Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕಾರ್ಮಿಕ ಹಕ್ಕುಗಳ ಪ್ರತಿಪಾದಕ...

ಕಾರ್ಮಿಕ ಹಕ್ಕುಗಳ ಪ್ರತಿಪಾದಕ ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್

ಡಾ. ಸಿದ್ದರಾಜು ವಿ.ಜಿ., ಮೈಸೂರುಡಾ. ಸಿದ್ದರಾಜು ವಿ.ಜಿ., ಮೈಸೂರು1 May 2026 10:21 AM IST
share
ಕಾರ್ಮಿಕ ಹಕ್ಕುಗಳ ಪ್ರತಿಪಾದಕ ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್
ಇಂದು ಕಾರ್ಮಿಕರ ದಿನ

ಅಂಬೇಡ್ಕರ್‌ರವರ ಚಿಂತನೆಗಳು ಕೇವಲ ಇತಿಹಾಸವಲ್ಲ, ಇಂದಿನ ಮತ್ತು ಭವಿಷ್ಯದ ಕಾರ್ಮಿಕ ನೀತಿಗಳಿಗೆ ಮಾರ್ಗದರ್ಶನ ನೀಡುವ ಶಾಶ್ವತ ತತ್ವಗಳಾಗಿವೆ ಎಂಬುದನ್ನು ನೆನಪಿಸಿಕೊಳ್ಳುವುದರ ಮೂಲಕ ಕಾರ್ಮಿಕ ದಿನಾಚರಣೆಯನ್ನು ಆಚರಿಸುವುದು ಅತ್ಯಂತ ಅರ್ಥಪೂರ್ಣವಾಗಿರುತ್ತದೆ.

ಮೇ 1ರಂದು ಆಚರಿಸಲ್ಪಡುವ ಅಂತರ್‌ರಾಷ್ಟ್ರೀಯ ಕಾರ್ಮಿಕ ದಿನ ಕೇವಲ ಒಂದು ಆಚರಣೆ ಮಾತ್ರವಲ್ಲ, ಕಾರ್ಮಿಕರ ಹೋರಾಟ, ಗೌರವ ಮತ್ತು ಹಕ್ಕುಗಳ ಸಂಕೇತವಾಗಿದೆ. ಯಾವುದೇ ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಅವರ ಶ್ರಮವೇ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಯ ಮೂಲವಾಗಿದೆ. ದುಡಿಯುವ ವರ್ಗದವರ ಮೇಲಿನ ಶೋಷಣೆ, ಅಸಮಾನತೆ ಮತ್ತು ಅನ್ಯಾಯದ ವಿರುದ್ಧ ಹೋರಾಡುವ ಮೂಲಕ ಅವರ ಕ್ಷೇಮಾಭಿವೃದ್ಧಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ ಎಂಬುದನ್ನು ನಾವು ಮರೆಯಬಾರದು.

ಪ್ರಸ್ತುತ ಸಂದರ್ಭದಲ್ಲಿ ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಜಗತ್ತಿನಾದ್ಯಾಂತ ಹೋರಾಟ ಮಾಡಿದಂತಹ ಹಲವಾರು ಮಹನೀಯರನ್ನು ನೆನಪಿಸಿಕೊಳ್ಳುವುದು ಅತಿಮುಖ್ಯವಾಗಿದೆ. ಅದೇ ರೀತಿ ಭಾರತದಲ್ಲಿ ಕಾರ್ಮಿಕರ ಹಕ್ಕುಗಳಿಗಾಗಿ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ಹಂತಗಳಲ್ಲಿ ಮಹತ್ತರ ಹೋರಾಟ ನಡೆಸಿದ ನಾಯಕರಾಗಿ ಅಂಬೇಡ್ಕರ್‌ರವರನ್ನು ನೆನಪಿಸಿಕೊಳ್ಳುವುದು ಅತ್ಯಂತ ಸೂಕ್ತವಾಗಿದೆ. ಕಾರ್ಮಿಕರ ಹಕ್ಕುಗಳ ಪ್ರತಿಪಾದಕರಾಗಿ ಡಾ.ಬಿ.ಆರ್ ಅಂಂಬೇಡ್ಕರ್ ಅವರ ಪಾತ್ರ ಅತ್ಯಂತ ವಿಶಿಷ್ಟ, ಕ್ರಾಂತಿಕಾರಿ ಮತ್ತು ದೂರದೃಷ್ಟಿವುಳ್ಳದ್ದಾಗಿದೆ.

