Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಖರ್ಗೆ ಎಂಬ ಹುಟ್ಟು ಹೋರಾಟಗಾರ

ಖರ್ಗೆ ಎಂಬ ಹುಟ್ಟು ಹೋರಾಟಗಾರ

ಇಂದು ಮಲ್ಲಿಕಾರ್ಜುನ ಖರ್ಗೆ ಜನ್ಮದಿನ

ಪ್ರೊ. ಎಚ್.ಟಿ. ಪೋತೆಪ್ರೊ. ಎಚ್.ಟಿ. ಪೋತೆ21 July 2024 12:08 PM IST
share
ಖರ್ಗೆ ಎಂಬ ಹುಟ್ಟು ಹೋರಾಟಗಾರ
ಬಿಜೆಪಿಯ ಹಿಂದುತ್ವಕ್ಕೆ ವಿರುದ್ಧ ನೆಹರೂ ಸಮಾಜವಾದ ಮತ್ತು ಅಂಬೇಡ್ಕರ್ ವಾದವನ್ನು ಪ್ರತಿಪಾದಿಸುವ ಖರ್ಗೆ ಸಹಜವಾಗಿಯೇ ಕಾಂಗ್ರೆಸ್‌ನ ಪ್ರಧಾನಿ ಅಭ್ಯರ್ಥಿ ಆಗುವಂತಹ ಲಕ್ಷಣ ಹೆಚ್ಚಿದೆ ಎಂದು ಜನ ನಂಬಿದ್ದರು. ಲೋಕಸಭಾ ಚುನಾವಣೆಯಲ್ಲಿ ‘ಇಂಡಿಯಾ’ ಒಕ್ಕೂಟ ಗೆದ್ದು ಮಲ್ಲಿಕಾರ್ಜುನ ಖರ್ಗೆಯವರೇನಾದರೂ ಪ್ರಧಾನಿಯಾಗಿದ್ದರೆ ದೇಶದ ಮೊತ್ತ ಮೊದಲ ದಲಿತ ಸಮುದಾಯದ ವ್ಯಕ್ತಿಯೊಬ್ಬರು ಪ್ರಧಾನ ಮಂತ್ರಿ ಎಂದು ಕರೆಸಿಕೊಳ್ಳುತ್ತಿದ್ದರು. ಆ ಕನಸು ನನಸಾಗಿಯೇ ಉಳಿಯಿತು. ಒಂದು ಸಂತಸ ಹಾಗೂ ಅಭಿಮಾನ ಪಡುವುದೇನೆಂದರೆ, ಕಾರ್ಮಿಕನ ಮಗನೊಬ್ಬ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿದ್ದರು ಎನ್ನುವುದು ಸಣ್ಣ ಮಾತಾಗಲಾರದು.

