Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಪ್ರಕೃತಿಯೊಂದಿಗೆ ಲೀನವಾಗುತ್ತಿದೆ...

ಪ್ರಕೃತಿಯೊಂದಿಗೆ ಲೀನವಾಗುತ್ತಿದೆ ಕುದುರೆಮುಖ ಟೌನ್‌ಶಿಪ್!

ಸತ್ಯಾ. ಕೆಸತ್ಯಾ. ಕೆ1 Aug 2026 7:30 AM IST
share
ಪ್ರಕೃತಿಯೊಂದಿಗೆ ಲೀನವಾಗುತ್ತಿದೆ ಕುದುರೆಮುಖ ಟೌನ್‌ಶಿಪ್!

ಮಂಗಳೂರು: ಸುಮಾರು 1975-2000 ಅವಧಿಯಲ್ಲಿ ದಟ್ಟ ಅರಣ್ಯದೊಳಗಿನ ಸ್ಮಾರ್ಟ್ ಸಿಟಿಯಾಗಿ ಕಂಗೊಳಿಸಿದ್ದ ಕುದುರೆಮುಖ ಟೌನ್‌ಶಿಪ್ ಇಂದು ಅಕ್ಷರಶಃ ಪಳೆಯುಳಿಕೆಯಾಗಿದೆ. ಪಾಳು ಬಿದ್ದ ವಸತಿ ಗೃಹಗಳು, ಶಾಲೆ, ಬ್ಯಾಂಕ್, ಮೈದಾನ, ಆಸ್ಪತ್ರೆ, ಕಮ್ಯುನಿಟಿ ಹಾಲ್, ಉದ್ಯಾನವನ ಎಲ್ಲವೂ ಹಸಿರು ಪ್ರಕೃತಿಯೊಂದಿಗೆ ಲೀನವಾಗುತ್ತಾ ಸಾಗುತ್ತಿದೆ. ಈ ಮೂಲಕ ‘ಕುದುರೆಮುಖ ಟೌನ್‌ಶಿಪ್’ ಎಂಬ ಗತ ವೈಭವವು ಕುರುಹೂ ಇಲ್ಲದಂತೆ ಮುಂದೊಂದು ದಿನ ಮಾಯವಾಗಬಹುದು.

ಈಗಾಗಲೇ ಈ ಟೌನ್‌ಶಿಪ್‌ಗೆ ‘ಗೋಸ್ಟ್ ಸಿಟಿ’ (ಭೂತ ನಗರ) ಎಂಬ ನಾಮಾಂಕಿತವೂ ಇಲ್ಲಿಗೆ ಬರುವ ಪ್ರವಾಸಿಗರಿಂದ ಬಂದಿದೆ. ಕಂದಾಯ ಇಲಾಖೆಯ ಅಧೀನದಲ್ಲಿರುವ ಈ ಟೌನ್‌ಶಿಪ್‌ನ ಸುಮಾರು 1,200 ಎಕರೆ ಭೂಮಿಯನ್ನು ಅರಣ್ಯ ಇಲಾಖೆ ತನ್ನ ಸ್ವಾಧೀನಕ್ಕೆ ಪಡೆಯಲು ನ್ಯಾಯಾಲಯದಲ್ಲಿ ಹೋರಾಟ ಮುಂದುವರಿದಿದೆ. ಆದರೂ ಇಲ್ಲಿರುವ ಆಸ್ತಿಯನ್ನು ರಕ್ಷಿಸಿಕೊಳ್ಳಲು, ನಿರ್ವಹಣೆ ಹೊಣೆ ಹೊತ್ತಿರುವ ಕೆಲ ಕುಟುಂಬಗಳು, ಅರಣ್ಯ ಇಲಾಖೆಯ ಅಧಿಕಾರಿ-ಸಿಬ್ಬಂದಿ ಓಡಾಟ ನಡೆಸುತ್ತಿದ್ದಾರೆೆ.

