Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಯಕ್ಷಗಾನ ಇತಿಹಾಸದ ಉಜ್ವಲ ಪುಟ ಲೀಲಾವತಿ...

ಯಕ್ಷಗಾನ ಇತಿಹಾಸದ ಉಜ್ವಲ ಪುಟ ಲೀಲಾವತಿ ಬೈಪಾಡಿತ್ತಾಯ

ಡಾ. ಎಂ. ಪ್ರಭಾಕರ ಜೋಶಿಡಾ. ಎಂ. ಪ್ರಭಾಕರ ಜೋಶಿ19 Dec 2024 4:35 PM IST
share
ಯಕ್ಷಗಾನ ಇತಿಹಾಸದ ಉಜ್ವಲ ಪುಟ ಲೀಲಾವತಿ ಬೈಪಾಡಿತ್ತಾಯ

ಮೊನ್ನೆ ತಾನೇ ನಮ್ಮನ್ನಗಲಿದ ಯಕ್ಷಗಾನ ಭಾಗವತರು ಶ್ರೀಮತಿ ಲೀಲಾವತಿ ಹರಿನಾರಾಯಣ ಬೈಪಾಡಿತ್ತಾಯ (78) ಹಲವು ಕಾರಣಗಳಿಂದ ಕನ್ನಡದ ಕಲಾಚರಿತ್ರೆಯ ಒಂದು ಉಜ್ವಲ ಪುಟ, ನಕ್ಷತ್ರ. ಆಟ, ತಾಳಮದ್ದಲೆಗಳ ಭಾಗವತರಾಗಿ, ಕಲಾಗುರುವಾಗಿ, ಮಾರ್ಗದರ್ಶಕರಾಗಿ ಆರು ದಶಕಗಳ ವಿಶಿಷ್ಟ ಕಲಾ ಕೈಂಕರ್ಯವನ್ನು ಗೈದು ‘ಅಸಾಧ್ಯ’ ಎಂಬಂತಿದ್ದುದನ್ನು ಸಾಧ್ಯವಾಗಿ ಮಾಡಿದರು. ಪ್ರತಿಭೆ, ದುಡಿಮೆ, ಛಲ, ಹೋರಾಟಗಳನ್ನು ಈ ರೀತಿಯಾಗಿ ತೆಗೆದುಕೊಂಡವರು ಲೀಲಕ್ಕ.

ಕಾಸರಗೋಡು ಮಧೂರಿನ ಸಾಂಸ್ಕೃತಿಕ ವಾತಾವರಣದಲ್ಲಿ ಹೆಬ್ಬಾರ್ ಮನೆತನದಲ್ಲಿ ಹುಟ್ಟಿ ಕಡಬದ ಬೈಪಾಡಿತ್ತಾಯ ಮನೆತನದ ಹರಿನಾರಾಯಣರನ್ನು ವಿವಾಹವಾಗಿ ಅವರು ಅಕ್ಷರಶಃ ಯಕ್ಷಗಾನಕ್ಕೆ ಉತ್ತಮ ಅನ್ನವನ್ನು ನೀಡಿದ ದಿವ್ಯವಾದ ಸಸ್ಯಗಳಶಾಲಿ (‘ಬೈ-ಪಾಡಿ’ಗಳು) ಆದರು.

ಈ ಹರಿ-ಲೀಲಾ ಒಂದು ಅಪೂರ್ವ ದಾಂಪತ್ಯ. ಅತಿ ವಿರಳದ ಜೋಡಿ. ಮೇಡ್ ಫಾರ್ ಈಚ್ ಅದರ್. ಗುಣ ಸ್ವಭಾವ, ವಿದ್ಯೆ, ಸಂಸ್ಕಾರ, ಸೌಮ್ಯತೆ ಎಲ್ಲದರಲ್ಲಿ ಏಕ ಪಾಕ. ಅವರಿಗೆ ಶಿಷ್ಯ ವೃಂದ ಅರ್ಪಿಸಿದ ಅಭಿನಂದನ ಸಂಪುಟ ‘ಹರಿಲೀಲಾ’ ಒಂದು ಸಾರ್ಥಕ ಸಂಕಲನ.

