Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಇಳಿಕೆಯ ಹಾದಿಯಲ್ಲೇ ಸಾಗಿದ ಕೊರಗ...

ಇಳಿಕೆಯ ಹಾದಿಯಲ್ಲೇ ಸಾಗಿದ ಕೊರಗ ಜನಸಂಖ್ಯೆ

ಸತ್ಯಾ ಕೆ.ಸತ್ಯಾ ಕೆ.18 Jun 2026 2:03 PM IST
share
ಇಳಿಕೆಯ ಹಾದಿಯಲ್ಲೇ ಸಾಗಿದ ಕೊರಗ ಜನಸಂಖ್ಯೆ
ದ.ಕ. ಜಿಲ್ಲೆಯಲ್ಲಿ 1,118 ಕುಟುಂಬ, 4,290 ಜನರು

ಮಂಗಳೂರು : ಜನಸಂಖ್ಯೆ ಏರುಗತಿ ಯಲ್ಲಿ ಸಾಗುವುದು ಸ್ವಾಭಾವಿಕ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಹೆಚ್ಚಳವಾಗುತ್ತಾ ಸಾಗಿದೆ. ಆದರೆ, ಕರಾವಳಿಯ ಮೂಲ ನಿವಾಸಿಗಳು, ನಾಡಿನಾದ್ಯಂತ ಪೂಜಿಸ ಲ್ಪಡುವ ಕೊರಗಜ್ಜ(ಕೊರಗ ತನಿಯ)ನ ವಂಶ ವಾಹಿನಿಯ ಕೊರಗ ಸಮುದಾಯದ ಜನಸಂಖ್ಯೆ ಮಾತ್ರ ವರ್ಷದಿಂದ ವರ್ಷಕ್ಕೆ ಇಳಿಕೆಯಾಗಿರುವುದು ಸರಕಾರಿ ಅಂಕಿಅಂಶಗಳಿಂದಲೇ ಬಹಿರಂಗವಾಗುತ್ತಿದೆ.

ಕೇಂದ್ರ ಸರಕಾರದ ಬುಡಕಟ್ಟು ಸಚಿವಾಲಯದ ನಿರ್ದೇಶನದ ಮೇರೆಗೆ ಕರ್ನಾಟಕದ ದುರ್ಬಲ ಬುಡಕಟ್ಟು ಗುಂಪು(ಪಿವಿಟಿಜಿಎಸ್) ಎಂದು ಗುರು ತಿಸಲಾಗಿರುವ ಕೊರಗ ಹಾಗೂ ಜೇನು ಕುರುಬ ಸಮುದಾಯಗಳ ಸಮೀಕ್ಷೆ ಇತ್ತೀಚೆಗೆ ನಡೆಸಲಾಗಿದೆ. ಈ ಸಮೀಕ್ಷೆಯ ಪ್ರಕಾರ ದ.ಕ. ಜಿಲ್ಲೆಯಲ್ಲಿ 1,118 ಕೊರಗ ಕುಟುಂಬಗಳು ಹಾಗೂ 4,290 ಜನಸಂಖ್ಯೆಯನ್ನು ಗುರುತಿಸಲಾಗಿದೆ.

