Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ರಾಜ್ಯ ಸರಕಾರ ಈ ಬಾರಿಯ ಬಜೆಟ್‌ನಲ್ಲಿ...

ರಾಜ್ಯ ಸರಕಾರ ಈ ಬಾರಿಯ ಬಜೆಟ್‌ನಲ್ಲಿ ಗಮನಿಸಬೇಕಾದ ಅಂಶಗಳು

ಕೆ.ಪಿ. ಸುರೇಶಕೆ.ಪಿ. ಸುರೇಶ20 Feb 2026 11:48 AM IST
share
ರಾಜ್ಯ ಸರಕಾರ ಈ ಬಾರಿಯ ಬಜೆಟ್‌ನಲ್ಲಿ ಗಮನಿಸಬೇಕಾದ ಅಂಶಗಳು

NRLM ನಮ್ಮ ರಾಜ್ಯದಲ್ಲೂ ಅತೀ ದೊಡ್ಡ ಮಹಿಳೆಯರ platform ಆಗಿದ್ದು ಅದರ ಮೂಲಕ ಆರ್ಥಿಕ ಒಳಗೊಳ್ಳುವಿಕೆಯ ಕಾರ್ಯಕ್ರಮಗಳು ಅನುಷ್ಠಾನಗೊಳ್ಳುತ್ತಿವೆ. ಆದರೆ ಕರ್ನಾಟಕ ಸರಕಾರ ಈ NRLM=KSRLPS ಸಂಜೀವಿನಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ.

ಕೇಂದ್ರ ಸರಕಾರವೂ ಇದೇ ಧೋರಣೆಯನ್ನು ಈ ಹಿಂದೆ ಹೊಂದಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ಇದರ ಸಾಮರ್ಥ್ಯವನ್ನು ಅರಿತು ಪ್ರಜ್ಞಾಪೂರ್ವಕವಾಗಿ ಯಥೇಚ್ಛ ಅನುದಾನವನ್ನೂ ನೀಡುತ್ತಿದೆಯಲ್ಲದೆ ಹೊಸ ಹೊಸ ಆರ್ಥಿಕ ಆದಾಯ ಆಧಾರಿತ ಕಾರ್ಯಕ್ರಮಗಳನ್ನು ಮುಂದಿಡುತ್ತಿದೆ.

ಈ ಮಹಿಳಾ ವೇದಿಕೆಯನ್ನು ಚೆನ್ನಾಗಿ ಪೋಷಿಸಿದ ಕೇರಳ, ತೆಲಂಗಾಣ, ಆಂಧ್ರ ಮತ್ತು ಬಿಹಾರ ರಾಜ್ಯಗಳ ಆಳುವವರು ರಾಜಕೀಯವಾಗಿಯೂ ಸುಭದ್ರ ನೆಲೆಯನ್ನು ಪಡೆದುಕೊಂಡಿದ್ದಾರೆ. (ಬಿಹಾರದಲ್ಲಿ ಮೊನ್ನೆ ಮೊನ್ನೆ ರೂ. ಹತ್ತು ಸಾವಿರದಷ್ಟು ಹಂಚಿದ್ದು ಇದೇ ಆಜೀವಿಕಾ ಮಹಿಳೆಯರ ಕಿರು ಉದ್ಯಮ ಪ್ರೋತ್ಸಾಹದ ಹೆಸರಿನಲ್ಲಿ.)

ಕರ್ನಾಟಕದಲ್ಲಿ ಈ ಸಂಜೀವಿನಿ ಕೌಶಲ್ಯಾಭಿವೃದ್ಧಿ ಕೈ ಕೆಳಗಿದೆ! ಆದರೆ ಇದು ಕೆಲಸ ಮಾಡುತ್ತಿರುವುದು ಅಕ್ಷರಶಃ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಡಿಯಲ್ಲಿ. ಈ ಅಭಿಯಾನ ಗ್ರಾಮೀಣ ಜೀವನೋಪಾಯಗಳ ಅಭಿವೃದ್ಧಿಗೆ ಬೇಕಾದ ಕೌಶಲ್ಯ ವ್ಯಾವಹಾರಿಕ ಜ್ಞಾನ ಹೆಚ್ಚಿಸುವ ಬಗ್ಗೆ ಇದೆಯಷ್ಟೇ ಹೊರತು ಈಗ ನಿರ್ವಚನಗೊಂಡಿರುವ ಕೌಶಲ್ಯಾಭಿವೃದ್ಧಿಗೂ ಇದಕ್ಕೂ ಸಂಬಂಧವೇ ಇಲ್ಲ.

