Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕತೆ ಬರೆವ ಕಲೆಯ ಕಲಿಕೆ

ಕತೆ ಬರೆವ ಕಲೆಯ ಕಲಿಕೆ

ನಟರಾಜ್ ಹುಳಿಯಾರ್ನಟರಾಜ್ ಹುಳಿಯಾರ್11 Nov 2024 11:42 AM IST
share
ಕತೆ ಬರೆವ ಕಲೆಯ ಕಲಿಕೆ
ಹಲವು ಪ್ರಕಾರಗಳಲ್ಲಿ ಕೆಲಸ ಮಾಡುತ್ತಿದ್ದ ಲಂಕೇಶರ ಕತೆಗಳಲ್ಲಿ ಸಿನೆಮಾ, ಜರ್ನಲಿಸಂ, ಕಾವ್ಯ, ನಾಟಕ ಎಲ್ಲವೂ ಬೆರೆಯುತ್ತಿದ್ದವು; ಇವೆಲ್ಲ ಪ್ರಕಾರಗಳು ಬೆರೆತು ಹುಟ್ಟಿದ ಅವರ ಟೀಕೆ ಟಿಪ್ಪಣಿಗಳಿಂದಲೇ ಬರೆಯುವುದನ್ನು ಕಲಿತ ನೂರಾರು ಜನರನ್ನು ಕಂಡಿರುವೆ.

ಇಂಗ್ಲಿಷ್ ಮೇಷ್ಟರು ಸುನಿಲ್ ಕ್ಲಾಸಿನಲ್ಲಿ ಕೂತಿದ್ದ ಕಣ್ಣಿಲ್ಲದ ನತದೃಷ್ಟ ವಿದ್ಯಾರ್ಥಿಯೊಬ್ಬ ಕೇಳಿದ: ‘ಹುಡುಗೀರು ಹೆಂಗಿರ್ತಾರೆ ಸಾ...ಸ್ಪರ್ಶಕ್ಕೆ?’ ಸುನಿಲ್ ಎದೆ ಝಲ್ಲೆಂದಿತು.

ಆ ಗಳಿಗೆಯನ್ನು ನೆನಪಿಸಿಕೊಳ್ಳುತ್ತಾ ಸುನಿಲ್ ಹೇಳಿದ: ‘ಆ ಹುಡುಗನ ಭಾವಗಳಿಗೆ ಪದ ಒದಗಿಸಲು ನೀಳ್ಗತೆ ಬರೆಯಲು ಶುರು ಮಾಡಿದೆ. ಆದರೆ ತರಗತಿ ಬದಲಾಯಿತು; ಕತೆ ಅರ್ಧಕ್ಕೆ ನಿಂತಿತು.’

‘ಅಲ್ಲೇ ಕತೆ ಇರೋದು, ಸುನಿಲ್! ಆ ಹುಡುಗನ ಪ್ರಶ್ನೆಯಿಂದಲೇ ನೀನು ಮತ್ತೆ ಕತೆ ಶುರು ಮಾಡಬಹುದು. ಸಂಭಾಷಣೆಯ ಮೂಲಕವೇ ಕತೆ ಬೆಳೆಸಬಹುದು’ ಎಂದೆ.

