Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಅಪರಾಧಿ ಕಳಂಕ ಹೊತ್ತ ‘ಮಾಂಗ್ ಗಾರುಡಿ’

ಅಪರಾಧಿ ಕಳಂಕ ಹೊತ್ತ ‘ಮಾಂಗ್ ಗಾರುಡಿ’

ಸಿ.ಎಸ್. ದ್ವಾರಕಾನಾಥ್ಸಿ.ಎಸ್. ದ್ವಾರಕಾನಾಥ್8 Oct 2025 10:28 AM IST
share
ಅಪರಾಧಿ ಕಳಂಕ ಹೊತ್ತ ‘ಮಾಂಗ್ ಗಾರುಡಿ’

ಮಾಂಗ್ ಗಾರುಡಿ ಸಮುದಾಯವು ಏಕಕಾಲದಲ್ಲಿ ಭಾರತೀಯ ಸಮಾಜದಲ್ಲಿ ತಮ್ಮದಲ್ಲದ ತಪ್ಪಿಗೆ ಜೀವನಪರ್ಯಂತ ‘ಕ್ರಿಮಿನಲ್ ಟ್ರೈಬ್’ ಮತ್ತು ‘ಅಸ್ಪಶ್ಯ’ ಎಂಬ ಎರಡು ಪ್ರಮುಖ ಕಳಂಕಗಳನ್ನು ಹೊರಬೇಕಾಗಿದೆ. ಇವೆರಡೂ ಕಳಂಕಗಳು ನಾಗರಿಕ ಸಮಾಜದಲ್ಲಿ ಇತರ ಮುಖ್ಯವಾಹಿನಿ ಸಮುದಾಯಗಳೊಂದಿಗೆ ಏಳಿಗೆಯಾಗಲು ಅಡ್ಡಿಯಾಗಿರುವ ಅನಿಷ್ಟಗಳಾಗಿವೆ.

ಕೆಲವು ವರ್ಷಗಳ ಹಿಂದೆ ವಿಶ್ವವಿದ್ಯಾನಿಲಯವೊಂದರಲ್ಲಿ ಉಪನ್ಯಾಸ ನೀಡಲು ವಿಜಯಪುರಕ್ಕೆ ಹೋಗಿದ್ದೆ. ನಾನು ಬಂದ ವಿಷಯ ತಿಳಿದು ಅಲ್ಲಿನ ಕೆಲ ಮಂದಿ ಅಲೆಮಾರಿಗಳು ನಾನು ತಂಗಿದ್ದ ಹೋಟೆಲ್‌ಗೆ ಬಂದು ಅವರ ಸಂಕಷ್ಟಗಳನ್ನೆಲ್ಲಾ ಹೇಳಿಕೊಳ್ಳತೊಡಗಿದರು. ಅವರ ಕಷ್ಟಗಳಿಗೆ ಪರಿಹಾರ ನೀಡಲು ನನ್ನ ಬಳಿ ಯಾವುದೇ ಪದವಿ ಅಥವಾ ಅಧಿಕಾರವಿರಲಿಲ್ಲ. ಆದರೂ ಅವರನ್ನು ಕೇಳಿಸಿಕೊಳ್ಳತೊಡಗಿದೆ. ಕನಿಷ್ಠ ತಮ್ಮ ನೋವುಗಳನ್ನು ನನ್ನ ಬಳಿ ಹೇಳಿಕೊಂಡರೆ ಅವರು ಒಂದಷ್ಟು ಹಗುರಾಗುತ್ತಾರೆ ಎಂಬ ಆಶಯ, ಕೆಲವೊಮ್ಮೆ ಅವರ ಸಂಕಷ್ಟಗಳಲ್ಲೂ ಭಾಗಿಯಾಗಿ ಪರಿಹಾರಗಳಿಗಾಗಿ ಅವರೊಂದಿಗೇ ಸೇರಿ ಹುಡುಕಾಡುತ್ತೇನೆ. ಆಗ ಅವರಿಗೆ ಒಂದಷ್ಟು ಸಮಾಧಾನವಾಗುತ್ತದೆ.