ಸ್ಕಿಲ್ ಇಂಡಿಯಾ ಎಂಬ ಪುಂಗಿಯ ವಿಸ್ತರಣೆಯಾಗಿ ನಮ್ಮ ರಾಜ್ಯದಲ್ಲಿ ಕೌಶಲ್ಯ ಇಲಾಖೆ ಇದೆ. ಇದರ ಸಾಧನೆಗಳಲ್ಲಿ ಅರೆಬರೆ ತರಬೇತಿ, ಭ್ರಷ್ಟಾಚಾರಗಳ ಹೆಜ್ಜೆ ಗುರುತು ಇದೆಯೇ ಹೊರತು. ಗಂಭೀರ ಸಾಧನೆಗಳ ಪುರಾವೆ ಇಲ್ಲ. ಇರಲಿ.

ಆದ್ದರಿಂದ ಸಂಜೀವಿನಿಯನ್ನು ಕೇಂದ್ರೀಕರಿಸಿ ಅದರ ಬಗ್ಗೆ ಗಮನ ನೀಡಲು ಮೊದಲು ಇದನ್ನು ಗ್ರಾ.ಪಂ.ರಾ.ಇಲಾಖೆಯಡಿ ತರಬೇಕಿದೆ.

NRLM ಬಗ್ಗೆ ಮೋದಿಯವರೂ ಉದಾಸೀನ ತಾಳಿದ್ದರು. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಈ ಅಭಿಯಾನಕ್ಕೆ ದುಡ್ಡು ಸುರಿಯುತ್ತಿದ್ದಾರೆ. ಕೆಲವು ಪ್ರಸ್ತುತಿ ಗಮನಿಸಿ:

* ಈಗಾಗಲೇ ಕೇಂದ್ರ ಸರಕಾರವು ಪ್ರತೀ ಪಂಚಾಯತ್ ಮಟ್ಟದ ಒಕ್ಕೂಟಕ್ಕೆ ರೂ.20 ಲಕ್ಷದಷ್ಟು ಸುತ್ತು ನಿಧಿಯನ್ನು ನೀಡಿದ್ದು ಅದು ಆಂತರಿಕ ಸಾಲ ನೀಡಿಕೆಗೆ ಬಳಕೆಯಾಗುತ್ತಿದೆ. ಹಲವಾರು ಗ್ರಾಮ ಪಂಚಾಯತ್ ಒಕ್ಕೂಟಗಳಲ್ಲಿ ಈ ನಿಧಿ ಮೂರ್ನಾಲ್ಕು ಪಟ್ಟು ಬೆಳೆದಿದೆ.

* ಹಾಗೆಯೇ ಉತ್ಪಾದಕ ಗುಂಪುಗಳಿಗೆ ತಲಾ ರೂ.75 ಸಾವಿರದಷ್ಟು ಅನುದಾನ ನೀಡುವ ಯೋಜನೆಯೂ ಇದೆ. ಪಂಚಾಯತ್ ಮಟ್ಟದಲ್ಲಿ ಮಹಿಳೆಯರ ಕಿರು ಉದ್ಯಮಗಳಿಗೆ ಬೇಕಾದ workshed/ resource centreಗೆ ಕೇಂದ್ರ ಸರಕಾರ ರೂ.40 ಲಕ್ಷದಷ್ಟು ನೀಡುವ ಪ್ರಸ್ತಾವ ಮುಂದಿರಿಸಿದೆ.

