Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಟ್ರಂಪ್ ವಿರುದ್ಧ ಅಮೆರಿಕದಾದ್ಯಂತ “ನೋ...

ಟ್ರಂಪ್ ವಿರುದ್ಧ ಅಮೆರಿಕದಾದ್ಯಂತ “ನೋ ಕಿಂಗ್” ಬೃಹತ್ ಪ್ರತಿಭಟನೆಗಳು

ಕೆ.ಆರ್. ಶ್ರೀನಾಥ್, ಅಟ್ಲಾಂಟಕೆ.ಆರ್. ಶ್ರೀನಾಥ್, ಅಟ್ಲಾಂಟ22 Oct 2025 11:12 AM IST
share
ಟ್ರಂಪ್ ವಿರುದ್ಧ ಅಮೆರಿಕದಾದ್ಯಂತ “ನೋ ಕಿಂಗ್” ಬೃಹತ್ ಪ್ರತಿಭಟನೆಗಳು

ಶನಿವಾರ,ಅಕ್ಟೋಬರ್ 18, 2025ರಂದು ಅಮೆರಿಕಾದ 50 ರಾಜ್ಯಗಳಲ್ಲಿ ಸುಮಾರು 2700 ನಗರಗಳಲ್ಲಿ ಅಧ್ಯಕ್ಷ ಟ್ರಂಪ್ ಅವರ ಸರ್ವಾಧಿಕಾರಿ ಧೋರಣೆಗಳನ್ನು ಖಂಡಿಸಿ ಸುಮಾರು 7 ಮಿಲಿಯನ್ (70 ಲಕ್ಷ) ಅಮೆರಿಕನ್ನರು ಶಾಂತಿಯುತವಾಗಿ ಪ್ರತಿಭಟಿಸಿಸಿದರು. ಈ ಪ್ರತಿಭಟನೆಯಲ್ಲಿ ಭಾಗವಹಿಸುವವರು ಹಳದಿ ಬಣ್ಣದ ಬಟ್ಟೆ ಧರಿಸಬೇಕೆಂದು ಮನವಿ ಮಾಡಲಾಗಿತ್ತು. ಈ ಪ್ರತಿಭಟನೆಯು ಅಮೆರಿಕದ ಇತಿಹಾಸದಲ್ಲಿಯೇ ಅತಿ ದೊಡ್ಡ ಒಂದು ದಿನದ ಪ್ರತಿಭಟನೆಯೆಂದು ದಾಖಲಾಗಿದೆ. ಈ ಹಿಂದೆ ಇಷ್ಟೊಂದು ಸಂಖ್ಯೆಯ ಜನರು ಅಮೆರಿಕದಲ್ಲಿ ಒಂದೇ ದಿನದಲ್ಲಿ ಎಂದಿಗೂ ಸೇರಿರಲಿಲ್ಲ.

ಎರಡು ಬಾರಿ ಟ್ರಂಪ್ ಅಧಿಕಾರ ಸ್ವೀಕರಿಸಿದ ಎರಡೂ ಸಮಾರಂಭಗಳ ಒಟ್ಟು ಸಂಖ್ಯೆಯ 14 ಪಟ್ಟು ಹೆಚ್ಚಿನ ಜನರು ಟ್ರಂಪ್ ವಿರುದ್ಧದ ಈ ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದರು. ಈ ಹಿಂದೆ, ಜೂನ್ 14, 2025 ರಂದು ಇದೇ ರೀತಿಯ ಮೊದಲ ಪ್ರತಿಭಟನೆ ನಡೆದಾಗ ಸುಮಾರು 5 ಮಿಲಿಯನ್(50 ಲಕ್ಷ) ಅಮೆರಿಕನ್ನರು ಪ್ರತಿಭಟಿಸಿದ್ದರು.

