Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಫಾರಂ-7 ದುರ್ಬಳಕೆ: ಮುಸ್ಲಿಮರೇ ಟಾರ್ಗೆಟ್...

ಫಾರಂ-7 ದುರ್ಬಳಕೆ: ಮುಸ್ಲಿಮರೇ ಟಾರ್ಗೆಟ್ ಆಗಿದ್ದೇಕೆ?

►►84,136 ಮತದಾರರ ಕೈಬಿಡಲು 29 ಮಂದಿಯಿಂದ ಅರ್ಜಿ ►► ಚುನಾವಣಾ ಆಯೋಗದ ನಿಯಮ ಗಾಳಿಗೆ

ಮನೋಜ್ ಆಜಾದ್ಮನೋಜ್ ಆಜಾದ್7 Oct 2026 8:56 AM IST
share
ಫಾರಂ-7 ದುರ್ಬಳಕೆ: ಮುಸ್ಲಿಮರೇ ಟಾರ್ಗೆಟ್ ಆಗಿದ್ದೇಕೆ?

ಬೆಂಗಳೂರು : ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆಯಲ್ಲಿ ಮತದಾರರ ಹೆಸರುಗಳನ್ನು ಅಳಿಸುವಂತೆ ಸಲ್ಲಿಸಲಾಗುತ್ತಿರುವ ನಮೂನೆ-7 ಅನ್ನು ದುರ್ಬಳಕೆ ಮಾಡಿಕೊಂಡಿರುವ ತಾಜಾ ಉದಾಹರಣೆ ಬೆಳಕಿಗೆ ಬಂದಿದ್ದು, ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಬರೀ 29 ಮಂದಿ ಸೇರಿಕೊಂಡು ಬರೋಬ್ಬರಿ 4,136 ಮತದಾರರನ್ನು ಕೈಬಿಡುವಂತೆ ಅರ್ಜಿ ಸಲ್ಲಿಕೆ ಮಾಡಿದ್ದು, ಇದರಲ್ಲಿ ಮುಸ್ಲಿಮ್ ಮತದಾರರೇ ಅತ್ಯಧಿಕವಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

ಇತ್ತೀಚೆಗೆ ನಮೂನೆ-7 ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸಂಬಂಧ ಅಧಿಕೃತ ಮಾಹಿತಿ ಹಂಚಿಕೊಂಡಿದ್ದ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್, ‘ಒಬ್ಬ ವ್ಯಕ್ತಿ ದಿನಕ್ಕೆ 10 ರಂತೆ ಒಟ್ಟು 50 ಮತದಾರರ ವಿರುದ್ಧ ಆಕ್ಷೇಪಣೆ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು’ ಎಂದು ತಿಳಿಸಿದ್ದರು. ಆದರೆ, ಲಭ್ಯವಿರುವ ದತ್ತಾಂಶದ ವಿಶ್ಲೇಷಣೆಯಲ್ಲಿ ಒಬ್ಬ ವ್ಯಕ್ತಿ ಉದ್ದೇಶ ಪೂರ್ವಕವಾಗಿ 50ಕ್ಕಿಂತ ಹೆಚ್ಚು ಮತದಾರರನ್ನು ಗುರಿಯಾಗಿಸಿಕೊಂಡು ನಮೂನೆ-7 ಸಲ್ಲಿಸಿದ್ದು, ಅದರಂತೆ 29 ಮಂದಿ, ಒಟ್ಟು 4,136 ಮತದಾರರ ವಿರುದ್ಧ ಆಕ್ಷೇಪಣೆ ಸಲ್ಲಿಸಿರುವುದು ‘ನಾಗರಿಕ ಮತಕಾವಲು ಸಮಿತಿ’ಯ ದತ್ತಾಂಶದಲ್ಲಿ ಪತ್ತೆಯಾಗಿದೆ.

ಚುನಾವಣಾ ಆಯೋಗ ತನ್ನ ಅಧಿಕೃತ ವೆಬ್‌ಸೈಟ್ ಆಗಿರುವ ‘ಸಿಇಒ ಕರ್ನಾಟಕ’ದಲ್ಲಿ ಪ್ರಕಟ ಮಾಡುವ ದತ್ತಾಂಶಗಳನ್ನು ಡೌನ್‌ಲೋಡ್ ಮಾಡಿ ವಿಶ್ಲೇಷಿಸಿದ ಈ ದತ್ತಾಂಶವು ಆ.24ರಿಂದ ಅ.3ರವರೆಗಿನ ಮಾಹಿತಿಯಾಗಿದೆ ಎಂದು ಸಮಿತಿಯ ಪದಾಧಿಕಾರಿ ಕಾರ್ತಿಕ್ ತಿಳಿಸಿದ್ದಾರೆ.