* ಸಂಜೀವಿನಿ ಒಕ್ಕೂಟದ ಮಹಿಳೆಯರಿಗೆ ಹೈನುಗಾರಿಕೆ ಯನ್ನು ಕೈಗೊಳ್ಳಲು ಈಗಾಗಲೇ ಕೆಎಂಎಫ್ ಮೂಲಕ ಕ್ಷೀರ ಸಂಜೀವಿನಿ ಹೆಸರಿನಲ್ಲಿ ಸಾವಿರಾರು ಮಹಿಳೆಯರನ್ನು ತರಬೇತುಗೊಳಿಸಿದ್ದಲ್ಲದೇ ಅವರಿಗೆ ಹಸು ಕೊಡಿಸಿ ಹಾಲನ್ನು ಖರೀದಿ ಮಾಡುವ ಜವಾಬ್ದಾರಿಯನ್ನೂ ಕೆಎಂಎಫ್ ನಿರ್ವಹಿಸುತ್ತಿದೆ.

ಇದರೊಂದಿಗೆ ಈಗ ‘ಲಖ್‌ಪತಿ ದೀದಿ’ ಎಂಬ ಯೋಜನೆಯ ಮುಖಾಂತರ ಗ್ರಾಮೀಣ ಮಹಿಳೆಯೊಬ್ಬಳ ಆದಾಯವನ್ನು ಕೃಷಿ ಅಥವಾ ಕೃಷಿಯೇತರ ಕಿರು ಉದ್ಯಮಗಳ ಮೂಲಕ ವರ್ಷಕ್ಕೆ ಒಂದು ಲಕ್ಷ ರೂ. ಆದಾಯ ಹೆಚ್ಚಿಸುವ ಗುರಿಯನ್ನು ಇಟ್ಟುಕೊಂಡಿದೆ. ಕರ್ನಾಟಕ್ಕೆ ನಿಗದಿಪಡಿಸಿರುವ ಗುರಿ ಅಂದಾಜು 8 ಲಕ್ಷ ಅಂದರೆ ಒಂದು ಪಂಚಾಯತ್‌ಗೆ 140. ಇಷ್ಟು ದೊಡ್ಡ ಮಟ್ಟದ initiative ಸಂಜೀವಿನಿ ಮೂಲಕ ನಡೆಯುತ್ತಿರುವಾಗ ರಾಜ್ಯ ಸರಕಾರ ಇದರ ಬಗ್ಗೆ ಹೆಚ್ಚಿನ ಲಕ್ಷ್ಯ ವಹಿಸದೇ ಇರುವುದು ಅಚ್ಚರಿ ತರುತ್ತಿದೆ.

ಸಾಂದರ್ಭಿಕವಾಗಿ ಸರಕಾರ ಗಮನಿಸಬೇಕಾದ್ದು ಮನರೇಗಾದ ಮಹಿಳಾ ಕಾರ್ಮಿಕರು ಮತ್ತು ಗೃಹಲಕ್ಷ್ಮಿ ಫಲಾನುಭವಿ ಮಹಿಳೆಯರೂ ಈ ಒಕ್ಕೂಟದ ಭಾಗವೇ. ಆದರೆ ಈಗ ಅಧಿಕೃತ platform ಇರುವುದು ಸಂಜೀವಿನಿಯಲ್ಲಿ ಮಾತ್ರ.

ಪುಣ್ಯವಶಾತ್ ಬಿಹಾರದಲ್ಲಿ ಆದಷ್ಟು ವೇಗದಲ್ಲಿ ಇಲ್ಲಿ ಇವು ಯಾವುವೂ ನಿರೀಕ್ಷಿತ ಸಾಧನೆ ಮಾಡಿಲ್ಲ!! ಟಾರ್ಗೆಟನ್ನು ಕಾಲಮಿತಿಯಲ್ಲಿ ಸಾಧಿಸುವುದನ್ನು ಹೇರಿ ಅದು ಆಗಿದೆ ಎಂಬಂಥಾ ಅಂಕಿ-ಅಂಶಗಳನ್ನು ಅಪ್‌ಲೋಡ್ ಮಾಡುವ ಕ್ರಮವಷ್ಟೇ ಇಲ್ಲಿದೆ.

