Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಐತಿಹಾಸಿಕ ಚರಿತ್ರೆಯುಳ್ಳ ಕೊಪ್ಪಳ ಕೋಟೆ

ಐತಿಹಾಸಿಕ ಚರಿತ್ರೆಯುಳ್ಳ ಕೊಪ್ಪಳ ಕೋಟೆ

ಮುಹಮ್ಮದ್ ಅಖೀಲ್ ಉಡೇವುಮುಹಮ್ಮದ್ ಅಖೀಲ್ ಉಡೇವು30 Dec 2025 2:50 PM IST
share
ಐತಿಹಾಸಿಕ ಚರಿತ್ರೆಯುಳ್ಳ ಕೊಪ್ಪಳ ಕೋಟೆ

ಕೊಪ್ಪಳ ಎಂದಾಕ್ಷಣ ನೆನಪಾಗುವುದೇ ಕೊಪ್ಪಳ ಕೋಟೆ. ನಗರದ ಹೃದಯ ಭಾಗದಲ್ಲಿ ಇರುವ ಕೊಪ್ಪಳ ಕೋಟೆಯು ಅನೇಕ ಹೋರಾಟಗಳಿಗೆ ಸಾಕ್ಷಿಯಾಗಿದೆ. ಪ್ರಾಚೀನ ಅಭೇದ್ಯ ಕೋಟೆಗಳಲ್ಲಿ ಒಂದಾದ ಕೊಪ್ಪಳದ ಕೋಟೆಗೆ ನೂರಾರು ವರ್ಷಗಳ ಇತಿಹಾಸವಿದೆ. ಮಹಾನ್ ಸಾಮ್ರಾಜ್ಯಗಳ ಅಧೀನದಲ್ಲಿದ್ದ ಈ ಕೋಟೆಯು ಸ್ವಾತಂತ್ರ್ಯ ಹೋರಾಟಗಾರರ ಅಡಗುತಾಣವಾಗಿತ್ತು. 1857ರ ಸ್ವತಂತ್ರ ಸಂಗ್ರಾಮದ ನಂತರ ಸ್ವಾತಂತ್ರ್ಯದ ಕಿಚ್ಚು ದೇಶದ ಎಲ್ಲೆಡೆ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ಈ ಭಾಗದ ಹೋರಾಟಗಾರರು ಬ್ರಿಟಿಷರ ವಿರುದ್ಧ ಕಾರ್ಯಾಚರಣೆಗಾಗಿ ಈ ಕೋಟೆಯನ್ನು ಬಳಸಿಕೊಂಡಿದ್ದರು.

ಇತಿಹಾಸ: ಬಾದಾಮಿ ಚಾಲುಕ್ಯರ ಪ್ರಸಿದ್ಧ ದೊರೆ ದಕ್ಷಿಣ ಪಥೇಶ್ವರ ಇಮ್ಮಡಿ ಪುಲೀಕೇಶಿಯು ಈ ಕೋಟೆಯ ನಿರ್ಮಾಣ ಕಾರ್ಯವನ್ನು ಆರಂಭಿಸಿದನು ಎಂದು ಆತನ ಮಗ ವಿಕ್ರಮಾದಿತ್ಯ ನಿರ್ಮಿಸಿದ ಶಾಸನಗಳಲ್ಲಿ ಉಲ್ಲೇಖಸಲಾಗಿದೆ. ಈ ಕೋಟೆಯು ಕ್ರಮೇಣವಾಗಿ ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರು, ಮರಾಠ, ಬಹುಮನಿ ಸುಲ್ತಾನರ ಆಳ್ವಿಕೆಗೆ ಒಳಪಟ್ಟಿತ್ತು. ಅನಂತರ ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನರ ವಶದಲ್ಲಿದ್ದ ಈ ಕೋಟೆಯನ್ನು ಟಿಪ್ಪು ಸುಲ್ತಾನ ಫ್ರೆಂಚ್ ಎಂಜಿನಿಯರ್‌ಗಳ ಸಹಾಯದಿಂದ ನವೀಕರಿಸಿದನೆಂದು ಕೋಟೆಯಲ್ಲಿರುವ ಪರ್ಶಿಯನ್ ಶಾಸನಗಳಿಂದ ತಿಳಿದು ಬರುತ್ತದೆ. ಅನಂತರ ಬ್ರೀಟಿಷರು ಮತ್ತು ನಿಜಾಮನರ ಕೈಸೇರಿದ್ದ ಈ ಕೋಟೆಯು ಭಾರತದ ಅಭೇದ್ಯ ಕೋಟೆಗಳಲ್ಲಿ ಒಂದಾಗಿತ್ತು. 1791ರಲ್ಲಿ ಕೋಟೆಯು ಹೈದರಾಬಾದ್ ನಿಜಾಮನ ಆಡಳಿತಕ್ಕೆ ಒಳಗಾಯಿತು.

