Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮಮತಾ ಬ್ಯಾನರ್ಜಿಯವರ ಹೊಸ ತಂತ್ರ...

ಮಮತಾ ಬ್ಯಾನರ್ಜಿಯವರ ಹೊಸ ತಂತ್ರ ಚುನಾವಣೆಯಲ್ಲಿ ಲಾಭ ನೀಡಲಿದೆಯೇ?

ವಿನಯ್ ಕೆ.ವಿನಯ್ ಕೆ.13 Jan 2026 10:30 AM IST
share
ಮಮತಾ ಬ್ಯಾನರ್ಜಿಯವರ ಹೊಸ ತಂತ್ರ ಚುನಾವಣೆಯಲ್ಲಿ ಲಾಭ ನೀಡಲಿದೆಯೇ?

ಟಿಎಂಸಿಯ ಚುನಾವಣೆ ಸಲಹಾ ಸಂಸ್ಥೆಯಾದ ಐಪ್ಯಾಕ್ ಕಚೇರಿ ಮೇಲಿನ ಈ.ಡಿ. ದಾಳಿಯನ್ನು ಚುನಾವಣೆ ಎದುರಿಸುವ ಹೊಸ ತಂತ್ರವಾಗಿ ಮಮತಾ ಬ್ಯಾನರ್ಜಿ ಬದಲಿಸುತ್ತಿರುವ ಹಾಗೆ ಕಾಣಿಸುತ್ತಿದೆ.

‘‘ನೀವು ಬಂಗಾಳದ ಮೇಲೆ ಎಷ್ಟೇ ದಾಳಿ ಮಾಡಿದರೂ, ಬಂಗಾಳ ಗೆಲ್ಲುತ್ತದೆ’’ ಎಂದು ಅಬ್ಬರಿಸಲಾಗುತ್ತಿದೆ. ತಾವು ರೂಪಿಸುತ್ತಿದ್ದ ಚುನಾವಣಾ ತಂತ್ರದ ಎಲ್ಲಾ ದಾಖಲೆಗಳನ್ನು ಕದಿಯಲು ಯತ್ನಿಸಲಾಯಿತು ಎಂಬುದು ಮಮತಾ ಬ್ಯಾನರ್ಜಿಯವರ ಆರೋಪ.

‘‘ನನ್ನ ಪಕ್ಷದ ಎಲ್ಲಾ ದಾಖಲೆಗಳನ್ನು ಕಿತ್ತುಕೊಳ್ಳುವುದು ಈ.ಡಿ. ಮತ್ತು ಅಮಿತ್ ಶಾ ಅವರ ಕೆಲಸವೇ?’’ ಎಂದು ಮಮತಾ ಪ್ರಶ್ನಿಸಿದ್ದಾರೆ.

ಮಮತಾ ಬ್ಯಾನರ್ಜಿಯವರ ಹೋರಾಟ ಈ.ಡಿ. ವಿರುದ್ಧ ಮಾತ್ರವಾಗಿ ಉಳಿದಿಲ್ಲ. ಅದು, ಕೇಂದ್ರ ಸರಕಾರ ಮತ್ತು ಅಮಿತ್ ಶಾ ವಿರುದ್ಧ ತಿರುಗಿರುವುದು ಸ್ಪಷ್ಟ.

ಅಮಿತ್ ಶಾ ಹೆಸರನ್ನು ಮಮತಾ ನೇರವಾಗಿ ತೆಗೆದುಕೊಳ್ಳುತ್ತಿದ್ದಾರೆ.

ದಿಲ್ಲಿಯಲ್ಲಿ ಅಮಿತ್ ಶಾ ಕಚೇರಿ ಎದುರೇ ಟಿಎಂಸಿ ಸಂಸದರು ಪ್ರತಿಭಟನೆ ನಡೆಸಿದರು. ಹಾಗಾಗಿ, ಇದು ಪಶ್ಚಿಮ ಬಂಗಾಳ ಚುನಾವಣೆಗಾಗಿ ನಡೆಯುವ ಯುದ್ಧವಾಗಿ ಬದಲಾಗಿದೆ.