ಈ ಮಾತು ಹೇಳಿ ವರ್ಷವಾಯಿತು. ಸುನಿಲ್ ಕತೆ ಬರೆದಂತಿಲ್ಲ. ಅದು ಅವನ ಕ್ರಿಯೇಟಿವಿಟಿಗೆ ಸಂಬಂಧಿಸಿದ್ದು ಎಂದು ಸುಮ್ಮನಾಗಬಹುದು. ಆದರೆ ಕ್ರಿಯೇಟಿವಿಟಿಯ ಮೇಲೆ ಭಾರ ಹಾಕಿ, ಓದು, ಬರಹ, ಸ್ವಂತದ ಅನುಭವ, ಇತರರ ಅನುಭವಗಳ ಲೋಕದ ಜೊತೆಗೆ ಸೆಣಸಾಡಿ, ಶ್ರಮ ಪಡದ ಲೇಖಕರ ಸ್ಥಿತಿ ಹೇಗಿರುತ್ತೆ ಗೊತ್ತ? ವಿಧಿಯ ಪಾಲಿಗೆ ಎಲ್ಲವನ್ನೂ ಬಿಟ್ಟ ಹಳಬರ ಸ್ಥಿತಿಯಂತೆ! ಆದ್ದರಿಂದಲೇ ಪ್ರಾಮಾಣಿಕವಾಗಿ ತಡವರಿಸುತ್ತಾ ಬರೆಯಲೆತ್ನಿಸುವ ಗೆಳೆಯ, ಗೆಳತಿಯರು, ವಿದ್ಯಾರ್ಥಿ, ವಿದ್ಯಾರ್ಥಿನಿಯರುಗಳ ಬಗ್ಗೆ ನನಗೆ ಸದಾ ಕುತೂಹಲ, ನಿರೀಕ್ಷೆ ಇರುತ್ತವೆ. ಹೀಗೆನ್ನುವಾಗ ರಾಮಚಂದ್ರ ಶರ್ಮಾರ ‘ಏಳು ಸುತ್ತಿನ ಕೋಟೆ’ ಪದ್ಯದ ಸಾಲುಗಳು ಮನಸ್ಸಿಗೆ ಬರುತ್ತವೆ:

ಸುಮಕೆ ಸೌರಭ ಬಂದ ಗಳಿಗೆ ಯಾವುದು ಹೇಳು?

ಬಂತೆ ಮಗು ಅಥವಾ ಮನೆಯೊಳಗಿತ್ತೊ?

ಅಜ್ಞಾತದಾಳದೊಳು ತಲೆ ಮರೆಸಿ ಕುಳಿತೊಂದು ನೆನಹಂತೆ ಆಗ ಅದು ಹೊರಬಿತ್ತೊ!

ಮೇಲೆ ಉಲ್ಲೇಖಿಸಿದ ಸಾಲುಗಳಲ್ಲಿ, ಕಾಮಾಂಕುರವಾದ ಗಳಿಗೆ ಯಾವುದು? ಕಾಮ ಈಗಾಗಲೇ ಅಪ್ರಜ್ಞೆಯಲ್ಲಿತ್ತೋ? ಈ ಥರದ ಅರ್ಥಗಳು ಮೇಲ್ನೋಟಕ್ಕೆ ಹೊರಡುತ್ತವೆ. ಇಷ್ಟೇ ಇಲ್ಲಿನ ಅರ್ಥಗಳಲ್ಲ. ನೀವು ಅನೇಕಾನೇಕ ಅರ್ಥ ಹೊರಡಿಸಬಹುದು. ಕತೆ, ಪದ್ಯ ಬರೆಯುವ ಸುಂದರ ಬಯಕೆ ಹುಟ್ಟಿದ ಗಳಿಗೆ ಯಾವುದು ಹೇಳು ಎಂದು ಕೂಡ ಆ ಸಾಲು ನಮ್ಮನ್ನು ಕೇಳುವಂತಿದೆ! ಈ ಅಂಕಣದ ಶುರುವಿಗೆ ಸುನಿಲ್ ನೆನಪಿಸಿಕೊಂಡ ವಿದ್ಯಾರ್ಥಿಗೆ ಅದು ಕಾಮಾಂಕುರವಾದ ಗಳಿಗೆಯೋ ಅಥವಾ ಅದನ್ನು ಅವನು ಬಾಯ್ಬಿಟ್ಟು ಹೇಳಿದ ಕತೆ ಬರೆವ ಗಳಿಗೆಯೋ? ಇವೆಲ್ಲವೂ ಮುಂದೆ ಸುನಿಲ್ ಈ ಅನುಭವವನ್ನು ಕತೆಯಾಗಿಸುವ ಹಾದಿಯಲ್ಲೇ ಸ್ಪಷ್ಟವಾಗಬಲ್ಲವು. ರೈಟಿಂಗ್ ಈಸ್ ಥಿಂಕಿಂಗ್ ಎಂದು ಖಚಿತವಾಗಿ ನಂಬುವ ನನಗಂತೂ ಬರೆಯುವುದೂ ಚಿಂತಿಸುವ ಒಂದು ರೀತಿ ಎಂಬುದು ಸದಾ ಮನದಟ್ಟಾಗುತ್ತಿರುತ್ತದೆ.