2011ರ ಜನಸಂಖ್ಯೆಯ ಆಧಾರದಲ್ಲಿ ದ.ಕ. ಜಿಲ್ಲೆಯಲ್ಲಿ 4,858 ಮಂದಿ ಕೊರಗ ಸಮುದಾಯ ದವರಿದ್ದರು. 2023-24ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಜನ್‌ಮನ್ ಕಾರ್ಯಕ್ರಮದ ನಿಮಿತ್ತ ದೇಶದಲ್ಲಿನ ಪಿವಿಟಿಜಿ ಸಮುದಾಯಗಳ ಸಾಮಾ ಜಿಕ ಆರ್ಥಿಕ ಪರಿಸ್ಥಿತಿ ಸುಧಾರಿಸಲು ನಡೆದ ಸಮೀಕ್ಷೆಯ ಪ್ರಕಾರ ಅಂದಾಜು 4,500 ಕೊರಗ ಜನಸಂಖ್ಯೆಯನ್ನು ಗುರುತಿಸಲಾಗಿತ್ತು. ಕಳೆದೆರಡು ವರ್ಷಗಳಿಂದೀಚೆಗೆ ಮತ್ತಷ್ಟು ಈ ಜನಸಂಖ್ಯೆ ಇಳಿಕೆಯಾಗಿದೆ ಎನ್ನಲಾಗುತ್ತಿದೆ. ಸಮುದಾಯದಲ್ಲಿ ಜನನ ಪ್ರಮಾಣ ಈ ಅವಧಿಯಲ್ಲಿ ಶೇ.2ರಷ್ಟಿದ್ದರೆ, ಮರಣ ಶೇ.6ರಷ್ಟಿದೆ ಎನ್ನಲಾಗಿದೆ. ಸಮುದಾಯದ ಮುಖಂಡರ ಮಾಹಿತಿಯ ಪ್ರಕಾರವೇ ಕಳೆದ ಆರು ತಿಂಗಳ ಅವಧಿಯಲ್ಲಿ ಡಿಸೆಂಬರ್‌ನಿಂದೀಚೆಗೆ ಕೊರಗ ಸಮುದಾಯದ ಸುಮಾರು 15ರಿಂದ 20 ಮಂದಿ ಸಾವಿಗೀಡಾಗಿದ್ದಾರೆ.

ಸಮಗ್ರ ಅಧ್ಯಯನದ ಅಗತ್ಯವಿದೆ

ಆರೋಗ್ಯದ ಬಗೆಗಿನ ನಿರ್ಲಕ್ಷ್ಯ ಹೆಚ್ಚುತ್ತಿರುವ ಸಾವಿನ ಪ್ರಕರಣಗಳಿಗೆ ಕಾರಣ ಎಂದು ಹೇಳಲಾ ಗುತ್ತಿದೆಯಾದರೂ, ನಿಖರವಾದ ಕಾರಣ ತಿಳಿ ಯುತ್ತಿಲ್ಲ. ಸಮುದಾಯದ ಜನ ಯಾವುದೇ ಕಾಯಿಲೆಗೊಳಗಾದರೆ ಕೊನೆ ಹಂತದವರೆಗೆ ಆಸ್ಪತ್ರೆಗೆ ಹೋಗಲು ಅಂಜಿಕೆ ಪಡುವ ಕಾರಣವೂ ಆಕಸ್ಮಿಕ ಸಾವುಗಳಿಗೆ ಕಾರಣ ಇರಬಹುದು ಎನ್ನುತ್ತಾರೆ ಸಮು ದಾಯದ ಮುಖಂಡರು.

ನಮ್ಮದು ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಸಮುದಾಯ. ಹಾಗಾಗಿ ವಂಶ ವಾಹಿನಿ, ಅಪೌಷ್ಟಿಕತೆ ಸಮಸ್ಯೆ ಸೇರಿದಂತೆ ಸಾಮಾ ಜಿಕವಾಗಿ ಸಮುದಾಯದ ಜನಸಂಖ್ಯೆ ಕ್ಷೀಣಿಸು ತ್ತಿರುವ ಬಗ್ಗೆ ತಜ್ಞರಿಂದ ಸಮಗ್ರ ಅಧ್ಯಯನ ನಡೆದರೆ ಉತ್ತಮ ಎನ್ನುತ್ತಾರೆ ಕೊರಗ ಸಮುದಾ ಯದ ಜಿಲ್ಲಾ ಮುಖಂಡ ಸುಂದರ ಕೊರಗ.