ಕುದುರೆಮುಖ ಟೌನ್‌ಶಿಪ್‌ನೊಳಗೆ ಇರುವ ವಸತಿಗೃಹಗಳು ಸೇರಿದಂತೆ ಕಟ್ಟಡಗಳು ನಿರ್ಮಾಣ ವಾಗಿ ಅದಾಗಲೇ 50 ವರ್ಷಗಳು ಕಳೆದಿವೆ. ಕಳೆದೆರಡು ದಶಕಗಳಿಂದ ಇಲ್ಲಿರುವ ಅತಿಥಿ ಗೃಹಗಳು ಹಾಗೂ ನಿರ್ವಹಣೆ ಮಾಡುತ್ತಿರುವ ಕುಟುಂಬ ಗಳು ವಾಸಿಸುತ್ತಿರುವ ಕೆಲ ವಸತಿಗೃಹಗಳನ್ನು ಹೊರತು ಪಡಿಸಿದಂತೆ ಎಲ್ಲಾ ಕಟ್ಟಡಗಳು ಗಿಡಗಂಟಿಗಳ ನಡುವೆ ಪಾಳುಬಿದ್ದಿವೆ. ಮತ್ತೆ ಈ ಕಟ್ಟಡಗಳ ಮರು ಬಳಕೆ ಅಥವಾ ವಾಸ್ತವ್ಯಕ್ಕೆ ಬಳಸುವಂತಿಲ್ಲ. ಸದ್ಯ ಇಲ್ಲಿನ ಅತಿಥಿ ಗೃಹ ಸೇರಿದಂತೆ ಟೌನ್‌ಶಿಪ್‌ನ ನಿರ್ವಹಣೆಯನ್ನು ಕೆಐಒಸಿಎಲ್ ನೋಡಿಕೊಳ್ಳುತ್ತಿದ್ದು, ಸುಮಾರು 20 ವಸತಿ ಗೃಹಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸೇರಿ ದಂತೆ ನಿರ್ವಹಣೆ ಮಾಡುತ್ತಿರುವ ಕುಟುಂಬಗಳು

ನೆಲೆಸಿವೆ ಎಂದು ಕೆಐಒಸಿಎಲ್‌ನ ಹಿರಿಯ ಅಧಿಕಾರಿ ಹೇಳುತ್ತಾರೆ.

ಕಾಡಿನ ನಡುವಿನ ಹಳ್ಳಿಯೊಳಗೊಂದು ನಗರದ ಸಕಲ ಸೌಲಭ್ಯಗಳಿಂದ ಕೂಡಿದ ‘ವೈಭವದ ಸಿಟಿ’ಯಾಗಿ ಇದು ಕಂಗೊಳಿಸುತ್ತಿತ್ತು ಎಂದು ನೆನಪಿಸಿಕೊಳ್ಳುತ್ತಾರೆ ಕೆಐಒಸಿಎಲ್‌ನಲ್ಲಿ ಉದ್ಯೋಗಿಯಾಗಿದ್ದು ಸದ್ಯ ನಿವೃತ್ತರಾಗಿರುವ ಮಂಗಳೂರಿನ ಶಶಿಕಾಂತ್.

ಅಧಿಕಾರಿ, ಸಿಬ್ಬಂದಿಗೆ ಪೂರಕವಾದ ವಸತಿಗೃಹಗಳು, ಫೈವ್‌ಸ್ಟಾರ್ ಹೋಟೆಲ್ ಮಾದರಿಯ ಅತಿಥಿ ಗೃಹ, ಜಿಂಕೆ ಪಾರ್ಕ್‌ನಿಂದ ಕೂಡಿದ ಉದ್ಯಾನವನ, ಔಷಧೀಯ ಸಸ್ಯಗಳ ವನ ಎಲ್ಲವೂ ಇಂದು ಪಾಳು ಬಿದ್ದಿವೆ. ಶಾಲೆ, ಆಸ್ಪತ್ರೆ, ವಸತಿಗೃಹಗಳ ನಡುವೆ ಇದ್ದ ಸಂಚಾರ ಮಾರ್ಗವೂ ಕಾಣದಂತಾಗಿದೆ. ಸುಮಾರು 3 ದಶಕಗಳ ಕಾಲ ವೈಭವದಿಂದ ಮೆರೆದಿದ್ದ ಟೌನ್‌ಶಿಪ್ ಮರಗಿಡಗಳ ನಡುವೆ ಹುದುಗಿ ಹೋಗಿದೆ.