* ಈ ಲಖ್‌ಪತಿ ದೀದಿ ಎಂಬ ಯೋಜನೆಯ ಟಾರ್ಗೆಟ್ ಗಮನಿಸಿ. ರಾಜ್ಯಕ್ಕೆ ನಿಗದಿಸಿದ ಗುರಿ 8 ಲಕ್ಷ. (ಇದು ವಾಸಿ! ಒಡಿಶಾದಂತಹ ರಾಜ್ಯ 25 ಲಕ್ಷ ಮಹಿಳೆಯರನ್ನು ಎರಡೇ ವರ್ಷಗಳಲ್ಲಿ ಕಿರು ಉದ್ಯಮ/ ಕೃಷಿ/ ಕೃಷಿ ಪೂರಕ ಚಟುವಟಕೆಗಳ ಮೂಲಕ ಲಕ್ಷಾಧಿಪತಿ ಮಾಡುವ ಟಾರ್ಗೆಟ್ ಹೊಂದಿದೆ.

ನಾನೇ ರಾಜ್ಯದ ಈ ಅಭಿಯಾನದ ಸ್ಟಾಫ್‌ಗೆ ತರಬೇತಿ ನೀಡುವಾಗ ಹಲವಾರು ಮಂದಿ ತಾಲೂಕು ಮಟ್ಟದ ಸಿಬ್ಬಂದಿ ಇದು ಪ್ರಾಯೋಗಿಕವಾಗಿ ಸಾಧ್ಯವೇ? ಎಂದು ಕೇಳಿದ್ದರು. ಒಂದು ಪಂಚಾಯತ್‌ಲ್ಲಿ 150 ಉದ್ಯಮಶೀಲ ಮಹಿಳೆಯರ ಉದ್ಯಮಗಳು ಯಾವುವು? ಹಪ್ಪಳ-ಸೆಂಡಿಗೆ, ಸಾಂಬಾರು ಪುಡಿಯನ್ನು ಎಷ್ಟು ಮಂದಿ ಮಾಡುವುದು? ಒಂದು ತಾಲೂಕಲ್ಲಿ 30-40 ಪಂಚಾಯತ್‌ಗಳಿದ್ದು ಅಂದಾಜು 6-7 ಸಾವಿರ ಕಿರು ಉದ್ಯಮಗಳನ್ನು ಒಂದು ತಾಲೂಕು ಸುಸ್ಥಿರವಾಗಿ ನಡೆಸಿಕೊಂಡು ಹೋಗುವುದು ಸಾಧ್ಯವೇ?

ಒಂದೊಂದಕ್ಕೂ ಕನಿಷ್ಠ 2 ಲಕ್ಷ ರೂ. ಬಂಡವಾಳ ಬೇಕೆಂದರೂ ಒಂದೊಂದು ತಾಲೂಕಿಗೂ ನೂರು ಕೋಟಿ ಸಾಲ ನೀಡಿಕೆ ಸಾಧ್ಯವಾಗಬೇಕು. ಈ ಅಸಂಬದ್ಧತೆ ಎಲ್ಲರಿಗೂ ಗೊತ್ತು. ಆದರೆ ದಿಲ್ಲಿಗೂ ಗೊತ್ತು. ಇಡೀ ಯೋಜನೆ ಸುಳ್ಳಿನ ಇಸ್ಪೀಟು ಕಾರ್ಡಿನ ಕಟ್ಟಡವಾಗುವ ಸಾಧ್ಯತೆ ನಿಚ್ಚಳವಾಗಿದೆ.

