Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕೋಲಾರದಲ್ಲೀಗ ಯುರೋಪ್‌ನ ಬಾನಾಡಿಗಳ ಕಲರವ

ಕೋಲಾರದಲ್ಲೀಗ ಯುರೋಪ್‌ನ ಬಾನಾಡಿಗಳ ಕಲರವ

ವಾತಾವರಣದ ವೈಪರೀತ್ಯದಿಂದ ಮುಂಚಿತವಾಗಿಯೇ ಬಂದ ವಲಸೆ ಹಕ್ಕಿಗಳು

ಸಿ.ವಿ.ನಾಗರಾಜ್, ಕೋಲಾರಸಿ.ವಿ.ನಾಗರಾಜ್, ಕೋಲಾರ12 Oct 2026 3:03 PM IST
share
ಕೋಲಾರದಲ್ಲೀಗ ಯುರೋಪ್‌ನ ಬಾನಾಡಿಗಳ ಕಲರವ

‌ಕೋಲಾರ: ದೂರದ ಯುರೋಪ್ ಖಂಡದಿಂದ ಪ್ರತಿವರ್ಷ ಭಾರತಕ್ಕೆ ಆಗಮಿಸುವ ಸುಂದರ ಅತಿಥಿ ಪಕ್ಷಿಗಳು ಈ ಬಾರಿ ನಿರೀಕ್ಷೆಗಿಂತಲೂ ಮುಂಚಿತವಾಗಿಯೇ ಕೋಲಾರ ಜಿಲ್ಲೆಯ ಅಂಗಳಕ್ಕೆ ಲಗ್ಗೆ ಇಟ್ಟಿವೆ! ಸಾಮಾನ್ಯವಾಗಿ ಪ್ರತಿವರ್ಷ ಅಕ್ಟೋಬರ್ ತಿಂಗಳ ಮಧ್ಯಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಅಪರೂಪದ ವಲಸೆ ಹಕ್ಕಿಗಳು, ಈ ವರ್ಷ ಯುರೋಪಿನಲ್ಲಿ ಉಂಟಾಗಿರುವ ತೀವ್ರ ಹವಾಮಾನ ವೈಪರೀತ್ಯದ (ಅಟimಚಿಣe ಅhಚಿಟಿge) ಕಾರಣದಿಂದಾಗಿ ಒಂದು ತಿಂಗಳು ಮುಂಚಿತವಾಗಿ, ಅಂದರೆ ಸೆಪ್ಟಂಬರ್‌ನಲ್ಲೇ ಕೋಲಾರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬಂದು ನೆಲೆಸಿವೆ.

ಕೋಲಾರದ ಪ್ರಸ್ತುತ ಹವಾಮಾನ ಪರಿಸ್ಥಿತಿ ಮತ್ತು ಆಹಾರದ ಲಭ್ಯತೆಯನ್ನು ಗಮನಿಸಿದರೆ, ಈ ಅತಿಥಿ ಪಕ್ಷಿಗಳು ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಸಮಯ ಅಂದರೆ ಡಿಸೆಂಬರ್ ಅಥವಾ ಜನವರಿ ತಿಂಗಳವರೆಗೆ ಜಿಲ್ಲೆಯಲ್ಲೇ ಉಳಿಯುವ ಸಾಧ್ಯತೆಯಿದೆ. ತದನಂತರ ಇವು ಭಾರತದಿಂದ ದಕ್ಷಿಣ ಆಫ್ರಿಕಾ ಮಾರ್ಗವಾಗಿ ಪುನಃ ಯುರೋಪ್ ಖಂಡವನ್ನು ಸೇರಿಕೊಳ್ಳಲಿವೆ. ಪ್ರತೀ ವರ್ಷ ಹವಾಮಾನಕ್ಕೆ ತಕ್ಕಂತೆ ಸಾವಿರಾರು ಕಿಲೋಮೀಟರ್ ದೂರದಿಂದ ಆಹಾರಕ್ಕಾಗಿ ಮತ್ತು ಅನುಕೂಲಕರ ವಾತಾವರಣವನ್ನು ಅರಸಿ ವಲಸೆ ಹೋಗುವುದು ಈ ಪಕ್ಷಿಗಳ ನೈಸರ್ಗಿಕ ಜೀವನ ಶೈಲಿಯಾಗಿದೆ.

ಕೋಲಾರದ ಕೆರೆ-ಬಯಲುಗಳಲ್ಲಿ ರಾರಾಜಿಸುತ್ತಿರುವ ಪಕ್ಷಿಸಂಕುಲ: ಜಿಲ್ಲೆಯ ವಿವಿಧ ಭಾಗಗಳಲ್ಲಿ, ವಿಶೇಷವಾಗಿ ಕೆಜಿಎಫ್ ಸಮೀಪದ ಅಜ್ಜ ಪ್ಪನಹಳ್ಳಿಯ ಹಸಿರು ಮೈದಾನಗಳಲ್ಲಿ ಮತ್ತು ಕೋಲಾರ ತಾಲೂಕಿನ ಹೊಳಲಿ ಕೆರೆ ಬಳಿ ಈ ವಲಸೆ ಹಕ್ಕಿಗಳು ಅಪಾರ ಸಂಖ್ಯೆಯಲ್ಲಿ ಬಂದು ನೆಲೆಸಿವೆ.

