Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಬಡತನದ ಮಾಪನ: ಅವೈಜ್ಞಾನಿಕ ಮಾನದಂಡಗಳು

ಬಡತನದ ಮಾಪನ: ಅವೈಜ್ಞಾನಿಕ ಮಾನದಂಡಗಳು

ಬಿ. ಶ್ರೀಪಾದ ಭಟ್ಬಿ. ಶ್ರೀಪಾದ ಭಟ್10 Nov 2026 11:48 AM IST
share
ಬಡತನದ ಮಾಪನ: ಅವೈಜ್ಞಾನಿಕ ಮಾನದಂಡಗಳು

ನವ ಉದಾರೀಕರಣದ ಮೂವತ್ತಾರು ವರ್ಷಗಳ ನಂತರ ಭಾರತವು ಇಂದು ವಿಶ್ವದ ಕೆಲವು ಅತಿ ಶ್ರೀಮಂತ ವ್ಯಕ್ತಿಗಳಿಗೆ ತಂಗುದಾಣವಾಗಿದೆ, ಅವರನ್ನು ಪ್ರೋತ್ಸಾಹಿಸುವ ದೇಶವಾಗಿದೆ. ಇದೇ ಸಂದರ್ಭದಲ್ಲಿ ಗಣನೀಯ ಪ್ರಮಾಣದ ಜನಸಂಖ್ಯೆ ಬಡತನದಲ್ಲಿ ಬದುಕುತ್ತಿದೆ. ಇದಕ್ಕಾಗಿ ಮೊದಲಿಗೆ ಬಡತನವನ್ನು ಕೇವಲ ಖರ್ಚುವೆಚ್ಚ ಹೆಚ್ಚು/ಕಡಿಮೆ, ಆದಾಯದ ಕೊರತೆ ಎಂದು ಸಂಕುಚಿತವಾಗಿ ವ್ಯಾಖ್ಯಾನಿಸುವುದನ್ನು ಕೈಬಿಡಬೇಕು.

ಅಕ್ಟೋಬರ್ 2026ರಂದು ವಿಶ್ವಬ್ಯಾಂಕ್‌ನ ಬಡತನ ಮತ್ತು ಸಮಾನತೆಯ ವರದಿಯ ಪ್ರಕಾರ 2011ರಿಂದ 2023ರ ಅವಧಿಯಲ್ಲಿ ಭಾರತದಲ್ಲಿ ಅಂದಾಜು 49.6 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. 2021ರ ಪಿಪಿಪಿ(ಕೊಳ್ಳುವ ಸಾಮರ್ಥ್ಯದಲ್ಲಿನ ಸಾಮ್ಯತೆ) ಆಧಾರದ ಮೇಲೆ ದಿನಕ್ಕೆ 3 ಡಾಲರ್‌ಗಿಂತ(ರೂ.283) ಕಡಿಮೆ ಆದಾಯ ಹೊಂದಿರುವವರ (ತೀವ್ರ ಬಡತನ) ಪ್ರಮಾಣವು ಶೇ.27.1ರಿಂದ ಶೇ.2.6ಕ್ಕೆ ಇಳಿದಿದೆ. ದಿನಕ್ಕೆ 4.20 ಡಾಲರ್‌ಗಿಂತ(ರೂ.397) ಕಡಿಮೆ ಆದಾಯ ಹೊಂದಿರುವವರ(ಬಡತನ) ಪ್ರಮಾಣ ಶೇ.57.7ರಿಂದ ಶೇ.16.1ಕ್ಕೆ ಇಳಿದಿದೆ. ಬಡತನ ಇಳಿಕೆಗೆ ಕಾರಣವಾದ ಪ್ರಮುಖ ಅಂಶಗಳು: ಜನರ ಬಳಕೆ ವೆಚ್ಚದಲ್ಲಿ ಏರಿಕೆ, ಉಚಿತ ಅಥವಾ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳನ್ನು ಒದಗಿಸುವಂತಹ ಸಾಮಾಜಿಕ ಕಲ್ಯಾಣ ಯೋಜನೆಗಳ ವಿಸ್ತರಣೆ, 2017ರಿಂದ 2023ರ ಅವಧಿಯಲ್ಲಿ 13.4 ಕೋಟಿ ಹೆಚ್ಚುವರಿ ಉದ್ಯೋಗಗಳ ಸೃಷ್ಟಿ, ಗ್ರಾಮೀಣ ಮಹಿಳೆಯರು ವೇತನ ಪಡೆಯುವ ಉದ್ಯೋಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿರುವುದು. ಈ ವರದಿಯನ್ನು ಆಧರಿಸಿ ಮೋದಿ ನೇತೃತ್ವದ ಕೇಂದ್ರ ಸರಕಾರ ತಮ್ಮ ಪಕ್ಷದ ಸಾಧನೆ ಎಂದು ಕೊಚ್ಚಿಕೊಳ್ಳುತ್ತಿದೆ. ಆದರೆ ವಾಸ್ತವವೇನು?

