Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಶಾಲಾ ತರಗತಿ ಭಯದ ಸ್ಥಳವಾಗದಿರಲಿ

ಶಾಲಾ ತರಗತಿ ಭಯದ ಸ್ಥಳವಾಗದಿರಲಿ

ಒಲಿವರ್ ಡಿ’ಸೋಜಾ,ಒಲಿವರ್ ಡಿ’ಸೋಜಾ,1 Sept 2026 12:40 PM IST
share
ಶಾಲಾ ತರಗತಿ ಭಯದ ಸ್ಥಳವಾಗದಿರಲಿ

ಶಾಲೆ ಎಂದರೆ ಮಕ್ಕಳಿಗೆ ಜ್ಞಾನ ನೀಡುವ, ಅವರ ವ್ಯಕ್ತಿತ್ವವನ್ನು ರೂಪಿಸುವ ಮತ್ತು ಭವಿಷ್ಯವನ್ನು ಕಟ್ಟಿಕೊಡುವ ಪವಿತ್ರ ಸ್ಥಳ. ಶಿಕ್ಷಕರು ಮಕ್ಕಳಿಗೆ ಜ್ಞಾನ ನೀಡುವ ಮಾರ್ಗದರ್ಶಕರು, ಅವರ ಕನಸುಗಳಿಗೆ ದಾರಿ ತೋರಿಸುವವರು. ಆದರೆ ಇಂತಹ ಶಿಕ್ಷಕರ ಕೈಯಲ್ಲೇ ಒಂದು ಮಗುವಿನ ಜೀವ ಕೊನೆಯಾದರೆ, ಅದು ಕೇವಲ ಒಂದು ಕುಟುಂಬದ ದುರಂತವಲ್ಲ; ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಪ್ರಶ್ನಿಸುವ ಘಟನೆ.

ಇತ್ತೀಚೆಗೆ ವಿಶಾಖಪಟ್ಟಣದಲ್ಲಿ ನಡೆದ ಹೃದಯವಿದ್ರಾವಕ ಘಟನೆ ಇದೇ ಪ್ರಶ್ನೆಯನ್ನು ನಮ್ಮ ಮುಂದಿಡುತ್ತದೆ. ಹೋಮ್‌ವರ್ಕ ಪೂರ್ಣಗೊಳಿಸದ ಕಾರಣ ಶಿಕ್ಷಕಿಯಿಂದ ಹಲ್ಲೆ ಮತ್ತು ಅವಮಾನಕ್ಕೊಳಗಾದ ಆರು ವರ್ಷದ ವಿದ್ಯಾರ್ಥಿ ಪ್ರಣಯ್ ತೇಜ್ ಮೃತಪಟ್ಟ ಘಟನೆ ಶಿಕ್ಷಣ ಕ್ಷೇತ್ರವನ್ನು ಬೆಚ್ಚಿಬೀಳಿಸಿದೆ.

ಯಾವ ತಪ್ಪಿಗೆ ಇಷ್ಟು ದೊಡ್ಡ ಶಿಕ್ಷೆ?

ತರಗತಿಯ ಸಿಸಿಟಿವಿ ದೃಶ್ಯಗಳಲ್ಲಿ ಪುಟ್ಟ ಪ್ರಣಯ್ ತನ್ನ ಶಿಕ್ಷಕಿಯ ಮುಂದೆ ಪದೇಪದೇ ಬೇಡಿಕೊಳ್ಳುತ್ತಿರುವ ದೃಶ್ಯಗಳು ಕಂಡುಬಂದಿತ್ತು. ವರದಿಗಳ ಪ್ರಕಾರ, ಆತನನ್ನು ಇತರ ವಿದ್ಯಾರ್ಥಿಗಳ ಎದುರು ಅವಮಾನಿಸಲು ಬಟ್ಟೆಗಳನ್ನು ಬಿಚ್ಚಿಸಲಾಗುತ್ತಿತ್ತು. ಬಳಿಕ ಶಿಕ್ಷಕಿ ಅವನಿಗೆ ಕಪಾಳಮೋಕ್ಷ ಮಾಡಿದ್ದಾಳೆ ಎನ್ನಲಾಗಿದೆ. ಆ ಭಯ, ನೋವು ಮತ್ತು ಅವಮಾನವನ್ನು ಸಹಿಸಲಾಗದೆ ಆ ಪುಟ್ಟ ಬಾಲಕ ತರಗತಿಯಲ್ಲೇ ಕುಸಿದುಬಿದ್ದ. ಇನ್ನೂ ಬದುಕಿನ ಅರ್ಥವನ್ನೇ ಸರಿಯಾಗಿ ಅರಿಯದ, ಕನಸು ಕಾಣುವ ವಯಸ್ಸಿನ ಒಂದು ಮಗು ಶಿಕ್ಷಕಿಯ ಕ್ರೌರ್ಯದಿಂದ ತನ್ನ ಜೀವವನ್ನೇ ಕಳೆದುಕೊಂಡಿತು. ಮನೆಕೆಲಸ ಮಾಡದಿರುವುದು ತಪ್ಪಾಗಿರಬಹುದು. ಆದರೆ ಆ ತಪ್ಪಿಗೆ ಮಗುವಿನ ಘನತೆಯನ್ನು ಕಸಿದುಕೊಳ್ಳುವ ಶಿಕ್ಷೆ ನೀಡುವ ಹಕ್ಕು ಯಾರಿಗೂ ಇಲ್ಲ.