ಅಮೆರಿಕದ ನಗರಗಳಿಗೆ ಆ ರಾಜ್ಯಗಳ ಬೇಡಿಕೆಯಿಲ್ಲದೆ ಹಾಗೂ ಅನುಮತಿಯಿಲ್ಲದೆ ‘ನ್ಯಾಷನಲ್ ಗಾರ್ಡ್’ ಸೈನಿಕರನ್ನು ಕಳುಹಿಸಿ ವಿರೋಧ ಪಕ್ಷಗಳ ಅಧಿಕಾರವಿರುವ ರಾಜ್ಯಗಳ ಗವರ್ನರ್ ಗಳನ್ನು ಬೆದರಿಸುವುದು, ಅನಿವಾಸಿ ಸಮುದಾಯದಲ್ಲಿ ‘ICE’(Immigration and Customs Enforcement) ಮಾಸ್ಕ್ ಧರಿಸಿದ ಅಧಿಕಾರಿಗಳನ್ನು ಕಳುಹಿಸಿ ಭಯದ ವಾತಾವರಣ ಸೃಷ್ಟಿಸುವುದು, ತನ್ನ ನೆಚ್ಚಿನ ಕೆಲವೇ ಉದ್ಯೋಗಪತಿ ಸ್ನೇಹಿತರಿಗೆ ಲಾಭ ಆಗುವಂತಹ ನೀತಿಗಳನ್ನು ರೂಪಿಸುವುದು, ಆಯವ್ಯಯಕ್ಕೆ (Budget) ಸಂವಿಧಾನದ ಅಂಗೀಕಾರವಿಲ್ಲದೆ ಇಲ್ಲಿಯವರೆಗೂ 21 ದಿನಗಳಿಂದ ಮುಚ್ಚಿರುವ ಕೇಂದ್ರ ಸರಕಾರದ ಹಲವು ಕಛೇರಿಗಳು ಹಾಗೂ ಸಂಬಳರಹಿತ ಕೆಲಸ ಮಾಡುತ್ತಿರುವ ಫೆಡರಲ್ ನೌಕರರ ಸಂಕಷ್ಟ, ಮತದಾನದ ಜಿಲ್ಲೆಯ ನಕ್ಷೆಯನ್ನು ತನ್ನ ಪಕ್ಷಕ್ಕೆ ಲಾಭವಾಗುವ ರೀತಿ ಮಾರ್ಪಡಿಸುವುದು(Gerrymandering), ಶಿಕ್ಷಣ, ಆರೋಗ್ಯ ಹಾಗೂ ಪರಿಸರ ಸಂರಕ್ಷಣೆಗೆ ಮೀಸಲಿಟ್ಟ ಹಣವನ್ನು ಕಡಿಮೆ ಮಾಡುವುದು, ಟ್ರಂಪ್ ಕುಟುಂಬದ ಸುತ್ತ ಹೆಚ್ಚುತ್ತಿರುವ ಭ್ರಷ್ಟಾಚಾರ, ಹುಚ್ಚು ವಿದೇಶಾಂಗ ನೀತಿ ಹಾಗೂ ಸುಂಕದ ಪರಿಣಾಮದಿಂದ ಹೆಚ್ಚುತ್ತಿರುವ ಆರ್ಥಿಕ ಹಿಂಜರಿತ, ಹೀಗೆ ಹತ್ತು ಹಲವು ಸರ್ವಾಧಿಕಾರಿ ನಿರ್ಣಯಗಳ ವಿರುದ್ಧ ಅಮೆರಿಕನ್ನರು ಬೀದಿಗಿಳಿದು ಶಾಂತಿಯುತವಾಗಿ ಪ್ರತಿಭಟಿಸಿದರು.

