Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಹಾಲು ಜನರಿಗೆ ‘ಹಾಲಾಹಲ’ವಾಗದಿರಲಿ

ಹಾಲು ಜನರಿಗೆ ‘ಹಾಲಾಹಲ’ವಾಗದಿರಲಿ

ಸುರೇಂದ್ರ ಪೈ ಭಟ್ಕಳಸುರೇಂದ್ರ ಪೈ ಭಟ್ಕಳ4 Nov 2026 4:17 PM IST
share
ಹಾಲು ಜನರಿಗೆ ‘ಹಾಲಾಹಲ’ವಾಗದಿರಲಿ

ಪ್ರತಿದಿನ ಬೆಳಗ್ಗೆ ಕೋಟ್ಯಂತರ ಜನರು ತಮ್ಮ ಇಡೀ ದಿನದ ಚಟುವಟಿಕೆಗಳನ್ನು ಆರಂಭಿಸುವುದೇ ಒಂದು ಕಪ್ ಹಾಲಿನೊಂದಿಗೆ! ಅಂದರೆ ನಾವು ಸೇವಿಸುವ ಕಾಫಿಯಾಗಿರಲಿ, ಟೀ ಆಗಿರಲಿ ಹಾಲು ಬೆರೆಯಲೇ ಬೇಕು. ಆದರೆ, ಪ್ರಸ್ತುತ ಹಾಲಿನ ದರ ಲೀಟರ್‌ಗೆ ರೂ. 8 ಏರಿಕೆಯಾಗಿರುವುದು ಜನಸಾಮಾನ್ಯರು ಅದರಲ್ಲೂ ಮಧ್ಯಮ ಹಾಗೂ ಬಡ ವರ್ಗದವರ ಪಾಲಿಗೆ ದೊಡ್ಡ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಅದರಲ್ಲೂ ಬೇಸರದ ವಿಷಯವೆಂದರೆ, ಹೆಚ್ಚು ಹಣ ಕೊಟ್ಟು ನಾವು ಖರೀದಿಸುತ್ತಿರುವ ಹಾಲಿನಲ್ಲಿ ವಿಷಕಾರಿ ಅಂಶಗಳು ಮತ್ತು ಕಲಬೆರಕೆ ಎಲ್ಲೆಡೆ ಪತ್ತೆಯಾಗುತ್ತಿರುವುದು. ಬೆಳಗಿನ ಚೈತನ್ಯದ ಪ್ರತೀಕವಾಗಬೇಕಾದ ಹಾಲು, ವ್ಯವಸ್ಥೆಯ ಲೋಪದಿಂದಾಗಿ ಜನರಿಗೆ ‘ಹಾಲಾಹಲ’ವಾಗುವ ಆತಂಕ ಎದುರಾಗಿದೆ. ಇಂತಹ ಸಂದರ್ಭದಲ್ಲಿ, ಹೆಚ್ಚು ಹಣ ನೀಡಿ ಖರೀದಿಸುತ್ತಿರುವ ಹಾಲು ನಿಜಕ್ಕೂ ಎಷ್ಟು ಸುರಕ್ಷಿತ? ಜನಸಾಮಾನ್ಯರ ಆರೋಗ್ಯದೊಂದಿಗೆ ನಡೆಯುತ್ತಿರುವ ಈ ಚೆಲ್ಲಾಟಕ್ಕೆ ಹೊಣೆ ಯಾರು? ಎಂಬ ಗಂಭೀರ ಪ್ರಶ್ನೆಗಳು ಮೂಡುತ್ತಿವೆ. ಈ ನಿಟ್ಟಿನಲ್ಲಿ, ಹಾಲಿನ ಗುಣಮಟ್ಟದ ಕುಸಿತದ ಹಿಂದಿನ ವಾಸ್ತವಗಳು, ಉತ್ಪಾದನೆ-ಬೇಡಿಕೆಯ ಅಂಕಿ-ಅಂಶಗಳು, ಜಾನುವಾರುಗಳ ಆರೋಗ್ಯ ಹಾಗೂ ದರ ನಿಗದಿಯ ಆರ್ಥಿಕ ಆಯಾಮಗಳನ್ನು ಆಳವಾಗಿ ಪರಿಶೀಲಿಸುವುದು ಅನಿವಾರ್ಯವಾಗಿದೆ.