ಈ ಸಂದರ್ಭದಲ್ಲಿ ಅಲ್ಲಿನ ಗಂಟಿಚೋರ್, ಚಪ್ಪರ್ ಬಂದ್, ಸುಡುಗಾಡುಸಿದ್ದರು, ಹರಿಣಿಶಿಖಾರಿಗಳ ಜತೆ ಮಾತಾಡುವಾಗ ‘ಮಾಂಗ್ ಗಾರುಡಿ’ ಎಂಬ ಸಮುದಾಯದ ಹೆಸರು ಹಾದುಹೋಯಿತು. ನನ್ನ ಕಿವಿ ಚುರುಕಾಯಿತು, ನನ್ನ ಅಲೆಮಾರಿ ಪಯಣದಲ್ಲಿ ಮಾಂಗ್ ಗಾರುಡಿಗಳ ಹೆಸರು ಕೇಳಿರಲಿಲ್ಲ. ಅಲ್ಲೊಂದು ಮಾಂಗ್ ಗಾರುಡಿಗಳೇ ಇರುವ ಕಾಲನಿಯಿದೆ ಎಂದು ಹೇಳಿದಾಕ್ಷಣ ತಡಮಾಡದೆ ಅಲ್ಲಿನವರೊಂದಿಗೆ ಅಲ್ಲಿಗೆ ಹೊರಟೆ. ಮಾಂಗ್ ಗಾರುಡಿಗಳ ಬರ್ಬರ ಬದುಕು ಕಣ್ಣಿಗೆ ರಾಚುತ್ತಿತ್ತು! ಆ ಟೆಂಟು, ಶೆಡ್ಡು, ಗುಡಾರಗಳ ನಡುವೆ ಒಂದು ಚಾಪೆ ಹಾಸಿ ಅಲ್ಲೇ ಮಾತಿಗೆ ಕುಳಿತೆವು. ಅವರೊಂದಿಗೆ ಮಾತನಾಡಿದ ಸಾರಾಂಶವೇನೆಂದರೆ.. ಮಾಂಗ್ ಗಾರುಡಿಗಳನ್ನು ಬ್ರಿಟಿಷರು ಯಾವುದೋ ತಲೆಮಾರಿನಲ್ಲಿ ಅಪರಾಧಿ ಬುಡಕಟ್ಟುಗಳ(criminal tribes) ಪಟ್ಟಿಗೆ ಸೇರಿಸಿಬಿಟ್ಟಿದ್ದರು. ನಂತರ ಬಂದ ಭಾರತ ಸರಕಾರದಲ್ಲಿ ಈ ವಿಷಯ ತಿಳಿದ ಆಗಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಒಮ್ಮೆಲೇ ಎಲ್ಲಾ ಅಪರಾಧಿ ಬುಡಕಟ್ಟುಗಳನ್ನು ವಿಮುಕ್ತಗೊಳಿಸಿದಾಗ ಮಾಂಗ್ ಗಾರುಡಿಗಳೂ ವಿಮುಕ್ತರಾದರು, ಆದರೆ ಭಾರತದ ಪೊಲೀಸರ ಪಾಲಿಗೆ ಇವರು ಇನ್ನೂ ಅಪರಾಧಿ ಬುಡಕಟ್ಟುಗಳಾಗೇ ಉಳಿದುಬಿಟ್ಟಿದ್ದಾರೆ! ಎಲ್ಲೇ ಅಪರಾಧಗಳಾದರೂ ಇವರನ್ನು ಠಾಣೆಗೆ ಕರೆತಂದು ಚಚ್ಚುತ್ತಾರೆ. ಅವರು ಅಪರಾಧ ಮಾಡದಿದ್ದರೂ ಪೊಲೀಸರಿಗೆ ನಿಜವಾದ ಅಪರಾಧಿ ಸಿಕ್ಕದಿದ್ದರೆ, ಹಿರಿಯ ಅಧಿಕಾರಿಗಳ ಒತ್ತಡಕ್ಕೆ ಮಣಿದು ಮುಗ್ಧ ಮಾಂಗ್ ಗಾರುಡಿಯವರನ್ನು ಹಿಡಿದು ಕೇಸ್ ಹಾಕಿ ಹಿರಿಯ ಅಧಿಕಾರಿಗಳಿಗೆ ಅಪರಾಧಿಗಳನ್ನು ಹಿಡಿದೆವೆಂದು ರಿಪೋರ್ಟ್ ನೀಡುತ್ತಾರೆ!

