Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ದ್ವೇಷ ಭಾಷಣ ತಡೆಯುವ ಕೆಲಸ ಜನರಿಂದಲೇ...

ದ್ವೇಷ ಭಾಷಣ ತಡೆಯುವ ಕೆಲಸ ಜನರಿಂದಲೇ ನಡೆಯಲಿ

ಮುಹಮ್ಮದ್ ಶರೀಫ್ ಕಾಡುಮಠಮುಹಮ್ಮದ್ ಶರೀಫ್ ಕಾಡುಮಠ14 May 2026 12:22 PM IST
share
ದ್ವೇಷ ಭಾಷಣ ತಡೆಯುವ ಕೆಲಸ ಜನರಿಂದಲೇ ನಡೆಯಲಿ

‘ವಾರ್ತಾಭಾರತಿ’ಯ ಮೊನ್ನೆಯ (12.4.2026) ದ್ವೇಷ ಭಾಷಣದ ಬಗೆಗಿನ ಸಂಪಾದಕೀಯವು ಇದನ್ನು ತಡೆಯುವಲ್ಲಿ ಇಡೀ ವ್ಯವಸ್ಥೆ, ಕಾನೂನು, ಸರಕಾರ ನಿರಂತರವಾಗಿ ವಿಫಲವಾಗುತ್ತಿರುವ ಬಗ್ಗೆ ಇದೆ. ದ್ವೇಷ ಭಾಷಣ ತಡೆಗೆ ಎಂತಹ ಕಾನೂನು ತಂದರೂ ದ್ವೇಷ ಭಾಷಣಕಾರರ ವಿಷ ನಾಲಗೆಗೆ ಲಸಿಕೆಯೇ ತಾಗುತ್ತಿಲ್ಲ ಎನ್ನುವ ಸಂಕಟ.

ದ್ವೇಷ ಭಾಷಣದ ಬಗ್ಗೆ ಮಂಗಳೂರಿನಲ್ಲಿ ಹಿಂದೊಮ್ಮೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಪೊಲೀಸ್ ಕಮಿಷನರ್ ಅವರನ್ನೇ ತರಾಟೆಗೆ ತೆಗೆದುಕೊಳ್ಳುವ ಧ್ವನಿಯಲ್ಲಿ ಪತ್ರಕರ್ತರೊಬ್ಬರು, ‘‘ನೀವೇಕೆ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ, ನೀವೇಕೆ ಸುಮ್ಮನಿದ್ದೀರಿ?’’ ಎಂದೆಲ್ಲ ಪ್ರಶ್ನೆ ಮಾಡಿದ್ದರು.

ಅದಕ್ಕೆ, ‘‘ನಿಮಗೆ ಅದನ್ನು ತಡೆಯಬಹುದಲ್ವಾ? ನೀವು ತಡೆದರೆ ಅದು ಪೊಲೀಸ್ ಸ್ಟೇಷನ್‌ವರೆಗೆ ಬರೋದೇ ಇಲ್ವಲ್ಲ?’’ ಎಂದು ಕಮಿಷನರ್ ನೇರವಾಗಿ ಕೇಳಿಬಿಟ್ಟರು.

ಅದಕ್ಕೆ ಆ ಪತ್ರಕರ್ತ, ‘‘ನಾವು ಅದರ ಬಗ್ಗೆ ಪತ್ರಿಕೆಯಲ್ಲಿ ಬರೀತೀವಲ್ಲ ಸರ್?’’

‘‘ಬರಿಯೋದು ಆಮೇಲೆ ಸರ್, ನಿಮಗೆ ಆ ವ್ಯಕ್ತಿ ಭಾಷಣ ಮಾಡುವಾಗಲೇ ತಡೆಯುವ ಹಕ್ಕು ಇದೆ. ದ್ವೇಷ ಭಾಷಣ, ಪ್ರಚೋದನಕಾರಿ ಭಾಷಣ ಮಾಡುವಾಗ, ಯಾರೇ ಆದರೂ ಎದ್ದು ನಿಂತು, ನೀವು ಮಾತಾಡ್ತಾ ಇರೋದು ತಪ್ಪು, ಇದು ದ್ವೇಷ ಭಾಷಣ, ನಿಮ್ಮ ಭಾಷಣ ನಿಲ್ಲಿಸಿ ಎಂದು ಸ್ಪಷ್ಟವಾಗಿ ತಡೆಯಬಹುದು. ಅದರಲ್ಲೂ ಪತ್ರಕರ್ತರಿಗೆ ಇದು ಸಾಧ್ಯ’’ ಅಂತ ಕಮಿಷನರ್ ಒಂದೊಳ್ಳೆಯ ಸಲಹೆ ನೀಡಿದರು.