ಕೇಂದ್ರ ಸರಕಾರದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ 2024-25ರ ಸಾಲಿನ ವಾರ್ಷಿಕ ಹಾಲು ಉತ್ಪಾದನೆಯು ಸುಮಾರು 24.78 ಕೋಟಿ ಟನ್ (247.87 ಮಿಲಿಯನ್ ಟನ್) ಆಗಿದೆ. ಭಾರತವು ಜಾಗತಿಕವಾಗಿ ಅತಿ ಹೆಚ್ಚು ಹಾಲು ಉತ್ಪಾದಿಸುವ ದೇಶವಾಗಿದ್ದು, ವಿಶ್ವದ ಒಟ್ಟು ಹಾಲು ಉತ್ಪಾದನೆಯಲ್ಲಿ ಶೇ. 25ರಷ್ಟು ಪಾಲನ್ನು ಹೊಂದಿದೆ. ಆದರೂ ದೇಶದ ಆಂತರಿಕ ಮಾರುಕಟ್ಟೆಯಲ್ಲಿ ಬೇಡಿಕೆ ಮತ್ತು ಪೂರೈಕೆಯ ಸಮತೋಲನವು ನಿರಂತರ ಸವಾಲನ್ನು ಎದುರಿಸುತ್ತಿದೆ.

ಕರ್ನಾಟಕದಂತಹ ರಾಜ್ಯಗಳಲ್ಲಿ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ಪ್ರತೀದಿನ ಸರಾಸರಿ 85ರಿಂದ 90 ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸುತ್ತಿದ್ದು, ಬೇಸಿಗೆ ಹಾಗೂ ಹಬ್ಬದ ಸಂದರ್ಭಗಳಲ್ಲಿ ಈ ಬೇಡಿಕೆ 1 ಕೋಟಿ ಲೀಟರ್ ಗಡಿಯನ್ನು ಮುಟ್ಟುತ್ತದೆ. ಆದರೆ, ಈ ಅಂಕಿ-ಅಂಶಗಳಿಗೂ ಮತ್ತು ತಳಮಟ್ಟದಲ್ಲಿ ಲಭ್ಯವಿರುವ ನೈಜ ಪೂರೈಕೆಗೂ ವ್ಯತ್ಯಾಸವಿದೆ. ಉತ್ಪಾದನಾ ವೆಚ್ಚ ಹೆಚ್ಚಿರುವ ಕಾರಣ ಸಣ್ಣ ಹಾಗೂ ಮಧ್ಯಮ ಹೈನುಗಾರರು ಈ ವಲಯದಿಂದ ಹಿಂದೆ ಸರಿಯುತ್ತಿದ್ದಾರೆ. ಪೂರೈಕೆಯಲ್ಲಿ ಉಂಟಾಗುವ ಈ ಏರಿಳಿತವೇ ಕೃತಕ ಕೊರತೆ ಹಾಗೂ ಕಲಬೆರಕೆ ಜಾಲಗಳಿಗೆ ಪ್ರಮುಖ ದ್ವಾರವಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ನಡೆಸಿದ ತಪಾಸಣೆ ಹಾಗೂ ವಿವಿಧ ವೈಜ್ಞಾನಿಕ ವರದಿಗಳ ಪ್ರಕಾರ, ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಹಾಲು ನಿರೀಕ್ಷಿತ ಗುಣಮಟ್ಟವನ್ನು ಕಳೆದುಕೊಳ್ಳುತ್ತಿದೆ. ಕೇವಲ ಪ್ರಮಾಣ ಹೆಚ್ಚಿಸುವ ಭರದಲ್ಲಿ ಹಾಲಿನ ಮೂಲ ಸ್ವರೂಪವೇ ಬದಲಾಗುತ್ತಿರುವುದು ಆತಂಕಕಾರಿ.

