Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕನಕಾಚಲಪತಿ ಜಾತ್ರೆಯಲ್ಲಷ್ಟೇ ಸಿಗುವ...

ಕನಕಾಚಲಪತಿ ಜಾತ್ರೆಯಲ್ಲಷ್ಟೇ ಸಿಗುವ ‘ಲಂಬಾಣಿ ಉಡುಗೆಗಳು’

ವಾರ್ತಾಭಾರತಿವಾರ್ತಾಭಾರತಿ13 March 2026 3:07 PM IST
share
ಕನಕಾಚಲಪತಿ ಜಾತ್ರೆಯಲ್ಲಷ್ಟೇ ಸಿಗುವ ‘ಲಂಬಾಣಿ ಉಡುಗೆಗಳು’
ಆರೇಳು ಗಂಟೆಯಲ್ಲಿ ವ್ಯಾಪಾರ, ಲಂಬಾಣಿಗರ ಖರೀದಿ ಭರಾಟೆ ಜೋರು

ಕನಕಗಿರಿ : ದೇಶದ ಕಲೆ, ಸಂಸ್ಕೃತಿಗೆ ಲಂಬಾಣಿ ಅಥವಾ ಬಂಜಾರ ಸಮುದಾಯದ ಕೊಡುಗೆ ಅಪಾರವಾಗಿದೆ. ತಮ್ಮ ಉಡುಗೆ ತೊಡುಗೆಗಳಿಂದ ಗಮನ ಸೆಳೆಯುವ ಲಂಬಾಣಿಗರು, ತಾಲೂಕಿನ ವಿವಿಧ ತಾಂಡಾಗಳಲ್ಲಿ ಕೃಷಿ ಹಾಗೂ ಕೂಲಿ ಮಾಡುತ್ತಾರೆ. ಅಧುನಿಕತೆ ಬೆಳೆದರೂ ಲಂಬಾಣಿ ಮಹಿಳೆಯರ ಉಡುಗೆ ತೊಡುಗೆಗಳಲ್ಲಿ ಬದಲಾಗಿಲ್ಲ. ಈಗಲೂ ಸಾಂಪ್ರದಾಯಿಕ ಉಡುಗೆಗಳಲ್ಲಿಯೇ ಮಿಂಚುತ್ತಾರೆ.

ಉಡುಗೆ ತೊಡುಗೆಗಳು ಕರಕುಶಲ ಕಲೆಯಿಂದ ಕೂಡಿದ್ದು, ಕನಕಾಚಲಪತಿಯ ಜಾತ್ರಾ ಮಹೋತ್ಸವದಲ್ಲಿ ಸಿಗುತ್ತವೆ. ಕೊಪ್ಪಳ, ವಿಜಯನಗರ, ಬಳ್ಳಾರಿ, ಇಲಕಲ್ ಸೇರಿದಂತೆ ತಾಲೂಕಿನ ಅಡವಿಬಾವಿ ತಾಂಡಾ, ಅಡವಿಬಾವಿ ಗ್ರಾಮ, ದೊಡ್ಡ ಅಡವಿಬಾವಿ ತಾಂಡಾ, ಚಿರ್ಚನಗುಡ್ಡತಾಂಡ, ನವಲಿ ತಾಂಡಾ, ಬೊಮಸಾಗರ ತಾಂಡಾದ ಬಂಜಾರರು ಪಟ್ಟಣಕ್ಕೆ ಮಾರಾಟಕ್ಕಾಗಿ ಬರುತ್ತಾರೆ.

ಕೇವಲ ಆರೇಳು ತಾಸುಗಳವರೆಗೆ ನಡೆಯುವ ವ್ಯಾಪಾರದಲ್ಲಿ ಸಾಮಗ್ರಿಗಳಾದ ಪೇಟಿಯಾ (ಲಂಗ), ಕಾಂಚಳಿ (ರವಿಕೆ) ಗೋಗರಿ (ತಾಳಿ), ಪಾಮಾಡಿ (ಧವನಿ), ಕೋಡಿ (ಸರ), ಜಾಂಜರ್ (ಕಾಲು ಗೆಜ್ಜೆ), ಕೈಖಡ್ಗ, ಫಾವಲಿ (ನಾಲ್ಕಾಣಿ ನಾಣ್ಯ), ಬಳೆ, ಗೋಟ್, ಇತರ ಸಾಮಾಗ್ರಿಗಳನ್ನು ಲಂಬಾಣಿಗರು ಚೌಕಾಸಿ ಮಾಡಿ ಖರೀದಿಸಿದರು.

ಸಾಮಾಗ್ರಿಗಳ ಮಾರಾಟಗಾರರು ಜಾತ್ರೆ ಮುಗಿಯುವವರೆಗೆ ಇರುವುದಿಲ್ಲ. ರಥೋತ್ಸವದ ಮರು ದಿನ ಆರೇಳು ಗಂಟೆ ಮಾತ್ರ ಭರ್ಜರಿ ವ್ಯಾಪಾರ ನಡೆಯುತ್ತದೆ ಎಂದು ಮುತ್ತಣ್ಣ ಲಮಾಣಿ ತಿಳಿಸಿದರು.

