Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮೆಕಾಲೆ ಹುಟ್ಟುಹಾಕಿದ ಗುಲಾಮಗಿರಿ...

ಮೆಕಾಲೆ ಹುಟ್ಟುಹಾಕಿದ ಗುಲಾಮಗಿರಿ ಮನಸ್ಥಿತಿಯಿಂದ ಮುಕ್ತವಾಗಬೇಕೆಂಬ ಮೋದಿ ಕರೆ | ವಿಮೋಚನೆ ಹೆಸರಿನಲ್ಲಿ ಬಿಜೆಪಿ ಸಿದ್ಧಾಂತವನ್ನು ಹೇರುವ ಯೋಜನೆಯಾಗಿದೆಯೇ?

ಪ್ರವೀಣ್ ಎನ್.ಪ್ರವೀಣ್ ಎನ್.20 Nov 2025 10:24 AM IST
share
ಮೆಕಾಲೆ ಹುಟ್ಟುಹಾಕಿದ ಗುಲಾಮಗಿರಿ ಮನಸ್ಥಿತಿಯಿಂದ ಮುಕ್ತವಾಗಬೇಕೆಂಬ ಮೋದಿ ಕರೆ | ವಿಮೋಚನೆ ಹೆಸರಿನಲ್ಲಿ ಬಿಜೆಪಿ ಸಿದ್ಧಾಂತವನ್ನು ಹೇರುವ ಯೋಜನೆಯಾಗಿದೆಯೇ?

ಮೆಕಾಲೆ ಭಾರತದಲ್ಲಿ ಹುಟ್ಟುಹಾಕಿದ ಗುಲಾಮಗಿರಿ ಮನಸ್ಥಿತಿಯಿಂದ ಮುಂದಿನ ಹತ್ತು ವರ್ಷಗಳಲ್ಲಿ ನಮ್ಮನ್ನು ಮುಕ್ತಗೊಳಿಸಿಕೊಳ್ಳಲು ನಾವು ಸಂಕಲ್ಪ ಮಾಡಬೇಕು ಎಂದು ಪ್ರಧಾನಿ ಮೋದಿ ಕರೆ ಕೊಟ್ಟಿದ್ದಾರೆ. ಅಲ್ಲದೆ, ಹತ್ತು ವರ್ಷಗಳಲ್ಲಿ ನಾವು ಈ ಮನಸ್ಥಿತಿಯನ್ನು ಬೇರುಸಹಿತ ಕಿತ್ತುಹಾಕುತ್ತೇವೆ ಎಂದಿದ್ದಾರೆ. ದಿಲ್ಲಿಯಲ್ಲಿ ರಾಮನಾಥ್ ಗೋಯೆಂಕಾ ಉಪನ್ಯಾಸ ನೀಡುತ್ತಾ ಅವರು ಈ ‘ವಿಮೋಚನೆ’ಯ ಮಾತಾಡಿದ್ದಾರೆ.

ಪ್ರಶ್ನೆಯೆಂದರೆ, ಯಾವುದೇ ಸಮಾಜ ಹೀಗೆ ಪ್ರತಿಜ್ಞೆ ತೆಗೆದುಕೊಳ್ಳುವ ಮೂಲಕ ವಸಾಹತುಶಾಹಿ ಮನಸ್ಥಿತಿಯಿಂದ ತನ್ನನ್ನು ತಾನು ಮುಕ್ತಗೊಳಿಸಿಕೊಳ್ಳಬಹುದೇ ಎಂಬುದು.

ಪ್ರಧಾನಿ ಈಗ ಹತ್ತು ವರ್ಷಗಳ ಕಾಲಾವಕಾಶ ನೀಡುತ್ತಿದ್ದಾರೆ ಮತ್ತು ಗಮನಿಸಲೇಬೇಕಾದ ಸಂಗತಿಯೆಂದರೆ, ಮೋದಿ 2022ರಿಂದ ಈ ಹೇಳಿಕೆಯನ್ನು ಕೊಡುತ್ತಾ ಬಂದಿದ್ದಾರೆ.

2022ರ ಆಗಸ್ಟ್ 15ರಂದು ಪ್ರಧಾನಿ ಮೋದಿ ಕೆಂಪು ಕೋಟೆಯಿಂದ ಮಾತನಾಡಿದಾಗ, ವಸಾಹತುಶಾಹಿ ಮನಸ್ಥಿತಿಯಿಂದ ವಿಮೋಚನೆಗೆ ಗಡುವನ್ನು ನಿಗದಿಪಡಿಸಿರಲಿಲ್ಲ.

ಆದರೆ ಮೂರು ವರ್ಷಗಳ ನಂತರ, ಈಗ ಅವರು ಒಂದು ಗಡುವು ಹಾಕಿದ್ದಾರೆ. 2035ರ ವೇಳೆಗೆ ವಸಾಹತುಶಾಹಿ ಮನಸ್ಥಿತಿಯಿಂದ ಮುಕ್ತರಾಗಬೇಕು ಎಂದು ಪಣ ತೊಡಬೇಕು ಎಂದಿದ್ದಾರೆ.