ಬಿಜೆಪಿಯೇ ಈ.ಡಿ. ದಾಳಿಗೆ ಕಾರಣ ಎಂಬುದನ್ನು ಮಮತಾ ನೇರವಾಗಿ ಹೇಳುತ್ತಿದ್ದಾರೆ. ಒಂದೆಡೆ, ಈ.ಡಿ. ಬಳಕೆ ಮೂಲಕ ಡೇಟಾ ಕಳುವಿನ ಆರೋಪ ಹೊರಿಸಲಾಗಿದ್ದು, ಮತ್ತೊಂದೆಡೆ ಬಂಗಾಳ ಸರಕಾರದ ಪೊಲೀಸರು ಈ.ಡಿ. ವಿರುದ್ಧ ಎಫ್‌ಐಆರ್ ಹಾಕಿರುವುದು ಈ ಸಂಘರ್ಷದ ತೀವ್ರತೆಯನ್ನು ತೋರಿಸುತ್ತದೆ.

ಈಗ, ಈ.ಡಿ. ರೇಡ್ ವೇಳೆ ಮಮತಾ ಬ್ಯಾನರ್ಜಿ ನೇರವಾಗಿ ಆ ಸ್ಥಳಕ್ಕೇ ಹೋಗಿ ತಮ್ಮ ಪಕ್ಷದ ಫೈಲುಗಳನ್ನು ಎತ್ತಿಕೊಂಡು ಬಂದದ್ದು ಬಹಳ ದಿಟ್ಟ ನಡೆಯಾಗಿ ಕಾಣುತ್ತಿದೆ.

ಯಾರೂ ತೋರಿಸದೇ ಇದ್ದ ಪ್ರತಿಕ್ರಿಯೆ ಇದು ಮತ್ತು ಈ ಮೂಲಕ, ಮಮತಾ ಈ.ಡಿ. ವಿರುದ್ಧ ಮತ್ತು ಮೋದಿ ಸರಕಾರದ ವಿರುದ್ಧ ಮೊದಲ ಸುತ್ತಿನಲ್ಲಿ ಗೆದ್ದ ಹಾಗೆ ಕಾಣುತ್ತಿದೆ.

ಮುಂದಿನ ಸುತ್ತಿನಲ್ಲಿ ಏನಾಗುತ್ತದೆ ಎಂದು ಗೊತ್ತಿಲ್ಲ. ಆದರೆ, ಮಮತಾ ಬ್ಯಾನರ್ಜಿ ಸ್ಪಷ್ಟವಾಗಿ ಮೊದಲ ಸುತ್ತನ್ನು ಗೆದ್ದಿರುವುದಾಗಿ ವಿಶ್ಲೇಷಕರು ಹೇಳುತ್ತಿದ್ದಾರೆ.

ಮಮತಾ ಬ್ಯಾನರ್ಜಿ ನರೇಂದ್ರ ಮೋದಿ, ಅವರ ಈ.ಡಿ. ಮತ್ತು ಅವರ ಎಲ್ಲಾ ಸರಕಾರಿ ಸಂಸ್ಥೆಗಳನ್ನು ಸ್ಪಷ್ಟವಾಗಿ ಸೋಲಿಸಿದ್ದಾರೆ ಎಂಬುದು ಅವರ ಅಭಿಪ್ರಾಯ.

ದಿಲ್ಲಿಯಲ್ಲಿ ಅಮಿತ್ ಶಾ ಕಚೇರಿ ಎದುರು ಪ್ರತಿಭಟನೆ ನಡೆಸಿದ ಟಿಎಂಸಿ ಸಂಸದರು ನೇರವಾಗಿ ಶಾ ಅವರನ್ನು ಉಲ್ಲೇಖಿಸಿ ನಾಚಿಕೆಗೇಡು ಎಂದಿದ್ದನ್ನು ಗಮನಿಸಬೇಕು. ಬಂಗಾಳದ ರ್ಯಾಲಿ ಮೂಲಕವೂ ಬಿಜೆಪಿಯ ವಿರುದ್ಧವಾಗಿ ಈ ಆರೋಪಗಳನ್ನು ತಿರುಗಿಸಲಾಯಿತು.

ಬಿಜೆಪಿ ಸಂಪೂರ್ಣವಾಗಿ ಗೊಂದಲಕ್ಕೊಳಗಾಗಿದೆ ಮತ್ತು ಅದಕ್ಕಾಗಿಯೇ ಈ.ಡಿ. ದಾಳಿಗಳು ನಡೆದಿವೆ ಎಂದು ಆರೋಪಿಸಲಾಗಿದೆ. ಬಿಜೆಪಿ ಬಂಗಾಳ ಘಟಕ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಹೇಳಲು ಯತ್ನಿಸಲಾಗುತ್ತಿದೆ. ಟಿಎಂಸಿಯ ಎಲ್ಲಾ ಸಂಸದರು ಮತ್ತು ಎಲ್ಲಾ ಜನರು ಮಮತಾ ಬ್ಯಾನರ್ಜಿಯವರನ್ನು ಬೆಂಬಲಿಸುತ್ತಿದ್ದಾರೆ ಎಂದು ತಿಳಿಸುವ ಪ್ರಯತ್ನ ಈ ಮೂಲಕ ಆಗಿದೆ.

ಈ ಚುನಾವಣೆಗೆ ಟಿಎಂಸಿ ರೂಪಿಸಿರುವ ತಂತ್ರದಿಂದ ಬಿಜೆಪಿ ದಿಗ್ಭ್ರಮೆಗೊಂಡಿದೆ ಮತ್ತು ಬಿಜೆಪಿ ಅದನ್ನು ಎದುರಿಸಲು ಸಿದ್ಧವಾಗಿಲ್ಲ ಎಂಬಂತೆ ಬಿಂಬಿಸಲಾಗಿದೆ.

ಮಮತಾ ಬ್ಯಾನರ್ಜಿ ಮೂರು ಬಾರಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದು, ಈಗ ಮತ್ತೊಮ್ಮೆ ಹೋರಾಡಬೇಕಿರುವುದು ಸುಲಭದ ಕೆಲಸವಲ್ಲ. ನಾಲ್ಕನೇ ಬಾರಿಗೆ ಇಷ್ಟು ದೊಡ್ಡ ಪಕ್ಷದೊಂದಿಗೆ, ಅತ್ಯಂತ ಶ್ರೀಮಂತ ಪಕ್ಷದೊಂದಿಗೆ ಹೋರಾಡಬೇಕಿದೆ.

ಚುನಾವಣಾ ನಿಧಿಯಲ್ಲಿ ಸುಮಾರು ಶೇ. 85ಕ್ಕಿಂತ ಹೆಚ್ಚನ್ನು ಪಡೆಯುತ್ತಿರುವುದು ಬಿಜೆಪಿ. ಇಂತಹ ಶ್ರೀಮಂತ ಪಕ್ಷ, ಮಾತ್ರವಲ್ಲದೆ, ದೇಶಾದ್ಯಂತ ರಾಷ್ಟ್ರೀಯ ಸಂಸ್ಥೆಗಳ ಮೇಲೆ ನಿಯಂತ್ರಣ ಹೊಂದಿರುವುದು ಕೂಡ ಬಿಜೆಪಿಯೇ ಆಗಿದೆ. ಇದರ ಹೊರತಾಗಿಯೂ, ಬಿಜೆಪಿಯಲ್ಲಿ ಕಂಡುಬರುವ ಆತಂಕ ಈಗ ಎದ್ದುಕಾಣತೊಡಗಿದೆ.

ಈ ಒಟ್ಟಾರೆ ಬೆಳವಣಿಗೆ ಹೇಗೆ ಪಶ್ಚಿಮ ಬಂಗಾಳದ ಚುನಾವಣೆಗೆ ಮೊದಲು ರಾಜಕೀಯವಾಗಿ ಮುಖ್ಯವಾಗುತ್ತಿದೆ ಮತ್ತು ಅದು ಯಾವ ಬಗೆಯ ತಿರುವಿಗೆ ಕಾರಣವಾಗುತ್ತದೆ ಎನ್ನುವುದು ಕುತೂಹಲಕಾರಿಯಾಗಿದೆ.

ಮಮತಾ ಬ್ಯಾನರ್ಜಿ ಹುಟ್ಟುಹಾಕಿರುವ ಸಂಘರ್ಷ, ಈಗಾಗಲೇ ಪಶ್ಚಿಮ ಬಂಗಾಳ ಚುನಾವಣೆ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗಿರುವ ಭಾವನೆ ಮೂಡಿಸುವಂತಿದೆ.