ಜಾತೀಯತೆಯ ಬಲವಾದ ಹಿಡಿತದಲ್ಲಿ ಸಿಕ್ಕಿಹಾಕಿಕೊಂಡಿದ್ದ ಭಾರತೀಯ ಕಾರ್ಮಿಕರನ್ನು ಸಂಘಟಿಸಲು, ಅವರ ಹಕ್ಕುಗಳ ಅರಿವು ಮೂಡಿಸಲು ಮತ್ತು ಹೋರಾಟಕ್ಕೆ ದಿಕ್ಕು ತೋರಿಸಲು ಅಂಬೇಡ್ಕರ್‌ರವರ ಚಿಂತನೆಗಳು ಮಹತ್ವದ ಪಾತ್ರ ವಹಿಸಿವೆ. ಭಾರತದಲ್ಲಿ ಕಾರ್ಮಿಕರು ತಮ್ಮ ಹಕ್ಕುಗಳನ್ನು ಚಲಾಯಿಸಲು ಕಾರಣಭೂತರಾದವರು ಯಾರು ಎಂದು ನೆನಪಿಸಿಕೊಂಡರೆ ತಕ್ಷಣಕ್ಕೆ ನಮ್ಮ ಕಣ್ಣ ಮುಂದೆ ಬರುವವರು ಆಧುನಿಕ ಭಾರತದ ನಿರ್ಮಾತೃ ಬಾಬಾಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್‌ರವರು. ಇವರು ಇಲ್ಲದಿದ್ದರೆ, ಇಂದು ಭಾರತದ ಕಾರ್ಮಿಕರ ಭವಿಷ್ಯವು ಕತ್ತಲೆಯಲ್ಲಿ ಕಳೆಯುವ ಸ್ಥಿತಿ ಇರುತ್ತಿತ್ತು.

ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಕಾರ್ಮಿಕರ ಸಮಸ್ಯೆಗಳು ಕೇವಲ ಆರ್ಥಿಕ ವಿಷಯವಲ್ಲ, ಅದು ಸಾಮಾಜಿಕ ಅಸಮಾನತೆಯೊಂದಿಗೆ ಕೂಡಿಕೊಂಡಿರುವ ಗಂಭೀರ ಪ್ರಶ್ನೆಯಾಗಿದೆ. ವಿಶೇಷವಾಗಿ ಜಾತಿವ್ಯವಸ್ಥೆ ಮತ್ತು ಕಾರ್ಮಿಕ ಶೋಷಣೆಯ ನಡುವಿನ ಸಂಬಂಧವನ್ನು ಅವರು ಸ್ಪಷ್ಟವಾಗಿ ವಿವರಿಸಿದರು. ಭಾರತದ ಬಹುತೇಕ ಅಸಂಘಟಿತ ಕಾರ್ಮಿಕರು, ವಲಸೆ ಕಾರ್ಮಿಕರು ಮತ್ತು ಸ್ವಚ್ಛತಾ ಕಾರ್ಮಿಕರು ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದು, ಇಂದಿಗೂ ಅವರು ಅನೇಕ ರೀತಿಯ ಅನ್ಯಾಯ ಮತ್ತು ಶೋಷಣೆಗೆ ಒಳಗಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರ ವಿಮೋಚನೆಗೆ ಸಾಮಾಜಿಕ ಸಮಾನತೆ ಅತ್ಯವಶ್ಯಕ ಎಂದು ಅವರು ಪ್ರತಿಪಾದಿಸಿದರು.