ಸಮಿತಿ ದತ್ತಾಂಶದ ಪ್ರಕಾರ, ವಿಜಯಪುರ ಜಿಲ್ಲೆಯ ಬಬಲೇಶ್ವರ ಕ್ಷೇತ್ರ ಪ್ರತಿನಿಧಿಸುವ ಸಚಿವ ಎಂ.ಬಿ. ಪಾಟೀಲ್‌ರ ಮತ ಕ್ಷೇತ್ರ ವ್ಯಾಪ್ತಿಯಲ್ಲಿಯೇ ಅತಿಹೆಚ್ಚು ಆಕ್ಷೇಪಣೆ ಅರ್ಜಿಗಳು ಸಲ್ಲಿಕೆಯಾಗಿರುವುದು ಕುತೂಹಲ ಮೂಡಿಸಿದೆ. ಅದರಲ್ಲೂ ಹುಚ್ಚಪ್ಪ ಗಣಿಗಾರ್ ಎಂಬಾತ ಸೆ.22 ಮತ್ತು 23ರಂದು ಎರಡು ದಿನಗಳಲ್ಲಿ ಕ್ಷೇತ್ರದ ವಿವಿಧ 30ಬೂತ್‌ಗಳಲ್ಲಿ 493 ಮತದಾರರ ವಿರುದ್ಧ ನಮೂನೆ-7 ಅರ್ಜಿ ಸಲ್ಲಿಸಿದ್ದಾನೆ. ಈತ ಸಲ್ಲಿಸಿರುವ ಆಕ್ಷೇಪಣೆಗಳ ಪೈಕಿ ಶೇ.90.1ರಷ್ಟು ಮುಸ್ಲಿಮ್ ಮತದಾರರ ವಿರುದ್ಧವೇ ಆಗಿವೆ. ಇನ್ನೂ ಶೇ.9.7ರಷ್ಟು ಹಿಂದೂ ಮತದಾರರ ವಿರುದ್ಧ ಹಾಗೂ ಶೇ.0.2ರಷ್ಟು ಇತರರನ್ನು ಗುರಿಯಾಗಿಸಿಕೊಂಡಿರುವುದು ಗೊತ್ತಾಗಿದೆ.

ಅದೇ ರೀತಿ, ಮತ್ತೊಂದು ಪ್ರಕರಣದಲ್ಲಿ ಗೋವಿಂದರಾಜ್ ಮುಡ್ನೂರು ಎಂಬಾತ ಸೆ.22 ಮತ್ತು 23ರಂದು ಎರಡು ದಿನಗಳಲ್ಲಿ ಬಬಲೇಶ್ವರ ಕ್ಷೇತ್ರದ ವಿವಿಧ 33 ಬೂತ್‌ಗಳಲ್ಲಿ 440 ಆಕ್ಷೇಪಣೆಗಳನ್ನು ಸಲ್ಲಿಸಿದ್ದಾನೆ. ಈ ಪೈಕಿ ಶೇ.78.4 ಮುಸ್ಲಿಮರು, ಶೇ.21.4ರಷ್ಟು ಹಿಂದೂ ಹಾಗೂ ಶೇ.0.2ರಷ್ಟು ಇತರ ಮತದಾರರ ವಿರುದ್ಧ ಇರುವುದು ಗೊತ್ತಾಗಿದೆ.

ಭಾಲ್ಕಿ ಕ್ಷೇತ್ರ: ಇದೇ ಮಾದರಿ ಅನುಸರಿಸಿ ಸಚಿವ ಈಶ್ವರ್ ಬಿ. ಖಂಡ್ರೆ ಪ್ರತಿನಿಧಿಸುವ ಬೀದರ್ ಜಿಲ್ಲೆಯ ಭಾಲ್ಕಿ ಕ್ಷೇತ್ರದಲ್ಲಿ ಜಗನ್ನಾಥ್ ಎಂಬಾತ ಕೇವಲ 4 ಬೂತ್‌ಗಳಲ್ಲಿ 241 ಆಕ್ಷೇಪಣೆಗಳನ್ನು ಸಲ್ಲಿಸಿದ್ದಾನೆ. ಅಂದರೆ ಪ್ರತಿಬೂತ್‌ಗೆ ಸರಾಸರಿ 60ಕ್ಕೂ ಹೆಚ್ಚು ಇದ್ದು ಈ ಪೈಕಿ ಶೇ.97.5ರಷ್ಟು ಮುಸ್ಲಿಮ್ ಮತ್ತು ಶೇ.2.5ರಷ್ಟು ಹಿಂದೂ ಮತದಾರರ ವಿರುದ್ಧವಾಗಿವೆ ಎನ್ನುವ ಅಂಶ ಪತ್ತೆಯಾಗಿದೆ.