ಸುನಿಲ್ ಥರದ ಬರಹಾಕಾಂಕ್ಷಿಗಳ ಜೊತೆ ಮಾತಾಡುವಾಗ ಹಳೆಯ ಪ್ರಶ್ನೆಗಳು ಎದುರಾಗುತ್ತಿರುತ್ತವೆ: ಬರೆವ ಕಲೆಯನ್ನು ಕಲಿಯಬಹುದೆ? ಅದರಲ್ಲೂ ಕತೆ, ಕವನ, ಕಾದಂಬರಿ ಬರೆಯುವುದನ್ನು, ಯಾರು ಯಾರಿಗಾದರೂ ಕಲಿಸಬಹುದೇ? ಇದಕ್ಕೆ ಉತ್ತರವೆಂಬಂತೆ ಪಶ್ಚಿಮದ ಕ್ರಿಯೇಟಿವ್ ರೈಟಿಂಗ್ ಕೋರ್ಸುಗಳು ನೆನಪಾಗುತ್ತವೆ. ಇಂಥ ಕೋರ್ಸುಗಳ ಮೂಲಕ ಬರವಣಿಗೆಯ ಕಲೆ ಕಲಿತೆ ಎಂದು ಹಲವು ದೇಶಗಳ ಹೊಸ ಲೇಖಕ, ಲೇಖಕಿಯರು ಬರೆದಿರುವುದನ್ನು ಓದಿರುವೆ. ಈ ಮಾರ್ಗದವರಿಗಿಂತ ಭಿನ್ನವಾಗಿ, ‘ಬರವಣಿಗೆಯನ್ನು ಕಲಿಸಲು ಸಾಧ್ಯವಿಲ್ಲ’ ಎನ್ನುವವರೂ ಇದ್ದಾರೆ.

ಬರವಣಿಗೆಯ ಕಲಿಕೆ ಸಮಾಜವಿಜ್ಞಾನ, ಇಂಜಿನಿಯರಿಂಗ್, ಚರಿತ್ರೆಗಳ ಕ್ಲಾಸುಗಳ ರೀತಿ ಇಲ್ಲದಿರಬಹುದು; ಆದರೆ ಅದು ಒಬ್ಬ ಲೇಖಕ ಅಥವಾ ಲೇಖಕಿ ಇನ್ನೊಬ್ಬರಿಗೆ ನೇರವಾಗಿ ಕಲಿಸದೆಯೇ ಕಲಿಸುವ ರೀತಿಯಾಗಿರಬಲ್ಲದು. ಮಹಾನ್ ಕಾದಂಬರಿಕಾರ ಮಾರ್ಕ್ವೆಜ್ ಕ್ರಿಯೇಟಿವ್ ರೈಟಿಂಗಿನ ಕ್ಲಾಸುಗಳನ್ನು ಕೂಡ ನಡೆಸಿದ್ದ; ಜಗತ್ತಿನ ವಿವಿಧ ಭಾಗಗಳಿಂದ ಹೊಸ ಲೇಖಕ ಲೇಖಕಿಯರು ಬಂದು ಈ ಕ್ಲಾಸುಗಳಿಗೆ ಸೇರಿಕೊಳ್ಳುತ್ತಿದ್ದರು. ಅಷ್ಟು ದೂರ ಯಾಕೆ ಹೋಗುತ್ತೀರಿ! ನೂರಾರು ವಚನಕಾರ, ವಚನಕಾರ್ತಿಯರು ಅನುಭವ ಮಂಟಪದ ಸಂವಾದಗಳಲ್ಲಿ ಭಾಗಿಯಾಗಿ ಅಥವಾ ಇತರರ ವಚನಗಳಿಗೆ ಕಿವಿಗೊಟ್ಟು ತಾವೂ ಕವಿತೆಯಂಥ ವಚನಗಳನ್ನು ಕಟ್ಟುವ, ಹೇಳುವ, ಬರೆಯುವ ಕಲೆ ಕಲಿತ ಅದ್ಭುತ ಉದಾಹರಣೆಗಳು ನಮ್ಮಲ್ಲೇ ಇವೆ! ಒಬ್ಬರಿಂದ ಮತ್ತೊಬ್ಬರು ಕತೆಯ ಕಲೆ ಕಲಿತ ಜನಪದ ಹೆಣ್ಣು, ಗಂಡುಗಳಂತೂ ಲೋಕದ ಎಲ್ಲ ಭಾಗಗಳಲ್ಲೂ ಇದ್ದಾರೆ.