ಯುವ ಪೀಳಿಗೆಯವರು ಉಡುಗೆ ತೊಡುಗೆಗಳಿಂದ ದೂರವಿದ್ದರೂ ಹಬ್ಬ ಹರಿದಿನಗಳಲ್ಲಿ ಕಡ್ಡಾಯವಾಗಿ ಧರಿಸುತ್ತಾರೆ. ಸೇವಾಲಾಲ್ ಜಯಂತಿ, ಶೀತಲ್ ಹಬ್ಬ (ಹುಂಜದ ಮಾಂಸ ತಿನ್ನುವುದು), ದೀಪಾವಳಿ ಹೀಗೆ ವಿವಿಧ ಹಬ್ಬಗಳಲ್ಲಿ ಲಂಬಾಣಿ ಬಟ್ಟೆ ಧರಿಸಿ ಸಂಭ್ರಮಿಸುತ್ತೇವೆ ಎಂದು ವಿದ್ಯಾರ್ಥಿನಿ ಸಂಗೀತಾ ಚವ್ಹಾಣ ಹೇಳಿದರು.

ಒಂದು ಜತೆ ಉಡುಗೆ ಸಿದ್ಧಪಡಿಸಲು ಕನಿಷ್ಟ 18ರಿಂದ 20 ಸಾವಿರ ರೂ. ಬೇಕಾಗುತ್ತದೆ. ಎಷ್ಟೇ ಬಡವರಿದ್ದರೂ ಮದುವೆ ಸಮಯದಲ್ಲಿ ವಧುವಿನ ಕಡೆಯವರು ಕಡ್ಡಾಯವಾಗಿ ಈ ಉಡುಗೆಯನ್ನು ವಧುವಿಗೆ ಕೊಡಬೇಕಾಗುತ್ತದೆ. ಮುಂಬರುವ ಬಸವ ಜಯಂತಿ ಸಮಯದಲ್ಲಿ ಮದುವೆ ಸೀಝನ್ ಆರಂಭವಾಗುವ ಹಿನ್ನೆಲೆಯಲ್ಲಿ ಕರಕುಶಲ ಸಾಮಗ್ರಿ ಖರೀದಿಸಿ ಮನೆಯಲ್ಲಿ ಕಸೂತಿ ಮಾಡಿ, ಉಡುಗೆಗಳನ್ನು ಸಿದ್ಧಪಡಿಸಿಕೊಳ್ಳುತ್ತಾರೆ ಎಂದು ಲಕ್ಷ್ಮವ್ವ ದೊಡ್ಡ ಅಡವಿಬಾವಿ ತಾಂಡಾ ಹಾಗೂ ದೊಡ್ಡ ತಾಂಡದ ಕಾವೇರಿ ತಿಳಿಸಿದ್ದಾರೆ.

ರಾಯಚೂರು, ವಿಜಯನಗರ, ಇತರ ಜಿಲ್ಲೆಗಳ ವರ್ತಕರು ಇಲ್ಲಿಗೆ ಬಂದು ವ್ಯಾಪಾರ ವಹಿವಾಟು ಮಾಡುತ್ತಾರೆ. ವ್ಯಾಪಾರಕ್ಕೆ ಸಾಮಗ್ರಿ ಕೊಡುವ ಮಾಲಕರು ಸಹ ಜಾತ್ರೆಗೆ ಬಂದು ಸಂಜೆ ವೇಳೆಯಲ್ಲಿ ಹಣ ಪಡೆದುಕೊಂಡು ಹೋಗುತ್ತಾರೆ ಎಂದು ಮುತ್ತಣ್ಣ ಲಮಾಣಿ ಹೇಳಿದರು.

ಕೊಪ್ಪಳದ ಯಾವ ಜಾತ್ರೆಯಲ್ಲೂ ಲಂಬಾಣಿಗರ ಸಾಮಾಗ್ರಿಗಳ ಮಾರಾಟ ಇರುವುದಿಲ್ಲ. ಹೀಗಾಗಿ ಜಿಲ್ಲೆಯ ಬಂಜಾರರು ಇಲ್ಲಿಗೆ ಬಂದು ಖರೀದಿಸುತ್ತಾರೆ. ಹೈದರಾಬಾದ್‌ನಿಂದ ಸಾಮಾಗ್ರಿ ತರಿಸುತ್ತೇವೆ. ಕಳೆದ ಹದಿನೇಳು ವರ್ಷಗಳಿಂದ ಜಾತ್ರೆಗೆ ಬಂದು ಲಮಾಣಿ ಐಟಂ ಮಾರಾಟ ಮಾಡುತ್ತಿದ್ದೇವೆ. ವ್ಯಾಪಾರ ಉತ್ತಮವಾಗಿದೆ.

ಚಂದ್ರು ನಾಯ್ಕ್

ವ್ಯಾಪಾರಿ, ವಿಜಯನಗರ

ಲಂಬಾಣಿಗರ ಉಡುಗೆ ತೊಡುಗೆಗಳ ಸಾಮಗ್ರಿಗಳು ಈ ಜಾತ್ರೆ ಬಿಟ್ಟರೆ ಗದಗ, ಗಜೇಂದ್ರಗಡದಲ್ಲಿ ಸಿಗುತ್ತವೆ. ಇದು ಸಮೀಪವಾಗುವ ಕಾರಣ ಇಲ್ಲಿ ಖರೀದಿ ಮಾಡುತ್ತೇವೆ.

ಸರೋಜಮ್ಮ

ನವಲಿ ತಾಂಡಾ ನವಲಿ ತಾಂಡಾ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X