ಆದರೆ 2022ರಿಂದ 2025ರ ಈ ಮೂರು ವರ್ಷಗಳಲ್ಲಿ ವಸಾಹತುಶಾಹಿ ಚಿಂತನೆಯಿಂದ ಅವರು ಎಷ್ಟು ವಿಮೋಚನೆ ಸಾಧಿಸಿದ್ದಾರೆ ಎಂಬುದನ್ನು ವಿವರಿಸುತ್ತಾರೆಯೇ?

ಮೂರು ವರ್ಷಗಳ ಹಿಂದಿನ ಭಾಷಣದಲ್ಲಿ ಮೋದಿ ಏನು ಹೇಳಿದರೆಂಬುದನ್ನು ಪತ್ರಕರ್ತ ರವೀಶ್ ಕುಮಾರ್ ನೆನಪಿಸುತ್ತಾರೆ.

ಅವರು ತಮ್ಮ ಸರಕಾರದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಪ್ರಸ್ತಾಪ ಮಾಡುತ್ತ, ಅದನ್ನು ‘‘ನಮ್ಮದೇ ಕೌಶಲ್ಯಗಳನ್ನು ಆಧರಿಸಿದ ಒಂದು ಶಕ್ತಿಯಾಗಿದೆ ಮತ್ತು ನಮ್ಮನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಲು ನೆರವಾಗುತ್ತದೆ’’ ಎಂದಿರುವುದನ್ನು ರವೀಶ್ ಕುಮಾರ್ ನೆನಪಿಸಿದ್ದಾರೆ.

ಸಂಪ್ರದಾಯ ಮತ್ತು ಸಂಸ್ಕೃತಿಯ ಹೆಸರಿನಲ್ಲಿ ಅಸ್ಪಷ್ಟವಾಗಿ ಏನೋ ಹೇಳಿದಂತೆ ಮಾಡುವುದು ಮೋದಿಯ ರೀತಿ.ಆದರೆ ಅದನ್ನೇ ನೆಪವಾಗಿಸಿಕೊಂಡು ವಸಾಹತುಶಾಹಿ ಮನಸ್ಥಿತಿಯಿಂದ ವಿಮೋಚನೆ ಪಡೆಯಬಹುದು ಎಂದುಬಿಡಲು ಸಾಧ್ಯವಿಲ್ಲ.

ಪಶ್ಚಿಮದಲ್ಲಿಯೂ ಕುಟುಂಬದ ಬಗ್ಗೆ ಆಳವಾದ ಭಕ್ತಿ ಇದೆ. ಅಲ್ಲಿನ ನಾಯಕರು ಕೂಡ ಚುನಾವಣೆ ಸಮಯದಲ್ಲಿ ಕೌಟುಂಬಿಕ ಮೌಲ್ಯಗಳ ಬಗ್ಗೆ ಹೇಳುತ್ತಾರೆ. ಜನರು ಕೂಡ ಒಬ್ಬ ನಾಯಕನನ್ನು ಆತ ಎಷ್ಟು ಕುಟುಂಬ ಆಧರಿತ ಮತ್ತು ಕುಟುಂಬಕ್ಕೆ ಎಷ್ಟು ಸಮಯ ಕೊಡುತ್ತಾರೆ ಎಂಬುದರ ಆಧಾರದ ಮೇಲೆ ನಿರ್ಣಯಿಸುತ್ತಾರೆ. ಇದು ಅವರ ಮೌಲ್ಯಮಾಪನಕ್ಕೂ ಒಂದು ಆಧಾರವಾಗಿದೆ.

ಆದರೆ ಭಾರತದಲ್ಲಿ ಪಾಶ್ಚಿಮಾತ್ಯ ಸಾಮಾಜಿಕ ಜೀವನದ ಬಗ್ಗೆ ಒಂದು ಮಿಥ್ ಹರಡಲಾಗಿದೆ.

ಕುಟುಂಬ ಎಂಬ ಸಂಸ್ಥೆಯೇ ಅಲ್ಲಿ ಇಲ್ಲ ಎನ್ನಲಾಗುತ್ತದೆ. ಆದರೆ ಅದು ಖಂಡಿತವಾಗಿಯೂ ಅಲ್ಲಿ ಇದೆ ಮತ್ತು ಯಾವುದೇ ಇತರ ಸಮಾಜಕ್ಕಿಂತಲೂ ಯಾವುದೇ ರೀತಿಯಲ್ಲಿ ಕಡಿಮೆಯಿಲ್ಲದ ಮಟ್ಟಿಗೆ ಇದೆ.

ವಸಾಹತುಶಾಹಿ ಮನಸ್ಥಿತಿಗೆ ಬಲಿಯಾದವರು ಯಾರು ಎಂದು ಮೋದಿಯವರು ಮೊದಲು ಹೇಳಬೇಕು. ವಸಾಹತುಶಾಹಿ ಪ್ರಭಾವವೇ ಇಲ್ಲದಂಥ ಪರ್ಯಾಯ, ಭಾರತೀಯ ಮಾದರಿ ನಮ್ಮ ಪೊಲೀಸ್ ವ್ಯವಸ್ಥೆಯಂತಹ ಸಂದರ್ಭದಲ್ಲಿ ಇದೆಯೆ?