ಈ ಕಾಲದಲ್ಲಿ ನಾನು ಕಂಡುಕೊಂಡಂತೆ ಒಬ್ಬ ಲೇಖಕನಿಗೆ ಇನ್ನೊಬ್ಬ ಲೇಖಕ, ಲೇಖಕಿಯ ಕೃತಿಗಳೇ ಗುರು. ಕುವೆಂಪು ಕೂಡ ಮಹಾಕಾವ್ಯ ಬರೆಯಲು ವ್ಯಾಸ, ವಾಲ್ಮೀಕಿ, ಹೋಮರ್, ಡಾಂಟೆ ಥರದ ಮಹಾಕವಿಗಳಿಂದ ಕಲಿತ ಏಕಲವ್ಯ! ಕ್ರಿಯೇಟಿವ್ ರೈಟಿಂಗ್ ಕೋರ್ಸುಗಳನ್ನು ಕೊಟ್ಟ ಮಾರ್ಕ್ವೆಜ್ ಕೂಡ ‘ಒಂದು ಬೆಕ್ಕು ಓಣಿಯಲ್ಲಿ ತಿರುಗುವ ಕಲೆಯನ್ನು ನಾನು ಹೆಮಿಂಗ್ವೆಯಿಂದ ಕಲಿತೆ’ ಎನ್ನುತ್ತಾನೆ. ಒಂದು ಸಂಜೆ ‘ಕ್ಯಾಥರಿನ್ ಆ್ಯನ್ ಪೋರ್ಟರ್ ನಮಗೆಲ್ಲ ಕತೆ ಬರೆಯೋದನ್ನು ಕಲಿಸಿದವಳು’ ಎಂದ ಲಂಕೇಶ್, ಆಕೆಯ ಕತೆಗಳ ಪುಸ್ತಕವೊಂದನ್ನು ಓದಲು ನನಗೆ ಕೊಟ್ಟಿದ್ದರು. ಅಪ್ರತಿಮ ಕತೆಗಾರ ಲಂಕೇಶರಿಗೆ ಕ್ಯಾಥರಿನ್ ಆ್ಯನ್ ಪೋರ್ಟರ್ ಏನೇನು ಕಲಿಸಿರಬಹುದು ಎಂಬ ಕುತೂಹಲದಿಂದ ಆಕೆಯ ಕತೆಗಳನ್ನು ಓದಿದೆ. ಆದರೆ ‘ಆಕೆಯಿಂದ ಏನು ಕಲಿತಿರಿ?’ ಎಂದು ಆಗ ಕೇಳಿ ತಿಳಿದುಕೊಳ್ಳದಿದ್ದುದಕ್ಕೆ ಈಗ ‘ಛೆ!’ ಅನ್ನಿಸುತ್ತದೆ.