ವಿವಿಧ ದೇಶಗಳಲ್ಲಿನ ಬಡತನದ ಪ್ರಮಾಣವನ್ನು ಹೋಲಿಕೆ ಮಾಡಲು ವಿಶ್ವಬ್ಯಾಂಕ್ ತನ್ನದೇ ಆದ ಮಾನದಂಡವನ್ನು ಬಳಸುತ್ತದೆ. ಈ ಮೂಲಕ ದೇಶಗಳ ನಡುವಿನ ಆರ್ಥಿಕತೆ ಮತ್ತು ಬೆಲೆ ವ್ಯತ್ಯಾಸಗಳನ್ನು ಪರಿಗಣಿಸಿ ಜಾಗತಿಕ ಬಡತನವನ್ನು ಅಳೆಯುತ್ತದೆ. ಇದು ಪ್ರಮಾಣೀಕೃತವೇ ಅಲ್ಲವೇ ಎಂಬುದು ಬೇರೆ ಚರ್ಚೆ. ವಿಶ್ವಬ್ಯಾಂಕ್ ಬಡತನವನ್ನು ಲೆಕ್ಕಹಾಕುವಾಗ ಸಾಮಾನ್ಯ ವಿದೇಶಿ ವಿನಿಮಯ ದರಗಳನ್ನು ಆಧರಿಸುವುದಿಲ್ಲ. ಬದಲಾಗಿ ಪಿಪಿಪಿ(ಕೊಳ್ಳುವ ಸಾಮರ್ಥ್ಯದಲ್ಲಿನ ಸಾಮ್ಯತೆ) ಎಂಬ ಮಾನದಂಡವನ್ನು ಬಳಸುತ್ತದೆ. ಇದು ವಿವಿಧ ದೇಶಗಳಲ್ಲಿನ ಸರಕು ಮತ್ತು ಸೇವೆಗಳ ಬೆಲೆಗಳಲ್ಲಿನ ವ್ಯತ್ಯಾಸವನ್ನು ಸರಿಹೊಂದಿಸುತ್ತದೆ. ಉದಾಹರಣೆಗೆ, ಅಮೆರಿಕದಲ್ಲಿ ಒಂದು ಡಾಲರ್‌ಗೆ

ಖರೀದಿಸಬಹುದಾದ ವಸ್ತುಗಳನ್ನೇ ಭಾರತದಲ್ಲಿ ಖರೀದಿಸಲು ಅದಕ್ಕೆ ಸಮಾನವಾದ ಭಾರತೀಯ ರೂಪಾಯಿಗಳ ಅಗತ್ಯವಿರುವುದಿಲ್ಲ. ಭಾರತದ ಬೆಲೆಮಟ್ಟಕ್ಕೆ ಅನುಗುಣವಾಗಿ ಅದಕ್ಕಿಂತ ಹೆಚ್ಚು ಅಥವಾ ಕಡಿಮೆ ರೂಪಾಯಿ ಸಾಕಾಗಬಹುದು. ಈ ಬೆಲೆ ವ್ಯತ್ಯಾಸವನ್ನು ಪಿಪಿಪಿ ಪರಿಗಣಿಸುತ್ತದೆ. ವಿಶ್ವಬ್ಯಾಂಕ್ ದೇಶಗಳ ಆರ್ಥಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ ವಿವಿಧ ಹಂತಗಳ ಬಡತನ ರೇಖೆಗಳನ್ನು ನಿಗದಿಪಡಿಸಿದೆ.