ಹಾಲಿನಲ್ಲಿ ಕೊಬ್ಬಿನಂಶ ಹಾಗೂ ನೊರೆಯನ್ನು ಕಾಯ್ದುಕೊಳ್ಳಲು ಡಿಟರ್ಜೆಂಟ್ ಮತ್ತು ಯೂರಿಯಾವನ್ನು ಬೆರೆಸಲಾಗುತ್ತಿದೆ. ಇದು ಜಠರ ಮತ್ತು ಕರುಳಿನ ಒಳಪದರವನ್ನು ಸುಟ್ಟುಹಾಕುತ್ತದೆ. ಇದರೊಂದಿಗೆ ಯೂರಿಯಾ, ಕಾಸ್ಟಿಕ್ ಸೋಡಾ ಮತ್ತು ಎಣ್ಣೆ ಬಳಸಿ ತಯಾರಿಸುವ ಸಿಂಥೆಟಿಕ್ ಮಿಲ್ಕ್ (ಕೃತಕ ಹಾಲು) ಅಸಲಿ ಹಾಲಿನೊಂದಿಗೆ ದೊಡ್ಡ ಪ್ರಮಾಣದಲ್ಲಿ ಬೆರೆಸಿ ಮಾರುಕಟ್ಟೆಗೆ ಬಿಡಲಾಗುತ್ತಿದೆ. ಜಾನುವಾರುಗಳಿಗೆ ನೀಡುವ ಕಳಪೆ ಹಾಗೂ ಶಿಲೀಂಧ್ರಯುಕ್ತ ಮೇವಿನಿಂದಾಗಿ ಹಾಲಿನಲ್ಲಿ ಅಫ್ಲಾಟಾಕ್ಸಿನ್ ಎನ್ನುವ ಕ್ಯಾನ್ಸರ್ ಕಾರಕ ವಿಷಕಾರಿ ಅಂಶ ಸೇರಿಕೊಳ್ಳುತ್ತಿರುವುದು ವೈಜ್ಞಾನಿಕ ಪರೀಕ್ಷೆಗಳಲ್ಲಿ ದೃಢಪಟ್ಟಿದೆ.

ಹಾಲು ಬೇಗ ಕೆಡದಂತೆ ತಡೆಯಲು ಫಾರ್ಮಾಲಿನ್ ಮತ್ತು ಹೈಡ್ರೋಜನ್ ಪೆರಾಕ್ಸೈಡ್‌ನಂತಹ ಹಾನಿಕಾರಕ ರಾಸಾಯನಿಕಗಳನ್ನು ಬಳಸಲಾಗುತ್ತಿದ್ದು, ಇದು ಮಕ್ಕಳ ಹಾಗೂ ವೃದ್ಧರ ಆರೋಗ್ಯದ ಮೇಲೆ ನೇರ ದುಷ್ಪರಿಣಾಮ ಬೀರುತ್ತಿದೆ. ಹೀಗೆ ನಾನಾ ವಿಧಾನಗಳ ಮೂಲಕ ಹಾಲು ಹಾಲಾಹಲವಾಗಿ ಪರಿವರ್ತನೆಯಾಗುತ್ತಿದೆ.