ತಮ್ಮ ಅಸ್ಮಿತೆಗಳನ್ನೇ ಕಳೆದುಕೊಂಡ ಮಾಂಗ್ ಗಾರುಡಿಗಳನ್ನು ಹೇಗೆ ಮುಖ್ಯವಾಹಿನಿಗೆ ಕರೆತರುವುದು? ಇವರಿಗೆ ಸರಕಾರಿ ಸವಲತ್ತುಗಳನ್ನು ಕೊಡಿಸುವುದಾದರೂ ಹೇಗೆ? ಅಪರಾಧಿಗಳೆಂಬ ಕಳಂಕದಿಂದ ಹೊರತರುವುದಾದರೂ ಹೇಗೆ? ಇವರು ಎಲ್ಲರಂತೆ ಸಹಜ ಬದುಕು ಬದುಕುವುದು ಎಂದು? ಇಂತಹ ಪ್ರಶ್ನೆಗಳೊಂದಿಗೆ ವಿಜಯಪುರದಿಂದ ಅಂದು ಹೊರಟಿದ್ದೆ.

ಇದಾದ ಕೆಲವು ದಿನಗಳಲ್ಲಿ ಡಾ. ಅಂಬೇಡ್ಕರ್ ಸಂಶೋಧನಾ ಸಂಸ್ಥೆಯವರು ನನ್ನನ್ನು ಕರೆದು ಪರಿಶಿಷ್ಟ ಜಾತಿಯಲ್ಲಿನ ಅಲೆಮಾರಿಗಳ ಕುರಿತು ಅಧ್ಯಯನ ಮಾಡುವ ಸಂಶೋಧಕರನ್ನು ಹುಡುಕಿ ಅಂತಹವರಿಗೆ ಮಾರ್ಗದರ್ಶಿಯನ್ನಾಗಿ ಕೆಲಸ ಮಾಡುವ ಜವಾಬ್ದಾರಿಯನ್ನು ನನಗೇ ವಹಿಸಿದರು. ಅವರು ನೀಡಿದ ಪಟ್ಟಿಯಲ್ಲಿ ಮಾಂಗ್ ಗಾರುಡಿ ಹೆಸರಿತ್ತು. ಆದರೆ ಸಂಶೋಧನೆ ಮಾಡಲು ನಾನು ವಿಶ್ವವಿದ್ಯಾನಿಲಯದ ಪಂಡಿತರನ್ನು ಹುಡುಕಲಿಲ್ಲ. ಬದಲಿಗೆ ಈ ಸಮುದಾಯಗಳಲ್ಲಿ ತೊಡಗಿಸಿಕೊಂಡು ಅವರಲ್ಲೊಬ್ಬರಾಗಿ ಕೆಲಸ ಮಾಡುವ ‘ಆ್ಯಕ್ಟಿವಿಸ್ಟ್’ ಒಬ್ಬರನ್ನು ಹುಡುಕತೊಡಗಿದೆ. ಆಗ ನನ್ನ ನೆನಪಿಗೆ ಬಂದದ್ದು ನನ್ನ ಪ್ರೀತಿಪಾತ್ರರಲ್ಲಿ ಒಬ್ಬರಾದ ಕಿರಿಯ ಗೆಳೆಯ ಹರ್ಷಕುಮಾರ್ ಕುಗ್ವೆ.