ಮುಖ್ಯವಾಗಿ ಸಂಪತ್ತಿನ ಅಸಮಾನ ಹಂಚಿಕೆಯನ್ನು ಸೂಚಿಸುವ ಸಾಪೇಕ್ಷ ಬಡತನ(relative poverty) ಮತ್ತು ಜನರ ಮೂಲಭೂತ ಅಗತ್ಯವನ್ನು ಸಹ ಪೂರೈಸಲು ಸಾಧ್ಯವಾಗದ ಸಮಗ್ರ ಬಡತನ(absolute poverty) ಎಂದು ವಿಂಗಡಿಸಲಾಗುತ್ತದೆ. ಇಂದು ಭಾರತವು ಸಮಗ್ರ ಬಡತನದಿಂದ ಹೊರಬಂದಿದೆ ಎನ್ನುವುದು ಸಮಾಧಾನಕರ ಸಂಗತಿಯಾದರೆ ಸಾಪೇಕ್ಷ ಬಡತನದ ಪ್ರಮಾಣ ಹೆಚ್ಚುತ್ತಿರುವುದು ಕಳವಳಕಾರಿ ವಿಚಾರವಾಗಿದೆ. ಒಂದು ಕಾಲದಲ್ಲಿ ಗ್ರಾಮೀಣ ಭಾಗದಲ್ಲಿ ಕೇಂದ್ರೀಕರಣಗೊಂಡಿದ್ದ ಬಡತನ ನಗರೀಕರಣ ಮತ್ತು ವಲಸೆಯ ವಿದ್ಯಮಾನದ ಕಾರಣ ಅದು ನಗರ ಪ್ರದೇಶಕ್ಕೆ ವಿಸ್ತರಿಸಿಕೊಳ್ಳುತ್ತಿದೆ. ವೈರುಧ್ಯವೆಂದರೆ ‘ಬಡತನ ನಿರ್ಮೂಲನಕ್ಕಾಗಿ ನಗರಕ್ಕೆ ವಲಸೆ ಬನ್ನಿ’ ಎನ್ನುವ ಸರಕಾರದ ನವ ಉದಾರೀಕರಣ ನೀತಿಯು ಗ್ರಾಮೀಣ ಬಡತನ ಮತ್ತು ನಗರ ಬಡತನ ಎನ್ನುವ ವ್ಯಾಪಕವಾಗಿ ವಿಸ್ತರಿಸಿಕೊಂಡ ಬಡತನಕ್ಕೆ ಕಾರಣವಾಗುತ್ತಿದೆ. ಮುಖ್ಯವಾಗಿ ಉದ್ಯೋಗ ಕಲ್ಪಿಸುತ್ತದೆ ಎನ್ನುವ ಉದ್ದೇಶದಿಂದ ನಗರಕ್ಕೆ ವಲಸೆ ಬರುವ ಕೂಲಿ ಕಾರ್ಮಿಕರ ಬಡತನ ಮತ್ತು ನಗರೀಕರಣದ ನಡುವಿನ ಸಂಬಂಧಗಳ ಅಧ್ಯಯನ ಮಾಡಬೇಕಿದೆ.

ಈ ಮೊದಲು ಭಾರತದಲ್ಲಿ ಯುಆರ್‌ಪಿ(ಏಕರೂಪ ಪರಾಮರ್ಶೆ ಅವಧಿ) ವಿಧಾನವನ್ನು ಅನುಸರಿಸಲಾಗುತ್ತಿತ್ತು. ಈ ವಿಧಾನದಲ್ಲಿ ಕುಟುಂಬಗಳು ತಾವು ಖರೀದಿಸಿದ ಬಹುತೇಕ ಎಲ್ಲ ವಸ್ತುಗಳ ವೆಚ್ಚದ ವಿವರಗಳನ್ನು ಹಿಂದಿನ 30 ದಿನಗಳ ಆಧಾರದ ಮೇಲೆ ನೀಡಬೇಕಾಗಿತ್ತು. ನಂತರ ಭಾರತವು ಎಂಎಂಆರ್‌ಪಿ(ಪರಿಷ್ಕೃತ ಮಿಶ್ರ ಪರಾಮರ್ಶೆ ಅವಧಿ) ವಿಧಾನಕ್ಕೆ ಬದಲಾಯಿತು. ಈ ವಿಧಾನದಲ್ಲಿ ವಿವಿಧ ವಸ್ತುಗಳ ಖರೀದಿ ಮತ್ತು ಬಳಕೆಯ ವಿವರಗಳನ್ನು ವಿಭಿನ್ನ ಕಾಲಾವಧಿಗಳ ಆಧಾರದ ಮೇಲೆ ಸಂಗ್ರಹಿಸಲಾಗುತ್ತದೆ. ಆದರೆ ಯಾವುದೇ ಸಂದರ್ಭದಲ್ಲಿಯೂ ಜೀವನಮಟ್ಟವನ್ನು, ಗುಣಮಟ್ಟದ ಉದ್ಯೋಗವನ್ನು ಮಾನದಂಡವಾಗಿ ಬಳಸುವುದಿಲ್ಲ. ಹಣದುಬ್ಬರದ ಕಾರಣಕ್ಕೆ ಸರಕುಗಳ ಬೆಲೆ ಹೆಚ್ಚಾಗುತ್ತವೆ. ಆಗ ಖರೀದಿಯ ವೆಚ್ಚವೂ ಹೆಚ್ಚಾಗುತ್ತದೆ. ಆದರೆ ಆದಾಯದಲ್ಲಿ ಯಾವುದೇ ಬದಲಾವಣೆಯಾಗಿರುವುದಿಲ್ಲ. ಇದನ್ನು ಆಧರಿಸಿ ಬಡತನ ರೇಖೆಯನ್ನು ಅಳೆಯುವುದು ಅವೈಜ್ಞಾನಿಕ ಎನಿಸಿಕೊಳ್ಳುತ್ತದೆ.