ಶಾಸನಗಳು: ಈ ಕೋಟೆಯಲ್ಲಿ ಅನೇಕ ಪರ್ಶಿಯನ್ ಶಾನಗಳಿದ್ದು, ಅದರಲ್ಲಿ ಕೋಟೆಯ ನಿರ್ಮಾಣದ ಬಗ್ಗೆ ತಿಳಿಸಲಾಗುತ್ತದೆ. ಅದರಂತೆ ಅಂದು ಬಿಜಾಪುರವನ್ನು ಆಳುತಿದ್ದ ಆದಿಲ್-ಶಾಹಿ ಮನೆತದ ದೊರೆ 2ನೆ ಇಬ್ರಾಹಿಂ ಆದಿಲ್-ಶಾಹನು 1603ರಲ್ಲಿ ಬಾಬ್-ಇ-ಅಲಿ ಮತ್ತು 1776ರಲ್ಲಿ ಮಸೀದಿಯನ್ನು ಕಟಿಸುತ್ತಾನೆ ಹಾಗೂ ಶಿವಾಜಿಯು 1774ರಲ್ಲಿ ಕೋಟೆಯನ್ನು ತನ್ನ ವಶಕ್ಕೆ ಪಡೆಯುತ್ತಾನೆ. ಅನಂತರ ಮರಾಠರಿಂದ ಮೈಸೂರಿನ ಹೈದರಾಲಿಯು 1776ರಲ್ಲಿ ಈ ಕೋಟೆಯನ್ನು ವಶಪಡಿಸಿಕೊಂಡನು ಎಂದು ತಿಳಿಸಲಾಗಿದೆ.

ಸ್ವಾತಂತ್ರ್ಯ ಹೋರಾಟಗಾರರಿಗೆ ಆಶ್ರಯ ತಾಣವಾದ ಕೋಟೆ: ಮುಂಡರಿಗಿ ಭೀಮರಾಯರು ಮತ್ತು ಹಮ್ಮಿಗಿ ಕೆಂಚನಗೌಡರ ನೆತೃತ್ವದಲ್ಲಿ 1858ರಲ್ಲಿ ಬ್ರಿಟಿಷ್ ವಿರೋಧಿ ಹೋರಾಟ ನಡೆಯುತ್ತದೆ. ಈ ಸಂದರ್ಭದಲ್ಲಿ ಕೊಪ್ಪಳ ಕೋಟೆಯು ಸ್ವತಂತ್ರ ವೀರರಿಗೆ ಆಶ್ರಯ ತಾಣವಾಗಿತ್ತು. ಬ್ರಿಟಿಷರೊಂದಿಗಿನ ಹೋರಾಟದ ಸಂದರ್ಭದಲ್ಲಿ ಈ ಕೋಟೆಯಲ್ಲಿದ್ದ ಭೀಮರಾಯರು ಮತ್ತು ಕೆಂಚನಗೌಡರು ಸೇರಿ ನೂರಾರು ಜನ ಹೋರಾಟಗಾರು ಮಡಿಯುತ್ತಾರೆ. 77 ಜನರನ್ನು ಬ್ರೀಟಿಷ್ ಸೈನ್ಯ ಸೆರೆಹಿಡಿಯಿತು.ಅಂದಿನ ರಾಯಚೂರಿನ (ದೋಆಬ್) ಅಲ್ಟೇರ್ ಆರ್.ಎನ್.ಟೇಲರ್, ಕ್ಯಾಪ್ಟನ್ ರೇಮೀಂಗ್‌ಟನ್, ಲೆಪ್ಟನೆಂಟ್ ಟೇಲರ್ ಸಮ್ಮುಖದಲ್ಲಿ ಕೋರ್ಟ್ ಮಾರ್ಷಲ್ ನಡೆಸಿ 1819ರ ಜೂ.1ರಂದು ಸೆರೆ ಸಿಕ್ಕ 77 ಜನರನ್ನು ಸಾಲಾಗಿ ನಿಲ್ಲಿಸಿ ಎದೆಗೆ ಗುಂಡು ಹೊಡೆದು ಕೊಲ್ಲಲಾಯಿತು. ಮತ್ತು 65ಕ್ಕೂ ಹೆಚ್ಚು ಜನರಿಗೆ 14 ವರ್ಷದ ಕಠಿಣ ಶ್ರಮದ ಶಿಕ್ಷೆಗಳನ್ನು ನೀಡಲಾಯಿತು.