ವೈಸರಾಯ್‌ರ ಕಾರ್ಯಕಾರಿ ಮಂಡಳಿಯಲ್ಲಿ ಕಾರ್ಮಿಕ ಸದಸ್ಯರಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಅಂಬೇಡ್ಕರ್‌ರವರು ಅನೇಕ ಕ್ರಾಂತಿಕಾರಿ ಸುಧಾರಣೆಗಳನ್ನು ಜಾರಿಗೆ ತಂದರು. ದಿನಕ್ಕೆ 14 ಗಂಟೆಗಳ ಕೆಲಸವನ್ನು 8 ಗಂಟೆಗಳಾಗಿ ಮಿತಿಗೊಳಿಸುವುದು, ಮಹಿಳಾ ಕಾರ್ಮಿಕರಿಗೆ ಹೆರಿಗೆ ಭತ್ತೆ ಮತ್ತು ರಕ್ಷಣಾ ಕ್ರಮಗಳನ್ನು ಒದಗಿಸುವುದು, ಕಾರ್ಮಿಕರ ಆರೋಗ್ಯಕ್ಕಾಗಿ ನೌಕರರ ರಾಜ್ಯ ವಿಮೆ ಜಾರಿಗೆ ತರುವುದು, ಉದ್ಯೋಗ ವಿನಿಮಯ ಕೇಂದ್ರಗಳ ಸ್ಥಾಪನೆ, ಕಾರ್ಮಿಕ ಸಂಘಟನೆಗಳಿಗೆ ಕಾನೂನು ಮಾನ್ಯತೆ ನೀಡುವುದು ಮುಂತಾದ ಮಹತ್ವದ ಕ್ರಮಗಳು ಅವರ ದೂರದೃಷ್ಟಿಯ ಫಲವಾಗಿದೆ. ಇವುಗಳ ಜೊತೆಗೆ ಸಮಾನ ಕೆಲಸಕ್ಕೆ ಸಮಾನ ವೇತನ, ಕನಿಷ್ಠ ವೇತನ ನೀತಿ, ಕಾರ್ಮಿಕ ವಿವಾದ ಪರಿಹಾರ ವ್ಯವಸ್ಥೆ, ತಾಂತ್ರಿಕ ತರಬೇತಿ ಯೋಜನೆಗಳು ಹಾಗೂ ಕಾರ್ಮಿಕ ಕಲ್ಯಾಣ ನಿಧಿಗಳ ಸ್ಥಾಪನೆ ಮುಂತಾದ ಕ್ರಮಗಳು ಭಾರತೀಯ ಕಾರ್ಮಿಕರ ಜೀವನಮಟ್ಟವನ್ನು ಉನ್ನತಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ.

ಅಂಬೇಡ್ಕರ್‌ರವರು ಕಾರ್ಮಿಕರಿಗಾಗಿ ರಾಜಕೀಯ ಮಟ್ಟದಲ್ಲಿಯೂ ಹೋರಾಟ ನಡೆಸಿದರು. ಇಂಗ್ಲೆಂಡಿನ ಲೇಬರ್ ಪಾರ್ಟಿಯನ್ನು ಮಾದರಿಯಾಗಿ ತೆಗೆದುಕೊಂಡು ಭಾರತದಲ್ಲಿ ಕಾರ್ಮಿಕರ ಹಿತಾಸಕ್ತಿಗಾಗಿ ಇಂಡಿಯನ್ ಲೇಬರ್ ಪಾರ್ಟಿಯನ್ನು ಸ್ಥಾಪಿಸಿದರು. ಇದರಿಂದ ಕಾರ್ಮಿಕರ ಧ್ವನಿಗೆ ರಾಜಕೀಯ ವೇದಿಕೆ ದೊರಕಿತು. ಜೊತೆಗೆ ತ್ರಿಪಕ್ಷೀಯ ಚರ್ಚಾ ವ್ಯವಸ್ಥೆಯನ್ನು ರೂಪಿಸುವ ಮೂಲಕ ಸರಕಾರ, ಉದ್ಯೋಗದಾತರು ಮತ್ತು ಕಾರ್ಮಿಕರ ನಡುವೆ ಸಮನ್ವಯ ಸಾಧಿಸಲು ಪ್ರಯತ್ನಿಸಿದರು. ಈ ರೀತಿಯ ವ್ಯವಸ್ಥೆಗಳು ಇಂದಿಗೂ ಕಾರ್ಮಿಕ ನೀತಿಗಳ ರೂಪುಗೊಳಿಸುವಿಕೆಯಲ್ಲಿ ಪ್ರಮುಖವಾದ ಸ್ಥಾನವನ್ನು ಹೊಂದಿವೆ.