ಬಬಲೇಶ್ವರದ ಭೀಮಪ್ಪ ಗೋಳಸಂಗಿ ಎಂಬ ವ್ಯಕ್ತಿ 13 ಬೂತ್‌ಗಳಲ್ಲಿ 208 ಆಕ್ಷೇಪಣೆಗಳನ್ನು ಸಲ್ಲಿಸಿದ್ದು, ಅವುಗಳಲ್ಲಿ ಶೇ.59.6ರಷ್ಟು ಮುಸ್ಲಿಮರು ಮತ್ತು ಶೇ.40.4ರಷ್ಟು ದಲಿತರು, ಹಿಂದೂ ಮತದಾರರು ಇದ್ದಾರೆ. ಇನ್ನೊಂದು ಗಮನಾರ್ಹ ಪ್ರಕರಣ ಬಾಬುರಾವ್ ಅವರದ್ದಾಗಿದ್ದು,

ಭಾಲ್ಕಿ ಕ್ಷೇತ್ರದ ಒಂದೇ ಬೂತ್‌ನಲ್ಲಿ 192 ಆಕ್ಷೇಪಣೆಗಳನ್ನು ಸಲ್ಲಿಸಿದ್ದಾನೆ. ಇವುಗಳಲ್ಲಿ ಶೇ.98.4ರಷ್ಟು ಮುಸ್ಲಿಮ್ ಮತದಾರರ ವಿರುದ್ಧವಾಗಿದ್ದು, ಹಿಂದೂ, ಕ್ರೈಸ್ತ ಹಾಗೂ ಇತರ ಸಮುದಾಯಗಳ ಪಾಲು ತಲಾ ಶೇ.0.5ರಷ್ಟಿದೆ ಎಂದು ಗೊತ್ತಾಗಿದೆ.

ಇದೇ ಕ್ಷೇತ್ರದ ಹಾವಗೆಪ್ಪ ಎನ್ನುವ ವ್ಯಕ್ತಿ, ಕೇವಲ 2 ಬೂತ್‌ಗಳನ್ನು ಗುರಿಯಾಗಿಸಿಕೊಂಡು ಬರೋಬ್ಬರಿ 174 ಆಕ್ಷೇಪಣೆಗಳನ್ನು ಸಲ್ಲಿಸಿದ್ದು, ಶೇ.98.3ರಷ್ಟು ಮುಸ್ಲಿಮ್ ಮತದಾರರ ವಿರುದ್ಧವಾಗಿದೆ. ಕಲ್ಯಾಣ ರಾವ್ ಎಂಬಾತ ಒಂದೇ ಬೂತ್‌ನಲ್ಲಿ 158 ಆಕ್ಷೇಪಣೆಗಳನ್ನು ಸಲ್ಲಿಸಿದ್ದು, ದತ್ತಾಂಶದ ಪ್ರಕಾರ ಶೇ.100ರಷ್ಟು ಮುಸ್ಲಿಮ್ ಮತದಾರರ ವಿರುದ್ಧವೇ ಸಲ್ಲಿಸಿರುವುದು ಆಘಾತಕಾರಿಯಾಗಿದೆ.

ಈ ಎಲ್ಲ ‘ಬಲ್ಕ್ ಆಕ್ಷೇಪಣೆಗಳಲ್ಲಿ ಉಲ್ಲೇಖಿಸಿರುವ ಕಾರಣಗಳ ಕಲಂ ಗಮನಿಸಿದಾಗ ಗೈರು ಮತ್ತು ಶಾಶ್ವತ ಸ್ಥಳಾಂತರ ಹಾಗೂ ಈಗಾಗಲೇ ನೋಂದಾಯಿತರಾಗಿದ್ದಾರೆ ಎನ್ನುವುದೇ ತಿಳಿಸಿದೆ. ಅಂದರೆ, ಮತದಾರರು ನೀಡಿರುವ ವಿಳಾಸದಲ್ಲಿ ವಾಸಿಸುತ್ತಿಲ್ಲ ಅಥವಾ ಈಗಾಗಲೇ ಮತ್ತೊಂದು ಕಡೆ ಮತದಾರರಾಗಿ ನೋಂದಾಯಿತರಾಗಿದ್ದಾರೆಂಬ ಕಾರಣಗಳನ್ನು ನಮೂನೆ-7ಗಳಲ್ಲಿ ಉಲ್ಲೇಖಿಸಿದ್ದಾರೆ. ಒಟ್ಟಿನಲ್ಲಿ ಆಯೋಗ ಹೇಳುವ ಓರ್ವ ವ್ಯಕ್ತಿ 50 ಅರ್ಜಿ ಮಾತ್ರ ಸಲ್ಲಿಕೆ ಎನ್ನುವ ನಿಯಮವೂ ಇಲ್ಲಿ ಸ್ಪಷ್ಟವಾಗಿ ಉಲ್ಲಂಘನೆ ಮಾಡಲಾಗಿರುವುದು ಎದ್ದು ಕಾಣುತ್ತಿದೆ.