‘ಸಿಂಹಾಸನ, ಕಿರೀಟ ಹಾಗೂ ರಾಜನು’ ಬೇಡವೆಂದು ಜನರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಯಾಗಿ ಟ್ರಂಪ್ ತನ್ನ ಸೋಷಿಯಲ್ ಮೀಡಿಯಾದ ಅಕೌಂಟ್ ನಲ್ಲಿ ಪ್ರತಿಭಟನಾಕಾರರ ವಿರುದ್ಧ A I ಸೃಷ್ಟಿ ಮಾಡಿದ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆ. ಆ ವೀಡಿಯೊದಲ್ಲಿ ಕಿರೀಟ ಧರಿಸಿದ ರಾಜನಂತೆ ತಾನೇ ಯುದ್ಧ ವಿಮಾನದ ಮೂಲಕ ಪ್ರತಿಭಟನಾಕಾರರ ತಲೆಯ ಮೇಲೆ ಹೊಲಸನ್ನು ಸುರಿಯುತ್ತಿದ್ದಾರೆ. ಇನ್ನಿತರ ಟ್ರಂಪ್ ಬೆಂಬಲಿಸುವ ಅಧಿಕಾರಿಗಳು ಈ ಪ್ರತಿಭಟಿಸುವ ಅಮೆರಿಕನ್ನರನ್ನು “ಹಮಾಸ್” “ದೇಶದ್ರೋಹಿಗಳು” “ಅಕ್ರಮ ನುಸುಳುಕೋರರು” ಎಂದು ಬಿಂಬಿಸಿದ್ದಾರೆ.

ಈ ಪ್ರತಿಭಟನೆಯಿಂದ 2026 ರ ನವೆಂಬರ್ ತಿಂಗಳಿನಲ್ಲಿ ನಡೆಯುವ ಕೆಲವು ಮಧ್ಯಂತರ ಸಂಸತ್ ಚುನಾವಣೆಗಳಲ್ಲಿ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷಕ್ಕೆ ಸೋಲಿನ ಭೀತಿ ಇದೆಯೆಂದು ಅದೇ ಪಕ್ಷದ ಸಂಸತ್ ಸದಸ್ಯರು ಭಯಭೀತರಾಗಿದ್ದಾರೆ. ಆದರೆ, ಟ್ರಂಪ್ ವಿರುದ್ಧ ಧ್ವನಿ ಎತ್ತಿದರೆ ತಮ್ಮ ರಾಜಕೀಯ ಭವಿಷ್ಯ ಅಂತ್ಯಗೊಳ್ಳಲಿದೆಯೆಂಬ ಭಯದಿಂದ ಮೌನವಹಿಸಿದ್ದಾರೆ. ಈ ಭಯದ ವಾತಾವರಣದಿಂದ ಅಧಿಕಾರಿಗಳು, ನ್ಯಾಯಾಂಗ, ಪ್ರಜೆಗಳು, ಸುದ್ದಿ ಮಾಧ್ಯಮ ಟ್ರಂಪ್ ವಿರುದ್ಧ ಧ್ವನಿಯೆತ್ತದೆ ಮೌನ ವಹಿಸಿದೆ.

ಟ್ರಂಪ್, ತನ್ನ ವಿರುದ್ಧವಾಗಿರುವ ಶಿಕ್ಷಣ ಸಂಸ್ಥೆಗಳು(ಹಾರ್ವರ್ಡ್, ಕೊಲಂಬಿಯ, ಇತರೆ), ಟಿವಿ ಚಾನೆಲ್ ಗಳು(NBC, CNN,CBS, ABC News ಇತರೆ), ಸುದ್ದಿ ಸಂಸ್ಥೆಗಳು (ವಾಲ್ ಸ್ಟ್ರೀಟ್ ಜರ್ನಲ್, ಅಟ್ಲಾಂಟಿಕ್, NPR, AP) ಇವುಗಳ ವಿರುದ್ಧ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ದ್ವೇಷದ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಹಲವರ ವಿರುದ್ಧ ಮಿಲಿಯನ್ ಗಟ್ಟಲೆ ಮಾನ ನಷ್ಟ ಮೊಕದ್ದಮೆಗಳನ್ನು ಹೂಡಿದ್ದಾರೆ. ಇದರಿಂದ ತನ್ನ ವಿರೋಧಿ ಧ್ವನಿಯನ್ನು ದಮನಿಸಲು ಪ್ರಯತ್ನಿಸುತ್ತಿದ್ದಾರೆ.