ಹಲವು ಪ್ರಕಾರಗಳಲ್ಲಿ ಕೆಲಸ ಮಾಡುತ್ತಿದ್ದ ಲಂಕೇಶರ ಕತೆಗಳಲ್ಲಿ ಸಿನೆಮಾ, ಜರ್ನಲಿಸಂ, ಕಾವ್ಯ, ನಾಟಕ ಎಲ್ಲವೂ ಬೆರೆಯುತ್ತಿದ್ದವು; ಇವೆಲ್ಲ ಪ್ರಕಾರಗಳು ಬೆರೆತು ಹುಟ್ಟಿದ ಅವರ ಟೀಕೆ ಟಿಪ್ಪಣಿಗಳಿಂದಲೇ ಬರೆಯುವುದನ್ನು ಕಲಿತ ನೂರಾರು ಜನರನ್ನು ಕಂಡಿರುವೆ. ಮುಂದೆ ನಾನು ಅವರ ಟೀಕೆ ಟಿಪ್ಪಣಿಯ ಎರಡು ಸಂಪುಟಗಳನ್ನು ಎಡಿಟ್ ಮಾಡಿ, ನಂತರ ಅವರ ಸಮಗ್ರ ಕಾವ್ಯ ‘ಚಿತ್ರ ಸಮೂಹ’ಕ್ಕೆ ಪದ್ಯಗಳನ್ನು ಅಚ್ಚಿಗೆ ಸಿದ್ಧಪಡಿಸಿದೆ. ಲಂಕೇಶರು ‘ಚಿತ್ರಸಮೂಹ’ದ ಬೆನ್ನುಡಿಯಲ್ಲಿ ಬರೆದ ಒಂದು ಮಾತು ಫಳಾರನೆ ಸುಳಿದ ಹೊಸ ಮಿಂಚಿನಂತೆ ನನ್ನ ತಲೆಯಲ್ಲಿ ಖಾಯಮ್ಮಾಗಿ ಉಳಿದುಬಿಟ್ಟಿದೆ: ‘ಬರೆಯುವ ಪ್ರಾಮಾಣಿಕತೆ ಮುಖ್ಯವೇ ಹೊರತು ಪ್ರಕಾರಗಳಲ್ಲಿ ಪರಿಶುದ್ಧತೆ ಅಲ್ಲ ಅನ್ನಿಸುತ್ತದೆ.’ ಲಂಕೇಶರ ಎಲ್ಲ ಕತೆಗಳನ್ನೂ ಕತೆ ಬರೆಯುವ ಕಸುಬು ಕಲಿಯುವ ಜಾಣ ವಿದ್ಯಾರ್ಥಿಯಂತೆ ಓದಿದರೆ ಕತೆ ಹೇಳುವ ಹಲವು ದಾರಿಗಳು ಕಾಣಬಲ್ಲವು.