ಮಹಿಳೆಯರ ಸಂಖ್ಯೆ ಅಧಿಕ

ದ.ಕ. ಜಿಲ್ಲೆಯಲ್ಲಿ ಇತ್ತೀಚೆಗೆ ನಡೆಸಲಾದ ಕೊರಗ ಸಮುದಾಯ ಸಮೀಕ್ಷೆ ಪ್ರಕಾರ ಇರುವ ಜನಸಂಖ್ಯೆಯಲ್ಲಿ ಮಹಿಳೆಯರ ಸಂಖ್ಯೆ ಅಧಿಕವಿದೆ. 4,290ರಲ್ಲಿ 2,242 ಮಹಿಳೆಯರು. ಪಿವಿಟಿಜಿ ಗುಂಪುಗಳಿಗೆ ರಾಜ್ಯ ಸರಕಾರದಿಂದ ನೀಡುವ ಆಹಾರ ಕಿಟ್‌ನ ಪ್ರಕಾರ ಫೆಬ್ರವರಿ ತಿಂಗಳವರೆಗೆ 1,215 ಕೊರಗ ಕುಟುಂಬಗಳಿದ್ದವು. ಇತ್ತೀಚೆಗೆ ನಡೆದ ಸಮೀಕ್ಷೆಯಲ್ಲಿ ಕೆಲ ಕುಟುಂಬಗಳ ಮಾಹಿತಿ ಲಭ್ಯವಾಗಿಲ್ಲ. ಅಂತಹ ಕುಟುಂಬಗಳಿಂದ ದಾಖಲೆಗಳು ಲಭ್ಯವಿದ್ದಲ್ಲಿ ಪಡೆಯುವ ಪ್ರಯತ್ನ ನಡೆಯುತ್ತಿದೆ ಎನ್ನುತ್ತಾರೆ ಐಟಿಡಿಪಿ ಅಧಿಕಾರಿಗಳು.

ಮೂಲನಿವಾಸಿಗಳಾಗಿದ್ದರೂ ಶತಶತಮಾನಗಳ ಹಿಂದಿನಿಂದ ಶೋಷಣೆಗೆ ಒಳಗಾಗಿ, ಸಾಮಾಜಿಕ ವಾಗಿ ಅಸ್ಪಶ್ಯತೆಯ ಭಯದಲ್ಲೇ ಬದುಕಿರುವ ಕೊರಗ ಸಮುದಾಯದ ಜನರಲ್ಲಿ ಇನ್ನೂ ಮಾನಸಿಕ ತುಮುಲ, ಭಯವಿದೆ. ಬಹುಶಃ ಅದು ರಕ್ತಗತವಾಗಿ ಬಂದಿರುವ ಕಾರಣ ಕರಾವಳಿಯ ಅಲ್ಲಲ್ಲಿ ಅವ್ಯವಸ್ಥಿತವಾಗಿ ಹಂಚಿಕೊಂಡಿರುವ ಸಮುದಾ ಯದ ಜನರನ್ನು ಸಾಮುದಾಯಿಕವಾಗಿ ಒಂದೆಡೆ ಸೇರಿಸಿ ಭೂಮಿಯ ಹಕ್ಕನ್ನು ಒದಗಿಸಬೇಕಾಗಿದೆ. ಇದಕ್ಕಾಗಿ ನಾವು ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದೇವೆ. ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲೂ ಈ ಬಗ್ಗೆ ಚರ್ಚೆಯಾಗಿದೆ ಎನ್ನುವ ಕೊರಗ ಮುಖಂಡರು, ದ.ಕ. ಜಿಲ್ಲೆಯಲ್ಲಿ ಪ್ರಾಥಮಿಕ ಹಂತದಲ್ಲಿ ಸಮುದಾಯದ 100 ಕುಟುಂಬಗಳನ್ನು ಒಂದು ಕಡೆ ನೆಲೆ ನಿಲ್ಲುವಂತೆ ಮಾಡಲು ಕನಿಷ್ಠ 500 ಎಕರೆ ಭೂಮಿ ಮೀಸಲಿಡಬೇಕು ಎನ್ನುತ್ತಾರೆ.

ಆ ಪ್ರದೇಶದಲ್ಲಿ ಅವರಿಗೆ ಅಗತ್ಯವಾದ ಶಾಲೆ, ಕಾಲೇಜು, ಆಸ್ಪತ್ರೆ, ಆಟದ ಮೈದಾನ, ಸ್ಮಶಾನ, ಕುಲಕಸುಬಿಗೆ ಪೂರಕವಾದ ವಾತಾವರಣ, ಕೃಷಿಗೆ ಅವಕಾಶ ಸಿಗುವಂತಾಗಬೇಕು. ಅಲ್ಲಿ ಸಮು ದಾಯದ ಸಾಂಸ್ಕೃತಿಕ ಬದುಕಿನ ಅನಾವರಣ, ಸಾಂಪ್ರದಾಯಿಕ ಬದುಕಿನ ಚಿತ್ರಣವನ್ನು ನೋಡು ವಂತಾಗಬೇಕು. ಈ ಕಾರ್ಯ ಸರಕಾರದಿಂದ ಹಂತ ಹಂತವಾಗಿ ನಡೆದರೆ ಸಮುದಾಯವನ್ನು ಸಾಮಾ ಜಿಕವಾಗಿ ಮೇಲೆತ್ತಲು ಸಾಧ್ಯವಾಗಲಿದೆ ಎನ್ನುವುದು ಕೊರಗ ಮುಖಂಡರ ಬೇಡಿಕೆ.