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರನ್ನು ‘ಇಂಡಿಯಾ’ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡುವಂತಹ ಮಾತುಗಳು ಚುನಾವಣಾ ಸಂದರ್ಭದಲ್ಲಿ ಆ ವೇದಿಕೆಯ ನಾಯಕರುಗಳಿಂದಲೇ ವ್ಯಕ್ತವಾಗಿದ್ದವು. ದೇಶದ ರಾಜಕೀಯದ ಮಟ್ಟಿಗೆ ಇದು ಮಹತ್ವದ ಬೆಳವಣಿಗೆಯಾಗಿತ್ತು. ದೇಶದ ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆಯವರ ಹೆಸರು ಪ್ರಸ್ತಾವವಾಗಿರುವುದು ಅನಿರೀಕ್ಷಿತವಾಗಿದ್ದರೂ ಕೂಡ; ಅದೊಂದು ರೀತಿಯಲ್ಲಿ ಅನಿವಾರ್ಯವೂ ಆಗಿತ್ತು. ‘ಇಂಡಿಯಾ’ ಒಕ್ಕೂಟದಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿದೆ. ಬಿಜೆಪಿ ಮಟ್ಟಿಗೆ ಮುಖ್ಯ ಪ್ರತಿಪಕ್ಷವೂ ಕೂಡ ಇದೇ ಆಗಿದೆ. ದೇಶದ ಸುಮಾರು ನೂರೈವತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿಗೆ ಕಾಂಗ್ರೆಸ್ ಪ್ರತಿರೋಧವನ್ನು ಒಡ್ಡುತ್ತಿದೆ ಎಂದು ಹೇಳಲಾಗುತ್ತಿತ್ತು. ಅದು ತಕ್ಕಮಟ್ಟಿಗೆ ನಿಜವೂ ಆಯಿತು. ಯಾವುದೇ ಒಕ್ಕೂಟದಲ್ಲಿ ದೊಡ್ಡ ಪಕ್ಷದವರೇ ಪ್ರಧಾನಿ ಆಗುವುದು ಸ್ವಾಭಾವಿಕ. ಕಾಂಗ್ರೆಸ್‌ನಲ್ಲಿ ರಾಹುಲ್ ಗಾಂಧಿಯವರು ಅತ್ಯಂತ ಜನಪ್ರಿಯ ನಾಯಕರಾದರೂ ಕೂಡ ‘ಇಂಡಿಯಾ’ ಒಕ್ಕೂಟದ ಎಲ್ಲಾ ಪ್ರತಿಪಕ್ಷಗಳು ಅವರನ್ನು ಬೆಂಬಲಿಸು ತ್ತಾರೆ ಅನ್ನುವುದು ಸುಲಭವಾಗಿರಲಿಲ್ಲ. ಹಾಗಾಗಿ ಪಕ್ಷದ ಉಳಿದ ಎಲ್ಲರಿಗಿಂತ ಹೆಚ್ಚಾಗಿ ಬೆಂಬಲ ಗಿಟ್ಟಿಸುವ ಸರ್ವಸಮ್ಮತ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಒಬ್ಬರೆ. ಅವರು ಕಾಂಗ್ರೆಸೇತರ ಪಕ್ಷಗಳ ಮಟ್ಟಿಗೂ ಒಪ್ಪಿಗೆಯಾಗಬಲ್ಲಂತಹ ವ್ಯಕ್ತಿ ಎನ್ನುವುದು ಅನೇಕ ಜನರ ನಾಲಿಗೆಯಿಂದ ಸಾಗಿ ಬಂದಿತು.

ಕಲ್ಯಾಣ ಕರ್ನಾಟಕದ ಸಾಮಾನ್ಯ ಹೆಬ್ಬಾಗಿಲು ಕಲಬುರಗಿ. ಕಲಬುರಗಿಯ ಮಿಲ್‌ನಲ್ಲಿ ದುಡಿಯುತ್ತಿದ್ದ ಕಾರ್ಮಿಕನ ಮಗ ಇವತ್ತು ದೇಶದ ಪ್ರಧಾನಿ ಅಭ್ಯರ್ಥಿಯಾಗುವ ಮಟ್ಟಕ್ಕೆ ಬೆಳೆದದ್ದು ಒಂದು ಸಾಹಸದ ಕಥೆಯೇ ಆಗಿದೆ. ಖರ್ಗೆಯವರು ಚಿಕ್ಕಂದಿನಲ್ಲೇ ಬೆಂಕಿಯ ದುರಂತದಲ್ಲಿ ಆಕಸ್ಮಿಕವಾಗಿ ಬದುಕುಳಿದದ್ದು ಕೂಡ ಒಂದು ಪವಾಡವೆ. ಖರ್ಗೆಯವರು ಹುಟ್ಟಿದ್ದು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವರವಟ್ಟಿ ಗ್ರಾಮದಲ್ಲಿ. ಇವರ ತಂದೆ ಮಾಪಣ್ಣ ಎಂಎಸ್‌ಕೆ ಮಿಲ್ ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಖರ್ಗೆಯವರಿಗೆ ಏಳು ವರ್ಷವಿದ್ದಾಗ ರಜಾಕಾರರಿಂದ ಸ್ಫೋಟಗೊಂಡಿದ್ದ ಒಂದು ಕೋಮು ಗಲಭೆಯಲ್ಲಿ ದುಷ್ಕರ್ಮಿಗಳು ಅವರ ಮನೆಗೆ ಬೆಂಕಿ ಹಚ್ಚಿದರು. ಆ ಬೆಂಕಿಯಲ್ಲಿ ಅವರ ತಾಯಿ ಮತ್ತು ಸಹೋದರಿ ಕೋಮುದಳ್ಳುರಿಗೆ ಆಹುತಿಯಾದರು. ಖರ್ಗೆಯವರು ಸ್ವಲ್ಪದರಲ್ಲೆ ಪಾರಾಗಿದ್ದರು ಎಂಬುದು ಇಲ್ಲಿ ಸ್ಮರಣೀಯವಾದುದು.

