಗಳಿಂದ ಬಂದಿರುವ ವರದಿಗಳ ಪ್ರಕಾರ ಪರಿಹಾರ ನೀಡುವಲ್ಲಿ ವಿಳಂಬಗಳಾಗಿದ್ದು ಮಾತ್ರವಲ್ಲದೆ ಗಣನೀಯವಾಗಿ ಕಡಿಮೆ ಪ್ರಮಾಣದಲ್ಲಿದೆ. ಪರಿಣಾಮವಾಗಿ ಹಲವು ಕುಟುಂಬಗಳು ನಷ್ಟವನ್ನು ಭರಿಸಲಾಗದೆ ಹೋಗಿವೆ.

ಬಂದರು ಆಧಾರಿತ ಅಭಿವೃದ್ಧಿ ಸಣ್ಣ ಮೀನುಗಾರರನ್ನು ಹೇಗೆ ಅಂಚಿಗೆ ತಳ್ಳುತ್ತಿದೆ?

ನೀಲಿ ಆರ್ಥಿಕತೆ ಮತ್ತು ಸಾಗರಮಾಲಾ ಉಪಕ್ರಮದ ಮೂಲಕ ಅಭಿವೃದ್ಧಿಯ ಹೆಸರಿನಲ್ಲಿ ಪ್ರಸ್ತುತಪಡಿಸಲಾಗುತ್ತಿರುವ ಈ ಬೆಳವಣಿಗೆಯು, ಈ ಕೆಲಸಗಾರರಿಗೆ, ವಾಸ್ತವವಾಗಿ ಔದ್ಯಮಿಕ ಮೀನುಗಾರಿಕೆ ಹಾಗೂ ಕರಾವಳಿಯ ಮಾರ್ಪಾಡುಗಳ ಏರುತ್ತಿರುವ ಒತ್ತಡದಿಂದಾಗಿ ಜೀವನೋಪಾಯವನ್ನು ಉಳಿಸಿಕೊಳ್ಳುವುದನ್ನು ಇನ್ನಷ್ಟು ದುಸ್ತರವನ್ನಾಗಿಸುತ್ತಿದೆ.

ಜೊತೆಜೊತೆಗೆ, ಚಂಡಮಾರುತಗಳು ಹಾಗೂ ಹವಾಮಾನ ಬದಲಾವಣೆಗಳು ಕೇರಳದುದ್ದಕ್ಕೂ ಸಣ್ಣ ಪ್ರಮಾಣದ ಮೀನುಗಾರರ ಜೀವನೋಪಾಯಕ್ಕೆ ಅಪಾಯ ತಂದೊಡ್ಡಿವೆ.

ಆದರೂ, ಈ ಎಲ್ಲ ಸ್ಥಾನಾಂತರಗಳು ಹಾಗೂ ಮೀನುಗಾರರು ಎದುರಿಸುತ್ತಿರುವ ಭೀತಿಗಳ ಹೊರತಾಗಿಯೂ, ವಿಳಿಂಜಮ್ ಬಂದರು ಒಂದು ಮಹತ್ತರ ಅಭಿವೃದ್ಧಿ ಉಪಕ್ರಮವೆಂಬಂತೆ ಇನ್ನೂ ಬಿಂಬಿಸಲ್ಪಡುತ್ತಿದೆ. ಸರಕಾರದ ಹೇಳಿಕೆಯಂತೆ, ಅದು ಕೇರಳ ಹಾಗೂ ರಾಷ್ಟ್ರದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುತ್ತಿದೆ. ಹೂಡಿಕೆಯ ಪ್ರಮಾಣ ಮತ್ತು ಖಾಸಗಿ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ಮೇಳೈಸುವಿಕೆಯಿಂದಾಗಿ ಇದರ ಮಹತ್ವವು ಹೆಚ್ಚಿದ್ದು, ಈ ಯೋಜನೆಯನ್ನು ಕೇರಳದ ನೀಲಿ ಆರ್ಥಿಕತೆಯ ಹೆಜ್ಜೆಯ ಮಹತ್ವದ ಯೋಜನೆಯನ್ನಾಗಿ ಉನ್ನತ ಮಟ್ಟಕ್ಕೇರಿಸಿದೆ.