ತಪ್ಪಿತಸ್ಥರೆಂದು ಕಂಡುಬಂದರೆ ಪ್ರಧಾನಿ ವಿರುದ್ಧವೇ ಎಫ್‌ಐಆರ್ ದಾಖಲಿಸುವ ನೈತಿಕ ಶಕ್ತಿಯನ್ನು ಹೊಂದಿರುವ ಯಾವುದೇ ಮಾದರಿ ಇದೆಯೇ?

ಚುನಾವಣಾ ಆಯುಕ್ತರು ಪ್ರಧಾನಿಯನ್ನು ಸಹ ತನಿಖೆಗೆ ಒಳಪಡಿಸುವ, ಪ್ರಶ್ನಿಸುವಂಥ ವ್ಯಕ್ತಿಯಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಅದರೆ ಅಂಥ ಚುನಾವಣಾ ಆಯುಕ್ತರನ್ನು ನೋಡಲು ಈಗ, ಮೋದಿಜಿ ಕಾಲದಲ್ಲಿ ಸಾಧ್ಯವಿದೆಯೇ?

ನ್ಯಾಯಾಲಯದಿಂದ ಹಿಡಿದು ಎಲ್ಲಾ ವ್ಯವಸ್ಥೆಗಳು ಸರಕಾರದ ಅಧೀನವೆಂದು ಕಾಣುವ ಸನ್ನಿವೇಶವಿದೆ. ವ್ಯಕ್ತಿಪೂಜೆಯೇ ಪ್ರಧಾನವಾಗಿರುವ ಈ ಮಾದರಿಗೂ ವಸಾಹತುಶಾಹಿ ಮಾದರಿಗೂ ಏನಾದರೂ ವ್ಯತ್ಯಾಸವಿದೆಯೆ?

ಗಾಂಧೀಜಿಯವರ ಚಳವಳಿ ಎಲ್ಲಾ ರೀತಿಯ ವಸಾಹತುಶಾಹಿ ಚಿಂತನೆಯ ವಿರುದ್ಧದ ಚಳವಳಿಯಾಗಿತ್ತು.ಜನರು ಪ್ರತಿಭಟಿಸಲು ಪ್ರಾರಂಭಿಸಿದ್ದರು. ಇಂದು, ಯಾರಾದರೂ ಪ್ರತಿಭಟಿಸಲು ಹೋದರೆ, ಅವರನ್ನೇ ಅಪರಾಧಿಗಳು ಎಂಬಂತೆ ನೋಡಲಾಗುತ್ತಿದೆ.

ರೈತರು ಚಳವಳಿಗೆ ಇಳಿದಾಗ, ಮುಳ್ಳುತಂತಿ ಹಾಕಲಾಯಿತು. ಸೋನಮ್ ವಾಂಗ್ಚುಕ್ ಪ್ರತಿಭಟಿಸಿದ್ದಕ್ಕೆ ಜೈಲಿಗೆ ಹಾಕಲಾಯಿತು.

ಬ್ರಿಟಿಷ್ ಯುಗದಲ್ಲಿ ಪ್ರತಿಭಟನೆಗಳನ್ನು ಪ್ರಭುತ್ವ ವಿರೋಧಿ ಎಂದು ನೋಡಲಾಗುತ್ತಿತ್ತು. ಇಂದು ಕೂಡ ಅದೇ ಮನಸ್ಥಿತಿಯಿದೆ. ಹಾಗಾದರೆ ಬದಲಾಗಬೇಕಿರುವುದು ಯಾರ ಮನಸ್ಥಿತಿ ಎಂಬ ಪ್ರಶ್ನೆಯನ್ನು ಕೇಳಬೇಕಾಗುತ್ತದೆ.

ಪ್ರಧಾನಿ ಮೋದಿ ತಮ್ಮ ತುತ್ತೂರಿಯಾಗಿರುವ ಮಡಿಲ ಮೀಡಿಯಾದ ಮನಸ್ಥಿತಿಯನ್ನು ಬದಲಾಯಿಸುತ್ತಾರೆಯೆ?

ಬ್ರಿಟಿಷರ ಕಾಲದ ಕಾನೂನನ್ನು ರದ್ದುಗೊಳಿಸುವ ಮೂಲಕ, ವಸಾಹತುಶಾಹಿ ಕಾಲದ ಕಾನೂನು ತೆಗೆಯುತ್ತಿದ್ದೇವೆ ಎನ್ನಲಾಗುತ್ತದೆ. ಆದರೆ, ಬರೀ ಸೆಕ್ಷನ್‌ಗಳ ಸಂಖ್ಯೆ ಬದಲಿಸಿದರೆ ವಸಾಹತುಶಾಹಿ ಮನಸ್ಥಿತಿಯಿಂದ ಮುಕ್ತವಾದಂತಾಗುತ್ತದೆಯೆ?

ಐಪಿಸಿಯನ್ನು ಭಾರತೀಯ ನ್ಯಾಯಾಂಗ ಸಂಹಿತೆ ಎಂದು ಬದಲಿಸಿಬಿಟ್ಟರೆ ಅದು ಭಾರತೀಯ ಚಿಂತನೆಯಾಗುತ್ತದೆಯೆ?