ದಿನನಿತ್ಯ 10,000ಕ್ಕೂ ಅಧಿಕ ಜನರು ಓಡಾಡುತ್ತಿದ್ದ ಹಳ್ಳಿಯೊಳಗಿದ್ದ ನಗರ

ಚಿಕ್ಕಮಗಳೂರಿನ ಕುದುರೆಮುಖ ಪರ್ವತ ಶ್ರೇಣಿಗಳ ನಡುವಿನ ಅರಣ್ಯದ ನಡುವೆ ಸುಮಾರು 1,200 ಎಕರೆ ವ್ಯಾಪ್ತಿಯಲ್ಲಿ ನಿರ್ಮಾಣವಾಗಿದ್ದ ಕುದುರೆಮುಖ ಟೌನ್‌ಶಿಪ್‌ನಲ್ಲಿ 1980-2000 ಅವಧಿಯಲ್ಲಿ ಪ್ರತಿನಿತ್ಯ 10,000ಕ್ಕೂ ಅಧಿಕ ಮಂದಿಯಿಂದ ತುಂಬಿರುತ್ತಿತ್ತು. ಸುಮಾರು 2,000 ಶಾಶ್ವತ ವಸತಿ ಗೃಹಗಳಲ್ಲಿ ಕೆಐಒಸಿಎಲ್ (ಕುದುರೆಮುಖ ಕಬ್ಬಿಣದ ಅದಿರು ಕಾರ್ಖಾನೆ)ನ ಉದ್ಯೋಗಿ- ಸಿಬ್ಬಂದಿ ಜೊತೆಗೆ ಅಲ್ಲಿದ್ದ ಆಸ್ಪತ್ರೆ, ಬ್ಯಾಂಕ್, ಅಂಚೆ ಕಚೇರಿ, ಉದ್ಯಾನವನ, ಪೊಲೀಸ್ ಠಾಣೆ, ಟೌನ್‌ಶಿಪ್‌ನ ಭದ್ರತಾ ವ್ಯವಸ್ಥೆ ಹೊಂದಿದ್ದ ಸಿಐಎಸ್‌ಎಫ್‌ನ ಸಿಬ್ಬಂದಿ ಮತ್ತಿತರರಿಗೆ ನಿರ್ಮಿಸಲಾಗಿದ್ದ ತಾತ್ಕಾಲಿಕ ವಸತಿಗೃಹಗಳ ನಿವಾಸಿಗಳಿಂದ ಈ ಟೌನ್‌ಶಿಪ್ ತುಂಬಿತ್ತು.

ನಾನು 1997ರಿಂದ ಸುಮಾರು 18 ವರ್ಷಗಳ ಕಾಲ ಟೌನ್‌ಶಿಪ್‌ನ ವಸತಿಗೃಹದಲ್ಲಿದ್ದೆ. 2005ರಲ್ಲಿ ಕುದುರೆ ಮುಖದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಗೆ ಸುಪ್ರೀಂ ಕೋರ್ಟ್‌ನಿಂದ ನಿಷೇಧ ಹೇರಲ್ಪಟ್ಟಿತ್ತು. ಬಳಿಕ ಅಲ್ಲಿ ವಾಸವಾಗಿದ್ದ ಕೆಐಒಸಿಎಲ್‌ನ ಉದ್ಯೋಗಿಗಳು ಹೆಚ್ಚಿನವರು ವಿಆರ್‌ಎಸ್ ಪಡೆದು, ಕೆಲವರು ನಿವೃತ್ತರಾಗಿ, ಕೆಲವರು ವಿವಿಧ ಕಡೆಗೆ ವರ್ಗಾವಣೆಗೊಂಡರು. ಅಲ್ಲಿ ನಾನು ಕುಟುಂಬ ಸಮೇತ ವಾಸವಿದ್ದ ಆ ದಿನಗಳು ಮರೆಯಲಾಗದ ಅನುಭವ. ಕಾಡೊಳಗಿನ ಆ ಟೌನ್‌ಶಿಪ್‌ನಲ್ಲಿ ನಗರದಲ್ಲಿದ್ದ ಸಕಲ ಸೌಲಭ್ಯಗಳೂ ಲಭ್ಯವಿತ್ತು. ಅಲ್ಲಿನ ಉದ್ಯಾನವನ ಊಟಿಯಲ್ಲಿರುವ ಸುಪ್ರಸಿದ್ಧ ಉದ್ಯಾನವನದಷ್ಟೇ ಖ್ಯಾತಿಯನ್ನು ಪಡೆದಿತ್ತು.

-ಶಶಿಕಾಂತ್,

ಕೆಐಒಸಿಎಲ್‌ನ ನಿವೃತ್ತ ಉದ್ಯೋಗಿ

share
ಸತ್ಯಾ. ಕೆ
ಸತ್ಯಾ. ಕೆ
Next Story
X