ಪತಿಯ ಮಾರ್ಗದರ್ಶನದಲ್ಲಿ ಭಾಗವತಿಕೆ ಅಭ್ಯಸಿಸಿದ ಲೀಲಾವತಿ, ಅದನ್ನು ಬರಿಯ ಕೌತುಕವಾಗಿ ಮಾಡದೆ ವೃತವಾಗಿ ನಡೆಸಿದರು. ವ್ಯವಸಾಯಿ, ಹವ್ಯಾಸಿ ರಂಗಗಳಲ್ಲಿ ದುಡಿದರು. ಗುರುವಾಗಿ ನೂರಾರು ಶಿಷ್ಯರಿಗೆ ಯಕ್ಷಗಾನ ವಿದ್ಯೆ ಧಾರೆ ಎರೆದರು. ನಿಸ್ಪ್ರಹರಾಗಿ ಕೊಟ್ಟಷ್ಟು ಪಡೆದು, ಹಲವು ಬಾರಿ ಉಚಿತವಾಗಿ ಕೂಡ.

ಹಿಂದೆ ಇದ್ದ ಮಹಿಳಾ ಭಾಗವತಿಕೆ ಪರಂಪರೆ (ಕೊಲ್ಲೂರು ಯಮುನಮ್ಮ 1940-50 ಬೆಳ್ಮಣ್ ಸಹೋದರಿಯರು (1950? ಇತ್ಯಾದಿ) ಸಾರ್ಥಕ್ಯ ಕಂಡದ್ದು ಲೀಲಕ್ಕನವರಿಂದ.

ಸ್ವಚ್ಛ ಪಾರಂಪಾರಿಕ ಶೈಲಿ, ಸಾಹಿತ್ಯ ಶುದ್ಧಿ, ಚೊಕ್ಕ ಉಚ್ಚಾರ, ಭಾವಪೂರ್ಣತೆ ಅತಿ ಮಧುರವಾದ ಸ್ವರ, ಅತಿ ಇಲ್ಲದ ಆಲಾಪನೆ, ಪ್ರಸಂಗ ಜ್ಞಾನ, ಆಟಕೂಟ ನಡೆಸುವ ಹಿಡಿತಗಳಿಂದ ಅವರು ಶ್ರೇಷ್ಠ ಭಾಗವತರಾದರು. ರಂಗದ ಉಪಸ್ಥಿತಿ, ವರ್ತನೆ, ವೈಯಕ್ತಿಕ ನಡೆಗಳಲ್ಲಿ ಗಾಂಭೀರ್ಯ, ಆತ್ಮೀಯತೆ, ಹಿರಿತನ ಕಾಣಿಸಿದರು. ಆಟಕೂಟಗಳ ಮೂರು ತಲೆಮಾರುಗಳಿಗೆ, ಕಲಾಪೋಷಕರಿಗೆ ಆದರದ ಲೀಲಕ್ಕ ಆದರು.

ಮಹಿಳೆಗೆ ಮೇಳದ ತಿರುಗಾಟ ಸಾಧ್ಯವೇ ಎಂಬ ನಿಜವಾದ ಆತಂಕದ ಮಧ್ಯೆಯೇ ವ್ಯವಸಾಯಿ ಮೇಳದ ಭಾಗವತರಾದ ಲೀಲಾವತಿ, ಪತಿಯ ಹಿಮ್ಮೇಳದೊಂದಿಗೆ ಅಗ್ರಮಾನ್ಯ ಭಾಗವತರಲ್ಲಿ ಒಬ್ಬರಾದರು. ಅರುವ ಮೇಳದಲ್ಲಿ ತಿರುಗಾಟ ಆರಂಭಿಸಿ ಕುಂಬಳೆ, ಸಾಲಿಗ್ರಾಮ, ಬಪ್ಪನಾಡು, ತಳಕಳ ಮೇಳಗಳಲ್ಲಿ ಮುಂದುವರಿದು 25 ತಿರುಗಾಟ ನಡೆಸಿದರು.! ಕಲಾವಿದರಿಗೆಲ್ಲ ಆಪ್ತರಾಗಿ, ಮೆಚ್ಚಿನ ಸೋದರಿಯಾಗಿ, ಎಲ್ಲೆಡೆ ಸ್ವಾಗತ, ಸತ್ಕಾರ ಪಡೆದ ಈ ದಂಪತಿ ದಾಖಲೆ ಬರೆದರು. ಅವರ ಕುರಿತಾಗಿ ಕಲಾವಲಯದಲ್ಲಿ ಒಂದು ಸಣ್ಣ ಮಾತಿಲ್ಲ. ಅಸಮಾಧಾನ ಇಲ್ಲ. ಇದು ಅಸಾಮಾನ್ಯ. ಅವರ ಸ್ಫೂರ್ತಿಯಲ್ಲಿ ಈಗ ಹಲವು ಮಹಿಳಾ ಭಾಗವತರು ಸಕ್ರಿಯರಾದುದು ಪ್ರತ್ಯಕ್ಷ.

ನನಗೆ ಹರಿಯಣ್ಣ, ಲೀಲಕ್ಕ ರಂಗದಲ್ಲೂ ಹೊರಗೂ ಆಪ್ತರೆಂಬುದು ನನ್ನ ಹೆಮ್ಮೆ. ಅನೇಕ ತಾಳಮದ್ದಲೆಗಳಲ್ಲಿ ಅವರು ಸಹಕಲಾವಿದರು, ಮನೆಮಟ್ಟದಲ್ಲಿ ಆಪ್ತರು. ನಮ್ಮದೇ ಮಹಿಳಾ ತಾಳಮದ್ದಲೆ ಸಂಘಟನೆ (ಪೂರ್ಣಿಮಾ ಪೇಜಾವರರ ನೇತೃತ್ವ) ಯಕ್ಷ ಮಂಜುಳಾಕ್ಕೆ ಅವರೇ ಮುಖ್ಯ ಭಾಗವತರು, ಮಾರ್ಗದರ್ಶಕರು.

ಕಲಾ ಜೀವನದ ಉತ್ತರಾರ್ಧವನ್ನು ಅವರು ಕಲಾ ಶಿಕ್ಷಣ ಮತ್ತು ಹವ್ಯಾಸಿ ರಂಗಕ್ಕೆ ನೀಡಿದರು. ಆಟದ ಮೇಳಗಳಲ್ಲದೆ ನೂರಾರು ಬಿಡಿ ವೇದಿಕೆಗಳಲ್ಲಿ, ಊರು, ಪರವೂರು, ಪರಪ್ರಾಂತಗಳಲ್ಲಿ ಹಾಡಿ ಮಾನ್ಯರಾದರು. ಈರ್ವರೂ ಸೇರಿ ಹಲವು ಕಡೆ ಮತ್ತು ಸ್ವಗೃಹದಲ್ಲೂ ಹಿಮ್ಮೇಳ ಶಿಕ್ಷಣ ನೀಡಿ ನೂರಾರು ಶಿಷ್ಯರ ನೆಚ್ಚಿನ ಗುರುಗಳಾದರು. ಅವರು ಗಳಿಸಿದ ಶಿಷ್ಯಪ್ರೀತಿ ಅಸಾಮಾನ್ಯ.

ವೃತ್ತಿರಂಗದಲ್ಲಿ ಹರಿ-ಲೀಲಾ ಅತಿ ವಿರಳ ಸಜ್ಜನರು. ‘‘ಇಷ್ಟು ಒಳ್ಳೆಯ ಮನುಷ್ಯರೂ ಇರುತ್ತಾರೆಯೇ?’’ ಎಂಬಷ್ಟು ಗುಣವಂತರು. ಒಳ್ಳೆಯ ಆತಿಥೇಯರು. ಬಜಪೆ ತಳಕಳದಲ್ಲಿರುವ ಪುಟ್ಟಮನೆಯಲ್ಲಿ ನಿತ್ಯ ಸಂತೃಪ್ತ ಜೀವನ ನಡೆಸಿದವರು.

ಅವರ ಮಕ್ಕಳು ಅವಿನಾಶ, ಗುರುಪ್ರಸಾದರು ಉದ್ಯೋಗಿಗಳಾಗಿ ಕಲಾಸಕ್ತಿಯನ್ನೂ ಉಳಿಸಿ, ಹಿಮ್ಮೇಳವಾದಕರೂ ಆಗಿದ್ದಾರೆ. ಅವರು ‘ಡಿಜಿಯಕ್ಷ’ ಎಂಬ ಕಲಾ ಪ್ರಸಾರಕ ಸಂಘಟನೆ ನಡೆಸುತ್ತಿದ್ದಾರೆ.

‘ಕಲಾಭಕ್ತೆ ಭಾಗವತ’ ಲೀಲಾವತಿ ಪುಣ್ಯಜೀವಿ, ಮಹಿಳಾ ಪ್ರತಿಭೆಯ ವಿಸ್ತರಣೆ, ಸಬಲೀಕರಣದ ಕರ್ತರು ಕೂಡ. ಯಕ್ಷಗಾನದಲ್ಲಿ ಲೀಲಾವತಿ ಪ್ರಜ್ಞೆ ಚಿರಾಯುವಾಗಲಿ.

share
ಡಾ. ಎಂ. ಪ್ರಭಾಕರ ಜೋಶಿ
ಡಾ. ಎಂ. ಪ್ರಭಾಕರ ಜೋಶಿ
Next Story
X