ಕೋಟೆಯ ಈಗಿನ ಪರಿಸ್ಥಿತಿ

ಚಾಲುಕ್ಯರಿಂದ ಹಿಡಿದು ಟಿಪ್ಪು ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ಜೊತೆಗಿದ್ದ ಈ ಕೋಟೆಯು ನಿರ್ಲಕ್ಷ್ಯಕ್ಕೆ ಒಳಗಾಗಿ ಜೂಜಾಟ ಮತ್ತು ಕುಡುಕರ ತಾಣವಾಗಿ ಮಾರ್ಪಟ್ಟಿದೆ. ಜನರು ಈ ಕೋಟೆಯ ಆವರಣದಲ್ಲೇ ಬಹಿರ್ದೆಸೆಗೆ ಹೋಗುವುದು, ಕಸ ಹಾಕುವುದು, ಕುಡುಕರು ಇಲ್ಲೆ ಕುಡಿಯುವುದು ಮತ್ತು ಇಸ್ಪೀಟ್ ಆಡುತ್ತಿದ್ದಾರೆ.

ಕೋಟೆಯ ಹಿಂದೆಯೇ ಇರುವ ಹುಲಿಕೆರೆ ಮತ್ತು ಮರ್ದಾನ್ ಅಲಿ ದರ್ಗಾ ಈ ಕೋಟೆಯ ಸೌಂದರ್ಯವನ್ನು ಹೆಚ್ಚಿಸಿದೆ. ಕೆರೆಯನ್ನು ದೋಣಿ ವಿಹಾರ ಕೇಂದ್ರವಾಗಿ ಮಾಡಿದರೆ ಪ್ರವಾಸಿಗರು ಬರಬಹುದು. ಇದರಿಂದ ಸ್ಥಳೀಯರಿಗೆ ಉದ್ಯೋಗದ ಜೊತೆಗೆ ಕೋಟೆಯ ಸಂರಕ್ಷಣೆ ನಡೆಯಬಹುದು.

ಸ್ವಾತಂತ್ರ್ಯ ಹೋರಾಟದಲ್ಲಿ ಕೋಟೆ

ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪುವಿನ ಮರಣದ ನಂತರ ಭಾರತದಲ್ಲಿನ್ನು ಬ್ರಿಟಿಷರಿಗೆ ಪ್ರಬಲ ವಿರೋಧಿಗಳೇ ಇಲ್ಲದಂತಾಗಿತು. ಟಿಪ್ಪು ಮಡಿದ ನಂತರ ಅವನ ಸರದಾರ ದೋಂಢಿಯಾ ವಾಘನು ಈ ಭಾಗದಿಂದ ಬ್ರಿಟಿಷರ ವಿರುದ್ಧ ಸೈನ್ಯವನ್ನು ಒಗ್ಗೂಡಿಸಿದ್ದನು ಎಂದು ಹೇಳಲಾಗುತ್ತದೆ.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕೊಪ್ಪಳ ಕೋಟೆಯು ಹೈದರಾಬಾದ್ ಸಂಸ್ಥಾನವನ್ನು ಆಳುತ್ತಿದ್ದ ನಿಜಾಮನ ಅಧಿನದಲ್ಲಿತ್ತು ಎಂದು ತಿಳಿದುಬಂದಿದೆ. ಅನಂತರ 1819ರಲ್ಲಿ ಈ ಭಾಗದ ಕಂದಾಯ ವಸೂಲಿ ಆಡಳಿತಗಾರನಾಗಿದ್ದ ವೀರಪ್ಪ ದೇಸಾಯಿ, ಕೊಪ್ಪಳ ಮತ್ತು ಬಹುದ್ದೂರು ಬಂಡಿ ಕೋಟೆಗಳನ್ನು ವಶಪಡಿಸಿಕೊಂಡಿದ್ದನು. ಆದರೆ 1819ರ ಮಾರ್ಚ್ 23ರಂದು ಹೈದರಾಬಾದ್‌ನಿಂದ ಬಂದ ಕ್ಯಾಪ್ಟನ್ ಜಾನ್ಸನ್, ಇದ್ರೂಸ್ ಖಾನ್ ಮತ್ತು ಕ್ಯಾಪ್ಟನ್ ಹಾರ್ಜನ್ ನೇತೃತ್ವದ ಸುಮಾರು 1200 ಜನರಿದ್ದ ನಿಜಾಮ್ ಮತ್ತು ಬ್ರಿಟಿಷರ ಜಂಟಿ ಸೈನ್ಯವು ಅಲ್ಪ ಕಾಲದಲ್ಲೇ ಮತ್ತೆ ಕೋಟೆಯನ್ನು ತಮ್ಮ ವಶಕ್ಕೆ ಪಡೆಯಿತು.

share
ಮುಹಮ್ಮದ್ ಅಖೀಲ್ ಉಡೇವು
ಮುಹಮ್ಮದ್ ಅಖೀಲ್ ಉಡೇವು
Next Story
X