ಡಾ.ಬಿ.ಆರ್ ಅಂಬೇಡ್ಕರ್ ಅವರ ದೂರದೃಷ್ಟಿಯಿಂದ ಭಾರತೀಯ ಸಂವಿಧಾನದಲ್ಲಿ ಕಾರ್ಮಿಕರ ಕಲ್ಯಾಣಕ್ಕಾಗಿ ಬಲವಾದ ಭದ್ರತೆಗಳನ್ನು ಅಳವಡಿಸಲಾಗಿದೆ. ಸಮಾನತೆ ಮತ್ತು ಶೋಷಣೆಯ ವಿರುದ್ಧ ರಕ್ಷಣೆಯನ್ನು ಒದಗಿಸುವ ಮೂಲಭೂತ ಹಕ್ಕುಗಳು, ಮಾನವೀಯ ಮತ್ತು ನ್ಯಾಯಸಮ್ಮತ ಕೆಲಸದ ಪರಿಸ್ಥಿತಿಗಳನ್ನು ಉತ್ತೇಜಿಸುವ ನಿರ್ದೇಶಕ ತತ್ವಗಳು, ಕನಿಷ್ಠ ವೇತನ, ಸಾಮಾಜಿಕ ಭದ್ರತೆ ಹಾಗೂ ಕಾರ್ಮಿಕರ ಭಾಗವಹಿಸುವಿಕೆ ಸಂಬಂಧಿಸಿದ ವ್ಯವಸ್ಥೆಗಳು ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವ ಪ್ರಮುಖ ಅಂಶಗಳಾಗಿವೆ. ಈ ಸಂವಿಧಾನಾತ್ಮಕ ತತ್ವಗಳು ಇಂದಿಗೂ ಭಾರತದಲ್ಲಿ ಕಾರ್ಮಿಕ ಕಾನೂನುಗಳು ಮತ್ತು ನೀತಿಗಳಿಗೆ ಮಾರ್ಗದರ್ಶನ ನೀಡುತ್ತಿವೆ. ಆದರೂ, ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಹೆಚ್ಚಿನ ಕಾರ್ಮಿಕರಿಗೆ ಈ ಸೌಲಭ್ಯಗಳು ಸಮರ್ಪಕವಾಗಿ ತಲುಪದಿರುವುದು ಅನುಷ್ಠಾನದಲ್ಲಿ ಇರುವ ಕೊರತೆಗಳನ್ನು ಸ್ಪಷ್ಟಪಡಿಸುತ್ತದೆ.