ಭಾರತ ಸರಕಾರವು 2014ರ ರಂಗರಾಜನ್ ಸಮಿತಿಯ ವರದಿಯ ನಂತರ ಇದುವರೆಗೂ ಬಡತನ ರೇಖೆ ಅಳೆಯುವ ರೂ. ಆಧಾರಿತ ಮಿತಿಯನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಈ ವರದಿಯ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಒಬ್ಬ ವ್ಯಕ್ತಿಗೆ ತಿಂಗಳಿಗೆ ಸುಮಾರು ರೂ.2,100ರಿಂದ ರೂ. 2,300 (ದಿನಕ್ಕೆ ರೂ.70ರಿಂದ ರೂ.76) ನಗರ ಪ್ರದೇಶದಲ್ಲಿ ಒಬ್ಬ ವ್ಯಕ್ತಿಗೆ ತಿಂಗಳಿಗೆ ಸುಮಾರು ರೂ. 3,200ರಿಂದ 3,500 (ದಿನಕ್ಕೆ ರೂ. 106ರಿಂದ ರೂ.116) ಸಾಕಾಗುತ್ತದೆ. ಆದರೆ ಇಂದಿನ ಹಣದುಬ್ಬರ ಮತ್ತು ಗಗನಕ್ಕೇರಿರುವ ಬೆಲೆಗಳು, ರೂಪಾಯಿ ಮೌಲ್ಯದ ಕುಸಿತದ ಹಿನ್ನೆಲೆಯಲ್ಲಿ ಈ ಮಾನದಂಡ ಅಮಾನವೀಯವಾಗಿದೆ

ಅಂತರ್‌ರಾಷ್ಟ್ರೀಯ ಬಡತನ ರೇಖೆಗಳ (ಉದಾಹರಣೆಗೆ ಪಿಪಿಪಿ) ಮಾನದಂಡಗಳಾದ ದಿನಕ್ಕೆ 3 ಅಥವಾ 4.20 ಡಾಲರ್ ವಾಸ್ತವದಲ್ಲಿ ಅತ್ಯಂತ ಕಡಿಮೆ ದೈನಂದಿನ ಆದಾಯವನ್ನು ಸೂಚಿಸುತ್ತವೆ. ಆರ್ಥಿಕ ತಜ್ಞರ ಪ್ರಕಾರ ಇದು ಒಬ್ಬ ವ್ಯಕ್ತಿಗೆ ದಿನಕ್ಕೆ ಸರಿಸುಮಾರು 58 ರೂಪಾಯಿಗಳಿಗೆ ಸಮನಾಗುತ್ತದೆ. ಅಂದರೆ ಕುಟುಂಬವೊಂದು ಒಂದೇ ಒಂದು ಆರೋಗ್ಯ ತುರ್ತುಪರಿಸ್ಥಿತಿಯನ್ನು ಎದುರಿಸಿದರೂ ಅಥವಾ ಉದ್ಯೋಗ ಕಳೆದುಕೊಂಡರೂ ಮತ್ತೆ ಸುಲಭವಾಗಿ ತೀವ್ರ ಬಡತನದ ಸಂಕಷ್ಟಕ್ಕೆ ಜಾರಬಹುದು. ಇನ್ನು ಜಾಗತಿಕ ಬಹುಆಯಾಮದ ಬಡತನ ಸೂಚ್ಯಂಕ (Global Multidimensional Poverty Index) ಪ್ರಕಾರ ಭಾರತದ ಆರೋಗ್ಯ, ಶಿಕ್ಷಣ ಮತ್ತು ಜೀವನಮಟ್ಟಕ್ಕೆ ಸಂಬಂಧಿಸಿದ ಅನೇಕ ರೀತಿಯ ಕೊರತೆ ಮತ್ತು ಹಿನ್ನಡೆಗಳನ್ನು ಎದುರಿಸುತ್ತಿದೆ. ಇಂದಿಗೂ 80 ಕೋಟಿ ಜನಸಂಖ್ಯೆ(2011ರ ಜನಗಣತಿ) ಪಡಿತರ ವ್ಯವಸ್ಥೆಯ ಮೇಲೆ ಅವಲಂಬಿತರಾಗಿದ್ದಾರೆ. ಹಾಗೆಯೇ ಮೋದಿ ನೇತೃತ್ವ ಸರಕಾರದ 2016ರ ನೋಟು ಅಮಾನ್ಯೀಕರಣ, ಸಿದ್ಧತೆ ಇಲ್ಲದ ಜಿಎಸ್‌ಟಿ ಜಾರಿ ಮತ್ತು 2020ರ ಕೋವಿಡ್ ಲಾಕ್‌ಡೌನ್‌ನಂತಹ ಕ್ರಮಗಳು ಅಸಂಘಟಿತ ವಲಯದ ಕಾರ್ಮಿಕರು ಹಾಗೂ ಸಣ್ಣಪುಟ್ಟ ಕುಟುಂಬಗಳ ಜೀವನೋಪಾಯದ ಮೇಲೆ ತೀವ್ರ ಹೊಡೆತ ನೀಡಿವೆ. ಆದರೆ ವಿಶ್ವಬ್ಯಾಂಕ್ ಮಾನದಂಡಗಳು ಈ ವಾಸ್ತವ ಚಿತ್ರಣವನ್ನು ಒಳಗೊಳ್ಳುವುದಿಲ್ಲ.