ವಿಷಯ ಅದಲ್ಲ. ಇದನ್ನು ಮುಂದಿಟ್ಟು ತನ್ನ ಪ್ರಚಾರದ ಯಂತ್ರದ ಮೂಲಕ ಇದೊಂದು ಯಶಸ್ವಿ ಸಂಗತಿ ಎಂದು ಬಿಂಬಿಸಿಕೊಳ್ಳುವುದರಲ್ಲಿ ಮೋದಿ ಸರಕಾರ ಯಶಸ್ವಿಯಾಗಬಹುದು

ಈ ಹಿನ್ನೆಲೆಯಲ್ಲಿ NRLMನ ಬಾಹುಳ್ಯವನ್ನೂ ಅದರ ವ್ಯಾಪ್ತಿಯನ್ನೂ ಸರಕಾರ ಗಮನಿಸಿ ಅದರ ಮೂಲಕ ಮಹಿಳೆಯನ್ನು ಕೇಂದ್ರೀಕರಿಸಿದ ಯೋಜನೆಗಳನ್ನು ಸಾದರಪಡಿಸಬೇಕಿದೆ.

ಈಗ ವಿವಿಧ ನಿಗಮಗಳ ಮೂಲಕ ಕುರಿ-ಕೋಳಿ ಸಾಕಣೆಯ ಅನುದಾನಗಳೆಲ್ಲಾ ಕರ್ಪೂರ ಉರಿಸಿದಂತೆ ಯಾವ ಕುರುಹೂ ಉಳಿಸದೇ ಹೋಗಿದೆ. ಸರಕಾರಕ್ಕೆ ಯಾವುದೇ ಬಗೆಯ ಸಾಧನೆಯ ಕುರುಹು ಕೂಡಾ ಅಲ್ಲಿ ಕಂಡಿಲ್ಲ. ಆದ್ದರಿಂದ ಇವೆಲ್ಲವನ್ನೂ ಮರು ರಚನೆ ಮಾಡಿ ಸಂಜೀವಿನಿ ಪ್ಲಾಟ್ ಫಾರ್ಮ್‌ನ್ನು ಉಪಯೋಗಿಸಿಕೊಂಡು ಸರಕಾರವು ಹೊಸ ಕಾರ್ಯಕ್ರಮಗಳನ್ನು ಯೋಜಿಸುವ ಅಗತ್ಯ ಇದೆ.

ಈ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್‌ನಲ್ಲಿ ಸೇರಿಸಬಹುದಾದ ಕೆಲವು NRLM ಕೇಂದ್ರಿತ ಕಾರ್ಯಕ್ರಮಗಳನ್ನು ಮುಂದಿಡಲು ಬಯಸುತ್ತೇನೆ.

ಕೆಲವು ಸಲಹೆಗಳು:

* ಮಹಿಳಾ ಸ್ವಸಹಾಯ ಒಕ್ಕೂಟಗಳಿಗೆ ಮಾರುಕಟ್ಟೆಗೆ ಉತ್ಪನ್ನ ಸಾಗಣೆಗೆ ನಾಲ್ಕು ಚಕ್ರದ ಕಿರು ಸಾಗಣೆ ವಾಹನದ ಸೌಲಭ್ಯ

ಶಕ್ತಿ ಯೋಜನೆಯಿಂದ ಮಹಿಳೆಯರೂ ಮಾರುಕಟ್ಟೆಯ ಮುಖ ನೋಡಿದ್ದಾರೆ. ಆದರೆ ಹಳ್ಳಿಗಳ ಕೃಷಿ ಉತ್ಪನ್ನಗಳ ಸಂಗ್ರಹಣೆ ಇನ್ನೂ ಖಾಸಗಿ ಏಜೆಂಟನ ಕೈಯಲ್ಲೇ ಇದೆ. ಈ ದೃಷ್ಟಿಯಿಂದ ಸಂಜೀವಿನಿಯ ಗ್ರಾಮಮಟ್ಟದ ಒಕ್ಕೂಟಗಳಿಗೆ ಕಿರು ನಾಲ್ಕು ಚಕ್ರದ ಸರಕು ವಾಹನವೊಂದನ್ನು ಕೃಷಿ ಉತ್ಪನ್ನ ಸಂಗ್ರಹ ಮತ್ತು ಮಾರುಕಟ್ಟೆಗೆ ರವಾನೆ ಉದ್ದೇಶದಿಂದ ಕ್ರಮ ಕೈಗೊಳ್ಳಬಹುದು. ಸರಕಾರ ಇದಕ್ಕೆ ನಿಬಡ್ಡಿ ಸಾಲ ಒದಗಿಸಿದರೂ(ಸಬ್ಸಿಡಿ) ಸಾಕು.