ಈ ರೀತಿಯ ವಿದ್ಯಮಾನ ಕೇರಳಕ್ಕೆ ಸೀಮಿತವಾದುದಲ್ಲ. ವಿಶ್ವದಾದ್ಯಂತ ಬಂಡವಾಳಶಾಹಿ ಹಸ್ತಕ್ಷೇಪಗಳು ನೀಲಿ ಆರ್ಥಿಕತೆಯ ಮುಖವಾಡ ಧರಿಸಿ ಕರಾವಳಿ ಮತ್ತು ಸಾಗರ ಸಂಪನ್ಮೂಲಗಳನ್ನು ಗುರಿಯಾಗಿಸುತ್ತಿರುವಾಗ, ಮೀನುಗಾರ ಸಮುದಾಯಗಳು ತೀವ್ರತೆರನಾದ ಭೀತಿಯನ್ನು ಎದುರಿಸುತ್ತಿವೆ. ಸುಸ್ಥಿರ ಅಭಿವೃದ್ಧಿಯಂತೆ ಬಿಂಬಿಸಲ್ಪಡುವ ಇಂತಹ ಉಪಕ್ರಮಗಳು ಹೆಚ್ಚಾಗಿ ಸ್ಥಾನಪಲ್ಲಟನೆ, ಪರಿಸರ ನಾಶ ಹಾಗೂ ಹೆಚ್ಚುತ್ತಿರುವ ಅಸಮಾನತೆಗಳನ್ನು ಬಚ್ಚಿಡುತ್ತವೆ ಮತ್ತು ಸಮುದಾಯದ ಉಳಿಯುವಿಕೆಗಿಂತ ವ್ಯಾಪಾರ ಮತ್ತು ಬಂಡವಾಳಕ್ಕೆ ಪ್ರಾಶಸ್ತ್ಯ ನೀಡುವಂತಹ ಅಭಿವೃದ್ಧಿಯ ಮಾದರಿಗಳ ಪರಿಣಾಮವನ್ನು ಎದುರಿಸುವ ಕೆಲಸವನ್ನು ಸಣ್ಣ ಮೀನುಗಾರರಿಗೆ ಬಿಟ್ಟುಬಿಡುತ್ತದೆ.

(ಈ ಲೇಖನವು ‘ದಿ ಕೋಸ್ಟಲ್ ಕೋರ್ಸ್’ ಸರಣಿಯ ಎರಡನೆಯ ಸಂಚಿಕೆಯಾಗಿದ್ದು, ಸೆಂಟರ್ ಫಾರ್ ಫೈನಾನ್ಶಿಯಲ್ ಅಕೌಂಟಬಿಲಿಟಿ ಮತ್ತು ದಿಲ್ಲಿ ಫೋರಮ್ ಇವುಗಳ ಸಹ ಪ್ರಸ್ತುತಿಯಾಗಿದೆ. ಇದು ದಶಕದ ಇತಿಹಾಸವಿರುವ ಸಾಗರಮಾಲಾ ಕಾರ್ಯಕ್ರಮದ ಕುರಿತ ವಿಶ್ಲೇಷಣೆಯಾಗಿದೆ. ಶಿಲ್ಪಾ ಕೃಷ್ಣನ್ ಅವರು ಕರಾವಳಿ ಆಡಳಿತ ಮತ್ತು ಭೂಮಿಯ ಹಕ್ಕುಗಳ ವಿಷಯಗಳ ಮೇಲೆ ಕೆಲಸ ಮಾಡುತ್ತಿರುವ ಜನಾಂಗಶಾಸ್ತ್ರಜ್ಞರಾಗಿದ್ದಾರೆ.)

Tags

Kerala
share
ಶಿಲ್ಪಾ ಕೃಷ್ಣನ್
ಶಿಲ್ಪಾ ಕೃಷ್ಣನ್
Next Story
X