ಕಲ್ಯಾಣ ಯೋಜನೆಗಳು ಮತ್ತು ಆಹಾರ ಭದ್ರತಾ ಯೋಜನೆಗಳ ಪರಿಣಾಮವಾಗಿ ತೀವ್ರ ಬಡತನದ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ ಎಂಬುದು ಸತ್ಯ. ಆದರೆ ಇದರಿಂದ ಬಡತನ ಸಂಪೂರ್ಣವಾಗಿ ನಿರ್ಮೂಲನವಾಗಿದೆ ಎಂದರ್ಥವಲ್ಲ. ಹೀಗಾಗಿ 25 ಕೋಟಿಗೂ ಅಧಿಕ ಜನಸಂಖ್ಯೆ ಇನ್ನೂ ಆರ್ಥಿಕವಾಗಿ ಅಸ್ಥಿರ ಪರಿಸ್ಥಿತಿಯಲ್ಲಿದ್ದಾರೆ. ಶೇ.89 ಜನಸಂಖ್ಯೆ ಅನೌಪಚಾರಿಕ, ಅಸಂಘಟಿತ ವಲಯದ ಕಡಿಮೆ ಉತ್ಪಾದಕತೆಯ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಇದು ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಕಲ್ಪಿಸುವುದಿಲ್ಲ. ಆರೋಗ್ಯ, ಶಿಕ್ಷಣ ಮತ್ತು ಜೀವನಮಟ್ಟಕ್ಕೆ ಸಂಬಂಧಿಸಿದ ಹಲವು ರೀತಿಯ ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದಾರೆ. ಇದೆಲ್ಲವೂ ವಿಶ್ವಬ್ಯಾಂಕ್‌ನ ಮಾಪನದಲ್ಲಿ ಒಳಗೊಂಡಿರುವುದಿಲ್ಲ.