ಖರ್ಗೆಯವರಿಗೆ ವಿದ್ಯಾರ್ಥಿ ದೆಸೆಯಿಂದಲೇ ರಾಜಕಾರಣದ ಆಸಕ್ತಿ ಇತ್ತು. ಕಾನೂನು ಪದವಿಯನ್ನು ಪಡೆದು ಶಿವರಾಜ ಪಾಟೀಲ ಅವರ ಅಡಿಯಲ್ಲಿ ನ್ಯಾಯವಾದಿಯಾಗಿದ್ದ ಖರ್ಗೆಯವರು ಆಗ ಕಾರ್ಮಿಕ ಸಂಘಟನೆಗಳ ಪರವಾಗಿ ಹಲವಾರು ಪ್ರಕರಣಗಳಲ್ಲಿ ವಾದವನ್ನು ಮಂಡಿಸಿದ್ದರು. ಎಂಎಸ್‌ಕೆ ಮಿಲ್ಲಿನ ಉದ್ಯೋಗಿಗಳ ಸಂಘದ ಕಾನೂನು ಸಲಹೆಗಾರರಾಗಿ ಕೂಡ ಜನಪ್ರಿಯರಾಗಿದ್ದ ಖರ್ಗೆಯವರು 1969ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು. 1972ರಲ್ಲಿ ಗುರುಮಿಠ್ಕಲ್ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನ ಸಭೆಗೆ ಮೊತ್ತ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಅಂದಿನಿಂದ ಸತತವಾಗಿ ಎಂಟು ಬಾರಿ ಗುರುಮಿಠ್ಕಲ್ ಮತಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದ ಖರ್ಗೆಯವರು, 2008ರ ಕ್ಷೇತ್ರ ಪುನರ್ ವಿಂಗಡಣೆ ನಂತರದಲ್ಲಿ ಚಿತ್ತಾಪುರ ಕ್ಷೇತ್ರಕ್ಕೆ ಬಂದರು. ಖರ್ಗೆಯವರು ಅಲ್ಲಿಂದ ಸ್ಪರ್ಧಿಸಿ ಸತತ ಒಂಭತ್ತನೆಯ ಬಾರಿಗೆ ಶಾಸಕರಾಗಿ ಸೋಲಿಲ್ಲದ ಸರದಾರ ಎಂದು ಕರೆಸಿಕೊಂಡರು. ರಾಜ್ಯದ ಹಲವು ಮುಖ್ಯಮಂತ್ರಿಗಳ ಸಂಪುಟದಲ್ಲಿ ಹಲವು ಪ್ರಮುಖ ಖಾತೆಗಳ ಸಚಿವರಾಗಿ ಕೂಡ ಖರ್ಗೆಯವರು ಕೆಲಸ ಮಾಡಿದ್ದಾರೆ. 1976ರಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದಾಗ ಹದಿನೆಂಟು ಸಾವಿರ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿಮಾಡಿದ್ದಾರೆ. ರಾಜ್ಯಾದ್ಯಂತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳನ್ನು ಪ್ರಾರಂಭ ಮಾಡಲಿಚ್ಛಿಸುವವರಿಗೆ ಅನುದಾನ ಸಹಿತ ಅನುಮೋದನೆಗೆ ಸರಕಾರದ ಸಮ್ಮತಿ ದೊರಕಿಸಿಕೊಟ್ಟ ಕೀರ್ತಿ ಮಲ್ಲಿಕಾರ್ಜುನ ಖರ್ಗೆಯವರಿಗೆ ಸಲ್ಲುತ್ತದೆ.