ಅದರಲ್ಲಿ ಎಷ್ಟು ವಿಮೋಚನೆ ಇದೆ?

ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ‘ದಿಲ್ ಸೆ’ ಎಂಬ ಶೋನಲ್ಲಿ ಭಾರತೀಯ ನ್ಯಾಯ ಸಂಹಿತೆ ಎಷ್ಟು ಭಾರತೀಯವಾಗಿದೆ ಮತ್ತು ವಸಾಹತುಶಾಹಿ ಚಿಂತನೆಯಿಂದ ಅದು ಎಷ್ಟು ಮುಕ್ತವಾಗಿದೆ ಎಂದು ಚರ್ಚಿಸಿದ್ದಾರೆ.

ಅದರಲ್ಲಿ ಸಿಬಲ್ ಅವರು, ಭಾರತೀಯ ನ್ಯಾಯ ಸಂಹಿತೆಯಲ್ಲಿ ಶೇ. 90ರಿಂದ 95 ಕಾನೂನುಗಳು ಬದಲಾಗದೆ ಉಳಿದಿವೆ ಎಂದು ಬಹಿರಂಗಪಡಿಸಿದ್ಧಾರೆ.

ಅವು ಐಪಿಸಿಯಿಂದ ಬಂದವು. ಕೇವಲ ಶೇ. 5ರಿಂದ 7ರಷ್ಟು ಮಾತ್ರ ಬದಲಾಯಿಸಲಾಗಿದೆ ಮತ್ತು ಅವು ಕೂಡ ಹೆಚ್ಚು ವಿವಾದಾತ್ಮಕವಾಗಿವೆ.

ವಸಾಹತುಶಾಹಿ ಮನಸ್ಥಿತಿಯವೆಂದು ಹೇಳಲಾಗುವ ಎರಡು ಪ್ರಮುಖ ಕಾನೂನುಗಳಲ್ಲಿ ದೇಶದ್ರೋಹಕ್ಕೆ ಸಂಬಂಧಿಸಿದ್ದು ಕೂಡ ಒಂದು.

ಸರಕಾರದ ಭದ್ರತೆ ಅಥವಾ ಸಮಗ್ರತೆಯ ವಿರುದ್ಧ ಮಾತನಾಡುತ್ತಿದ್ಧಾರೆ ಎಂದು ಅನ್ನಿಸಿಬಿಟ್ಟರೆ ಸರಕಾರ ಅಂಥವರನ್ನು ಜೈಲಿಗೆ ಹಾಕಬಹುದು.

ಎರಡನೆಯದು, ಕೇವಲ ಅನುಮಾನದ ಮೇಲೆ ಯಾರನ್ನಾದರೂ 15 ದಿನಗಳವರೆಗೆ ಪೊಲೀಸ್ ಕಸ್ಟಡಿಯಲ್ಲಿ ಇಡುವುದು.

ಅನುಮಾನದ ಆಧಾರದ ಮೇಲೆ ಬಂಧಿಸಬಹುದಾದ ಅವಕಾಶ ಪ್ರಪಂಚದಲ್ಲಿ ಎಲ್ಲಿಯೂ ಇಲ್ಲ ಎಂದು ಸಿಬಲ್ ಹೇಳುತ್ತಾರೆ.

ಬ್ರಿಟಿಷ್ ಸರಕಾರ ಇದನ್ನೇ ಮಾಡುತ್ತಿತ್ತು ಮತ್ತು ಈ ನಿಯಮವನ್ನು ಈಗಲೂ ಜಾರಿಯಲ್ಲಿಡುವುದು ವಸಾಹತುಶಾಹಿ ಗುಲಾಮಗಿರಿಯ ಸಂಕೇತವಾಗಿದೆ.

ಸ್ವಾತಂತ್ರ್ಯ ಚಳವಳಿಯಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದರೂ, ವಸಾಹತುಶಾಹಿ ಮನಸ್ಥಿತಿಯಿಂದ ಸ್ವಾತಂತ್ರ್ಯ ಸಿಕ್ಕಿಲ್ಲ ಎಂಬ ತಪ್ಪು ಕಲ್ಪನೆ ಹರಡಲಾಗುತ್ತಿದೆ.

ಸ್ವಾತಂತ್ರ್ಯ ಹೋರಾಟ ವಸಾಹತುಶಾಹಿ ಆಳ್ವಿಕೆ ಮತ್ತು ಮನಸ್ಥಿತಿಯನ್ನು ವಿರೋಧಿಸುವ ಮೂಲಕವೇ ಹುಟ್ಟಿದ್ದಾಗಿತ್ತು. ಜನರು ವಿದೇಶಿ ಬಟ್ಟೆಗಳನ್ನು ಸುಟ್ಟು ಖಾದಿ ಧರಿಸಲು ಪ್ರಾರಂಭಿಸಿದರು. ವಸಾಹತುಶಾಹಿ ಸರಕಾರದ ಬಗೆಗಿನ ವಿರೋಧ ಅದರ ಚಿಂತನೆಯ ಬಗೆಗಿನ ವಿರೋಧವೂ ಆಗಿತ್ತು. ಅದರ ಚಿಂತನೆಗೆ ವಿರೋಧವಿಲ್ಲದಿದ್ದರೆ, ಬ್ರಿಟಿಷರ ವಿರುದ್ಧ ಲಕ್ಷಾಂತರ ಭಾರತೀಯರು ಒಗ್ಗಟ್ಟಾಗಿ ಹೋರಾಡಲು ಸಾಧ್ಯವಾಗುತ್ತಿರಲಿಲ್ಲ.