ಹರ್ಷನಿಗೆ ಈ ವಿಷಯ ಹೇಳಿದಾಗ ‘‘ಅವರ ಹೆಸರೇ ಕೇಳಿಲ್ವಲ್ಲ ಸರ್.. ಎಲ್ಲಿರ್ತಾರೆ..?’’ ಎಂದ. ಬಿಜಾಪುರದಲ್ಲಿ ನಾನು ನೋಡಿದ್ದ ಕಾಲನಿಯ ಸಣ್ಣ ಕ್ಲೂ ಕೊಟ್ಟೆ ಅಷ್ಟೇ. ಅದನ್ನು ಒಂದು ಸವಾಲಾಗಿ ಸ್ವೀಕರಿಸಿ ಅಲ್ಲಿಂದ ಹೋದ ಈ ಹುಡುಗ ಎರಡುಮೂರು ತಿಂಗಳು ಫೋನಿಗೂ ಸಿಗದೆ ನಾಪತ್ತೆಯಾಗಿದ್ದ. ನನಗೆ ಮಾಹಿತಿ ಇದ್ದಂತೆ ಹರ್ಷ ಕಲಬುರಗಿ, ಬೀದರ್, ಬಿಜಾಪುರ, ಬೆಳಗಾವಿಯ ಯಾವುದೋ ಮಾಂಗ್ ಗಾರುಡಿ ಕಾಲನಿಯಲ್ಲಿ ಮಾಂಗ್ ಗಾರುಡಿಯಾಗಿಯೇ ಇರುತ್ತಿದ್ದ! ಒಮ್ಮೆಲೇ ಸಂಶೋಧನಾ ಪ್ರಬಂಧದೊಂದಿಗೆ ಕಾಣಿಸಿದವ ‘‘ಎಂತಹ ಅದ್ಭುತ ಸಮುದಾಯದ ಬಗ್ಗೆ ನನಗೆ ಬರೆಯಲು ಕೊಟ್ರಿ ಸರ್.. ಕೇವಲ ಬೀಫ್‌ನಲ್ಲಿ ಮೂವತ್ತು ನಲ್ವತ್ತು ವೆರೈಟಿ ಮಾಡುವ ಇವರು ಬದುಕಲಿಕ್ಕಾಗಿ ಮಲವನ್ನೂ ಬಾಚುತ್ತಾರೆ..’’ ಎಂದು ಅವರ ಆಹಾರ ಪದ್ಧತಿಯಿಂದ ಹಿಡಿದು ಮಾಂಗ್ ಗಾರುಡಿಗಳ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ಶೈಕ್ಷಣಿಕ ಬದುಕನ್ನು ಪದರಪದರವಾಗಿ ಬಿಡಿಸಿ, ಅತ್ಯಂತ ಆಳವಾಗಿ ಕಟ್ಟಿಕೊಟ್ಟಿದ್ದ.