* ಕಿರು ಎಣ್ಣೆ ಗಾಣ ಮತ್ತು ಧಾನ್ ಸಂಸ್ಕರಣಾ ಘಟಕ:

ಇದೇ ಒಕ್ಕೂಟದ ಮೂಲಕ ಕಿರು ಎಣ್ಣೆ ಗಾಣ ಮತ್ತು ದ್ವಿದಳ ಧಾನ್ಯ ಸಂಸ್ಕರಣಾ ಘಟಕಗಳಿಗೆ ಪ್ರೋತ್ಸಾಹ ನೀಡಬಹುದು.ಅಸಲಿಗೆ ಮೌಲ್ಯವರ್ಧನೆ ಎಂಬ ಮರೀಚಿಕೆಯ ಬೆನ್ನು ಹತ್ತುವುದು ಬರೀ ಭ್ರಾಂತು. ಅದಾನಿಯೂ ಮಾಡುವುದು ಕಾಳಿನಿಂದ ಎಣ್ಣೆ, ಕಾಳಿನಿಂದ ಬೇಳೆ, ಅಷ್ಟೆ. ಇದನ್ನು ಸಣ್ಣ ಪ್ರಮಾಣದಲ್ಲಿ ಸ್ಥಾಪಿಸುವುದು ಕಷ್ಟವೇನಲ್ಲ.

* ಕೆವಿಕೆಗಳ ಮುಖಾಂತರ ಕೃಷಿ ಕ್ಲಿನಿಕ್:

ಮೈಸೂರಿನ ಜೆಎಸ್‌ಎಸ್‌ಕೆವಿಕೆ ಮಾದರಿಯಲ್ಲಿ ಕೃಷಿ ಕ್ಲಿನಿಕ್‌ಗಳನ್ನು ಆಯಾ ಕೆವಿಕೆಗಳು ನಗರದ ಮುಖ್ಯ ಭಾಗದಲ್ಲಿ ಆರಂಭಿಸಲು ಬೇಕಾದ ಕಿರು ಅನುದಾನ ನೀಡಬಹುದು. ಒಂದೊಂದು ಕೆವಿಕೆಗೂ ತಲಾ 25 ಲಕ್ಷ ನೀಡಿದರೂ ಈ ವಿಸ್ತರಣೆ, ಮಾಹಿತಿ ಮತ್ತು ಅಧಿಕೃತ ಔಷಧಿ, ಗೊಬ್ಬರಗಳ ಕೇಂದ್ರ ಸೃಷ್ಟಿಯಾದರೆ ರೈತರು ಹೆಚ್ಚು ಅನುಕೂಲ ಪಡೆಯಬಹುದು. ಇದರೊಂದಿಗೇ ಈಗಾಗಲೇ ಇರುವ ಕೃಷಿ ಸಖಿ ಮಾದರಿ ಪಶು ಸಖಿಯಷ್ಟು ಆಳವಾಗಿ ಊರಿಲ್ಲ. ಯಾಕೆಂದರೆ ಪ್ರಸ್ತಾವಿತ ಎಲ್ಲಾ ತರಬೇತಿಗಳೂ ನಡೆದಿಲ್ಲ. ಆದರೂ ಈ ಕೃಷಿ ಸಖಿಯರ ಮುಖಾಂತರ ಕೆವಿಕೆಗಳು ರೈತರ ಸಮಸ್ಯೆಗಳನ್ನು ತರಿಸಿಕೊಂಡು ಪರಿಹಾರ ಸೂಚಿಸಬಹುದು.