1978ರ ದೇವರಾಜ ಅರಸು ಅವರ ಸಂಪುಟದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿ, 1985ರಲ್ಲಿ ಗುಂಡೂರಾವ್ ಅವರ ಸಂಪುಟದಲ್ಲಿ ಕಂದಾಯ ಸಚಿವರಾಗಿ, 1990ರಲ್ಲಿ ಬಂಗಾರಪ್ಪ ಅವರ ಸಂಪುಟದಲ್ಲೂ ಕೂಡ ಕಂದಾಯ ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಆನಂತರ 1992ರಿಂದ 1994ರ ವರೆಗೆ ವೀರಪ್ಪ ಮೊಯ್ಲಿ ಅವರ ಸಂಪುಟದಲ್ಲೂ ಸಹಕಾರ ಮತ್ತು ಮಧ್ಯಮ ಹಾಗೂ ಬೃಹತ್ ಕೈಗಾರಿಕೆಯ ಸಚಿವರಾಗಿ, 1999ರಲ್ಲಿ ಎಸ್.ಎಂ. ಕೃಷ್ಣ ಅವರ ಸಂಪುಟದಲ್ಲಿ ಗೃಹ ಸಚಿವರಾಗಿಯೂ ಕೂಡ ಖರ್ಗೆಯವರು ಕೆಲಸವನ್ನು ಮಾಡಿದ್ದಾರೆ.

ಇನ್ನು 2004ರಲ್ಲಿ ಧರಂ ಸಿಂಗ್ ಅವರು ಮುಖ್ಯಮಂತ್ರಿ ಆಗಿದ್ದಾಗ ಅವರ ಸಂಪುಟದಲ್ಲೂ ಸಾರಿಗೆ ಮತ್ತು ಜಲಸಂಪನ್ಮೂಲಗಳ ಸಚಿವರಾಗಿ ಕೆಲಸವನ್ನು ಮಾಡಿದ್ದಾರೆ. ಎಸ್.ಎಂ. ಕೃಷ್ಣ, ಎನ್. ಧರಂ ಸಿಂಗ್, ಸಿದ್ದರಾಮಯ್ಯ ಈ ಮೂರು ಜನರು ಮುಖ್ಯಮಂತ್ರಿಗಳಾಗುವ ಕಾಲದಲ್ಲಿ ಮುಖ್ಯಮಂತ್ರಿ ಗಾದಿಯ ಸನಿಹಕ್ಕೆ ಬಂದಿದ್ದ ಖರ್ಗೆಯವರು ಕೊನೆಘಳಿಗೆಯ ರಾಜಕೀಯ ಲೆಕ್ಕಾಚಾರದಲ್ಲಿ ಆ ಪದವಿಯಿಂದ ವಂಚಿತರಾಗುತ್ತಲೇ ಬಂದರು. 1994ರಲ್ಲಿ ಹಾಗೂ 2008ರಲ್ಲಿ ರಾಜ್ಯ ವಿಧಾನ ಸಭೆಯ ವಿರೋಧಪಕ್ಷದ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರು 2005ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾಗಿಯೂ ಕೂಡ ದುಡಿದಿದ್ದಾರೆ. ಅವರ ನೇತೃತ್ವದಲ್ಲಿ ಪಕ್ಷ ತೊಂಭತ್ತು ಕ್ಷೇತ್ರದಲ್ಲಿ ಗೆದ್ದಿತ್ತು. ಇನ್ನು ಹತ್ತು ಸೀಟು ಗೆದ್ದಿದ್ದರೆ ಮುಖ್ಯಮಂತ್ರಿಯಾಗಬಹುದಿತ್ತು. ಎರಡು ಬಾರಿ ಸಂಸದರಾಗಿದ್ದ ಅವರು ಡಾ. ಮನಮೋಹನಸಿಂಗ್ ಅವರ ಸಚಿವ ಸಂಪುಟದಲ್ಲಿ ರೈಲ್ವೆ, ಕಾರ್ಮಿಕ ಮತ್ತು ಉದ್ಯೋಗ ಹಾಗೂ ಸಾಮಾಜಿಕ ನ್ಯಾಯ ಮತ್ತು ಸಬಲೀ ಕರಣದ ಸಚಿವರಾಗಿದ್ದಾರೆ. 