ಅವರ ಮಾತು ಕೇಳಿ ಬರೆಯುವುದಷ್ಟೇ ತಮ್ಮ ಕೆಲಸ ಅಂದುಕೊಂಡಿದ್ದ ಆ ಪತ್ರಕರ್ತರಿಗೆ ಆಶ್ಚರ್ಯ ಆಗಿರಬಹುದು.

ಯಾವುದೇ ಒಂದು ವ್ಯವಸ್ಥೆಯಲ್ಲಿ ಸರಕಾರ, ಕಾನೂನು ನಿಷ್ಕ್ರಿಯವಾದಂತಾದಾಗ ಅಂತಹ ಸಂದರ್ಭದಲ್ಲಿ ಸಮಾಜದ ಸ್ವಾಸ್ಥ್ಯ ಕಾಪಾಡುವ ಕೆಲಸ ಪ್ರಜೆಗಳ ಪಾಲಿಗೆ ಹೆಚ್ಚೇ ಇರುತ್ತದೆ. ಅಂದರೆ ಸರಕಾರ, ಕಾನೂನು ಪರಿಣಾಮಕಾರಿ ಕೆಲಸ ಮಾಡುವಾಗ, ಪ್ರಜೆಗಳಿಗೆ ಜವಾಬ್ದಾರಿಯೇ ಇರಬೇಕಿಲ್ಲ ಎಂದಲ್ಲ, ಪ್ರಜೆಗಳು ಪ್ರಜ್ಞಾವಂತರಾಗಿದ್ದರೆ ಎಂತಹ ದ್ವೇಷ ಭಾಷಣದವರ ಬಾಯಿಗೂ ಬೀಗ ಹಾಕಲು ಸಾಧ್ಯ.

ವರ್ಷದ ಹಿಂದೆ ಇದೇ ಬಸನಗೌಡ ಪಾಟೀಲ್ ಯತ್ನಾಳ್ ಬಾಗಲಕೋಟೆಯಲ್ಲಿ ದ್ವೇಷ ಭಾಷಣ ಶುರು ಮಾಡಿದಾಗ ಅಲ್ಲಿದ್ದ ಜನರೇ ಅವರನ್ನು ತರಾಟೆಗೆ ತೆಗೆದುಕೊಂಡು, ‘‘ಇಲ್ಲಿ ನಿಮ್ಮ ರಾಜಕೀಯ ಮಾಡ್ಬೇಡಿ, ನಾವೆಲ್ಲ ಒಟ್ಟಾಗಿ ಈ ಕಾರ್ಯಕ್ರಮಕ್ಕೆ ದುಡಿದಿದ್ದೀವಿ’’ ಎಂದು ಹೇಳಿದಾಗ, ಯತ್ನಾಳ್ ಮೈಕ್ ಬಿಟ್ಟು ತೆಪ್ಪಗೆ ವೇದಿಕೆ ಇಳಿದು ಹೊರಟರಲ್ಲ? ಅದು ಹೇಗೆ ಸಾಧ್ಯವಾಯಿತು? ಅಂದರೆ ಸರಕಾರಕ್ಕೆ, ಕಾನೂನಿಗೆ, ಪೊಲೀಸರಿಗೆ ತಡೆಯಲು ಸಾಧ್ಯವಾಗದ್ದನ್ನು ತಡೆಯುವ ಶಕ್ತಿ ಸಾರ್ವಜನಿಕರಿಗೆ ಇದೆ ಅಲ್ಲವೇ? ನಾವು ಬಯಸುವುದು, ನಂಬಿಕೆಯಿಡುವುದು ಇಂತಹ ಬದಲಾವಣೆಗಳ ಮೇಲೆ.