ಹೀಗಿರುವಾಗ ಹಾಲಿನ ದರವನ್ನು ದಿಢೀರನೆ ರೂ. 8 ಹೆಚ್ಚಿಸಿರುವುದು ಗ್ರಾಹಕರ ಮಾಸಿಕ ಬಜೆಟ್ ಅನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ. ಈ ದರ ಏರಿಕೆಗೆ ಸರಕಾರ ಮತ್ತು ಒಕ್ಕೂಟಗಳು ನೀಡುವ ಮುಖ್ಯ ಸಮರ್ಥನೆ ಪಶು ಆಹಾರದ ಬೆಲೆ ಏರಿಕೆಯಿಂದ ತತ್ತರಿಸಿರುವ ಹೈನುಗಾರ ರೈತರ ರಕ್ಷಣೆ.

ಆದರೆ ಇಲ್ಲಿ ಗಮನಿಸಬೇಕಾದ ಪ್ರಮುಖ ಸಂಗತಿಯೆಂದರೆ, ಗ್ರಾಹಕ ತೆತ್ತ ಹೆಚ್ಚುವರಿ ಹಣದ ಸಂಪೂರ್ಣ ಪ್ರಯೋಜನ ರೈತನಿಗೆ ಸಿಗುತ್ತಿದೆಯೇ? ಎಂಬುದು. ಪಶು ಆಹಾರದ ಬೆಲೆ ಶೇ. 30ರಷ್ಟು ಹೆಚ್ಚಾಗಿದೆ. ಚರ್ಮ ಗಂಟು ರೋಗದಂತಹ ಸಾಂಕ್ರಾಮಿಕಗಳಿಂದಾಗಿ ಜಾನುವಾರುಗಳ ನಿರ್ವಹಣಾ ವೆಚ್ಚ ದುಬಾರಿಯಾಗಿದೆ. ಆದರೆ ಮಧ್ಯವರ್ತಿಗಳ ಹಾವಳಿ ಹಾಗೂ ಸಂಸ್ಕರಣಾ ವೆಚ್ಚಗಳ ಅತಿಯಾದ ಹೊರೆಯಿಂದಾಗಿ, ಗ್ರಾಹಕ ಪಾವತಿಸುವ ಹಣದ ದೊಡ್ಡ ಮೊತ್ತ ರೈತನ ಕೈ ಸೇರುತ್ತಿಲ್ಲ. ಪರಿಣಾಮವಾಗಿ, ಗ್ರಾಹಕ ಹೆಚ್ಚಿನ ಹಣ ತೆತ್ತರೂ ಉತ್ತಮ ಗುಣಮಟ್ಟದ ಹಾಲನ್ನು ಪಡೆಯಲು ವಿಫಲನಾಗುತ್ತಿದ್ದಾನೆ.

ಈ ಬಿಕ್ಕಟ್ಟಿಗೆ ಕೇವಲ ದರ ನಿಯಂತ್ರಣದಿಂದ ಪರಿಹಾರ ಸಿಗುವುದಿಲ್ಲ. ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗಳಾಗಬೇಕು. ಗ್ರಾಮ ಮಟ್ಟದಿಂದಲೂ ಪ್ರತೀ ಹಾಲಿನ ಉತ್ಪಾದನಾ ಹಾಗೂ ಸಂಗ್ರಹಣಾ ಕೇಂದ್ರದಲ್ಲೇ ಡಿಜಿಟಲ್ ಪರೀಕ್ಷಾ ಯಂತ್ರಗಳನ್ನು ಕಡ್ಡಾಯಗೊಳಿಸಿ, ರಾಸಾಯನಿಕಯುಕ್ತ ಹಾಲು ಹೊರಬರದಂತೆ ತಡೆಯಬೇಕು. ಕಲಬೆರಕೆ ಮತ್ತು ವಿಷಕಾರಿ ಅಂಶಗಳನ್ನು ಬೆರೆಸುವ ಜಾಲಗಳ ವಿರುದ್ಧ ಜಾಮೀನು ರಹಿತ ಸೆಕ್ಷನ್‌ಗಳಡಿ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಗ್ರಾಹಕರ ಮೇಲೆ ನೇರವಾಗಿ ಬೆಲೆ ಏರಿಕೆಯ ಬರೆ ಎಳೆಯುವ ಬದಲು, ಸರಕಾರವೇ ಪಶು ಆಹಾರ ಮತ್ತು ಜಾನುವಾರು ವಿಮೆಗಳ ಮೇಲೆ ನೇರ ಸಬ್ಸಿಡಿ ನೀಡುವ ಮೂಲಕ ಹೈನುಗಾರಿಕೆಯನ್ನು ಬೆಂಬಲಿಸಬೇಕು. ಹಾಲಿನ ಶುದ್ಧತೆಯನ್ನು ಪರೀಕ್ಷಿಸುವ ಸರಳ ವಿಧಾನಗಳ ಕುರಿತು ಸಾರ್ವಜನಿಕರಿಗೆ ನಿರಂತರ ಅರಿವು ಮೂಡಿಸಬೇಕು.