ಪ್ರಸ್ತುತ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯಲ್ಲಿ ಕಾರ್ಮಿಕ ವರ್ಗವು ಬಹುಮುಖ ಸವಾಲುಗಳನ್ನು ಎದುರಿಸುತ್ತಿದೆ. ಗಿಗ್ ಆರ್ಥಿಕತೆಯ ವೇಗವಾದ ಬೆಳವಣಿಗೆ, ಅಸಂಘಟಿತ ವಲಯದ ವಿಸ್ತರಣೆ, ಉದ್ಯೋಗ ಭದ್ರತೆಯ ಕೊರತೆ ಮತ್ತು ಸಾಮಾಜಿಕ ಭದ್ರತಾ ಸೌಲಭ್ಯಗಳ ಅಭಾವವು ಕಾರ್ಮಿಕರ ಬದುಕನ್ನು ಅನಿಶ್ಚಿತತೆಯೊಳಗೆ ತಳ್ಳುತ್ತಿವೆ. ವಿಶೇಷವಾಗಿ ಅಸಂಘಟಿತ ವಲಯದಲ್ಲಿ ದುಡಿಯುವ ಬಹುಮತ ಕಾರ್ಮಿಕರು ಇನ್ನೂ ಸಮರ್ಪಕ ರಕ್ಷಣೆಯಿಂದ ವಂಚಿತರಾಗಿರುವುದು ಗಂಭೀರ ಚಿಂತೆನೆಯ ವಿಷಯವಾಗಿದೆ. ಜಾಗತೀಕರಣ, ಡಿಜಿಟಲೀಕರಣ ಮತ್ತು ಕೃತಕ ಬುದ್ಧಿಮತ್ತೆ (ಎಐ) ಪರಿಣಾಮವಾಗಿ ಉದ್ಯೋಗದ ಸ್ವರೂಪವೇ ವೇಗವಾಗಿ ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ, ಗಿಗ್ ಮತ್ತು ಪ್ಲಾಟ್‌ಫಾರ್ಮ್ ಆಧಾರಿತ ಉದ್ಯೋಗಗಳ ಹೆಚ್ಚಳದಿಂದ ಉದ್ಯೋಗದ ಸ್ಥಿರತೆ ಕುಂದಿದೆ; ವಲಸೆ ಮತ್ತು ಗುತ್ತಿಗೆ ಕಾರ್ಮಿಕರಿಗೆ ಮೂಲಭೂತ ಸಾಮಾಜಿಕ ಭದ್ರತೆಯೂ ದೊರೆಯದ ಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ, ಮಹಿಳೆಯರ ವೇತನ ಮತ್ತು ಉದ್ಯೋಗಾವಕಾಶಗಳಲ್ಲಿ ಅಸಮಾನತೆ ಮುಂದುವರಿಯುತ್ತಿದ್ದು, ಹೊಸ ಕೈಗಾರಿಕೆಗಳಲ್ಲಿ ಉದ್ಯೋಗ ಸಂಬಂಧಿತ ಆರೋಗ್ಯದ ಅಪಾಯಗಳೂ ಹೆಚ್ಚಾಗುತ್ತಿವೆ. ಇಂತಹ ಸಂಕೀರ್ಣ ಸವಾಲುಗಳ ನಡುವೆ ಅಂಂಬೇಡ್ಕರ್ ಅವರು ಪ್ರತಿಪಾದಿಸಿದ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ತತ್ವಗಳು ಇಂದಿಗೂ ಕಾರ್ಮಿಕ ವರ್ಗಕ್ಕೆ ದಿಕ್ಕು ತೋರಿಸುವ ದೀಪಸ್ತಂಭಗಳಾಗಿವೆ. ರಾಜ್ಯದ ಹೊಣೆಗಾರಿಕೆ, ಸಾಮಾಜಿಕ ನ್ಯಾಯ ಮತ್ತು ಕಾರ್ಮಿಕರ ಗೌರವ ಎಂಬ ಅವರ ಮೂಲಭೂತ ಮೌಲ್ಯಗಳು ಈ ಸವಾಲುಗಳಿಗೆ ಸಮಗ್ರ ಮತ್ತು ನ್ಯಾಯಸಮ್ಮತ ಪರಿಹಾರವನ್ನು ರೂಪಿಸಲು ದೃಢವಾದ ಚೌಕಟ್ಟನ್ನು ಒದಗಿಸುತ್ತವೆ.