ಜನ ಎಚ್ಚೆತ್ತುಕೊಂಡರೆ, ಕಾನೂನು, ಸರಕಾರ ತಂತಾನೇ ಎಚ್ಚರಗೊಂಡು ಕೆಲಸ ಮಾಡುತ್ತವೆ.

ಕೇರಳದಲ್ಲಿ ಏಕೆ ಸಾರ್ವಜನಿಕವಾಗಿ ಈ ಪರಿ ದ್ವೇಷ ಭಾಷಣಗಳು ನಡೆಯುವುದಿಲ್ಲ? ಅಲ್ಲಿನವರೂ ನಮ್ಮಂತೆ ಸಾಮಾನ್ಯ ಮನುಷ್ಯರೇ ಅಲ್ಲವೇ? ಅಲ್ಲಿನ ಜನರು ತಮ್ಮ ಪ್ರತಿನಿಧಿಗಳನ್ನು ಬೆಳೆಸಿದ ರೀತಿ ಅದು.

ಕಮಿಷನರ್ ಕೇಳಿದ ಪ್ರಶ್ನೆ ಕೂಡ ಬಹಳ ಮಹತ್ವದ್ದು. ಬಿಜೆಪಿ ಸರಕಾರವನ್ನು ತೀಕ್ಷ್ಣವಾಗಿ ಪ್ರಶ್ನಿಸುವ ಪ್ರಕಾಶ್ ರಾಜ್‌ರಂಥವರು ಪತ್ರಿಕಾಗೋಷ್ಠಿ ನಡೆಸಿದರೆ ಕಣ್ಣಲ್ಲಿ ಕೆಂಡ ಇಟ್ಟುಕೊಂಡು, ಉತ್ತರ ಕೊಡಲೂ ಪುರುಸೊತ್ತು ಕೊಡದಷ್ಟು ಪ್ರಶ್ನೆ ಸುರಿಸುವ ಪತ್ರಕರ್ತರು, ಯತ್ನಾಳ್‌ರಂಥವರ ಮುಂದೆ ಮೈಕ್ ಹಿಡಿದುಕೊಂಡು ಲವಲವಿಕೆಯಿಂದ ಪುಳಕಿತರಾಗಿ ನಿಲ್ಲುವುದೇಕೆ? ಅಲ್ಲೇ ಪ್ರಶ್ನೆ ಮಾಡಬಹುದಲ್ಲ? ಪೊಲೀಸರು ಶಾಸಕ, ಸಚಿವ, ಸಂಸದರ ಮಾತು ಕೇಳುವುದು, ಅವರ ‘ಆದೇಶ’ದಂತೆ ನಡೆದುಕೊಳ್ಳುವುದು, ಅವರು ಹೇಳಿದವರನ್ನು ಜೈಲಿಗೆ ತಳ್ಳುವುದು, ಅವರು ಹೇಳಿದವರನ್ನು ಪ್ರಕರಣದಿಂದ ಬಿಡಿಸುವುದು ನಮ್ಮ ಸಮಾಜದಿಂದ ಹೊರಗಿರುವ ಅಪರಿಚಿತ ಜಗತ್ತಿನಲ್ಲಿ ನಡೆಯುವ ಸಂಗತಿಗಳಲ್ಲ. ಕೆಲವು ಜನಪ್ರತಿನಿಧಿಗಳು ಪುಢಾರಿಗಳನ್ನು ಬಿಡಿಸಿಕೊಂಡು ಬರಲು ಸ್ಟೇಷನ್‌ಗೆ ಹೋದರೆ ಪೊಲೀಸರೊಂದಿಗೆ ನಡೆದುಕೊಳ್ಳುವ ರೀತಿ ನೋಡಿದರೆ ಸಾಕು, ಇನ್ನು ಪೊಲೀಸರು ಅಂಥವರ ದ್ವೇಷ ಭಾಷಣದ ವಿರುದ್ಧ ಕ್ರಮ ಕೈಗೊಳ್ಳಲು ಹೇಗೆ ಸಾಧ್ಯ?