ಬ್ರಿಟಿಷರು ಜೈಲುಗಳನ್ನು ಸೃಷ್ಟಿಸಿದರು ಮತ್ತು ನಮ್ಮ ಜನರು ಜೈಲಿಗೆ ಹೋಗುವ ದಿಟ್ಟತನದ ಮೂಲಕವೇ ವಸಾಹತುಶಾಹಿ ಮನಸ್ಥಿತಿಯ ವಿರುದ್ಧ ನಿಂತರು.

ವಸಾಹತುಶಾಹಿ ಮನಸ್ಥಿತಿಯನ್ನು ಗುಲಾಮಗಿರಿ ಮನಸ್ಥಿತಿ ಎಂದೂ ಕರೆಯುತ್ತಾರೆ. ಈ ಎರಡೂ ಪದಗಳು ಗಾಂಧಿಯವರ ಚಳವಳಿಯ ಕಾಲದಿಂದಲೂ ಅಸ್ತಿತ್ವದಲ್ಲಿವೆ.

ಮೆಕಾಲೆ ರೂಪಿಸಿದ ಶಿಕ್ಷಣ ನೀತಿ ಭಾರತದಲ್ಲಿ ಒಂದು ವರ್ಗವನ್ನು ಸೃಷ್ಟಿಸಿತು ಮತ್ತದು ತನ್ನದೇ ಆದ ಭಾಷೆಯಲ್ಲಿ ಬ್ರಿಟಿಷ್ ಆಳ್ವಿಕೆಯನ್ನು ವಿರೋಧಿಸತೊಡಗಿತು.

ಇಂಗ್ಲಿಷ್ ಕೇವಲ ಗುಲಾಮಗಿರಿಯ ಭಾಷೆಯಾಗಿರಲಿಲ್ಲ. ವಸಾಹತುಶಾಹಿಯನ್ನು ವಿರೋಧಿಸಲು ಅನೇಕ ಜನರು ಇಂಗ್ಲಿಷ್ ಅನ್ನೇ ಅಸ್ತ್ರವಾಗಿ ಬಳಸಿದರು. ಹಾಗಿರುವಾಗ, ಇಂಗ್ಲಿಷ್ ಅನ್ನು ಗುಲಾಮ ಮನಸ್ಥಿತಿಯ ಭಾಷೆ ಎಂದು ಕರೆಯಬಹುದೇ? ಅದು ನಮ್ಮದೇ ಭಾಷೆಯಾಗಿ ಬಹಳ ಕಾಲವಾಗಿದೆಯಲ್ಲವೆ?

1947ಕ್ಕಿಂತ ಮೊದಲು ಇಂಗ್ಲಿಷ್ ಅನ್ನು ವಿರೋಧಿಸುತ್ತಿದ್ದುದು ಮತ್ತು ಈಗ ವಿರೋಧಿಸುವುದು ಎರಡೂ ಒಂದೇ ಆಗಲಾರದು. ಇಂದಿನ ವಿರೋಧ ವಸಾಹತುಶಾಹಿ ಮನಸ್ಥಿತಿಯನ್ನು ವಿರೋಧಿಸುವ ರೀತಿಯದ್ದಲ್ಲ. ಹೀಗಿರುವಾಗ, ಮೋದಿ ಏಕೆ ಪ್ರಮಾಣ ಮಾಡಲು ಹೇಳುತ್ತಿದ್ದಾರೆ? ಏಕೆ 2035ರ ಗಡುವು ಹಾಕುತ್ತಿದ್ದಾರೆ?

ಯಾವುದೇ ಸರಕಾರಿ ಶಾಲೆಯಲ್ಲಿ ಇಂಗ್ಲಿಷ್‌ನಲ್ಲಿ ಕಲಿಸುವುದಿಲ್ಲ ಎಂಬ ಕಾನೂನನ್ನು ಜಾರಿಗೆ ತರಲು ಅವರಿಗೆ ಸಾಧ್ಯವಿದೆಯೆ?

ವಸಾಹತುಶಾಹಿ ಮನಸ್ಥಿತಿ ಎಂದೊಡನೆ ಅದು ಇಂಗ್ಲಿಷ್ ಮತ್ತು ಹಿಂದಿಯ ಚೌಕಟ್ಟಿಗೆ ಮಾತ್ರ ಸೀಮಿತವಾಗಲಾರದು.ವಸಾಹತುಶಾಹಿ ಮನಸ್ಥಿತಿಯಿಂದ ಮುಕ್ತವಾಗುವುದರ ಚಿಹ್ನೆಗಳೇನು ಎಂಬುದನ್ನೂ ಮೋದಿ ವಿವರಿಸಬೇಕಿದೆ.ಆಹಾರ ಪದ್ಧತಿಯಿಂದ ಹಿಡಿದು ಬಟ್ಟೆಯವರೆಗೆ, ತಂತ್ರಜ್ಞಾನದವರೆಗೆ ಹೊರಗಿನ ವಿಚಾರಗಳಿಂದ ನಾವು ಇನ್ನೂ ಪ್ರಭಾವಿತರಾಗಿದ್ದೇವೆ.