ಪ್ರಮುಖವಾಗಿ, ಯುರೋ ಪಿನಿಂದ ಆಗಮಿಸಿರುವ ‘ಯೂರೋಪಿಯನ್ ಬೀ-ಈಟರ್’ (ಇuಡಿoಠಿeಚಿಟಿ ಃee-eಚಿಣeಡಿ) ಮತ್ತು ‘ಯೂರೋಪಿಯನ್ ರೋಲರ್’ ಹಕ್ಕಿಗಳು ಹಸಿರಿನಿಂದ ಕಂಗೊಳಿ ಸುತ್ತಿರುವ ಬಯಲು ಸೀಮೆಯ ಗಿಡಮರಗಳಲ್ಲಿ ತಮ್ಮ ಆವಾಸಸ್ಥಾನ ಕಂಡುಕೊಂಡಿದ್ದರೆ, ‘ರಫ್’ ಹಾಗೂ ‘ಪೆಸಿಫಿಕ್ ಗೋಲ್ಡನ್-ಪ್ಲವರ್’ ನಂತಹ ನೀರು ಹಕ್ಕಿಗಳು ಆಳವಿಲ್ಲದ ಕೆರೆಗಳ ಅಂಗಳದಲ್ಲಿ ಹಾಗೂ ಚೌಗು ಪ್ರದೇಶಗಳಲ್ಲಿ ನೆಲೆಸಿವೆ.

ಈ ಅಪರೂಪದ ಹಕ್ಕಿಗಳನ್ನು ಕಣ್ತುಂಬಿಕೊಳ್ಳಲು ಮತ್ತು ತಮ್ಮ ಕ್ಯಾಮರಾಗಳಲ್ಲಿ ಬಂಧಿಸಲು ದೇಶದ ವಿವಿಧ ಭಾಗಗಳಿಂದ ಹವ್ಯಾಸಿ ಛಾಯಾಗ್ರಾಹಕರು ಹಾಗೂ ಪಕ್ಷಿಪ್ರೇಮಿಗಳು ಕೋಲಾರದತ್ತ ಧಾವಿಸುತ್ತಿದ್ದಾರೆ.

ಪ್ರಮುಖ ವಲಸೆ ಪಕ್ಷಿಗಳು: ಯೂರೋಪಿಯನ್ ರೋಲರ್: ಇದು ಅತ್ಯಂತ ಅದ್ಭುತ ಮತ್ತು ವಿಶಿಷ್ಟ ಆಕರ್ಷಣೆಯುಳ್ಳ ಹಕ್ಕಿಯಾಗಿದೆ. ಇಡೀ ದೇಹವು ಹೊಳೆಯುವ ನೀಲಿ ಬಣ್ಣದಿಂದ ಕೂಡಿರುತ್ತದೆ, ಬೆನ್ನಿನ ಭಾಗವು ತುಕ್ಕು ಬಣ್ಣವನ್ನು ಹೊಂದಿದ್ದು, ಕಾಗೆಯಂತೆ ಗಟ್ಟಿ ಮುಟ್ಟಾದ ಕೊಕ್ಕನ್ನು ಪಡೆದಿದೆ.

ಯೂರೋಪಿಯನ್ ಬೀ-ಈಟರ್: ಅತ್ಯಂತ ವರ್ಣರಂಜಿತ ಮತ್ತು ಸುಲಭವಾಗಿ ಗುರುತಿಸಬಹುದಾದ ಉದ್ದ ಕೊಕ್ಕಿನ ಕೀಟಭಕ್ಷಕ ಪಕ್ಷಿ ಇದಾಗಿದೆ. ಪ್ರಕಾಶಮಾನವಾದ ಹಳದಿ ಗಂಟಲು, ರತ್ನದ ನೀಲಿ ಬಣ್ಣದ ಹೊಟ್ಟೆ ಹಾಗೂ ಜ್ವಾಲೆಯ ಬಣ್ಣದ ಬೆನ್ನನ್ನು ಹೊಂದಿದೆ.

ಪೆಸಿಫಿಕ್ ಗೋಲ್ಡನ್-ಪ್ಲವರ್: ಇದು ದೇಹದ ಮೇಲ್ಭಾಗದಲ್ಲಿ ಚಿನ್ನದ ಬಣ್ಣದ ಚುಕ್ಕೆಗಳನ್ನು ಹೊಂದಿರುವ ತೆಳುವಾದ ನೀರು ಹಕ್ಕಿ.