ಮಾಂಗ್ ಗಾರುಡಿಗಳ ಅಸ್ಮಿತೆಯಿಂದ ಆರಂಭವಾದ ಈ ಹುಡುಕಾಟ ಅವರ ಚಹರೆಗಳನ್ನು ಗುರುತಿಸುವಲ್ಲಿಗೆ ನಿಲ್ಲುವುದಿಲ್ಲ. ಅವರ ಚಾರಿತ್ರಿಕ ಹಿನ್ನೆಲೆಯಿಂದ ಹಿಡಿದು ವಸಾಹತುಶಾಹಿಯಲ್ಲಿ ಸಿಕ್ಕಿಹಾಕಿಕೊಂಡಾಗಿನ ತೊಳಲಾಟಗಳು ನಂತರದ ಸ್ವತಂತ್ರ ಭಾರತದಲ್ಲಿ ಅನುಭವಿಸುತ್ತಿರುವ ಶೋಚನೀಯ ಬದುಕಿನ ವಿವರಗಳು ಅತ್ಯಂತ ನೋವು ಮತ್ತು ಅಸಹಾಯಕತೆಯಿಂದ ಕೂಡಿವೆ. ಒಮ್ಮೆ ನಮ್ಮ ಅಲೆಮಾರಿ ಬುಡಕಟ್ಟು ಮಹಾಸಭಾದ ಮೀಟಿಂಗ್‌ಗೆ ಬಂದಿದ್ದ ಮಾಂಗ್ ಗಾರುಡಿ ಒಬ್ಬ ‘‘ಬ್ರಿಟಿಷ್ ಸರಕಾರದ ಕೆಲಸಕ್ಕೆ ಜನ ಸಿಗುತ್ತಿರಲಿಲ್ಲವಂತೆ ಸರ್, ಆಗ ನಮ್ಮ ಪೂರ್ವಿಕರನ್ನು ಎಳೆದೊಯ್ಯುತ್ತಿದ್ದರು. ರೈಲು ಪಟ್ಟಿ ಹಾಕುವ ಕೆಲಸವನ್ನು ನಮ್ಮ ತಾಯಿ ಖುದ್ದಾಗಿ ಮಾಡಿದ್ದಾರೆ. ಏನೂ ಕೆಲಸ ಸಿಗದಾದಾಗ ನಮ್ಮ ಮುತ್ಯಾರು ದೊಂಬರಾಟ ಕೂಡ ಮಾಡುತ್ತಿದ್ದರಂತೆ ಸರ್..’’ ಎಂದು ಅವರ ಬದುಕಿನ ಹಿನ್ನೆಲೆ ಕುರಿತು ತನ್ನದೇ ಭಾಷೆಯಲ್ಲಿ ಹೇಳುತ್ತಿದ್ದ.

ಸುಮಾರು ಒಂದು ನೂರು ವರ್ಷಗಳ ಹಿಂದೆ ತೆಲಂಗಾಣ ಮತ್ತು ಮಹಾರಾಷ್ಟ್ರಗಳಿಂದ ಕರ್ನಾಟಕಕ್ಕೆ ವಲಸೆ ಬಂದಿರಬಹುದಾದ ಮಾಂಗ್ ಗಾರುಡಿಗಳು ಹೈದರಾಬಾದ್ ಕರ್ನಾಟಕದ ಕಲಬುರಗಿ, ಬೀದರ್, ವಿಜಯಪುರ, ಬೆಳಗಾವಿಗಳಲ್ಲಿ ಎಮ್ಮೆ, ಕೋಣಗಳ ವ್ಯಾಪಾರ ಮಾಡುವುದು, ಎತ್ತುಗಳ ಕೊಂಬು ಕೆರೆಯುವುದು, ಚಾಕು, ಚೂರಿ ಸಾಣೆ ಹಿಡಿಯುವುದು, ಕಕ್ಕಸು ಬಾಚುವುದು, ಚರಂಡಿ ಸ್ವಚ್ಛ ಮಾಡುವುದು, ಚಿಂದಿ ಆರಿಸುವುದು, ಸೇಂದಿ ಮಾರುವುದು ಮುಂತಾದ ಯಾವುದೇ ಉಪ ಕಸುಬುಗಳನ್ನು ಮಾಡುತ್ತಾ ಹೊಟ್ಟೆ ಹೊರೆಯುತ್ತಾರೆ. ಮೂಲತಃ ಅಲೆಮಾರಿಗಳೇ ಆಗಿರುವ ಈ ಸಮುದಾಯದ ಕೆಲವರು ಈಚೀಚೆಗೆ ಎಲ್ಲಾದರೂ ನೆಲೆನಿಲ್ಲಲು ಹೆಣಗಾಡುತ್ತಿದ್ದಾರೆ. ಸದ್ಯಕ್ಕೆ ಬಹುತೇಕ ಪ್ಲಾಸ್ಟಿಕ್ ಜೋಪಡಿಗಳಲ್ಲೇ ಜೀವಸವೆಸುತ್ತಿರುವ ಈ ಜನ ಒಂದಿಲ್ಲೊಂದು ಕೊಳೆಗೇರಿಗಳಲ್ಲೇ ನೆಲೆಸಿದ್ದಾರೆ.