ಇವುಗಳಿಂದ ನಾವು ನಮ್ಮನ್ನು ಮುಕ್ತಗೊಳಿಸಿಕೊಳ್ಳಲು ಸಾಧ್ಯವಿದೆಯೇ ಮತ್ತು ಅದು ನಿಜವಾಗಿಯೂ ಅಗತ್ಯವಿದೆಯೇ?

ನಮ್ಮಲ್ಲಿಯೇ ಫ್ಯೂಡಲ್ ಆದ ಆಲೋಚನೆಗಳಿರುವಾಗ, ನಾವೇಕೆ ವಸಾಹತುಶಾಹಿಯನ್ನು ತೀರಾ ದೂಷಿಸಬೇಕು ಮತ್ತು ಅದರಿಂದ ಮುಕ್ತವಾಗಬೇಕೆಂದು ಏಕೆ ಹೇಳಬೇಕು?

ಊಳಿಗಮಾನ್ಯ ಮನಸ್ಥಿತಿಯಿಂದ ವಿಮೋಚನೆ ಹೊಂದುವ ಬಗ್ಗೆ ಯಾರೂ ಮಾತನಾಡುವುದಿಲ್ಲ. ಇಂದಿಗೂ ಮುಂದುವರಿದಿರುವ ಗುಲಾಮಗಿರಿಯ ಮನಸ್ಥಿತಿ ಅದೇ ಅಲ್ಲವೇ?

ಇರುವ ಪ್ರಜಾಪ್ರಭುತ್ವದ ಮೌಲ್ಯಗಳನ್ನೇ ನಾಶ ಮಾಡಲು ನಿಂತವರು ವಸಾಹತುಶಾಹಿ ಮನಸ್ಥಿತಿಯಿಂದ ಮುಕ್ತವಾಗಬೇಕೆಂದು ಹೇಳುತ್ತಿರುವುದೇ ವಿಚಿತ್ರವಾಗಿದೆ.

ಈಗ ಇವರು ಭಾರತೀಯವಾದುದರ ಬಗೆಗೆ ಹೆಮ್ಮೆಪಡಬೇಕು ಎನ್ನುವ ಹೆಸರಿನಲ್ಲಿ ಮಾಡುತ್ತಿರುವ ರಾಜಕೀಯಕ್ಕೂ ಅವತ್ತು ಮೆಕಾಲೆ ಮಾಡಿದ್ದಕ್ಕೂ ಏನೂ ವ್ಯತ್ಯಾಸ ಇಲ್ಲ. ಜನರ ಚಿಂತನೆಯನ್ನು ದಮನಿಸುವುದು ಮತ್ತು ಅವರನ್ನು ತಮ್ಮ ಮೂಗಿನ ನೇರಕ್ಕೆ ಯೋಚಿಸಬೇಕು ಎಂದು ನಿರ್ಬಂಧಿಸುವುದೇ ದೊಡ್ಡ ವಸಾಹತುಶಾಹಿ ಮನಸ್ಥಿತಿಯಾಗಿದೆ.

ಇತ್ತೀಚೆಗೆ, ಹಿಂದಿಯ ಮೇಲೆ ಜೀವಮಾನವಿಡೀ ಕೆಲಸ ಮಾಡಿದ ಪ್ರೊಫೆಸರ್ ಫ್ರಾನ್ಸೆಸ್ಕಾ ಓರ್ಸಿನಿ ಅವರನ್ನು ದೂರವಿಡಲಾಯಿತು. ನಮ್ಮ ನಾಗರಿಕತೆಯನ್ನು ಅಧ್ಯಯನ ಮಾಡಲು ನಮಗೆ ವಿದೇಶಿ ಪ್ರಾಧ್ಯಾಪಕರು ಅಗತ್ಯವಿಲ್ಲ ಎಂದು ಅನೇಕ ಜನರು ಹೇಳಿದರು.

ಇದು ವಸಾಹತುಶಾಹಿ ಮನಸ್ಥಿತಿಯಿಂದ ನಮ್ಮನ್ನು ಮುಕ್ತಗೊಳಿಸುತ್ತದೆಯೇ?

ಹಾಗಾದರೆ, ಭಾರತ ಮಾತ್ರ, ಭಾರತೀಯರು ಮಾತ್ರ ಭಾರತದ ಬಗ್ಗೆ ಮಾತನಾಡಬೇಕೆ? ಟೀಕೆ ಮತ್ತು ಚರ್ಚೆ ಇಲ್ಲದಿದ್ದರೆ, ವಿವಿಧ ಪ್ರದೇಶಗಳು ಮತ್ತು ಭಾಷೆಗಳ ಜನರ ಭಾಗವಹಿಸುವಿಕೆ ಇಲ್ಲದಿದ್ದರೆ ಅದು ಎಂಥ ಮನಸ್ಥಿತಿ? ಹಾಗಾದಾಗ ಅಭಿವೃದ್ಧಿಯಾಗಲಿ, ಆಲೋಚನೆ ಹೊಸ ವಿಸ್ತಾರ ಪಡೆಯುವುದಾಗಲಿ ಹೇಗೆ ಸಾಧ್ಯ?