ಪಶ್ಚಿಮ ಬಂಗಾಳಕ್ಕೆ ಈ.ಡಿ. ಕಳುಹಿಸುವ ಮೂಲಕ ಕೇಂದ್ರ ಸರಕಾರ ಮತ್ತು ಬಿಜೆಪಿ ಇದನ್ನು ಪ್ರಾರಂಭಿಸಿವೆ. ಆದರೆ ಇದು ಬಂಗಾಳದೊಳಗೆ ಕಾಣಿಸುತ್ತಿರುವ ರೀತಿ ಎಂಥದು ಎಂಬುದನ್ನು ಹಿರಿಯ ಪತ್ರಕರ್ತೆ ಅರ್ಫಾ ಖಾನುಮ್ ಶೇರ್ವಾನಿ ಅವರು ಬಂಗಾಳದ ಇಬ್ಬರು ಪತ್ರಕರ್ತರ ಅಭಿಪ್ರಾಯಗಳ ಮೂಲಕ ನೋಡಿದ್ದಾರೆ.

ಪತ್ರಕರ್ತೆ ಅಪರ್ಣಾ ಭಟ್ಟಾಚಾರ್ಯ ನೆನಪಿಸಿಕೊಳ್ಳುವ ಪ್ರಕಾರ,

ಕಳೆದ ವರ್ಷವೂ ಮಮತಾ ಬ್ಯಾನರ್ಜಿ ಈ ರೀತಿಯ ಎರಡು ಮೂರು ಕೆಲಸಗಳನ್ನು ಮಾಡಿದ್ದರು.

ಈ ಹಿಂದೆ ಕೆಲವೊಮ್ಮೆ ಅವರು ಕೇಂದ್ರ ಸರಕಾರದ ಪರವಾಗಿ ಮಾತಾಡಿದ್ದಿದೆ. ಈಗ ಚುನಾವಣಾ ಆಯೋಗ ಸೇರಿದಂತೆ ಎಲ್ಲಾ ಕೇಂದ್ರ ಸಂಸ್ಥೆಗಳು ಮತ್ತು ಕೇಂದ್ರ ಸರಕಾರ ಒಂದಾಗಲು ಪ್ರಯತ್ನಿಸುತ್ತಿವೆ. ಇದನ್ನು ವಿರೋಧಿಸುವುದು ಈಗ ಅವರಿಗೆ ಅನಿವಾರ್ಯವಾಗಿದೆ. ಇನ್ನೊಂದೆಡೆ ಅವರು ನಾಲ್ಕನೇ ಅವಧಿಗಾಗಿ ಹೊರಟಿದ್ದಾರೆ.

15 ವರ್ಷಗಳಿಂದ ಅವರು ಮುಖ್ಯಮಂತ್ರಿಯಾಗಿದ್ದಾರೆ. ಅವರ ಕೆಲಸ 15 ವರ್ಷಗಳಲ್ಲಿ ಮಾಡಿರಬೇಕಾದಷ್ಟು ಆಗಿಲ್ಲ ಎಂಬುದು ಕಾಣುತ್ತದೆ.

ಆದರೆ ಚುನಾವಣೆ ನಡೆಯುತ್ತಿರುವಾಗ, ಮಮತಾ ಬ್ಯಾನರ್ಜಿ ವಾಸ್ತವವಾಗಿ ಕೇಂದ್ರ ಸರಕಾರಕ್ಕೆ ವಿರೋಧ ಪಕ್ಷ ಎಂಬುದು ಸ್ಪಷ್ಟವಾಗುತ್ತಿದೆ.

ಅಮಿತ್ ಶಾ ವಿರುದ್ಧದ ಅವರ ಘೋಷಣೆಗಳು ಸಾಮಾನ್ಯವಾಗಿ ಯಾರಾದರೂ ಮಾಡಬಹುದಾದುದಕ್ಕಿಂತ ಭಿನ್ನವಾಗಿವೆ. ಅಮಿತ್ ಶಾ ಅವರನ್ನು ಮಮತಾ ಟಿಚಿughಣಥಿ ಎನ್ನುವುದು ಬಹಳ ದಿಟ್ಟ ಅಭಿಪ್ರಾಯ ಎಂದು ಅಪರ್ಣಾ ಹೇಳುತ್ತಾರೆ.

ಇದು ಈ.ಡಿ.ಗೆ ವಿರುದ್ಧ ಮಾತ್ರವಲ್ಲ, ಕೇಂದ್ರ ಸರಕಾರದ ವಿರುದ್ಧವೂ ಆಗಿದೆ ಎಂಬುದನ್ನು ನೋಡುವುದು ಮುಖ್ಯ.