ಬಡತನವನ್ನು ಕೇವಲ ಆದಾಯ ಮತ್ತು ಖರ್ಚುವೆಚ್ಚವನ್ನು ಆಧರಿಸಿಯೂ ಅಳೆಯುವಂತಿಲ್ಲ. ಇದು ಬಹು ಆಯಾಮದ ಸಮಸ್ಯೆಯಾಗಿದ್ದು ಲಕ್ಷಾಂತರ ಜನರ ಮೇಲೆ ವಿವಿಧ ಹಂತಗಳಲ್ಲಿ ಪರಿಣಾಮ ಬೀರುತ್ತದೆ. ಭಾರತದಲ್ಲಿ ಬಡತನವನ್ನು ಪ್ರಾಥಮಿಕವಾಗಿ ಆರ್ಥಿಕ ದೃಷ್ಟಿಕೋನದಿಂದ ಅಳೆಯಲಾಗುತ್ತದೆಯಾದರೂ ಇದು ಅಷ್ಟು ಸರಳವಲ್ಲ. ಅದರ ಸಂಕೀರ್ಣತೆಯನ್ನು ಗ್ರಹಿಸಲು ವೈಜ್ಞಾನಿಕ ಮಾನದಂಡ, ವ್ಯಾಪಕವಾದ ಮತ್ತು ಸಮಗ್ರವಾದ ವಿಧಾನ ಅಗತ್ಯವಾಗಿದೆ. ಭಾರತದಲ್ಲಿ ಪ್ರಾದೇಶಿಕತೆ, ಸಾಮಾಜಿಕತೆ, ಆರ್ಥಿಕತೆ ಮತ್ತು ಮಾನವ ಅಭಿವೃದ್ಧಿ ಅಂಶಗಳು ಬಡತನದ ವಿವಿಧ ಆಯಾಮಗಳನ್ನು ನಿರ್ಧರಿಸುತ್ತದೆ. ನವ ಉದಾರೀಕರಣದ ಮೂವತ್ತಾರು ವರ್ಷಗಳ ನಂತರ ಭಾರತವು ಇಂದು ವಿಶ್ವದ ಕೆಲವು ಅತಿ ಶ್ರೀಮಂತ ವ್ಯಕ್ತಿಗಳಿಗೆ ತಂಗುದಾಣವಾಗಿದೆ, ಅವರನ್ನು ಪ್ರೋತ್ಸಾಹಿಸುವ ದೇಶವಾಗಿದೆ. ಇದೇ ಸಂದರ್ಭದಲ್ಲಿ ಗಣನೀಯ ಪ್ರಮಾಣದ ಜನಸಂಖ್ಯೆ ಬಡತನದಲ್ಲಿ ಬದುಕುತ್ತಿದೆ. ಇದಕ್ಕಾಗಿ ಮೊದಲಿಗೆ ಬಡತನವನ್ನು ಕೇವಲ ಖರ್ಚುವೆಚ್ಚ ಹೆಚ್ಚು/ಕಡಿಮೆ, ಆದಾಯದ ಕೊರತೆ ಎಂದು ಸಂಕುಚಿತವಾಗಿ ವ್ಯಾಖ್ಯಾನಿಸುವುದನ್ನು ಕೈಬಿಡಬೇಕು. ಬಡತನವು ಆದಾಯ, ಶಿಕ್ಷಣ, ಆರೋಗ್ಯ, ಆಹಾರ, ಪೌಷ್ಟಿಕತೆ, ಸ್ವಚ್ಛತೆ, ವಸತಿ, ಸಾಮಾಜಿಕತೆ ಮುಂತಾದವುಗಳನ್ನು ಒಳಗೊಂಡ ಬಹುಮುಖೀ ಸಮಸ್ಯೆಯಾಗಿದೆ. ಇದಕ್ಕೆ ಪ್ರಾದೇಶಿಕ, ಮತ್ತು ಮಾನವ ಅಭಿವೃದ್ಧಿ ಈ ಚೌಕಟ್ಟನ್ನು ಅಳವಡಿಸಿಕೊಂಡು ಅಳೆಯಬೇಕಿದೆ. ಈ ಮಾದರಿಯು ಜನಸಂಖ್ಯೆ ಕೆಲವು ಪ್ರದೇಶಗಳಲ್ಲಿ ಅಥವಾ ಸಮುದಾಯಗಳಲ್ಲಿ ಇತರರಿಗಿಂತ ಭಿನ್ನವಾಗಿ ಬಡತನವನ್ನು ಏಕೆ ಅನುಭವಿಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಬಲಿಷ್ಠ ಜಾತಿಗಳ ಭೂಮಾಲಕತ್ವದ ಪ್ರಾಬಲ್ಯ, ಶಿಕ್ಷಣ ಮತ್ತು ಆರೋಗ್ಯ ಸೇವೆಗಳಿಗೆ ಅಸಮಾನ ಪ್ರವೇಶ ಮತ್ತು ದಲಿತರು, ಅಂಚಿನಲ್ಲಿರುವ ಸಮುದಾಯಗಳಿಗೆ ಸೀಮಿತ ಉದ್ಯೋಗಾವಕಾಶಗಳು ಸಹ ಆದಾಯದ ಅಸಮಾನತೆಗಳನ್ನು ಶಾಶ್ವತಗೊಳಿಸಲು ಕಾರಣವಾಗಿವೆ. ಇದರ ಜೊತೆಗೆ ಅಂಚಿನಲ್ಲಿರುವ ಸಮುದಾಯಗಳು ಎದುರಿಸುವ ಭಾಷಾಶಾಸ್ತ್ರೀಯ ಮತ್ತು ಸಾಂಸ್ಕೃತಿಕ ಒಳಗೊಳ್ಳುವಿಕೆಯಲ್ಲಿನ ತಾರತಮ್ಯ ಕಾರಣದ ಬಡತನವು ಸಹ ಮುಖ್ಯ ಸವಾಲಾಗಿದೆ ಭಾರತವು ಸಹಿ ಮಾಡಿರುವ ವಿಶ್ವಸಂಸ್ಥೆಯ 17 ಸುಸ್ಥಿರ ಅಭಿವೃದ್ಧಿ ಗುರಿಗಳ (ಎಸ್‌ಡಿಜಿ) ಪೈಕಿ ಗುರಿ-1 ಬಡತನ ನಿರ್ಮೂಲನ, ಗುರಿ-2 ಹಸಿವನ್ನು ಹೋಗಲಾಡಿಸುವುದು ಎರಡನ್ನೂ 2030ರ ವೇಳೆಗೆ ಸಾಧಿಸಬೇಕಿದೆ. ಆದರೆ ಇದರ ಸಾಧ್ಯತೆಗಳು ಕ್ಷೀಣವಾಗಿವೆ.