ಭಾಲ್ಕಿ-ಬಬಲೇಶ್ವರ ಕ್ಷೇತ್ರಗಳೇ ಟಾರ್ಗೆಟ್?

50ಕ್ಕಿಂತ ಹೆಚ್ಚು ಆಕ್ಷೇಪಣೆ ಸಲ್ಲಿಸಿದ 29 ಮಂದಿಯ ಪೈಕಿ ಬಹುತೇಕರು ಬೀದರ್‌ನ ಭಾಲ್ಕಿ ಮತ್ತು ವಿಜಯಪುರದ ಬಬಲೇಶ್ವರ ಕ್ಷೇತ್ರಗಳಿಗೆ ಸೇರಿದ್ದಾರೆ. ಈ 29 ಮಂದಿ ಸಲ್ಲಿಸಿರುವ 4,136 ಆಕ್ಷೇಪಣೆಗಳಲ್ಲಿ, ಬಬಲೇಶ್ವರದ 6 ಮಂದಿ ಸೇರಿ 1,490, ಭಾಲ್ಕಿಯ 23 ಮಂದಿ ಸೇರಿ 2,646 ಆಕ್ಷೇಪಣೆಗಳು ಸಲ್ಲಿಸಿದ್ದಾರೆ.

ಚುನಾವಣಾ ಆಯೋಗ ನಿಯಮಗಳನ್ನು ಗಾಳಿಗೆ ತೂರಿದ ಆಸಾಮಿಗಳು!

ಹುಚ್ಚಪ್ಪ ಗಣಿಗಾರ್-493, ಗೋವಿಂದರಾಜ್ ಮುಡ್ನೂರು-440, ಜಗನ್ನಾಥ್-241, ಭೀಮಪ್ಪ ಗೋಳಸಂಗಿ-208, ಬಾಬು ರಾವ್-192, ದೇವಾನಂದ್-177, ಹಾವಗೆಪ್ಪ-174, ಕಲ್ಯಾಣ ರಾವ್-158, ಮಹೇಶ್ ಮುಕಾರ್ತಿಹಾಳ್-157, ಅಮೀರ್-150, ಸುನಿಲ್ ಕುಮಾರ್-148, ವಿನಾಯಕ ಮಾಮದಾಪುರ-127, ಸಂತೋಷ್-125, ವಿಜಯಕುಮಾರ್-120, ಪ್ರಮೋದ್-119, ಲಕ್ಷ್ಮಣ್-116, ನಲ್ಲರಲ್ಲ ಶ್ರೀನಿವಾಸರೆಡ್ಡಿ-113, ಜಗದೇಶ್ವರ್-100, ಪಾಂಡುರಂಗ್-99, ಮಧಾಕರ್-86, ಶಿವರಾಜ್-84, ಪಾಂಡು ರಂಗ-80, ಚಂದ್ರಕಾಂತ್-68, ಅಭಿಷೇಕ್ ನಾಯಕ್-65, ಗೌಸುದ್ದೀನ್-64, ಜಗದೀಶ್ ಕನ್ನಾಳೆ-61, ವೆಂಕಟ್-58, ಸಂಗಮೇಶ್-57 ಹಾಗೂ ನಾಗನಾಥ್-56.

ಯಾರ ವಿರುದ್ಧ ಎಷ್ಟು ಆಕ್ಷೇಪಣೆ?

8ಹುಚ್ಚಪ್ಪ ಗಣಿಗಾರ್ 493 ಆಕ್ಷೇಪಣೆಗಳಲ್ಲಿ ಶೇ.90.1ರಷ್ಟು ಮುಸ್ಲಿಮರು.

8ಗೋವಿಂದರಾಜ್ ಮುಡ್ನೂರ್ 440ರಲ್ಲಿ ಶೇ.78.4ರಷ್ಟು ಮುಸ್ಲಿಮರು.