ಗುಜರಾತ್ ಮತ್ತು ಮಧ್ಯಪ್ರದೇಶ ಎರಡೂ ರಾಜ್ಯಗಳಲ್ಲಿ ಬಿಜೆಪಿ 20 ವರ್ಷಗಳಿಗೂ ಹೆಚ್ಚು ಕಾಲ ಅಧಿಕಾರದಲ್ಲಿದೆ.ಹಾಗಾದರೆ ಅಲ್ಲಿ ವಸಾಹತುಶಾಹಿ ಮನಸ್ಥಿತಿಯಿಂದ ಮುಕ್ತವಾಗಿರುವ ಯೂನಿವರ್ಸಿಟಿಯನ್ನು ಬಿಜೆಪಿ ಸ್ಥಾಪಿಸಿತೆ?

ಬಿಜೆಪಿ ಮಂತ್ರಿಗಳು ಮತ್ತು ನಾಯಕರ ಮಕ್ಕಳು ವಿದೇಶಕ್ಕೆ ಅಧ್ಯಯನ ಮಾಡಲು ಏಕೆ ಹೋಗುತ್ತಾರೆ? ಅಲ್ಲಿ ಅವರಿಗೆ ವಸಾಹತುಶಾಹಿ ಮನಸ್ಥಿತಿಯಿಂದ ಮುಕ್ತಿ ಸಿಕ್ಕಿದೆಯೇ?

ಹೊಸ ಶಿಕ್ಷಣ ನೀತಿಯನ್ನು 2020ರಲ್ಲಿ ಜಾರಿಗೆ ತರಲಾಯಿತು. ಆದರೆ ಇದರ ಪರಿಕಲ್ಪನೆಗಳು ಸಂಪೂರ್ಣವಾಗಿ ಭಾರತೀಯ ಎಂದು ಹೇಳಲು ಸಾಧ್ಯವಿದೆಯೆ?

ಕೋರ್ಸ್‌ಗಳಿಗೆ ಕ್ರೆಡಿಟ್ ವ್ಯವಸ್ಥೆ ಮತ್ತು ಪದವಿ ವ್ಯವಸ್ಥೆಯೂ ಸಹ ಭಾರತೀಯವೇ? ವಿಶ್ವವಿದ್ಯಾಲಯದ ಪರಿಕಲ್ಪನೆಯೇ ಭಾರತೀಯವಾಗಿದೆಯೇ?

ತಕ್ಷಶಿಲಾ, ನಳಂದ, ವಿಕ್ರಮಶಿಲಾ ಮತ್ತು ವಲ್ಲಭಿಯಂತಹ ಪ್ರಾಚೀನ ಭಾರತದಲ್ಲಿನ ವಿಶ್ವ ದರ್ಜೆಯವು, ಆ ಸಂಸ್ಥೆಗಳು ಬೋಧನೆ ಮತ್ತು ಸಂಶೋಧನೆಯ ಉನ್ನತ ಗುಣಮಟ್ಟಕ್ಕೆ ಮಾದರಿಯಾಗಿದ್ದವು, ವೈವಿಧ್ಯಮಯ ಹಿನ್ನೆಲೆ ಮತ್ತು ದೇಶಗಳ ವಿದ್ಯಾರ್ಥಿಗಳು ಮತ್ತು ವಿದ್ವಾಂಸರಿಗೆ ಪ್ರಯೋಜನ ನೀಡುತ್ತಿದ್ದವು ಎಂದೆಲ್ಲ ಹೊಸ ಶಿಕ್ಷಣ ನೀತಿಯಲ್ಲಿ ಬರೆಯಲಾಗಿದೆ. ಅದು ಭಾರತೀಯತೆಯ ಬಗ್ಗೆ ಮಾತನಾಡುತ್ತದೆ. ಆದರೆ ಅದೇ ಶಿಕ್ಷಣ ನೀತಿಯಲ್ಲಿ ಭಾರತೀಯತೆ ಎಷ್ಟು ಇದೆ?

ನಮ್ಮ ಸಂಸ್ಕೃತಿ ಮತ್ತು ಐತಿಹಾಸಿಕ ಸಂಪ್ರದಾಯಗಳ ಬಗ್ಗೆ ನಾವು ಹೆಮ್ಮೆಪಡಬೇಕು ಎಂದು ಹೇಳುವುದು ಒಳ್ಳೆಯದು.ಆದರೆ ಆ ಹೆಸರಿನಲ್ಲಿ ನಡೆಯುತ್ತಿರುವ ರಾಜಕೀಯವೇ ಬೇರೆಯಿದೆ.