ಕಾನೂನು ಇದ್ದರೂ ಅನುಷ್ಠಾನ ಎಲ್ಲಿದೆ?

ಶಾಲೆಗಳಲ್ಲಿ ದೈಹಿಕ ಶಿಕ್ಷೆಯ ವಿರುದ್ಧ ಸುಪ್ರೀಂ ಕೋರ್ಟ್ 2000ರಲ್ಲೇ ಮಹತ್ವದ ತೀರ್ಪು ನೀಡಿತ್ತು. ವಿದ್ಯಾರ್ಥಿಗಳು ‘ಸ್ವಾತಂತ್ರ್ಯ ಮತ್ತು ಘನತೆಯ ವಾತಾವರಣದಲ್ಲಿ, ಭಯದಿಂದ ಮುಕ್ತವಾಗಿ’ ಶಿಕ್ಷಣ ಪಡೆಯಬೇಕು ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿತ್ತು.

ಆನಂತರ 2009ರ ಶಿಕ್ಷಣ ಹಕ್ಕು ಕಾಯ್ದೆ ಶಾಲೆಗಳಲ್ಲಿ ದೈಹಿಕ ಶಿಕ್ಷೆ ಮತ್ತು ಮಾನಸಿಕ ಹಿಂಸೆಯನ್ನು ಸ್ಪಷ್ಟವಾಗಿ ನಿಷೇಧಿಸಿತು.

ಆದರೆ ಪ್ರಶ್ನೆ ಏನೆಂದರೆ ಕಾನೂನುಗಳು ಕಾಗದದಲ್ಲಷ್ಟೇ ಉಳಿದಿವೆಯೇ?

ಎರಡು ದಶಕಗಳ ನಂತರವೂ ವಿದ್ಯಾರ್ಥಿಗಳ ಮೇಲೆ ಹೊಡೆಯುವುದು, ಅವಮಾನಿಸುವುದು, ನಿಂದಿಸುವುದು ಮತ್ತು ಮಾನಸಿಕವಾಗಿ ಹಿಂಸಿಸುವ ಘಟನೆಗಳು ಮುಂದುವರಿಯುತ್ತಿವೆ. ಪ್ರಣಯ್ ಓದುತ್ತಿದ್ದ ಶಾಲೆಯಲ್ಲಿ ಸಿಸಿಟಿವಿ ಕ್ಯಾಮರಾಗಳಿದ್ದ ಕಾರಣ ಘಟನೆ ಬೆಳಕಿಗೆ ಬಂತು. ಆದರೆ ದೇಶದ ಲಕ್ಷಾಂತರ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಇಂತಹ ನಿಗಾ ವ್ಯವಸ್ಥೆಯೇ ಇಲ್ಲ.

ಹೀಗಾಗಿ ಎಷ್ಟೋ ಮಕ್ಕಳು ಪ್ರತಿದಿನ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ಅನುಭವಿಸುತ್ತಿದ್ದರೂ, ಅವರ ನೋವು ತರಗತಿಯ ನಾಲ್ಕು ಗೋಡೆಗಳ ಒಳಗೇ ಹೂತುಹೋಗುತ್ತದೆ.

ಶಿಕ್ಷಕರು ಶಿಕ್ಷಕರು ಮಾತ್ರವಲ್ಲ, ಮಕ್ಕಳ ಜೀವನದ ಶಿಲ್ಪಿಗಳು. ಪ್ರಣಯ್‌ನ ಸಾವು ಮತ್ತೊಂದು ಗಂಭೀರ ಪ್ರಶ್ನೆಯನ್ನು ಎತ್ತುತ್ತದೆ. ನಮ್ಮ ಶಿಕ್ಷಕರ ತರಬೇತಿ ಮತ್ತು ಗುಣಮಟ್ಟ ಸಾಕಷ್ಟಿದೆಯೇ?

ಶಿಕ್ಷಕರ ಕೆಲಸ ಕೇವಲ ಪಾಠ ಹೇಳುವುದಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು, ಅವರ ಸಮಸ್ಯೆಗಳನ್ನು ಆಲಿಸುವುದು, ತಪ್ಪು ಮಾಡಿದಾಗ ಸರಿಯಾದ ಮಾರ್ಗದಲ್ಲಿ ತಿದ್ದುವುದು ಮತ್ತು ಆತ್ಮವಿಶ್ವಾಸ ತುಂಬುವುದು ಕೂಡ ಶಿಕ್ಷಕರ ಕರ್ತವ್ಯವಾಗಿದೆ.