ಉದಾಹರಣೆಗೆ, ಲಂಕೇಶರ ‘ವೃಕ್ಷದ ವೃತ್ತಿ’ ಕತೆ ನೋಡಿ. ಈ ಕತೆ ನಿವೃತ್ತ ಮಿಲಿಟರಿ ಆಫೀಸರನ ಶ್ರದ್ಧಾಂಜಲಿ ಭಾಷಣದ ವಿನ್ಯಾಸದಲ್ಲಿದೆ! ಪಾರ್ವತಜ್ಜಿ ಯಾಗಿ ತೀರಿಕೊಂಡ ಪಾರ್ವತಿ ತೆಂಗಿನ ಮರದ ಜೊತೆಗೆ ಅನೇಕ ವರ್ಷಗಳನ್ನು ಕಳೆಯುತ್ತಾಳೆ. ಅದು ನನ್ನ ಪ್ರಕಾರ, ‘ಕಳೆದ’ ಬದುಕಲ್ಲ; ‘ಗಳಿಸಿದ’ ಬದುಕು! ಆಕೆಯ ಈ ಅರ್ಥಪೂರ್ಣ ಬದುಕನ್ನು ಕುರಿತಂತೆ ಈ ಆಫೀಸರ್ ಆಡುವ ಮಾತುಗಳಲ್ಲಿ ಇಡೀ ಕತೆ ಬೆಳೆಯುತ್ತದೆ. ಅವತ್ತು ಈ ಕತೆ ಓದಿ ಅಚ್ಚರಿಗೊಂಡ ನಾನು, ‘ಇದೇನ್ಸಾರ್! ನಿಮ್ಮ ಕೈಯಲ್ಲಿ ಶ್ರದ್ಧಾಂಜಲಿ ಭಾಷಣವೇ ಒಂದು ಬ್ಯೂಟಿಫುಲ್ ಕಥಾತಂತ್ರವಾಗಿ ಬಿಡುತ್ತಲ್ಲ!’ ಎಂದು ಲಂಕೇಶರಿಗೆ ಹೇಳಿದೆ. ಆ ಕತೆ ಓದಿದಾಗ ಹುಟ್ಟಿದ ಅಚ್ಚರಿಯ ಭಾವ ಈಗಲೂ ನನ್ನಲ್ಲಿದೆ. ಆ ರಾತ್ರಿ ಲಂಕೇಶ್ ಸಂಕೋಚದ ಹೆಮ್ಮೆ ಸೂಸಿ ಹುಬ್ಬೇರಿಸಿ ನಕ್ಕಿದ್ದರು. ನಿವೃತ್ತ ಮಿಲಿಟರಿ ಆಫೀಸರನ ವೃತ್ತಿಯ ಶಿಸ್ತು; ವೃತ್ತಿ ಎಂದು ಕರೆಯಲಾಗದ ಪಾರ್ವತಿಯ ವೃಕ್ಷದ ವೃತ್ತಿ ಹಾಗೂ ಅವಳ ಸಹಜ ಜೀವನ ಶೈಲಿಯ ಶಿಸ್ತು; ಅವಳ ತಮ್ಮನ ಲಂಗುಲಗಾಮಿಲ್ಲದ, ಶಿಸ್ತಿಲ್ಲದ ಬದುಕಿನ ದುರಂತ...ಎಲ್ಲವೂ ಆ ಭಾಷಣದಲ್ಲೇ ಮೈದಾಳುವ ರೀತಿ ಕುರಿತು ಅವರಿಗೆ ಹೇಳುತ್ತಲೇ ಇದ್ದೆ. ಲಂಕೇಶ್, ‘ಲವ್ಲಿ! ಗ್ಲಾಡ್ ಯು ಸೇ ದಟ್’ ಎಂದರು.