2025ರ ವಿಶ್ವಬ್ಯಾಂಕ್‌ನ ವರದಿಯು ‘ಭಾರತದ ಖರ್ಚುವೆಚ್ಚವನ್ನು ಆಧರಿಸಿದ ಗಿನಿ ಸೂಚ್ಯಂಕವು 2011-12ರಲ್ಲಿ 28.8ರಿಂದ 2022-23ರಲ್ಲಿ 25.5ಕ್ಕೆ ಸುಧಾರಿಸಿದೆ. ಆದರೆ ದತ್ತಾಂಶದ ಮಿತಿಯಿಂದಾಗಿ ಅಸಮಾನತೆಯನ್ನು ಕಡಿಮೆ ಅಂದಾಜು ಮಾಡಿರಬಹುದು. ಇದಕ್ಕೆ ವಿರುದ್ಧವಾಗಿ ಜಾಗತಿಕ ಅಸಮಾನತೆಯ ಡೇಟಾಬೇಸ್ ಪ್ರಕಾರ ಆದಾಯ ಅಸಮಾನತೆಯು 2004ರಲ್ಲಿ 52ರ ಗಿನಿ ಸೂಚ್ಯಂಕದಿಂದ 2023ರಲ್ಲಿ 62ಕ್ಕೆ ಏರಿದೆ. ವೇತನ ವ್ಯತ್ಯಾಸವು ಇನ್ನೂ ಹೆಚ್ಚಿನ ಪ್ರಮಾಣದಲ್ಲಿದೆ. 2023-24ರಲ್ಲಿ ಶೇ.10ರಷ್ಟು ಮೇಲ್ವರ್ಗದ ಸರಾಸರಿ ಗಳಿಕೆಯು ಶೇ.10ರಷ್ಟು ಕೆಳವರ್ಗದ ಗಳಿಕೆಗಿಂತ 13 ಪಟ್ಟು ಹೆಚ್ಚಾಗಿದೆ’ ಎಂದು ಹೇಳುತ್ತದೆ.

ಗಿನಿ ಸೂಚ್ಯಂಕವು ಜನಸಂಖ್ಯೆಯೊಳಗಿನ ಆದಾಯ ಅಥವಾ ಸಂಪತ್ತಿನ ಅಸಮಾನತೆಯನ್ನು ಅಳೆಯುವ ಸಾಂಖ್ಯಿಕ ಮಾಪನವಾಗಿದೆ. ಒಂದು ದೇಶದಲ್ಲಿ ಆದಾಯವು ಹೇಗೆ ವಿತರಣೆಯಾಗಿದೆ ಎಂಬುದನ್ನು ಅಳೆಯುತ್ತದೆ. ಇದು 0ಯಿಂದ 1ವರೆಗೆ ಇರುತ್ತದೆ. ‘0’ ಗಿನಿ ಸೂಚ್ಯಂಕವು ಪರಿಪೂರ್ಣ ಸಮಾನತೆಯನ್ನು ಸೂಚಿಸುತ್ತದೆ, ಇಲ್ಲಿ ಎಲ್ಲರಿಗೂ ಒಂದೇ ಆದಾಯವಿದೆ, ಆದರೆ ‘1’ ಸೂಚ್ಯಂಕವು ಗರಿಷ್ಠ ಅಸಮಾನತೆಯನ್ನು ಪ್ರತಿನಿಧಿಸುತ್ತದೆ, ಇದು ಆದಾಯ ಅಥವಾ ಸಂಪತ್ತಿನ ವಿತರಣೆಯ ಅಸಮಾನತೆಗಳನ್ನು ಪ್ರಮಾಣೀಕರಿಸಲು ವ್ಯಾಪಕವಾಗಿ ಬಳಸಲಾಗುವ ಸಾಧನವಾಗಿದೆ. ಭಾರತದ ಇತ್ತೀಚಿನ 25.5 ಗಿನಿ ಸೂಚ್ಯಂಕವು ಅಭಿವೃದ್ಧಿ ಹೊಂದಿದ ದೇಶಗಳಾದ ಚೀನಾದ 3.57 ಮತ್ತು ಯುಎಎಸ್‌ನ 4.1 ಗುಣಾಂಕಕ್ಕಿಂತ ಮತ್ತು ಎಲ್ಲಾ ಜಿ7 ಮತ್ತು ಜಿ20 ರಾಷ್ಟ್ರಗಳಿಗಿಂತ ಹೆಚ್ಚಿದೆ. ಎನ್‌ಎಫ್‌ಎಚ್‌ಎಸ್‌ನ(ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ) ಇತ್ತೀಚಿನ ಮಾಹಿತಿಯ ಪ್ರಕಾರ 5 ವರ್ಷದೊಳಗಿನ ಮಕ್ಕಳಲ್ಲಿ ಕುಂಠಿತ ಬೆಳವಣಿಗೆ ಶೇ. 29.3ರಷ್ಟಿದೆ. 5 ವರ್ಷದೊಳಗಿನ ಮಕ್ಕಳಲ್ಲಿ ಕಡಿಮೆ ತೂಕದ ಪ್ರಮಾಣ ಶೇ.31.8ರಷ್ಟಿದೆ. ಭಾರತದಲ್ಲಿ ಅರ್ಧಕ್ಕಿಂತ ಹೆಚ್ಚು ಮಕ್ಕಳು ಮತ್ತು ಮಹಿಳೆಯರು(ಸುಮಾರು ಶೇ. 58) ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಆದರೆ ವಿಶ್ವಬ್ಯಾಂಕ್ ಮಾನದಂಡಗಳು ಮತ್ತು ಮಾಪನಗಳು ಇದನ್ನು ಪರಿಗಣಿಸುವುದಿಲ್ಲ