ವೇದ ಕಾಲದ ಭಾಷೆ ಮತ್ತು ಪಶ್ಚಿಮದ ಭಾಷೆ ಎರಡನ್ನೂ ಮಾತನಾಡಲು ಸಾಧ್ಯವಿಲ್ಲ ಮತ್ತು ಎರಡನ್ನೂ ಒಂದೇ ಹೊತ್ತಲ್ಲಿ ಸಾಧಿಸಲು ಸಾಧ್ಯವಿಲ್ಲ.

ಆ ಕಾಲದ ಶಿಕ್ಷಣ ವ್ಯವಸ್ಥೆಯನ್ನು ಪುನಃಸ್ಥಾಪಿಸಲು ಹಲವು ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಬಿಜೆಪಿಗೆ ಸಾಧ್ಯವಾಗಿದೆಯೇ?

ಇಂದು ಭಾರತದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು 15 ವರ್ಷಗಳಲ್ಲಿ ಸ್ವತಂತ್ರ ಮತ್ತು ತಮ್ಮದೇ ಆಡಳಿತ ಹೊಂದಲು ಶ್ರಮಿಸಬೇಕು ಎನ್ನಲಾಗುತ್ತದೆ. ಅದು ಯಾವುದೇ ಬಾಹ್ಯ ಒತ್ತಡದಿಂದ ಮುಕ್ತವಾಗಿರಬೇಕು ಎನ್ನಲಾಗುತ್ತದೆ. ಆದರೆ ಇಂದು ವಿಶ್ವವಿದ್ಯಾನಿಲಯಗಳು ಸ್ವಾಯತ್ತೆ ಹೊಂದಿವೆಯೇ?

ಮೋದಿ ಆಡಳಿತದ 11 ವರ್ಷಗಳಲ್ಲಿ ಭಾರತದ ಅನೇಕ ವಿಶ್ವವಿದ್ಯಾನಿಲಯಗಳ ಸ್ವಾಯತ್ತೆ ಹೊರಟುಹೋಗಿದೆ. ವಾಕ್ ಸ್ವಾತಂತ್ರ್ಯ ಇಲ್ಲವಾಗಿದೆ.

ಖಾಸಗಿ ವಿಶ್ವವಿದ್ಯಾನಿಲಯಗಳಲ್ಲಿಯೂ, ಒಬ್ಬ ಪ್ರಾಧ್ಯಾಪಕ ಸರಕಾರಕ್ಕೆ ಇಷ್ಟವಾಗದ ಹಾಗೆ ಏನನ್ನಾದರೂ ಹೇಳಿದರೆ ಅವರನ್ನು ತೆಗೆದುಹಾಕಲಾಗುತ್ತದೆ. ಇದು ಭಾರತೀಯತೆಯ ಹೊಸ ಮಾದರಿಯೇ? ಭಯದ ಹೊಸ ಮಾದರಿಯೇ? ಅಥವಾ ಇದು ವಸಾಹತುಶಾಹಿ ಮನಸ್ಥಿತಿಯ ಭಾರತೀಯ ಮಾದರಿಯೇ ಅಥವಾ ಬಿಜೆಪಿ ಮಾದರಿಯೇ?

ವಸಾಹತುಶಾಹಿ ಚಿಂತನೆ ಮತ್ತು ಗುಲಾಮಗಿರಿಯ ಮನಸ್ಥಿತಿ ಬಗ್ಗೆ ಮಾತನಾಡುವ ಮೂಲಕ ಬಿಜೆಪಿ ಮತ್ತು ಸಂಘ ಪರಿವಾರ ತಮ್ಮದೇ ಆದ ರಾಜಕೀಯಕ್ಕೆ ದಾರಿ ಮಾಡಿಕೊಳ್ಳುತ್ತಿವೆ. ಈಗಾಗಲೇ ಅದು ನಡೆಯುತ್ತಿದೆ.

ಸ್ಪಷ್ಟವಾಗಿ ಹೇಳಬೇಕೆಂದರೆ, ವಸಾಹತುಶಾಹಿ ಮನಸ್ಥಿತಿ ಒಂದು ನಿರ್ದಿಷ್ಟ ರಾಜಕೀಯ ಸಿದ್ಧಾಂತವನ್ನು ಹರಡುವುದಾಗಿದ್ದರೆ, ಆ ಮನಸ್ಥಿತಿಯಿಂದ ವಿಮೋಚನೆ ಸಾಧ್ಯವಿಲ್ಲ.

ಅವರು ಬರೀ ಅದರ ಹೆಸರನ್ನು ಬದಲಾಯಿಸಲು ಬಯಸುತ್ತಾರೆ. ಕಡೆಗೆ, ವಸಾಹತುಶಾಹಿ ಮನಸ್ಥಿತಿಯಿಂದ ಮುಕ್ತಿ ಎನ್ನುವುದು ಬಿಜೆಪಿ ಮತ್ತು ಸಂಘ ಪರಿವಾರದ ಮನಸ್ಥಿತಿಯನ್ನು ಒಪ್ಪಿಕೊಳ್ಳುವುದು ಎಂದಷ್ಟೇ ಆಗಲು ಸಾಧ್ಯ.

share
ಪ್ರವೀಣ್ ಎನ್.
ಪ್ರವೀಣ್ ಎನ್.
Next Story
X