ಮಾಂಗ್ ಗಾರುಡಿ ಸಮುದಾಯವು ಏಕಕಾಲದಲ್ಲಿ ಭಾರತೀಯ ಸಮಾಜದಲ್ಲಿ ತಮ್ಮದಲ್ಲದ ತಪ್ಪಿಗೆ ಜೀವನಪರ್ಯಂತ ‘ಕ್ರಿಮಿನಲ್ ಟ್ರೈಬ್’ ಮತ್ತು ‘ಅಸ್ಪಶ್ಯ’ ಎಂಬ ಎರಡು ಪ್ರಮುಖ ಕಳಂಕಗಳನ್ನು ಹೊರಬೇಕಾಗಿದೆ. ಇವೆರಡೂ ಕಳಂಕಗಳು ನಾಗರಿಕ ಸಮಾಜದಲ್ಲಿ ಇತರ ಮುಖ್ಯವಾಹಿನಿ ಸಮುದಾಯಗಳೊಂದಿಗೆ ಏಳಿಗೆಯಾಗಲು ಅಡ್ಡಿಯಾಗಿರುವ ಅನಿಷ್ಟಗಳಾಗಿವೆ. ಹೀಗೆ ಮಾಂಗ್ ಗಾರುಡಿಗಳ ಕುರಿಂತಂತೆ ಹೇಳುವುದು ಬೆಟ್ಟದಷ್ಟಿದೆ. ದುರಂತವೆಂದರೆ ಈಚೆಗೆ ಸಿದ್ದರಾಮಯ್ಯನವರ ಸರಕಾರ ಎಲ್ಲಾ ಅಲೆಮಾರಿ ಅಸ್ಪಶ್ಯರೊಂದಿಗೆ ಇವರಿಗೂ ಒಂದು ಪರ್ಸೆಂಟ್ ಮೀಸಲಾತಿ ನೀಡದೇ ಹೋಗಿದ್ದು ನಿಜಕ್ಕೂ ಅಕ್ಷಮ್ಯ...

‘‘ರಾಮಾಯಣದೊಳಗ ರಾಮ ಸೀತೆಯೂ ವನವಾಸ ಮಾಡ್ಯಾರೆ.. ನಾವೂ ಮಾಡೀವಿ.. ಆದ್ರ, ನಮ್ಮ ವನವಾಸ ರಾಮನ ವನವಾಸಕ್ಕಿಂತ ದೊಡ್ದು...’’ ಕಲಬುರಗಿಯ ಬಾಪೂಜಿನಗರ ನಿವಾಸಿ ಮಾಂಗ್ ಗಾರುಡಿ ಸಮುದಾಯದ ಬಿಲ್ಲಿಮೋರ್ ಉಫಾಡೆ ಎನ್ನುವವ ಹೇಳಿದ ಮಾತಿದು. ನಮ್ಮ ಸರಕಾರಗಳು ಇಂತಹ ಸೂಕ್ಷ್ಮ ಮಾತುಗಳನ್ನು ಗ್ರಹಿಸುವಷ್ಟಾದರೂ ಸೂಕ್ಷ್ಮವಾದರೆ ಆ ಸರಕಾರಕ್ಕೆ ಮಾನವೀಯತೆಯ ಸ್ಪರ್ಶ ಆಗಿರಬಹುದೆಂದು ಭಾವಿಸಬಹುದು.. ಆದರೆ..!?

share
ಸಿ.ಎಸ್. ದ್ವಾರಕಾನಾಥ್
ಸಿ.ಎಸ್. ದ್ವಾರಕಾನಾಥ್
Next Story
X