ಮಕ್ಕಳ ಮೇಲೆ ಹಿಂಸೆ ಮತ್ತು ಅವಮಾನವನ್ನು ಬಳಸುವ ಶಿಕ್ಷಕರು ಅವರ ಆತ್ಮವಿಶ್ವಾಸವನ್ನು ಕುಗ್ಗಿಸುತ್ತಾರೆ. ಒಂದು ಕಠಿಣ ಮಾತು, ಒಂದು ಸಾರ್ವಜನಿಕ ಅವಮಾನ ಅಥವಾ ಒಂದು ಹೊಡೆತ ಕೂಡ ಮಗುವಿನ ಮನಸ್ಸಿನ ಮೇಲೆ ಜೀವಮಾನವಿಡೀ ಉಳಿಯುವ ಗಾಯವನ್ನು ಉಂಟುಮಾಡಬಹುದು.

ಶಿಕ್ಷಣ ಎಂದರೆ ಭಯ ಹುಟ್ಟಿಸುವುದು ಅಲ್ಲ; ಜೀವನವನ್ನು ಕಟ್ಟುವುದು.

ಇಂದು ತರಗತಿಯಲ್ಲಿ ಕೇವಲ ಹಾಜರಾತಿ ತೆಗೆದುಕೊಂಡು ಪಾಠ ಮುಗಿಸುವ ವ್ಯಕ್ತಿಗಳು ನಮಗೆ ಬೇಡ. ಮಕ್ಕಳ ಮನೋವಿಜ್ಞಾನವನ್ನು ಅರ್ಥಮಾಡಿಕೊಳ್ಳುವ, ತಾಳ್ಮೆಯಿಂದ ವರ್ತಿಸುವ, ಪ್ರೀತಿಯಿಂದ ತಿದ್ದುವ ಮತ್ತು ಪ್ರತಿಯೊಬ್ಬ ಮಗುವಿನಲ್ಲೂ ಅಡಗಿರುವ ಸಾಮರ್ಥ್ಯವನ್ನು ಗುರುತಿಸುವ ನಿಜವಾದ ಶಿಕ್ಷಣತಜ್ಞರು ಬೇಕು.

ಮಕ್ಕಳ ತಪ್ಪುಗಳನ್ನು ಹೊಡೆಯುವುದರಿಂದ ಸರಿಪಡಿಸಲು ಸಾಧ್ಯವಿಲ್ಲ. ಅವರಿಗೆ ಪ್ರೀತಿ, ಸಹಾನುಭೂತಿ ಮತ್ತು ಸರಿಯಾದ ಮಾರ್ಗದರ್ಶನ ನೀಡಿದಾಗ ಮಾತ್ರ ಅವರು ಉತ್ತಮ ವ್ಯಕ್ತಿಗಳಾಗಿ ಬೆಳೆಯುತ್ತಾರೆ.

ಈ ಘಟನೆ ಪಾಠವಾಗಲಿ

ಕೇವಲ ಒಬ್ಬ ಶಿಕ್ಷಕಿಗೆ ಶಿಕ್ಷೆ ನೀಡುವುದರಿಂದ ಸಮಸ್ಯೆ ಕೊನೆಗೊಳ್ಳುವುದಿಲ್ಲ. ಪ್ರತಿಯೊಂದು ಶಾಲೆಯೂ ಮಕ್ಕಳ ಸುರಕ್ಷತೆ, ಗೌರವ ಮತ್ತು ಮಾನಸಿಕ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕು.

ಪ್ರಣಯ್‌ಗೆ ಪ್ರೀತಿಯಿಂದ ಮಾತನಾಡುವ, ಅವನ ತಪ್ಪನ್ನು ತಾಳ್ಮೆಯಿಂದ ತಿದ್ದುವ ಮತ್ತು ಅವನ ಭಯವನ್ನು ಅರ್ಥಮಾಡಿಕೊಳ್ಳುವ ಶಿಕ್ಷಕಿ ದೊರೆತಿದ್ದರೆ, ಇಂದು ಅವನು ಜೀವಂತವಾಗಿರುತ್ತಿದ್ದ.

ಆದ್ದರಿಂದ ಪ್ರಣಯ್‌ನ ಸಾವು ಕೇವಲ ಒಂದು ದುರಂತವಾಗಿ ಮರೆಯಾಗಬಾರದು. ಪ್ರತಿಯೊಬ್ಬ ಶಿಕ್ಷಕ, ಪೋಷಕ, ಶಾಲಾ ಆಡಳಿತ ಮತ್ತು ಸರಕಾರಕ್ಕೂ ಅದು ಎಚ್ಚರಿಕೆಯ ಗಂಟೆಯಾಗಬೇಕು.

ತರಗತಿ ಮಕ್ಕಳಿಗೆ ಭಯದ ಸ್ಥಳವಾಗಬಾರದು; ಅದು ಪ್ರೀತಿ, ಗೌರವ, ಭದ್ರತೆ ಮತ್ತು ಭವಿಷ್ಯದ ಕನಸುಗಳು ಅರಳುವ ಸ್ಥಳವಾಗಬೇಕು.

Tags

classroomfear
share
ಒಲಿವರ್ ಡಿ’ಸೋಜಾ,
ಒಲಿವರ್ ಡಿ’ಸೋಜಾ,
Next Story
X