2026ರಲ್ಲಿ ಕಾರ್ಮಿಕ ದಿನಾಚರಣೆಯನ್ನು ಅರ್ಥಪೂರ್ಣಗೊಳಿಸಲು ಅಂಬೇಡ್ಕರ್ ಅವರ ಚಿಂತನೆಗಳನ್ನು ಸಮಕಾಲೀನ ನೀತಿಗಳಲ್ಲಿ ಪುನರ್‌ವ್ಯಾಖ್ಯಾನಿಸುವುದು ಅಗತ್ಯವಾಗಿದೆ. ಪ್ರತಿಯೊಬ್ಬ ಕಾರ್ಮಿಕನಿಗೂ ವಿಮೆ, ಪಿಂಚಣಿ ಮತ್ತು ಆರೋಗ್ಯ ಸೇವೆಗಳನ್ನು ಒಳಗೊಂಡ ಸಾರ್ವತ್ರಿಕ ಸಾಮಾಜಿಕ ಭದ್ರತೆಯನ್ನು ವಿಸ್ತರಿಸಬೇಕು, ವಿಶೇಷವಾಗಿ ಗಿಗ್ ಕಾರ್ಮಿಕರನ್ನು ಒಳಗೊಳ್ಳುವಂತೆ ನೋಡಿಕೊಳ್ಳಬೇಕು. ಉದ್ಯೋಗದಲ್ಲಿ ಜಾತಿ, ಲಿಂಗ ಮತ್ತು ಪ್ರಾದೇಶಿಕ ಅಸಮಾನತೆಗಳನ್ನು ನಿವಾರಿಸುವ ಕಾರ್ಮಿಕ ನೀತಿಗಳನ್ನು ಜಾರಿಗೊಳಿಸಬೇಕು. ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಯ ಮೂಲಕ ಕಾರ್ಮಿಕರನ್ನು ಸಬಲೀಕರಣಗೊಳಿಸಬೇಕು ಎಂಬ ಅಂಬೇಡ್ಕರ್ ಅವರ ಅಭಿಪ್ರಾಯವನ್ನು ಕಾರ್ಯರೂಪಕ್ಕೆ ತರುವುದು ಅತ್ಯವಶ್ಯಕ. ಜೊತೆಗೆ, ಕಾರ್ಮಿಕ ಸಂಘಟನೆಗಳನ್ನು ಬಲಪಡಿಸಿ, ಕಾರ್ಮಿಕ ಕಾನೂನುಗಳ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಬೇಕು. ಬಹು ಮುಖ್ಯವಾಗಿ, ಕಾರ್ಮಿಕರಿಗೆ ಗೌರವದ ಮೌಲ್ಯವನ್ನು ಹೆಚ್ಚಿಸಲು ಸಮಾಜದಲ್ಲಿ ಎಲ್ಲಾ ರೀತಿಯ ಕೆಲಸಗಳಿಗೆ, ವಿಶೇಷವಾಗಿ ದೈಹಿಕ ಶ್ರಮ ಮತ್ತು ಅಗತ್ಯ ಸೇವೆಗಳಿಗೆ ಗೌರವವನ್ನು ಹೆಚ್ಚಿಸುವ ಮೂಲಕ ಬಲಪಡಿಸಬೇಕು.

ಹೀಗಾಗಿ, ಕಾರ್ಮಿಕ ದಿನದ ಸಂದರ್ಭದಲ್ಲಿ ಅಂಬೇಡ್ಕರ್‌ರವರ ಚಿಂತನೆಗಳನ್ನು ಪುನರ್‌ಅವಲೋಕಿಸುವುದು ಮತ್ತು ಅವರು ರೂಪಿಸಿದ ಕಾನೂನುಗಳು ಹಾಗೂ ನೀತಿಗಳು ಸಮರ್ಪಕವಾಗಿ ಜಾರಿಗೆ ಬರುತ್ತಿವೆಯೇ ಎಂಬುದನ್ನು ಪರಿಶೀಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಅಂಬೇಡ್ಕರ್‌ರವರ ಚಿಂತನೆಗಳು ಕೇವಲ ಇತಿಹಾಸವಲ್ಲ, ಇಂದಿನ ಮತ್ತು ಭವಿಷ್ಯದ ಕಾರ್ಮಿಕ ನೀತಿಗಳಿಗೆ ಮಾರ್ಗದರ್ಶನ ನೀಡುವ ಶಾಶ್ವತ ತತ್ವಗಳಾಗಿವೆ ಎಂಬುದನ್ನು ನೆನಪಿಸಿಕೊಳ್ಳುವುದರ ಮೂಲಕ ಕಾರ್ಮಿಕ ದಿನಾಚರಣೆಯನ್ನು ಆಚರಿಸುವುದು ಅತ್ಯಂತ ಅರ್ಥಪೂರ್ಣವಾಗಿರುತ್ತದೆ.

Tags

Dr. B.R. AmbedkarLabor Daylabor
share
ಡಾ. ಸಿದ್ದರಾಜು ವಿ.ಜಿ., ಮೈಸೂರು
ಡಾ. ಸಿದ್ದರಾಜು ವಿ.ಜಿ., ಮೈಸೂರು
Next Story
X