ಕಳೆದ ಹತ್ತು ವರ್ಷಗಳಲ್ಲಿ ಆರ್ಥಿಕ ಹಿಂಜರಿಕೆ, ನಿರುದ್ಯೋಗ, ಉದ್ಯೋಗ ಮಾರುಕಟ್ಟೆಯ ಅನಿಶ್ಚಿತತೆಯ ಕಾರಣ ಭಾರತೀಯರ ವೇತನ/ಆದಾಯದಲ್ಲಿ ಏರಿಕೆಯಾಗಲಿಲ್ಲ, ಬದಲಿಗೆ ಉದ್ಯೋಗ ಕಳೆದುಕೊಂಡವರ ಪ್ರಮಾಣ ಹೆಚ್ಚಾಗುತ್ತಿದೆ, ಇದೇ ಸಂದರ್ಭದಲ್ಲಿ ವರ್ಷಗಳು ಕಳೆದಂತೆ ಹಣದುಬ್ಬರವೂ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಖರ್ಚುವೆಚ್ಚದ ಪ್ರಮಾಣದಲ್ಲಿಯೂ ಹೆಚ್ಚಾಗುತ್ತಿದೆ. ಹೆಚ್ಚಿಗೆ ವೆಚ್ಚ ಮಾಡುತ್ತಿದ್ದಾರೆ ಎಂದರೆ ಜೀವನ ಮಟ್ಟ ಸುಧಾರಿಸಿದೆ ಅಂತಲ್ಲ, ಬದಲಿಗೆ ಅವಶ್ಯಕ ವಸ್ತುಗಳ ಬೆಲೆ ಹೆಚ್ಚಾಗಿದೆ ಎಂದರ್ಥ. ಈ ಕಾರಣದಿಂದ ಖರ್ಚುವೆಚ್ಚ ಆಧರಿಸಿ ಅಸಮಾನತೆಯನ್ನು ಅಳೆಯುವುದು ದೋಷಪೂರಿತವಾಗಿದೆ, ಬಹುಆಯಾಮ ಮತ್ತು ಆದಾಯವನ್ನು ಆಧರಿಸಿ ಬಡತನ ಅಳೆಯುವುದು ಸರಿಯಾದ ಮಾಪನವಾಗಿದೆ. ಭಾರತದಲ್ಲಿ ಬಡತನವು ಸಂಕೀರ್ಣ, ಬಹುಆಯಾಮದ ಸಮಸ್ಯೆಯಾಗಿದ್ದು, ಸಮಗ್ರ ಮತ್ತು ಸೂಕ್ಷ್ಮವಾದ ವಿಧಾನದ ಅಗತ್ಯವಿದೆ. ಇದು ಕೇವಲ ಆದಾಯ ಮತ್ತು ವೆಚ್ಚದ ಬಗ್ಗೆ ಮಾತ್ರವಲ್ಲ. ಜೊತೆಗೆ ಶಿಕ್ಷಣ, ಆರೋಗ್ಯ, ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಆರ್ಥಿಕ ಸಬಲೀಕರಣದ ಸಾಧ್ಯತೆ ಮತ್ತು ಅವಕಾಶ ಬಗ್ಗೆಯೂ ಚರ್ಚಿಸಬೇಕು. ಇದರ ಆಧಾರದಲ್ಲಿ ಮಾನದಂಡಗಳು ನಿರ್ಧಾರವಾಗಬೇಕು

share
ಬಿ. ಶ್ರೀಪಾದ ಭಟ್
ಬಿ. ಶ್ರೀಪಾದ ಭಟ್
Next Story
X