ಐಟಿಡಿಪಿ ಇಲಾಖೆಯಿಂದ ಕೆಲ ಸಮಯದ ಹಿಂದೆಯಷ್ಟೇ ನಡೆದ ಕೊರಗ ಸಮುದಾಯದ ಸಮೀಕ್ಷೆಯ ವೇಳೆ ಜನಸಂಖ್ಯೆ ಮತ್ತಷ್ಟು ಇಳಿಕೆಯಾಗಿರುವುದು ಸ್ಪಷ್ಟವಾಗಿದೆ. ಪೌಷ್ಟಿಕ ಆಹಾರ, ಆರೋಗ್ಯ ಸೇತುವಿನಂತಹ ಕಾರ್ಯಕ್ರಮಗಳು ಸಮುದಾಯಕ್ಕೆ ಪೂರಕವಾಗಿವೆ. ಆದರೆ ಜಿಲ್ಲೆಯ ವಿವಿಧ ಕಡೆ ಹಂಚಿ ಹೋಗಿರುವ ಒಂಟಿ ಮನೆಗಳಾಗಿರುವ ಕುಟುಂಬಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಭೂಮಿ ಹಕ್ಕಿನೊಂದಿಗೆ ಸಕಲ ಸೌಲಭ್ಯಗಳನ್ನು ಒದಗಿಸುವ ಕಾರ್ಯ ಆಗಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾಧಿಕಾರಿ ಮಟ್ಟದ ಸಭೆಯಲ್ಲೂ ಆಗ್ರಹಿಸಲಾಗಿದೆ.

-ಸುಂದರ ಕೊರಗ,

ಅಧ್ಯಕ್ಷರು, ದ.ಕ. ಜಿಲ್ಲಾ ಕೊರಗ ಸಂಘ

ಪೌಷ್ಟಿಕ ಆಹಾರವನ್ನು ಸರಕಾರ ನೀಡುತ್ತಿದೆ. ಅದರಿಂದ ಸಾಕಷ್ಟು ಪ್ರಯೋಜನ ಆಗಿದೆ. ಆದರೆ ಇತ್ತೀಚೆಗೆ ಮಕ್ಕಳ ಶಿಬಿರವೊಂದನ್ನು ನಡೆಸಿದ ಸಂದರ್ಭ ಚಿಕ್ಕಮಕ್ಕಳಲ್ಲಿ ಹಿಮೋಗ್ಲೋಬಿನ್ ಅಂಶದ ಕೊರತೆ ಇರುವುದು ಕಂಡುಬಂದಿದೆ. ಸಮುದಾಯವನ್ನು ಬಹುವಾಗಿ ಕಾಡುತ್ತಿದ್ದ ಟಿಬಿಯಂತಹ ಕಾಯಿಲೆಗಳು ಕಡಿಮೆಯಾಗಿದ್ದರೂ ಕ್ಯಾನ್ಸರ್‌ನಂತಹ ಕಾಯಿಲೆಗಳು ಕಾಡಲಾರಂಭಿಸಿವೆ. ಹಾಗಾಗಿ ಕ್ಷೀಣಿಸುತ್ತಿರುವ ಜನಸಂಖ್ಯೆ ಬಗ್ಗೆ ತಜ್ಞರಿಂದ ಸಮಗ್ರ ಅಧ್ಯಯನದ ಅಗತ್ಯವಿದೆ.

-ಡಾ.ಸಬಿತಾ ಗುಂಡ್ಮಿ

ಸಹಾಯಕ ಪ್ರಾಧ್ಯಾಪಕಿ

ಮಂಗಳೂರು ವಿವಿ

Tags

Koragas
share
ಸತ್ಯಾ ಕೆ.
ಸತ್ಯಾ ಕೆ.
Next Story
X