ಸ್ವತಃ ಅಧಿಕಾರದಲ್ಲಿರುವ ಮಮತಾ ಅವರು, ಆಡಳಿತ ವಿರೋಧಿ ರಾಜಕೀಯವನ್ನು, ಅಂದರೆ ಕೇಂದ್ರ ಸರಕಾರದ ವಿರುದ್ಧ ರಾಜಕೀಯವನ್ನು ಪ್ರದರ್ಶಿಸುತ್ತಿದ್ದಾರೆ.

ಮಮತಾ ಬ್ಯಾನರ್ಜಿಯವರು ಎರಡು ರೀತಿಯ ಧ್ರುವೀಕರಣ ರಾಜಕೀಯದಿಂದ ಪ್ರಯೋಜನ ಪಡೆಯುವಂತೆ ಕಾಣುತ್ತಿದೆ.

ಮೊದಲು ಧ್ರುವೀಕರಣ ಸಂಪೂರ್ಣವಾಗಿ ಕೋಮು ಸ್ವರೂಪದ್ದಾಗಿತ್ತು. ಅದರಿಂದ ಮಮತಾ ಬ್ಯಾನರ್ಜಿ ಪ್ರಯೋಜನ ಪಡೆದಿದ್ದಾರೆ ಎಂದು ಅಪರ್ಣಾ ಹೇಳುತ್ತಾರೆ.

ಏಕೆಂದರೆ ಮುಸ್ಲಿಮ್ ಮತಗಳೇ ಮುಖ್ಯವಾದ 100ಕ್ಕೂ ಹೆಚ್ಚು ವಿಧಾನಸಭಾ ಸ್ಥಾನಗಳಿವೆ. ಆ ಮತಗಳು ಧ್ರುವೀಕರಣಗೊಂಡರೆ, ಅದರಲ್ಲಿ ಹೆಚ್ಚಿನವು ಮಮತಾ ಮತ್ತು ಟಿಎಂಸಿಗೆ ಹೋಗುತ್ತವೆ.

ಈಗ ಧ್ರುವೀಕರಣ ಮಮತಾಗೆ ಸಹಾಯ ಮಾಡುವುದಿಲ್ಲ ಎಂದಲ್ಲ. ಧ್ರುವೀಕರಣ ಅವರ ಪಾಲಿಗೆ ಒಳ್ಳೆಯದೇ ಆಗಿದೆ.

ಮಮತಾ ಬ್ಯಾನರ್ಜಿ ಬಹಳಷ್ಟು ಸಂದರ್ಭದಲ್ಲಿ ಸಾಫ್ಟ್ ಹಿಂದುತ್ವ ಅಳವಡಿಸಿಕೊಂಡಿದ್ದಾರೆ. ಜಗನ್ನಾಥ ದೇವಸ್ಥಾನ, ದುರ್ಗಾ ದೇವಸ್ಥಾನ ಮತ್ತು ಮಹಾಕಾಳ ದೇವಸ್ಥಾನಗಳ ನಿರ್ಮಾಣ ಯೋಜನೆಗಳೆಲ್ಲ ಸಾಫ್ಟ್ ಹಿಂದುತ್ವದ ವಿಧಾನವೆಂಬುದು ಸ್ಪಷ್ಟ. ಹಾಗಾಗಿ, ಬಿಜೆಪಿ ಅನುಸರಿಸಲು ಬಯಸುವ ಧ್ರುವೀಕರಣ ರಾಜಕೀಯ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಗೆ ಪ್ರಯೋಜನ ನೀಡುತ್ತದೆ.

ಅದೇ ವೇಳೆ ಅವರು ಈ.ಡಿ. ವಿರುದ್ಧ ಹೋರಾಡುವ ಮೂಲಕ ತಮ್ಮನ್ನು ಪಶ್ಚಿಮ ಬಂಗಾಳದ ದೊಡ್ಡ ನಾಯಕಿ ಅಥವಾ ಏಕೈಕ ನಾಯಕಿ ಎಂದು ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ.

ಇದು ಎಷ್ಟರ ಮಟ್ಟಿಗೆ ಬಿಜೆಪಿಯನ್ನು ಹಿಮ್ಮೆಟ್ಟಿಸಬಹುದು ಮತ್ತು ಮಮತಾ ಅವರಿಗೆ ಎಷ್ಟು ರಾಜಕೀಯ ಲಾಭ ತರಬಹುದು ಎಂಬುದು ಈಗಿನ ಪ್ರಶ್ನೆ.

Tags

Mamata Banerjee
share
ವಿನಯ್ ಕೆ.
ವಿನಯ್ ಕೆ.
Next Story
X