2014ರಿಂದ 2019ರ ವರೆಗೆ ಲೋಕಸಭೆಯಲ್ಲಿ ಕಾಂಗ್ರೆಸ್‌ನ ನಾಯಕರಾಗಿದ್ದರು. ನಂತರ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರಾಗಿಯೂ ಕೂಡ ಖರ್ಗೆ ಛಾಪು ಮೂಡಿಸಿದವರು. ಖರ್ಗೆಯವರು 2019ರ ಲೋಕಸಭೆಯ ಚುನಾವಣೆಯಲ್ಲಿ ಸೋತಿದ್ದರು. ಅದು ಐದು ದಶಕಗಳ ಚುನಾವಣಾ ರಾಜಕಾರಣದಲ್ಲಿ ಸುದೀರ್ಘ ರಾಜಕೀಯ ಇತಿಹಾಸ ಹೊಂದಿರುವ ಖರ್ಗೆಯವರ ಮೊತ್ತ ಮೊದಲ ಸೋಲು. ಬಹುಮುಖ ಪ್ರತಿಭೆಯ ಖರ್ಗೆಯವರು ಬಹುಭಾಷಾ ಪರಿಣಿತರು. ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತೆಲಗು, ಕನ್ನಡ ಭಾಷೆಗಳ ಮೇಲೆ ಅವರಿಗೆ ಹಿಡಿತವಿದೆ.

ಖರ್ಗೆಯವರು ಕಾಂಗ್ರೆಸ್‌ನ ಅಧ್ಯಕ್ಷರಾದಾಗಿನಿಂದ ಕಾಂಗ್ರೆಸ್ ಜನರಿಗೆ ಮತ್ತು ಕಾರ್ಯಕರ್ತರಿಗೆ ಹೆಚ್ಚು ಹತ್ತಿರವಾಗುತ್ತಿದೆ ಎನ್ನುವಂತಹ ಮಾತುಗಳು ಜನ ಜನಿತವಾಗಿದೆ. ಕರ್ನಾಟಕದ ಇತ್ತೀಚಿನ ವಿಧಾನ ಸಭೆಯ ಚುನಾವಣೆಯ ಗೆಲುವಿನಲ್ಲೂ ಖರ್ಗೆಯವರ ಪಾತ್ರವಿದೆ. ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಮಾಡುವಾಗ ಖರ್ಗೆ ವಹಿಸಿಕೊಂಡಿದ್ದ ಪಾತ್ರ ಕೂಡ ಮಹತ್ತರವಾದದ್ದು. ಅದೇ ರೀತಿ ತೆಲಂಗಾಣ, ಹಿಮಾಚಲ ಪ್ರದೇಶಗಳಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದಿರುವುದು ಅವರ ಕಾರ್ಯ ದಕ್ಷತೆಗೆ ಹಿಡಿದ ಕನ್ನಡಿಯಾಗಿದೆ. ಅವರ ಅಧ್ಯಕ್ಷತೆಯಲ್ಲಿ ನೂರು ಎಂಪಿಗಳು ಗೆದ್ದಿದ್ದಾರೆ. ರಾಹುಲ್‌ಗಾಂಧಿ ವಿರೋಧಪಕ್ಷದ ನಾಯಕರಾಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ-ರಾಧಾಬಾಯಿ ದಂಪತಿಗೆ ಐವರು ಮಕ್ಕಳು. ಅವರ ಪೈಕಿ ಪ್ರಿಯಾಂಕ್ ಖರ್ಗೆ ಮಾತ್ರ ಇವತ್ತು ರಾಜಕೀಯದಲ್ಲಿದ್ದಾರೆ. ಸದ್ಯ ಅವರು ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿಬಿಟಿ ಸಚಿವರಾಗಿದ್ದಾರೆ. ಸಾರ್ವಜನಿಕವಾಗಿ ಸದಾ ಅತ್ಯಂತ ಗಂಭೀರವಾಗಿ ರುವಂತಹ ಮಲ್ಲಿಕಾರ್ಜುನ ಖರ್ಗೆಯವರು ಖಾಸಗಿ ಮಾತುಕತೆಯಲ್ಲಿ ಹಾಸ್ಯದ ಮಾತು ಮತ್ತು ವಿಡಂಬನೆಗೆ ಹೆಸರಾದವರು. ತಮ್ಮ ಆಪ್ತವಲಯದಲ್ಲಿ, ಹಾಸ್ಯ ಚಟಾಕಿ ಹಾರಿಸುವುದರಲ್ಲಿ ಸಿದ್ಧ ಹಸ್ತರು. ಸುದೀರ್ಘ ರಾಜಕೀಯ ಜೀವನದಲ್ಲಿ ಎಲ್ಲೂ ಕೀಳು ಮಟ್ಟದ ಭಾಷೆಯನ್ನು ಬಳಸದ ಹಾಗೂ ಆತಂಕದ ವರ್ತನೆ ತೋರದ ಖರ್ಗೆಯವರು ತಮ್ಮ ಘನ ವ್ಯಕ್ತಿತ್ವಕ್ಕೆ ಹೆಸರಾದಂತಹವರು. ಹಾಗೆಯೇ ಹೇಳಬೇಕಾದದ್ದನ್ನು ನೇರವಾಗಿ ಹೇಳುವಂತಹ ನಿಷ್ಠುರತೆಯನ್ನೂ ರೂಢಿಸಿಕೊಂಡವರು. ಅಂಬೇಡ್ಕರ್ ಅವರ ಅಪ್ಪಟ ಅನುಯಾಯಿ ಖರ್ಗೆಯವರು ಬುದ್ಧ, ಬಸವ ಚಿಂತನೆಗಳನ್ನು ಮೈಗೂಡಿಸಿಕೊಂಡವರು. ಕಲಬುರಗಿಯಲ್ಲಿ ಬುದ್ಧ ವಿಹಾರವನ್ನು ಸ್ಥಾಪಿಸಿ ಅದನ್ನು ಪ್ರವಾಸಿ ತಾಣವನ್ನಾಗಿ ರೂಪಿಸಿದ್ದಾರೆ. ಬಿಜೆಪಿಯ ಹಿಂದುತ್ವಕ್ಕೆ ವಿರುದ್ಧ ನೆಹರೂ ಸಮಾಜವಾದ ಮತ್ತು ಅಂಬೇಡ್ಕರ್ ವಾದವನ್ನು ಪ್ರತಿಪಾದಿಸುವ ಖರ್ಗೆ ಸಹಜವಾಗಿಯೇ ಕಾಂಗ್ರೆಸ್‌ನ ಪ್ರಧಾನಿ ಅಭ್ಯರ್ಥಿ ಆಗುವಂತಹ ಲಕ್ಷಣ ಹೆಚ್ಚಿದೆ ಎಂದು ಜನ ನಂಬಿದ್ದರು. ಲೋಕಸಭಾ ಚುನಾವಣೆಯಲ್ಲಿ ‘ಇಂಡಿಯಾ’ ಒಕ್ಕೂಟ ಗೆದ್ದು ಮಲ್ಲಿಕಾರ್ಜುನ ಖರ್ಗೆಯವರೇನಾದರೂ ಪ್ರಧಾನಿಯಾಗಿದ್ದರೆ ದೇಶದ ಮೊತ್ತ ಮೊದಲ ದಲಿತ ಸಮುದಾಯದ ವ್ಯಕ್ತಿಯೊಬ್ಬರು ಪ್ರಧಾನ ಮಂತ್ರಿ ಎಂದು ಕರೆಸಿಕೊಳ್ಳುತ್ತಿದ್ದರು. ಆ ಕನಸು ನನಸಾಗಿಯೇ ಉಳಿಯಿತು. ಒಂದು ಸಂತಸ ಹಾಗೂ ಅಭಿಮಾನ ಪಡುವುದೇನೆಂದರೆ, ಕಾರ್ಮಿಕನ ಮಗನೊಬ್ಬ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿದ್ದರು ಎನ್ನುವುದು ಸಣ್ಣ ಮಾತಾಗಲಾರದು. ಅವರು ಪ್ರಧಾನ ಮಂತ್ರಿಯಾಗಿ ಕಣ್ತುಂಬಿಕೊಳ್ಳುವ ಭಾಗ್ಯ ದೇಶದ ಜನರು ಪಡೆಯಲಿಲ್ಲ. ಹಾಗಾಗಿದ್ದರೆ ಸಂವಿಧಾನದ ಬಹುದೊಡ್ಡ ಗರಿಮೆ ಅದಾಗಿ ಉಳಿಯುತ್ತಿತ್ತು. ಬುದ್ಧ-ಬಸವ-ಅಂಬೇಡ್ಕರ್ ಚಿಂತನೆಗಳ ಫಲ ಪ್ರತಿಫಲನವಾಗುತ್ತಿತ್ತು, ಮತದಾರ ಪ್ರಭುಗಳ ಗೌರವ ಹೆಚ್ಚುತ್ತಿತ್ತು. ಅದು ಸಾಧ್ಯವಾಗದೆ ಉಳಿದಿದ್ದು ಕಾಲದ ಸೋಲು ಎಂದೇ ಹೇಳಿದರೆ ತಪ್ಪಾಗಲಿಕ್ಕಿಲ್ಲ!

ಮಲ್ಲಿಕಾರ್ಜುನ ಖರ್ಗೆಯವರು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿ, ಇಂಡಿಯಾ ಒಕ್ಕೂಟದ ಸಂಚಾಲಕರಾಗಿ ಕಳೆದ ಚುನಾವಣೆಯಲ್ಲಿ ದೇಶ ಸುತ್ತಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ಶ್ರಮಿಸಿದ ರೀತಿ ಅನನ್ಯವಾದುದು. ಆ ಮೂಲಕ ಆಳುವ ಪಕ್ಷದ ಜನವಿರೋಧಿ ಚಿಂತನೆಯ ಬೆನ್ನಿಗೆ ಬಾರೆತ್ತಿ ಜನಹಿತವನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. ‘ಇಂಡಿಯಾ’ ಒಕ್ಕೂಟವನ್ನು ಸಶಕ್ತ ವಿರೋಧ ಪಕ್ಷವಾಗುವಂತೆ ಅವರು ಮಾಡಿದ ಸಂಚಾಲನೆ ಎಂಥವರನ್ನೂ ಬೆರಗುಗೊಳಿಸುತ್ತದೆ.

share
ಪ್ರೊ. ಎಚ್.ಟಿ. ಪೋತೆ
ಪ್ರೊ. ಎಚ್.ಟಿ. ಪೋತೆ
Next Story
X