ಹಿಂದಿನ ಆಡಳಿತಗಳಲ್ಲಿ ಕೆಲಸ ಮಾಡಿ ತನ್ನ ವಿರುದ್ಧ ಧ್ವನಿ ಎತ್ತಿದ ಜಾನ್ ಬೋಲ್ಟನ್(ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ), ಜೇಮ್ಸ್ ಕೋಮಿ(ಮಾಜಿ ಎಫ್.ಬಿ.ಐ ನಿರ್ದೇಶಕ), ಜ್ಯಾಕ್ ಸ್ಮಿತ್(ಟ್ರಂಪ್ ವಿರುದ್ಧ ತನಿಖೆ ನಡೆಸಿದ ವಿಷೇಶ ಪ್ರಾಸಿಕ್ಯೂಟರ್), ನ್ಯೂಯಾರ್ಕ್ ರಾಜ್ಯದಲ್ಲಿ ಪ್ರಸ್ತುತ ಅಟಾರ್ನಿ ಜನರಲ್ ಆಗಿರುವ ಲೆಟೀಶ ಜೇಮ್ಸ್, ಪ್ರಸ್ತುತ ಫೆಡೆರಲ್ ರಿಸರ್ವ್ ಗವರ್ನರ್ ಆಗಿರುವ ಲೀಸಾ ಕುಕ್, ಹೀಗೆ ಹಲವರ ವಿರುದ್ದ ಕೇಸು ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಇದರಲ್ಲಿ ಹೆಚ್ಚಿನವು ಹುರುಳಿಲ್ಲದ ದ್ವೇಷದ ಕೇಸುಗಳೆಂದು ಹಾಗೂ ನ್ಯಾಯಾಲಯದ ಪರೀಕ್ಷೆಯಲ್ಲಿ ನಿಲ್ಲುವುದಿಲ್ಲವೆಂದು ಅನೇಕ ಕಾನೂನು ತಜ್ಞರು ವ್ಯಾಖ್ಯಾನಿಸಿದ್ದಾರೆ.

ಈ ‘ನೋ ಕಿಂಗ್’ ಪ್ರತಿಭಟನೆಯನ್ನು ಇನ್ನೂ ಹೆಚ್ಚು ತೀವ್ರಗೊಳಿಸಲು ಇಚ್ಛಿಸುತ್ತೇವೆಂದು ಆಯೋಜಕರು ಘೋಷಿಸಿದ್ದಾರೆ. ಅಮೆರಿಕದ ಜನಸಂಖ್ಯೆಯ 3.5% ಜನರನ್ನು ಈ ಪ್ರತಿಭಟನೆಯ ಭಾಗವಾಗಿಸುವ ಗುರಿಯಿದೆಯೆಂದು ಆಯೋಜಕರು ತಿಳಿಸಿದ್ದಾರೆ. ಇದರಿಂದ ದೇಶದಲ್ಲಿ ಸರ್ವಾಧಿಕಾರದ ವಿರುದ್ಧ ಧ್ವನಿ ಹೆಚ್ಚಾಗಿ ಪ್ರಜಾಪ್ರಭುತ್ವದ ರಕ್ಷಣೆಯಾಗವುದೆಂದು ಆಯೋಜಕರು ತಿಳಿಸಿದ್ದಾರೆ.

ರಾಷ್ಟ್ರದ ರಾಜಧಾನಿ ವಾಷಿಂಗ್ಟನ್ ಡಿ.ಸಿ ಯಲ್ಲಿ ಸೇರಿದ್ದ 2.5 ಲಕ್ಷ ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಂಸತ್ ಸದಸ್ಯರಾದ ಬರ್ನಿ ಸ್ಯಾಂಡರ್ಸ್ ಹಾಗೂ ಅಲೆಕ್ಸಾಂಡ್ರಿಯ ಒಕಾಸಿಯೊ ಕಾರ್ಟೆಜ್ ಭಾಷಣ ಮಾಡಿದರು.

share
ಕೆ.ಆರ್. ಶ್ರೀನಾಥ್, ಅಟ್ಲಾಂಟ
ಕೆ.ಆರ್. ಶ್ರೀನಾಥ್, ಅಟ್ಲಾಂಟ
Next Story
X