ರಫ್: ಇದು ಅತ್ಯಂತ ವಿಲಕ್ಷಣ ಮತ್ತು ವಿಶಿಷ್ಟ ಲಕ್ಷಣಗಳನ್ನು ಹೊಂದಿರುವ ದಂಡೆಯ ಹಕ್ಕಿ. ಮಧ್ಯಮ ಗಾತ್ರದ ಈ ಹಕ್ಕಿಯು ಸ್ವಲ್ಪ ಬಾಗಿದ ಕೊಕ್ಕನ್ನು ಹೊಂದಿರುತ್ತದೆ. ಇದರ ಕಾಲುಗಳು ಮಂದ ಹಸಿರಿನಿಂದ ಕಿತ್ತಳೆ ಬಣ್ಣದವರೆಗೂ, ಕೊಕ್ಕು ಕಪ್ಪಿನಿಂದ ಕಿತ್ತಳೆ ಬಣ್ಣದವರೆಗೂ ಇರುತ್ತವೆ.

ಗಂಡು ಹಕ್ಕಿಯ ಆಕರ್ಷಕ ಗರಿಗಳ ಹಾರ: ಸಂತಾನೋತ್ಪತ್ತಿ ಮಾಡುವ ಗಂಡು ಹಕ್ಕಿಗಳ ಕತ್ತಿನ ಸುತ್ತ ಆಕರ್ಷಕವಾದ ಗರಿಗಳ ಹಾರ ಇರುತ್ತದೆ. ಇವು ಕಪ್ಪು, ಬಿಳಿ, ಕೆಂಪು-ಕಂದು ಅಥವಾ ಹಳದಿ-ಕಂದು ಬಣ್ಣಗಳ ಸಂಯೋಜನೆಯಲ್ಲಿರುತ್ತವೆ. ಗಂಡು ಹಕ್ಕಿಗಳು ಹೆಣ್ಣು ಹಕ್ಕಿಗಳಿಗಿಂತ ಸಾಕಷ್ಟು ದೊಡ್ಡದಾಗಿರುತ್ತವೆ.

ಪಕ್ಷಿಪ್ರೇಮಿಗಳಿಗೆ, ಛಾಯಾಗ್ರಾಹಕರಿಗೆ ಸುವರ್ಣಾವಕಾಶ

ಪ್ರಕೃತಿಯ ಈ ವಿಸ್ಮಯಕಾರಿ ಸಂಚಾರವು ಕೋಲಾರ ಜಿಲ್ಲೆಯ ಜೈವಿಕ ವೈವಿಧ್ಯತೆಗೆ ಹಿಡಿದ ಕನ್ನಡಿಯಾಗಿದೆ. ಹವಾಮಾನ ಬದಲಾವಣೆಯು ವಲಸೆ ಪಕ್ಷಿಗಳ ಆಗಮನದ ಸಮಯದ ಮೇಲೆ ಪರಿಣಾಮ ಬೀರುತ್ತಿದೆಯಾದರೂ, ಕೋಲಾರಕ್ಕೆ ಆಗಮಿಸಿರುವ ಈ ಅತಿಥಿಗಳು ಪ್ರಕೃತಿ ಪ್ರಿಯರಿಗೆ ಅಪರೂಪದ ದೃಶ್ಯ ವೈಭವವನ್ನು ಉಡುಗೊರೆಯಾಗಿ ನೀಡಿದ್ದಾರೆ. ಕೆಜಿಎಫ್ ಮತ್ತು ಕೋಲಾರ ತಾಲೂಕಿನ ಕೆರೆ-ಕೋಡಿಗಳಲ್ಲಿ ಈಗ ಪಕ್ಷಿಗಳ ಚಿಲಿಪಿಲಿ ಧ್ವನಿ ಹಾಗೂ ಬಣ್ಣ ಬಣ್ಣದ ರೆಕ್ಕೆಗಳ ಚಿತ್ತಾರ ಕಣ್ಣಿಗೆ ಹಬ್ಬವನ್ನು ಉಂಟುಮಾಡುತ್ತಿದೆ.

ಪ್ರತೀವರ್ಷವೂ ಅಕ್ಟೋಬರ್‌ನಲ್ಲಿ ಆಗಮಿಸುತ್ತಿದ್ದ ಈ ಹಕ್ಕಿಗಳು ಯುರೋಪಿನ ವಾತಾವರಣ ವೈಪರೀತ್ಯ ದಿಂದಾಗಿ ಈ ಬಾರಿ ಸೆಪ್ಟಂಬರ್‌ನಲ್ಲೇ ಬಂದಿವೆ. ಜಿಲ್ಲೆಯ ಪ್ರಸ್ತುತ ಹವಾಮಾನ ನೋಡಿದರೆ ಇವು ಹಿಂದೆಂದಿಗಿಂತಲೂ ಹೆಚ್ಚು ದಿನ ಇಲ್ಲೇ ಉಳಿಯುವ ಸಾಧ್ಯತೆಯಿದೆ.

-ಶಂಕರ್, ಪಕ್ಷಿ ಪ್ರಿಯರು, ಹವ್ಯಾಸಿ ಛಾಯಾಗ್ರಾಹಕರು (ಪೋಲಿಸ್ ಇಲಾಖೆ, ಕೆಜಿಎಫ್)

share
ಸಿ.ವಿ.ನಾಗರಾಜ್, ಕೋಲಾರ
ಸಿ.ವಿ.ನಾಗರಾಜ್, ಕೋಲಾರ
Next Story
X