8ಜಗನ್ನಾಥ್ 241ರಲ್ಲಿ ಶೇ.97.5ರಷ್ಟು ಮುಸ್ಲಿಮರು.

8ಬಾಬು ರಾವ್ 192ರಲ್ಲಿ ಶೇ.98.4ರಷ್ಟು ಮುಸ್ಲಿಮರು.

8ಹಾವಗೆಪ್ಪ 174ರಲ್ಲಿ ಶೇ.98.3ರಷ್ಟು ಮುಸ್ಲಿಮರು.

8ಕಲ್ಯಾಣ ರಾವ್ 158 ಆಕ್ಷೇಪಣೆಗಳಲ್ಲಿ ಶೇ.100ರಷ್ಟು ಮುಸ್ಲಿಮ್ ಮತದಾರರ ವಿರುದ್ಧವಾಗಿವೆ.

ಮುಸ್ಲಿಮರ ಹೆಸರು ಅಳಿಸುವ ಗುರಿ?

‘50ಕ್ಕೂ ಹೆಚ್ಚು ನಮೂನೆ-7 ಆಕ್ಷೇಪಣೆ ಸಲ್ಲಿಸಿದ 29 ಮಂದಿಯ ಪೈಕಿ ಮೂರು ಮಂದಿ ಸಲ್ಲಿಸಿರುವ ಎಲ್ಲ ಆಕ್ಷೇಪಣೆಗಳೂ ಮುಸ್ಲಿಮ್ ಮತದಾರರ ವಿರುದ್ಧವೇ ಇವೆ. ಭಾಲ್ಕಿ ಕ್ಷೇತ್ರದ ಕಲ್ಯಾಣ ರಾವ್ ಒಂದೇ ಬೂತ್‌ನಲ್ಲಿ 158, ಗೌಸುದ್ದೀನ್ ನಾಲ್ಕು ಬೂತ್‌ಗಳಲ್ಲಿ 64 ಹಾಗೂ ಸಂಗಮೇಶ್ ಎರಡು ಬೂತ್‌ಗಳಲ್ಲಿ 57 ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ. ಈ ಮೂವರು ಸೇರಿ ಸಲ್ಲಿಸಿರುವ 279 ಆಕ್ಷೇಪಣೆಗಳ ಪೈಕಿ ಶೇ.100ರಷ್ಟು ಮುಸ್ಲಿಮ್ ಮತದಾರರ ವಿರುದ್ಧ ಸಲ್ಲಿಕೆಯಾಗಿವೆ.

ಒಬ್ಬ ವ್ಯಕ್ತಿ ಒಂದೇ ಕ್ಷೇತ್ರದ ವಿವಿಧ ಬೂತ್‌ಗಳಲ್ಲಿ ನೂರಾರು ಮತದಾರರ ವಿರುದ್ಧ ನಮೂನೆ-7 ಸಲ್ಲಿಸುವುದು ಕಾನೂನುಬದ್ಧವಾಗಿ ಸಾಧ್ಯವೇ? ಆ ಅರ್ಜಿಗಳಲ್ಲಿರುವ ಆರೋಪಗಳನ್ನು ಸ್ಥಳ ಪರಿಶೀಲನೆಯ ಮೂಲಕ ದೃಢಪಡಿಸಲಾಗಿದೆಯೇ? ಅರ್ಜಿದಾರರು ಪ್ರತಿಯೊಬ್ಬ ಮತದಾರರ ವೈಯಕ್ತಿಕ ಸ್ಥಿತಿಯ ಬಗ್ಗೆ ಹೇಗೆ ಮಾಹಿತಿ ಪಡೆದರು? ಒಂದೇ ದಿನ ಅಥವಾ ಕೆಲವೇ ದಿನಗಳಲ್ಲಿ ಮಾಹಿತಿಯನ್ನೊಳಗೊಂಡಿರುವ ಇಷ್ಟೊಂದು ಮುದ್ರಿತ ಅರ್ಜಿಗಳು ಎಲ್ಲಿಂದ ಸಿದ್ಧವಾಯಿತು? ಈ ಅರ್ಜಿಗಳಲ್ಲಿ ನೀಡಿರುವ ಮಾಹಿತಿ ತಪ್ಪಾಗಿದ್ದರೆ ಆಕ್ಷೇಪಣೆದಾರರನ್ನು ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುತ್ತದೆಯೇ?

-ಕೆ.ಎಲ್.ಅಶೋಕ್, ನಾಗರಿಕ ಮತಕಾವಲು ಸಮಿತಿ

Tags

Form 7MuslimsVoters
share
ಮನೋಜ್ ಆಜಾದ್
ಮನೋಜ್ ಆಜಾದ್
Next Story
X