ಸರಕಾರ ಮತ್ತು ಒಕ್ಕೂಟಗಳ ಸೂಕ್ತ ಮಾರುಕಟ್ಟೆ ನಿರ್ವಹಣೆಯ ಕೊರತೆಯೇ ಈ ಅಸಮಂಜಸ ದರ ಏರಿಕೆಯ ಮೂಲವಾಗಿದೆ. ರೈತರಿಗೆ ನ್ಯಾಯಯುತ ಬೆಲೆ ಸಿಗಬೇಕು ಎಂಬುದು ಎಷ್ಟು ಸತ್ಯವೋ, ಅಷ್ಟೇ ಸತ್ಯವಾಗಿ ಗ್ರಾಹಕನಿಗೆ ಕೈಗೆಟಕುವ ದರದಲ್ಲಿ ಶುದ್ಧ ಹಾಲು ಸಿಗಬೇಕು.

ಇಂದಿನ ಪರಿಸ್ಥಿತಿ ನೋಡುವಾಗ ನೆನಪಾಗುವುದು ಮಹಾಭಾರತದ ಒಂದು ಪ್ರಸಂಗ. ಅಂದು ಗುರು ದ್ರೋಣಾಚಾರ್ಯರು ಬಡತನದ ದಾರಿದ್ರ್ಯದ ಕಾರಣ ತನ್ನ ಮಗ ಅಶ್ವತ್ಥಾಮನಿಗೆ ಅಕ್ಕಿ ಹಿಟ್ಟಿನ ನೀರನ್ನೇ ಹಾಲು ಎಂದು ಕುಡಿಸಿದರು. ಆದರೆ ಅದು ಹಾಲಾಹಲವಾಗಿರಲಿಲ್ಲ. ಇಂದಿನ ವಿಪರ್ಯಾಸ ನೋಡಿ. ಲೀಟರ್‌ಗೆ ಎಂಟು ರೂಪಾಯಿ ಹೆಚ್ಚು ತೆತ್ತು, ಮಕ್ಕಳ ಬಾಯಿಗೆ ಅಮೃತದ ಬದಲು ಹಾಲಾಹಲ ಸುರಿಯಬೇಕಾದ ಅಸಹಾಯಕತೆ. ರೈತರ ಹೆಸರಿನಲ್ಲಿ ಮಧ್ಯವರ್ತಿಗಳು, ಹಾಲಿನಒಕ್ಕೂಟಗಳು ಸಿರಿವಂತರಾಗುತ್ತಿದ್ದಾರೆ. ಆದರೆ ಗ್ರಾಹಕ ಮತ್ತು ರೈತನಿಗೆ ಮಾತ್ರ ನ್ಯಾಯ ಮರಿಚೀಕೆಯಾಗಿಯೇ ಉಳಿದಿದೆ. ಇದಕ್ಕೆ ಕೊನೆ ಎಂದು?

Tags

milk
share
ಸುರೇಂದ್ರ ಪೈ ಭಟ್ಕಳ
ಸುರೇಂದ್ರ ಪೈ ಭಟ್ಕಳ
Next Story
X