* ಕೆಎಂಎಫ್ ಮೂಲಕ ಸುಸ್ಥಿರ ಕೃಷಿ ತರಬೇತಿ- ಸಂಜೀವಿನಿ ಸಹಯೋಗ:

ಈಗಾಗಲೇ ಸಂಜೀವಿನಿ ಸಹಯೋಗದೊಂದಿಗೆ ಕೆಎಂಎಫ್ ಕ್ಷೀರ ಸಂಜೀವಿನಿ ಯೋಜನೆಯನ್ನು ಮಾಡುತ್ತಿದೆ. ಗ್ರಾಮೀಣ ಮಹಿಳೆಯರಿಗೆ ಹಸು ಸಾಕಣೆಯ ತರಬೇತಿ ಕೊಡುವ ಕೆಎಂಎಫ್ ಒಂದು ಹೆಜ್ಜೆ ಮುಂದಿಟ್ಟರೆ ಸುಸ್ಥಿರ ಕೃಷಿಯ ಪಾಠ ಹೇಳುವ ವೇದಿಕೆಯನ್ನು ಸೃಷ್ಟಿ ಮಾಡಬಹುದು. ಇದಕ್ಕೆ ಪ್ರತ್ಯೇಕ ಯೋಜನೆಯೇ ಬೇಕಿಲ್ಲ. ಸುಸ್ಥಿರ ಕೃಷಿ ಸಂಜೀವಿನಿಯ ಮೂಲ ಪ್ರಸ್ತುತಿ ಕೂಡಾ.

ಕೆಎಂಎಫ್- ಸಂಜಿವಿನಿ ಸುಸ್ಥಿರ ಕೃಷಿ ಸಹಯೋಗೀ ಅಭಿಯಾನವನ್ನು ಸರಕಾರ 5 ಕೋಟಿ ಅನುದಾನ ಸಹಾಯದೊಂದಿಗೆ ಪ್ರೋತ್ಸಾಹಿಸಬಹುದು.

* ಕೃಷಿ ಇಲಾಖೆಯ ವಿವಿಧ ವಸ್ತು ವಿಶೇಷಗಳನ್ನು ಸಬ್ಸಿಡಿಯಲ್ಲಿ ನೀಡುವ ಯೋಜನೆಯಲ್ಲಿ ಈ ಪಂಚಾಯತ್ ಮಟ್ಟದ ಒಕ್ಕೂಟಗಳಿಗೆ ಆದ್ಯತೆ ನೀಡಬೇಕು

ಇದರ ಹೊರತಾಗಿ ಇನ್ನೂ ಒಂದೆರಡು ಸಂರಚನಾತ್ಮಕ ಸುಧಾರಣೆಗಳನ್ನು ಸರಕಾರ ಬಜೆಟ್ ಘೋಷಣೆ ಮೂಲಕ ಮಾಡಬೇಕಾಗಿದೆ.

1. ರೈತ ಉತ್ಪಾದಕ ಸಂಸ್ಥೆಗಳ ಕುರಿತಂತೆ

2. ಸೆಕೆಂಡರಿ ಕೃಷಿ ನಿರ್ದೇಶನಾಲಯ ಕುರಿತಂತೆ

* ರೈತ ಉತ್ಪಾದಕ ಸಂಘಗಳ ಸ್ಥಾಪನೆಯಲ್ಲಿ ಏಕೀಕೃತ ವ್ಯವಸ್ಥೆ ಇಲ್ಲ. ಈ ಸಂಸ್ಥೆಗಳು ಬಹುತೇಕ ತನ್ನದೇ ಉತ್ಪನ್ನಗಳ ಮಾರಾಟದ ಬದಲು ಗೊಬ್ಬರ - ಕೀಟನಾಶಕಗಳ ಮಾರಾಟದ ಏಜೆಂಟುಗಳಾಗಿವೆ; ಅಷ್ಟೇ ಅಲ್ಲ. ಸಂಗ್ರಾಹಕ ಏಜೆಂಟರಾಗಿವೆ (Procuring agents). ಈ ಸಂಸ್ಥೆಗಳನ್ನು ಕೆಎಂಎಫ್ ಮಾದರಿಯಲ್ಲಿ ರಾಜ್ಯಮಟ್ಟದ ಒಕ್ಕೂಟವಾಗಿ ಮಾಡಿದಲ್ಲಿ ಸಂಸ್ಥೆಗಳ ದಕ್ಷತೆ ಹೆಚ್ಚುತ್ತದೆ. ಪರಸ್ಪರ ಸ್ಪರ್ಧಿಸುವ ಅನಾರೋಗ್ಯಕರ ಪೈಪೋಟಿಯೂ ತಪ್ಪುತ್ತದೆ. ಈ ಒಕ್ಕೂಟಕ್ಕೆ ಉತ್ಪನ್ನಗಳ ದಾಖಲೀಕರಣ ಮತ್ತು SಔP ನಿರ್ದಿಷ್ಟಪಡಿಸುವ mandate ನೀಡಬೇಕಿದೆ