ಅದಲ್ಲದೆ, ದ್ವೇಷ ಭಾಷಣ ಮಾಡುವ, ರಾಜಕೀಯ, ಧರ್ಮರಕ್ಷಕ ಸಂಘಟನೆಗಳ ನಾಯಕರೂ, ಅದರ ವಿರುದ್ಧ ಆಕ್ರೋಶದಿಂದ ಖಂಡಿಸಿ ಹೇಳಿಕೆ ನೀಡುವ ರಾಜಕೀಯ ನಾಯಕರೂ ಒಳಗಿಂದೊಳಗೆ ಒಂದೇ ಟೇಬಲ್‌ನಲ್ಲಿ ಊಟಮಾಡುವವರು ಎಂಬುದೂ ಹೊಸ ವಿಷಯವಲ್ಲ. ಹಾಗಿರುವಾಗ ವ್ಯವಸ್ಥೆಯಿಂದ ಏನನ್ನು ನಿರೀಕ್ಷಿಸಬೇಕು?

ಕೊನೆಯದಾಗಿ ಕಾನೂನಿನ ಮೊರೆ ಹೋದರೆ, ಅಲ್ಲಾದರೂ ನ್ಯಾಯ ಸಿಗುತ್ತದೆಯೇ? ಪ್ರಕರಣ ದಾಖಲಾದ ಕೆಲವೇ ಕ್ಷಣದಲ್ಲಿ ದ್ವೇಷ ಭಾಷಣ ಮಾಡಿದವನ ವಕೀಲ ಮಿಂಚಿನ ವೇಗದಲ್ಲಿ ಹೋಗಿ, ‘ಬಲವಂತದ ಕ್ರಮ ಬೇಡ’ ಎನ್ನುವ ಬೋರ್ಡು ಹಿಡಿದುಕೊಂಡು ಬರುತ್ತಾನೆ. ಹಾಗಾದರೆ ಬದಲಾವಣೆ ಎಲ್ಲಿ ಆಗಬೇಕು? ಇವೆಲ್ಲ ವ್ಯವಸ್ಥೆಯೂ ಸಂಪೂರ್ಣವಾಗಿ ಹಲ್ಲಿಲ್ಲದ ಹುಲಿಯಂತೆ ವರ್ತಿಸುವಾಗ, ಸಾರ್ವಜನಿಕರು ಎಚ್ಚೆತ್ತುಕೊಳ್ಳಲೇಬೇಕು.

ಪತ್ರಕರ್ತರು ಜನರ ಜೊತೆ ನಿಲ್ಲಲಿ. ದ್ವೇಷ ಭಾಷಣಕಾರರಿಗೆ ಮೈಕ್ ಹಿಡಿದು ಅವರ ಅಭಿಪ್ರಾಯ ಕೇಳುವುದು, ಅದನ್ನು ದಾಖಲಿಸುವುದಷ್ಟೇ ನಮ್ಮ ಹೊಣೆಗಾರಿಕೆ ಎಂದಾದರೆ ಪತ್ರಕರ್ತ ವೃತ್ತಿಗೂ ಬೇರೆ ವೃತ್ತಿಗೂ ವ್ಯತ್ಯಾಸ ಇರುವುದಿಲ್ಲ. ಜನರ ಧ್ವನಿಯಾಗುವುದು ಮುಖ್ಯ. ದ್ವೇಷ ಭಾಷಣವನ್ನು ಇಡೀ ಸಭಿಕರೇ ಒಟ್ಟಾಗಿ ತಡೆದಾಗ ಎಂತಹ ಫೈರ್ ಬ್ರ್ಯಾಂಡ್ ಗೂ ಏನೂ ಮಾಡಲು ಸಾಧ್ಯವಿಲ್ಲ. ಜನಶಕ್ತಿಯನ್ನು ಮಣಿಸುವುದು ಅಷ್ಟು ಸುಲಭವೇನಲ್ಲ.

Tags

Hate speech
share
ಮುಹಮ್ಮದ್ ಶರೀಫ್ ಕಾಡುಮಠ
ಮುಹಮ್ಮದ್ ಶರೀಫ್ ಕಾಡುಮಠ
Next Story
X