ಅವತ್ತು ಲಂಕೇಶರ ‘ವೃಕ್ಷದ ವೃತ್ತಿ’ ಕತೆ ಓದುತ್ತಾ, ಮೆಚ್ಚುತ್ತಲೇ ನಾನು ಕತೆ ಹೇಳುವ ಹೊಸ ಹೊಸ ರೀತಿಗಳನ್ನು, ಕಥಾತಂತ್ರದ ಪಾಠಗಳನ್ನು ಕಲಿಯುತ್ತಿದ್ದೆ ಎಂದು ನನಗೆ ಈಗ ಅನ್ನಿಸುತ್ತಿದೆ. ಯಾರನ್ನಾದರೂ ಮೆಚ್ಚುವುದು ಅವರಂತಾಗುವ ಬಯಕೆಯಿಂದಲೂ ಹುಟ್ಟಿರಬಲ್ಲದು! ಹಾಗೆಯೇ, ಏನನ್ನಾದರೂ ಮೆಚ್ಚುವುದರ ಹಿಂದೆ ಅದನ್ನು ನಾವೂ ಸಾಧಿಸುವ ಆಸೆಯೂ ಇರಬಲ್ಲದು! ಕ್ಯಾಥರಿನ್ ಆ್ಯನ್ ಪೋರ್ಟರ್ ಕತೆಗಳನ್ನು ಮೆಚ್ಚಿದ್ದ ಲಂಕೇಶರು ಆಕೆಯ ಕತೆಯೊಂದರಿಂದ ಪ್ರೇರಣೆ ಪಡೆದು ‘ಎಲ್ಲಿಂದಲೋ ಬಂದವರು’ ಸಿನೆಮಾ ಮಾಡಿದ್ದರು. ಆದರೆ ಆಕೆಗೆ ಹೋಲಿಸಿ ನೋಡಿದರೆ, ನನಗಂತೂ ಲಂಕೇಶರೇ ಉತ್ತಮ ಕತೆಗಾರ ಎನ್ನಿಸುತ್ತದೆ; ಲಂಕೇಶರ ಕೈಯಲ್ಲಿ ಕನ್ನಡ ಭಾಷೆ ನುಡಿವ ರೀತಿ, ಅವರು ಮನುಷ್ಯನ ಊಹಾತೀತ ಮುಖಗಳು, ವರ್ತನೆಗಳನ್ನು ಹಿಡಿಯುವ ರೀತಿಯಿಂದಾಗಿಯೂ ಹೀಗನ್ನಿಸಿರಬಹುದು. ಲಂಕೇಶರ ಬಹುತೇಕ ಎಲ್ಲ ಬರಹಗಳನ್ನೂ ಹತ್ತಿರದಿಂದ ಓದಿರುವ ನನಗೆ, ಅವರು ತೀರಿಕೊಂಡ ಇಪ್ಪತ್ತನಾಲ್ಕು ವಷರ್ಗಳ ನಂತರ ಕೂಡ ಅವರ ಕತೆಗಳಷ್ಟೇ ಅಲ್ಲ, ಅವರ ಯಾವುದೇ ಪುಸ್ತಕದ ಪುಟ ತೆಗೆದು ಓದಿದರೂ ಜೀವ ಸಂಚಾರವಾಗುತ್ತದೆ; ಮುತ್ತಿದ ಜಡತೆ ಚದುರಿ ಹೋಗಿ, ಸ್ಪಂದಿಸುವ, ಬರೆಯುವ ಉತ್ಸಾಹ ಚಿಮ್ಮತೊಡಗುತ್ತದೆ.

ಆ ಉತ್ಸಾಹ ಈವರೆಗೆ ಬರೆಯದವರನ್ನು ಕೂಡ ಬರೆಯುವಂತೆ ಮಾಡಬಲ್ಲದು. ಕುವೆಂಪುವಿನ ಪ್ರತಿಮೆ ಬಳಸಿ ಹೇಳುವುದಾದರೆ, ‘ಜಡವು ಚೇತನವಾಗಬಲ್ಲದು!’ ಅಂದರೆ, ಬರೆವ ಕಲೆಯನ್ನು ವ್ಯವಸ್ಥಿತವಾಗಿಯಲ್ಲದಿದ್ದರೂ ಹಲ ಬಗೆಯಲ್ಲಿ ಕಲಿಯಬಹುದು, ಅಲ್ಲವೆ? ಆ ಉತ್ಸಾಹ ಈವರೆಗೆ ಬರೆಯದವರನ್ನು ಕೂಡ ಬರೆಯುವಂತೆ ಮಾಡಬಲ್ಲದು. ಕುವೆಂಪುವಿನ ಪ್ರತಿಮೆ ಬಳಸಿ ಹೇಳುವುದಾದರೆ, ‘ಜಡವು ಚೇತನವಾಗಬಲ್ಲದು!’ ಅಂದರೆ, ಬರೆವ ಕಲೆಯನ್ನು ವ್ಯವಸ್ಥಿತವಾಗಿಯಲ್ಲದಿದ್ದರೂ ಹಲ ಬಗೆಯಲ್ಲಿ ಕಲಿಯಬಹುದು, ಅಲ್ಲವೆ?

share
ನಟರಾಜ್ ಹುಳಿಯಾರ್
ನಟರಾಜ್ ಹುಳಿಯಾರ್
Next Story
X