ಸೆಕೆಂಡರಿ ಕೃಷಿ ನಿರ್ದೇಶನಾಲಯವೊಂದನ್ನು ಹಿಂದಿನ ಸರಕಾರ ಆತುರಾತುರವಾಗಿ ಆರಂಭಿಸಿದ್ದು ಅದಕ್ಕೆ ಅನುದಾನವೂ ಸಾಕಷ್ಟು ದೊರಕಿಲ್ಲ. ಅಷ್ಟೇ ಅಲ್ಲ ಅದರ mandate ಕೂಡಾ ಸ್ಪಷ್ಟವಾಗಿಲ್ಲ. ಅಷ್ಟಿಷ್ಟು ಮೌಲ್ಯ ವರ್ಧನೆಯ ಚಿಲ್ಲರೆ ಪ್ರಸ್ತುತಿಗಳನ್ನು ಈ ನಿರ್ದೇಶನಾಲಯ ಮಾಡುತ್ತಿದ್ದು ಇದನ್ನು ಮುಚ್ಚಬಹುದಾಗಿದೆ. ಇಲ್ಲಾ, ಇದಕ್ಕೆ ಕೆವಿಕೆ ಮತ್ತಿತರ ಸಂಸ್ಥೆಗಳು ಮಾಡುತ್ತಿರುವ ಮೌಲ್ಯವರ್ಧನಾ ಕಸರತ್ತಿನಲ್ಲಿ duplication ಇಲ್ಲದಂತೆ streamline ಮಾಡಿ Monitoring and evaluation ಜವಾಬ್ದಾರಿಯನ್ನು ಸ್ಪಷ್ಟ ವಿವರಗಳೊಂದಿಗೆ ನೀಡಬೇಕು. ಈ ನಿರ್ದೇಶನಾಲಯವು ರಾಜ್ಯದ ವಿವಿಧ ಸಂಸ್ಥೆಗಳ ಕೆಲಸಗಳನ್ನು ಏಕೀಭೂತಗೊಳಿಸಿದರೂ ಸಾಕು.

ಕೇಂದ್ರ ಸರಕಾರದ ಕೆಲವು ಯೋಜನೆಗಳ ಪೈಕಿ ‘ಒಂದು ಜಿಲ್ಲೆ ಒಂದು ಬೆಳೆ’ ಎಂಬುದು ಅಪದ್ಧ ಯೋಜನೆಯಾಗಿದ್ದು ಇದರಿಂದ ಆಯಾ ಜಿಲ್ಲೆಗಳಿಗೆ ಯಾವುದೇ ರೀತಿಯ ಪ್ರಯೋಜನ ಆಗಿರುವ ಪುರಾವೆ ಇಲ್ಲ. ಅಷ್ಟೇಕೆ ರೈತರು ಅಪಾರವಾಗಿ ಬೆಳೆದು ನಷ್ಟ ಅನುಭವಿಸಿರುವ ಉದಾಹರಣೆಗಳಿವೆ. ಆದ್ದರಿಂದ ಈ ಯೋಜನೆಯ ಬಗ್ಗೆ ಒಂದು ಮೌಲ್ಯಮಾಪನವನ್ನು ಮಾಡಿಸಬೇಕು.

Tags

state governmentbudget
share
ಕೆ.ಪಿ. ಸುರೇಶ
ಕೆ.ಪಿ. ಸುರೇಶ
Next Story
X